ಅಂಕಣ

ಪಿಎಫ್ ಐ ಸಂಘಟನೆಯನ್ನು ನಿಷೇಧಿಸುವರೇ ಮೋದಿ?! ಸಫಲವಾಗುವುದೇ ಮೋದಿಯ ಭಯೋತ್ಪಾದನಾ ನಿರ್ಮೂಲನದ ಮೊದಲ ಹೆಜ್ಜೆ?

ಕೆಲವು ವಾರಗಳ ಹಿಂದಷ್ಟೇ ಶರತ್ ಮಡಿವಾಳನನ್ನು ಬಿಸಿರೋಡಿನಲ್ಲಿ ಕೆಲವು ಮತಾಂಧರು ಧಾರುಣವಾಗಿ ಹತ್ಯೆಮಾಡಿದರು. ಅದಿಕ್ಕೂ ಮುಂಚೆ ಅಂದರೆ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಅಬ್ದುಲ್ ಜಲೀಲ್ ಸೇರಿ 21 ಜನರನ್ನು ಬಂಧಿಸಲಾಯಿತು. ಕಾರಣ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿ ವಿಧ್ವಂಸಕ ಕೃತ್ಯದಲ್ಲಿ ತೊಡಗಿಕೊಂಡಿದ್ದರೆಂಬ ಕಾರಣಕ್ಕೆ. ರುದ್ರೇಶ ಎಂಬುವವರನ್ನೂ ಅಮಾನುಷವಾಗಿ ಕೊಲ್ಲಲಾಯಿತು. ನಂತರ ಈ ಎಲ್ಲಾ ಪ್ರಕರಣಗಳ ರೂವಾರಿಗಳನ್ನು ಬಂಧಿಸಲಾಯಿತು.

ವಿಪರ್ಯಾಸವೇನು ಗೊತ್ತಾ?? ಅದನ್ನು ವಿಪರ್ಯಾಸವೆಂದು ಕರೆಯುವುದೋ ಎಂಬುದೇ ಗೊಂದಲದ ವಿಚಾರ. ಯಾಕೆಂದರೆ ಬಹುಶಃ ಅದು ವ್ಯವಸ್ಥಿತವಾದ ಯೋಜನೆಯಾಗಿತ್ತು. ಆ ಬಂಧಿತರೆಲ್ಲರೂ ಒಂದೇ ಸಂಘಟನೆಗೆ ಸೇರಿದ್ದರು. ಈಗ ಅವಲೋಕನ ಮಾಡಿ. ಅದು ವಿಪರ್ಯಾಸವೋ, ದುರಂತವೋ, ಕಾಕತಾಳೀಯವೋ ಅಥವಾ ಹಿಂದೂಗಳನ್ನು ಶಮನಗೊಳಿಸುವ ಸಲುವಾಗಿ ಮಾಡಿರುವ ವ್ಯವಸ್ಥಿತವಾದ ಯೋಜನೆಯೋ??

ಆ ವಿಧ್ವಂಸಕ ಕೃತ್ಯದ ಹಿಂದಿರುವ ಸಂಘಟನೆ ಯಾವುದು ಗೊತ್ತೇ??

ಈ ಎಲ್ಲಾ ಹೀನ ಕೃತ್ಯಗಳ ಹಿಂದಿರುವುದು ಪಿಎಫ್‍ಐ ಹಾಗೂ ಅದರ ಪರಿವಾರಗಳು. ಎಲ್ಲಿ ಹಿಂದುತ್ವ ಚಿಂತನೆಗಳು ಪ್ರಬಲವಾಗಿ ನೆಲೆಯೂರಿ ರಾಷ್ಟ್ರಸೇವೆಯಲ್ಲಿ ನಿರತವಾಗಿದೆಯೋ ಅಲ್ಲಿ ಭಯೋತ್ಪಾನೆಯ ಚಿಂತನೆಯನ್ನು ಬಿತ್ತಿ ಅಶಾಂತಿಯನ್ನು ಸೃಷ್ಟಿಸುವುದೇ ಪೋಪುಲ್ಯರ್ ಫ್ರಂಟ್ ಆಫ್ ಇಂಡಿಯಾದ ಮನಸ್ಥಿತಿ ಹಾಗೂ ಚಟುವಟಿಕೆ. ಒಟ್ಟಾರೆಯಾಗಿ ಭಯೋತ್ಪಾದನ ಚಟುವಟಿಕೆಗಳಿಗೆ ಪೂರಕವಾಗಿ ಇವು ಕಾರ್ಯನಿರ್ವಹಿಸುತ್ತಿವೆ ಎಂದರೆ ತಪ್ಪಾಗದು. ಈ ವಿಚಾರಗಳನ್ನು ಸ್ವತಃ ರಾಷ್ಟ್ರೀಯ ತನಿಖಾ ದಳವೇ ಸ್ಪಷ್ಟಪಡಿಸಿವೆ. ಇದಕ್ಕೆ ಪುಷ್ಟೀಕರಿಸುವ ಅನೇಕ ಉದಾಹರಣೆಗಳನ್ನು ಕೊಡಬಹುದು. ಇತ್ತೀಚೆಗೆ ಕಣ್ಣೂರಿನಲ್ಲಿ ರಾಷ್ಟ್ರೀಯ ತನಿಖಾ ದಳವು ದಾಳೀ ನಡೆಸಿ ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿತ್ತು. ಮಿತ್ರರೇ.. ಮತ್ತೆ ಅದು ಪಿಎಫ್‍ಐ ಕಛೇರಿಗೆ ಮಾಡಿದ ದಾಳಿಯಾಗಿತ್ತು. ಶಾಂತಿಯ ದೂತರ ಮನೆಯಲ್ಲಿ ಕತ್ತಿಗಳಿರಲು ಸಾಧ್ಯವೇ?? ಆದ್ದರಿಂದಲೇ ಒಂದು ಕೂಗು ರಾಷ್ಟ್ರಭಕ್ತರಲ್ಲಿ ಮೂಡಿದ್ದು.. ಭಯೋತ್ಪಾದೆನೆಗೆ ಬೆಂಬಲಿಸುವ ಆ ಸಂಘಟನೆಗಳನ್ನು ನಿಷೇಧಿಸಿ!!!

ರಾಷ್ಟ್ರೀಯ ಭದ್ರತೆಗೆ ಸವಾಲೆಸೆಯುವಂತೆಯೇ ಅವರ ನಡೆಯಿತ್ತು ಎಂಬುದಾಗಿ ತನಿಖಾ ದಳವೇ ಹೇಳಿಕೆಯನ್ನು ಕೊಟ್ಟಿದೆ. ಕೇರಳದ ಮಲಪ್ಪುರಂ ನಲ್ಲಿ ಬಲವಂತವಾಗಿ ಹಿಂದೂಗಳನ್ನು ಮತಾಂತರ ಮಾಡಲಾಗುತ್ತಿದೆ. ಅದು ಕೇವಲ ಪುರುಷರ ತಂಡದಿಂದ ಅಲ್ಲ, ಸ್ವತಃ ಮಹಿಳೆಯರ ತಂಡವೂ ಕಾರ್ಯಪ್ರವೃತ್ತವಾಗಿದೆ. ಪಿಎಫ್‍ಯ ಮಹಿಳಾ ತಂಡದ ನಾಯಕಿ ಸಾಯಿನಾಬ. ಇತ್ತೀಚೆಗಷ್ಟೇ ಲವ್ ಜಿಹಾದ್ ಪ್ರಕರಣದಲ್ಲಿ ಕೆಲವರು ಸಾಯಿನಾಬ ಮಾಡುತ್ತಿರುವ ಮತಾಂಧತೆಯ ಚಟುವಟಿಕೆಗಳನ್ನು ಮಾಧ್ಯಮದ ಮುಂದೆ ಬಯಲು ಮಾಡಿದ್ದರು. ಆದರೂ ಇದುವರೆಗೂ ಯಾರೂ ತಡೆಯುವ ಪ್ರಯತ್ನ ಮಾಡಿಲ್ಲ.

ಇನ್ನೊಂದು ಆಘಾತಕಾರಿ ಸಂಗತಿಯೇನು ಗೊತ್ತಾ?? ರಾಷ್ಟ್ರೀಯ ತನಿಖಾ ದಳ ಹೇಳುವ ಪ್ರಕಾರ ಈ ಸಂಘಟನೆಗಳು ಭಾರತದ 23 ರಾಜ್ಯಗಳಲ್ಲಿ ವಿಸ್ತರಿಸಿದೆ. ಪ್ರಮುಖವಾಗಿ ಕೇರಳದಲ್ಲಿ ಇದರ ಕಾರ್ಯಚಟುವಟಿಕೆಗಳು ಬಲವಾಗಿ ನೆಲೆಯೂರಿವೆ. ಆಕ್ರಮಣಕಾರಿ ಬಾಂಬ್ ಗಳನ್ನು ಕೂಡ ತಯಾರಿಸಲು ಹಾಗೂ ಉಪಯೋಗಿಸಲು ಶಿಬಿರಗಳನ್ನು ಏರ್ಪಡಿಸುತ್ತಿದೆ ಪಿಎಫ್‍ಐ. ಸ್ವತಃ ಕೇರಳದ ಉಚ್ಛನ್ಯಾಯಾಲವೇ 21 ಪಿಎಫ್‍ಐ ಕಾರ್ಯಕರ್ತರನ್ನು ದೋಷಿತರೆಂದು ಪರಿಗಣಿಸಿತ್ತು. ಇಷ್ಟೆಲ್ಲಾ ಆದರೂ, ಅವರು ಏನೂ ಆಗಿಲ್ಲವೆಂಬಂತೆ, ನಮ್ಮ ಸಂಘಟನೆ ಇಸ್ಲಾಂ ಶಿಕ್ಷಣವನ್ನು ಮಾತ್ರ ಬೋಧಿಸುತ್ತದೆ, ಹಾಗೂ ಯಾರು ಇಸ್ಲಾಂ ಧರ್ಮಕ್ಕೆ ಮತಾಂತರವಾಗುತ್ತಾರೋ ಅವರಿಗೆ ಸಹಾಯ ಮಾಡುತ್ತದೆ ಎಂಬುದಾಗಿ ಸಮರ್ಥಿಸುತ್ತದೆ. ಆದರೆ ದುರವಸ್ಥೆ ನೋಡಿ!! ಇದುವರೆಗೆ ಅವರು ಮಾಡಿದ ವಿಧ್ವಂಸಕ ಕೃತ್ಯಗಳು ಅವರಿಗೆ ಲೆಕ್ಕವೇ ಅಲ್ಲ… ಕಾರಣ, ಅವರ ಉದ್ದೇಶವೇ ಅದಲ್ಲವೇ?? ಹಿಂದೂ ಚಿಂತನೆಯನ್ನು ಸಂಪೂರ್ಣವಾಗಿ ಶಮನವಾಗಿಸುವುದು.

2008 ರ ಆಗಸ್ಟ್ 15 ರಂದು ಪಿಎಫ್‍ಐ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆಯೇ ನಡೆದಿತ್ತು. ಅದನ್ನು ಫ್ರೀಡಮ್ ಪೆರೇಡ್ ಎಂಬುದಾಗಿ ಕರೆದರು. ತಮ್ಮ ಶಕ್ತಿಯನ್ನು ಪ್ರದರ್ಶಿಸುವ ಸಲುವಾಗಿ ಹಾಗೂ ದೇಶದ್ರೋಹದ ಸಂದೇಶವನ್ನು ಸ್ವಾತಂತ್ರ್ಯ ದಿನಾಚರಣೆಯಂದು ಕೊಡುತ್ತಾ ಅವತ್ತಿನ ದಿನವನ್ನು ನಿಷೇಧಿಸುವ ಉದ್ದೇಶದಿಂದಲೇ ಅಂತಹದ್ದೊಂದು ಮೆರವಣಿಗೆಗೆ ಅವರು ಮುಂದಾಗಿದ್ದರು. ಹಿಂದೂ ವಿರೋಧಿ ಘೋಷಣೆಗಳನ್ನು ಕೂಗುತ್ತಾ, ಕಾಶ್ಮೀರ ಸ್ವತಂತ್ರವಾಗಲಿ ಎಂಬ ಆಶಾಭಾವನೆಯಲ್ಲಿ ಆ ಲದ್ಧಿಜೀವಿಗಳ ತಂಡ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಒಂದು ವೇಳೆ ಅವರನ್ನು ತಡೆಯುವ ಪ್ರಯತ್ನ ಮಾಡಿದರೆ ಕೇರಳ ಹಾಗೂ ಕರ್ನಾಟಕ ಕೆಟ್ಟ ದಿವಸಗಳನ್ನು ಕಾಣಬೇಕಾಗಬಹುದೆಂಬ ಬೆದರಿಕೆ ಬೇರೆ. ಭಾರತ ಕೇವಲ ಹೊರಗಿನ ಭಯೋತ್ಪಾದಕರೊಡನೆ ಹೋರಾಡಬೇಕಿದೆ ಎಂಬ ಚಿಂತನೆ ಇತ್ತು. ಆದ್ರೆ ದೇಶದ ಒಳಗೂ ಭಯವನ್ನು ಉತ್ಪಾದಿಸುವವರು ಬೆಳೆದಿದ್ದಾರೆ. ಅವರನ್ನೂ ಮಟ್ಟ ಹಾಕಿ ದೇಶದಲ್ಲಿ ಶಾಂತಿಯ ವಾತಾವರಣವನ್ನು ನಿರ್ಮಿಸಬೇಕಿದೆ. ಇಲ್ಲವಾದರೆ ಮತ್ತೊಮ್ಮೆ ಭಾರತ ಗುಲಾಮವಾಗಬೇಕಾದೀತು.

ಪಿಎಫ್‍ಐ ಸಂಘಟನೆಯನ್ನು ನಿಷೇಧಿಸುತ್ತದಯೇ ಸರಕಾರ??

ಈ ಎಲ್ಲಾ ಹೀನ ಕೃತ್ಯಗಳನ್ನು ಗಮನಿಸಿದ ಕೇಂದ್ರ ಸರಕಾರ ಈಗ ಆ ಸಂಘಟನೆಗಳನ್ನು ನಿಷೇಧಿಸುವ ಚಿಂತನೆ ನಡೆಸಿದೆ. ಇಂತಹವುಗಳನ್ನು ನಿಷೇಧಿಸಿದರೂ ಅವರ ಪರವಾಗಿ ಕನಿಕರ ವ್ಯಕ್ತಪಡಿಸುವ ಲದ್ದೀಜೀವಿಗಳು ಇದ್ದೇ ಇರುತ್ತಾರೆ. ಆದೆ ಸರಕಾರ ದೇಶದ ಒಳಿತಿಗಾಗಿ ಅಂತಹವರನ್ನೂ ದಿಟ್ಟವಾಗಿ ಎದುರಿಸಿ ರಾಷ್ಟ್ರಹಿತವೇ ನಮ್ಮ ಧ್ಯೇಯ ಎಂಬುದನ್ನು ಮತ್ತೊಮ್ಮೆ ನಿರೂಪಿಸಬೇಕಿದೆ.

Tags

Related Articles

Close