ಅಂಕಣ

ಪುರಾತನ ಭಾರತವನ್ನು ಅತಿಯಾಗಿ ವೈಭವೀಕರಿಸಲಾಗುತ್ತಿದೆಯಾ?? ಚೀನಾದ ನಿವೃತ್ತ ಪ್ರಾಧ್ಯಾಪಕರಿಂದ ಅದ್ಭುತವಾದ ವಿಶ್ಲೇಷಣೆ!!

ಗಂಭೀರವಾದ ಚಿಂತನೆಯನ್ನು ಮಾಡಿ. ಪುರಾತನ ಭಾರತದ ಶ್ರೇಷ್ಠತೆಯನ್ನು ಅತಿಯಾಗಿ ವೈಭವೀಕರಿಸಲಾಗುತ್ತಿದೆಯಾ.!!

ನಾನೊಬ್ಬ ಚೀನೀ ಪ್ರಜೆಯಾದರೂ ಕೆನಡಾದಲ್ಲಿ ಜೀವಿಸುತ್ತಿದ್ದೇನೆ. ಕೆನಡಾ ದೇಶದಲ್ಲಿ ಬೆಳೆಯುತ್ತಿರುವ ಸಂದರ್ಭದಲ್ಲಿ ಭಾರತದ ಕುರಿತಾಗಿ ಕಿಂಚಿತ್ತೂ ಜ್ಞಾನವನ್ನು ನಾನು ಪಡೆದಿಲ್ಲ. ನೆನಪಿರಲಿ. ಅದರ ಗಂಧಗಾಳಿಯೂ ಗೊತ್ತಿರಲಿಲ್ಲ.

ಅಂದರೆ , ಇಲ್ಲಿ ಜೀವಿಸುತ್ತಿರುವವರಿಗೆ ಚೀನಾದ ಇತಿಹಾಸವನ್ನು ಚೆನ್ನಾಗಿಯೇ ಅರಿತ್ತಿದ್ದರು, ಆದರೆ ಭಾರತದ ಇತಿಹಾಸದ ಕುರಿತಾದ ಸುಳಿವು ಕೂಡ ಅವರಿಗಿರಲಿಲ್ಲ. ಜನರಿಗೆ ಮಧ್ಯಮ ರಾಜ್ಯವೆಂದ ಕೂಡಲೇ ಚೀನಾದ ಆಸ್ಥಾನಗಳೇ ನೆನಪಾಗುತ್ತದೆ, ಆದರೆ ಎಷ್ಟು ಜನರಿಗೆ ಭಾರತದ ಕುರಿತಾಗಿ ಗೊತ್ತು??

ಗುಪ್ತರ ಕುರಿತಾಗಿ ಅದೆಷ್ಟು ಜನ ತಿಳಿದುಕೊಂಡಿದ್ದಾರೆ?? ಚೀನೀಯರು ಪಿಂಗಾಣಿ ಹಾಗೂ ಚಾ ಕ್ಕೆ ಹೆಸರುವಾಸಿಯೆಂಬುದು ತಿಳಿದಿದೆ, ಆದರೆ ಲೋಹಶಾಸ್ತ್ರದಲ್ಲಿ
ಭಾರತೀಯರ ಶಾಧನೆ ಅಮೋಘವಾದುದೆಂಬ ವಿಚಾರ ಅದೆಷ್ಟು ಜನರಿಗೆ ತಿಳಿದಿದೆಯೋ ನಾನು ಅರಿಯೆ. ಚೀನಾದ ಮಹಾಗೋಟೆಯ ಕುರಿತಾಗಿ ತಿಳದವರು ಭಾರತದ ದಕ್ಷಿಣದಲ್ಲಿ ನಿರ್ಮಿಸಿದ ಸುಂದರ, ವಿಸ್ಮಯಕಾರಿ ದೇವಾಲಯಗಳ ಕುರಿತಾಗಿ ಕಿಂಚಿತ್ತೂ ಅರಿತಿಲ್ಲ.

ಭಾರತೀಯ ಇತಿಹಾಸಗಳು ಇದರ ಉಲ್ಲೇಖಗಳನ್ನು ಅಷ್ಟಾಗಿ ಪರಿಗಣಿಸದ್ದು ಅದಕ್ಕೆ ಕಾರಣವಿರಬಹುದು. ಆಧುನಿಕ ಭಾರತೀಯರು ಪುರಾತನ ಭಾರತದ ಕುರಿತಾಗಿ ತೋರಿಸುವ ಅಸಡ್ಡೆ ಹಾಗೂ ಪಾಶ್ಚಿಮಾತ್ಯರ ಇತಿಹಾಸ-ಸಂಸ್ಕøತಿಗಳೇ ಅದ್ಭುತವೆಂದು ತಿಳಿಯುತ್ತಿರುವುದರ ಪರಿಣಾಮ ಭಾರತದ ಶ್ರೇಷ್ಠ ಸಂಗತಿಗಳು ಇವತ್ತು ಮಣ್ಣುಪಾಲಾಗಿರುವುದಂತೂ ಸತ್ಯ. ಚೀನೀಯರದ್ದೂ ಇದೇ ಕಥನ ಆದರೆ ಭಾರತದಷ್ಟು ಅಲ್ಲ ಎಂಬುದೇ ಸೋಜಿಗದ ವಿಚಾರ.

ಕ್ರಿಸ್ತಶಕ 384 ರಲ್ಲಿ ಗ್ರೀಕ್ ತತ್ವಶಾಸ್ತ್ರಜ್ಞ ಅರಿಸಟಾಟಲ್, ಭೂಮಿಯು ಗೋಳಾಕಾರದ ಆಕೃತಿಯನ್ನು ಹೊಂದಿದೆ ಎಂಬುದಾಗಿ ನಿರೂಪಿಸಿದ್ದರು. ಆದರೆ ನಿನಗೆ
ಗೊತ್ತಿರಲಿ, ಪುರಾತನ ಭಾರತದ ಓರ್ವ ಸನ್ಯಾಸಿ “ಗೋಳಾಕಾರದ ಭೂಮಿ” ಎಂಬ ಚಿಂತನೆಯನ್ನು ಕ್ರಿಸ್ತಶಕ 8-9 ನೆಯ ಶತಮಾನದಲ್ಲಿಯೇ ನೀಡಿದ್ದರು. ಅವರ
ಹೆಸರು ಯಾಜ್ಞವಲ್ಕ್ಯ. ಗ್ರಹಗಳು ಸೂರ್ಯಕೇಂದ್ರಿತ ವ್ಯವಸ್ಥೆಯನ್ನು ಹೊಂದಿವೆ ಎಂಬ ತತ್ವವನ್ನು ಪ್ರಥಮವಾಗಿ ಪ್ರತಿಪಾಸಿದವರೂ ಅವರೇ. ಶತಪಥ ಬ್ರಾಹ್ಮಣ ಎಂಬ ಪುಸ್ತಕದಲ್ಲಿ ಭೂಮಿ ಹಾಗೂ ಇತರೆ ಗ್ರಹಗಳು ಸೂರ್ಯನ ಸುತ್ತ ತಿರುಗುತ್ತವೆ ಎಂಬ ಚಿಂತನೆಯನ್ನು ಕೊಟ್ಟಿದ್ದರು. ಒಂದು ಇಸವಿಯಲ್ಲಿ 365.24675
ದಿನಗಳಿರುತ್ತವೆಯೆಂಬ ನಿಖರ ಮಾಹಿತಿಯನ್ನೂ ಕೊಟ್ಟಿದ್ದರು. 365.24220 – ಇದು ಪ್ರಸ್ತುತ ನಾವು ಆಚರಿಸುತ್ತಿರುವ ದಿನದ ಸಮಯ. ಅಂದರೆ ಯಾಜ್ಞವಲ್ಕ್ಯ
ಹೇಳಿದ್ದು 6 ನಿಮಿಷ ಅಧಿಕ ಸಮಯವಷ್ಟೇ.

ಕುಂಗ್ ಫು ಉದಾಹರಣೆಯನ್ನು ಗಮನಿಸಿ. ಅದೊಂದು ಸಮರಕಲೆಯೆಂಬುದು ನಮಗೆಲ್ಲರಿಗೀ ಗೊತ್ತಿರುವ ವಿಚಾರವೇ. ಐದನೆಯ ಶತಮಾನದಲ್ಲಿ ಚೀನಾಕ್ಕೆ ಭೇಟಿಯಿಟ್ಟ ಭಾರತದ, ತಮಿಳುನಾಡಿನ ಪಲ್ಲವ ರಾಜವಂಶದ ರಾಜ ಈ ಕಲೆಯ ಕರ್ತೃ ಎಂಬುದು ನಮಗೆ ಅನೇಕರಿಗೆ ಗೊತ್ತಿಲ್ಲ. ಈತ ಬೌದ್ಧ ಧರ್ಮವನ್ನು ಮುನ್ನಡೆಸಿದ ನಾಯಕ ಆದುದು ಮಾತ್ರವಲ್ಲ, ಶೌಲಿನೀ ದೇವಾಲಯವನ್ನು ನಿರ್ಮಿಸಿದನು. ಕುಂಗ್ ಫು ಎಂಬ ಸಮರ ಕಲೆಯನ್ನು ಜಗತ್ತಿಗೇ ಪರಿಚಯಿಸಿದನು. ಆ ರಾಜನೇ ಬೋಧಿಧರ್ಮ.

ವಿಪರ್ಯಾಸವೆಂದರೆ ಈ ಕುಂಗ್ ಫು ಹಾಗೂ ಶೌಲಿನೀ ದೇವಾಲಯದ ಕರ್ತೃ ಭಾರತೀಯನೆಂದು ಭಾರತೀಯರಿಗೇ ಅರಿವಿಲ್ಲ. ಭಾರತದ ಶ್ರೇಷ್ಠ ಇತಿಹಾಸವು
ಭಾರತೀಯರಲ್ಲದೇ ಯಾರು ತಿಳಿಯಬೇಕು ಹೇಳಿ, ಪರಕೀಯರು ಬಂದು ಇವರಿಗೆ ಬೋಧಿಸುವಂತಾಗಬೇಕೇ?

ಪುರಾತನ ಭಾರತೀಯರ ಸಾಧನೆಯು ಅಸ್ಪಷ್ಟತೆಯಿಂದ ಕಳೆದಿವೆ. ಭಾರತೀಯರ ಪೂರ್ವಜರು ಸಾಮನ್ಯನ ಬದುಕಿಗೆ ಅಗತ್ಯವಿರುವಂತಹ ಸಾಧನಗಳನ್ನೇ
ಕಂಡಿಹಿಡಿದಿದ್ದಾರೆ. ಇಂದು ಅದೆಲ್ಲಾ ನಗಣ್ಯವಾಗಿ ನಮಗೆ ಕಾಣಬಹುದು. ಇವತ್ತಿನ ಮಟ್ಟಿಗೆ ಅವು ಪ್ರಾಚೀನವಾದುದೆಂದು ಅನಿಸಬಹುದು, ಆದರೆ ಆ ಯುಗದಲ್ಲಿ
ಭಾರತೀಯರು ಸಾಧಿಸಿದ ಸಾಧನೆಗಳು ಅತ್ಯಮೋಘ.

ಭಾರತದ ಸಿಂಧೂ ನಾಗರಿಕತೆಯ ಸಮಯದಲ್ಲಿ ಮಾರ್ಗಗಳು ನೇರವಾಗಿದ್ದವು, ಶುದ್ಧವಾದ ಒಳಚರಂಡಿ ವ್ಯವಸ್ಥೆಯಿದ್ದುದು ಒಂದು ಅದ್ಭುತವೇ ಸರಿ. ಟಿಗುರು
ಶೌಚಾಲಯವನ್ನು ಕಂಡಿಹಿಡಿದವರು ಇದೇ ನಾಗರಿಕತೆಯ ಪ್ರತಿನಿಧಿಗಳು ಎಂಬುದಾಗಿ ಎಷ್ಟು ಜನರಿಗೆ ಗೊತ್ತು ಹೇಳಿ.!!

ವಿಶ್ವದಲ್ಲಿ ಅನೇಕರು ಮಾಪಕಗಳ ಮೂಲಕ ಅಳತೆಯನ್ನು ಮಾಡುತ್ತಿದ್ದರು. ಸಿಂಧು ನಾಗರಿಕತೆಯ ಸಂದರ್ಭದಲ್ಲೇ ಈ ಮಾಪಕಗಳನ್ನು ಕಂಡುಹಿಡಿದಿದ್ದಾರೆಂಬುದು ಎಷ್ಟು ಜನರಿಗೆ ಗೊತ್ತು? 4400 ವರ್ಷದ ಹಳೆಯದಾದ ಮಾಪಕವು ಲೋಥಾಲ್ ನಲ್ಲಿ ಲಭಿಸಿದೆ. ಗುಂಡಿಗಳನ್ನೂ ಪ್ರಥಮವಾಗಿ ಕಂಡುಹಿಡಿದವರು ಇದೇ ಸಿಂಧೂ ನಾಗರಿಕತೆಯ ಜನ. ರೇಶ್ಮೆ ಬಟ್ಟೆಗಳನ್ನು ಹೊಲಿಯುವುದನ್ನು ಚೀನಾ ವಿಶ್ವಕ್ಕೆ ಕಲಿಸಿದೆ ಎನ್ನುತ್ತೇವೆ. ಆದರೆ ವಾಸ್ತವವಾಗಿ ಗುಂಡಿಗಳನ್ನು ಹಾಗೂ ರೇಶ್ಮೆ ಬಟ್ಟೆಗಳನ್ನು ಹೊಲಿಯುವ ಕಲೆಯನ್ನು ವಿಶ್ವಕ್ಕೆ ಪರಿಚಯಿಸಿದವರು ಸಿಂಧು ನಾಗರಿಕತೆಯ ಜನ.

ತೂಗುವ ಮಾಪಕಗಳನ್ನು ಕಂಡುಹಿಡಿದವರು ಇದೇ ಪುರಾತನ ಭಾರತೀಯರು. ಪುರಾತತ್ವಶಾಸ್ತ್ರಜ್ಞರು ತೂಗುವ ಮಾಪಕಗಳನ್ನು ಹಾಗೂ ಅಳತೆಯ ಮಾಪಕಗಳನ್ನು ಹರಪ್ಪ, ಮೊಹೆಂಜೊದಾರೊ, ಲೋಥಾಲ್ ಮುಂತಾದ ಸ್ಥಳಗಳಲ್ಲಿ ಉತ್ಖನನ ಮಾಡಿ ಅನ್ವೇಷಿಸಿದ್ದಾರೆ. ಈ ಮಾಪಕಗಳನ್ನು ವ್ಯಾಪಾರ ಉದ್ದೇಶಕ್ಕಾಗಿಯೇ ಬಳಸಲಾಗುತ್ತಿತ್ತು.

ಪ್ರಸ್ತುತ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂಬ ಉದ್ದೇಶದಿಂದ ಅನೇಕ ಹೆಸರಾಂತ ಪ್ರಸಿದ್ಧ ವ್ಯಕ್ತಿಗಳು ಮಾಡುವ ಯೋಗದ ಕರ್ತೃ ಕೂಡ ಭಾರತೀಯರೇ. ಆ ಯೋಗವನ್ನು ಇವತ್ತು ವಿಶ್ವೇ ಗೌರವಿಸುತ್ತಿದೆ.

ತ್ರಿಮೂರ್ತಿಗಳಾದ ಆರ್ಯಭಟ್ಟ, ಭಾಸ್ಕರಾಚಾರ್ಯ ಹಾಗೂ ಬ್ರಹ್ಮಗುಪ್ತ ಪುರಾತನ ಭಾರತದ ಶ್ರೇಷ್ಠ ಗಣಿತಶಾಶ್ತ್ರಜ್ಞರಾಗಿದ್ದರು. ಶೂನ್ಯದ ಪರಿಕಲ್ಪನೆಯನ್ನು ಕೊಟ್ಟ ಮೇಧಾವಿ ಗಣಿತಜ್ಞರು ಅವರು. ಒಂದು ವೇಳೆ ಶೂನ್ಯದ ಕಲ್ಪನೆ ಇಲ್ಲವಾದರೆ ಗಣಿತವೇ ಶೂನ್ಯವಾಗುತ್ತಿತ್ತು. ಬೀಜಗಣಿತ ಕಂಡುಹಿಡಿದವರೂ ಭಾಸ್ಕರಾಚಾರ್ಯ.

ಅಷ್ಟೇ ಅಲ್ಲದೆ ರಸಾಯನಶಾಸ್ತ್ರದ ವಿಭಾಗದಲ್ಲಿಯೂ ತಮ್ಮ ಪ್ರಾವೀಣ್ಯತೆಯನ್ನು ಪ್ರದರ್ಶಿಸಿದ್ದರು ಭಾರತೀಯರು. ಪರಮಾಣು ಸಿದ್ಧಾಂತವನ್ನು ಪ್ರಥಮವಾಗಿ
ಪ್ರತಿಪಾದಿಸಿದವರು ಆಚಾರ್ಯ ಕಣದ. ಅಣು ಮತ್ತು ಪರಮಾಣು ಎಂಬ ಎರಡು ಶಬ್ದಗಳಿಂದ ಪ್ರಮುಖವಾಗಿ ಈ ಸಿದ್ದಾಂತವನ್ನು ಅವರು ವರ್ಣಿಸಿದರು.

ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿಯೂ ಭಾರತೀಯರು ಕಾಲಿಟ್ಟು ಅಮೋಘ ಸಾಧನೆಯನ್ನೇ ಮಾಡಿದ್ದಾರೆ. ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ ಮತ್ತು ಕಣ್ಣಿನ ಶಸ್ತ್ರಚಿಕಿತ್ಸೆ ಯನ್ನು
ಪ್ರಥಮವಾಗಿ ಅನ್ವೇಷಿಸಿದವರು ಸಂತ ಸುಶ್ರುತ. ಅವರ ಎಲ್ಲಾ ಅನ್ವೇಷಣೆಘಲನ್ನು ತಮ್ಮ ಗ್ರಂಥವಾದ ಸುಶ್ರುತ ಸಂಹಿತೆಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಚರಕನ
ಕುರಿತಾಗಿ ಬೆರಳೆಣಿಕೆಯಷ್ಟು ಜನರಿಗೆ ಮಾತ್ರವೇ ತಿಳಿದಿರುವುದು ವಿಷಾಧಕರ ಸಂಗತಿ. ಭ್ರೂಣಶಾಸ್ತ್ರ, ಶರೀರಶಾಸ್ತ್ರ, ಲೈಂಗಿಕ ಸಮಸ್ಯೆ, ಮುಂತಾದ ವೈದ್ಯಕೀಯ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿದ ಪ್ರಥಮ ವೈದ್ಯ ಅನ್ನುವ ಹೆಗ್ಗಳಿಕೆ ಚರಕನದ್ದು. ಆಯುರ್ವೇದಕ್ಕೆ ಆತ ನೀಡಿದ ಕೊಡುಗೆಗಳು ಆತನ ಪುಸ್ತವಾದ ಚರಕ ಸಂಹಿತೆಯಲ್ಲಿ ಪ್ರತಿಪಾದಿಸಲ್ಪಟ್ಟಿದೆ.

ಕಾರ್ಬನ್ ಜತೆಗೆ ಕಪ್ಪು ಮಾಗ್ನಟೈಟ್ ಅದಿರು ಬಿಸಿಮಾಡುವ ಮೂಲಕ ಅತ್ಯುತ್ತಮ ಉಕ್ಕನ್ನು ತಮಿಳುನಾಡಿನ ಚೆರಾ ರಾಜವಂಶದವರು ತಯಾರಿಸುತ್ತಿದ್ದರು. ಈ
ಮಿಶ್ರಣವನ್ನು ಶಕ್ತಿಯುತವಾದ ಕಲ್ಲಿದ್ದಲು ಕುಲುಮೆಯಲ್ಲಿಟ್ಟು ಬಿಸಿಮಾಡಲಾಗುತ್ತಿತ್ತು.

ಭಾರತದ ಸ್ಮಾರಕಗಳು ಸುಂದರವಾಗಿಯೂ ಅದ್ಭುತವಾಗಿದ್ದವು, ಭಾರತದಲ್ಲಿ ಅಭಿವೃದ್ಧಿಯ ನಾಗರಿಕತೆಯು ಬೆಳೆಯುತ್ತಿಉತ್ತು ಅನ್ನುವುದಕ್ಕೆ ಅದುವೇ ಪ್ರತ್ಯಕ್ಷ ಸಾಕ್ಷಿ. ಭಾರತದ ದೈತ್ಯಾಕಾರದ ಸ್ಮಾರಕಗಳು ಪುರಾತನ ಭಾರತೀಯರ ಚತುರತೆಗೆ ಹಿಡಿದ ಕೈಗನ್ನಡಿಯಾಗಿರುವುದು ಮಾತ್ರ ಸುಳ್ಳಲ್ಲ.

ಇದು ಕೈಲಾಸ ದೇವಾಲಯ. ಇದೊಂದು ಬೃಹತ್ ಶಿಲೆಯಾಗಿದ್ದು, ಪರ್ವತದ ಒಂದು ಬಂಡೆಕಲ್ಲಿನಿಂದಲೇ ಕೆತ್ತಲ್ಪಟ್ಟು ಸುಂದರ ದೇವಾಲಯವನ್ನಾಗಿ ನಿರ್ಮಾಣ
ಮಾಡಲಾಯಿತು. ಇಡೀ ಪರ್ವತದ ತುದಿಯನ್ನು ಕೆತ್ತನೆ ಮಾಡಿ ಅಮೋಘವಾದ ದೇವಲಾಯ್ ಪ್ರಾಂಗಣವನ್ನು ಸೃಷ್ಟಿಸಲಾಯಿತು.

ಮಹಾನ್ ಹಾಗೂ ನಿಗೂಢ ಪಟ್ಟಣವಾಗಿದೆ ದ್ವಾರಕ. ಅರಬ್ಬೀ ಸಾಗರದಲ್ಲಿ ಹುದುಗಿಹೋಗಿದ್ದ ಭಾರತದ ಪಶ್ಚಿಮದಲ್ಲಿರುವ ತಾಣವಿದು. ಭಾರತೀಯರೆಲ್ಲರೂ ಹೆಮ್ಮೆ ಪಡಬಹುದಾದ ತಾಣಗಳಿಗೆ ಇದೂ ಸೇರ್ಪಡೆಯಾಗಲಿದೆ.

ಇದು ಖಜುರಾಹೋ ದೇವಾಲಯವಾಗಿ ಮೃದುವಾದ ಕಲ್ಲಿನಿಂದಲ್ಲದೇ, ಶಕ್ತಿಯುತವಾದ ಬಂಡೆಕಲ್ಲಿನಿಂದ ಆ ದೇವಾಲಯವನ್ನು ನಿರ್ಮಿಸಲಾದುದು ಅದರ ವಿಶೇಷತೆ. ದೇವಾಲಯವೊಂದಕ್ಕೆ ಸುಂದರತೆಯನ್ನು ತೊಂದುಕೊಡಲು ನಮ್ಮ ಪೂರ್ವಜರು ಗಟ್ಟಿ ಕಲ್ಲುಗಳನ್ನೂ ಕೆತ್ತೆನೆ ಮಾಡಿದ್ದರು.

ಭಾರತದ ಭವ್ಯವಾದ ಹಾಗೂ ದೊಡ್ಡ ದೇವಾಲಯವೇ – ಬೃಹದೇಶ್ವರ ದೇವಾಲಯ. ಆಶ್ಚರ್ಯವಾಗುತ್ತಿದೆ .. ಅಲ್ಲವೇ?

ಭಾರತದ ದೇವಾಲಯಗಳೆಲ್ಲವೂ ಒಂದು ಅದ್ಭುತ. ಅದರ ಭವ್ಯತೆಯನ್ನು ವರ್ಣಿಸಲೇ ಅಸಾಧ್ಯ. ಈ ದೇವಾಲಯವೇ ಕೊನಾರ್ಕ್ ನ ಸೂರ್ಯ ದೇವಾಲಯ..!!

ಕ್ರಮೇಣ ಮಧ್ಯಯುಗದಲ್ಲಿ ಆಕ್ರಮಣ ಮಾಡಿದ ದಾಳಿಕಾರರು ಇದನ್ನು ನಾಶ ಮಾಡಲೆತ್ನಿಸಿದರು. ಬ್ರಿಟಿಷರೂ ಇದಕ್ಕೆ ಹೊರತಾಗಿರಲಿಲ್ಲ. ಆದ್ದರಿಂದ ಆ ದೇವಾಲಯವು ಮೊದಲಿನ ಭವ್ಯತೆಯನ್ನು ಉಳಿಸಿಕೊಂಡಿಲ್ಲ.

ಕೊನಾರ್ಕನ ಪ್ರಮುಖ ದೇವಾಲಯ ನಾಶವಾದರೂ ಅವರ ಪಳಯುಳಿಕೆಗಳೇ ಎಲ್ಲವನ್ನೂ ಹೇಳುತ್ತಿತ್ತು. ನೋಬೆಲ್ ಪ್ರಶಸ್ತಿ ವಿಜೇತರಾದ ರವೀಂದ್ರನಾಥ ಟಾಗೋರ್ ಅವರು, ” ಅಲ್ಲಿನ ಪ್ರತಿಯೊಂದು ಕಲ್ಲಿನ ಭಾಷೆಯೂ ವಾಸ್ತವವಾಗಿ ಮಾಣವನ ಭಾಷೆಯೇ ಆಗಿವೆ” ಎಂಬುದಾಗಿ ವರ್ಣಿಸಿದ್ದರು.

24 ಚಕ್ರಗಳನ್ನು 7 ಕುದುರೆಗಳು ಎಳೆಯುವಂತೆ ನಿರ್ಮಿಸಲಾಗಿದ್ದ ಸೂರ್ಯ ಭಗವಂತನ ಬೃಹತ್ ರಥ ವನ್ನು ದೇವಾಲಯ ಹೊಂದಿತ್ತು. ದೇವಾಲಯದ ತುದಿಯಲ್ಲಿ ಅಯಸ್ಕಾಂತವನ್ನೂ ಜೋಡಿಸಲಾಗಿತ್ತು. ಕಾಂತೀಯ ವ್ಯವಸ್ಥೆಯಿಂದಾಗಿ ಸೂರ್ಯ ದೇವತೆಯ ವಿಗ್ರಹವು ಗಾಳಿಯಲ್ಲಿ ಅಮಾನತುಗೊಳ್ಳುತ್ತಿತ್ತು. ಎಷ್ಟೊಂದು ಸುಂದರವಾಗಿತ್ತು ಆ ದೇವಾಲಯ..

ನೀವೇ ಊಹಿಸಿ..!!

ಪುರಾತನ ಭಾರತವು ಸಾಂಸ್ಕøತಿಕವಾಗಿ, ತಂತ್ರಜ್ಞಾನದಲ್ಲಿ ಉನ್ನತ ಸ್ಥಾನವು ಹೊಂದಿತ್ತು. ಆಧ್ಯಾತ್ಮದಲ್ಲಿ ವಿಶ್ವದ ಗುರುವಾಗಿಯೇ ಭಾರತ ಉಳಿದಿತ್ತು. ಭಾರತದಲ್ಲಿ ಸ್ಥಾಯಿಯಾಗಿರುವ ಎಲ್ಲಾ ವಿಚಾರಗಳನ್ನು ನಾನು ಒಪ್ಪುತ್ತೇನೆ, ಆದ್ರೆ ಅತಿಯಾಗಿ ಭಾರತವನ್ನು ವೈಭವೀಕರಿಸಲಾಗುತ್ತಿದೆ ಎಂಬ ಮಾತನ್ನು ಬಿಟ್ಟು..!!

ಮೂಲ: ಪಾಕ್ ಎಲ್ ಹೂಯಿಡ್

ಅನುವಾದ : ವಸಿಷ್ಠ

Tags

Related Articles

Close