ಪ್ರಚಲಿತ

ಪೂಜಾರಿಗಳಿಗೆ ಕೊಡೋಕೆ ದುಡ್ಡಿಲ್ಲ ಆದರೆ ಮುಲ್ಲಾ ಮೌಲ್ವಿಗಳಿಗೆ ಕೊಡೋಕೆ ದುಡ್ಡೆಲ್ಲಿಂದ ಬರ್ತಿದೆ ಸಿದ್ದರಾಮಯ್ಯನವರೇ? ಸಿದ್ದರಾಮಯ್ಯರವರ ಕೋಟಿ ಕೋಟಿ ಹಿಂದೂ ವಿರೋಧಿ ಅಕೌಂಟ್ ಡಿಟೇಲ್ಸ್ !!

ಕಳೆದ ನಾಲ್ಕೂವರೆ ವರ್ಷದಿಂದ ಸಿದ್ದರಾಮಯ್ಯನ ಹಿಂದೂ ವಿರೋಧಿ ಸರ್ಕಾರ ಮಾಡಿದ ಅವಾಂತರಗಳು ಒಂದಾ ಎರಡಾ.

ಮಾತೆತ್ತಿದರೆ “ಆರೆಸ್ಸೆಸ್ ಬೆಂಕಿ ಹಚ್ಚೋ ಕೆಲಸ ಮಾಡುತ್ತೆ ಅದೇ ಕಾಂಗ್ರೆಸ್ ಬೆಂಕಿ ಆರಿಸೋ ಕೆಲಸ ಮಾಡುತ್ತೆ, ರೀ ಸ್ವಾಮಿ ನನ್ ಹೆಸರು ಸಿದ್ದ + ರಾಮ = ಸಿದ್ದರಾಮ, ನಾನೂ ಹಿಂದೂನೇ ಕಣ್ರೀ” ಅಂತ ಟಿವಿ ರಿಪೋರ್ಟರ್ ಗಳಿಗೆ ಪುಂಗಿ ಊದಿದ್ದೇ ಊದಿದ್ದು.

ಹೆಸರಿಗೆ, ವೋಟಿಗಾಗಿ ಮಾತ್ರ ತಾನೊಬ್ಬ ಹಿಂದೂ ಆದರೆ ಕಣಕಣದಲ್ಲೂ ಮುಸಲ್ಮಾನ ಕ್ರಿಶ್ಚಿಯನ್ ತತ್ವಗಳೇ ಮೈಗೂಡಿಸಿಕೊಂಡು ಒಂಥರಾ ಕ್ರಿಶ್ಚಿಯನ್ ಮಿಷನರಿಗಳು ಹಿಂದುಗಳನ್ನ ಮತಾಂತರಿಸೋಕೆ ಹೇಗೆ ಪ್ರಯತ್ನ ಪಡ್ತಾರೋ ಹಾಗೇ ಸಿದ್ದರಾಮಯ್ಯ ಸರ್ಕಾರವೂ ರಾಜ್ಯದಲ್ಲಿನ ಹಿಂದೂಗಳನ್ನ ಹಿಂದೂ ಧರ್ಮದ ಆಚರಣೆಗಳನ್ನ ಮೂಲೆಗುಂಪು ಮಾಡೋ ಎಲ್ಲಾ ಕೆಲಸಕ್ಕೂ ‘ಕೈ’ ಹಾಕಿದೆ.

ಸಿದ್ದರಾಮಯ್ಯ ಸರ್ಕಾರದ ಹಳೇ ಹಿಂದೂ ವಿರೋಧಿ ನಿಲುವುಗಳು ಮುಂದೆ ತಿಳಸ್ತೀನಿ, ಈಗೇನ್ ಮಾಡಿದಾರೆ ಅನ್ನೋದನ್ನ ಮೊದಲು ತಿಳಿಸಿ ಬಿಡ್ತೀನಿ.

ನಮ್ಮ ಘನ ‘ಶೇಕ್’ ಅಲ್ಲಲ್ಲಿ ‘ಶ್ರೀ’ ಸಿದ್ದರಾಮಯ್ಯನವರು ಮುಜರಾಯಿ ಇಲಾಖೆ ಅಡಿಯಲ್ಲಿ ಬರೋ ದೇವಸ್ಥಾನಗಳ ಪೂಜಾರಿಗಳಿಗೆ, ಅರ್ಚಕರಿಗೆ ಅವರ ‘ತಸ್ತಿಕ್’ ಹಣ ಕೊಡೋಕೆ ಸರ್ಕಾರದ ಹತ್ರ ದುಡ್ಡು ಶಾರ್ಟೇಜ್ ಆಗಿದ್ಯಂತೆ ಪಾಪ.

ತಮ್ಮ ತಸ್ತಿಕ್ ಹಣಕ್ಕಾಗಿ ಪೂಜಾರಿಗಳು ಪರದಾಡ್ತಿದಾರೆ, ನಾಲ್ಕೂವರೆ ವರ್ಷದ ತನ್ನ ಆಡಳಿತದಲ್ಲಿ ಹಿಂದೆ ಯಾವ ಮುಖ್ಯಮಂತ್ರಿಗಳೂ ಮಾಡದಷ್ಟು ಲಕ್ಷಾಂತರ ಕೋಟಿ ಸಾಲ ಮಾಡಿದ ಹಿರಿಮೆ ಗರಿಮೆ ನಮ್ ಸಿದ್ದಣ್ಣನ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಬೇಕು.

ಅಷ್ಟೆಲ್ಲಾ ಸಾಲ ಮಾಡಿರೋ ದುಡ್ಡಾದ್ರೂ ಸಿದ್ದಣ್ಣ ಎಲ್ಲಿಡ್ತಿದಾರೆ ಅನ್ನೋದೆ ಗೊತ್ತಾಗ್ತಿಲ್ವಲ್ಲ? ಹಾಂ ಈಗ ಗೊತ್ತಾಯ್ತು, ಒಂದ್ ರಿಪೋರ್ಟ್ ಪ್ರಕಾರ ಸಿದ್ದಣ್ಣಂಗೆ ಪೂಜಾರಿಗಳ ತಸ್ತಿಕ್ ಹಣ ಕೊಡೋಕೆ ದುಡ್ಡಿಲ್ಲವಂತೆ ಆದರೆ ‘ಪೇಶ್ ಇಮಾಮ್’, ‘ಮೌಜ್ಜಿನ್’ ಗಳಿಗೆ ಕೊಡೋಕೆ ಮಾತ್ರ ಭರ್ಜರಿಯಾದ ಗೌರವಧನ ಸರ್ಕಾರದ ಹತ್ರ ಇದ್ಯಂತೆ.

ಆ ಹಣ ಕೂಡ ಇದು ಹಿಂದೂಗಳಿಗ್ ಹೋಗುತ್ತಾ ಅಥವ ಮುಸಲ್ಮಾನರಿಗೆ ಹೋಗುತ್ತಾ ಅಂತ ನೋಡಿ ಶಾರ್ಟೇಜ್ ಆಗ್ಬೇಕೋ ಇಲ್ಲಾ ಡಬಲ್ ಆಗ್ಬೇಕೋ ಅಂತ ಡಿಸೈಡ್ ಮಾಡುತ್ತಂತೆ.

ಅದರ ಅಂಕಿ ಅಂಶ ಸ್ವಲ್ಪ ನೋಡೋಣ ಬನ್ನಿ!!

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿರುವ ಇಪ್ಪತ್ತೇಳು ಸಾವಿರ(27,000) ಮಂದಿರಗಳಿಗೆ ರಾಜ್ಯ ಸರ್ಕಾರ ಕೊಟ್ಟ ದುಡ್ಡು 300 ಕೋಟಿ ರೂಪಾಯಿ

ಅದೇ ಮೂರು ವರ್ಷದಲ್ಲಿ ರಾಜ್ಯದಲ್ಲಿನ ಎರಡು ಸಾವಿರ(2,000) ಮಸ್ಜಿದ್, ದರ್ಗಾಗಳಿಗೆ ಹಾಗು ಐನೂರು(500) ಚರ್ಚ್ ಗಳಿಗೆ ಕೊಟ್ಟ ದುಡ್ಡು ಎರಡು ನೂರು(200) ಕೋಟಿ ಅಂತೆ.

ಅಂದ್ರೆ ಇಪ್ಪತ್ತೇಳು ಸಾವಿರ ಮಂದಿರಗಳಿಗೆ ಕೇವಲ ಮುನ್ನೂರು(300) ಕೋಟಿ & ಕೇವಲ 2500 ಮಸ್ಜಿದ್ ವರ್ಷಗಳಿಗೆ ಇನ್ನೂರು(200) ಕೋಟಿ????

ಅಷ್ಟಕ್ಕೂ ಈ ಅಂಕಿ ಅಂಶ ನಾವೇನೂ ಸುಮ್ಮನೇ ಹೇಳುತ್ತಿಲ್ಲ ಇದು ಸರ್ಕಾರ ಕೊಟ್ಟ ಅಂಕಿ ಅಂಶಗಳೇ!!

Hold On ಅಂಕಿ ಅಂಶ ಇನ್ನೂ ಮುಗಿದಿಲ್ಲ ಇನ್ನೂ ಇದೆ!!

29,000 ಪೇಶ್ ಇಮಾಮ್ ಹಾಗು ಮೌಜ್ಜಿನ್ ಗಳಿಗೆ ಬರೋಬ್ಬರಿ 93 ಕೋಟಿ ಗೌರವ ಧನ ಹಾಗು ಚರ್ಚ್’ಗಳ ಜೀರ್ಣೋದ್ಧಾರಕದಕ್ಕೆ 84 ಕೋಟಿ

ಮುಸಲ್ಮಾನ, ಕ್ರಿಶ್ಚಿಯನ್ನರಿಗಾಗಿ ಎರಡು ಬಾರಿ ಗೌರವ ಧನ ಹೆಚ್ಚಳ, ಆದರೆ ಹಿಂದೂ ಪೂಜಾರಿಗಳಿಗೆ ಬಿಡಿಗಾಸು!!

ರಾಜ್ಯದಲ್ಲಿರೋ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರೋ ಇಪ್ಪತ್ತೇಳು ಸಾವಿರ (27,000) ಹಿಂದೂ ದೇವಸ್ಥಾನಗಳಿಂದ ರಾಜ್ಯಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ಬಂದು ಬೀಳುತ್ತೆ ಆದರೆ ಅದೇ ಹಿಂದೂ ದೇವಾಲಯಗಳ ಪೂಜಾರಿಗಳಿಗೆ ಮಾತ್ರ ಭಿಕ್ಷುಕರಿಗೆ ನೀಡಿದ ರೀತಿಯಲ್ಲಿ ಸಂಬಳವಂತೆ ವ್ಹಾಹ್ ಸಿದ್ದರಾಮಯ್ಯ ವ್ಹಾಹ್!!

ಸಾವಿರಾರು ಮಂದಿರಗಳಿಂದ ಬರೋ ಸಾವಿರಾರು ಕೋಟಿ ದಕ್ಷಿಣೆಯನ್ನ ಸಿದ್ದರಾಮಯ್ಯ ಸರ್ಕಾರ ಎಗ್ಗಿಲ್ಲದೆ ಮುಸಲ್ಮಾನರಿಗೆ ಕ್ರಿಶ್ಚಿಯನ್ನರಿಗೆ ಹಂಚಿ ಹಿಂದುಗಳ ಕೈಗೆ ಚಿಪ್ಪು ಕೊಡ್ತಿದ್ದಾನೆ ಸಿದ್ದರಾಮಯ್ಯ.

ಅಷ್ಟಕ್ಕೂ ಈ ಅಂಕಿ ಅಂಶ ನಾವೇನೂ ಸುಮ್ಮನೇ ಹೇಳುತ್ತಿಲ್ಲ ಇದು ಸರ್ಕಾರವೇ ಕೊಟ್ಟ ಅಂಕಿ ಅಂಶಗಳು.

ಅಷ್ಟಕ್ಕೂ ನಮ್ಮ ದೇವಸ್ಥಾನಗಳಿಂದ ಹೋಗ್ತಿರೋ ದುಡ್ಡೆಲ್ಲಿಗೆ ಹೋಗ್ತಿರಬಹುದು?

ಅರೇ ಅದೆ ಸಾರ್ ನಮ್ ಸಿದ್ದಣ್ಣ ತಂದಿರೋ ಅಲ್ಪಸಂಖ್ಯಾತರ ಯೋಜನೆಗಳಿವೆ ಅಲ್ವ ಅವುಗಳಿಗೇ ಹೋಗ್ತಿವೆ ಮತ್ತಿನ್ನೇನು!

ಟಿಪ್ಪು ಜಯಂತಿಯನ್ನ ರಾಜ್ಯದಾದ್ಯಂತ ಭರ್ಜರಿಯಾಗಿ ನಿಮ್ಮ ನಿಮ್ಮ ಜಿಲ್ಲೆಗಳಲ್ಲಿ, ತಾಲೂಕುಗಳಲ್ಲಿ ಆಚರಿಸಿ ಅಂತ ಸರ್ಕಾರದ ಕಡೆಯಿಂದಾನೇ ಡಿಸಿ ಮುಖಾಂತರ ಮುಸಲ್ಮಾನರಿಗೆ ಸೂಚನೆ ಹೊರಡಿಸಿತ್ತಲ್ವ ಅದರ ಬಗ್ಗೆ ಸ್ವಲ್ಪ ತಿಳ್ಕೊಳ್ಳೋಣ ಬನ್ನಿ.

ಇಲಾಖೆಯಿಂದ ಕೇಂದ್ರ ಸ್ಥಾನದಲ್ಲಿ (ವಿಧಾನಸೌಧದಲ್ಲಿ) ನಡೆಸುವ ಕಾರ್ಯಕ್ರಮಕ್ಕೆ ₹10 ಲಕ್ಷ, ಜಿಲ್ಲೆಗಳಿಗೆ ತಲಾ ₹50 ಸಾವಿರ ಮತ್ತು ತಾಲ್ಲೂಕು
ಕೇಂದ್ರಗಳಿಗೆ ತಲಾ ₹25 ಸಾವಿರ ಅನುದಾನ ಒದಗಿಸಲಾಗಿತ್ತು.

ಅಂದರೆ ವಿಧಾನಸೌಧದ ಟಿಪ್ಪು ಜಯಂತಿಗೆ 10 ಲಕ್ಷ +30 ಜಿಲ್ಲೆಗಳಿಗೆ ತಲಾ 50 ಸಾವಿರ, ಅಂದರೆ ಹದಿನೈದು(15) ಲಕ್ಷ +

ಒಟ್ಟು ಕರ್ನಾಟಕ 176 ತಾಲೂಕುಗಳಿಗೆ 25 ಸಾವಿರ, ಅಂದರೆ 44 ಲಕ್ಷ = 69 ಲಕ್ಷ ರೂಪಾಯಿಗಳನ್ನ ಟಿಪ್ಪು ಜಯಂತಿಗಂತಲೇ ಮುಸಲ್ಮಾನರಿಗೆ ಮೀಸಲಿಟ್ಟ ಸರ್ಕಾರ. ಇದು ಕೇವಲ ಒಂದು ವರ್ಷದ ದುಡ್ಡಾಯ್ತು, ಇದೇ ಟಿಪ್ಪು ಜಯಂತಿ ಸರ್ಕಾರ ಎರಡು ಬಾರಿ ಆಚರಿಸಿದೆ, ಅಂದ್ರೆ 69 + 69 = 1 ಕೋಟಿ 38 ಲಕ್ಷ ಹಣ ಸೀದಾ ಸೀದಾ ಟಿಪ್ಪು ಅನ್ನೋ ಉಗ್ರನ ಜಯಂತಿಗೇ ಸಿದ್ದರಾಮಯ್ಯನ ಸರ್ಕಾರ ಕೊಟ್ಟಿದೆ.

ಸಿದ್ದರಾಮಯ್ಯನ ಸರ್ಕಾರ ರಾಜ್ಯದಲ್ಲಿ ಬಂದಾಗಿನಿಂದಲೂ ಹಿಂದೂ ವಿರೋಧಿ ಧೋರಣೆಗಳಿಂದಲೇ ಸಿದ್ದರಾಮಯ್ಯ ಕುಖ್ಯಾತಿಗೊಳಗಾಗಿದ್ದಾರೆ.

ಇದಲ್ದೆ ಚಿಕನ್ ಮಟನ್ ಶಾಪ್ ಹಾಕ್ಕೊಳ್ಳಿ ಅದಕ್ಕೆ ಒಂದು ಲಕ್ಷದ ಇಪ್ಪತ್ತೈದು ಸಾವಿರ ಸರ್ಕಾರದ ಕಡೆಯಿಂದ ಕೊಡ್ತೀವಿ ಅಂತ ಕಳೆದ ಬಜೆಟ್ಟಿನಲ್ಲಿ ಇದೇ ಸಿದ್ದ + ರಾಮ = ಸಿದ್ದರಾಮಯ್ಯ ಉರ್ಫ್ “ನಾನೂ ಹಿಂದೂನೇ” ಘೋಷಣೆ ಮಾಡಿದ್ದು.

30 ಜಿಲ್ಲೆಗಳಲ್ಲಿ ಅದೆಷ್ಟೆಷ್ಟು ಹೊಸ ಚಿಕನ್ ಮಟನ್ ಶಾಪ್ಗಳು ಚಾಲು ಆಗಿವೆಯೋ ಗೊತ್ತಿಲ್ಲ ಆದ್ರೆ ನಾನು ಕಲಬುರಗಿಲಿರೋ ನನ್ನ ವಾರ್ಡಿನಲ್ಲೇ ಸುಮಾರು 6 ಹೊಸ ಚಿಕನ್ ಶಾಪ್ ಹೊಸದಾಗಿ ಶುರು ಆಗಿವೆ. ಒಟ್ಟು ಇಲ್ಲಿ 54 ವಾರ್ಡ್ ಗಳಿವೆ. ಒಂದು ವಾರ್ಡಿಗೆ 6 ಚಿಕನ್ ಶಾಡ ಅಂದ್ರೂ ಕೂಡ 54 ವಾರ್ಡ್ ಗಳಿಗೆ 324
ಶಾಪ್ ಗಳಾದ್ವು.

ಒಂದು ಚಿಕನ್ ಶಾಪ್’ಗೆ 1,25,000 ಅಂದ್ರೆ 324 ಶಾಪ್ಗಳಿಗೆ ಸರಿ ಸುಮಾರು ನಾಲ್ಕು ಕೋಟಿಯಷ್ಟಾಯ್ತು(ಇದು ಕೇವಲ ನಗರದಲ್ಲಿರೋ ಸಂಖ್ಯೆ
ಅಷ್ಟೇ)ಇನ್ನೂ ಜಿಲ್ಲೆಯಲ್ಲಿನ ತಾಲೂಕು, ಹಳ್ಳಿಗಳಲ್ಲಿ ಅದೆಷ್ಟು ಚಿಕನ್ ಮಟನ್ ಶಾಪ್ಗಳು ತೆರೆಯಲ್ಪಟ್ಟಿರಲಿಕ್ಕಿಲ್ಲ? ?

ಒಂದು ಜಿಲ್ಲೆಯಷ್ಟೇ ಅಲ್ಲ total ರಾಜ್ಯದಲ್ಲಿರೋ 30 ಜಿಲ್ಲೆಗಳ ಸಂಖ್ಯೆಯನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಹಿಂದು ಮಂದಿರಗಳಿಂದ ಹರಿದು ಬಂದ ಸಾವಿರಾರು ಕೋಟಿ ಹಣ ಸೀದಾ ಮುಸಲ್ಮಾನರಿಗೆ & ಕ್ರಿಶ್ಚಿಯನ್ನರಿಗೆ ಹೇಗೆ ಹರಿದು ಹೋಗುತ್ತಿದೆ ಅನ್ನೋದು ಅರ್ಥವಾಗುತ್ತೆ.

ಟಿಪ್ಪು ಜಯಂತಿ, ಮುಲ್ಲಾ ಮೌಲ್ವಿಗಳ ಗೌರವ ಧನ, ಚರ್ಚ್ ಜೀರ್ಣೋದ್ಧಾರ,.ಚಿಕನ್ ಶಾಪ್ ಭಾಗ್ಯ ವನ್ನಷ್ಟೇ ಕೌಂಟ್ ಮಾಡದ್ರೇ ಸಾವಿರ ಕೋಟಿ ಆಗ್ತಿದೆ ಅಂದ್ಮೇಲೆ ಇನ್ನು ಹಜ್ ಭಾಗ್ಯ, ಶಾದಿ ಭಾಗ್ಯ ಮಣ್ಣು ಭಾಗ್ಯ ಮಸಿ ಭಾಗ್ಯ ಅಂತ ಲೆಕ್ಕವಿರದಷ್ಟು ಭಾಗ್ಯಗಳಿಂದ ಅದೆಷ್ಟು ದುಡ್ಡು ಸಿದ್ದರಾಮಯ್ಯನ ಸರ್ಕಾರ ಮುಸಲ್ಮಾನರಿಗೆ ಮಾತ್ರ ಕೊಟ್ಟು ಹಿಂದೂಗಳ ಕೈಗೆ ಚಿಪ್ಪು ಕೊಟ್ಟಿದಾರೆ ಅನ್ನೋದು ಸ್ಪಷ್ಟವಾಗಿ ಅರ್ಥವಾಗುತ್ತೆ.

ಕೊನೆಯದಾಗಿ ಒಂದು ವಿಚಾರ. ಮುಜರಾಯಿ ಇಲಾಖೆಯಡಿಯಲ್ಲಿ ಬರುವ ಮಂದಿರವೊಂದು “ನಮ್ಮ ಮಂದಿರಕ್ಕೆ ಈ ವರ್ಷ ಬಣ್ಣ ಹಚ್ಚಿಸಬೇಕು, ಅನುದಾನ ಬಿಡುಗಡೆ ಮಾಡಿ” ಅಂತ ಸರ್ಕಾರಕ್ಕೆ ಕೇಳಿದ್ದಾಗ ಸಿದ್ದರಾಮಯ್ಯನ ಸರ್ಕಾರದಿಂದ ಉತ್ತರ ಏನಂತ ಬಂದಿತ್ತು ಗೊತ್ತಾ?

“ನಮ್ ಹತ್ರ ಈಗ ದೇವಸ್ಥಾನಕ್ಕೆ ಬಣ್ಣ ಬಳಿಸೋಕೆ ಕೊಡೋಷ್ಟು ದುಡ್ಡಿಲ್ಲ”

ಉಫ್!!!!

ಹೇಳ್ತಾ ಹೋದರೆ ಸಿದ್ದರಾಮಯ್ಯನ ಹಿಂದೂ ವಿರೋಧಿ ಮುಖವಾಡದ ಕರಾಳ ಸತ್ಯಗಳು ಬಹಳ ಇವೆ. ಹೀಗೆ ಒಂದೊಂದಾಗಿ ಅವುಗಳನ್ನ ನಿಮ್ಮ ಮುಂದೆ ಇಡೋ ಪ್ರಯತ್ನ ಮಾಡುತ್ತೇನೆ.

ಸಿದ್ದರಾಮಯ್ಯ ಸರ್ಕಾರದ ಈ ಹಿಂದೂ ವಿರೋಧಿ ನಡೆಗಳನ್ನ ನೋಡಿ ಮುಂದೆ ಈ ದರಿದ್ರ ಸರ್ಕಾರಕ್ಕೆ ವೋಟ್ ಹಾಕಿ ಮತ್ತೆ ಅಧಿಕಾರಕ್ಕೆ ತಂದು ಕೂರಿಸಿ ಮುಸಲ್ಮಾನರ ಕಲ್ಯಾಣ ಕಾರ್ಯ ಮಾಡಬೇಕಾ ಅಂತ ಯೋಚಿಸಿ!!!

Source : Public Tv Live

– Vinod Hindu Nationalist

Tags

Related Articles

Close