ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಸರ್ಕಾರದ ಜವಬ್ಧಾರಿಗಳು ಸತ್ತೇ ಹೋಗಿದೆ. ಪ್ರತೀ ಬಾರಿ ಏನಾದರೂ ಸಮಸ್ಯೆಗಳನ್ನು ಎದುರಿಟ್ಟುಕೊಂಡು ಜನತೆಯ ಜೊತೆ ಆಟವಾಡುತ್ತಿರುವ ಕಾಂಗ್ರೆಸ್ ಈ ರಾಜ್ಯದಲ್ಲಿ ಹಿಟ್ಲರ್ ಆಡಳಿತವನ್ನೇ ನಡೆಸುತ್ತಿದೆ ಎನ್ನುವುದಕ್ಕೆ ಸಂದೇಹವೇ ಇಲ್ಲ.
ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕಿದ್ದ ಪೊಲೀಸರನ್ನು ತನಗೆ ಬೇಕಾದ ಹಾಗೆ ಕೆಲಸಗಳನ್ನು ಮಾಡಿಕೊಳ್ಳುತ್ತಿರುವ ಸರ್ಕಾರ ಅವರಿಗೆ ಬಗೆದಿರುವ ದ್ರೋಹ
ಮಾತ್ರ ಒಂದೆರಡಲ್ಲ. ಕಳೆದ ಬಾರಿ ಪೊಲೀಸರು ತಮ್ಮ ವೇತನಕ್ಕೆ ಸಂಬಂಧಿಸಿದ ವಿಷಯವಾಗಿ ಅದೆಷ್ಟು ಗೋಳಿಟ್ಟುಕೊಂಡರೂ ಜಗ್ಗದ ಸರ್ಕಾರ ಅವರನ್ನು
ಬಳಸಿಕೊಂಡ ರೀತಿಯನ್ನು ಕಂಡರೆ ಮಾತ್ರ ಎಂತಹ ರಕ್ತ ಕೂಡಾ ಒಮ್ಮೆ ಬಿಸಿಯಾಗುತ್ತೆ.
ಕೆಲ ತಿಂಗಳುಗಳ ಹಿಂದೆ ದಕ್ಷಿಣ-ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ರಮಾನಾಥ್ ರೈ, ಜಿಲ್ಲಾ ಪೊಲೀಸ್ ವರಿಷ್ಟರೊಬ್ಬರನ್ನು ಮುಂದೆ ಕುಳ್ಳಿರಿಸಿ ಅವರನ್ನು ಬಂಧಿಸಿ, ಇವರನ್ನು ಬಂಧಿಸಿ ಎಂದು ಆಜ್ನೆವಿತ್ತಿದ್ದರು. ಸಹಜವಾಗಿ ಇಡೀ ರಾಜ್ಯವೇ ಆ ಸಚಿವರ ವಿರುದ್ಧ ತಿರುಗಿ ಬಿದ್ದಿತ್ತು. ಆದರೆ ತಾನು ಮಾತ್ರ ಪೊಲೀಸರಿಗೆ ಕಾನೂನು ಪಾಠ ಮಾಡಿದ್ದನ್ನು ಹೆಮ್ಮೆಯಿಂದ ಬೀಗಿದ್ದು ಮಾತ್ರವಲ್ಲದೇ ಸರ್ಕಾರವೂ ಇವರ ಬೆಂಬಲಕ್ಕೆ ನಿಂತಿತ್ತು.
ಇಂತಹ ಅನೇಕ ವಿಚಾರಗಳು ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿದ್ದು ಕಾನೂನು ರಕ್ಷಣೆ ಮಾಡಬೇಕಿದ್ದ ಸರ್ಕಾರವೇ ಕಾನೂನು ಪಾಲಕರಿಗೆ ರಕ್ಷಣೆ ಕೊಡದೆ ಕೈಚೆಲ್ಲಿ ಕೂತಿದೆ.
ಮೊನ್ನೆ ಮೊನ್ನೆ ತಾನೆ ಮಹಿಳಾ ಟೆಕ್ಕಿಯೊಬ್ಬಳು ಬೆಂಗಳೂರಿನಲ್ಲಿ ಗೋಕಳ್ಳರ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಳು ಎನ್ನುವ ಕಾರಣಕ್ಕಾಗಿ ಆ ಮಹಿಳೆಗೆ ಹಿಗ್ಗಾ ಮುಗ್ಗವಾಗಿ ಥಳಿಸಿದ್ದರು ಪಾಪಿಗಳು. ಆದರೆ ಸರ್ಕಾರ ಹೇಳುತ್ತಿದೆ ಗೋಹತ್ಯೆ ಮಾಡಿ, ಖಸಾಯಿಖಾನೆ ನಿರ್ಮಿಸಿ ನಿಮಗೆ ಅನುಮತಿ ಕೊಡುತ್ತೇವೆ ಎಂದು.
ಅದ್ಯಾವುದೋ ಊರಿನಿಂದ ಕೆಲಸದ ನಿಮಿತ್ತ ಬೆಂಗ್ಳೂರಿನಲ್ಲಿ ನೆಲೆಸುತ್ತಿರುವ ಓರ್ವ ಮಹಿಳೆಗೆ ರಕ್ಷಣೆ ನೀಡುವಷ್ಟು ಸಾಮಾಥ್ರ್ಯ ಸರ್ಕಾರಕ್ಕಿಲ್ಲ. ಬಿಡಿ, ಕನಿಷ್ಟ ಪಕ್ಷ ಆ ಪಾಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ವಿಚಾರವನ್ನಾದರೂ ಧ್ವನಿ ಎತ್ತಿದ್ದಾರಾ..?
ಈಗ ಮತ್ತೆ ದುಷ್ಟರ ಅಟ್ಟಹಾಸ ಮುಗಿಲು ಮುಟ್ಟಿದೆ. ಅದೂ ಪೊಲೀಸರ ಮೇಲೆಯೇ…!ಹೌದು ಯಲಹಂಕದ ದೊಡ್ಡಬೆಟ್ಟದ ಹಳ್ಳಿಯಲ್ಲಿರುವ ಅಕ್ರಮ ಕಸಾಯಿಖಾನೆ ಮುಚ್ಚುವಂತೆ ನೋಟೀಸ್ ನೀಡಲು ಹೋಗಿದ್ದ ಯಲಹಂಕ ನ್ಯೂಟೌನ್ ಪೊಲೀಸರು ಹಾಗೂ ವಕೀಲರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಕಾನೂನನ್ನು ರಕ್ಷಿಸುವ ಪೊಲೀಸರಿಗೇ ರಕ್ಷಣೆ ಇಲ್ಲವೆಂದಾದರೆ ಇನ್ನು ಸಾಮಾನ್ಯ ಜನರಿಗೆ ಈ ಸರ್ಕಾರ ಯಾವ ರೀತಿಯ ರಕ್ಷಣೆಯನ್ನು ನೀಡಬಹುದೆಂದು ಊಹಿಸಬಹುದಾಗಿದೆ. ಸದಾ ತಮ್ಮ ಕೆಲಸಗಳಿಗೆ ಪೊಲೀಸರನ್ನು ಛೂ ಬಿಡುವ ಈ ನಾಲಾಯಕ್ ರಾಜಕಾರಣಿಗಳು ಪೊಲೀಸರ ಮೇಲೆ ದೌರ್ಜನ್ಯ ನಡೆದಾಗ ಮೌನವಹಿಸುವುದು ಯಾಕೆ…? ಸರ್ಕಾರಕ್ಕೆ ಪೊಲೀಸ್ ಇಲಾಖೆಗೆ ರಕ್ಷಣೆ ಕೊಡುವಷ್ಟು ಧೈರ್ಯವಿಲ್ಲವೇ ಅಥವಾ ದೌರ್ಜನ್ಯ ನಡೆಸಿದ ಉಗ್ರರು ಮುಸಲ್ಮಾನರು ಎಂಬ ಮಮತೆಯೇ..?
ಇಷ್ಟೇ ಅಲ್ಲದೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಗೋಕಳ್ಳರ ವಿರುದ್ಧ ಕ್ರಿಮಿನಲ್ ಪಿಟಿಷನ್ ಸಲ್ಲಿಸಿದ್ದ ಕವಿತಾ ಮತ್ತು ಜೋಷನ್ ಅಂಟೋನಿ ಎಂಬವರ ಮೇಲೆ
ಮತಾಂಧರು ದಾಳಿ ನಡೆಸಿದ್ದಾರೆ. ಅದೂ ಪೊಲೀಸ್ ಮತ್ತು ನ್ಯಾಯಾಲಯ ನೇಮಿಸಿದ್ದ ಕಮಿಷನರ್ ಎದುರಿಗೇ…!
ಯಲಹಂಕದ ಎಂಎಸ್ ಪಾಳ್ಯದಲ್ಲಿ ಅಕ್ರಮ ಕಸಾಯಿಖಾನೆಗಳಿವೆ ಎಂಬ ಮಾಹಿತಿಯ ಮೇರೆಗೆ ಸ್ಥಳ ಪರಿಶೀಲನೆಗೆ ತೆರಳಿದ್ದ ತಂಡದ ಮೇಲೆ ಹಲ್ಲೆ ನಡೆದಿದೆ.
ಅರ್ಜಿದಾರರ ಕವಿತಾ, ಅಂಟೋನಿ ಸಹಿತ ಪೊಲೀಸರ ಮೇಲೆ ಸುಮಾರು 200 ಜನರ ತಂಡದಿಂದ ದಾಳಿ ನಡೆದಿದೆ. ಹಾಗಾದರೆ ಇಲ್ಲಿ ನ್ಯಾಯಕ್ಕೆ ಬೆಲೆ ಇದೆಯೇ..?
ಸದಾ ಬಲಪಂಥೀಯರನ್ನು ಟಾರ್ಗೆಟ್ ಮಾಡುವ ಸರ್ಕಾರಕ್ಕೆ ಈ ಅನ್ಯಾಯಗಳು ಕಾಣುವುದೇ ಇಲ್ಲ. ಪ್ರತಿಯೊಂದಕ್ಕೂ ಪೊಲೀಸರನ್ನು ಮುಂದೆ ಬಿಟ್ಟು ಆಟವಾಡುವ ಈ ಸರ್ಕಾರಕ್ಕೆ ಪೊಲೀಸರು ಅನುಭವಿಸುತ್ತಿರುವ ಕಷ್ಟ ಕಾರ್ಪಣ್ಯಗಳ ಬಗ್ಗೆ ಅರಿವಿದೆಯೇ..? ತನ್ನ ಹೆಂಡತಿ ಮಕ್ಕಳನ್ನು ಸರ್ಕಾರ ಕೊಟ್ಟ ಜೋಪಡಿಯಲ್ಲಿ ಸಾಕಿಕೊಂಡು, ಮಳೆಗಾಲದಲ್ಲಿ ಅದೇ ಮಳೆನೀರು ಮನೆಯ ಹಂಚಿನೊಳಗೆ ಬಿದ್ದರೂ ಸರ್ಕಾರ ಕೊಡುತ್ತಿರುವ ಪ್ರಸಾದವೆಂದು ತನ್ನ ಕರ್ತವ್ಯವನ್ನು ಮೆರೆಯುತ್ತಿರುವ ಪೊಲೀಸರನ್ನು ಯಾವ ರೀತಿ ನೋಡಿಕೊಂಡಿದೆ ಈ ಕಾಂಗ್ರೆಸ್ ಸರ್ಕಾರ..?
ಕಳೆದೆ ವರ್ಷ ನಮಗೆ ನ್ಯಾಯ ಕೊಡಿ ಎಂದು ಗೋಗರೆದ ಪೊಲೀಸ್ ಪೇದೆಗಳಿಗೆ, “ಪ್ರತಿಭಟಿಸಿದರೆ ನಿಉಮ್ಮನ್ನು ಕೆಲಸದಿಂದ ಕಿತ್ತು ಹಾಕುತ್ತೇವೆ” ಎಂದು ಬೆದರಿಕೆ ಹಾಕಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಪೊಲೀಸರ ಮಾನವೀಯತೆಯ ಬಗ್ಗೆ ಮಾತನಾಡುವ ಯಾವ ಹಕ್ಕು ಇದೆ. ಬಿಜೆಪಿಗರು ಪೊಲೀಸರ ವಿರುದ್ಧ ಮಾತನಾಡಿದರೆ ಕೇಸು ದಾಖಲಿಸಿ ಎಂದು ಆದೇಶಿಸುವ ಸರ್ಕಾರ, ಸಂಸದ ನಳಿನ್ ಕುಮಾರ್ ಕಟೀಲ್ ಪೊಲೀಸ್ ಅಧಿಕಾರಿಯನ್ನು ಪ್ರಶ್ನಿಸಿದ್ದಾರೆ ಎಂದ ಮಾತ್ರಕ್ಕೆ ಅವರ ವಿರುದ್ಧ ಕೇಸು ದಾಖಲಿಸಿದ್ದ ಸರ್ಕಾರ, ಹಿಂದೂ ಸಂಘಟನೆಯ ಮುಖಂಡ ಜಗಧೀಶ್ ಕಾರಂತ್ ಪಿಎಸ್‍ಐ ಖಾದರ್ ವಿರುದ್ಧ ಮಾತನಾಡಿದ್ದರು ಎಂಬ ಕಾರಣಕ್ಕೆ ಕೇಸು ದಾಖಲಿಸಿದ್ದ ಸರ್ಕಾರ, ರಮಾನಾಥ ರೈ ಸಹಿತ ಪೊಲೀಸರನ್ನು ನಿಂದಿಸಿದ್ದ ಅನೇಕ ಕಾಂಗ್ರೇಸಿಗರನ್ನು ಯಾಕೆ ಪ್ರಶ್ನಿಸಿಲ್ಲ..?
ಪ್ರಶ್ನಿಸಬೇಕು ತಾನೇ..?
ಪೊಲೀಸ್ ಅಧಿಕಾರಿಯ ಸಾವಿಗೆ ನೇರ ಕಾರಣವಾಗಿರುವ ಕೆ.ಜೆ. ಜಾರ್ಜ್ ಇನ್ನೂ ಸರ್ಕಾರದಲ್ಲಿ ಸಚಿವರಾಗಿಯೇ ಮುಂದುವರೆಯುತ್ತಿದ್ದಾರಲ್ಲಾ ಅದು ಹೇಗೆ..?
ನೈತಿಕತೆ ಇಲ್ಲವೆಂಬುವುದು ಜಗತ್ತಿಗೆ ಗೊತ್ತಿದೆ. ಕಾನೂನಿಗಾದರೂ ಬೆಲೆ ಕೊಡಬೇಕು ತಾನೇ..? ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ನ್ಯಾಯಾಲಯ ಸಿಬಿಐಗೆ ನೀಡಿದೆ. ಅದನ್ನು ಎದುರಿಸಲು ಸಚಿವ ರಾಜೀನಾಮೆ ಕೊಡಲೇ ಬೇಕಲ್ವಾ..? ಸರ್ಕಾರನಾದ್ರೂ ರಾಜೀನಾಮೆ ಕೇಳಬೇಕಿತ್ತಲ್ವಾ..? ಇದನ್ನು ಪ್ರಶ್ನಿಸಬಹುದಲ್ಲವೇ..?
ಈ ರಾಜ್ಯದಲ್ಲಿ ಪೊಲೀಸ್ ಇಲಾಖೆ ಎಂಬುವುದು ತನ್ನ ಮೂಗಿನ ನೇರವಿರುವ ಖಾಸಗೀ ಸಂಸ್ಥೆಯ ತರಹ ಸರ್ಕಾರ ನಡೆಸಿಕೊಳ್ಳುತ್ತಿರುವುದು, ಮತ್ತು ತನ್ನ
ವಿರೋಧಿಗಳನ್ನು ಮಟ್ಟಹಾಕಲು ಬಳಸುತ್ತಿರುವ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವುದು ಸುಳ್ಳಲ್ಲಾ… ಕನಿಷ್ಟ ಪಕ್ಷ ಆ ಪೊಲೀಸರಿಗೆ ವೇತನವನ್ನಾದರು ಜಾಸ್ತಿ ಮಾಡಿ ಅದೆಷ್ಟೋ ಪೊಲೀಸರ ತಾಯಂದಿರ, ಹೆಂಡತಿ ಮಕ್ಕಳ ಕಣ್ಣೀರು ಒರೆಸುವ ಕೆಲಸ ಮಾಡುವ ಪುಣ್ಯವನ್ನಾದರು ಕಟ್ಟಿಕೊಳ್ಳಿ. ಇಲ್ಲವಾದರೆ ಅದೇ ತಾಯಂದಿರ ಶಾಪಕ್ಕೆ ಗುರಿಯಾಗಿ ಗಂಟು ಮೂಟೆ ಕಟ್ಟಿ ಮನೆಗೆ ಹೋಗಲು ತಯಾರಾಗಿರಿ…
-ಸುನಿಲ್