ಅಂಕಣ

ಪ್ರಕಾಶ್ ರೈ ಅವರೇ, ನಿಮ್ಮ ಬೌದ್ಧಿಕ ದಾರಿದ್ರ್ಯವನ್ನು ಮಗಳಿಂದಾದರೂ ಬಚ್ಚಿಟ್ಟುಕೊಳ್ಳಿ!!

“ಏನಪ್ಪಾ ಈ ಸಲ ಪ್ರಕಾಶ್‌ ರೈ ಸಿನಿಮಾಕ್ಕೆ ಹೋಗಲ್ವಾ?” ಅಂತ ಸ್ನೇಹಿತ ಕೇಳಿದ.

“ಪ್ರಕಾಶ್‌ ರೈ ಸಿನಿಮಾ ನಮ್ಮ ಸಂಸ್ಕೃತಿ ಅಲ್ಲಪ್ಪ” ಅಂದೆ. ಉತ್ತರದ ಬೆನ್ನಲ್ಲೇ ಇನ್ನೊಂದು ಪ್ರಶ್ನೆ..

“ಸಂಸ್ಕೃತಿ ಅಂದ್ರೆ ಏನಪ್ಪಾ?” ಸಿನಿಮಾಗೂ ಅದಕ್ಕೂ ಏನ್‌ ಸಂಬಂಧ?

ತತ್‌ಕ್ಷಣ, ಒಂದೇ ಹಿಡಿಯಲ್ಲಿ ಉತ್ತರಿಸುವಂಥದ್ದಲ್ಲ ಇದು. ಏಕೆಂದರೆ ಸಿನಿಮಾದಲ್ಲಿ ನೂರಾರು ವಿಷಯಗಳಿರುತ್ತವೆ. ಪ್ರಕಾಶ್‌ ರೈ ಸಿನಿಮಾ ಎಂದಾಗ, ಸಿನಿಮಾದಲ್ಲಿ ಅವರು ಖಳನಟನಾಗಿ ಇರುತ್ತಾರೆ. ಖಳನಟ ಮಾಡುವ ಕೆಲಸಗಳೇನು ಸಮಾಜ ಉದ್ಧಾರದ ಕೆಲಸವೇನಲ್ಲ ಅಲ್ವೇ? ಬರೀ ಮನೆ ಒಡೆಯುವ ಕೆಲಸ, ಅಥವಾ ತಲೆ ಒಡೆಯುವ ಕೆಲಸ. ಇಂಥ ಕ್ರೂರ ಪಾತ್ರ ಮಾಡುವವರಿಗೆ ಶಿಳ್ಳೆ, ಚಪ್ಪಾಳೆ, ಪ್ರಶಸ್ತಿ ಪಗಡೆ… ಏನ್‌ ಸಾಧನೆ ಮಾಡಿದ್ದಾರೆ ಎಂದು ನಾವು ಅವರ ಸಿನಿಮಾ ನೋಡಬೇಕು?

ಪ್ರಕಾಶ್‌ ರೈ ಬಡವರನ್ನು ಕತ್ತರಿಸಿ ಗಹಗಹಿಸಿ ನಗುವ ಸಿನಿಮಾ ನೋಡಿ ನನಗೇನು ಪ್ರಯೋಜನ? ಖಂಡಿತವಾಗಿಯೂ ಅದು ನನ್ನ ಸಂಸ್ಕೃತಿ ಅಲ್ಲವೇ ಅಲ್ಲ. ನಮ್ಮ ಹಿಂದೂ ನಾಗರೀಕತೆಯ ಸಂಸ್ಕೃತಿಯೂ ಅಲ್ಲ. ಹಾಗಾಗಿ ನಾನು ಇಂಥ ಸಿನಿಮಾ ನೋಡಲ್ಲ. ಸಂಸ್ಕೃತಿ ಹೀನತೆಯನ್ನೇ ಎತ್ತಿ ಆಡಿಸುವ ಸನಿಮಾ ನನಗೆ ಬೇಡ ಎಂದು ಹೇಳಿದೆ.

ಸರಿ ಇನ್ನೊಂದು ಉದಾಹರಣೆ ಕೊಡುತ್ತೇನೆ. ಮುಸ್ಲಿಮರು ವರ್ಷಕ್ಕೊಮ್ಮೆ ಮೆರವಣಿಗೆ ಹೋಗುತ್ತಾರೆ. ಅದಲ್ಲಿ ಕತ್ತಿಯಲ್ಲಿ ಮೈಗೆ ಹೊಡೆದುಕೊಂಡು, ಲೌಡ್‌ಸ್ಪೀಕರ್‌ನಲ್ಲಿ ಅರ್ಥವಾಗದ ಭಾಷೆಯ ಯಾವುದೋ ಸಂಗೀತ ಹಾಕಿಕೊಂಡು ಹೋಗುತ್ತಾರೆ. ಆ ಸಮಯದಲ್ಲೂ ಗುಂಪುಗಳ ನಡುವೆ ಜಗಳವಾಗುತ್ತದೆ. ಹಾಗಾಗಿ ಅದು ನಮ್ಮ ಸಂಸ್ಕೃತಿಯಲ್ಲ. ಅಂಥ ಸಂಸ್ಕೃತಿ ನಮಗೆ ಬೇಡ.

ಇಂಥ ಮಾತನ್ನು ನನ್ನನ್ನೂ ಸೇರಿದಂತೆ ಯಾರಾದ್ರೂ ಆಡಿದರೆ ಅದು ಬಾಲಿಶ ಎಂದೆನಿಸುವುದಿಲ್ಲವೇ? ಹಾಗೇ ಪ್ರಕಾಶ್ ರೈ ಅವರ ಲೇಖನವೂ ತೀರಾ ಫೂಲಿಶ್‌
ಅನಿಸಿದ್ದು. ಪ್ರಕಾಶ್‌ ರೈ ಅವರು ತಮ್ಮ ಇತ್ತೀಚಿನ ಲೇಖನವೊಂದರಲ್ಲಿ ಹೋಳಿ ಹಬ್ಬಗಳಲ್ಲಿ ಯಾರೂ ಪುಂಡಾಟಿಕೆ ಮಾಡುತ್ತಾರೆ ಎಂಬುದಕ್ಕೆ ಹೋಳಿ ಹಬ್ಬವೇ ನಮ್ಮ ಸಂಸ್ಕೃತಿಯಲ್ಲ ಎಂದು ತಮ್ಮ ಮಗಳಿಗೆ ಹೇಳಿದ್ದಾರಂತೆ. ಯಾರೋ ನಾಲ್ಕು ಜನ ಹೋಳಿ ಹಬ್ಬದ ದಿನ ರೇವ್‌ ಪಾರ್ಟಿ ಮಾಡಿದ್ದರು ಎಂಬ ಕಾರಣಕ್ಕೆ ಹೋಳಿ ಹಬ್ಬವೇ ನಮ್ಮ ಸಂಸ್ಕೃತಿಯಲ್ಲ ಎಂದು ಉದ್ದುದ್ದ ಲೇಖನ ಬರೆಯುವ ಪ್ರಕಾಶ್‌ ರೈ ವಾದ ಎಷ್ಟರ ಮಟ್ಟಿಗೆ ಸಮರ್ಥನೀಯ?

“ಹಬ್ಬ: ಜಗಕೆ ಕಾಣಿಪುದೊಂದು, ಮನೆಯ ಜನಕೊಂದು” ಎಂಬ ಶೀರ್ಷಿಕೆಯಡಿ ಬರೆದ ಲೇಖನದಲ್ಲಿ ಕೇವಲ ಹಿಂದೂ ಧರ್ಮಗಳ ಆಚರಣೆಗಳ ಬಗ್ಗೆ ಬಟ್ಟೆ
ಹರಿದುಕೊಂಡಿದ್ದಾರೆಯೇ ವಿನಾ ಬೇರೆ ಧರ್ಮದ ಆಚರಣೆಗಳ ಬಗ್ಗೆ ಒಂದೇ ಒಂದು ಮಾತೂ ಆಡಿಲ್ಲ.

ಇವರ ಇಂಥ ಬೌದ್ಧಿಕ ದಾರಿದ್ರ‍್ಯವುಳ್ಳ ಲೇಖನದಲ್ಲಿ ತಮ್ಮ ಮಗಳನ್ನು ಏಕೆ ಕರೆದುತಂದರೋ ಗೊತ್ತಿಲ್ಲ. ಇಲ್ಲಿ ಅಚ್ಚರಿ ಮೂಡುವುದೇನೆಂದರೆ ಇವರ ಮಗಳು ಬೇರೆ
ಧರ್ಮದ ಹಬ್ಬ ಬಂದಾಗ ಅದರ ಬಗ್ಗೆ ಕೇಳುವುದೇ ಇಲ್ಲ ಎಂಬುದು.

ಪ್ರಕಾಶ್ ರೈ ಒಬ್ಬ ಬುದ್ಧಿವಂತ ಬರಹಗಾರ. ಯಾವ್ಯಾವಾಗ ಯಾವ್ಯಾವ ಪಾತ್ರ ತರಬೇಕು, ಆಯಾ ಪಾತ್ರವನ್ನು ಹೇಗೆ ಮಾತಾಡಿಸಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಹಾಗೇ ಇಲ್ಲೂ ಮಾಡಿದ್ದಾರೆ. ಪ್ರಕಾಶ್‌ರ ಮಗಳು ಅವರನ್ನು ಏನು ಕೇಳಿದಳು ಎಂದು ಯಾರೂ ಕೇಳುವುದಿಲ್ಲ. ಇಲ್ಲಿ ಪ್ರಕಾಶ್ ರೈ ಬರೆದಿದ್ದೇ ಕಥೆ, ಬಿಟ್ಟಿದ್ದೇ ಬಾಣ.‌

ಪ್ರಕಾಶ್ ರೈ ತಾಯಿ ಕ್ರಿಶ್ಚಿಯನ್ ಮತ್ತು ತಂದೆ ಬಂಟ್ ಜನಾಂಗದವರು. ಪ್ರಕಾಶ್ ರೈ ತಮ್ಮ ತಂದೆಯನ್ನು ಬಿಟ್ಟು ತಾಯಿಯ ಜತೆಗೇ ನೆಲೆಸಿದ್ದರು. ಅಂದರೆ ಸಹಜವಾಗಿ ಕ್ರಿಶ್ಚಿಯನ್ ಧರ್ಮದ ಬಗ್ಗೆ ಅವರಿಗೆ ಗೊತ್ತೇ ಇರುತ್ತದೆ. ಹಾಗೆಯೇ ಇವರ ತೆಕ್ಕೆಯಲ್ಲೇ ಬಳೆದ ಮಗಳಿಗೂ ಕ್ರಿಶ್ಚಿಯನ್ ಧರ್ಮದ ಬಗ್ಗೆ ಗೊತ್ತಿರಲೇಬೆಕು.

ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಾಲೊವೀನ್ ಎಂದು ಒಂದು ಹಬ್ಬ ಆಚರಿಸುತ್ತಾರೆ. ಅದನ್ನೇ ಭಾರತೀಯರೂ ಕಾಪಿ ಮಾಡುತ್ತಿದ್ದಾತೆ‌. ಎಲ್ಲರೂ ಹ್ಯಾಪಿ ಹಾಲೊವೀನ್ ಎಂದು ಹೇಳ್ಕೊಂಡು ಮುಖಕ್ಕೆ ವಿಧವಿಧ ಬಣ್ಣ ಹಚ್ಚಿಕೊಳ್ತಾರೆ.. ದೆವ್ವಗಳ ಹಾಗೆ ವೇಷ ಹಾಕುತ್ತಾರೆ‌. ಯಾರು ಯಾರೆಂಬುದೇ ಗೊತ್ತಾಗುವುದಿಲ್ಲ. ಇವರು ದೆವ್ವದ ಹಾಗೆ ವೇಷ ಧರಿಸಿ ಮನೆಯಲ್ಲೇ ಇದ್ದರೆ ಯಾವನಿಗೂ ಬೇಸರವಾಗುತ್ತಿರಲಿಲ್ಲ. ಆದರೆ ಹ್ಯಾಲೊವೀನ್ ಹೆಸರಿನಲ್ಲಿ ಮದ್ಯಪಾನದ ಪಾರ್ಟಿ ನಡೆಯುತ್ತದೆ. ಡಿಸ್ಕೊ ಡ್ಯಾನ್ಸ್ ಸಹ ಇರುತ್ತದೆ. ಇಲ್ಲಿ ಪುಂಡ ಪೋಕರಿಗಳೂ ಇರುತ್ತಾರೆ. ಕಾಮಕೇಳಿ ಜೋರಿರುತ್ತದೆಂದು ಕೇಳಿದ್ದೇನೆಯಷ್ಟೇ.

ಹೋಳಿ ಹಬ್ಬದಲ್ಲಿ ಬಳಸುವ ಬಣ್ಣದಲ್ಲಿ ರಾಸಾಯನಿಕ ಬೆರೆಸಿರ್ತಾರೆ, ಅದು ಚರ್ಮವನ್ನು ಹಾಳು ಮಾಡಿರುತ್ತದೆ ಎಂದು ಹೇಳುವ ಜನರು ಯಾಕೆ ಹ್ಯಾಲೊವೀನ್‌ನಲ್ಲಿ ಬಳಸುವ ಬಣ್ಣದ ಬಗ್ಗೆ ಮಾತಾಡೋದೇ ಇಲ್ಲ? ಅದಿರಲಿ, ಪ್ರಕಾಶ್ ರೈ ಅವರ ಮಗಳೇಕೆ ಹ್ಯಾಲೊವೀನ್ ಬಗ್ಗೆ ಕೇಳುವುದೇ ಇಲ್ಲ?

ಪುಂಡರು ಇರುವ ಕಾರಣಕ್ಕೆ ಹೋಳಿ ಹಬ್ಬ “ನಮ್ಮ ಸಂಸ್ಕೃತಿಯಲ್ಲ” ಎಂಬ ಪಟ್ಟಿಗೆ ಸೇರುವುದಾದರೆ, ಹ್ಯಾಲೊವೀನ್ ಸಹ ಅದೇ ಪಟ್ಟಿಯಲ್ಲಿರಬೇಕಲ್ಲ? ಇದು ನಮ್ಮ ಸಂಸ್ಕೃತಿಯೋ ಇಲ್ಲವೋ ಎಂಬುದನ್ನು ಪ್ರಕಾಶ್ ರೈ ಅವರು, ತಮ್ಮ ತಾಯಿಯನ್ನೇ ಕೇಳಬಹುದಿತ್ತಲ್ಲ? ಕುಡಿದು ರಸ್ತೆಯಲ್ಲೇ ಬಿದ್ದು ವಾಂತಿ ಮಾಡುವುದು ಖಂಡಿತಾ ನಮ್ಮ ಸಂಸ್ಕೃತಿಯಲ್ಲ ಅಲ್ಲವಾ?

ನೋಡಿ ಪ್ರಕಾಶ್, ಇಂಥ ಅಧಿಕಪ್ರಸಂಗತನದ ವಾದ ಮಾಡುವುದಕ್ಕೆ ನಿಮಗೊಬ್ಬರಿಗೇ ಬರುತ್ತದೆ ಎಂದು ತಿಳಿಯಬೇಡಿ. ಬದಲಿಗೆ ಎಲ್ಲರಿಗೂ ಬರುತ್ತದೆ. ಆದರೆ
ಯಾರೂ ನಿಮ್ಮಷ್ಟು ಕೆಳಗಿಳಿದಿಲ್ಲವಷ್ಟೇ.

ಹೋಳಿ ಹಬ್ಬದ ದಿನ ಯಾರೋ ನಾಲ್ಕೈದು ಪೊರ್ಕಿಗಳು ಕುಣಿದರು, ಮನೆಯಲ್ಲಿ ಸುಳ್ಳು ಹೇಳಿ ಗಾಂಜಾ ಹೊಡೆಯುತ್ತಿದ್ದರು ಎಂದ ಮಾತ್ರಕ್ಕೆ ಹಬ್ಬವೇ ಸಂಸ್ಕೃತಿಯ ಪಟ್ಟಿಯಿಂದ ಹೊರಗೆ ಹೋಗುವುದಿಲ್ಲ. ಬದಲಿಗೆ, ಸಂಸ್ಕಾರ ಇಲ್ಲದ ಹುಡುಗರು ಹಬ್ಬದ ಸಂಸ್ಕೃತಿ ಹಾಳು ಮಾಡುತ್ತಿದ್ದಾರೆ ಎಂದರ್ಥ.

ಅಲ್ಲ ಪ್ರಕಾಶ್, ಬೇರೆ ಧರ್ಮದಲ್ಲಿ ಕಡಿಯುವ, ಕೊಚ್ಚುವ ಹಬ್ಬವೇ “ನಮ್ಮ ಸಂಸ್ಕೃತಿ”ಯ ಪಟ್ಟಿಯಲ್ಲಿರಬೇಕಾದರೆ, ಬಣ್ಣ ಎರಚುತ್ತಾ ಸಂಭ್ರಮಿಸುವ ಹಬ್ಬವನ್ನು ಅದು ಹೇಗೆ ತಾನೆ “ನಮ್ಮ ಸಂಸ್ಕೃತಿಯಲ್ಲ” ಎಂದು ಹೇಳುವುದಕ್ಕೆ ಮನಸ್ಸು ಬರುತ್ತದೆ ನಿಮಗೆ?

ಮತ್ತೊಮ್ಮೆ ಲೇಖನ ಬರೆಯುವಾಗ ಸಿಚುವೇಷನ್‌ಗೆ ಸೂಟ್ ಆಗುತ್ತೆ ಎಂದು ನಿಮ್ಮ ಮಗಳ ಹೆಸರನ್ನು ಎಳೆದು ತರಬೇಡಿ.‌ ನಿಮ್ಮ ಸ್ನೇಹಿತರದ್ದು ಹೆಸರು ಇದ್ದರೆ ಹಾಕಿ. ಒಮ್ಮೆ ನಿಮ್ಮ ಮಗಳು ನಿಜವಾಗಲೂ ನಿಮ್ಮನ್ನು ಹೋಳಿ ಹಬ್ಬದ ಬಗ್ಗೆ ಪ್ರಶ್ನೆ ಮಾಡಿದ್ದಳು ಎಂದಾದರೆ, ದಯವಿಟ್ಟು ಇದು “ನಮ್ಮ ಸಂಸ್ಕೃತಿಯಲ್ಲ” ಎಂಬ ಬಕ್ವಾಸ್ ಉತ್ತರಗಳನ್ನೆಲ್ಲ ಕೊಡಬೇಡಿ. ನಮಗೇನೋ ಗೊತ್ತಿದೆ, ನಿಮ್ಮ ಮಗಳಿಗೂ ನಿಮ್ಮ ಬೌದ್ಧಿಕ ದಾರಿದ್ರ್ಯದ ಬಗ್ಗೆ ಗೊತ್ತಾದರೆ ಕಷ್ಟ. ಸಿನಿಮಾದಲ್ಲಿ ನೀವು ವಿಲನ್ ಆದರೂ, ನಿಮ್ಮ ಮಗಳಿಗೆ ನೀವೇ ಹೀರೋ ಆಗಿರುತ್ತೀರಿ. ಹೀರೋ ರೀತಿಯೇ ಉತ್ತರ ಕೊಡಿ.

-Chiru Bhat

Tags

Related Articles

Close