ಅಂಕಣಪ್ರಚಲಿತ

‘ಪ್ರಜಾಕಾರಣ’ – ಉಪ್ಪಿದಾದಾರವರ ನೂತನ ರಾಜಕೀಯ ಮಿಷನ್! ಬಿಜೆಪಿಗೆ ಕೈ ಜೋಡಿಸಲಿದ್ದಾರೆಯೇ ಹೊಸ ನಡೆಯ ಮೂಲಕ?!

ರಾಜ್ಯದಲ್ಲಿ ಕುತೂಹಲ ಮೂಡಿಸಿರುವ ನಟ ಉಪೇಂದ್ರರವರ ರಾಜಕೀಯ ನಡೆ ಹೊಸ ತಿರುವು ಪಡೆದುಕೊಳ್ಳತೊಡಗಿದೆ. ಅಣ್ಣಾ ಹಜಾರೆಯವರ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡಿ ತದನಂತರ ದೇಶದ ಹಿತಾಸಕ್ತಿಗೊಂದು ಭದ್ರ ನೆಲೆ ಒದಗಿಸಿಕೊಟ್ಟ ಪ್ರಧಾನ ನರೇಂದ್ರ ಮೋದಿಯವರನ್ನೂ ಉಪೇಂದ್ರ ಅಭಿನಂದಿಸಿ ಬೆಂಬಲಿಸಿದ್ದರು. ಇತ್ತೀಚಿನ ದಿನಗಳಲ್ಲಿನ ಅವರ ನಡೆ ಅಭಿಮಾನಗಳಲ್ಲಿ ಮತ್ತೊಂದಿಷ್ಟು ಕುತೂಹಲವನ್ನು ಮೂಡಿಸಿದ ಬೆನ್ನಲ್ಲೇ ಅಮಿತ್ ಷಾ ಬೆಂಗಳೂರಿಗಾಗಮಿಸಿರುವುದು ಇನ್ನಷ್ಟು ಕುತೂಹಲ ಕೆರಳಿಸಿತ್ತು!

ರುಪ್ಪೀಸ್ ರೆಸಾರ್ಟಿನಲ್ಲಿ ಉಪೇಂದ್ರರವರು ರಾಜಕೀಯದ ನಡೆಯ ಬಗ್ಗೆ ಅದ್ಭುತವಾಗಿ ಅಭಿಪ್ರಾಯಪಟ್ಟಿದ್ದಾರೆ. “ಪ್ರಜಾಪ್ರಭುತ್ವ ಅನ್ನುವುದರಲ್ಲೇ ಪ್ರಜೆಗಳಿದ್ದಾರೆ. ಸಾಮಾನ್ಯರು ಅಸಾಮಾನ್ಯರಲ್ಲ, ಅವರಿಂದಲೇ ಇವತ್ತು ರಾಜಕೀಯ ನಡೆಯುತ್ತಿದೆ. ತಂತ್ರಜ್ಞಾನದ ಮೂಲಕ ನಾವು ಜನರನ್ನು ತಲುಪಹುದು. ಸಮಾಜಕ್ಕೆ ಬೇಕಾಗುವಂತಹ ಪ್ರತಿ ಸೌಲಭ್ಳಯವನ್ನೂ ನಾವು ನೀಡಬಹುದು. ಜನ ದುಡ್ಡಿರುವವಗೆ ಮಾತ್ರ ಮತ ಹಾಕುತ್ತಿದ್ದಾರೆ. ಆದರೆ, ನಾನದನ್ನು ಬೆಂಬಲಿಸುವುದಿಲ್ಲ. ಯಾವತ್ತೂ ರಾಜಕಾರಣ ಪಾರದರ್ಶಕವಾಗಿರಬೇಕು. ನನ್ನ ಹೊಸ ಪಕ್ಷಕ್ಕೆ ನಾನಿನ್ನೂ ಹೆಸರಿಟ್ಟಿಲ್ಲ, ಸ್ವಲ್ಪ ದಿನದಲ್ಲಿಯೇ ಪೂರ್ಣವಾಗಿ ಜನರನ್ನು ತಲುಪುತ್ತೇನೆ.” ಎಂದಿದ್ದಾರೆ.

ತದನಂತರ, ಪ್ರಧಾನ ಮಂತ್ರಿ ಮೋದಿಯವರನ್ನು ಶ್ಲಾಘಿಸಿದ ಉಪ್ಪಿದಾದಾ ಅವರನ್ನು ಯಾವಾಗಲೂ ಬೆಂಬಲಿಸುತ್ತಿದ್ದೇನೆ, ಹಾಗೂ ಮುಂದೆಯೂ ಅವರ ನಿರ್ಧಾರಗಳಿಗೆ ಬೆಂಬಲವಿದೆ. ವೋಟ್ ಬ್ಯಾಕ್ ರಾಜಕಾರಣವನ್ನು ವಿರೋಧಿಸಿದ ಉಪ್ಪಿ ದಾದಾ ‘ಪ್ರಜಾಕಾರಣ’ ಎಂಬ ನೂತನ ವೇದಿಕೆಯನ್ನು ಸೃಷ್ಟಿಸಿದ್ದಾರೆಂದೇ ಹೇಳಬಹುದಾಗಿದೆ.

 

ರಾಜಕೀಯದ ನಡೆ ಇದೇ ಮೊದಲಲ್ಲ!

ಬಹಳ ವರ್ಷಗಳಿಂದಲೂ ಉಪೇಂದ್ರರವರು ರಾಜಕೀಯಕ್ಕೆ ಸೇರ್ಪಡೆಗೊಳ್ಳುವ ಬಗ್ಗೆ ಇಂಗಿತ ವ್ಯಕ್ತಪಡಿಸುತ್ತಲೇ ಬಂದಿದ್ದರಾದರೂ ಈ ಸಲ ರಾಜಕೀಯ ನಡೆಯ ಬಗ್ಗೆ ಧೃಢೀಕರಿಸಿದ್ದಾರೆ. ಅವರ ನಿರ್ಧಾರಕ್ಕೆ ಇಡಿಯ ಕರ್ನಾಟಕವೇ ಅಭಿನಂದಿಸಿದೆ.

ಮೋದಿಯವರ ಜಿಸ್ ಟಿ ತೆರಿಗೆ, ಕಪ್ಪು ಹಣದ ವಿರುದ್ಧ ನಡೆದ ಸಮರದಲ್ಲಿಯೂ ಉಪ್ಪಿದಾದಾ ಸರಣಿ ಟ್ವೀಟ್ ಗಳ ಮೂಲಕ ಬೆಂಬಲ ನೀಡಿದ್ದರು. ಅತ್ಯುನ್ನತ ವಿಚಾರಧಾರೆಯ ಅವರ ರಾಜಕೀಯ ಮಿಷನ್ ‘ಪ್ರಜಾಕೀಯ’ ಜನರಲ್ಲಿ ಭರವಸೆ ಮೂಡಿಸುವಲ್ಲಿ ದಾಪುಗಾಲಿಕ್ಕುತ್ತಿರುವುದು ನೋಡಿದರೆ ಬಹುಷಃ ಭವಿಷ್ಯದಲ್ಲಿ ಉಪ್ಪಿ ದಾದಾ ಹೆಮ್ಮೆಯ ನಾಯಕರಾಗುವುದರಲ್ಲಿ ಸಂಶಯವಿಲ್ಲ.

ಉಪೇಂದ್ರರವರ ತಾಯಿ ಅನಸೂಯಮ್ಮ ಮಗನ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆಯೇ, “ಚಿಕ್ಕ ವಯಸ್ಸಿನಿಂದಲೂ ಸಂಘ ಕಟ್ಟುವೆ ಎನ್ನುತ್ತಿದ್ದ, ಮನೆಯೆಲ್ಲ ಕಮಲದ ಹೂವಿನ ಅಲಂಕಾರದಿಂದ ತುಂಬಿಸಿ ಬಿಜೆಪಿ ಅಂತ ಓಡಾಡುತ್ತಿದ್ದ. ಇವತ್ತು ಅವನ ನಿರ್ಧಾರ ಸಂತಸ ತಂದಿದೆ. ಅವನ ರಾಜಕೀಯ ನಡೆಗೆ ಅವಕಾಶ ಮಾಡಿಕೊಟ್ಟು ಸಹಕರಿಸಿ.” ಎಂದಿದ್ದಾರೆ.

ಪತ್ರಿಕಾ ಮಾಧ್ಯಮದ ಜೊತೆಗೆ ನೆನ್ನೆಯಿಂದ ಸಂಪರ್ಕದಲ್ಲಿರುವ ಉಪೇಂದ್ರರವರು ತಮ್ಮ ಮನದಿಂಗಿತವನ್ನು ಹೇಳಿಕೊಂಡಿದ್ದಾರೆ. ಜನರ ಕಷ್ಟಗಳ ಬಗ್ಗೆ, ಸಮಾಜದ ಇಂದಿನ ಸ್ಥಿತಿಯ ಬಗ್ಗೆ, ರಾಜಕೀಯ ನಾಯಕರುಗಳ ಅರ್ಹತಾ ಪರೀಕ್ಷೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಉಪ್ಪಿದಾದಾ ನಮ್ಮ ರಾಜ್ಯದ ಜನರು ಎಷ್ಟು ಶ್ರೀಮಂತರು ಗೊತ್ತಾ ಎಂಬುದಾಗಿ ಪ್ರಶ್ನಿಸಿದ್ದಾರೆ. ರಾಜಕೀಯಕ್ಕೆ ದುಡ್ಡು ಹಾಕುವುದಿಲ್ಲ, ತೆಗೆಯುವುದೂ ಇಲ್ಲ ಎಂದಿರುವ ಉಪ್ಪಿದಾದಾರವರ ಪ್ರಯೋಗ ಯಶಸ್ವಿಯಾಗುವುದೇ ಎಂಬುದು ಕಾದು ನೋಡಬೇಕಾಗಿದೆ.

ಮುಂದಿನ ಚುನಾವಣೆಯಲ್ಲಿ ಉಪ್ಪಿದಾದಾ ಬಿಜೆಪಿಗೆ ಕೈ ಜೋಡಿಸುವ ಸಂಭವವಿದೆಯೇ?!

ಅವರ ಬಿಜೆಪಿಯ ಬಗೆಗಿನ ನಿಲುವುಗಳು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವುದಂತೂ ಸತ್ಯ! ಉಪ್ಪಿದಾದಾರವರ ನಿಗೂಢ ನಡೆಗಳನ್ನು ಇನ್ನಷ್ಟೇ ಕಾದು ನೋಡಬೇಕಿದೆ. ಅವರ ಸದ್ಯದ ನಿರ್ಧಾರದ ಬಗ್ಗೆ ಸಹಸ್ರಾರು ಜನರು ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಒಟ್ಟಾರೆಯಾಗಿ, ಉಪ್ಪಿದಾದಾರವರ ರಾಜಕೀಯ ಮಿಷನ್ ಯಶಸ್ವಿಯಾಗುತ್ತದೆಯೆಂಬ ಭರವಸೆ ಮೂಡಿಸುವಲ್ಲಿ ಸಫಲವಾಗಿದೆ.

– ಪೃಥ ಅಗ್ನಿಹೋತ್ರಿ

Tags

Related Articles

Close