ಪ್ರಚಲಿತ

ಪ್ರತಾಪ್‌ ಸಿಂಹರ ಜಾತಿ ಕುಲ ಗೋತ್ರ ಏನೂ ಗೊತ್ತಿಲ್ಲ… ಆದರೆ ದೇಶಭಕ್ತಿಯ ವಿಷಯ ಬಂದಾಗ…

ಪ್ರತಾಪ್ ಸಿಂಹ ಎಂಬ ಅದ್ಭುತ ರಾಷ್ಟ್ರೀಯವಾದಿ!

ಆಗ ತಾನೆ ಇಪ್ಪತ್ತೆರಡು ವರ್ಷ ಪ್ರಾಯದ ಯುವಕರಾಗಿದ್ದರು ಪ್ರತಾಪ್ ಸಿಂಹ! ಪತ್ರಿಕೋದ್ಯಮದಲ್ಲಿ ಪದವಿ ಮುಗಿಸಿ ಹೊರಬಂದರು!! ಮುಂದೆ ಯಾವ್ದಾದ್ರು ಒಂದು ಕಡೆ ಕೆಲಸ ಮಾಡಿ ಜೀವನ ಸಾಗಿಸಬಹುದಿತ್ತು!! ಆದರೆ, ಅವರಿಗೆ ಧರ್ಮ ದೇಶಪ್ರೇಮದ ಕಿಚ್ಚು ರಕ್ತದಲ್ಲಿ ಹರಿಯಲು ಶುರು ಮಾಡಿತ್ತು!!

ಯೌವನದಲ್ಲಿ ನೋಡಲು ಸ್ಥುರದ್ರೂಪಿ ಚೆಲುವರಾಗಿದ್ದ ಪ್ರತಾಪ್ ಸಿಂಹ ಕೈಯಲ್ಲಿ ರೋಜ್ ಹಿಡಿದು ಹುಡುಗಿಯರ ಹಿಂದೆ ಹೋಗದೆ ಕೈಯಲ್ಲಿ ಲೇಖನಿ ಎಂಬ ಅಸ್ತ್ರವನ್ನು ಹಿಡಿದು ಕೂತಿದ್ದರು!!

ಶುರುವಾಯಿತು ನೋಡಿ ಬೆತ್ತಲೆ ಜಗತ್ತಿನ ಅಬ್ಬರ!! ಮಹಾನ್ ಪತ್ರಕರ್ತರು ಹೇಗೆ ಅಂಕಣ ಬರೆದರೂ ಓದದಿದ್ದ ಜನರು ಪ್ರತಾಪ್ ಸಿಂಹನ ಅಂಕಣಗಳನ್ನು ಮುಗಿಬಿದ್ದು ಓದಲು ಶುರು ಮಾಡಿದರು!! ಕಾರಣ ಸಿಂಹರು ತನ್ನ ಅಂಕಣದಲ್ಲಿ ಕೊಡುತ್ತಿದ್ದ ವಿಷಯಗಳ ಸ್ಪಷ್ಟತೆ ಮತ್ತು ಆ ವಿಷಯದ ಬಗ್ಗೆ ಪೂರಕ ದಾಖಲೆಗಳು ಒದಗಿಸುತ್ತಿದ್ದ ರೀತಿ ಅಂಕಣದಲ್ಲಿನ ಪದ ಪ್ರಯೋಗ ಅಬ್ಬಾ ಓದುವಾಗ ರೋಮಾಂಚನ ಆಗುತ್ತಿತ್ತು!!

ಬಾವಿಯಲ್ಲಿರುವ ಕಪ್ಪೆಗಳಂತೆ ಬರಿ ನಮ್ಮ ಸುತ್ತ ಮುತ್ತಲಿನ ವಿಷಯಗಳನ್ನೇ ಓದುತ್ತಿದ್ದ ನಮ್ಮಂಥವರಿಗೆ ಜಾಗತಿಕ ವಿದ್ಯಮಾನಗಳನ್ನು ಕನ್ನಡಕ್ಕೆ ಅನುವಾದಿಸಿ ತನ್ನ ವಿಶಿಷ್ಟ ರೀತಿಯಲ್ಲಿ ಓದುಗರಿಗೆ ಉಣಪಡಿಸುತ್ತಿದ್ದ ಪ್ರತಾಪ್ ಸಿಂಹರ ಬರವಣಿಗೆ ಬಗ್ಗೆ ಎಷ್ಟು ಹೊಗಳಿದರೂ ಕಡಿಮೆಯೇ!!!

ಒಬ್ಬ ಪತ್ರಕರ್ತನ ಮೂಲ ಸಿದ್ಧಾಂತವೇ ಪಕ್ಷಾತೀತವಾಗಿ ಬರೆಯುವುದು!! ಪ್ರತಾಪ್ ಸಿಂಹ ಇದರಿಂದ ಹೊರತಾಗಿಲ್ಲ!! ಯಾಕಂದ್ರೆ ಈತ ಸೋನಿಯಾ ಗಾಂಧಿಯ ಒಳ್ಳೆಯ ಕಾರ್ಯವನ್ನು ಮೆಚ್ಚಿ ಬರೆದು ಮತ್ತೊಂದು ಕಡೆ ಅದೇ ಸೋನಿಯಾ ಗಾಂಧಿಯ ಕರಾಳ ಮುಖದ ದರ್ಶನವನ್ನು ಕೂಡ ಓದುಗರ
ಮುಂದೆ ತೆರೆದಿಡುತ್ತಾರೆ.

ಇನ್ನೂ ವಾಜಪೇಯಿ, ಅಡ್ವಾಣಿ, ಫರ್ನಾಂಡಿಸ್ ರಂತಹ ಶ್ರೇಷ್ಠ ಬಿಜೆಪಿ ನಾಯಕರ ಕಾರ್ಯ ವೈಖರಿ ಬಗ್ಗೆ ಮೆಚ್ಚಿ ಬರೆಯುತ್ತಿದ್ದ ಪ್ರತಾಪ್ ಸಿಂಹ ರೆಡ್ಡಿ ಬ್ರದರ್ಸ್ ಭ್ರಷ್ಟಾಚಾರದ ಬಗ್ಗೆ ಒಂದು ಪುಸ್ತಕವನ್ನು ಬರೆದರು! ಅದು ಕೂಡ ದಾಖಲೆಯ ಸಮೇತ.

ಇನ್ನೂ 2008 ರಲ್ಲಿ ಇದೇ ಪ್ರತಾಪ್ ಸಿಂಹರು ಸದಾ ಮಾಧ್ಯಮಗಳಿಂದ ಟೀಕೆಗೆ ಒಳಗಾಗುತ್ತಿದ್ದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬಗ್ಗೆ ಒಂದು ಪುಸ್ತಕ ಬರೆಯುತ್ತಾರೆ! ಆ ಪುಸ್ತಕ ಯಾವುದು ಗೊತ್ತಾ..? ಅದೇ ನನ್ನಂತ ಕೋಟ್ಯಾಂತರ ಯುವಕರ ಪಾಲಿಗೆ ದೈವವಾಣಿ ಆದಂತಹ..
“ಯಾರೂ ತುಳಿಯದ ಹಾದಿ ನರೇಂದ್ರ ಮೋದಿ!!”

ಬರು ಬರುತ್ತಾ ಪ್ರತಾಪ್ ಸಿಂಹರ ಅಂಕಣಗಳು ಪುಸ್ತಕಗಳಾಗಿ ಹೊರ ಬರುವುದಕ್ಕೆ ಶುರುವಾಯಿತು. ಹೇಗೆ ಕುವೆಂಪು, ಭೈರಪ್ಪ ನಂತಹ ಶ್ರೇಷ್ಠರು ಒಂದು ರೀತಿಯ ಓದುಗ ಅಭಿಮಾನಿಗಳ ಬಳಗ ಹೊಂದಿದ್ದರೋ, ಹಾಗೆ ಪ್ರತಾಪ್ ಸಿಂಹರಿಗೆ ಒಂದು ಓದುಗರ ಬಳಗ ಸೃಷ್ಟಿಯಾಯಿತು. ಇಷ್ಟೆಲ್ಲಾ ಆಗುವ ಹೊತ್ತಿಗೆ ಪ್ರತಾಪ್ ಸಿಂಹರ ವಯಸ್ಸು ಮೂವತ್ತರ ಆಸುಪಾಸು!!!

ಇವತ್ತು ಸಾಯೋ ವಯಸ್ಸಿನಲ್ಲಿ ಪ್ರಗತಿಪರ ಅಂತ ಹೆಸರಿಟ್ಟುಕೊಂಡು ಭಂಡಬಾಳು ಬದುಕುತ್ತಿರುವ ಮುದಿ ಬುದ್ಧಿಜೀವಿಗಳ ನಡುವೆ ಪ್ರತಾಪ್ ಸಿಂಹರಂತಹ ಬರಹಗಾರರು ವಿಶೇಷ ಸ್ಥಾನದಲ್ಲಿ ನಿಲ್ಲುತ್ತಾರೆ.

ಇನ್ನೂ ವಿಶೇಷ ಏನಂದ್ರೆ, ಪ್ರತಾಪ್ ಸಿಂಹರ ಅಂಕಣಗಳು ಕೋರ್ಟ್ ತೀರ್ಪುಗಳು NIA reports ಸಿಬಿಐ ತನಿಖೆಯ ದಾಖಲೆಗಳನ್ನು ಒಳಗೊಂಡಿರುತ್ತವೆ. ಇದೇ ಕಾರಣಕ್ಕೆ ಪ್ರತಾಪ್ ಸಿಂಹರು ಇಷ್ಟ ಆಗೋದು.

ಇನ್ನೂ ಹಿಂದುತ್ವದ ವಿಷಯಕ್ಕೆ ಬಂದರೆ ಪ್ರತಾಪ್ ಸಿಂಹ ಬೆಂಕಿ ಚೆಂಡು!! ಅಂತರಾಷ್ಟ್ರೀಯ ಭಯೋತ್ಪಾದನೆ, ಭಾರತದ ಆಂತರಿಕ ಭಯೋತ್ಪಾದನೆ, ಕಾಶ್ಮೀರ ಸಮಸ್ಯೆ, ದೇಶದ ಭದ್ರತೆಯ ಬಗ್ಗೆ ಪ್ರತಾಪರು ದಾಖಲೆ ಸಮೇತ ಕೊಟ್ಟ ಅಂಕಣಗಳು ಒಂದಕ್ಕಿಂತ ಒಂದು ಅದ್ಭುತ.

ಪ್ರತಾಪ್ ಸಿಂಹರ ಮನಸಲ್ಲಿ ಸರಸ್ವತಿ ಖಾಯಂ ಆಗಿ ನೆಲೆಸಿದ್ದಾಳೆ ಅನ್ನೋದು ಅತಿಶಯೋಕ್ತಿಯೇನಲ್ಲ. ಅವರು ತನ್ನ ಬರಹಗಳಿಂದ ಅದೆಷ್ಟೊ ಯುವಮನಸ್ಸುಗಳನ್ನು ಗೆದ್ದಿದ್ದು ಸುಳ್ಳೇ?!

ನಿಮಗೆ ಗೊತ್ತಿದೆಯಾ?! ಇದೇ ಪ್ರತಾಪ್ ಸಿಂಹರು ಅದೆಷ್ಟೊ ಬಾರಿ ಮತಾಂಧರ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಬದುಕಿ ಬಂದಿದ್ದಾರೆ!!

ನನಗಂತೂ ಪ್ರತಾಪ್ ಸಿಂಹರ ಬಗ್ಗೆ ತುಂಬಾ ಅಭಿಮಾನ ಇದೆ. ಯಾರ್ಯಾರನ್ನೋ ನೋಡಿಕೊಂಡು ಪ್ರತಾಪ್ ಸಿಂಹ ರಾಜಕೀಯಕ್ಕೆ ಪ್ರವೇಶ ಮಾಡಿಲ್ಲ. ಇವರು ಸ್ಪೂರ್ತಿ ಪಡೆದುಕೊಂಡಿರುವುದು ಶ್ಯಾಮ್ ಪ್ರಸಾದ್ ಮುಖರ್ಜಿ, ದೀನದಯಾಳರು, ಅಟಲ್, ಅಡ್ವಾಣಿ.. ಇಂತಹ ಶ್ರೇಷ್ಠರಿಂದ!!

ತಾನು ಇಷ್ಟ ಪಟ್ಟ ಹುಡುಗಿ ಮದುವೆಗಿಂತ ಮುಂಚೆ ಅಪಘಾತಕ್ಕೀಡಾಗಿ ಕಾಲು ಕಳೆದುಕೊಂಡಾಗಲೂ ಆಕೆಗೆ ಧೈರ್ಯ ತುಂಬಿ ಆಕೆಯನ್ನೇ ಮದುವೆ ಆಗಿ..
ಪ್ರೀತಿ ಮತ್ತು ತ್ಯಾಗಕ್ಕೆ ಅರ್ಥ ಕೊಟ್ಟ ಪ್ರತಾಪ್ ಸಿಂಹರಂತಹ ಶ್ರೇಷ್ಠ ಮಾನವತಾವಾದಿಯ ಬಗ್ಗೆ ನಮಗೆ ಹೆಮ್ಮೆ ಇದೆ!!

ನನಗಂತೂ ಪ್ರತಾಪ್ ಸಿಂಹರ ಜಾತಿ ಕುಲ ಗೋತ್ರ ಏನು ಗೊತ್ತಿಲ್ಲ! ಆದರೆ, ಆತನ ದೇಶಭಕ್ತಿಯ ಮೇಲೆ ನನಗೆ ಅಪಾರ ಅಭಿಮಾನ ಇದೆ. ಅವರ ಪರ ನಿಲ್ಲುವುದಕ್ಕೆ ನನಗೆ ಹೆಮ್ಮೆ ಇದೆ!!

– ಶ್ರೀನಿವಾಸ್ ಹಿಂದೂ ರಾಷ್ಟ್ರೀಯವಾದಿ

Tags

Related Articles

Close