ಪ್ರಚಲಿತ

ಪ್ರತಾಪ್ ಸಿಂಹ ____ ಮಗನಂತೆ! ಪ್ರತಾಪ್ ಸಿಂಹರನ್ನು ಕೊಂದು ಹರಕೆ ತೀರಿಸುತ್ತಾರಂತೆ! ಆದರೂ, ಇದರ ಬಗ್ಗೆ ಎಫ್ ಐ ಆರ್ ದಾಖಲಾಗೋಲ್ಲವಂತೆ!

ಇದನ್ನು ನೋಡಿಯೂ ಸರಕಾರ ಸುಮ್ಮನೆ ಕೂರುತ್ತದಂತೆ!

 

ಸತ್ಯ ಹೇಳಬೇಕಾ?! ಕರ್ನಾಟಕದ ಕಾಂಗ್ರೆಸ್ ಸರಕಾರದ ಹೀನಾಯ ಸ್ಥಿತಿಗೆ, ದಕ್ಷ ಅಧಿಕಾರಿಗಳು ಪ್ರಾಣವನ್ನೇ ಕಳೆದುಕೊಳ್ಳುವ ಸ್ಥಿತಿ ಬಂದರೆ, ಪ್ರಾಮಾಣಿಕ ಸಂಸದರ ಮೇಲೆ ಕೇಸುಗಳನ್ನು ಹಾಕಿ ಪ್ರತಿಭಟನೆ ನಡೆಸಿದರೆ, ರಾಜ್ಯದ ಮುಖ್ಯಮಂತ್ರಿಯವರ ಆಪ್ತೇಷ್ಟರು ಮಾತ್ರ ಅದೆಷ್ಟೇ ಅಪರಾಧಗಳಲ್ಲಿ ಭಾಗಿಯಾದರೂ ಭರ್ಜರಿ ಸೇಫಾಗಿಬಿಡುತ್ತಾರೆ! ಯಾಕೆ ಗೊತ್ತಾ?! ಈ ಸರಕಾರ ಸತ್ಯಕ್ಕಾಗಿ ಹೋರಾಡುವವರಿಗೆ ಯಾವತ್ತೂ ಬದುಕಲು ಬಿಡುವುದೇ ಇಲ್ಲ!

ಮೊನ್ನೆ ಮೊನ್ನೆ ಮೈಸೂರಿನ ಹೆಮ್ಮೆಯ ಸಂಸದರಾದ ಪ್ರತಾಪ್ ಸಿಂಹರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ, ಯಾವತ್ತೂ ಇಲ್ಲದ ಕನ್ನಡ ಪ್ರೇಮ ಕಾಂಗ್ರೆಸ್ ಕಾರ್ಯಕರ್ತರಿಗೆ ಬಂದು, ಸಿಕ್ಕಿದ್ದೇ ಅವಕಾಶ ಎಂದು ಪ್ರತಾಪ್ ಸಿಂಹರ ಮೇಲೆ ಮೊಕದ್ದಮೆ ಹಾಕಿ, ಊರ ತುಂಬಾ ಪ್ರತಿಭಟನೆ ನಡೆಸಿಬಿಟ್ಟರು! ಅದೂ ಸಹ, ಒನಕೆ ಓಬವ್ವ, ರಾಣಿ ಚೆನ್ನಮ್ಮ ಎಂದೆಲ್ಲ ಇದ್ದಕ್ಕಿದ್ದ ಹಾಗೆ ನಾಟಕವಾಡಿದ ಇದೇ ಕಾಂಗ್ರೆಸ್ ಕಾರ್ಯಕರ್ತರು, ಒನಕೆ ಓಬವ್ವನನ್ನು ಕೊಂದದ್ದು ಇದೇ ಟಿಪ್ಪು ಸುಲ್ತಾನ್ ನ ಅಪ್ಪ ಹೈದರ್ ಎಂದೂ ಗೊತ್ತಿದ್ದೂ ಗೊತ್ತಿಲ್ಲದಂತೆ ನಾಟಕವಾಡಿ “ಟಿಪ್ಪು ಜಯಂತಿ” ಆಚರಿಸಿದ್ದು ಮಾತ್ರ ದುರಾದೃಷ್ಟಕರ ಬಿಡಿ!

ಅದೇ, ಕಾಂಗ್ರೆಸ್ ಮಾತ್ರ ಇದ್ಯಾವುದೂ ಗೊತ್ತಿಲ್ಲದಂತೆ ನಾಟಕವಾಡಿದ್ದಲ್ಲದೇ, ಇದ್ದಕ್ಕಿದ್ದ ಹಾಗೆ ಕನ್ನಡ ಪ್ರೇಮ ಎಂದೆಲ್ಲ ಕುಣಿದಾಡಿದ್ದು ನೋಡಿದರೆ, ಇಷ್ಟು ದಿನ ಕರ್ನಾಟಕಕ್ಕೆ ಮಾಡಿದ ಅಷ್ಟೂ ಮೋಸಗಳು ಒಂದೇ ದಿನದಲ್ಲಿ ಕೊಚ್ಚಿ ಹೋಗುವಷ್ಟಿತ್ತು ಅಬ್ಬರ!!!

ಆದರೆ.. . .

ಕಾನೂನು ಕಚೇರಿ ಕೋರ್ಟು ಎಂದೆಲ್ಲ ಭಾಷಣ ಬಿಗಿದ ಇದೇ ಕಾಂಗ್ರೆಸ್ ರಾಜ್ಯದ ಮುಖ್ಯಮಂತ್ರಿಗಳು, ದುರಹಂಕಾರದಿಂದ, “ಪ್ರತಾಪ್ ಸಿಂಹ ಒಬ್ಬ ಸಂಸದ ಎನ್ನುವ ಕಾರಣಕ್ಕೆ ಸುಮ್ಮನೇ ಬಿಟ್ಟಿದ್ದೇನೆ” ಎಂದು ಹೇಳುವ ಮುನ್ನ ಸಾವಿರ ಬಾರಿ ಯೋಚಿಸಬೇಕಿತ್ತೇನೋ! ಅದೊಂದೇ ಕಾರಣಕ್ಕೆ ಸುಮ್ಮನೇ ಬಿಟ್ಟಿದ್ದೇವೆ ಎಂದ ಮುಖ್ಯಮಂತ್ರಿಗಳು ಹಾಗಾದರೆ ಏನು ಮಾಡುವವರಿದ್ದರು?!

ಈಗ ಕಾಂಗ್ರೆಸ್ ಚೇಲಾಗಳ ಸರದಿ!!!

 

ಮಲ್ಲಿಕಾರ್ಜುನ್ ರಾಜು ಎಂಬ ವ್ತಕ್ತಿಯೊಬ್ಬ “ಪ್ರತಾಪ್ ಸಿಂಹರ ತಲೆ ತಂದುಕೊಡುವವರಿಗೆ 10 ಲಕ್ಷ ರೂಪಾಯಿಗಳಷ್ಟು ಆಫರ್ ನೀಡಿದ್ದಾರೆ! ಅದಕ್ಕೆ ತಕ್ಕನಾಗಿ, ‘ನಾನೊಬ್ಬ ಕಿರಾತಕ” ನೂ ಕೂಡ., “ಚೆಂಡಾಡಿ ಚಾಮುಂಡಿಗೆ ಹರಕೆ ನೀಡುವೆ” ಎಂದಿದ್ದಾರೆ! ಅಬ್ಬೋ!!!

ಮಾನ್ಯ ಕಾಂಗ್ರೆಸ್ಸಿಗರೇ! ಒಬ್ಬ ಸಂಸದರಾದವರಿಗೆ ಈ ರೀತಿಯಾಗಿ ಬಹಿರಂಗವಾಗಿ ಬೆದರಿಕೆ ಒಡ್ಡಿ, ಅಶ್ಲೀಲ ಭಾಷೆಯಲ್ಲಿ ಬೈದರೆ ಅದು ಅವಮಾನವಲ್ಲವೇ?! ಅಪರಾಧವಲ್ಲವೇ?! ಇದಕ್ಕೆಷ್ಟು ಎಫ್ ಐ ಆರ್ ಆಗಿವೆ?! ಸಂಸದರಿಗೆ ಬಹಿರಂಗವಾಗಿ ಬೆದರಿಕೆ ಒಡ್ಡುವ ಇಂತಹವರ ಮೇಲೆ ಯಾವ ಕಾನೂನು ಇಲ್ಲವೇ?!

ಎಲ್ಲದಕ್ಕಿಂತ ಹೆಚ್ಚಾಗಿ. . . .

ನೀವುಗಳು ಹರಕೆ ಹೊತ್ತಾಗ ಹರಕೆಯ ಕುರಿಯಾಗಲು ಯಾರಾದರೂ ಕೈಯ್ಯಲ್ಲಿ ಚಿಪ್ಪು ಹಿಡಿದು ಕೂತಿದ‌್ದಾರೆಯೇ?! ಅಥವಾ, ಈಗಿರುವುದು ಕಾಂಗ್್ರೆಸ್ ಸರಕಾರವೆಂದ ಮಾತ್ರಕ್ಕೆ ಎಲ್ಲವೂ ನೀವು ಹೇಳಿದ್ದೇ ನಡೆದುಬಿಡುತ್ತದೆಯೇ?! ಕನ್ನಡಿಗರು ಮೂರ್ಖರಾಗಿ ಕುಳಿತುಬಿಡುತ್ತಾರೆಯೇ?!

ಅಯ್ಯೋ! ಮೈಸೂರಿನ ಜನರಲ್ಲಿ ಪ್ರತಾಪ್ ಸಿಂಹರವರು ಮೂಡಿಸಿದ ನಂಬಿಕೆ ಅಂತಿಹದ್ದಲ್ಲ! ಬದಲಾಗಿಯೂ ಕೂಡ, ಒಬ್ಬ ಪ್ರಾಮಾಣಿಕ ಸಂಸದನಾಗಿ, ರಾಷ್ಟ್ರಭಕ್ತನಾಗಿ, ಮೋದಿಯ ಅಪ್ಪಟ ಭಕ್ತನಾಗಿ, ಸಂಸದರಾಗಿದ್ದರೂ ಸಾಮಾನ್ಯನಂತಿರುವ, ಸತ್ಯಕ್ಕೆ ಬೆಲೆ ಕೊಡುತ್ತಾರೆನ್ನುವ ವಾಸ್ತವ ನಿಮಗೆ ಎಲ್ಲೆಲ್ಲಿಯೂ ಉರಿ ಹಚ್ಚಿದ್ದಲ್ಲವೇ?!

ಅದರ ಜೊತೆಗೆ, ನಿಮ್ಮ ಸರಕಾರದಲ್ಲಿ ಯಥಾ ರಾಜಾ, ತಥಾ ಪ್ರಜಾ ಎನ್ನುವ ಹಾಗೆ, ಮುಖ್ಯಮಂತ್ರಿಗಳೇನು ಮಾಡುತ್ತಿದ್ದಾರೆಯೋ ಅದಕ್ಕೆ ತಕ್ಕನಾಗಿಯೇ ಕಾರ್ಯಕರ್ತರಿದ್ದಾರೆ ಎಂಬುದನ್ನು ಅದೆಷ್ಟು ಅದ್ಭುತವಾಗಿ ತೋರಿಸಿಕೊಡುತ್ತಿದ್ದೀರೆಂದರೆ, ನಿಮ್ಮಿಂದ ಒಂದು ಮಹತ್ಕಾರ್ಯವಾಗಲಿಕ್ಕಿದೆ! ಏನು ಗೊತ್ತಾ?! “ಕಾಂಗ್ರೆಸ್ ಮುಕ್ತ ಭಾರತ! ಕಾಂಗ್ರೆಸ್ ಮುಕ್ತ ಕರ್ನಾಟಕ!”

ಪ್ರತಾಪ್ ಸಿಂಹರವರ ತಾಯಿಗೂ ಸಹ ಬೈಯ್ಯುವ ಇಂತಹವರ ಸಂಸ್ಕಾರ ತಿಳಿಯುವುದು ಕರ್ನಾಟಕಕ್ಕೂ ಅಗತ್ಯವಿದೆಯೆನ್ನಿ! ಇವತ್ತಿನ ಕಾಂಗ‌್ರೆಸ್ ನ ಮನಃ ಸ್ಥಿತಿ ಎಂತಹದ್ದೆಂದು ತಿಳಿಯಲು ಇದನ್ನು ನೋಡಿದರೆ ಸಾಕು!

ಪ್ರತಾಪ್ ಸಿಂಹರಿಗೆ ಭದ್ರತೆ ಕೊಡುತ್ತದೆಯಾ ಸರಕಾರ?!

ಈ ಹಿಂದೆ ಸಿದ್ಧರಾಮಯ್ಯನವರು ದೀಪಿಕಾ ಪಡುಕೋಣೆಗೆ ರಕ್ಷಣೆ ನೀಡಿ ಎಂದು ಹರ್ಯಾಣಾದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಪದ್ಮಾವತಿ ಚಿತ್ರದ ಮೇಲಿನ ಒಲವನ್ನೂ ಬಹಿರಂಗಪಡಿಸಿದ ಮುಖ್ಯಮಂತ್ರಿಗಳು, ಇವತ್ತು ತನ್ನದೇ ಸರಕಾರದಲ್ಲಾದ ಲೋಪದೋಷಗಳ ಹೊಣೆ ಹೊರುತ್ತಾರಾ?!

ಸಂಸದರಿಗೆ ರಕ್ಷಣೆ ಒದಗಿಸುತ್ತಾರಾ?! ಅಥವಾ, ಸುಮ್ಮನೇ ಬಿಟ್ಟು ಬಿಡಿ! ನಮಗೆ ಸಂಬಂಧವಿಲ್ಲವಲ್ಲ ಎಂದು ಸುಮ್ಮನಾಗಿ ಬಿಡುತ್ತಾರಾ?!

ವ್ಹಾ! ಮುಖ್ಯಮಂತ್ರಿಗಳೇ! ಕಾಂಗ‌್ರೆಸ್ಸಿಗರೇ!

ಅನ್ಯಾಯಗಳನ್ನು, ಅಪರಾಧಗಳನ್ನು ಸಹಿಸುವುದೇ ಇಲ್ಲ ಎನ್ನುವ ನೀವು ಇಂತಹ ಬಹಿರಂಗ ಬೆದರಿಕೆಗಳಿಗೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲವೇ?! ಇದಕ್ಕೆಷ್ಟು ಎಫ್ ಐ ಆರ್ ಮಾಡಿದ್ದೀರಿ ಸ್ವಾಮಿ?! ಇದಕ್ಕೆಷ್ಟು ಕ್ರಮ ತೆಗೆದುಕೊಳ್ಳುತ್ತೀರಿ?!

ನಿಮ್ಮ ಸರಕಾರದಲ್ಲಿ ಬರೀ “ಸಾವಿನ ಭಾಗ್ಯವೇ” ಇರುವುದರಿಂದ ಈ ಬೆದರಿಕೆಗೂ ಬೆನ್ನು ತಟ್ಟಿ ಹುರಿದುಂಬಿಸುತ್ತೀರೇ?! ಅಥವಾ, ತಕ್ಕ ಮಾತಿಗೆ ಸಂಸದರ ವಿರುದ್ಧ ಬಹಿರಂಗ ಬೆದರಿಕೆ ಒಡ್ಡಿದವರ ಮೇಲೆ ಕ್ರಮ ತೆಗೆದುಕೊಂಡು ಕೊನೆಗೆ ಕಾನೂನು ಪಾಠ ಪ್ರಾರಂಭಿಸುತ್ತೀರೋ?!

ನಿಮಗೇ ಬಿಟ್ಟದ್ದು!!!

– ತಪಸ್ವಿ

Tags

Related Articles

Close