ಪ್ರಚಲಿತ

 ಪ್ರತ್ಯೇಕ ಧರ್ಮದ ಹೋರಾಟದ ಹಿಂದಿರುವ ರಹಸ್ಯಗಳು! ಲಿಂಗಾಯತರ ಮತಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ!

ರಾಜ್ಯದಲ್ಲಿ ಎಲ್ಲಿ ನೋಡಿದರಲ್ಲಿ ಪ್ರತ್ಯೇಕ ಲಿಂಗಾಯತ ಅಂದೋಲನದ್ದೇ ಸದ್ದು, ಅಲ್ಲಿ ಅಷ್ಟು ಜನ ಸೇರಿದ್ದರು ಇಲ್ಲಿ ಇಷ್ಟು ಜನ ಸೇರಿದ್ರು, ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ, ವಿನಯ್ ಕುಲಕರ್ಣಿ ಹಿಂಗಂದ್ರು ಎಂ.ಬಿ.ಪಾಟೀಲ್ ಹಿಂಗಂದ್ರು ಇದೇ ವಿಷಯ ಕಳೆದ ಎರಡು ಮೂರು ತಿಂಗಳಿನಿಂದ ಚುನಾವಣೆ ಹತ್ತಿರವಾಗುತ್ತಿರುವಂತೆ ಮಾಧ್ಯಮಗಳಲ್ಲಿ ರಾರಾಜಿಸುತ್ತಿದೆ.

ಅಷ್ಟಕ್ಕೂ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಮೊದಲಿಲ್ಲದ ಚುರುಕು ಈಗ್ಯಾಕೆ ಈ ವೇಗ ಪಡೆದುಕೊಂಡಿದೆ ಎಂಬ ಅನುಮಾನಗಳು ಕಾಡದೆ ಇರಲ್ಲ.

ಹೇಗಾದರೂ ಮಾಡಿ ಈ ಬಾರಿಯ ಚುನಾವಣೆಯಲ್ಲಿ ಲಿಂಗಾಯತರ ವೋಟುಗಳನ್ನ ಪಡೆದು ಶತಾಯಗತಾಯವಾಗಿ ಮತ್ತೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಸಿದ್ದರಾಮಯ್ಯನವರ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ತಮ್ಮ ಸರ್ಕಾರದಿಂದ ಭರಪೂರ ತನು ಮನ ಧನ ಸಹಾಯ ಮಾಡಲು ಮುಂದಾಗಿದ್ದಾರೆ.

ನಮ್ಮ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗಬೇಕು, ನಮ್ಮಲ್ಲಿ ಬಡವರಿದ್ದಾರೆ, ಅನೇಕ ಜನರಿಗೆ ತಿನ್ನಲು ಕೂಳೂ ಇಲ್ಲ ಅಂತ ಭಾಷಣ ಬಿಗಿಯೋ ಪ್ರತ್ಯೇಕ ಧರ್ಮ ಹೋರಾಟಗಾರರಿಗೆ ಬೃಹತ್ ಸಮಾವೇಶ ನಡೆಸೋಕೆ ಕೋಟಿ ಕೋಟಿ ಹಣ ಬರುತ್ತಿರೋದಾದರೂ ಎಲ್ಲಿಂದ ಅನ್ನೋ ಪ್ರಶ್ನೆಯೂ ಕಾಡುತ್ತಿದೆ.

ಅದಕ್ಕೆ ಉತ್ತರವನ್ನ ಸ್ವತಃ ಕಾಂಗ್ರೆಸ್ಸಿನ ಹಿರಿಯ ಶಾಸಕರಾಗಿರೋ ಶಾಮನೂರು ಶಿವಶಂಕರಪ್ಪನವರೇ ಹೇಳಿದ್ದಾರೆ ಕೇಳಿ.

“ಪ್ರತ್ಯೇಕ ಧರ್ಮ ಹೋರಾಟದ ಹಿಂದಿನ ಮರ್ಮ, ಮಠಾಧೀಶರಿಗೆ ₹ 56 ಲಕ್ಷ ನಗದು ಹಾಗೂ ಕಾರು ಅಲ್ಲದೇ ಸರ್ಕಾರದಿಂದ ₹ 2.50 ಕೋಟಿ ಅನುದಾನ ನೀಡುವ ಭರವಸೆಯನ್ನ ಸಿದ್ದರಾಮಯ್ಯ ನೀಡಿದ್ದಾರೆ.

ವೀರಶೈವ, ಲಿಂಗಾಯತ ಎರಡೂ ಒಂದೇ ಹೊರತು ಪ್ರತ್ಯೇಕ ಧರ್ಮಗಳಲ್ಲ.

ವೀರಶೈವ ಲಿಂಗಾಯತ ಪ್ರತ್ಯೇಕಗೊಳಿಸುವ ವಿಷಯದಲ್ಲಿ ಸಚಿವರಾದ ವಿನಯ್ ಕುಲಕರ್ಣಿ, ಎಂ.ಬಿ.ಪಾಟೀಲ್ ಅವರು ಮಾತೆ ಮಹಾದೇವಿಯ ಬೆಂಬಲಕ್ಕೆ ನಿಂತಿದ್ದಾರೆ. ಕೆಲವು ಮಠಾಧೀಶರಿಗೆ ಹಣ, ಕಾರು ಕೊಟ್ಟು ತಮ್ಮೆಡೆಗೆ ಸೆಳೆಯುವ ಪ್ರಯತ್ನ ಮಾಡಿದ್ದಾರೆ” ಎಂದು ವೀರಶೈವ ಮಹಾಸಭಾದ ಅಧ್ಯಕ್ಷ ಹಾಗು ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪನವರೇ ರಾಜ್ಯ ಕಾಂಗ್ರೆಸ್ಸಿನ ಧರ್ಮ ಒಡೆಯುವ ಹಾಗು ಲಿಂಗಾಯತ ವೋಟಬ್ಯಾಂಕ್
ಮೇಲೆ ಕಣ್ಣಿಟ್ಟು ಅಧಿಕಾರದ ಗದ್ದುಗೆಗೆ ಏರಲು ಹಾತೊರೆಯುತ್ತಿರೋ ಸಿದ್ದರಾಮಯ್ಯನವರ ಬಣ್ಣ ಬಯಲು ಮಾಡಿದ್ದಾರೆ.

“ಇತ್ತೀಚೆಗೆ ಕೂಡಲಸಂಗಮದ ಜಯ ಬಸವ ಮೃತ್ಯಂಜಯ ಸ್ವಾಮೀಜಿಗೆ ₹ 56 ಲಕ್ಷ ನಗದ ಹಾಗೂ ಕಾರು ನೀಡಿದ್ದಾರೆ. ಅಲ್ಲದೇ ಸರ್ಕಾರದಿಂದ ₹ 2.50 ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಮಾಜದ ಒಗ್ಗಟ್ಟು ಮುರಿಯಲು ಪ್ರಯತ್ನಿಸುತ್ತಿವೆ” ಎಂದೂ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.

ರಾಜ್ಯದಲ್ಲಿ ಮೂರು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆ, ದಕ್ಷ ಅಧಿಕಾರಿಗಳಿಗೆ ಕಿರುಕುಳ, “ವಿಚಾರವಾದಿ”ಗಳ ಹತ್ಯೆ, ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗವಹಿಸಿರುವ ಆರೋಪದಲ್ಲಿರುವ ಸಂಘಟನೆಗಳ ಮೇಲಿನ 150 ಕೇಸ್ ಗಳನ್ನ ತೆಗೆದು ಕೋಮುಗಲಭೆಗೆ ಪ್ರಚೋದನೆ ನೀಡುತ್ತ, ವಿವಾದಿತ ಟಿಪ್ಪು ಜಯಂತಿ ಮಾಡೇ ತೀರುತ್ತೇವೆ ಎಂಬ ಭಂಡ ಧೈರ್ಯವನ್ನ ತೋರುತ್ತ ಸಿದ್ದರಾಮಯ್ಯನವರ ಸರ್ಕಾರ ರಾಜ್ಯದ ಅಭಿವೃದ್ಧಿ ಮಾಡದೆ ಫುಲ್ ದ್ವೇಷದ ರಾಜಕಾರಣದತ್ತ ಮುಖಮಾಡಿ ನಿಂತಿದ್ದಾರೆ.

ಒಟ್ಟಿನಲ್ಲಿ ಒಂದೆಡೆ ಮುಸ್ಲಿಂ ವೋಟ್ ಬ್ಯಾಂಕ್ ಗಟ್ಟಿಮಾಡಿಕೊಳ್ಳಲು ಟಿಪ್ಪು ಜಯಂತಿ, ಲಿಂಗಾಯತರ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟು ಪ್ರತ್ಯೇಕ ಧರ್ಮದ ಹೋರಾಟಗಳಿಗೆ ಕುಮ್ಮಕ್ಕು ನೀಡುತ್ತ ಸಿದ್ದರಾಮಯ್ಯ ಸಮಾಜವನ್ನು ಒಡೆದು ಆಳುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ಇನ್ನಾದರೂ ಜನ ಇವರ ಡಿವೈಡ್ ಆ್ಯಂಡ್ ರೂಲ್ ಪಾಲಿಸಿ ಗೆ ಸಿಡಿದೆದ್ದು ಯೂನೈಟ್ ಆಗಿ ರಾಜ್ಯದ ಅಭಿವೃದ್ಧಿಗಾಗಿ ತಮ್ಮ ಪವರ್ ತೋರಿಸಬೇಕಾದಂತ ಪರಿಸ್ಥಿತಿ ಕನ್ನಡಿಗರಿಗೆ ಬಂದಿದೆ.

– Vinod Hindu Nationalist

Tags

Related Articles

Close