ಪ್ರಚಲಿತ

ಪ್ರಧಾನಿ ನರೇಂದ್ರ ಮೋದಿಗೆ ಬರೆದ ಒಂದೇ ಪತ್ರದಲ್ಲಿ ಸೋನಿಯಾ ಗಾಂಧಿ ತನ್ನ ಪಕ್ಷದ ವಿಫಲತೆಯನ್ನು ಬಹಿರಂಗಗೊಳಿಸಿದ್ದು ಹೇಗೆ ಗೊತ್ತೇ?!

ಸೋನಿಯಾ ಗಾಂಧಿ ಎನ್ನುವ ಕಾಂಗ್ರೆಸ್ ಅಧ್ಯಕ್ಷೆ ಒಂತರಾ ವಿಚಿತ್ರ! ಪಕ್ಷದ ಕಾರ್ಯಕರ್ತರ ಜೊತೆಗಾಗಲಿ ಅಥವಾ ನಾಯಕರ ಜೊತೆಗಾಗಲೀ, ಯಾವುದೇ ರೀತಿಯಾದ ಸಂವಹನವೇ ಇರೋದಿಲ್ಲ! ಆದರೂ, ತನ್ನ ಕೆಲಸವನ್ನು ಮಾಡಿಸಿಕೊಳ್ಳುವುದರಲ್ಲಿ ನಿಸ್ಸೀಮಳು! ಮಗನಾದ ರಾಹುಲ್ ಗಾಂಧಿ ಮಾತ್ರ ಸಾರ್ವಜನಿಕವಾಗಿಯೇ ಮರ್ಯಾದೆ ಕಳೆದುಕೊಂಡಿದ್ದರೂ, ಸೋನಿಯಾ ಮಾತ್ರ ಇಂತಹ ಯಾವುದೇ ಪರಿಸ್ಥಿತಿಯನ್ನೂ ಎದುರಿಸಿದ್ದು ಬಹಳ ಕಡಿಮೆ!!!

ಒಂದೇ ಪತ್ರ – ನೂರು ಬಹಿರಂಗ!

ಹೌದು! ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಗೆ ಬರೆದ ಪತ್ರದಲ್ಲಿ ಆಕೆ ತಾನೇನು ಎಂದು ಬಹಿರಂಗಪಡಿಸಿದ್ದಾಳೆ! ಆ ಪತ್ರದಲ್ಲಿ ಆಕೆ ‘ಮಹಿಳಾ ಮೀಸಲಾತಿ ಮಸೂದೆಯನ್ನು’ ಜಾರಿಗೊಳಿಸುವಂತೆ ವಿನಂತಿಸಿದ್ದಾಳೆ!

ಆದರೆ, 2010 ರ ರಾಜ್ಯಸಭಾದಲ್ಲಿಯೇ ಈ ಮಸೂದೆ ಅಂಗೀಕಾರವಾಗಿತ್ತು! ಅವತ್ತಿದ್ದದ್ದು ಕಾಂಗ್ರೆಸ್ ಪಕ್ಷವೇ! ತೀರಾ ಹಾಸ್ಯಾಸ್ಪದ ಎಂದರೆ, ಸ್ವತಃ ಲೋಕ ಸಭಾದಲ್ಲಿಯೂ ಈ ಮಸೂದೆಯ ಬಗ್ಗೆ ಬಹಳಷ್ಟು ವಿರೋಧಗಳಾದವು! ಅದರಲ್ಲೂ ಕಾಂಗ್ರೆಸ್ ಸಂಸದರೇ ಇದನ್ನು ವಿರೋಧಿಸಿದರು! ಕಾಂಗ್ರೆಸ್ ಪಕ್ಷದವರನ್ನು ಬಿಟ್ಟರೆ ಸ್ವತಃ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷ ಹಾಗೂ ರಾಷ್ಟ್ರೀಯ ಜನತಾ ದಳದವರೂ ವಿರೋಧಿಸಿದ್ದು ಇದೇ ಮಹಿಳೆ ಮೀಸಲಾತಿ ಕಾಯ್ದೆಯನ್ನೇ!

ಅದೇ ಜನ ಇವತ್ತು ಮಸೂದೆಯನ್ನು ಜಾರಿಗೊಳಿಸಿ ಎಂದು ಒತ್ತಾಯಿಸಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ! ಯಾಕೆ?! ಸ್ತ್ರೀ ಮೀಸಲಾತಿಯನ್ನು ಬಳಸಿಕೊಂಡು ನರೇಂದ್ರ ಮೋದಿಯವರ ಅಧಿಕಾರಕ್ಕೆ ಚ್ಯುತಿ ತರುವ ಉದ್ದೇಶವೇ ಅಥವಾ ದೇಶವನ್ನು ಇನ್ನಷ್ಟು ಲೂಟಿ ಮಾಡುವ ಉದ್ದೇಶವೇ?!

ಕೊನೆಗೂ ಸೋನಿಯಾ ಗಾಂಧಿಗೆ ಮೋದಿಯ ಬಗ್ಗೆ ನಂಬಿಕೆ ಬಂದಿದೆ!!!

ಮೊದಲು ಈ ಮಸೂದೆ ಜಾರಿಯಾಗಿದ್ದು 2010 ರ ಲೋಕಸಭೆಯಲ್ಲಿ! ಅದಾದ ನಂತರವೂ 2014 ರ ತನಕ ಅಧಿಕಾರದಲ್ಲಿದ್ದು ಕಾಂಗ್ರೆಸ್ ಪಕ್ಷವಾದರೂ ಸಹ ಲೋಕಸಭೆಯಲ್ಲಿ ಮಸೂದೆ ಜಾರಿಯಾಗಿರಲೇ ಇಲ್ಲ. ಪ್ರಶ್ನೆ ಏನೆಂದರೆ, ಸೋನಿಯಾ ಗಾಂಧಿ ಈಗ ಮೋದಿಯವರಿಗೆ ಪತ್ರ ಬರೆಯುವುದು ಬಿಟ್ಟು ಅವತ್ತಿನ ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ಗೆ ಯಾಕೆ ಪತ್ರ ಬರೆದಿರಲಿಲ್ಲ ಎಂಬುದೇ! ಅದೂ ಕಾಂಗ್ರೆಸ್ ಪಕ್ಷದಿಂದ ಆರಿಸಿ ಬಂದ ಪ್ರಧಾನಿಯಾಗಿದ್ದರವರು!

2004 ರಿಂದ 2014 ರ ತನಕವೂ ಇದ್ದ ಕಾಂಗ್ರೆಸ್ ಪಕ್ಷದ ಪ್ರತಿ ಆಗು ಹೋಗುಗಳನ್ನೂ ಕೂಡ ಸೋನಿಯಾ ಗಾಂಧಿಯ ನೇತೃತ್ವದಲ್ಲಿಯೇ ನಡೆಸಲಾಗುತ್ತಿತ್ತು ಎಂಬುದು ಪಕ್ಷದ ಪಂಡಿತರ ಅಂಬೋಣ! ಅಷ್ಟಾದರೂ, ಸೋನಿಯಾಳಿಗೇ ಸ್ವತಃ ಜಾರಿಗೊಳಿಸುವ ಅಧಿಕಾರವನ್ನು ಪಕ್ಷದವರು ಕೊಟ್ಟಿದ್ದಾಗ ಯಾಕೆ ಮಸೂದೆಯನ್ನು ಜಾರಿಗೊಳಿಸಲಿಲ್ಲವೇಕೆ?!!

ಸೋನಿಯಾ ಗಾಂಧಿ 2014 ರ ತನಕವೂ ಸಂಸತ್ತಿನ ಘನತೆಯನ್ನೇ ಪ್ರಜೆಗಳು ಪ್ರಶ್ನೆ ಮಾಡುವ ಅಮೋಘ ರೀತಿಯಲ್ಲಿ ಅಧಿಕಾರ ಚಲಾಯಿಸಿದ್ದಾಯಿತು! ಈಗ, ಮೋದಿಯವರ ಮೇಲೆ ಇದ್ದಕ್ಕಿದ್ದಂತೆ ನಂಬಿಕೆ ಉಕ್ಕಿ ಹರಿದಿರುವ ಸೋನಿಯಾಗೆ ಮಸೂದೆ ಜಾರಿಯಾಗಲು ಮೋದಿಯವರ ಸಹಾಯದ ಅಗತ್ಯ ಬಹಳ ಕಂಡುಬಂದಿದೆ!!!

ತನ್ನ ಬಿಟ್ಟು ಬೇರಾರು ಇಲ್ಲ ಶಿವಾ!!!

ಕಾಂಗ್ರೆಸ್ ನ ಇಲ್ಲಿಯವರೆಗಿನ ರಾಜಕೀಯ ಮುಖಂಡರನ್ನೆಲ್ಲ ಗಮನಿಸುತ್ತಾ ಹೋದರೆ, ಇಂದಿರಾ ಹಾಗೂ ಸೋನಿಯಾ ಗಾಂಧಿಯನ್ನು ಬಿಟ್ಟು ಬೇರಾವ ಮಹಿಳೆಯೂ ಸಹ ಉನ್ನತ ಮಟ್ಟಕ್ಕೆ ಏರಲೇ ಇಲ್ಲ ಅನ್ನುವುದು ಅಷ್ಟೇ ಸತ್ಯ! ಆದರೆ, ಈ ಮೀಸಲಾತಿಯನ್ನೇನಾದರೂ ಜಾರಿಗೊಳಿಸಿದರೆ ಮಹಿಳೆಯರಿಗೆ ಮತ್ತೊಂದಿಷ್ಟು ಅವಕಾಶ ದೊರೆಯುವುದೂ ಅಷ್ಟೇ ಸತ್ಯ! ಹಾ! ಅವತ್ತು ಯಾವ್ಯಾವುದೋ ರಾಜಕೀಯ ತಂತ್ರಕ್ಕೆ, ಇನ್ನಾವುದೋ ಹಿಡನ್ ಅಜೆಂಡಾಕ್ಕೆ, ಸರ್ವಾಧಿಕಾರತ್ವಕ್ಕೆ ಸೋನಿಯಾ ಗಾಂಧಿಗೆ ಮಸೂದೆಯನ್ನು ಜಾರಿಗೊಳಿಸಲು ಮನಸ್ಸೂ ಇರಲಿಲ್ಲ,. . . ಮಾಡಲೂ ಇಲ್ಲ!

ಮತ್ತದೇ ಹುಚ್ಚಾಟ!!!

ಈ ಕಾಂಗ್ರೆಸ್ ನವರಿಗೆ ಬೇರಾದರೋ ಸಾಧನೆಯನ್ನು ತನ್ನ ಸಾಧನೆ ಎಂದು ಹೇಳಿಕೊಳ್ಳುವುದರಲ್ಲಿ ಬಹಳ ಮಜವಿದೆ! ಮೋದಿಯವರ ಸರಕಾರದಲ್ಲಿ ಈಗಾಗಲೇ ಸುಷ್ಮಾ ಸ್ವರಾಜ್, ಸ್ಮೃತಿ ಇರಾನಿ ಹಾಗೂ ನಿರ್ಮಲಾ ಸೀತಾರಾಮನ್ ಉನ್ನತ ಹುದ್ದೆಯಲ್ಲಿದ್ದಾರೆ! ಮೋದಿಯವರ ಸರಕಾರದಲ್ಲಿ ಮಹಿಳೆಯರಿಗೆ ಪ್ರಾಶಸ್ತ್ಯವಿದೆ! ಅದನ್ನರಿತ ಸೋನಿಯಾ ಈ ಮಸೂದೆ ಜಾರಿಯಾಗಿದ್ದೇ ಹೌದಾದರೆ ತನ್ನ ಕುತಂತ್ರಗಳಿಗೆ ಬಳಸಿಕೊಳ್ಳಬಹುದೆಂಬ ಉದ್ದೇಶದಿಂದ ನಮ್ರಳಾಗಿಯೇ ವಿನಂತಿ ಮಾಡಿದ್ದಾಳೆ. ಅಕಸ್ಮಾತ್ ಏನಾದರೂ ಮಸೂದೆ ಜಾರಿಯಾದರೆ ಇಡೀ ದೇಶಕ್ಕೆ ತಮಟೆ ಹೊಡಿಸುತ್ತೆ ಕಾಂಗ್ರೆಸ್! ‘ನೋಡ್ರಪಾ! ಮಸೂದೆಯನ್ನು ನಾವೇ ಜಾರಿ ಗೊಳಿಸಿದ್ದು’ ಅಂತ!!!

ಮೊನ್ನೆ ಮೊನ್ನೆ ಸರದಾರ್ ಸರೋವರದ ಅಣೆಕಟ್ಟಿನ ವಿಚಾರವಾಗಿ ಕಾಂಗ್ರೆಸ್ ಪಕ್ಷ ತನ್ನದೇ ಸಾಧನೆ ಎಂದು ಹೇಳಿಕೊಂಡು ಓಡಾಡತೊಡಗಿತು!!! ಪಾಪ! ತಿರುಗಿ ಕಾಂಗ್ರೆಸ್ ನನ್ನೇ ಟ್ರೋಲ್ ಮಾಡಿದರು ಜನ! ಕಾಂಗ್ರೆಸ್ ಮುಖ ಮುಚ್ಚಿ ಕುಳಿತಿತು!!

ಒಂದು ಕನ್ಕ್ಲೂಷನ್ನೇ ಕೊಡಬೇಕೆಂದರೆ ಇರುವ ಸತ್ತವನ್ನೇ ಹೇಳುತ್ತೇನೆ ಕೇಳಿ! ಈ ಪತ್ರದಿಂದ ಸ್ವತಃ ಸೋನಿಯಾಳೇ ತನ್ನ ಪಕ್ಷದ ದೌರ್ಬಲ್ಯದ ಬಗ್ಗೆ ಒಪ್ಪಿಕೊಂಡಂತಾಗಿದೆ! ತನ್ನ ಪಕ್ಷದಲ್ಲಿ ಸಾಧ್ಯವಾಗದ ಕಾರ್ಯವನ್ನು ಮೋದಿಯಾದರೂ ಮಾಡುವರೇ ಎಂಬ ವಿಶ್ವಾಸದ ಜೊತೆಗೆ ಮತ್ತೆ ತಿರುಗಿ ಹೇಗೆ ಚುಚ್ಚಬಹುದೆಂಬ ಚದುರಂಗದ ಆಟವನ್ನೂ ಆಡುತ್ತಿರುವ ಸೋನಿಯಾ ಗಾಂಧಿ ರಾಜಕೀಯ ಉದ್ದೇಶದಿಂದ ಬರೆದರೂ ತನ್ನ ಪಕ್ಷದ ಆಡಳಿತದ ವಿಫಲತೆಯನ್ನು ತಾನೇ ತೋರಿಸಿಕೊಂಡಿದ್ದಾಳಷ್ಟೇ!!

Source : Women Reservation Bill

– ತಪಸ್ವಿ

Tags

Related Articles

Close