ಅಂಕಣ

ಪ್ರಧಾನಿ ನರೇಂದ್ರ ಮೋದಿ ಕ್ರೈಸ್ತ ವಿರೋಧಿಯೇ?! ಇಲ್ಲಿದೆ ಖ್ಯಾತ ಜೆರ್ರಿ ವಯಲಿಲ್ ಎಂಬ ಕ್ಯಾಥೋಲಿಕ್ ರ ಅದ್ಭುತ ವಿಶ್ಲೇಷಣೆ!

ನೀವು ಗುಜರಾತಿನ ಕ್ರೈಸ್ತರೋ?! ಗುಜರಾತ್ ನಲ್ಲಿ ವಾಸಿಸುತ್ತಿರುವ ಕ್ರೈಸ್ತರೋ?! ಮುಗಿಯಿತು ಬಿಡಿ! ಅಲ್ಲಿಗೆ ನಿಮ್ಮ ಬದುಕು ನರಕದ ಹೊಸ್ತಿಲಲ್ಲಿದೆಯೆಂದೇ ಅರ್ಥ! ಪ್ರತಿದಿನವೂ ಸಹ ಭಾರತೀಯ ಜನತಾ ಪಕ್ಷದವರು ನಿಮ್ಮ ಮೇಲೆ ಹರಿಹಾಯುತ್ತಾರೆ!

ಆಘಾತವಾಯಿತೇ?!

ಸತ್ಯ! ಇಂತಹ ಮೇಲಿನ ಹೇಳಿಕೆಗಳನ್ನಿಟ್ಟುಕೊಂಡೇ ಅದೆಷ್ಟೋ ಪೇಯ್ಡ್ ಮಾಧ್ಯಮಗಳು ಬಿಜೆಪಿಯನ್ನು ಗುರಿಯಾಗಿಸಿಕೊಂಡು, ತನ್ಮೂಲಕ ನರೇಂದ್ರ ಮೋದಿ ‘ಅಲ್ಪಸಂಖ್ಯಾತ ಸಮಾಜ’ವನ್ನು ಕೀಳಾಗಿ ನೋಡುತ್ತಾರೆಂದು ಅಪಪ್ರಚಾರ ಮಾಡುತ್ತಲೇ ಬರುತ್ತಿವೆಯಷ್ಟೇ! ಹೇಗಾದರೂ ಆಗಲಿ, ಮೋದಿ ಒಬ್ಬ ಅಲ್ಪಸಂಖ್ಯಾತರ ವಿರೋಧಿಯೆಂದು ಸಾಬೀತಾಗಿಸಬೇಕಾಗಿದೆ! ಈ ಪೇಯ್ಡ್ ಮಾಧ್ಯಮಗಳ ಗುರಿಯೂ ಅದೇ!

ಆದರೆ, ಈ ಎಲ್ಲಾ ಸುಳ್ಳುಗಳು ಬೆತ್ತಲಾಗಿದ್ದು ಬರೋಬ್ಬರಿ ನಲವತ್ತು ವರ್ಷಗಳಿಂದ ಗುಜರಾತ್ ನಲ್ಲಿ ವಾಸ ಮಾಡುತ್ತಿರುವ ಜೆರ್ರಿ ವಯಲಿಲ್ ಎಂಬ ಕ್ಯಾಥೋಲಿಕ್ ಮಾಧ್ಯಮದೆದುರು ನಿಂತಾಗ!!

“ಮೋದಿ ಕ್ರೈಸ್ತರ ವಿರೋಧಿಯೇ?!” ಎಂಬ ಪ್ರಶ್ನೆಗೆ ಕೋರಾದಲ್ಲಿ ಉತ್ತರ ನೀಡಿದ್ದ ಜೆರ್ರಿ ವಯಲಿಲ್ ಗುಜರಾತ್ ನಲ್ಲಿರುವ ಕ್ರೈಸ್ತ ಸಮುದಾಯದವರ ಬದುಕಿನ ವಾಸ್ತವವನ್ನು ಹೇಳಿದ್ದರಷ್ಟೇ!

” ಮೋದಿಯ ಗುಜರಾತ್ ನಲ್ಲಿ ಕ್ರೈಸ್ತರಿಗೆ ಅಪಾರ ಗೌರವವಿದೆ! ಬರೀ ಗೌರವ ಮಾತ್ರವಲ್ಲ, ಶಿಶು ವಿಹಾರಗಳಲ್ಲಿ, ಆಡಳಿತ ವರ್ಗದಲ್ಲಿ, ಶಿಕ್ಷಣಸಂಸ್ಥೆಯಲ್ಲಿ. . ಹೀಗೆ ನಾನಾ ತರಹದ ಉದ್ಯೋಗ ವಿಚಾರದಲ್ಲಿ ಪ್ರಾಶಸ್ತ್ಯವನ್ನು ಕೊಡುತ್ತಾರೆ. ಆದರೆ, ಇದ್ಯಾವುದನ್ನೂ ಮಾಡದ ಕಾಂಗ್ರೆಸ್ ಪಕ್ಷ ಮಾತ್ರ ತನ್ನ ಮಾಧ್ಯಮದವರನ್ನಿಟ್ಟುಕೊಂಡು ಗಲಭೆ ಎಬ್ಬಿಸುವ ಪ್ರಯತ್ನ ಮಾಡುತ್ತಿದೆಯಷ್ಟೇ! ಮೋದಿ ಅಲ್ಪಸಂಖ್ಯಾತರ ವಿರೋಧಿ ಎನ್ನುವುದನ್ನೇ ಹೇಳುವ ಕಾಂಗ್ರೆಸ್ ಗಾಗಲಿ ಅಥವಾ ಎಡಪಂಥದವರಿಗಲೀ, ಯಾವ ಆಧಾರವೂ ಇಲ್ಲ.

ನಾನು ಮೂಲತಃ ಕೇರಳದವನು. ನನ್ನ ತಂದೆ ಸಿವಿಲ್ ಇಂಜಿನಿಯರ್ ಆಗಿ ಗುಜರಾತ್ ನಲ್ಲಿ ಸರಕಾರೀ ಕೆಲಸಕ್ಕೆ ಸೇರಿದ ಮೇಲೆ ಬಹಳಷ್ಟು ಕಡೆ ಕರ್ತವ್ಯ ನಿರ್ವಹಿಸಿದ್ದಾರೆ. ರಾಜ್ ಕೋಟ್ ನ ಸೌರಾಷ್ಟ್ರ, ಜುನಾಘಡ್, ಅಮ್ರೇಲಿ, ಮೊರ್ಬಿ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ನಾನು ನನ್ನ ಪದವಿ ಮುಗಿದ ಮೇಲೆ ಭಾರತ್ ಪೆಟ್ರೋಲಿಯಂ ನಲ್ಲಿ ಕೆಲಸ ಮಾಡಿದ್ದೇನೆ. ರಾಜ್ ಕೋಟ್ ನಲ್ಲಿ, ಕಛ್ ನಲ್ಲಿ,. .ಹೀಗೆ! ಆದರೆ, ನನಗೆ ಯಾವ ಸಮಯದಲ್ಲಿಯೂ ಸಹ ಬೇಧಭಾವ ಮಾಡುತ್ತಿದ್ದಾರೆಂದೆನಿಸಲೇ ಇಲ್ಲ. ನಾನು ಕ್ರೈಸ್ತನಾಗಿದ‌್ದರೂ ಸಹ, ನನ್ನನ್ನೊಬ್ಬ ಗುಜರಾತಿಯನ್ನಾಗಿಯೇ ನೋಡಿದರೇ ವಿನಃ ಬೇರ್ಯಾವ ರೀತಿಯಲ್ಲಿಯೂ ನನಗೆ ಬೇಸರವಾಗಲಿಲ್ಲ. ಆದರೆ, ಈ ಮಾಧ್ಯಮಗಳು ಮಾತ್ರ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ನಮಗೂ ಹೆದರಿಕೆ ಹುಟ್ಟಿಸಿದ್ದವು. ಪ್ರತಿ ಹೆಜ್ಜೆಯಲ್ಲಿಯೂ ಅಲ್ಪಸಂಖ್ಯಾತರಿಗೆ ಮೋದಿಯ ಗುಜರಾತ್ ನಲ್ಲಿ ಗಂಡಾಂತರ ಎನ್ನುವುದನ್ನು ಸೃಷ್ಟಿಸಿದ್ದು ಮಾಧ್ಯಮಗಳಷ್ಟೇ!

ನನ್ನ ಉಳಿದ ಯಾವುದೇ ಕ್ರೈಸ್ತ ಗೆಳೆಯರಿಗೂ ಮಾಧ್ಯಮಗಳು ತೋರಿಸುವಂತೆ ಯಾ ಅನಾಹುತವೂ ಆಗಿಲ್ಲ. ನನ್ನ ತಂದೆ 2002 ರಲ್ಲಿ ನಿವೃತ್ತರಾದ ಮೇಲೂ
ಕೇರಳಕ್ಕೆ ಮರಳಲಿಲ್ಲ. ನಾವಿಲ್ಲೇ ಉಳಿದೆವು! ಗುಜರಾತ್ ನನ್ನು ತೊರೆಯುವುದೊಂದು ಮೂರ್ಖತನವಷ್ಟೇ! ನಾವು ಯಾವ ತೊಂದರೆಯನ್ನೂ ಅನುಭವಿಸದೇ ನಿಜಕ್ಕೂ ಸುಖವಾಗಿದ್ದೇವೆಂದರೆ ಅದಕ್ಕೆ ಮೋದಿಯಷ್ಟೇ ಕಾರಣ! “

2002 ರಲ್ಲಿ ಗೋಧ್ರಾ ಹತ್ಯಾಕಾಂಡ ನಡೆದರೂ ಗುಜರಾತ್ ನನ್ನು ಬಿಡಲೊಪ್ಪದ ಆ ಕ್ರೈಸ್ತ ಕುಟುಂಬ ಅಲ್ಲೇ ಉಳಿಯಲು ನಿರ್ಧರಿಸಿತ್ತೆಂದರೆ ಅರ್ಥ ಮಾಡಿಕೊಳ್ಳುವುದು ನಮಗೆ ಬಹಳಷ್ಟಿದೆ! ಮಾಧ್ಯಮಾದಿಗಳು ತೋರಿಸಿದ ಯಾವುದೂ ಸತ್ಯವಲ್ಲ ಎಂಬುವುದು ಅರಿವಾದರೆ ಗೋಧ್ರಾ ಗಲಭೆಯ ಬಗೆಗಿನ ವಾಸ್ತವವೂ ಅರಿವಾಗಬಹುದೇನೋ!

ಜೆರ್ರಿ ಹೇಳಿದ್ದೂ ಅದನ್ನೇ! “ಸಮಸ್ಯೆ ಉದ್ಭವಿಸುವುದು ಪರರ ಧರ್ಮದ ವಿಚಾರದಲ್ಲಿ ತಲೆ ಹಾಕಿದಾಗಲೇ ಹೊರತು ಸುಖಾ ಸುಮ್ಮನೆಯಲ್ಲ”!

ಈ ಹೇಳಿಕೆಗಳನ್ನು ನೀಡುವುದಕ್ಕೆ ತಾಕತ್ತು ಬೇಕು. ಇದ್ದದ್ದನ್ನು ಇದ್ದ ಹಾಗೆ ಒಪ್ಪಿಕೊಂಡು ಬಿಡುವ ಧೈರ್ಯವಿರಬೇಕು! ಗೋಧ್ರಾದಲ್ಲಿ ಪಾಕಿಸ್ಥಾನಿ ಉಗ್ರರ ಸಂಪರ್ಕದಲ್ಲಿದ್ದೊಂದಿಷ್ಟು ಜನ ರೈಲು ಬೋಗಿಗೆ ಬೆಂಕಿ ಇಟ್ಟಿದ್ದರು! ಬರೋಬ್ಬರಿ 59 ಕರಸೇವಕರು ಸಜೀವ ದಹನವಾಗಿ ಹೋಗಿದ‌್ದರು! ಅದನ್ನು ಯಾರೂ ಹೇಳಲೇ ಇಲ್ಲ! ಅವರ ಸಾವಿಗೆ ಬೆಲೆಯನ್ನೂ ಒದಗಿಸಿಕೊಡದ ಮಾಧ್ಯಮವೊಂದು ಮತ್ತೆ ಹಿಂದೂಗಳ ಧಾರ್ಮಿಕ ವಿಚಾರವಾಗಿ ತಗಾದೆ ತೆಗೆದು ಅವಮಾನಗೊಳಿಸಿತ್ತು!

ಸೂಕ್ಷ್ಮವಾಗಿ ಅವಲೋಕಿಸಿದರೆ,ಗುಜರಾತ್ ನ ಕ್ರೈಸ್ತರ ಕೌಟುಂಬಿಕ ಹೆಸರುಗಳೆಲ್ಲವೂ ಸಹ ಪರ್ಮಾರ್, ವಘೇಲಾ ಅಥವಾ ಸೋಲಂಕಿ ಎಂಬಲ್ಲೇ ಇರುತ್ತದೆ. ಅರ್ಥವಾಯಿತಾ?! ಇವರೆಲ್ಲರೂ ಸಹ ಮುಂಚೆ ರಜಪೂತ ವಂಶಸ್ಥರು! ಕಾಲಾನಂತರದಲ್ಲಿ ಕ್ರೈಸ್ತರಾಗಿ ಮತಾಂತರಗೊಂಡವರು!

ಮತ್ತೊಂದಚ್ಚರಿಯೆಂದರೆ ಅದೇ! ಮತಾಂತರವಾದ ರಜಪೂತರು ತಮ್ಮದೇ ಆಸ್ತಿಯ ಭಾಗವನ್ನು ಕ್ರೈಸ್ತ ಮತದ ಧಾರ್ಮಿಕ ಕಾರ್ಯಗಳಿಗೆ ನೀಡಿದರು. ಅಷ್ಟಾದರೂ ಸಹ, ಕೇವಲ ನರೇಂದ್ರ ಮೋದಿಯ ತವರೆಂಬ ಕಾರಣಕ್ಕೆ ‘ಅಸಹಿಷ್ಣು’ ರಾಜ್ಯವೆಂದೇ ಬಿಂಬಿಸಿಬಿಟ್ಟರಷ್ಟೇ!

ಬಹುಷಃ ಜೆರ್ರಿಯವರ ವಿಶ್ಲೇಷಣೆಯೊಂದನ್ನೋದಿದ ಮೇಲೆ ಅನೇಕರಿಗೆ ಅರ್ಥವಾಗಬಹುದು ವಾಸ್ತವದ ಸಂಗತಿಯೇನೆಂದು!

– ತಪಸ್ವಿ

Tags

Related Articles

Close