ಕಳೆದ ಮೂರು ವರ್ಷಗಳಲ್ಲಿ ಒಂದು ವಿಚಾರ ಮಾತ್ರ ಸ್ಪಷ್ಟವಾಗಿದೆ. ಏನು ಗೊತ್ತಾ?? ಯಾರಿಗೆ ಪ್ರಚಾರದ ಹಪಿಹಪಿಯಿದೆಯೋ, ತಮ್ಮ ಹೆಸರು ಪ್ರಸಿದ್ಧಿಯಾಗಬೇಕೆಂಬ ಬಯಕೆಯಿದೆಯೋ ಅವರೆಲ್ಲಾ ಮಾಡಬೇಕಾಗಿರುವುದು ಒಂದೇ. ಪ್ರಧಾನಿ ಮೋದಿಯವರನ್ನು ತೆಗಳುವುದು. ಹಾ.. ಈಗಿನ ಸರದಿ ವಿಜಯಾನಂದ ಕಾಶಪ್ಪನವರ್ ನದ್ದು. ದೇಶದ ಪ್ರಾಮಾಣಿಕ ಪ್ರಧಾನಿಯನ್ನು ತೆಗಳುವುದರಿಂದ ಅದೇನು ಆನಂದವನ್ನು ಅನುಭವಿಸುತ್ತಾನೋ ಆ ದೇವನೇ ಬಲ್ಲ.!!
ವಿಜಯಾನಂದರೇ ನಿಮ್ಮ ಇತಿಹಾಸವನ್ನು ಯಾವತ್ತಾರೂ ಪರಿಶೀಲಿಸಿದ್ದೀರಾ?? ನೀವೊಬ್ಬ ಲದ್ಧಿಜೀವಿಯಾದ್ದರಿಂದ ಅದನ್ನು ಗಮನಿಸಿಲಾರಿರಿ. ಯಾಕೆಂದರೆ ಚುನಾವಣಾ ಸಂದರ್ಭದಲ್ಲಿ ಹೆಮ್ಮೆಯಿಂದ ನನ್ನ ಮೇಲೆ ಇಷ್ಟೊಂದು ದೂರುಗಳಿವೆಯೆಂದು ತೊಡೆ ತಟ್ಟಿ ನುಡಿದವರಲ್ಲವೇ ನೀವು?? ದೇಶಕ್ಕೆ ಸೇವೆ ಮಾಡತ್ತೇನೆಂದು ಪ್ರಮಾಣ ಮಾಡಿ ಬಂದ ನೀವು ಪ್ರತೀ ಹಂತದಲ್ಲಿ ಮಾಡುತ್ತಿರುವುದು ಮಾತ್ರ ವಿಧ್ವಂಸಕ ಕೃತ್ಯವೇ!!!
ನಿಮ್ಮ ಘನವಾದ ಇತಿಹಾಸವನ್ನೊಮ್ಮೆ ಕೆದಕಿ ನೋಡಿ. ನಿಮ್ಮ ಸಾಮಾಜಿಕ ಪ್ರೇಮ ನಗ್ನವಾಗಲಿದೆಯಷ್ಟೇ. ಬದಲಾಗಿ ಯಾವುದೇ ಉತ್ತಮ ಕಾರ್ಯಗಳು ಗೋಚರಿಸುವುದಿಲ್ಲ. ನೀವು ನಿಮ್ಮ ಗಾಡಿಯಲ್ಲಿ ಹೋಗಬೇಕಾದರೆ ಅಲ್ಲೇ ರಸ್ತೆ ಪಕ್ಕದಲ್ಲಿದ್ದ ಹಾದು ಹೋಗುತ್ತಿದ್ದ ಒಂದು ಬೈಕ್ ಗೆ ಗುದ್ದಿದಿರಿ. ಸರಿ. ಅದು ಆಕಸ್ಮಿಕವಾದ ಅಪಘಾತವೆಂದುಕೊಳ್ಳೋಣ. ಆದರೆ ನೀವು ಗಾಡಿಯನ್ನು ಅಲ್ಲಿ ನಿಲ್ಲಿಸದೇ ಸೀದಾ ತೆರಳಿದಿರಿ. ಆ ವಾಹನ ಸವಾರನಿಗೆ ಏನಾಯಿತೆಂಬ ಕಾಳಜಿಯನ್ನೂ ವ್ಯಕ್ತಪಡಿಸದೇ. ನಂತರ ನಿಮ್ಮನ್ನು ಹಿಂಬಾಲಿಸಿ ನಿಮ್ಮ ಗಾಡಿಯನ್ನು ತಡೆದ ಕೆಲವು ಸಾರ್ವಜನಿಕರೊಂದಿಗೂ ತನ್ನ ತಪ್ಪೇನೂ ಇಲ್ಲವೆಂದು ಚರ್ಚೆ ಮಾಡಲು ಪ್ರಾರಂಭಿಸಿದಿರಿ. ಮರುದಿನ ಆಸ್ಪತ್ರೆಯಲ್ಲೂ ವಾಗ್ವಾದವನ್ನು ಮಾಡಿದಿರೇ ಹೊರತು ಆತನಿಗೆ ಪರಿಹಾರವಾಗಲೀ , ಸಾಂತ್ವನವನ್ನಾಗಲೀ ನೀಡಿಲ್ಲ. ನಿಮ್ಮ ಸಾಮಾಜಿಕ ಕಳಕಳಿಗೆ ಇದೊಂದು ಉದಾಹರಣೆಯಷ್ಟೇ.
ಒಂದು ವಿಚಾರ ಕೇಳಲಾ?? ಕಾನೂನು ಮೊದಲಾ ರಾಜಕಾರಣಿಗಳು ಮೊದಲಾ ಎಂಬ ಪ್ರಶ್ನೆ ನಿಮ್ಮನ್ನು ನೋಡಿದಾಗ ಉದ್ಭವಿಸಿದ್ದು ಮಾತ್ರ ಸುಳ್ಳಲ್ಲ. ನೀವು ನಡೆಸಿಕೊಂಡು ಬರುತ್ತಿದ್ದ ಬಾರ್ ಗೆ ಇಬ್ಬರು ಪೋಲಿಸ್ ಪೇದೆಗಳು ದಾಳಿ ಮಾಡಿದ್ದರು. ರಾತ್ರಿ 1 ಗಂಟೆಯ ತನಕ ಬಾರ್ ತೆರೆದದ್ದೇ ಒಂದು ಮಹಾಪರಾಧ, ಅದರ ನಡುವೆ ಬಾರ್ ಗೆ ಆಗಮಿಸಿದ ಪೇದೆಗಳನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೇಲೆಯೇ ಎರಗಿದಿರಿ. ಅಲ್ಲಿಗೆ ಎರಡು ಅಪರಾಧಗಳನ್ನು ಒಂದೇ ಸಮಯಕ್ಕೆ ಮಾಡಿದ ಸಾಧನೆಯನ್ನೂ ಮಾಡಿದ್ದೀರಿ. ನೀವು ಮಾಡಿದ ತಪ್ಪನ್ನು ಪ್ರಶ್ನಿಸುವವರು ನಿಮ್ಮ ಪಾಲಿನ ಶತ್ರುಗಳಾದದ್ದರಲ್ಲಿ ಆಶ್ಚರ್ಯವಿಲ್ಲ ಬಿಡಿ. ಯಾಕೆಂದರೆ ನೀವು ಸಮಾಜಘಾತುಕರಿಗೆ ಸಹಾಯಹಸ್ತ ಚಾಚುವರೆಂಬುದು ಸಾಬೀತಾಗಿತ್ತು.
ಈ ಘಟನೆ ನಡೆದು ಹಲವು ದಿನಗಳ ಕಾಲ ನಾಪತ್ತೆಯಾದಂತೆ ನಟನೆಯನ್ನೂ ಮಾಡಿದ ನಟರು ನೀವು. ಪೋಲಿಸರಿಗೆ ನಿಂದಿಸುವಾಗ ಇಲ್ಲದ್ದ ಭಯ ಈಗ ಎಲ್ಲಿಂದ ಬಂತು ಆನಂದರವರೇ?? ನಿಮ್ಮ ಪಂಗಡದಲ್ಲಿರುವವರೆಲ್ಲಾ ರೌಡಿ ಶೀಟರ್ ಗಳೇ ಆಗಿರುವಾಗ ಆರಕ್ಷಕರ ಮೇಲೆ ನೀವು ತೋರಿದ ವರ್ತನೆ ಹೇಗಿರಬಹುದೆದು ಪಾಪ ಅವರು ಊಹಿಸಿರಲಿಲ್ಲ. ಮೂರು ಬಾರಿ ವಿಚಾರಣೆಗೆ ಹಾಜರಾಗಲು ಆದೇಶಿದರೂ ಹಾಜರಾಗದೇ ಇದ್ದುದು ನಿಮ್ಮ ಪ್ರಾಮಾಣಿಕತೆಗೆ, ದಕ್ಷತೆಗೆ ಹಿಡಿದ ಕೈಗನ್ನಡಿ.
ಮೋದಿಯವರು ಸಾಧ್ಯವಿದ್ದರೆ ನನ್ನ ವಿರುದ್ಧ ಸ್ಪರ್ಧಿಸಿ ವಿಜಯಶಾಲಿಯಾಗಲೀ ಎಂದೆಲ್ಲಾ ನುಡಿದು ನಂತರ ಏಕವಚನದಲ್ಲಿಯೇ ಸಂಬೋಧಿಸಿದ್ದೀರಿ. ವಿಜಯಾನಂದರೇ, ಒಂದು ಮಾತಂತೂ ಸತ್ಯ. ನಿಮ್ಮ ಮೇಲಿರುವ ದೂರುಗಳ ವಿರುದ್ಧ ಮೋದಿ ಗೆಲ್ಲಲು ಸಾಧ್ಯವೇ ಇಲ್ಲ. ಇದುವರೆಗೆ ಅವರ ರಾಜಕಾರಣ ಜೀವನದಲ್ಲಿ ಒಂದು ಎಫ್ ಐ ಆರ್ ಕೂಡ ದಾಖಲಾದ ಉದಾಹರಣೆಯಿಲ್ಲ. ಆದರೆ ನಿಮಗೆ, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದುದಕ್ಕೆ ಸಾಕ್ಷಿಯಾಗಿ
5 ದೂರುಗಳು ದಾಖಲಾಗಿವೆ. ಅವುಗಳಲ್ಲಿ ಕೊಲೆ ಪ್ರಯತ್ನವೂ ಒಂದು. ಅಕ್ರಮವಾಗಿ ಆಯುಧಗಳನ್ನು ಹೊಂದಿರುವದೂ ಒಳಗೊಂಡಿದೆ. ಮಾರಣಾಂತಿಕ ಹಲ್ಲೆ ಹಾಗೂ ಜೀವಬೆದರಿಕೆ ಒಡ್ಡಿದ ಕುರಿತಾಗಿ ದೂರು ದಾಖಲಾಗಿರುವ ವ್ಯಕ್ತಿ ಇಂತಹ ಒಂದು ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿಯೇ ಇವೆ.
ಮರಳು ದಂಧೆಯಲ್ಲಿ ಭಾಗಿಯಾಗಿ ಸೆರೆಮನೆವಾಸವನ್ನು ಅನುಭವಿಸಿದವರು ನಿನ್ನ ಸಹೋದರರೇ ಆಗಿರುವಾಗ ಅದ್ಯಾವ ನೆಲೆಗಟ್ಟಿನಲ್ಲಿ, ಕಿಂಚಿತ್ತೂ ನೈತಿಕತೆಯನ್ನು ಉಳಿಸದೆ ಬಾಯಿಗೆ ಬಂದಂತೆ ಒದರುತ್ತೀರಿ ಕಾಶಪ್ಪನವರೇ??
ವ್ಹಾ.. ಇದೆಂತಹ ಕುಚೋದ್ಯ ನೋಡಿ. ಒಂದು ಕಡೆ ತಾನು ಮಾಡಿದ ಅಪರಾಧಗಳಿಂದಾಗಿ ತನಿಖೆಗಳನ್ನು ಎದುರಿಸುತ್ತಿರುವ ಶಾಸಕನಿದ್ದರೆ , ಇನ್ನೊಂದು ಕಡೆ ನಿಷ್ಕಳಂಕ ವ್ಯಕ್ತಿತ್ವದ ರಾಜಕಾರಣಿ ದೇಶದ ಮುಂದಾಳತ್ವವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಆದರೆ ಎಲ್ಲಿಯಾದರೂ ಅಧರ್ಮೀಯರ ಮುಂದೆ ಧರ್ಮೀಯರೂ ಸೋಲುವುದನ್ನೂ ಕೇಳಿದ್ದೀರಾ?? ನೋಡಿದ್ದೀರಾ?? ನಿಸ್ಸಂಶಯವಾಗಿಯೂ ವಿಜಯಾನಂದರು ಆಡಿದ ಮಾತುಗಳು ಹೇಗಿತ್ತೆಂದರೆ ಭೀಮನ ಮುಂದೆ ದುರ್ಯೋಧನನ ಪ್ರತಾಪದಂತಿತ್ತು. ಇದಕ್ಕಿಂತ ಹೆಚ್ಚಾಗಿ ವಿವರಿಸಬೇಕಾದ್ದು ಏನಿಲ್ಲವೆಂದುಕೊಳ್ಳತ್ತೇನೆ.
ಈ ಘಟನೆಗಳಿಂದ ಒಂದಂತೂ ಸ್ಪಷ್ಟವಾಯಿತು. ನಿಮ್ಮ ನಳ್ಳಿಯಲ್ಲಿ ನೀರು ಬರುವುದಿಲ್ಲವೇ, ನೀವು ಮೋದಿಯನ್ನು ದೂರಿ, ನಿಮ್ಮ ಮನೆಯ ಪರಿಸರ ಸ್ವಚ್ಛವಾಗಿಲ್ಲವೇ ನೀವು ಮೋದಿಯನ್ನು ದೂರಿ, ರಾತ್ರಿ ಮಲಗಿರುವಾಗ ಸೊಳ್ಳೆ ಕಡಿಯಿತೇ ಅದಿಕ್ಕೂ ಮೋದಿನೇ ಕಾರಣ.!!! ಒಟ್ಟಿನಲ್ಲಿ ತನ್ನ ಮನೆಯಲ್ಲಿ ಸಂಭವಿಸಿದ ಅನಿಷ್ಟಕ್ಕೂ ರಾಜನೇ ಕಾರಣ ಅನ್ನುವ ಪರಿಸ್ಥಿತಿ ಉಂಟಾಗಿದೆ. ಒಂದು ಖುಶಿಯ ವಿಚಾರವೆಂದರೆ ಓರ್ವ ಪ್ರಧಾನಿಯನ್ನು ವಿರೋಧಿಗಳೂ ಸದಾ ಜಪಿಸುತ್ತಿರುವುದು ಇದೇ ಪ್ರಥಮ ಬಾರಿಗೆ. ಅದರರ್ಥ ಅವರ ಹಾದಿ ಸರಿಯಾದ ದಿಕ್ಕಿನಲ್ಲಿದೆಯೆಂಬುದಾಗಿಯೇ ಅಲ್ಲವೇ??
– ವಸಿಷ್ಠ