ಪ್ರಚಲಿತ

ಪ್ರಧಾನಿ ಮೋದಿಯವರಿಗೆ 3 ಪ್ರಶ್ನೆ ಕೇಳಿದ್ದ ಆ ಮುಸಲ್ಮಾನ ಯುವತಿಗೆ ಉತ್ತರ ಕೊಡಬೇಕಾದ್ದು ದೇಶವಾಸಿಗಳಾದ ನಮ್ಮ ಕರ್ತವ್ಯವಲ್ಲವೇ?

ಜನಸಾಮಾನ್ಯನ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕು ಆದರೆ ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋ ಮಾಡಿ ಹಾಕಿದರೆ ಅದರಿಂದ ಸರ್ಕಾರಕ್ಕೆ
ಇವರ ಪ್ರಶ್ನೆಗಳು ಗೊತ್ತಾಗುತ್ತಾ?

ಸರ್ಕಾರಕ್ಕೆ ಪ್ರಶ್ನೆ ಮಾಡುವ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇದೆ. ಆದರೆ ಪ್ರಶ್ನೆ ಮಾಡುವುದಕ್ಕೂ ಕೆಲವು ಮಾರ್ಗಗಳಿವೆ, ಪತ್ರದ ಮೂಲಕ, ಇ-ಮೇಲ್ ಮೂಲಕ ಹೀಗೆ specific ದಾರಿಗಳಿವೆ. ಆದರೆ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಅಕೌಂಟ್’ನಲ್ಲಿ ವಿಡಿಯೋ ಹಾಕಿ ಇದಕ್ಕುತ್ತರಿಸಿಯಂತ ಸರ್ಕಾರಕ್ಕೆ ಕೇಳಿದರೆ ಸರ್ಕಾರಕ್ಕೆ ಆ ಪ್ರಶ್ನೆ ಮುಟ್ಟುತ್ತವಾ?

ಗುಜರಾತಿನ ಒಬ್ಬ ಯುವತಿಯೂ ಅಂತಹದ್ದೆ ಕೆಲಸವೊಂದನ್ನ ಮಾಡಿದ್ದಾಳೆ.

ಮೋದಿ ಕೇ ಭಕ್ತ್ ಜವಾಬ್ ದೋ (ಮೋದಿಯ ಭಕ್ತರೇ ಈ ಪ್ರಶ್ನೆಗಳಿಗೆ ಉತ್ತರಿಸಿ) ಅಂದಿದ್ದಾಳೆ.

ಈಗ ಈ ಯುವತಿ ಮೋದಿಜೀಯ ಕುರಿತಾಗಿ ಕೇಳಿರುವ ಪ್ರಶ್ನೆಗಳನ್ನ ಕೇಳೋಣ ಬನ್ನಿ

1) ಮೋದಿ MA ಓದಿದ್ದರೂ ಚಾಯ್ ಮಾರಿ ಜೀವನ ಸಾಗಿಸಿದ್ಯಾಕೆ?

2)ಮೋದಿ ಸರ್ದಾರ್ ಸರೋವರ್ ಡ್ಯಾಮ್’ನ ಬಗ್ಗೆ ಇಕತ್ತಿಸ್(31 ವರ್ಷ) ವರ್ಷಗಳ ಹಿಂದೆಯೇ ಕನಸು ಕಂಡಿದ್ದರಂತೆ ಆದರೆ ಮೋದಿಗೆ ಈಗ 68 ವಯಸ್ಸು, ಅದ್ಹೇಗೆ ಸಾಧ್ಯ?

(ಅವಳು 71(ಇಕತ್ತರ್) ವರ್ಷ ಹೇಳೋಕೆ ಹೋಗಿ ಬದಲಿಗೆ ಇಕತ್ತಿಸ್(31) ಅಂತ ಖುದ್ದು ತಾನೇ ಕನಫ್ಯೂಸ್ ಆಗಿದ್ಳು)

3) ಅಹ್ಮದಾಬಾದ್ ನಿಂದ ಮುಂಬೈ ಬುಲೆಟ್ ಟ್ರೇನ್’ಗೆ ಜನ 4000 ರೂ. ಕೊಡಬೇಕು, ಪ್ರಯಾಣದ ಅವಧಿ 3 ಗಂಟೆಯಂತೆ. ಅಹ್ಮದಾಬಾದ್’ನಿಂದ ಮುಂಬೈಗೆ ಫ್ಲೈಟ್ ಮೂಲಕ ಹೋದ್ರೆ ಕೇವಲ 40 ನಿಮಿಷದಲ್ಲಿ 3000 ಫೇರ್ ಇರೋದು. ಜನ ಫ್ಲೈಟ್ ಬಿಟ್ಟು ಬುಲೇಟ್ ಟ್ರೇನ್ ಮೂಲಕ
ಪ್ರಯಾಣ ಮಾಡೋಕೆ ಹುಚ್ಚರೇನು?

ಆ ಯುವತಿ ಆಕೆಯ ಪ್ರಶ್ನೆಗಳ ಬಗ್ಗೆ ಉತ್ತರ ನಿರೀಕ್ಷಿಸುತ್ತಿದ್ದಾಳೆ. ಆಕೆಯ ಪ್ರಶ್ನೆಗಳಿಗೆ ಉತ್ತರ ನೋಡೋಣ ಬನ್ನಿ..!

ಆಕೆಯ ಮೊದಲ ಪ್ರಶ್ನೆ “ಮೋದಿ MA ಓದಿದ್ದರೂ ಚಾಯ್ ಮಾರಿ ಜೀವನ ಸಾಗಿಸಿದ್ಯಾಕೆ?”

ಪ್ರಧಾನಿ ಮೋದಿ ಯಾವತ್ತೂ ನಾನು MA ಮುಗಿಸಿ ಚಾಯ್ ಮಾರಿದ್ದೀನಂತ ಎಲ್ಲೂ ಹೇಳಿಕೊಂಡಿಲ್ಲ. ಅವರು ಹೇಳಿದ್ದು “ನನ್ನದು ಬಡಕುಟುಂಬವಾಗಿದ್ದರಿಂದ ಚಿಕ್ಕವಯಸ್ಸಿನಲ್ಲಿ ತಂದೆಯ ಜೊತೆಗೂಡಿ ರೇಲ್ವೆ ಸ್ಟೇಷನನಲ್ಲಿ ಚಾಯ್ ಮಾರಿ ಕುಟುಂಬ ನಿರ್ವಹಣೆಗೆ ಸಹಾಯ ಮಾಡಿ ಬಂದಂತ ಕಡು ಬಡತನ ಕುಟುಂಬದಿಂದ ಬಂದಂತ ಸಾಮಾನ್ಯ ವ್ಯಕ್ತಿ ನಾನು” ಅನ್ನೋದು. ಅವರೆಲ್ಲಿಯೂ ತಮ್ಮ qualification ಬಗ್ಗೆ ಉಲ್ಲೇಖಿಸಿಲ್ಲ.

ಎರಡನೆ ಪ್ರಶ್ನೆ, “ಮೋದಿ ಸರ್ದಾರ್ ಸರೋವರ್ ಡ್ಯಾಮ್’ನ ಬಗ್ಗೆ 71 ವರ್ಷಗಳ ಹಿಂದೆಯೇ ಕನಸು ಕಂಡಿದ್ದರಂತೆ ಆದರೆ ಮೋದಿಗೆ ಈಗ 67 ವಯಸ್ಸು, ಅದ್ಹೇಗೆ ಸಾಧ್ಯ?”

ಅರೇ ಹುಚ್ಚು ಹುಡುಗಿ ಸರಿಯಾಗಿ ನೀನು ಮೋದಿಜೀಯ ಭಾಷಣ ಕೇಳಿದ್ದಿದ್ರೆ ಈ ಪ್ರಶ್ನೆ ಕೇಳ್ತಿರಲಿಲ್ಲ.ಮೋದಿಜೀ ಹೇಳಿದ್ದು “71 ವರ್ಷಗಳ ಹಿಂದೆಯೇ ಸರ್ದಾರ್ ವಲ್ಲಭಭಾಯ್ ಪಟೇಲರು ಈ ಡ್ಯಾಂ ನ ಕನಸು ಕಂಡಿದ್ದರು” ಅಂತಲೇ ಹೊರತು ತಾನೇ 71 ವರ್ಷಗಳ ಹಿಂದೆ ಈ ಡ್ಯಾಂನ ಬಗ್ಗೆ ಕನಸು
ಕಂಡಿದ್ದೆ ಅಂತಲ್ಲ.

ಈ ಪ್ರಶ್ನೆಯಲ್ಲೂ 71 ವರ್ಷ(ಇಕತ್ತರ್ ಸಾಲ್) ಅನ್ನೋ ಬದಲು ಇಕತ್ತಿಸ್ ಸಾಲ್(31 ವರ್ಷ) ಅನ್ನೋ ಎಡವಟ್ಟು ಮಾಡಿಕೊಂಡಿರೋ ಈಕೆಗೆ ಮೋದಿ ಭಕ್ತರಿಂದ ಉತ್ತರ ಬೇಕಂತೆ.

ಇನ್ನು ಮೂರನೆ ಪ್ರಶ್ನೆ, “ಅಹ್ಮದಾಬಾದ್ ನಿಂದ ಮುಂಬೈ ಬುಲೆಟ್ ಟ್ರೇನ್’ಗೆ ಜನ 4000 ರೂ. ಕೊಡಬೇಕು, ಪ್ರಯಾಣದ ಅವಧಿ 3 ಗಂಟೆಯಂತೆ. ಅಹ್ಮದಾಬಾದ್’ನಿಂದ ಮುಂಬೈಗೆ ಫ್ಲೈಟ್ ಮೂಲಕ ಹೋದ್ರೆ ಕೇವಲ 40 ನಿಮಿಷದಲ್ಲಿ 3000 ಫೇರ್ ಇರೋದು. ಜನ ಫ್ಲೈಟ್ ಬಿಟ್ಟು ಬುಲೇಟ್ ಟ್ರೇನ್
ಮೂಲಕ ಪ್ರಯಾಣ ಮಾಡೋಕೆ ಹುಚ್ಚರೇನು?”

ಈ ಪ್ರಶ್ನೆ ಸ್ವಲ್ಪ ಲಾಜಿಕಲ್ ಸತ್ಯ ಅನಿಸಿದರೂ ಆಕೆ ಹಹೇಳುವ ರೀತಿಯಲ್ಲಿ ಜನಸಾಮಾನ್ಯರು ಫ್ಲೈಟ್ ಮೂಲಕ ಪ್ರಯಾಣ ಮಾಡೋಕೆ ಸಾಧ್ಯವಾಗುತ್ತಾ?

ಹೌದು ಫ್ಲೈಟ್ ಮೂಲಕ ಅಹ್ಮದಾಬಾದ್’ನಿಂದ ಮುಂಬೈಗೆ ತಲುಪೋಕೆ 40 ನಿಮಿಷ ತಗುಲುತ್ತದೆ ಆದರೆ ಟ್ರೇನ್ ಟಿಕೆಟ್ ಸಿಕ್ಕ ಹಾಗೆ ಅವತ್ತಿಂದವತ್ತೇ ಫ್ಲೈಟ್ ಟಿಕೇಟ್ ಸಿಗುತ್ತಾ? ಅದಕ್ಕಾಗಿ ಕೆಲ ದಿನಗಳ ಕಾಲ ಕಾಯಬೇಕು ತಾನೆ?

ಕಾಯೋದು ಬಿಡಿ, ಮೋದಿಜೀಯ ಬುಲೇಟ್ ಟ್ರೇನ್ ಪ್ರಾಜೆಕ್ಟ್ ಪ್ರಕಾರ ಒಂದು ದಿನಕ್ಕೆ ಮುಂಬೈ ಅಹ್ಮದಾಬಾದ್ ಮಧ್ಯೆ ಪ್ರಯಾಣಿಸುವ ಜನ ಎಷ್ಟು ಗೊತ್ತೆ?

ದಿನವೊಂದಕ್ಕೆ ಎಂಭತ್ತೆಂಟು ಸಾವಿರ(88,000) ದಿಂದ ಒಂದು ಲಕ್ಷ ಹದಿನೆಂಟು ಸಾವಿರ(1,18,000) ಜನ

ಇನ್ನು ಅಹ್ಮದಾಬಾದ್ – ಮುಂಬೈ ಫ್ಲೈಟ್’ಗಳ ಮಧ್ಯೆ ದಿನವೊಂದಕ್ಕೆ ಎಷ್ಟು ಫ್ಲೈಟ್’ಗಳು ಹಾರಾಡುತ್ತೆ ಅನ್ನೋದನ್ನೂ ತಿಳಿದುಕೊಳ್ಳಬೇಕು.

ವಾರಕ್ಕೆ 175 ಫ್ಲೈಟ್’ಗಳು ಅಂದರೆ ದಿನಕ್ಕೆ ಸರಾಸರಿ 25 ಫ್ಲೈಟ್’ಗಳು ಅಹ್ಮದಾಬಾದ್’ನಿಂದ ಮುಂಬೈಗಿವೆ.

ಒಂದು ಫ್ಲೈಟ್ ನಲ್ಲಿ ಅಬ್ಬಬ್ಬಾಂದ್ರೂ maximum 400 ಜನ ಪ್ರಯಾಣಿಕರು & Minimum ಅಂದ್ರೆ 150 ಜನ ಅಂದರೆ 25 ಫ್ಲೈಟ್ಗಳಲ್ಲಿ ಅಬ್ಬಬ್ಬಾ ಅಂದ್ರೆ 10,000 ಜನ ಒಂದು ದಿನದಲ್ಲಿ ಪ್ರಯಾಣಿಸಬಹುದು.

ಆದರೆ ಬುಲೆಟ್ ಟ್ರೇನ್’ನಲ್ಲಿ? ಲಕ್ಷ ಜನ ಪ್ರಯಾಣ ಮಾಡುವುದು ಫ್ಲೈಟ್ ವ್ಯವಸ್ಥೆಗಿಂತ ಒಳಿತೋ ತೊಡಕೋ?

ದಿನಾ ಪ್ರಯಾಣ ಮಾಡುವ ಜನ ಏರಪೋರ್ಟ್’ಗೆ ಹೋಗಿ ಫ್ಲೈಟ್ಗಳಿಗಾಗಿ ಕಾಯ್ದು ಸೀಟ್ ಇಲ್ಲ ಅಂತ ವಾಪಸ್ ಬರೋದಕ್ಕಿಂತ ಟೈಂ ಟೈಂ ಗ್ ಒಂದ್ರಂತಿರೋ 50 ಬುಲೆಟ್ ಟ್ರೈನ್’ಗಳಲ್ಲಿ ಪ್ರಯಾಣ ಮಾಡೋದು ಲೇಸಲ್ವೆ?

ಇನ್ನು ಫ್ಲೈಟ್ fare ಬುಲೆಟ್ ಟ್ರೈನ್ fare ಗಳ ಬಗ್ಗೆ ಮಾತಾಡೋದಾದ್ರೆ ಬುಲೆಟ್ ಟ್ರೈನ್’ಗೆ 4000/- ಫ್ಲೈಟ್’ಗೆ 3000/- ಇದೆ, ಆದರೆ ದಿನಕ್ಕೆ ಸರಾಸರಿ 25 ಇರೋ ಫ್ಲೈಟ್’ಗಳಲ್ಲಿ ಸಾವಿರಾರು ಜನ ಪ್ರಯಾಣ ಮಾಡಲು ಸಾಧ್ಯವೆ?

ಅಷ್ಟಕ್ಕೂ ಫ್ಲೈಟ್’ನಲ್ಲಿ ಜನರಿಗೆ ಅಹ್ಮದಾಬಾದ್ ನಿಂದ ಮುಂಬೈ ಮಾರ್ಗ ಮಧ್ಯೆ ಇರೋ ಸ್ಥಳಕ್ಕೆ ಹೋಗಬೇಕಾದರೆ ಫ್ಲೈಟ್ ನಿಲ್ಲಿಸುತ್ತಾರಾ? ಅಹ್ಮದಾಬಾದ್ – ಮುಂಬೈ ಮಧ್ಯೆ ಹಲವಾರು ಸ್ಟೇಶನ್ ಗಳಿವೆ ಆ ಊರುಗಳಿಗೆ ತೆರಳುವ ಜನರು ನಿಗದಿಪಡಿಸಿದ ದುಡ್ಡನ್ನ ಟಿಕೆಟ್ಟಿಗೆ ಕೊಡ್ತಾರೆ ಹೊರತು ಇವಳು ಹೇಳ್ತಿರೋ ಹಾಗೆ 4000/- ಅಲ್ಲ

50 Bullet Train ಗಳು ಅಹ್ಮದಾಬಾದ್ ನಿಂದ ಮುಂಬೈ ಹಾಗು 50 Bullet Train ಗಳು ಮುಂಬೈನಿಂದ ಅಹ್ಮದಾಬಾದ್ ಗೆ ಅಂದರೆ ದಿನಕ್ಕೆ 100 ಟ್ರೈನ್’ಗಳು ಸಂಚಾರ ಮಾಡುತ್ತವೆ.

ಈ ಸೌಲಭ್ಯ ಫ್ಲೈಟ್ಗಳಲ್ಲಿ ಜನರಿಗೆ ಸಿಗಲು ಸಾಧ್ಯವೆ?

ಒಟ್ಟಿನಲ್ಲಿ ಮೋದಿ ಸರ್ದಾರ್ ಸರೋವರ ಡ್ಯಾಂ ಉದ್ಘಾಟಿಸಿದರೂ ತಪ್ಪು ಉದ್ಘಾಟಿಸದಿದ್ದರೂ ತಪ್ಪು.

ಮೋದಿ ಬುಲೆಟ್ ಟ್ರೈನ್ ತಂದರೂ ಇವರಿಗೆ ಸಮಸ್ಯೆ, ತರಲಿಲ್ಲವಂದರೂ ಸಮಸ್ಯೆ.

ಒಟ್ಟಿನಲ್ಲಿ ಮೋದಿ ವಿರೋಧ ಮಾಡೋದರ ಜೊತೆ ಜೊತೆಗೆ ತಮ್ಮ ಪ್ರಚಾರ ಮಾಡಿಕೊಳ್ಳುವುದೇ ಇವರ ದುರುದ್ದೇಶ ಹೊರತು ಮತ್ತೇನಲ್ಲ!!

– Vinod Hindu Nationalist

Tags

Related Articles

Close