ಪ್ರಚಲಿತ

ಪ್ರಧಾನಿ ಮೋದಿಯವರ ಜನತಾ‌ಕರ್ಫ್ಯೂಗೆ ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳಿದೆ ಗೊತ್ತೇ?

ಪ್ರಧಾನಿ ನರೇಂದ್ರ‌ ಮೋದಿಯವರು ಮಾ.೨೨ರಂದು ಜನತಾ‌ ಕರ್ಫ್ಯೂಗೆ ಕರೆ‌ ನೀಡಿದ್ದಾರೆ. ಇದಕ್ಕೆ ಇಡೀ‌‌ದೇಶದ‌ ಬೆಂಬಲ ವ್ಯಕ್ತವಾದರೆ ಅಲ್ಲೊಂದು ಇಲ್ಲೊಂದಿಷ್ಟು ಮಂದಿ ಕೊಂಕು ನುಡಿಯುತ್ತಿದ್ದಾರೆ.

ಆದರೆ ವಿಶ್ವ ಆರೋಗ್ಯ ಸಂಸ್ಥೆ(WHO) ಮೋದಿಯವರ ಈ ಉಪಕ್ರಮಕ್ಕೆ ಮುಕ್ತವಾಗಿ ಶ್ಲಾಘಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರ ಜನತಾ ಕರ್ಫ್ಯೂ ಉಪಕ್ರಮವನ್ನು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಭಾರತದ ಪ್ರತಿನಿಧಿ ಹೆಂಕ್ ಬೆಕೆಡಮ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

“ಜನತಾ ಕರ್ಫ್ಯೂ ಅಳವಡಿಸಿಕೊಳ್ಳುವ ಮೂಲಕ ಭಾರತ ಕೊರೊನಾ ನಿರ್ಮೂಲನೆಗೆ ಪಣ ತೊಟ್ಟಿದೆ. ಈ ಮೂಲಕ ಜನರು ಒಬ್ಬರಿಗೊಬ್ಬರು ಅಂತರ ಕಾಯ್ದುಕೊಳ್ಳುವುದರಿಂದ ಕೊರೊನಾ ವೈರಸ್ ತಡೆಯುವುದನ್ನು ತಡೆದುಕೊಳ್ಳಬಹುದು. ಮೋದಿಯವರ ಈ ಕರೆಯನ್ನು ನಾವು ಸ್ವಾಗತಿಸುತ್ತೇವೆ. ಕೊರೊನಾವನ್ನು ನಿಯಂತ್ರಿಸುವುದಕ್ಕೆ ಈ ಉಪಕ್ರಮ ಅತ್ಯಂತ‌ ಪರಿಣಾಮಕಾರಿ. ಇದನ್ನು ಇತರ ದೇಶಗಳೂ ಅನುಸರಿಸಬೇಕು” ಎಂದು ಮೋದಿ ಅವರ ಭಾಷಣದ ನಂತರ ಡಬ್ಲ್ಯುಎಚ್‌ಒ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಬೆಕೆಡಮ್ ಹೇಳಿದ್ದಾರೆ.

ಇದು ಕೈ-ನೈರ್ಮಲ್ಯದ ಜೊತೆಗೆ, ಒಬ್ಬರನ್ನೊಬ್ಬರು ತೋಳುಗಳಲ್ಲಿ ಅಪ್ಪುವುದು, ಕೆಮ್ಮು ಮತ್ತು ಸೀನುವಿಕೆಯ‌ ಮೂಲಕ ವೈರಸ್ ಹರಡುವುದನ್ನು ತಡೆಯುತ್ತದೆ. ಇಂಥಾ ಕ್ರಮಗಳನ್ನು ಎಲ್ಲರೂ ಒಟ್ಟಾಗಿ ಸಾಮಾಜಿಕ ಜವಾಬ್ದಾರಿ ವಹಿಸಿಕೊಂಡು ಮಾಡುವುದರಿಂದ ಪ್ರಯೋಜನವಿದೆ. ಕೊರೊನಾ ಹರಡುವುದನ್ನು ತಪ್ಪಿಸಲು ಇದು ಉತ್ತಮ ಯೋಜನೆ. ನಾವು ಒಬ್ಬರಿಗೊಬ್ಬರು ದೂರವನ್ನು ಕಾಪಾಡಿಕೊಳ್ಳುತ್ತಿದ್ದರೂ ಸಹ, ಇದನ್ನು ಸರಿಯಾದ ರೀತಿಯಲ್ಲಿ ಮಾಡಲು ಉತ್ತೇಜಿಸುತ್ತದೆ. ಜನರನ್ನು ಹಲವು ನಿಯಂತ್ರಣದ ಮೂಲಕ ಒತ್ತಾಯಿಸುವುದರ ಬದಲು ಜನರ ಮನಸ್ಸನ್ನು ಗೆದ್ದು ಇಡೀ‌ ದೇಶವೇ ಕೊರೊನದ ವಿರುದ್ದ ಹೋರಾಡುವಂತೆ ಮೋದಿ‌ ಮಾಡಿದ್ದಾರೆ ಎಂದು ಬೆಕೆಡಮ್ ಹೇಳಿದ್ದಾರೆ.‌

ನೋವೆಲ್ ಕರೋನವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ `ಜನತಾ ಕರ್ಫ್ಯೂ ‘ಆಯ್ಕೆ ಮಾಡಿಕೊಳ್ಳುವಂತೆ ದೇಶದ ಜನರನ್ನು ಹುರಿದುಂಬಿಸಿದ್ದರು.

ಶುಕ್ರವಾರದ ಹೊತ್ತಿಗೆ, 20 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 195 -ಕೊರೊನಾ ಪ್ರಕರಣ ಬೆಳಕಿಗೆ ಬಂದಿದೆ. ಇದರಲ್ಲಿ 163 ಮಂದಿ ಭಾರತೀಯರು, 32 ವಿದೇಶಿ ಪ್ರಜೆಗಳಾಗಿದ್ದಾರೆ.

ಇದುವರೆಗೆ 19 ಮಂದಿ, ವಲಸೆ ಬಂದ ಒಬ್ಬರು ಸೇರಿ 20 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ದೇಶದಲ್ಲಿ 5 ಸಾವುಗಳು ವರದಿಯಾಗಿವೆ.

ಇಟಲಿ, ಇರಾನ್ ಶ್ಲಾಘನೆ:

ಮೋದಿಯವರ ಜನತಾಕರ್ಫ್ಯೂಗೆ ಇರಾನ್ ಹಾಗೂ ಇಟಲಿ ಶ್ಲಾಘನೆ ವ್ಯಕ್ತಪಡಿಸಿದೆ. ನಮ್ಮ‌ದೇಶದಲ್ಲಿ ಜನರನ್ನು ಮನೆಯಿಂದ ಹೊರಬರದಂತೆ ಎಚ್ಚರಿಸಿದರೂ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಈಗ ಅದರ ಫಲ ಅನುಭವಿಸುತ್ತಿದ್ದೇವೆ.‌ ಆದರೆ ಭಾರತೀಯರು ಮೋದಿಯ ಕರೆಯಂತೆ ಕರ್ಫ್ಯೂಗೆ ಬೆಂಬಲ‌‌ ಸೂಚಿಸಿ ಕೊರೊನಾದ ವಿರುದ್ಧ ಯುದ್ಧಕ್ಕೆ ಸಜ್ಜಾಗಿದ್ದಾರೆ ಎಂದು ಹೇಳಿದೆ.

Tags

Related Articles

FOR DAILY ALERTS
Close