ಪ್ರಚಲಿತ

ಪ್ರಧಾನಿ ಮೋದಿಯವರ ಹನ್ನೊಂದು ಮಹಾದಂಡ ನಾಯಕರ ಕೊರೊನಾ ಕಾರ್ಯಾಚರಣೆ ಹೇಗಿದೆ ಗೊತ್ತಾ? ಕೊರೊನಾ ನಿಯಂತ್ರಣದ ಹಿಂದಿದೆ ಟೀಂ ಮ್ಯಾಜಿಕ್…!

ಚೀನಾದ ವೂಹಾನ್‍ನಲ್ಲಿ ಆರಂಭವಾದ ಕೊರೊನಾ ಎಂಬ ಈ ಭಯಾನಕ ವೈರಸ್ ಇಡೀ ವಿಶ್ವವನ್ನೇ ನಡುಗಿಸಿಬಿಟ್ಟಿದೆ.. ಇಡೀ ವಿಶ್ವಕ್ಕೆ ಈ ಭಯಾನಕ ವೈರಸ್ ಕಂಟಕವಾಗಿ ಕಾಡಿದ್ದು, ಚೀನಾ ಜಗತ್ತಿಗೆ ಮಾರಕವಾಗಿರುವ ಕೊರೊನಾ ವೈರಸ್‍ನ್ನು ರಫ್ತು ಮಾಡಿದೆ. ಈ ಭೀಕರ ವೈರಸ್‍ನಿಂದಾಗಿ ಜಗತ್ತಿನ 210 ರಾಷ್ಟ್ರಗಳು ನಲುಗಿ ಹೋಗಿದೆ. ಅಮೆರಿಕಾ, ಫ್ರಾನ್ಸ್, ಇಟಲಿಯಲ್ಲಿ ಸಾವಿನ ಕೇಕೆ ಕೇಳುತ್ತಿದೆ. ವಿಶ್ವದಾದ್ಯಂತ 1 ಲಕ್ಷ ಮೂವತ್ತು ಸಾವಿರಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಳ್ಳುವಂತಾಗಿದೆ. 20 ಲಕ್ಷಕ್ಕೂ ಅಧಿಕ ಮಂದಿ ಕೊರೊನಾ ವೈರಸ್‍ನಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಹನ್ನೆರಡು ಸಾವಿರಕ್ಕೂ ಅಧಿಕ ಜನರಿಗೆ ಸೋಂಕು ಹರಡಿದ್ದು 400ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಈ ವೈರಸ್‍ನ್ನು ಭಾರತದಿಂದ ನಿರ್ಮೂಲನೆ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಪಣತೊಟ್ಟಿದ್ದಾರೆ. ಜನರ ಜೀವನಕ್ಕಿಂತ ಜೀವನವೇ ನಮಗೆ ಮುಖ್ಯ ಎಂದು ಕೊಂಡು ಪ್ರಧಾನಿ ಮೋದಿ ಕಠಿಣಾತಿ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.

ಹೌದು… ಇಟಲಿ, ಫ್ರಾನ್ಸ್, ಅಮೆರಿಕಾದಂತಹ ರಾಷ್ಟ್ರಗಳಲ್ಲಿ ದಿನೇ ದಿನೇ ಸಾವಿನ ಹಾಹಾಕಾರ ಕೇಳುತ್ತಿದೆ. ಭಾರತಕ್ಕೆ ಈ ವೈರಸ್ ಕಾಲಿಡುತ್ತಲೇ ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ಒಂದು ಬಹುದೊಡ್ಡ ನಿರ್ಧಾರ ಎಂಟು ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು ಹರಡುವುದನ್ನು ತಡೆಗಟ್ಟಿತ್ತು. ಆದರೂ ಭಾರತದಲ್ಲಿ ಕೆಲವರ ನಿರ್ಲಕ್ಷ್ಯದಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. 21 ದಿನಗಳ ಕಾಲ ಲಾಕ್‍ಡೌನ್ ಘೋಷಿಸಿದಿದ್ದರೂ ದಿನದಿಂದ ದಿನಕ್ಕೆ ಸೋಂಕಿತ ಸಂಖ್ಯೆ ಹೆಚ್ಚಾಗಿರುವ ಹಿನ್ನಲೆ ಮತ್ತೆ ಪ್ರಧಾನಿ ನರೇಂದ್ರ ಮೋದಿ ಮೇ 3 ರರವೆಗೆ ಲಾಕ್‍ಡೌನ್ ಅನ್ನು ಮುಂದುವರಿಸಿದ್ದಾರೆ. ಇದರಿಂದಾಗಿ ಸೋಂಕಿತರ ಸಂಖ್ಯೆ ಕಡಿಮೆಯಾಗವ ಸಾಧ್ಯತೆ ಇದೆ. ಸರ್ಕಾರದ ನಿಯಮವನ್ನು ಪಾಲಿಸಿ ಮನೆಯಲ್ಲಿಯೇ ಇದ್ದು ಕೊರೊನಾ ಮಹಾ ವೈರಸ್ ನ್ನು ಒದ್ದೋಡಿಸಬೇಕು. ಅಮೆರಿಕಾ, ಫ್ರಾನ್ಸ್, ಇಟಲಿಯ ಸ್ಥಿತಿ ಭಾರತಕ್ಕೆ ಬರದಂತೆ ಮುಂಜಾಗ್ರತಾ ಕ್ರಮವನ್ನು ಅನುಸರಿಸಬೇಕು. ಹೀಗಾಗಿ ಭಾರತದಿಂದ ಈ ಮಹಾಮಾರಿ ವೈರಸ್ ನ್ನು ಒದ್ದೋಡಿಸಬೇಕೆಂದು ಮೋದಿಯವರು ಪಣತೊಟ್ಟಿದ್ದು 11 ಮಹಾದಂಡನಾಯಕರ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದಾರೆ.

ಮಾರಣಾಂತಿಕ ಸಾಂಕ್ರಾಮಿಕ ರೋಗ ಕೊರೋನವೈರಸ್ ಅನ್ನು ಭಾರತದಿಂದ ನಿರ್ಮೂಲನೆಗೊಳಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ 11 ಮಂದಿ ಮಹಾದಂಡನಾಯಕರ ಪಡೆಯನ್ನು ಸಿದ್ಧಗೊಳಿಸಿದ್ದಾರೆ. ಈ 11 ಮಹಾದಂಡನಾಯಕರು ದಿನದ 24 ಗಂಟೆಯೂ ಅವಿರತವಾಗಿ ಪರಿಶ್ರಮ ಪಡುತ್ತಿದೆ. ಕೊರೋನವೈರಸ್ ಬಗೆಗಿನ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನಿಮಿಷದಿಂದ ನಿಮಿಷಕ್ಕೆ ಪರಿಶೀಲನೆಗಳನ್ನು ನಡೆಸುತ್ತಿದೆ ಈ ತಂಡ. ವಿಶ್ವದ ಎರಡನೇ ಅತಿದೊಡ್ಡ ಜನಸಂಖ್ಯೆಯ ದೇಶವಾದ ಭಾರತದಲ್ಲಿ ಸಾಂಕ್ರಾಮಿಕ ರೋಗವು ಹರಡದಂತೆ ತಡೆಗಟ್ಟುವುದು ಅತ್ಯಂತ ಅನಿವಾರ್ಯವಾಗಿದೆ. ಹೀಗಾಗಿ 21 ದಿನಗಳ ಕಾಲ ಲಾಕ್ ಡೌನ್ ಮುಗಿದ ಬಳಿಕ ಮತ್ತೆ 19 ದಿನಗಳ ಕಾಲ ಭಾರತವನ್ನು ಲಾಕ್‍ಡೌನ್ ಮಾಡುವ ಘೋಷಣೆ ಮಾಡುವುದರಿಂದ ಹಿಡಿದು ಪ್ರತಿಯೊಂದು ಕಾರ್ಯಗಳನ್ನು ಕೂಡ ಮೋದಿ ಮತ್ತು ಅವರ ತಂಡ ಅತ್ಯಂತ ಯೋಜನಾಬದ್ಧವಾಗಿ ಮಾಡುತ್ತಿದೆ. ಮೊದಲ ಹಂತದ ಲಾಕ್ಡೌನ್ ಭಾರತದಲ್ಲಿ ಬಹುತೇಕ ಯಶಸ್ವಿಯಾಗಿದ್ದು ಇನ್ನು ಎರಡನೇ ಹಂತದ ಲಾಕ್‍ಡೌನ್ ಅನ್ನು ಜನರು ಕಟ್ಟುನಿಟ್ಟಾಗಿ ಪಾಲಿಸಿದರೆ ಖಂಡಿತಾ ಈ ಮಹಾಮಾರಿ ವೈರಸ್‍ನ್ನು ಒದ್ದೋಡಿಸಬಹುದು.

ತಜ್ಞರ ಆಳವಾದ ಸಂಶೋಧನೆ ಮತ್ತು ಸಹಮತದ ಅಭಿಪ್ರಾಯದ ಆಧಾರದ ಮೇಲೆಯೇ ಪ್ರಧಾನಿ ನರೇಂದ್ರ ಮೋದಿಯವರು ಕೊರೋನಾವೈರಸ್ ವಿರುದ್ಧದ ಕ್ರಮಗಳನ್ನು ಘೋಷಣೆ ಮಾಡುತ್ತಿದ್ದಾರೆ. ದೇಶದಲ್ಲಿ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ದಿನದಿಂದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಕೆಲಸದ ಅವಧಿಯನ್ನು 17-18 ಗಂಟೆಗಳಿಗೆ ಹೆಚ್ಚಿಸಿಕೊಂಡಿದ್ದಾರೆ. ಬೆಳಗ್ಗೆ 3 ಗಂಟೆಯವರೆಗೂ ಅವರು ಕಾರ್ಯ ಮಾಡುತ್ತಿದ್ದಾರೆ. ಮಧ್ಯರಾತ್ರಿಯವರೆಗೂ ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಲುವಾಗಿ ರಚಿಸಲಾದ ತಂಡಗಳು ತೆಗೆದುಕೊಂಡ ನಿರ್ಧಾರಗಳ ಅನುಷ್ಠಾನದ ಬಗ್ಗೆ ಪ್ರಧಾನಿಯವರು ಪರಿಶೀಲನೆಗಳನ್ನು ನಡೆಸುತ್ತಿರುತ್ತಾರೆ.

ಕೊರೋನವೈರಸ್‍ಗೆ ಸಂಬಂಧಿಸಿದಂತೆ 11 ಮಂದಿ ತಜ್ಞರ ತಂಡ ಅವರಿಗೆ ಸಲಹೆ ಸೂಚನೆಗಳನ್ನು ನೀಡುತ್ತಿದೆ. ಈ ತಂಡದಲ್ಲಿ ವೈದ್ಯರುಗಳು, ಜೈವಿಕ ವಿಜ್ಞಾನಿಗಳು ಸಾಂಕ್ರಾಮಿಕ ರೋಗದ ತಜ್ಞರುಗಳು, ಅರ್ಥಶಾಸ್ತ್ರಜ್ಞರುಗಳು ಇದ್ದಾರೆ. ಈ ಮಹಾಮಾರಿಯನ್ನು ಒದ್ದೋಡಿಸಲು ಪ್ರಧಾನಿ ಜೊತೆ ಕಾಣದ ಕೈಗಳು ಕೆಲಸಮಾಡುತ್ತಿದೆ. ಅವರು ಇಡುತ್ತಿರುವ ಒಂದೊಂದು ಹೆಜ್ಜೆಯೂ ಅತ್ಯಂತ ನಿರ್ಣಾಯಕವಾಗಿದೆ. ಹಾಗಾದರೆ ಪ್ರಧಾನಿ ನರೇಂದ್ರ ಮೋದಿಯವರು ನೇಮಕ ಮಾಡಿರುವ ಆ 11 ಮಹಾದಂಡನಾಯಕರು ಯಾರು?! ಮಾರ್ಚ್ 29ರಂದು ಮೋದಿ ಮಹಾದಂಡನಾಯಕರನ್ನು ರಚನೆ ಮಾಡಿದ್ದು ಕೊರೊನಾವನ್ನು ನಿಯಂತ್ರಿಸುವಲ್ಲಿ ಮೋದಿಜೀ ಜೊತೆ ಈ 11 ಮಹಾದಂಡನಾಯಕರು ಶ್ರಮಿಸುತ್ತಿದ್ದಾರೆ. ಇಡೀ ದೇಶದಲ್ಲಿ ಕೊರೊನಾ ಕಾರ್ಯಾಚರಣೆಗೆ ಮುಂದಾಗಿರುವ ಈ ಟಾಸ್ಕ್ ಫೋರ್ಸ್ ಎಲ್ಲೆಡೆ ಹದ್ದಿನ ಕಣ್ಣಿಟ್ಟಿದೆ. ಸರ್ಕಾರ ಯಾವುದೇ ಆದೇಶ ಹೊರಡಿಸುವ ಮುನ್ನ ಈ ಟಾಸ್ಕ್ ಫೋರ್ಸ್ ಪೂರ್ವ ಸಿದ್ಧತೆ ನಡೆಸುತ್ತೆ! ಬಳಿಕವಷ್ಟೇ ಸರ್ಕಾರದ ನಿರ್ಧಾರವನ್ನು ಜನತೆಗೆ ತಿಳಿಸುತ್ತೆ…

ಹಾಗಾದರೆ ಟಾಸ್ಕ್ ಫೋರ್ಸ್‍ನಲ್ಲಿರುವ 11 ಮಹಾದಂಡನಾಯಕರು ಯಾರು?!

ರಾಜೀವ್ ಗೌಬಾ:  ಸಂಪುಟ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಇವರಿಗೆ ಮೋದಿಯ ಕೊರೊನಾ ಟಾಸ್ಕ್ ಫೋರ್ಸ್‍ನಲ್ಲಿ ತಂಡದ ಮುಂದಾಳತ್ವದ ಜವಾಬ್ದಾರಿ ವಹಿಸಲಾಗಿದೆ.
ಪ್ರೀತಿ ಸುಧಾನ್:  ಆರೋಗ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಟಾಸ್ಕ್ ಪೋರ್ಸ್‍ನಲ್ಲಿ ಇವರಿಗೆ ರಾಜ್ಯಗಳಿಗೆ ನಿರ್ದೇಶನ ನೀಡುವ ಜವಾಬ್ದಾರಿಯನ್ನು ನೀಡಲಾಗಿದೆ.
ಅಜಯ್ ಬಲ್ಲಾ:  ಗೃಹಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿಸುತ್ತಿದ್ದು ಕೊರೊನಾ ಟಾಸ್ಕ್ ಫೋರ್ಸ್‍ನಲ್ಲಿ ರಾಜ್ಯಗಳಿಗೆ ಕಾನೂನು ಸಂಬಂಧಿದ ನಿರ್ದೇಶನ ನೀಡುತ್ತಿದ್ದಾರೆ.
ಪಿಕೆ ಮಿಶ್ರಾ:  ಪ್ರಧಾನಿ ಕಾರ್ಯದರ್ಶಿಯಾಗಿದ್ದಾರೆ. ಟಾಸ್ಕ್ ಫೋರ್ಸ್‍ನಿಂದ ಮಾಹಿತಿ ಪಡೆದು ಪ್ರಧಾನಿ ಮೋದಿಜೀಗೆ ತಲುಪಿಸುವುದು ಇವರ ಜವಾಬ್ದಾರಿ.
ಪಿಕೆ ಸಿನ್ಹಾ: ಪ್ರಧಾನಿಯ ಪ್ರಧಾನ ಸಲಹೆಗಾರ. ಕೊರೊನಾ ನಿಯಂತ್ರಣದಲ್ಲಿ ಮೋದಿಜೀಗೆ ಸಲಹೆ ನೀಡುವ ಜವಬ್ದಾರಿಯನ್ನು ಹೊಂದಿದ್ದಾರೆ.
ಅಮರ್‍ಜಿತ್ ಸಿನ್ಹಾ: ಪ್ರಧಾನಿಯ ಕಾರ್ಯದರ್ಶಿಯಾಗಿದ್ದು ಟಾಸ್ಕ್ ಫೋರ್ಸ್‍ನಲ್ಲಿ ಕೊರೊನಾ ನಿಯಂತ್ರಣ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿವೇಕ್ ಪೌಲ್: ನೀತಿ ಆಯೋಗದ ಸದಸ್ಯರಾಗಿದ್ದಾರೆ. ಇವರು ಕೊರೊನಾ ನಿಯಂತ್ರಣದ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ಪ್ರಧಾನಿ ಮೋದಿಗೆ ಮಾಹಿತಿ ನೀಡುವ ಜವಾಬ್ದಾರಿ ಹೊಂದಿದ್ದಾರೆ.
ಕೆ ವಿಜಯ ರಾಘವನ್: ಪ್ರಧಾನ ವೈಜ್ಞಾನಿಕ ಸಲಹೆಗಾರಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು ಕೊರೊನಾ ತಡೆಯುವಿಕೆಯ ಬಗ್ಗೆ ಪ್ರಧಾನಿಗೆ ಸಲಹೆ ನೀಡುತ್ತಾರೆ.
ಅಜಿತ್ ದೋವಲ್: ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಇವರು ಕೊರೊನಾ ಕಡಿವಾಣ ಹಾಕುವ ಸಮರದಲ್ಲಿ ಪ್ರಧಾನಿ ಮೋದಿಗೆ ಭದ್ರತಾ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.
ಬಿಪಿನ್ ರಾವತ್: ಮೂರು ಸೇನಾಪಡೆಗಳ ಮುಖ್ಯಸ್ಥರಾಗಿದ್ದು ಕೊರೊನಾ ನಿಯಂತ್ರಿಸಲು ಸೇನಾ ನೆರವು ನೀಡುತ್ತಿದ್ದಾರೆ.
ರಾಜ್‍ನಾಥ್‍ಸಿಂಗ್: ಕೇಂದ್ರ ರಕ್ಷಣಾ ಸಚಿವರಾಗಿರುವ ಇವರು ಕೇಂದ್ರ ಸಚಿವರ ಟಾಸ್ಕ್ ಫೋರ್ಸ್‍ನ ಮುಖ್ಯಸ್ಥರಾಗಿದ್ದಾರೆ.

ಕೊರೊನಾ ನಿಯಂತ್ರಿಸುವಲ್ಲಿ ಮೋದಿಯ ಟಾಸ್ಕ್ ಫೋರ್ಸ್‍ನಲ್ಲಿ ಈ 11 ಮಹಾದಂಡನಾಯಕರು ಹದ್ದಿನ ಕಣ್ಣಿಟ್ಟು ಕೊರೊನಾ ವಿರುದ್ಧ ಹೋರಾಟದಲ್ಲಿ ಅವಿರತ ಪಡುತ್ತಿದ್ದಾರೆ.. ಮೋದಿಜೀಯ ಒಂದು ಮಾತಿಗೆ ಈ 11 ಮಹಾದಂಡನಾಯಕರು ಅತ್ಯಂತ ಚಾಕಚಕ್ಯತೆಯಿಂದ ಕೆಲಸ ಮಾಡಿ ಮುಗಿಸುವ ಅತ್ಯಂತ ಚತುರರ ದಂಡೇ ಇಲ್ಲಿದೆ. ತಮ್ಮ ಸುದೀರ್ಘ ಚಾಣಾಕ್ಷತನದಿಂದ ನೆಚ್ಚಿನ ಅಧಿಕಾರಿಗಳಾಗಿದ್ದಾರೆ. ಕೊರೊನಾ ವೈರಸ್‍ನಿಂದ ಸೃಷ್ಟಿಯಾದ ಬಿಕ್ಕಟ್ಟಿಗೆ ಸಂಬಂಧಿಸಿದ ಎಲ್ಲಾ ವಿಚಾರಗಳಲ್ಲೂ ಈ ಟಾಸ್ಕ್ ಫೋರ್ಸ್ ಕೆಲಸ ಮಾಡುತ್ತಿದೆ. ಒಟ್ಟಾರೆಯಾಗಿ ಪ್ರಧಾನಿ ಮೋದಿ ಹಾಗೂ ಅವರ ತಂಡಕ್ಕೆ ಇಡೀ ದೇಶದ ರಕ್ಷಣೆಯ ಹೊರೆ ಅವರ ಮೇಲಿದೆ. ಹಗಲು ರಾತ್ರಿ ಎನ್ನದೆ ಕೊರೊನಾವನ್ನು ಒದ್ದೋಡಿಸಬೇಕೆಂದು ಅವಿರತ ಶ್ರಮಪಡುತ್ತಿದೆ. ಅದರ ಜೊತೆ ವೈದ್ಯರು, ನರ್ಸ್‍ಗಳು, ಪೊಲೀಸರು ತಮ್ಮ ಜೀವವನ್ನು ಪಣಕ್ಕಿಟ್ಟು ನಮ್ಮ ರಕ್ಷಣೆಯನ್ನು ಮಾಡುತ್ತಿದ್ದಾರೆ. ಅದರ ಹೊರತಾಗಿಯೂ ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಮನೆಯಿಂದ ಹೊರಬಂದು ನಿಮಗಲ್ಲದೆ ಇತರರಿಗೂ ಸೋಂಕು ಹರಡಿಸುವುದು ತಪ್ಪು. ದಯವಿಟ್ಟು ಮನೆಯಲ್ಲಿಯೇ ಇದ್ದು ಕೊರೊನಾ ಮಹಾಮಾರಿಯನ್ನು ಒದ್ದೋಡಿಸೋಣ…ಕೊರೊನಾ ವಿರುದ್ಧ ಹೋರಾಟಲ್ಲಿ ಸರ್ಕಾರದ ಜೊತೆ ಕೈ ಜೋಡಿಸೋಣ…

Tags

Related Articles

FOR DAILY ALERTS
Close