ಪ್ರಚಲಿತ

ಪ್ರಧಾನಿ ಮೋದಿಯ ನೋಟು ನಿಷೇಧದ ಪ್ರಕ್ರಿಯೆ ಈ ಹತ್ತು ಜನರ ಬುಡವನ್ನೇ ಹಿಡಿದು ಅಲುಗಾಡಿಸಿದೆ!!

ಮೋದಿ ಸರಕಾರದಿಂದ ಐತಿಹಾಸಿಕ ನಿರ್ಧಾರವೊಂದು ಇದೇ ಒಂದು ವರ್ಷದ ಹಿಂದಾಗಿತ್ತು! ವೈಯುಕ್ತಿಕವಾಗಿ ಹೇಳಬೇಕೆಂದರೆ, ‘ನೋಟು ರದ್ದತಿ’ ಎಂಬ
ನಿರ್ಧಾರವನ್ನು ತೆಗೆದುಕೊಳ್ಳುವ ತಾಕತ್ತನ್ನು ಬೇರೆ ಯಾರೇ ಪ್ರಧಾನಿಯಾಗಿದ್ದಿದ್ದರೂ ಬಹುಷಃ ಇರುತ್ತಿರಲಿಲ್ಲ. ಡಿಮಾನಿಟೈಸೇಷನ್ ಎಂಬ ಅಸ್ತ್ರವೊಂದು ರಾಷ್ಟ್ರ
ವಿರೋಧಿಗಳಿಗೆ, ಭ್ರಷ್ಟಾಚಾರಿಗಳಿಗೆ, ಉಗ್ರರಿಗೆ ಬೇರಾವ ರೀತಿಯಲ್ಲಿಯೂ ತಪ್ಪಿಸಿಕೊಳ್ಳಲಾಗದಂತಹ ಹೊಡೆತವನ್ನು ನೀಡಿದೆಯಷ್ಟೇ! ಅದೆಷ್ಟೋ ಮಿಲಿಯನ್ ಗಟ್ಟಲೇ ಕಪ್ಪು ಹಣದ ಲೆಕ್ಕ ಸಿಕ್ಕಿದ್ದಲ್ಲದೇ, ಅದೆಷ್ಟೋ ಕಡೆಗಳಲ್ಲಿ ತೆರಿಗೆ ಇಲಾಖೆಯವರು ದಾಳಿ ಕೂಡ ನಡೆಸಿದ್ದರು!

ಒಬ್ಬ ಸಾಮಾನ್ಯನೂ ಸಹ ಮೋದಿಯ ನಡೆಯನ್ನು ಶ್ಲಾಘಿಸಿದ್ದರೆ ಪೇಯ್ಡ್ ಮೀಡಿಯಾಗಳು ಹಾಗೂ ಸೆಕ್ಯುಲರ್ ಪತ್ರಕರ್ತರು ಹೇಗಾದರೂ ಮಾಡಿ ಮೋದಿಯ ನಡೆ ವಿಫಪವಾಗಿದೆಯೆಂದೆ ತೋರಿಸಲು ಇನ್ನಿಲ್ಲದ ಹರಸಾಹಸ ಪಟ್ಟು ಸೋತರು! ಮಾಧ್ಯಮಗಳು ತೋರಿಸಸಿದ ಹಾಗೆ, ಈ ಡಿಮಾನಿಟೈಸೇಷನ್ ನಿಂದ ಹೊಡೆತ ಬಿದ್ದಿದ್ದು ಸಾಮಾನ್ಯನಿಗಲ್ಲ, ಬದಲಿಗೆ ಕೇವಲ ಹತ್ತು ಜನಗಳಿಗೆ!

1. ರಾಜಕಾರಣಿಗಳು

ರಾಜಕೀಯ ಪಕ್ಷಗಳಿಗೆ ಇನ್ನಿಲ್ಲದಂತೆ ಹೊಡೆತ ನೀಡಿದೆ ಮೋದಿಯ ನಿರ್ಧಾರ! ದುಡ್ಡು ಮಾಡುವುದಕ್ಕೆಂದೇ ರಾಜಕೀಯ ಮಾಡುವ ಒಂದಷ್ಟು ರಾಜಕಾರಣಿಗಳ ಗಂಟು ಇಟ್ಟಲ್ಲೇ ಕರಗಿ ಹೋಗಿತ್ತು! ಮುಂಬರುವ ಐದು ಚುನಾವಣೆಗಳಿಗೆ ದುಡ್ಡನ್ನು ಸುರಿದು ಗೆಲ್ಲಬೇಕೆಂದು ಹೊರಟಿದ್ದ ಅದೆಷ್ಟೋ ರಾಜಕಾರಣಿಗಳ ಉಪಾಯವನ್ನು ಬುಡಮೇಲು ಮಾಡಿರುವ ಡಿಮಾನಿಟೈಸೇಷನ್ ಚುನಾವಣೆಯಲ್ಲಿ ನಡೆಯಬಹುದಾದ ಭ್ರಷ್ಟಾಚಾರವನ್ನು ತಡೆಗಟ್ಟಿದೆಯಷ್ಟೇ!
ಚುನಾವಣೆಯಲ್ಲಿ ದುಡ್ಡಿನ ಮೂಲಕವಲ್ಲ, ಬದಲಿಗೆ ಸೇವೆಯ ಮೂಲಕ ಗೆಲ್ಲಬೇಕಾದ ಅನಿವಾರ್ಯ ಪರಿಸ್ಥಿತಿ ರಾಜಕಾರಣಿಗಳಿಗೆದುರಾಗಿದೆಯಷ್ಟೇ!

Image result for indian national congress politicians with sonia gandh

2. ಉಗ್ರ ಸಂಘಟನೆಗಳು

ಉಗ್ರ ಸಂಘಟನೆಗಳಿಗೆ ಕೇವಲ ಅಂಧಧರ್ಮಶ್ರದ್ಧೆ ಮಾತ್ರವಲ್ಲ, ಬದಲಿಗೆ ರಾಷ್ಟ್ರ ವಿರೋಧಿ ಕೃತ್ಯಕ್ಕೆ ಹಣವೂ ಅಷ್ಟೇ ಅತ್ಯಾವಶ್ಯಕ! ಬಂಡಾಯಗಾರರನ್ನು ಸೃಷ್ಟಿಸಲು, ಶಸ್ತ್ರಾಸ್ತ್ರಗಳನ್ನು ಪೂರೈಸಲು, ಪ್ರತ್ಯೇಕತಾವಾದಿಗಳನ್ನು ಸೃಷ್ಟಿಸಲು.. ಒಮ್ಮೊಮ್ಮೆ ರಾಜಕೀಯ ನಾಯಕರಿಗೆ ಲಂಚ ಕೊಡುವುದಕ್ಕೂ ಕಪ್ಪು ಹಣ ಬೇಕೇ ಬೇಕು! ಕಾಶ್ಮೀರದಲ್ಲಿ ಈ ಹಿಂದೆ ಕಲ್ಲು ತೂರಾಟಗಾರರಿಗೂ ಹಣ ಕೈಗಿಡುತ್ತಿದ್ದ ಉಗ್ರ ಸಂಘಟನೆಗಳು ಧಾರಾಳವಾಗಿ ನೋಟು ಮುದ್ರಿಸುತ್ತಿತ್ತು! ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಕಪ್ಪು ಹಣ ಬಳಕೆಯಾಗುತ್ತಿದ್ದರೂ ಸಹ ಕೊನೆಗೆ ಕಲ್ಲು ತೂರಾಟಕ್ಕೂ ಇಂತಿಷ್ಟು ಹಣವೆಂದು ನಿಗದಿಪಡಿಸಿತ್ತು ಉಗ್ರ
ಸಂಘಟನೆ! ಆದರೆ, ಡಿಮಾನಿಟೈಸೇಷನ್ ಆದ ಮೇಲೆ ಕೆಲವೇ ದಿನಗಳಲ್ಲಿ ಕಾಶ್ಮೀರದಲ್ಲಿ ಇದ್ದಕ್ಕಿದ್ದಂತೆ ಕಲ್ಲು ತೂರಾಟ ನಿಂತಿತು! ಪ್ರತ್ಯೇಕತಾವಾದಿಗಳೂ ಸದ್ದಿಲ್ಲದೆ ಚದುರಿದರು!

Image result for terrorist

3. ಸಿನಿಮಾ ನಿರ್ಮಾಪಕರು ಹಾಗು ತಾರೆಗಳು

ಭಾರತದ ಸಿನಿಮಾ ಕ್ಷೇತ್ರದ ಜೊತೆ ಜೊತೆಗೇ ಬೆಳೆದು ಬಂದಿದೆ ಭೂಗತ ಪಾತಕಿಗಳ ಲೋಕ! ಅಚ್ಚರಿಯೆನಿಸಬಹುದು! ಆದರೆ, ಕಪ್ಪು ಹಣವನ್ನು ನಿಮಗೆ ಸುಲಭವಾಗಿ ಬಿಳಿಹಣವನ್ನಾಗಿಸಲು ಇರುವುದು ಇದೊಂದು ದಾರಿ! ಭೂಗತ ಪಾತಕಿಗಳ ಲೋಕದ ಕಪ್ಪು ಹಣವೆಲ್ಲ ಸಿನಿಮಾ ರಂಗದಲ್ಲಿ ಬಿಳಿಯಾಗುತ್ತದೆ! ಕೆಲವು ತಾರಾಗಣವೂ ಸಹ ಲಾಭದ ದುಡ್ಡನ್ನು ಅರ್ಧ ಬ್ಯಾಂಕಿಗೆ ವರ್ಗಾಯಿಸಿ, ಇನ್ನರ್ಧವನ್ನು ನೋಟಿನ ಮೂಲಕ ಇಟ್ಟುಕೊಂಡು ತನ್ಮೂಲಕ ತೆರಿಗೆ ವಂಚನೆಯನ್ನು ಧಾರಾಳವಾಗಿ ಮಾಡುತ್ತಿದ್ದದ್ದಕ್ಕೆ ಹೊಡೆತ ನೀಡಿದ್ದು ಇದೇ ಡಿಮಾನಿಟೈಸೇಷನ್!! ಅದಕ್ಕೆ, ಎಲ್ಲಿ ಮೋದಿ ನೋಟು ಬ್ಯಾನ್ ಎಂದರೂ, ಮಾಧ್ಯಮಗಳಲ್ಲಿ ಪತ್ರಕರ್ತರ ಜೊತೆಗೂಡಿ ಆರ್ಥಿಕ ತಜ್ಞರಾದರು ಕೆಲವು ನಿರ್ಮಾಪಕರು! ಕೆಲವು ತಾರಾಗಣಗಳು!

Related image

4. ಹವಾಲಾ ಡೀಲರ್ಸ್

ಕಪ್ಪು ಹಣವನ್ನು ರಾಷ್ಟ್ರಾದ್ಯಂತ ವರ್ಗಾಯಿಸಲಿರುವ ಪ್ರಸಿದ್ಧ ಹಾದಿಯಿದು! ಭಾರತ ಹಾಗೂ ಮಧ್ಯಮ ಪೂರ್ವ ದೇಶಗಳ ನಡುವೆ ಅವ್ಯಾಹತವಾಗಿ ನಡೆಯುತ್ತಿದ್ದ ಹವಾಲಾ ದಂಧೆ ಯಲ್ಲಿ ಚಾಲ್ತಿಯಲ್ಲಿದ್ದದ್ದು ಐನೂರು ಹಾಗೂ ಸಾವಿರ ರೂಗಳ ನೋಟುಗಳು! ಯಾವಾಗ ಭಾರತದ ಕರೆನ್ಸಿಗಳು ನಿಷೇಧವಾದವೋ ಸಾವಿರ ಕೋಟಿಗಟ್ಟಲೇ ನೋಟುಗಳು ಬರೀ ಕಾಗದದ ಹಾಳೆಗಳಂತಾದವು! ಕೊನೆ ಕೊನೆಗೆ ಇದ್ದಕ್ಕಿದ್ದ ಹಾಗೆ ಅಕ್ರಮ ಶಸ್ತ್ರ ಸಾಗಾಣಿಕೆಯೂ ನಿಂತಿತಲ್ಲದೇ, ಉಗ್ರ ಚಟುವಟಿಕೆಗಳೂ ತಕ್ಕಮಟ್ಟಿಗೆ ನಿಯಂತ್ರಣವಾಯಿತು!

Related image

5. ಭೂಮಾಫಿಯಾ

ರಿಯಲ್ ಎಸ್ಟೇಟ್ ಉದ್ಯಮದಲ್ಲಾದ ಅವ್ಯವಹಾರಕ್ಕೆ ಲೆಕ್ಕವಿಲ್ಲ ಬಿಡಿ! ಸರಕಾರೀ ಜಾಗಗಗಳನ್ನೂ ಸಹ ಕಬಳಿಸಿ, ತೆರಿಗೆಯನ್ನೂ ಕಟ್ಟದೇ ಪೇರಿಸಿದ್ದ ಹಣ ಕಸದ ಬುಟ್ಟಿ ಸೇರುವ ಹಾಗಾಗಿದ್ದು ಮತ್ತದೇ ಡಿಮಾನಿಟೈಸೇಷನ್ ನಿಂದ! ಹಣ ವರ್ಗಾವಣೆ ಮಾಡುವಾಗ, ಕಾನೂನಾತ್ಮಕವಾಗಿಯೇ ಮಾಡಬೇಕಾದ ಸಂದರ್ಭದಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸುತ್ತಿದ್ದರಲ್ಲದೇ, ಅತೀ ಕಡಿಮೆ ಬೆಲೆಯ ನಿವೇಶನಗಳಿಗೆ ಜಾಸ್ತಿ ಬೆಲೆ ಹಾಕಿಸಿ, ಭೂಜಾಗಗಳಿಗೂ ಸಹ ಕೋಟಿಗಟ್ಟಲೇ ಹಣವನ್ನು ಬೇಡಿಕೆಯಿಟ್ಟು ಅದೆಷ್ಟೋ ಅಕ್ರಮ ಮಾಡಿ ಗಳಿಸಿದ್ದ ಹಣವಷ್ಟೂ ಮಣ್ಣುಪಾಲಾದದ್ದು ಇದೇ ನಡೆಯಿಂದ! ದಾಖಲೆಗಳೊಲ್ಲಷ್ಟಿದ್ದ ಮೊತ್ತಕ್ಕೆ ಮಾತ್ರ ತೆರಿಗೆ ಕಟ್ಟುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿಗಾರರ ಕಪ್ಪು ಹಣದ ಅಷ್ಟೂ ಲೆಕ್ಕ ಸಿಗದೇ ಇದ್ದ ಕಾರಣ ಅನಿವಾರ್ಯವೇ ಆಗಿತ್ತು ನೋಟು ಬ್ಯಾನ್ ಪ್ರಕ್ರಿಯೆ!

Image result for land mafia

6. ಶ್ರೀಮಂತ ಕೃಷಿಕರು ಹಾಗೂ ಭೂ ಮಾಲೀಕರು

ಕೃಷಿಯಿಂದ ಬಂದ ಆದಾಯಕ್ಕೆ ತೆರಿಗೆ ಬೀಳದಿರುವುದು ಕೃಷಿಕರಿಗೆ ಅನುಕೂಲವಾಗಿದ್ದರೂ ಸಹ ಕೆಲವು ಭೂ ಮಾಲೀಕರು ಅಕ್ರಮವಾಗಿ ಗಳಿಸಿದ ಹಣವನ್ನು ಕೃಷಿಯಿಂದ ಬಂದದ್ದೆಂದು ದಾಖಲೆ ಸೃಷ್ಟಿಸುತ್ತಿದ್ದರು. ಇದಲ್ಲದೇ, ಕೃಷಿಯ ಹೆಸರಿನಲ್ಲಿ ರಾಜಕೀಯಕ್ಕೂ ಇಳಿದ ಶ್ರೀಮಂತ ಕೃಷಿಕರಿಗೂ ಹೊಡೆತ ಬಿದ್ದಿತ್ತು!

7. ನಕಲಿ ನೋಟುಗಳ ದರ್ಬಾರು

ಅದೆಷ್ಟೋ ವರ್ಷಗಳಿಂದಲೂ ಸಹ ಪಾಕಿಸ್ಥಾನ ಭಾರತದ ನೋಟುಗಳನ್ನು ಮುದ್ರಿಸಿ ನೇಪಾಳದ ಗಡಿಯಲ್ಲಿ ಚಲಾವಣೆಗೆ ತರುತ್ತಿದೆ ಎಂದು ಭಾರತದ ಗೂಢಾಚಾರ ಸಂಸ್ಥೆ ವರದಿ ಮಾಡಿತ್ತು. ಬಲೂಚಿನಸ್ಥಾನದಿಂದ ಭಾರತದ ಹಣವನ್ನು ಮುದ್ರಿಸಲಿಕ್ಕೆಂದೇ ಟನ್ ಗಟ್ಟಲೇ ಕಾಗದಗಳು ಪಾಕಿಸ್ಥಾನಕ್ಕೆ ಬರುತ್ತಿದ್ದವಲ್ಲದೇ, ಭಾರತದ ಮಾರುಕಟ್ಟೆಯಲ್ಲಿ ನಕಲಿ ನೋಟುಗಳ ಸಂಶಯವೂ ಬರದಷ್ಟು ಸೇರಿ ಹೋಗಿತ್ತು. ಎಲ್ಲಿ, ನೋಟು ನಿಷೇಧವಾಯಿತೋ, ಪಾಕಿಸ್ಥಾನಕ್ಕೂ ಸಹ ಹೊಡೆತ ನೀಡಿದ್ದರು ಮೋದಿ!

Related image

8. ಜೂಜುಕೋರರ ಹಾವಳಿ

ಜೂಜೆನ್ನುವುದು ಭಾರತದಲ್ಲಿ ಅಕ್ರಮವಾಗಿದ್ದರೂ ಸಹ, ಮಿಲಿಯನ್ ಗಟ್ಟಲೇ ಕಪ್ಪು ಹಣ ತಯಾರಾಗುತ್ತಿದ್ದದ್ದು ಇದರಲ್ಲಿಯೇ! ಕೋಟಿಗಟ್ಟಲೇ ಹಣವನ್ನು ಜೂಜಿಗೆ ಅಡವಿಟ್ಟ ಪರಿಣಾಮ ಭೂಗತ ಪಾತಕಿಗಳಿಗೆ ಹಣ ಆರಾಮಾಗಿಯೇ ಇಲ್ಲಿಂದ ವರ್ಗಾವಣೆಯಾಗುತ್ತಿತ್ತು. ನೋಟು ನಿಷೇಧದ ನಿಯಂತ್ರಣಕ್ಕೆ ಬಂತು ಜೂಜು!

9. ವಿದ್ಯಾನಿಲಯಗಳ ದಂಧೆ!

ಶಿಕ್ಷಣದ ಹೆಸರಿನಲ್ಲಿ ಅದೆಷ್ಟೋ ಡೊನೇಷನ್ನು, ಫೀಸುಗಳನ್ನು ತೆಗೆದುಕೊಂಡು ದಾಖಲೆಯಲ್ಲಿ ಸುಳ್ಳು ಮಾಹಿತಿಗಳನ್ನು ನೀಡಿ ತೆರಿಗೆ ವಂಚಿಸುವ ದಂಧೆ ಮಾತ್ರ
ಭಾರತದಲ್ಲಿ ಇನ್ನೂ ನಡೆಯುತ್ತಿದೆಯಾದರೂ ಸಹ, ನೋಟು ನಿಷೇಧದ ಬಳಿಕ ಈ ಎಲ್ಲಾ ವಿದ್ಯಾನಿಲಯಗಳ ದಾಖಲೆ ಸರಕಾರಕ್ಕೆ ಸಿಕ್ಕಿತು! ಅಲ್ಲದೇ, ಹಣದ ರೂಪದಲ್ಲಿ ಡೊನೇಷನ್ ತೆಗೆದುಕೊಂಡ ಪರಿಣಾಮ ಶಿಕ್ಷಣದಂಧೆಗೆ ಕಡಿವಾಣ ಬಿತ್ತು.

10. NGO ಗಳೆಂಬ ಮಿಥ್ಯೆಗಳು!

Non profit organisation ಎಂಬ ಹೆಸರಿಟ್ಟುಕೊಂಡು ಮತಾಂತರ, ಭ್ರಷ್ಟಾಚಾರ, ನಕ್ಸಲ್ ಪೋಷಣೆ.. ಹೀಗೆ ದೇಶಕ್ಕೆ ಮಾರಕವಾಗಿದ್ದ ಅದೆಷ್ಟೋ NGO ಗಳಿಗೆ ಹಣ ಎಲ್ಲಿಂದ ಬರುತ್ತಿತ್ತೆಂಬುದೇ ಗೊತ್ತಾಗದಷ್ಟು ಹದಗೆಟ್ಟಿತ್ತು ವ್ಯವಸ್ಥೆ. ಎಲ್ಲಿ ಗೂಢಾಚಾರ ಸಂಸ್ಥೆ ಇಂತಹ NGO ಗಳು ಹೊರದೇಶಗಳ ಜೊತೆ…ನಿರಂತರ ಸಂಪರ್ಕದಲ್ಲಿವೆಯೆಂಬ ವರದಿ ಸಿಕ್ಕಿತೋ, ಒಂದೊಂದೇ ದಾಖಲೆಗಳು ಹೊರಬರತೊಡಗಿದವು! ನೋಟು ನಿಷೇಧದ ಪ್ರಕ್ರಿಯೆ ಮಾತ್ರವಲ್ಲದೇ, ಅಧಿಕೃತವಾಗಿ ಇಂತಹ ಸಾವಿರಾರು NGO ಗಳನ್ನು ನಿಷೇಧ ಮಾಡಿದ್ದರ ಪರಿಣಾಮ, ಅವ್ಯಾಹತವಾಗಿ ನಡೆಯುತ್ತಿದ್ದ ನಕ್ಸಲ್ ಚಟುವಟಿಕೆ, ಮತಾಂತರಗಳು ನಿಶ್ಯಬ್ದವಾದವು.

Image result for fake NGO

ಮೋದಿಯವರ ಈ ನಡೆ ಐತಿಹಾಸಿಕ ನಿರ್ಧಾರವಾಗಿದ್ದದ್ದು ಇದೇ ಕಾರಣಕ್ಕೆ! ಮೋದಿಯ ಹೊರತಾಗಿ ಬೇರಾರಿಗೂ ಬಹುಷಃ ಇಂತಹ ಕ್ಲಿಷ್ಟಕರವಾದ ನಿರ್ಧಾರವನ್ನು ಕೈಗೊಳ್ಳುವಷ್ಟು ಧೈರ್ಯವಿಲ್ಲವೆನ್ನುವುದು ಸತ್ಯ! ಆಶ್ಚರ್ಯವೆಂದರೆ, ಶ್ರೀಸಾಮಾನ್ಯ ಮೋದಿಯ ನಡೆಗೆ ಅಭಿನಂದಿಸಿ ಪರವಾಗಿ ನಿಂತ! ಆದರೆ, ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದವರು, ಪ್ರಭಾವೀ ನಾಯಕರು ವಿರೋಧಿಸಿದರು! ರಾಷ್ಟ್ರ ವಿರೋಧಿಗಳ ವಿರೋಧಕ್ಕೂ ಕೊರತೆಯಿರಲಿಲ್ಲ. ಇಷ್ಟೇ ಅಲ್ಲದೇ, ಜಗತ್ತಿನಾದ್ಯಂತ ಮೋದಿಯ ನಡೆಯನ್ನು ಪ್ರಶಂಸಿಸಲಾಯಿತು! ಪ್ರಸಿದ್ಧ ಆರ್ಥಿಕ ತಜ್ಞರು ಶ್ಲಾಘಿಸಿದರು! ಇಷ್ಟಾದರೂ, ಮೋದಿಯ ನಡೆಯನ್ನು ಇನ್ನೂ ವಿರೋಧಿಸುತ್ತಿರುವವರಿಗೆ ಮೂರ್ಖರೆನ್ನದೇ ಬೇರೆ ವಿಧಿಯಿಲ್ಲವಷ್ಟೇ!

– ಪೃಥು ಅಗ್ನಿಹೋತ್ರಿ

Tags

Related Articles

Close