ಅಂಕಣ

ಪ್ರಧಾನಿ ಮೋದಿಯ ನೋಟು ನಿಷೇಧದ ಪ್ರಕ್ರಿಯೆಯ ನಂತರ ತೆರಿಗೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಗೊತ್ತೇ?! ವಿಶೇಷ ಕಾರ್ಯಾಚರಣೆ!

ನರೇಂದ್ರ ಮೋದಿಯವರ ಅನಾಣ್ಯೀಕರಣದಿಂದ ಏನು ಲಾಭವಾಯಿತು? ಇದರಿಂದ ಕಪ್ಪು ಹಣ ಪತ್ತೆಯಾಯಿತಾ? ಮೋದಿಗೆ ಹಳೆಯ 500, 1000 ರೂ. ಮುಖಬೆಲೆಯ ನೋಟು ರದ್ದುಗೊಳಿಸಿದ್ದರಿಂದ ಏನು ಲಾಭವಾಯಿತು? ಇದರಿಂದ ಕಪ್ಪು ಹಣ ಪತ್ತೆಯಾಯಿತಾ? ಮೋದಿ ಗುಡ್ಡ ಅಗೆದು ಇಲಿ ಹಿಡಿಯಲು ಹೊರಂಟಂತಾಯಿತು… ಆದ್ರೆ ಮೋದಿ ಗುಡ್ಡ ಅಗೆದದ್ದೇ ಬಂತು ಇಲಿ ಸಿಕ್ಕಿತಾ? ಈ ಮೋದಿ ನೋಟು ರದ್ದು ಮಾಡಿ ಈ ದೇಶವನ್ನೇ ಗಂಡಾಂತರಕ್ಕೆ ಸಿಲುಕಿಸಿದ್ರು. ಮೋದಿಗೆ ಇದೆಲ್ಲಾ ಬೇಕಿತ್ತಾ…. ಹ್ಹಹ್ಹಹ್ಹ….

ಹೌದು ಮೋದಿ ಹಳೆಯ 500,1000 ರೂ. ಮುಖಬೆಲೆಯ ನೋಟು ರದ್ದುಪಡಿಸಿದ ಬಳಿಕ ಇಂತಹಾ ನೂರಾರು ಪ್ರಶ್ನೆಗಳನ್ನು ಹಲವಾರು ಮಂದಿ ಪುಂಖಾನುಪುಂಖವಾಗಿ ಕೇಳಿದ್ದರು. ಹಾಗಾದರೆ ಮೋದಿಯ ಈ ಯೋಜನೆಯಿಂದ ಕಪ್ಪು ಹಣ ಸಿಕ್ಕಿದೆಯಾ? ಎಲ್ಲರಿಗೂ ಇದೇ ವಿಷಯದಲ್ಲಿ ಡೌಟು… ನೋಟು ನಿಷೇಧಗೊಂಡ ನಾಲ್ಕು ತಿಂಗಳ ಕಾಲ ಜನರು ಹಣಕ್ಕಾಗಿ ಪರದಾಡಿದರು ನಿಜ. ಆದರೆ ಆ ಬಳಿಕ ಎಲ್ಲವೂ ನಿಧಾನಕ್ಕೆ ಸರಿಯಾಗುತ್ತಾ ಬಂದಿತು. ಆದರೆ ಆರು ತಿಂಗಳ ಬಳಿಕ ನಡೆಯುತ್ತಿರುವ ಘಟನೆಗಳು ನಿಜವಾಗಿಯೂ ಕಪ್ಪು ಕುಳಗಳಿಗೆ ಶಾಖ್ ನೀಡುತ್ತಲೇ ಬರುತ್ತಿದೆ. ಮಜ ಇರುವುದು ಇಲ್ಲಿಯೇ?

ಯಾಕೆಂದರೆ ನಿಮಗೆ ಗೊತ್ತಿದೆಯೋ ಇಲ್ಲವೋ ಅನಾಣ್ಯೀಕರಣದಿಂದ ಕಂತೆಕಂತೆ ಕಪ್ಪು ಹಣ ಸಿಗುತ್ತಲೇ ಬರುತ್ತಿದೆ. ಮೋದಿ ತನ್ನ ಕೆಲಸ ಮಾಡಿ ಮುಗಿಸಿದರು. ಆದರೆ ಆದಾಯ ಇಲಾಖೆ, ಜಾರಿ ನಿರ್ದೇಶನಾಲಯದ ಕೆಲಸ ಆರಂಭವಾಗಿದೆಯಷ್ಟೆ. ಇನ್ನು ಸ್ವಲ್ಪ ದಿನ ಕಳೆಯಲಿ. ಕಪ್ಪು ಕುಳಗಳು ಖಂಡಿತಾ ಶಾಖ್‍ಗೊಳಗಾಗಲಿದ್ದಾರೆ. ಕಪ್ಪು ಹಣ ನಿಧಾನವಾಗಿ ಸಿಗುತ್ತಲೇ ಬರುತ್ತಿದೆ. ಆದರೆ ವಿಪರ್ಯಾಸವೇನು ಗೊತ್ತಾ? ಕಪ್ಪು ಹಣ ಸಿಕ್ಕಿರುವುದರ ಬಗ್ಗೆ ಯಾವುದೇ ಮಾಧ್ಯಮಗಳು ತುಟಿಕ್‍ಪಿಟಿಕ್ ಎನ್ನುತ್ತಿಲ್ಲ ಅಷ್ಟೆ.

ಇದೊಂದು ಸಣ್ಣ ಉದಾಹರಣೆ ಅಷ್ಟೆ. ಇಂತಾ ಸಾವಿರಾರು ಘಟನೆಗಳು ನಡೆಯುತ್ತಲೇ ಬರುತ್ತಿದೆ. ಒಂದಷ್ಟು ಕಪ್ಪು ಹಣ ಹೊರಬರುತ್ತಲೇ ಇದೆ. ಕಪ್ಪು ಹಣದ ವಿರುದ್ಧ ನಡೆಸಿದ ಸಂಗ್ರಾಮದಲ್ಲಿ ಮೋದಿ ನಿಧಾನವಾಗಿ ಗೆಲುವು ಸಾಧಿಸುತ್ತಲೇ ಬರುತ್ತಿದ್ದಾರೆ…

ಉತ್ತರ ಪ್ರದೇಶದ ಆಗ್ರಾದಲ್ಲಿ ಕೆ.ಎಸ್. ಆಯಿಲ್ ಮಿಲ್ ಎನ್ನುವ ಸಾಸಿವೆ ಎಣ್ಣೆಯ ದೊಡ್ಡದಾದ ಕಂಪೆನಿಯೊಂದಿದೆ. ಅದರ ಮಾಲಕನ ಹೆಸರು ಸಂಜಯ್ ಅಗರ್ವಾಲ್. ಈ ಕಂಪೆನಿಯಲ್ಲಿ ಏನಿಲ್ಲವೆಂದರೂ ಬರೋಬ್ಬರಿ 6000ಕ್ಕೂ ಅಧಿಕ ಮಂದಿ ದುಡಿಯುತ್ತಿದ್ದಾರೆ. ಸಂಜಯ್ ಅಗರ್ವಾಲ್ ಈ ವಿಷ್ಯದಲ್ಲಿ ಭಾರೀ ಬುದ್ಧಿವಂತನಂತೆ ವರ್ತಿಸಿದ. ತನ್ನ ಬಳಿ ಇದ್ದ 200 ಕೋಟಿ ರೂ. ಕಪ್ಪು ಹಣವನ್ನು ಬಿಳಿ ಮಾಡಲು ಬಳಸಿದ್ದು ತನ್ನ ಕೆಲಸಗಾರರನ್ನು.

2 ಲಕ್ಷಕ್ಕಿಂತ ಜಾಸ್ತಿ ಹಳೆ ನೋಟುಗಳನ್ನು ಜಮಾ ಮಾಡಿದ್ರೆ ದಂಡ ಬೀಳುತ್ತಿತ್ತು. ಅದಕ್ಕಾಗಿ ಸಂಜಯ್ ಅಗರ್ವಾಲ್ ಪ್ರತೀ ಕೆಲಸಗಾರರನ್ನು ಕರೆದು ಪ್ರತಿಯೊಬ್ಬರಿಗೂ ತಲಾ ಎರಡೆರಡು ಲಕ್ಷ ಹಣ ನೀಡಿ ಅದನ್ನು ಬ್ಯಾಂಕ್‍ಗೆ ಜಮಾ ಮಾಡಲು ತಿಳಿಸಿದರು. ಬಳಿಕ ಪ್ರತೀದಿನ 4000 ರೂ.ನಿಂದ 8000 ರೂ.ವರೆಗೆ ವಿತ್‍ಡ್ರಾ ಮಾಡಿ, ಪ್ರತಿಯೊಬ್ಬರೂ ಆ ಹಣವನ್ನು ವಾಪಸ್ ಸಂಜಯ್ ಅಗರ್ವಾಲ್‍ಗೆ ನೀಡಬೇಕಿತ್ತು. ಕೆಲಸಗಾರರೂ ಅದೇ ರೀತಿ ಹಣ ತೆಗೆದು ಕೊಟ್ಟರು. ಅಗರ್ವಾಲ್ ಎರಡು ತಿಂಗಳ ಅವಧಿಯಲ್ಲಿ ಸುಮಾರು 200 ಕೋಟಿ ರೂ. ಕಪ್ಪು ಹಣವನ್ನು ಬಿಳಿ ಮಾಡಿದ್ದರು. ಎಷ್ಟು ಸುಲಭವಾಗಿ ಕಪ್ಪು ಹಣವನ್ನು ಬಿಳಿ ಮಾಡಿದೆ ಎಂಬ ಖುಷಿಯಲ್ಲಿ ಸಂಜಯ್ ಅಗರ್ವಾಲ್ ಮುಳುಗಿದ್ದರು.

ಆದರೆ ವಿಪರ್ಯಾಸ ಅಂದರೆ ಇದುವೇ… ಯಾಕೆಂದರೆ ಸಂಜಯ್ ಅಗರ್ವಾಲ್‍ರ ಖುಷಿ ತುಂಬಾ ಸಮಯ ಉಳಿಯಲೇ ಇಲ್ಲ. ಯಾಕೆಂದರೆ ಇತ್ತೀಚೆಗೆ ಸಂಜಯ್
ಅಗರ್ವಾಲನ ಮನೆಗೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖಾ ಅಧಿಕಾರಿಗಳು ಎಲ್ಲಾ 200 ಕೋಟಿ ರೂ. ಹಣವನ್ನು ವಶಪಡಿಸಿದ್ದಾರೆ.

ಅರೆ ಇದೆಲ್ಲಾ ಹೇಗೆ ಸಾಧ್ಯವಾಯಿತು?

ಆಗಿದ್ದಿಷ್ಟೆ. ಅದು ಸೆ.27. 2017ರ ಸಮಯ . ಸಂಜಯ್ ಅಗರ್ವಾಲ್‍ಬ ಕೆಎಸ್ ಆಯಿಲ್ ಮಿಲ್‍ನ ನಾಲ್ಕು ಪ್ರದೇಶಕ್ಕೆ ಏಕಕಾಲಕ್ಕೆ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು ನಿಮಗೆ 2 ಲಕ್ಷ ಹಣ ಸಿಕ್ಕಿದ್ದು ಎಲ್ಲಿಂದ? ಕೆಲಸಗಾರರು ತಬ್ಬಿಬ್ಬು. ಕೊನೆಗೆ ಅವರು ತನಗೆ ಸಂಜಯ್ ಅಗರ್ವಾಲರ ಉಪಾಯವನ್ನು ತಿಳಿಸಿದರು. ಎಲ್ಲರ ಬ್ಯಾಂಕ್ ಪಾಸ್ ಪುಸ್ತಕಗಳನ್ನು ಪರಿಶೋಧಿಸಲಾಯಿತು. ಪ್ರತೀ ದಿನ ಹಣವನ್ನು ವಿತ್‍ಡ್ರಾ ಮಾಡಿ ಅದನ್ನು ಅಗರ್ವಾಲ್‍ಗೆ ನೀಡುತ್ತಿದ್ದೆವು ಎಂದು ಎಲ್ಲಾ ನೌಕರರು ತಿಳಿಸಿದರು. ಕೊನೆಗೆ ಅಗರ್ವಾಲ್ ನಿವಾಸಕ್ಕೆ ದಾಳಿ ನಡೆಸಿದಾಗ 200 ಕೋಟಿ ರೂ. ಕಪ್ಪು ಹಣ ಪತ್ತೆಯಾಯಿತು.

ಇದೆಲ್ಲಾ ಸ್ಯಾಂಪಲ್ ಅಷ್ಟೆ. ಇನ್‍ಕಂ ಟ್ಯಾಕ್ಸ್ ಡಿಪಾರ್ಟ್‍ಮೆಂಟ್ ಇನ್ನೂ ಹಲವಾರು ಕಡೆಗೆ ದಾಳಿ ನಡೆಸಿ ಕಪ್ಪು ಹಣವನ್ನು ಪತ್ತೆ ಮಾಡುತ್ತಲೇ ಇದೆ. ಆದರೆ ಅದೆಲ್ಲಾ ಸುದ್ದಿಯಾಗುವುದೇ ಇಲ್ಲ.

ಇಂಥದ್ದೇ ಇನ್ನಷ್ಟು ಉದಾಹರಣ ಕೊಡುವುದಾದರೆ ಆಗ್ರಾ ಮತ್ತು ಕಾನ್ಪುರದಲ್ಲಿ ಗಗನ್ ಕಂಪೆನಿ, ಪ್ರಸಿದ್ಧ ಡಾಲ್ಡಾ ಮತ್ತು ತುಪ್ಪ ಕಂಪನಿಗಳ ಮೇಲೆಯೂ ಆದಾಯ
ತೆರಿಗೆ ಇಲಾಖಾಧಿಕಾರಿಗಳು ದಾಳಿ ನಡೆಸಿ ಕೋಟಿಗಟ್ಟಲೆ ಕಪ್ಪು ಹಣವನ್ನು ಪತ್ತೆ ಮಾಡಿದ್ದರು.

ಲೆದರ್ ಮಾನ್ಯುಫಾಕ್ಚರರ್ಸ್ ಮತ್ತು ಎಫ್‍ಎಂಸಿಸಿ ಮನ್ಯುಫಾಕ್ಚರರ್ಸ್ ಕಂಪೆನಿ ಮೇಲೆಯೂ ದಾಳಿ ನಡೆಸಿದ್ದು, 20000 ಕೋಟಿ ರೂ ಹಣವನ್ನು ರೆಡಾರ್ ಮೂಲಕ ಪತ್ತೆಹಚ್ಚಲಾಗಿದೆ.

ಕೆಲವು ಕಡೆ ಇನ್ನೂ ಕೂಡಾ ಹಳೆ ನೋಟುಗಳನ್ನು ಬಿಳಿ ಮಾಡುವ ಮಾಫಿಯಾ ಬೆಳಕಿಗೆ ಬರುತ್ತಲೇ ಇದೆ. ಹೀಗೆ ಕೋಟಿಗಟ್ಟಲೆ ಹಳೆ ನೋಟುಗಳನ್ನು ಪತ್ತೆ ಮಾಡುತ್ತಲೇ ಇದ್ದಾರೆ. ಆದರೆ ಇದೆಲ್ಲಾ ಎಲ್ಲಿಂದ ಬಂತು? ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತಿಳಿಯುವ ಕುತೂಹಲ ನಮ್ಮಲ್ಲಿ ಉಳಿದಿಲ್ಲ. ಜೊತೆಗೆ ಯಾವುದೇ ಮಾಧ್ಯಮಗಳಾಗಲೀ ಇದರ ಹಿಂದೆ ಬಿದ್ದು ಒಂದು ಇನ್ವೆಸ್ಟಿಗೇಟಿವ್ ರಿಪೋರ್ಟ್ ಕೂಡಾ ಮಾಡುವುದಿಲ್ಲ… ಇದೆಲ್ಲಾ ಅಕ್ರಮವಾಗಿ ಕೂಡಿಟ್ಟ ಕಪ್ಪು ಹಣಗಳು!

ಇನ್ನೊಂದು ವಿಷಯ. ಒಂದು ಅಂದಾಜಿನ ಪ್ರಕಾರ ಸಾಕಷ್ಟು ಮಂದಿ ಹಳೆಯ ನೋಟಿನ ಕಪ್ಪು ಹಣವನ್ನು ಸುಟ್ಟಿರುವುದು, ಎಸೆದಿರುವುದು ಬೆಳಕಿಗೆ ಬರುತ್ತಲೇ ಇದೆ. ಈ ರೀತಿ ಕೂಡಿಟ್ಟ ಹಣದಿಂದ ಯಾವುದೇ ಲಾಭವಿಲ್ಲ. ಯಾಕೆಂದರೆ ಹಣ ಚಲಾವಣೆ ಆದರಷ್ಟೆ ಲಾಭ. ಇಲ್ಲವಾದರೆ ಆ ಹಣದಿಂದ ಯಾವುದೇ ಲಾಭವಿಲ್ಲ..

ನೋಟು ನಿಷೇಧದ ಸಂದರ್ಭ ಯಾರೆಲ್ಲಾ ದಗಲ್ಬಾಜಿ ಆಡಿಕೊಂಡು ಕಪ್ಪು ಹಣವನ್ನು ಬಿಳಿ ಮಾಡಿದ್ದಾರೋ ಅವರೆಲ್ಲಾ ಇದೀಗ ಹೆದರುವಂತಾಗಿದೆ. ಯಾಕೆಂದರೆ
ಒಂದಲ್ಲಾ ಒಂದು ದಿನ ಇಂತಹಾ ಕಪ್ಪುಕುಳಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಲಿದೆ. ನಾವೆಲ್ಲಾ ರಂಗೋಲಿ ಕೆಳಗೆ ತೂರಿದೆವು ಎಂದು ಖುಷಿ
ಪಡುವಂತಿಲ್ಲ. ಯಾಕೆಂದರೆ ಅಧಿಕಾರಿಗಳು ಕಪ್ಪು ಹಣ ಪತ್ತೆ ಮಾಡಲು ಪಕ್ಕಾ ಪ್ಲಾನ್ ಮಾಡಿದ್ದಾರೆ. ಎಲ್ಲರ ಖಾತೆಯ ಪಿನ್‍ಟುಪಿನ್ ಡಿಟೈಲ್ ಆದಾಯ ಇಲಾಖೆಯ ಬಳಿ ಇದೆ.

ಮೋದಿಯ ಅನಾಣ್ಯೀಕರಣದಿಂದ ಏನೂ ಲಾಭವಿಲ್ಲ.. ಮೋದಿ ಕಪ್ಪು ಕುಳಗಳಿಗೆ ಏನೂ ಮಾಡ್ಲಿಲ್ಲ ಎನ್ನುವವರು ಇದನ್ನೆಲ್ಲಾ ಗಮನಿಸಲೇಬೇಕಿದೆ. ಇದು ಆರಂಭವಷ್ಟೆ. ನೋಡ್ತಾ ಇರಿ ಇನ್ನಷ್ಟು ಕಪ್ಪು ಹಣ ಸಿಗಲಿದೆ.

ಆದಾಯ ತೆರಿಗೆ ಇಲಾಖೆ ಇದೇ ರೀತಿ ಬುಲೆಟ್ ಟ್ರೈನ್ ಸ್ಪೀಡಲ್ಲಿ ಪ್ರತೀದಿನ ದಾಳಿ ನಡೆಸಿ ಒಂದಷ್ಟು ಕಪ್ಪು ಹಣವನ್ನು ಪತ್ತೆ ಮಾಡುತ್ತಲೇ ಇದೆ. ನಿಮಗೆ
ಗೊತ್ತಾಗಬೇಕಾದರೆ ಇಡಿ ಮತ್ತು ಐಟಿ ಇಲಾಖೆಯ ಅಧಿಕೃತ ಟ್ವಿಟ್ಟರ್ ಖಾತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರೆ ಎಲ್ಲಾ ಮಾಹಿತಿ ಸಿಗುತ್ತದೆ..

-ಚೇಕಿತಾನ

Tags

Related Articles

Close