ಅಂಕಣ

ಪ್ರಧಾನಿ ಮೋದಿ ಅವರ ಭಾಷಣದ ಕೌಶಲ್ಯಗಳ ರಹಸ್ಯವೇನು?ಅವರು ಹೇಗೆ ಅಷ್ಟು ಚೆನ್ನಾಗಿ ಮಾತನಾಡುತ್ತಾರೆ? ಅಚ್ಚರಿಯ ಸಂಗತಿಯೇನು ಗೊತ್ತಾ??

ನರೇಂದ್ರ‌ ದಾಮೋದರ್ ದಾಸ್ ಮೋದಿ!!! ಭವ್ಯ ಭಾರತವನ್ನು ತಮ್ಮ ದೂರದೃಷ್ಟಿಯ ಚಿಂತನೆಗಳಿಂದ ಮುನ್ನಡೆಸುತ್ತಿರುವ ಹಾಗೂ ಉನ್ನತ ಧ್ಯೇಯವನ್ನು
ಹೊಂದಿರುವ ನಾಯಕ. ಅವರ ಭಾಷಣ ಕೌಶಲ್ಯಗಳಿಂದಾಗಿಯೇ ಜನಮನವನ್ನು ಗೆದ್ದವರು. ಇತ್ತೀಚಿನ ದಿವಸಗಳಲ್ಲಿ ಪ್ರಧಾನಿ ಮೋದಿ ಅವರು ವಿಶ್ವದ ಅತ್ಯುತ್ತಮವಾಗ್ಮಿಯರಲ್ಲಿ ಒಬ್ಬರು ಎಂದರೂ ತಪ್ಪಲ್ಲ.

ಜನರನ್ನು ಸುಲಭವಾಗಿ ತಲುಪುವಂತಹ ಚಾಕಚಕ್ಯತೆಯನ್ನು ಮೋದಿ ಹೊಂದಿರುವುದು ಅವರ ಭಾಷಣದ ಒಂದು ಶಕ್ತಿಯೆಂದೇ ಹೇಳಬೇಕು. ಆ ಕೌಶಲ್ಯದ ಕುರಿತಾಗಿ ಚಕಿತವಾಗಿಸುವ ಇನ್ನೊಂದು ವಿಚಾರ ಕೇಳಿ. ಯಾವ ರೀತಿಯ ‌ಪ್ರೇಕ್ಷಕರು ಸಭೆಯಲ್ಲಿದ್ದಾರೋ, ಅವರ ನಿರೀಕ್ಷೆಗಳನ್ನು ಧ್ವನಿಯ ಏರುಪೇರಿನ ಮೂಲಕ ತಾವು ಹೇಳಬೇಕಾದ‌ ಸಂದೇಶಗಳನ್ನು ತಲುಪಿಸುತ್ತಾರೆ.

ಒಟ್ಟಾರೆಯಾಗಿ ಆಕರ್ಷಕವಾಗಿ ಮನಮುಟ್ಟುವಂತೆ ಮಾತನಾಡುತ್ತಾರೆ. ಅವರ ಭಾಷಣಗಳ ಉತ್ತಮ ಭಾಗವೆಂದರೆ ಅವರು ಜನರನ್ನು ಸದಾ ಪ್ರೇರೇಪಿಸಿ ಉತ್ತಮ ಕಾರ್ಯಗಳನ್ನು‌ ಮಾಡಲು ಹುರಿದುಂಬಿಸುತ್ತಿದ್ದಾರೆ ಅನ್ನುವುದೇ ಶ್ರೇಷ್ಠ ಸಂಗತಿ. ಅವರು ಪ್ರೇಕ್ಷಕರ ಸಮ್ಮುಖದಲ್ಲಿ ಉದಾಹರಣೆಗಳನ್ನು ನೀಡುತ್ತಾ ಮತ್ತು ಘಟನೆಗಳನ್ನು ಉಲ್ಲೇಖಿಸುತ್ತಾ ಸ್ಫೂರ್ತಿ ತುಂಬಿಸುವ ಕಾರ್ಯ ಮಾಡುತ್ತಾರೆ. ನೀವಿದನ್ನು ಗಮನಿಸಿದ್ದೀರೋ ಇಲ್ಲವೋ ಅರಿಯದು. ಅವರ ಭಾಷಣಗಳಲ್ಲಿ ಯಾವುದರ ಬಗ್ಗೆಯೂ ದೂರದೇ, ಸಮಸ್ಯೆಯ ಪರಿಹಾರಗಳನ್ನು ಹೆಚ್ಚು ಸೂಚಿಸಲು ಪ್ರಯತ್ನಿಸುತ್ತಾರೆ.

ಅವರ ಭಾಷಣಗಳಿಂದ ಸಮಸ್ಯೆ ಪರಿಹಾರವಾಗಲ್ಲ ನಿಜ., ಆದರೆ ಖಚಿತವಾಗಿ ಜನರು ಅವರ ಭಾಷಣಕ್ಕೆ ಪ್ರತಿಕ್ರಿಯಿಸುತ್ತಾರೆ. ಸ್ವಚ್ಛ ಭಾರತ‌ ಆಂದೋಲನದ ಕರೆಗೆ ಲಭಿಸಿದ ‌ಸ್ಪಂದನೆಯೇ ಇದಕ್ಕೆ ಸಾಕ್ಷಿ.

ಜನರು ಒಂದೇ ರೀತಿಯ ವಾಕ್ಚಾತುರ್ಯದ ಭಾಷಣಗಳನ್ನು ಕೇಳಲು ಬಯಸುವುದಿಲ್ಲ ಎಂದು ಅವರು ಚೆನ್ನಾಗಿ ತಿಳಿದಿದ್ದಾರೆ. ಕೇಳುಗರು ಯಾವಾಗಲೂ ಹೊಸ
ಆಲೋಚನೆಗಳು ಮತ್ತು ಹೊಸ ಮಾಹಿತಿಯನ್ನು ನಿರೀಕ್ಷಿಸುತ್ತಾರೆ. ಆ ನಿರೀಕ್ಷೆಗಳನ್ನು ಹುಸಿಯಾಗಿಸದೇ ತಮ್ಮ ಪ್ರತಿಯೊಂದನ್ನು ಭಾಷಣದಲ್ಲಿ ವಿನೂತನ
ಮಾಹಿತಿಯನ್ನು ನೀಡುತ್ತಾರೆ. ಅವರ ಭಾಷಣಗಳನ್ನು ನಿಕಟವಾಗಿ ವೀಕ್ಷಿಸುವವರು ಮೋದಿಯವರ ಭಾಷಣಗಳು ಒಂದೇ ರೀತಿಯಾಗಿ ಆಗಿರುವುದಿಲ್ಲ ಎಂಬುದು
ತಿಳಿದಿರುತ್ತದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾಡಿದ ಭಾಷಣಗಳ ಸರಣಿಗಳೇ ಇದಕ್ಕೆ ಉದಾಹರಣೆಯೆನ್ನಬಹುದು. ಒಂದೇ ದಿನ 5 ಬೇರೆ ಬೇರೆ ಸ್ಥಳಗಳಲ್ಲಿ ಭಾಷಣ. ವಿಚಾರಗಳೆಲ್ಲವೂ ಭಿನ್ನವೇ.

ಬಹು ಮುಖ್ಯವಾಗಿ ಅವರು ತಮ್ಮ ಭಾಷಣಗಳಿಗೆ ಪೂರ್ವ ಲಿಖಿತ ಸ್ಕ್ರಿಪ್ಟ್ ಅನ್ನು ಬಳಸುವುದಿಲ್ಲವೆಂಬುದೇ ಆಸಕ್ತಿಯ ‌ವಿಚಾರ., ಅವುಗಳು ಎಲ್ಲಕ್ಕಿಂತ ಮಿಗಿಲಾದವು. ಘಟನೆಗಳಿಗೆ ಸಂಬಂಧಿಸಿರುವ ಅಂಕಿ ಅಂಶಗಳು ಉಲ್ಲೇಖಿಸಿ ಅವರು ಮಾತನಾಡುತ್ತಾರೆ. ನೀವು ಅವರಿಗೆ ಯಾವುದೇ ವಿಷಯ ನೀಡಿದ್ದರೂ,
ಅವರು ತಮ್ಮ ಅಭಿಪ್ರಾಯವನ್ನು, ಅದರ ಬಗ್ಗೆ ಸಲಹೆಗಳನ್ನು ನೀಡುತ್ತಾರೆ.

ಹಾಗಾಗಿ, ಅವರಿಗೆ ಲಭಿಸುವ ಅತ್ಯಲ್ಪ ಸಮಯದಲ್ಲಿಯೇ ಭಾಷಣಗಳನ್ನು ಸ್ವತಃ ಯಾವ ರೀತಿಯಾಗಿ ಸಿದ್ಧಪಡಿಸುತ್ತಾರೆ ಎಂಬುದೇ ಆಶ್ಚರ್ಯಕರ ಸಂಗತಿ!! ಅವರ ಶ್ರೇಷ್ಠತೆಗೆ ಇದು ಒಂದು ಉತ್ತಮ ಉದಾಹರಣೆಯೆನ್ನಬಹುದು!!

ಹಾಗಾದರೆ ಅವರ ಭಾಷಣಗಳು ಪೂರ್ವ ಸಿದ್ಧತೆಯೇ?? ಉತ್ತರ ಇಲ್ಲವೆಂಬುದಾಗಿಯೇ ಆಗಿದೆ!!! ನಿಜ.ಅವರು ತಮ್ಮ ಭಾಷಣಗಳಿಗೆ ಸಿದ್ಧಪಡಿಸುವುದಿಲ್ಲ. ಸರಾಸರಿ, ಅವರು‌ ಒಂದು ವಾರಕ್ಕೆ ಕನಿಷ್ಠ 8-10 ಭಾಷಣಗಳನ್ನು ನೀಡುತ್ತಾರೆ, ಪ್ರತಿ ಭಾಷಣಕ್ಕೂ ಅವನು ಸಿದ್ಧಪಡಿಸಬೇಕಾದರೆ !!ಊಹಿಸಿಕೊಳ್ಳಿ!! ಬಹುಶಃ ಅವರು ಬೇರೆ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ವಾಸ್ತವವಾಗಿ ಅವರ ಭಾಷಣದಲ್ಲಿ ನೂರಾರು ಸತ್ಯ ಮತ್ತು ಮಾಹಿತಿಗಳನ್ನು ಉಲ್ಲೇಖಿಸುವುದು ಹಾಸ್ಯದ ಮಾತಲ್ಲ. ಖಂಡಿತವಾಗಿಯೂ ಒಂದು ಗಂಟೆಗಳ ಕಾಲ ಮಾತನಾಡುವ ವಿಚಾರಗಳನ್ನು ಕಂಠಪಾಠ‌ಮಾಡಿ ಗ್ರಹಿಸಿ‌ ಮಾತನಾಡುವುದು ಅಸಾಧ್ಯವೇ ಸರಿ!!

ಅವರ ಅಪಾರ‌ ವಿದ್ವತ್ತಿನ ಪ್ರತಿಫಲವದು..

ಹಾಗಾದರೆ ಅವನ ಜ್ಞಾನದ ರಹಸ್ಯವೇನು?

ಈ ಪ್ರಶ್ನೆಗೆ ಸರಳ ಉತ್ತರವೆಂದರೆ ಅವರ ಆರೆಸ್ಸೆಸ್ ಹಿನ್ನೆಲೆ. ಹೌದು, ಕೆಲವು ಬುದ್ಧಿಜೀವಿಗಳು ಆರೆಸ್ಸೆಸ್‌ ಅನ್ನು ಎಸಿ ಕೋಣೆಯಲ್ಲಿ ಕುಳಿತು ಕೋಮುವಾದಿಗಳ ಸಂಘ, ಚಡ್ಡಿಗಳ ಸಂಘವೆಂದೇ ಜರಿಯಬಹುದು. ಉದಾರವಾದಿಗಳಾದ‌ ಸಂಘಿಗಳು ಏನನ್ನು ಜನರಿಗೆ ಕಲಿಸುತ್ತಿದ್ದಾರೆ ಎನ್ನುವುದನ್ನು ಮಾತ್ರ ಅವರಿಗೆ ತಿಳಿದಿಲ್ಲ.

ಆರೆಸ್ಸೆಸ್ ಅಂದರಂ ಹಿಂದುತ್ವ ಎಂದೂ ಅವರಿಗೆ ಧರ್ಮವನ್ನು ಹೊರತುಪಡಿಸಿ ಏನೂ ತಿಳಿದಿಲ್ಲವೆಂಬುದಾಗಿ ಏನೂ ಅರಿಯದ‌ ಬುದ್ಧಿಜೀವಿಗಳು ಬೊಬ್ಬಿಡುತ್ತಾರೆ. ಆದರೆ ನೆನಪಿರಲಿ ಆರೆಸ್ಸೆಸ್ ಕೇವಲ ಹಿಂದುತ್ವದ ಚಿಂತನೆಗಳನ್ನಷ್ಟೇ‌ ಭಾರತೀಯರಿಗೆ ಉಣಬಡಿಸುವುದಿಲ್ಲ, ಆದರೆ ದೇಶಭಕ್ತಿಯ ಮೌಲ್ಯಗಳೊಂದಿಗೆ ರಾಷ್ಟ್ರದ ಪರಿಪೂರ್ಣ ನಾಯಕನಾಗಬೇಕೆಂದೂ ಬೋಧಿಸುತ್ತದೆ.

ನಿಮಗೆ ಅರಿವಿರಲಿ.

ಆರೆಸ್ಸೆಸ್ ಒಂದು ನಿರ್ದಿಷ್ಟ ಪಠ್ಯಕ್ರಮವನ್ನು ಹೊಂದಿದೆ, ಅಲ್ಲಿ ಜನರಿಗೆ ವಿವಿಧ ವಿಷಯಗಳ ಬಗ್ಗೆ ಕಲಿಸುತ್ತಾರೆ.ಪ್ರತಿ ನಗರಗಳು ಮತ್ತು ಪಟ್ಟಣಗಳಲ್ಲಿ ಒಂದು ತಿಂಗಳ ಕಾಲ ನಿರಂತರ ಶಿಬಿರಗಳನ್ನು ನಡೆಸುತ್ತಾರೆ. ಇಲ್ಲಿ ಒಂದೇ ವಿಷಯದಲ್ಲಿ ಮಾತ್ರವಲ್ಲ, ಪ್ರಸ್ತುತ ವಿಷಯಗಳು, ಇತಿಹಾಸ, ಧರ್ಮ, ಕಲೆ, ವಿಜ್ಞಾನ, ಸಾಹಿತ್ಯ, ಭಾಷೆಗಳನ್ನು ಕಲಿಸಲಾಗುತ್ತದೆ.

ಬೋಧನೆಯು ವರ್ಗ ಕೊಠಡಿಗಳಿಗೆ ಮಾತ್ರ ಸೀಮಿತವಾಗಿಲ್ಲ, ಆದರೆ ಪ್ರತಿ ವಿಷಯದಲ್ಲೂ ಚರ್ಚೆಗಳು ನಡೆಯುತ್ತವೆ, ರಾಷ್ಟ್ರಕ್ಕೆ ಸಂಬಂಧಿಸಿರುವ ಪ್ರತಿಯೊಂದು
ವಿಷಯವೂ ಚರ್ಚೆಯಾಗುತ್ತವೆ.ಸಂಘದ‌ ಹೆಚ್ಚಿನ ಮುಖಂಡರು ಚೆನ್ನಾಗಿ ಶಿಕ್ಷಣ ಪಡೆದಿದವರೇ ಆಗಿದ್ದಾರೆ., ವೈದ್ಯರು, ಎಂಜಿನಿಯರ್ಗಳು, ವಕೀಲರು, ಚಾರ್ಟರ್ಡ್
ಅಕೌಂಟೆಂಟ್ಸ್ … ದುರಂತವೆಂದರೆ ಬುದ್ಧಿಜೀವಿಗಳಾದ ಕೆಲವು ಕಾಂಗಿ ಹಾಗೂ ಕಮ್ಮಿನಿಷ್ಠೆ ಜನರು ಮಾತ್ರ‌ ಈ‌ ವಿಚಾರವನ್ನು ತಿಳಿದಿಲ್ಲ !!!

ಪ್ರತಿಯೊಬ್ಬ ವ್ಯಕ್ತಿಯು ವಿವಿಧ ವಿಷಯಗಳ ಬಗ್ಗೆ ಭಾಷಣ, ಉಪನ್ಯಾಸ ನೀಡಲು ಯೋಚಿಸುತ್ತಾನೆ. ಅವರು ವಿಷಯದ ಬಗ್ಗೆ ಮಾಹಿತಿ ಸಂಗ್ರಹಿಸಲು ಮತ್ತು ಭಾಷಣವನ್ನು ಆಸಕ್ತಿದಾಯಕ ಮತ್ತು ವಿಶಿಷ್ಟವಾಗಿಸಲು ಯೋಚಿಸುತ್ತಿದ್ದಾರೆ. ಈ ರೀತಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಓದುವ ಪುಸ್ತಕಗಳ ಅಭ್ಯಾಸವನ್ನು ಅಭಿವೃದ್ಧಿಪಡಿಸುತ್ತಾನೆ, ಮಾಹಿತಿಯ ಮೂಲವನ್ನು ಸಂಗ್ರಹಿಸುತ್ತಾನೆ. ನೂರಾರು ಜನರೊಂದಿಗೆ ಸಂವಹನ ಮಾಡುವುದು ಹಾಗೂ ಒಂದು ಸಮಯದಲ್ಲಿ ನೂರು ಪುಸ್ತಕಗಳನ್ನು ಓದುವುದನ್ನೂ ಕಲಿಸಲಾಗುತ್ತದೆ. ಶಿಬಿರಗಳು ಕೇವಲ ಓದುಗರಿಗೆ ಹಾಗೂ ವಿಚಾರವಾದಿಗಳಿಗೆ ಸೀಮಿತವಾಗಿಲ್ಲ, ಆದರೆ ಆರೆಸ್ಸೆಸ್ ಕಾರ್ಯಕರ್ತರು ತಾವು ಎಂದಿಗೂ ಕೇಳಿರದ ವಿವಿಧ ಸಾಂಪ್ರದಾಯಿಕ ಆಟಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. 180 ಕ್ಕೂ ಹೆಚ್ಚು ಸಾಂಪ್ರದಾಯಿಕ ಆಟಗಳನ್ನು ಆಡುತ್ತಾರೆ. ನೆನಪಿರಲಿ , ನಮ್ಮ ಜನಪದ ಕ್ರೀಡೆಗಳನ್ನು ಉತ್ತೇಜನ ಮಾಡುತ್ತಿರುವ ಸಂಘಟನೆಯೇ ಆರೆಸ್ಸೆಸ್!!

ವಿವಿಧ ನಗರಗಳು, , ಜಿಲ್ಲೆಗಳು ಮತ್ತು ವಿವಿಧ ರಾಜ್ಯಗಳಿಗೆ ಪ್ರಯಾಣಿಸುವ ಆರೆಸ್ಸೆಸ್ ಪ್ರಚಾರಕರು ಉತ್ತಮ ಹಾಗೂ ಅನೇಕ ವಿಚಾರಗಳ ಕುರಿತಾಗಿ ನಿಖರ
ಮಾಹಿತಿಯನ್ನು ಹೊಂದಿದ್ದಾರೆ. ಅವರು ಸ್ಥಳದ ಬಗ್ಗೆ, ಅವರ ಸಂಸ್ಕೃತಿ ಮತ್ತು ನೆಲದಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಲಿಯುತ್ತಾರೆ. ಆದ್ದರಿಂದ,
ಅವರು ಸಂಗ್ರಹಿಸುವ ಜ್ಞಾನದ ಪ್ರಮಾಣವು ಇತರರೊಡನೆ ಹೋಲಿಸಲಾಗುವುದಿಲ್ಲ.

ಪ್ರಧಾನಿ ಮೋದಿಯು ಕೂಡ ಅವರಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಜ್ಞಾನವನ್ನು ಹೊಂದಿದ್ದಾರೆ. ಮತ್ತು ಜನರೊಂದಿಗೆ ಸುಲಭವಾಗಿ ಮಿಶ್ರಗೊಳ್ಳುತ್ತಾರೆ. ಇದು
ಮೋದಿಗೆ‌ ಮಾತ್ರವಲ್ಲ, ಇನ್ನಿತರೆ ಹಿರಿಯರಿಗೂ ಅನ್ವಯಿಸುತ್ತದೆ.ಅಟಲ್ ಬಿಹಾರಿ ವಾಜಪೇಯಿ, ಆಡ್ವಾಣಿ ಅವರೂ ಉತ್ತಮ ಭಾಷಣಕಾರರಾಗಿದ್ದಾರೆ. ತಾವು
ನೀಡಬೇಕಾದ ಸಂದೇಶವನ್ನು ಬಹಳ ಪರಿಣಾಮಕಾರಿಯಾಗಿ ತಿಳಿಸುತ್ತಾರೆ.

ಪ್ರತಿ ಕ್ಷೇತ್ರದಲ್ಲೂ ವ್ಯಾಪಕವಾದ ಜ್ಞಾನವನ್ನು ಹೊಂದಿರುವ ಒಬ್ಬ ವ್ಯಕ್ತಿ ಮಾತ್ರ ಮೋದಿ ರೀತಿಯಲ್ಲಿ ಮಾತನಾಡಬಹುದು. ಮಾತನಾಡುವ ಸಲುವಾಗಿ ಸ್ಕ್ರಿಪ್ಟ್ ಮತ್ತು ಬರೆದ ಕಾಗದಗಳನ್ನು ತರುವವರೇ ಅಲ್ಲ. ನಾಯಕತ್ವ ಕೇವಲ ಮಾತನಾಡುವುದಲ್ಲ ಆದರೆ ನೇತೃತ್ವ ವಹಿಸುವುದೆಂಬುದನ್ನು ನಿರೂಪಿಸಿದವರು ಮೋದೀಜಿ!! ಇದಕ್ಕೆ ಅಡಿಪಾಯ ಹಾಕಿದ್ದು ಇದೇ ಸಂಘ!!

ಹೆಚ್ಚಿನ ರಾಜಕಾರಣಿಗಳಿಗೆ ಈ ವಿಚಾರದ ಅರಿವೇ ಇಲ್ಲವೇನೋ!!

ಆದರೆ ಆರೆಸ್ಸೆಸ್ ಶಿಬಿರಕ್ಕೆ ಯಾವತ್ತೂ ಆಗಮಿಸದ ನಮ್ಮ ಮಾಧ್ಯಮಾಧಮರು ಮತ್ತು ಹುಸಿ ಜಾತ್ಯಾತೀತರು ಶಿಬಿರಗಳಲ್ಲಿ ಏನಾಗುತ್ತದೆ ಎಂಬ ಕಲ್ಪನೆಯಿಲ್ಲದ ಲದ್ಧಿಜೀವಿಗಳು ಆರೆಸ್ಸೆಸ್ ಕುರಿತಾಗಿ ಉಪನ್ಯಾಸಗಳು ಮತ್ತು ಬುದ್ದಿಹೀನ ಸಲಹೆಗಳನ್ನು ನೀಡಿ ಅವುಗಳನ್ನು ಮತ್ತು‌ ಸಂಘವನ್ನು ಕೋಮುವಾದಿ ಎಂದು ಕರೆಯುತ್ತಾರೆ. ರಾಷ್ಟ್ರೀಯ ಸ್ವಯಂ ಸೇವಕಾ ಸಂಘದ ವಿರುದ್ಧ ಮೂರ್ಖತನದ ಟೀಕೆಗಳನ್ನು ಮಾಡುವ ಮೊದಲು ಸಂಘದ ಅಗಾಧ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಿ ಕಮ್ಮಿನಿಷ್ಠರೇ!!!.

– ವಸಿಷ್ಠ

Tags

Related Articles

Close