ಅಂಕಣ

ಪ್ರಧಾನಿ ಮೋದಿ ಪತ್ರಿಕಾಗೋಷ್ಟಿಯನ್ನ ಕರೆಯೋದೇ ಇಲ್ಲ!!! ಯಾಕೆ ಗೊತ್ತಾ?!

ಕೆಲ ಜನರು ದಿನಬೆಳಗಾದರೆ ಮೋದಿ ಯಾಕೆ ಪತ್ರಿಕಾಗೋಷ್ಠಿ ಕರಿಯೋದಿಲ್ಲ ಅಂತ ಕೇಳದ್ರೆ ಇನ್ನೂ ಕೆಲವೊಬ್ಬರು ಒಂದು ಹೆಜ್ಜೆ ಮುಂದೆ ಹೋಗಿ ಮೋದಿ ಅವರಿಗೆ ಪತ್ರಕರ್ತರನ್ನ ಎದುರಿಸುವ ಸಾಮರ್ಥ್ಯವಿಲ್ಲ ಅನ್ನೋ ಮಟ್ಟಿಗೂ ಪ್ರಧಾನಿಯ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡೋಕೂ ಹೇಸಲ್ಲ.

ಹೀಗೆ ಹಲವು ಸಂದೇಶಗಳು ಫೇಸ್ಬುಕ್ ಮತ್ತು ವಾಟ್ಸಪ್ ಗಳಲ್ಲಿ ಕೂಡ ಹರಿದಾಡುತ್ತಿವೆ.

ಹೌದು ಜನರು ಹೇಳ್ತಿರೋದು ಸರಿಯಾಗಿದೆ ಮೋದಿ ಪತ್ರಿಕಾಗೋಷ್ಠಿ ಏಕೆ ಕರೆಯುತ್ತಿಲ್ಲವೆಂದರೆ;

ಹೌದು, ಮೋದಿ ಅವರ ಅವಧಿಯಲ್ಲಿ ಅಂದರೆ 2014 – 2017 ರಲ್ಲಿ ಬಹಳಷ್ಟು ಹಗರಣಗಳು ಹೊರಬಂದಿವೆ ಅದಕೆ ಮೋದಿ ಹೆದರಿ ಪತ್ರಿಕಾಗೋಷ್ಠಿ ಕರೆಯುತ್ತಿಲ್ಲ, ಹೌದಲ್ಲವೇ??

ಹೌದು, ಮೋದಿ ಅವರು ಕುಟುಂಬ ರಾಜಕೀಯ ಮಾಡುತ್ತಿದ್ದಾರೆ ಆ ಕಾರಣಕಾಗಿ ಹೆದರುತ್ತಿದ್ದಾರೆ, ಹೌದಲ್ಲವೇ??

ಹೌದು, ಮೋದಿ ಅವರು ಸ್ವತಃ ಭ್ರಷ್ಟಾಚಾರ, ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಅದಕ್ಕೆ ಪತ್ರಕರ್ತರನ್ನ ಎದುರಿಸೋದಕ್ಕೆ ಅವರಿಗೆ ಭಯವಿದೆ, ಹೌದಲ್ಲವೇ??

ಹೌದು, ಮೋದಿ ಅವರು ಈಗ ತಾನೇ ರಾಜಕೀಯಕ್ಕೆ ಹೊಸಬರು, ಅವರಿಗೆ ಅನುಭವದ ಕೊರತೆ ಇದೆ, ಹೌದಲ್ಲವೇ??

ಹೌದು, ಮೋದಿ ಅವರ ಸಂಪುಟದ ಸಚಿವರುಗಳು 2G, ಕಾಮನ್ವೆಲ್ತ್, ಕಲ್ಲಿದ್ದಲು ನಂತಹ ಹಗರಣಗಳಲ್ಲಿಭಾಗಿಯಾಗಿದ್ದಾರೆ, ಹೌದಲ್ಲವೇ??

ಮೋದಿ ಸರ್ಕಾರದಲ್ಲಿ ಪಾರದರ್ಶಕತೆ ಇಲ್ಲ ಅದಕೆ ಅವರು ಮಾಧ್ಯಮಗಳು ಮುಂದೆ ಬರಲು ಹಿಂದೇಟು ಹಾಕುತ್ತಿರಬಹುದು, ಹೌದಲ್ಲವೇ?

ಹೌದು ಮೋದಿ ಅವರಲ್ಲಿ ಇವುಗಳ ದೋಷವಿದೆಅದಕ್ಕೆ ಅವರ ಮಾಧ್ಯಮದ ಮುಂದೆ ಬರಲು ಹೆದರುತ್ತಾರೆ, ಹೌದಲ್ಲವೇ??

ನಾವುಗಳು ಹೀಗೆಲ್ಲ ಅಂದು ಕೊಳ್ಳುತ್ತಿದರೆ ಈ ಭೂಮಿಯ ಮೇಲೆ ನಮ್ಮಷ್ಟು ಮೂರ್ಖರು ಮತೊಬ್ಬರಿರಲ್ಲ!!

ಮೋದಿ ಅವರು ಅಸಮರ್ಥರಾದರೆ ರಾಜ್ಯಸಭೆ ಮತ್ತು ಲೋಕಸಭೆ ಯಲ್ಲಿ ವಿರೋಧ ಪಕ್ಷಗಳಗಳಿಗೆ ಉತ್ತರಿಸುತ್ತಿರಲಿಲ್ಲ. ಈಗಲೂ ಮೋದಿ ಹಲವು ಬಾರಿ ವಿರೋಧ ಪಕ್ಷಗಳಿಗೆ ಚಾಟಿ ಬೀಸಿದ್ದಾರೆ.

ಸುಮಾರು 40 ವರ್ಷಗಳ ರಾಜಕೀಯ ಅನುಭವ ಇರುವ ಮೋದಿ ಮಾದ್ಯಮದ ಮುಂದೆ ಬರಲು ಯಾವುದೇ ಭಯವಿಲ್ಲ, ಅವರು ತಮ್ಮ ರಾಜಕೀಯ
ಜೀವನದಲ್ಲಿ ಇಂತಹ ಹಲವು ಪತ್ರಿಕಾಗೋಷ್ಠಿ ಕರೆದಿದ್ದಾರೆ.

ಸರಿಸುಮಾರು 39 ದೇಶಳನ್ನ ಸುತ್ತಿ ಹಲವಾರು ಒಪ್ಪಂದಗಳಿಗೆ ಸಹಿ ಹಾಕಿರುವ ಮೋದಿ ಅವರಿಗೆ ಈ ಮಾಧ್ಯಮಗಳು ಎದುರಿಸುವ ಯಾವುದೇ ಕಾರಣಕ್ಕೂ ಭಯವಿಲ್ಲ.

ಮೋದಿ 42 ತಿಂಗಳ ಅವಧಿಯಲ್ಲಿ ಇದುರೆಗೂ ಒಂದೇ ಒಂದು ಹಗರಣದ ವಾಸನೆಕೂಡ ಬಂದಿಲ್ಲ, ಪಾರದರ್ಶಕತೆಗೆ ಮೋದಿ ಸರ್ಕಾರಕ್ಕೆ ಸರಿಸಾಟಿ ಯಾವ ಸರ್ಕಾರವೂ ಇಲ್ಲ.ಕುಟುಂಬ ರಾಜಕೀಯ ಮೋದಿ ಅವರ ಜಾಯಮಾನದಲಿಲ್ಲ.

ಹಾಗಿದ್ದರೂ ಮೋದಿ ಏಕೆ ಪತ್ರಿಕಾಗೋಷ್ಠಿ ಕರೆಯುತ್ತಿಲ್ಲ??

ಮಾಧ್ಯಮಗಳು ಸರ್ಕಾರದ ನಾಲ್ಕನೇ ಅಂಗ ಎಂದು ಹೇಳುತ್ತಾರೆ(ಉಳಿದ ಮೂರು ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ) ಅದರ ಪ್ರಕಾರ ಮಾಧ್ಯಮಗಳು ತನ್ನ ಮೌಲ್ಯಗಳನ್ನ ಉಳಿಸಿಕೊಂಡಿವೆಯೇ?

ಈಗಿರುವ ಮಾಧ್ಯಮಗಳು ತಮ್ಮ TRP ಹೆಚ್ಚಿಸಿಕೊಳ್ಳೋಕ್ಕೆ ತಮಗೆ ಬೇಕಾದ್ದನ್ನ, ಹೇಗೆ ಬೇಕಾದರೂ ತಿರುಚಿ ಬಿತ್ತರಿಸುತ್ತವೆ.

ಮೊನ್ನೆಯೆಷ್ಟೇ ನಡೆದ ಘಟನೆಯೊಂದು ನೆನಪಿಸಿಕೊಳ್ಳಲು ಬಯಸುತ್ತೇನೆ ನಮ್ಮ ಕರ್ನಾಟಕದಲ್ಲಿ ದಕ್ಷ ಅಧಿಕಾರಿಯಾದ ರವಿ ಚನ್ನಣ್ಣವರ್ ತಮ್ಮ ಹುದ್ದೆಗೆ ರಾಜಿನಾಮೆಯನ್ನು ಕೊಟ್ಟು ರಾಜಕೀಯಕ್ಕೆ ಪ್ರವೇಶಿಸುತ್ತಿದ್ದಾರೆ ಎಂದು ನಮ್ಮ ಕನ್ನಡ ಮಾದ್ಯಮವೊಂದು ಸುದ್ದಿ ಸ್ಫೋಟಿಸಿತ್ತು, ಬಳಿಕ ಅಧಿಕಾರಿ ರವಿ ಚನ್ನಣ್ಣವರ್ ಅದುಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದರು, ಮತ್ತು ಆ ಮಾಧ್ಯಮದ ಮೇಲೆ ಮಾನನಷ್ಟ ಮೊಕ್ಕದ್ದಮೆ ಹೂಡುವುದಾಗಿಯೂ ಹೇಳಿದ್ದರು.

ಇತೀಚಿಗೆ ಕೆಲವು ಮಾದ್ಯಮಗಳು ಸುದ್ದಿಯನ್ನ ತಿರುಚಿ ಪ್ರಸಾರ ಮಾಡುತ್ತಿವೆ, ಈ ಒಂದು ಕಾರಣಕ್ಕೆ ಮೋದಿ ಅವರುಕೂಡ ಪತ್ರಿಕಾಗೋಷ್ಠಿ ಕರೆಯುತ್ತಿಲ್ಲ.

‘Surgical Strike’ ನಂತಹ ಸೇನೆಯ ಆಪರೇಷನ್ ನಡೆದಾಗ ಮೋದಿ ಪತ್ರಿಕಾಗೋಷ್ಠಿ ಕರೆದು ತಮ್ಮ ಸರ್ಕಾರದ ಸಾಧನೆ ಬಗ್ಗೆ ತಾವೇ ಹೊಗಳಿಕೊಳ್ಳಬಹುದಿತ್ತು, ಆದರೆ ಮೋದಿ ಸರ್ಕಾರ ಪತ್ರಿಕಾಗೋಷ್ಠಿ ಕರೆದಿರಲಿಲ್ಲ.??

‘Doklum’ ನಂತಹ ಬಿಕ್ಕಟ್ಟುಗಳು ಬಗೆಹರಿದಾಗ ಮೋದಿ ಪತ್ರಿಕಾಗೋಷ್ಠಿ ಕರೆದು ತಮ್ಮ ಸರ್ಕಾರದ ಸಾಧನೆ ಬಗ್ಗೆ ತಾವೇ ಹೊಗಳಿಕೊಳಬಹುದಿತ್ತು ಏಕೆ ಮೋದಿ ಸರ್ಕಾರ ಕರೆದಿರಲಿಲ್ಲ.??

ಕಾರಣ ಇತೀಚಿಗೆ ‘PAID MEDIA’ ಹಾವಳಿ ಹೆಚ್ಚಾಗಿದೆ ಮತ್ತು TRP ಹೆಚ್ಚಿಸಿಕೊಳ್ಳುವುದೇ ಅವರ ಪ್ರಾಥಮಿಕ ಗುರಿಯಾಗಿದೆ.

ಹಾಗಾದರೆ ಮೋದಿ ಜನರಿಗೆ ಹೇಗೆ ತಲುಪುತ್ತಿದ್ದಾರೆ ಗೊತ್ತೇ?

1.ಅವಶ್ಯಕತೆ ಬಿದ್ದರೆ ತಮ್ಮ ಪಕ್ಷದ ವಕ್ತಾರರಿಂದ ಸುದ್ದಿಗೋಷ್ಠಿ ಕರೆಯುತ್ತಾರೆ.

2. ಬಹಿರಂಗ ಭಾಷಣ; ಹೌದು ಮೋದಿ ಇದುವರೆಗೂ 775 ಬಹಿರಂಗ ಭಾಷಣದಲ್ಲಿ ತಮ್ಮ ಸರ್ಕಾರದ ಯೋಜನೆಗಳನ್ನ ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ.

3. ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ನಂತಹ ಸೋಶಿಯಲ್ ಮೀಡಿಯಾಗಳಲ್ಲಿ ತಾವು ಮಾಡುವ ಕೆಲಸದ ಬಗ್ಗೆ ಸಂದೇಶ ರವಾನಿಸುತ್ತಾರೆ.

4. ‘ಮನ್ ಕೀ ಬಾತ್’ ನಂತಹ ಕಾರ್ಯಕ್ರಮಗಳಿಂದ ಭಾರತದ ಕಟಕಡೆಯ ಪ್ರಜೆಗಳಿಗೆ ತಮ್ಮ ಸರ್ಕಾರದ ಸಾಧನೆಗಳನ್ನ, ಯೋಜನೆಗಳ ಮಾಹಿತಿಯನ್ನ ತಲುಪಿಸುತ್ತಿದ್ದಾರೆ.

5. ಪ್ರಧಾನ ಮಂತ್ರಿ ಕಚೇರಿಯಿಂದ ಸಮಸ್ಯೆಗಳ ಪರಿಹಾರ.

ಹೀಗೆ ಹಲವು ರೀತಿಯಲ್ಲಿ ಜನರನ್ನ ತಲುಪುವ ಕಾರ್ಯ ಮೋದಿ ಮಾಡುತ್ತಿದ್ದಾರೆ.

ಹೌದು, ಪ್ರಜಾಪ್ರಭುತ್ವದಲ್ಲಿ ಎಲ್ಲಾ ಪ್ರಜೆಗಳು ಮುಕ್ತವಾಗಿ ತಮ್ಮ ನಾಯಕರಿಗೆ ಪ್ರಶ್ನೆಗಳು ಕೇಳುವ ಹಕ್ಕಿದೆ ಸ್ವಾಗತಾರ್ಹ ಆದರೆ ವಾಸ್ತವವನ್ನ ಅರಿಯದೆ
ನಮ್ಮ ಜನರು ವಿನಾ ಕಾರಣ ಟೀಕಿಸುವುದು ಎಷ್ಟರ ಮಟ್ಟಿಗೆ ಸರಿ??

ಇನ್ನು ವಿರೋಧಪಕ್ಷಗಳಿಗೆ ಅರ್ಥವಾಗಿದೆ ಮುಂದಿನ 2019 ರಲ್ಲೂ ಮೋದಿ ಅವರೇ ಪ್ರಧಾನಮಂತ್ರಿ ಗದ್ದುಗೆ ಹಿಡಿಯಲ್ಲಿದ್ದಾರೆ ಅಂತ ಹತಾಶರಾಗಿ ಪೊಳ್ಳು ಟೀಕೆಗಳುಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ.

ಇನ್ನಾದರೂ ಜನ ಮೋದಿ ಸರ್ಕಾರವನ್ನ ಟೀಕಿಸುವ ಬದಲು ಮೋದಿ ಏನು ಮಾಡುತ್ತಿದ್ದಾರೆ ಅನ್ನೋದರ ಬಗ್ಗೆಯೂ ಸ್ವಲ್ಪ ಗಮನಹರಿಸಿ, ವಾಸ್ತವತೆಯನ್ನ ಅರಿತು, ವಿಶ್ಲೇಷಣೆ ಮಾಡಿ ಆಮೇಲೆ ಟೀಕೆ ಮಾಡಿದರೆ ಒಳಿತು!!

-ಪ್ರಭಾಕರ ಜವಳಿ

Tags

Related Articles

Close