ಕಾಂಗ್ರೆಸ್ ನನ್ನು ನೋಡಿದರೆ ನಿಜಕ್ಕೂ ದುಸ್ಥಿತಿ ಎನ್ನಿಸದೇ ಇರದು! ಯಾಕೆ ಗೊತ್ತೇ?! ರಾಹುಲ್ ಗಾಂಧಿ ಯ ಇಮೇಜನ್ನುಳಿಸಲು ಏನೇನೆಲ್ಲ ಕಸರತ್ತು ಮಾಡುತ್ತಿದ್ದಾರೆಂದರೆ, ದೇಶದ ಚಿಂತೆ ಕೊನೆಗಿರಲಿ ಎಂಬಂತಾಗಿದೆ ಕಾಂಗ್ರೆಸ್ ನ ಸ್ಥಿತಿ! ಬಿಡಿ! ಇದು ಕಹಿ ಸತ್ಯವಾದರೂ ಬದಿಗಿರಲಿ! ಯಾಕೆಂದರೆ, ಕಳೆದುಹೋದ ಮಾನವನ್ನು ಹಿಂತಿರುಗಿಸಲು ಯಾರಿಂದಲೂ ಸಾಧ್ಯವಿಲ್ಲ! ಅದರಲ್ಲೂ, ಪರಂಪರಾಗತವಾಗಿ ಮರ್ಯಾದೆಯೇ ಇಲ್ಲದಂತೆ ಬದುಕಿದ್ದ ‘ಕಾಂಗ್ರೆಸ್ ಡೈನಸ್ಟಿ’ ಅಂದರೆ ಕೇಳಬೇಕಾ?! ಭಾರತಕ್ಕೆ ಶುಭಶಕುನವಾಗುವುದಕ್ಕಿಂತ ಅಪಶಕುನವಾಗಿದ್ದೇ ಹೆಚ್ಚು!
ಅದರಲ್ಲೂ, ನಮ್ಮ ರಾಗಾ ಮಾತ್ರ ಒಂದಿಲ್ಲೊಂದು ಯಡವಟ್ಟು ಮಾಡಿಕೊಳ್ಳುತ್ತಿರುವುದಕ್ಕೆ ಸ್ವತಃ ಕಾಂಗ್ರೆಸ್ಸಿಗೇ ತಲೆಬಿಸಿ ಆಗಿದೆ! ರಾಗಾನನ್ನು ಬಚಾವ್ ಮಾಡುವುದೋ ಅಥವಾ ಚುನಾವಣೆಯ ಕಡೆ ಗಮನ ಹರಿಸುವುದೋ ಎನ್ನುವುದೋ ಎಂಬುದೂ ಗೊತ್ತಾಗದೇ!
ಸೋಮನಾಥ ದೇವಾಲಯದ ವಿವಾದ ಆದ ಮೇಲೆ, ದೇವಾಲಯದ ರಿಜಿಸ್ಟರ್ ಪಟ್ಟಿಯಲ್ಲಿರುವ ರಾಗಾನ ಸಹಿಗೆ ಇನ್ಯಾವುದೋ ಕಥೆ ಕಟ್ಟಿ, ತಿರುಚಿ, ಬಣ್ಣಗಳನ್ನು ತುಂಬಿ ಕಾಗೆ ಹಾರಿಸಲು ನೋಡುತ್ತಿದೆ! ಪಾಪ! ಹಿಂದೂಯೇತರರ ಪಟ್ಟಿಯಲ್ಲಿ ರಾಹುಲ್ ಗಾಂಧಿ ತನ್ನ ಸಹಿಯನ್ನು ಖುದ್ದು ದಾಖಲಿಸಿ ‘ನಾನೊಬ್ಬ ಹಿಂದೂ’ ಎಂದು
ಘರ್ಜಿಸಿದಾಗಲೇ ಮಾಡಿದ ಅನಾಹುತಕ್ಕೆ ಕಾಂಗ್ರೆಸ್ ನಡುಗಿ ಹೋಗಿದೆ!
ಬಂದ ಬಂದ ಸಿಬಲ್! ಕಪಿ (ಲ್) ಸಿಬ (ಲ್)!!
ಮಾಡಲಿಕ್ಕೇನೂ ಉಳಿದಿಲ್ಲ ಎಂದಾಗ, ಬೇರೆ ದಾರಿ ಕಾಣದಾದಾಗ ವೆಂಕಟೇಶ್ವರನನ್ನೋ, ರಾಘವೇಂದ್ರನನ್ನೋ ಹುಡುಕಿ ಕೊಂಡು ನೀನೇ ದಾರಿ ಎನ್ನುವ ಹಾಗೆ ಈಗ ಕಾಂಗ್ರೆಸ್ಸಿಗರೂ ಮತ್ತೆ ನರೇಂದ್ರ ಮೋದಿಯವರ ಬೆನ್ನಿಗೆ ಬಿದ್ದಿದ್ದಾರೆ! ಮೋದಿ ಪ್ರಧಾನ ಮಂತ್ರಿಯಾದ ನಂತರವಂತೂ ಕೂತಿದ್ದಕ್ಕೆ ನಿಂತಿದ್ದಕ್ಕೆಲ್ಲ ಮೋದಿಯವರನ್ನೇ ಎಳೆದು ತರುವ ಕಾಂಗ್ರೆಸ್ಸಿಗರಿಗೆ ಸದ್ಯದ ಪರಿಸ್ಥಿತಿಯಲ್ಲಿ ಪರೋಕ್ಷವಾಗಿ ಮೋದಿ ‘ಹಾಟ್ ಫೇವರಿಟ್ ಗಾಡ್’!!
ಅದಕ್ಕೆ, ರಾಗಾನ ಮಿಶ್ರತಳಿ ವಿಚಾರವನ್ನು ಮರೆ ಮಾಚಲು ಕಾಂಗ್ರೆಸ್ ನಾಯಕ, ‘ಪ್ರಧಾನ ಮಂತ್ರಿ ನರೇಂದ್ರ ಮೋದಿಯೇನು ಹಿಂದುವೇ?! ಅಲ್ಲ! ಈ ಬಿಜೆಪಿಯವರು ನಿಜವಾದ ಹಿಂದೂ ಧರ್ಮವನ್ನು ಮರೆತಿದ್ದಾರೆ! ಮರೆತಿದ್ದೇವೆಂಬುದನ್ನೂ ಮರೆತು ಹಿಂದುತ್ವವನ್ನು ದತ್ತು ತೆಗೆದುಕೊಂಡು ಅವಮಾನ ಮಾಡುತ್ತಿದ್ದಾರೆ!” ಎಂದಿದ್ದಾರೆ!
“ಎಷ್ಟು ಸಲ ಪ್ರಧಾನ ಮಂತ್ರಿ ದೇವಸ್ಥಾನಕ್ಕೆ ಹೋಗುತ್ತಾರೆ?! ಅವರು ನಿಜವಾದ ಹಿಂದೂ ಅಲ್ಲವೇ ಅಲ್ಲ! ಯಾರು ಪ್ರತಿ ಭಾರತೀಯನನ್ನು ತನ್ನ ಸಹೋದರ ಸಹೋದರಿಯ ಹಾಗೆ ಕಾಣುತ್ತಾನೋ, ಅವನೇ ಹಿಂದು! ಇವರಲ್ಲ!” ಎಂದು ತೀರ್ಪು ನೀಡಿದ್ದಾರೆ!
ಅಯ್ಯೋ ಶಿವ ಭಕ್ತ ರಾಗಾ!!
ಅತ್ತ ಕಪಿಲ್ ಸಿಬಲ್ ಹೆಂಡ ಕುಡಿದ ಮಂಗನಂತಾಡುತ್ತಿದ್ದರೆ ಇತ್ತ ಶಿವಭಕ್ತರು ರಾಗಾನಿಗೆ ಹಿಡಿ ಶಾಪ ಹಾಕುತ್ತಿದ್ದಾರೆ!
ಕಳೆದೆರಡು ತಿಂಗಳಿನಲ್ಲಿ 15 ಕ್ಕೂ ಹೆಚ್ಚು ದೇವಸ್ಥಾನಗಳಿಗೆ ಭೇಟಿ ನೀಡಿರುವ ರಾಗಾ ಏನು ಹಿಂದೂ ಎಂಬ ನಂಬಿಕೆಯಿಂದ ಬಂದಿರುವನೇ?! ಯಾವತ್ತು,
ಕಾಂಗ್ರೆಸ್ಸಿಗರಿಗೆ ಸೋಲಿನ ವಾಸನೆ ಬಡಿಯಿತೋ, ಅವತ್ತು ದೇವಸ್ಥಾನಗಳ ಕಡೆ ಮುಖ ಮಾಡುವ ಇವರುಗಳು ಹಿಂದೂಗಳೇ?! ಮುಂಚೆಯ ಇಂದಿರೆಯೂ ಮಾಡಿದ್ದು ಅದನ್ನೇ ಅಲ್ಲವೇ?! ಮತಕ್ಕೋಸ್ಕರ ದೇವರಿಗೂ ಲಂಚ ಕೊಡುವವರು ಶಿವಭಕ್ತರು ಹೇಗಾದಾರು ಸ್ವಾಮಿ?!
ಇತ್ತ ಕಪಿಲ್ ಕಪಿಯಾಗಿದ್ದರೆ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನಾಯಕನೊಬ್ಬ ಅಮಿತಾ ಷಾ ಹಿಂದೂವೇನು?! ಅವರು ಜೈನ ಧರ್ಮಿಗಳು ಎಂದು ಮುತ್ತು ಉದುರಿಸಿದ್ದಾನೆ! ಪಾಪ! ಜೈನ ಒಂದು ಮತ, ಧರ್ಮವಲ್ಲ ಎಂಬುದಾಗಲಿ,ಅಥವಾ ಹಿಂದೂ ಧರ್ಮದ ಒಂದು ಭಾಗವೇ ಎಂಬುದಾಗಲಿ ಗೊತ್ತಿಲ್ಲದ ಅವಿವೇಕಿಗಳು ಕಾಂಗ್ರೆಸ್ ನ ನಾಯಕರಾಗಿದ್ದಾರಲ್ಲ!?
ಅದೆಲ್ಲ ಬಿಡಿ! ಕಪಿಲ್ ಸಿಬಲ್ ಹೇಳಿದ ಹೇಳಿಕೆ ಮಾತ್ರ ಸಾರ್ವುನಿಕವಾಗಿ ಭಾರೀ ಟೀಕೆಗೆ ವ್ಯಕ್ತವಾಗಿದ್ದಲ್ಲದೇ, ಇಂಗು ತಿಂದ ಮಂಗನಂತಾಗಿದ್ದಾನೆ ಕಪಿಲ್ ಸಿಬಲ್!
– ಪೃಥು ಅಗ್ನಿಹೋತ್ರಿ