ಬೆಂಗಳೂರಿನ ಹೊರವಲಯದಲ್ಲಿರುವ ತಮ್ಮ ಮನೆಯ ಮುಂಭಾಗದಲ್ಲಿಯೇ ಹತ್ಯೆಯಾಗಿ ಹೋಗಿದ್ದರು ಗೌರಿ ಲಂಕೇಶ್!! ಕಲಬುರ್ಗಿಯವರ ಹತ್ಯೆಯ ಚಿಂತನೆ ಈ ನಾಡ ಜನರಿಂದ ಮಾಸುವ ಮುನ್ನವ ಮತ್ತೋರ್ವ ಸಾಹಿತಿಯ ಹತ್ಯೆಯಾಗಿದ್ದು ಈ ನಾಡಿಗೆ ಆಘಾತವನ್ನು ನೀಡಿದ್ದು ಮಾತ್ರ ಸತ್ಯ!! ಈ ಹತ್ಯೆಯ ಸುತ್ತಮುತ್ತ ಅನೇಕ ರೆಕ್ಕೆ ಪುಕ್ಕಗಳನ್ನು ಜೋಡಿಸಿ ಕಥೆಗಳನ್ನು ಹಣೆಯಲಾಗುತ್ತಿದೆ. ಆದರೆ ನಿಮ್ಮನ್ನೆಲ್ಲಾ ಚಕಿತಗೊಳಿಸುವ ಇನ್ನೊಂದು ವಿಚಾರವಿದೆ.
ಕರ್ನಾಟಕದ ಹಲವು ಪ್ರಭಾವೀ ರಾಜಕಾರಣಿಗಳ ಹಾಗೂ ಉದ್ಯಮಿಗಳ ಬಟಾಬಯಲು ಮಾಡಲು ತಯಾರಿಯನ್ನು ನಡೆಸುತ್ತಿದ್ದರು ಗೌರಕ್ಕ. ಮೂಲಗಳ ಪ್ರಕಾರ
ದೆಹಲಿಗೆ ತನ್ನ ಸ್ನೇಹಿತರೊಂದಿಗೆ ವಿಚಾರಗೋಷ್ಠಿಗೆ ತೆರಳಬೇಕಾದರೆ ಈ ವಿಚಾರದ ಕುರಿತಾಗಿ ಸುಳಿವನ್ನು ಕೊಟ್ಟಿದ್ದಾರೆನ್ನಲಾಗಿದೆ. ಈ ಘಟನೆಯ ಕುರಿತಾಗಿ ಅವರ ಸ್ನೇಹಿತ ಮಾತನಾಡುತ್ತಾ, ” ನಿಸ್ಸಂಶಯವಾಗಿ ಅವಳನ್ನು ಮೌನವಾಗಿಸಲಾಗಿದೆ” ಎಂದರು.
1983-84 ನೆಯ ಇಸವಿಯಲ್ಲಿ ಇಂಡಿಯನ್ ಇಂಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ ನಲ್ಲಿ ಸಹಪಾಠಿಯಾಗಿದ್ದ ವ್ಯಕ್ತಿಯವರು. ತಮ್ಮ ಸ್ನೇಹಿತರಲ್ಲಿ ಪದೇ ಪದೇ ಪತ್ರಿಕೋದ್ಯಮದ ಮಹತ್ವವನ್ನು ಹೇಳುತ್ತಿದ್ದರು. ನಾನು ಇತರರಿಗೆ ಅರಿಯದ ಘನಘೋರ ಸುದ್ದಿಗಳನ್ನು ಬಹಿರಂಗಪಡಿಸಿಯೇ ಸಿದ್ಧ. ಪತ್ರಿಕೋದ್ಯಮ ಇರುವುದೇ ಅದಿಕ್ಕಲ್ಲವೇ?? ಎಂಬುದಾಗಿ ಹೇಳುತ್ತಿದ್ದರು.
ಇವರು ನಡೆಸಿದ ತನಿಕಾ ತುಣುಕುಗಳನ್ನು ಬಹಿರಂಗಪಡಿಸಿದ್ದೇ ಆದರೆ ಅವರಿಗೆ ಸಂಭವಿಸಬಹುದಾದ ಅಪಾಯಗಳ ಕುರಿತಾಗಿ ಮೊದಲೇ ಆಕೆಗೆ ಅರಿವಿತ್ತು.
ಮುಂಬರುವ ಚುನಾವಣೆಯಲ್ಲಿ ಈ ವಿಚಾರಗಳ ಚರ್ಚೆಗೆ ತಯಾರಾಗಿದ್ದರೆಂಬುಗಾಗಿ ಗೌರಕ್ಕನ ದೆಹಲಿಯ ಸ್ನೇಹಿತರು ಹೇಳಿದ್ದಾರೆ.
ಇದೇ ವಿಚಾರಗಳಲ್ಲಿ ಭಿನ್ನ ಅಭಿಪ್ರಾಯವನ್ನು ಹೊಂದಿರುವ ತನ್ನ ಗೆಳೆಯರೊಂದಿಗೆ ಸದಾ ಚರ್ಚಿಸುತ್ತಿದ್ದರು ಗೌರಿ ಲಂಕೇಶ್.!!
ಪೋಲೀಸರು ಗೌರೀ ಲಂಕೇಶ್ ಅವರ ಮನಸ್ಸು ಅಹಿತಕರ ಸ್ಥಿಯನ್ನು ತಲುಪಿತ್ತು ಎಂಬುದಾಗಿ ಬಣ್ಣಿಸಿದ್ದಾರೆ!!
ಲಂಕೇಶ್ ಅವರನ್ನು ಹಲವು ದಿನಗಳಿಂದ ಹಿಂಬಾಲಿಸಿದ ನಂತರ ಹತ್ಯೆ ಮಾಡಲಾಗಿದೆ ಎಂಬುದಾಗಿ ಪಬ್ಲಿಕ್ ಟಿವಿ ವರದಿ ಮಾಡಿದೆ. ಸಪ್ಟೆಂಬರ್ 2 ನೆಯ ತಾರೀಖಿನಂದು ಅವರ ಹತ್ಯೆಗೆ ಪ್ರಥಮ ಪ್ರಯತ್ನ ಮಾಡಲಾಗಿತ್ತು ಎಂಬುದಾಗಿ ಆ ಸುದ್ದಿವಾಹಿನಿ ವರದಿ ಮಾಡಿದೆ. ಅವರಿಗೆ ಸತತವಾಗಿ ಬೆದರಿಕೆ ಕರೆಗಳು ಬರುತ್ತಿದ್ದವು, ಎಂದೆಲ್ಲಾ ವರದಿ ಮಾಡಿದ್ದವು.
ಹಿಂದುತ್ವ ವಿರೋಧವನ್ನು ಸದಾ ಬಿಂಬಿಸುತ್ತಾ, ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಾ, ನಕ್ಸಲರಿಗೆ ಬೆಂಬಲವನ್ನು ಕೊಡುತ್ತಾ ಬದುಕಿ, ನಂತರ ಅದೇ ಪರಿವಾರ ಇವರನ್ನು ಹತ್ಯೆಗೈದರೇ ಅನ್ನುವ ಅನುಮಾನ ಬಲವಾಗಿ ಕಾಡಿತ್ತು. ಆದರೆ ಈಗ ಅದಕ್ಕೆ ಮಹತ್ತರವಾದ ತಿರುವು ಸಿಕ್ಕಿದ್ದು , ಅವರ ಸಾವಿನ ಹಿಂದೆ ದೊಡ್ಡ ಕೈಗಳು ಕಾರ್ಯ ನಿರ್ವಹಿಸಿವೆ ಅನ್ನುವ ಸಂಶಯ ಕಾಡುತ್ತಿವೆ. ಅವರ ಬಂಡವಾಳವನ್ನು ಬಯಲಿಗೆಳೆಯುವ ಮುನ್ನವೇ ಅವರು ಹತ್ಯೆಯಾಗಿ ಹೋದ್ದು ಪ್ರಕರಣಕ್ಕೆ ಇನ್ನೊಂದು ತಿರುವು ಸಿಕ್ಕಿದಂತಾಗಿದೆ.
ಕೆಲವು ಪ್ರಶ್ನೆಗಳು ನಮ್ಮನ್ನು ಕಾಡುತ್ತಿವೆ :
ರಾಜಕಾರಣಿಯೋರ್ವರ ಹಗರಣವನ್ನು ಬಟಾಬಯಲು ಮಾಡಲು ತಯಾರಾಗಿದ್ದರೇ ಗೌರಕ್ಕ??
ಚುನಾವಣೆಗೆ ಆಕೆ ಅಡ್ಡಿಯಾಗಬಹುದೆಂಬ ಚಿಂತನೆಯಲ್ಲಿಯೇ ಅವರನ್ನು ಹತ್ಯೆಗೈಯಲಾಯಿತೇ??
ರಾಜಕೀಯ ಪ್ರೇರಿತ ಶಕ್ತಿಗಳು, ಉದ್ಯಮಿಗಳು ಸೇರಿ ಈ ಹತ್ಯೆಯ ನೇತೃತ್ವ ವಹಿಸಿದರೆ??
ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.
ಒಟ್ಟಾರೆಯಾಗಿ ಯಾವ ಯಾವ ವಿಚಾರಕ್ಕೆ ಅವರ ಹತ್ಯೆಯಾಗಿರಬಹುದೋ ಎಂಬುದಾಗಿ ಚರ್ಚೆಯಾಗುತ್ತಿದ್ದ ಸನ್ನಿವೇಶದಲ್ಲಿ ಈಗ ಅದಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ಅದರ ಹಿಂದಿನ “ಕೈ” ವಾಡ ಯಾರದ್ದಿರಬಹುದೆಂದು ತನಿಖೆಯಿಂದಷ್ಟೇ ಬಹಿರಂಗವಾಗಬೇಕಿದೆ.
– ವಸಿಷ್ಠ