ಅಂಕಣಪ್ರಚಲಿತರಾಜ್ಯ

ಪ್ರವಾಹ ಪೀಡಿತ ಪ್ರದೇಶದಲ್ಲಿ ಮೋದಿಯವರು ಕಂಡರೆ 25000 ರೂ ಗಳನ್ನು ಕೊಡುತ್ತೇನೆಂದ ಕಾಂಗ್ರೆಸ್ ನಾಯಕಿ ರಮ್ಯಾಳಿಗೆ ಜನತೆ ಕೊಟ್ಟರು ತಕ್ಕ ಪ್ರತ್ಯುತ್ತರ !!!

ದಿವ್ಯಾ ಸ್ಪಂದನ ಅಲಿಯಾಸ್ ರಮ್ಯಾ. ತಮ್ಮಷ್ಟಕ್ಕೆ ತಾವು ಚಲನಚಿತ್ರದಲ್ಲಿ ನಟಿಸುತ್ತಿದ್ದ ರಮ್ಯಾ ರಾಜಕಾರಣಕ್ಕೆ ಕಾಲಿಟ್ಟು ತಮ್ಮ ಮರಿಯಾದೆಯನ್ನು ತಾವೇ ಕಳೆದುಕೊಂಡರು. ಅವರ ಅದಮ್ಯ ದೇಶಪ್ರೇಮವನ್ನು ಜಗತ್ತಿಗೆ ಪರಿಚಯಿಸಿದರು. ಮಂಗಳೂರನ್ನು ನರಕೆಂದು ಪಾಕಿಸ್ತಾನವನ್ನು ಸ್ವಗವೆಂದರು. ನರಕಕ್ಕೆ ವೀಸಾ ಕೊಡಲು ಹಲವಾರು ಜನ ತಯಾರಾಗಿದ್ದರು, ಆದರೆ ಇವರೇ ಯಾಕೋ ಹೋಗಲಿಲ್ಲ. ಆದ್ದರಿಂದಲೇ ಜನರು ಇವರನ್ನು ಪ್ರೀತಿಯಿಂದ ವಿವಾದದ ರಾಣಿ ಎಂದರು. ಪಾಕಿಸ್ತಾನದ ಮೇಲೆ ಪ್ರೇಮ ಅವರಿರುವ ಪಕ್ಷದ ರಕ್ತದಲ್ಲಿಯೇ ಇದೆ. ಮೋದಿವರನ್ನು ಚುನಾವಣೆಯಲ್ಲಿ ಸೋಲಿಸಲು ಪಾಕಿಸ್ತಾನದ ಸಹಾಯವನ್ನು ಕೋರಿದ್ದ ಮಣಿ ಶಂಕರ್ ಅಯ್ಯರ ಇದೇ ಪಕ್ಷದಲ್ಲಿದ್ದಾರೆ. ಅಲ್ಲಿ ಪಾಕಿ ಪ್ರೇಮ ಸಾಬೀತಾಯಿತು. ಇಷ್ಟೆಲ್ಲಾ ಘಟನೆಗಳ ಕುರಿತಾಗಿ ಚರ್ಚೆಯಾಗುತ್ತಿರುವಾಗ ಮಿಸ್ಟರ್ ರಾಹುಲ್ ಗಾಂಧಿ ರಮ್ಯಾಳನ್ನು ಕರುನಾಡಿನ ಸಾಮಾಜಿಕ ಮಾಧ್ಯಮದ ನೇತೃತ್ವವನ್ನು ವಹಿಸಿದ್ದಾರೆ.

ಈ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ರಮ್ಯಾಳಿಗೆ ನೇರವಾಗಿ ಉಗಿಯಲು ನೆರವು ಮಾಡಿಕೊಟ್ಟರು ರಾಹುಲ ಗಾಂಧಿ. ತಮ್ಮ ಟ್ವಿಟ್ಟರು ಖಾತೆಯಿಂದ ರಮ್ಯಾ ಅಮೋಘವಾದ ವಿಚಾರವನ್ನು ಹಂಚಿದ್ದರು. ಏನು ಗೊತ್ತೇ,” ಮೋದಿವರು ಅಸ್ಸಾಂ, ಗುಜರಾತ್, ಬಿಹಾರ್ ನಲ್ಲಿ ಉಂಟಾದ ಪ್ರವಾಹದ ಸ್ಥಳಗಳಲ್ಲಿ ಕಾಣಸಿಕ್ಕರೆ ನಾನು ನಿಮಗೆ 25000 ರೂ ಗಳನ್ನು ಕೊಡುತ್ತೇನೆ. ಆದರೆ ಫೊಟೋಶಾಪ್ ಮಾಡುವ ಹಾಗಿಲ್ಲ. ” ಎಂದಿದ್ದರು.

ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯೆಯನ್ನು ಕೊಟ್ಟ ಭವ್ಯ ಭಾರತದ ಪ್ರಜೆಗಳು, ಮೋದಿವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟ ಚಿತ್ರವನ್ನೂ ಟ್ವಿಟ್ಟರಿವಲ್ಲಿಯೇ ಹಂಚಿದ್ದರು. ಇದಕ್ಕೆ ದಿ ಗ್ರೇಟ್ ರಾಜಕಾರಣಿ ರಮ್ಯಾಳಿಂದ ಸಿಕ್ಕಿದ್ದು ಮಾತ್ರ ಬ್ಲಾಕ್ ಭಾಗ್ಯ.

ಇದರಿಂದ ಒಂದು ವಿಚಾರವಂತೂ ಸ್ಪಷ್ಟ. ಕಾಂಗ್ರೆಸ್ ಪಕ್ಷದಲ್ಲಿ ಬೆಳೆದು ಬಂದಿದ ಸಾವಿನ ಮನೆಯಲ್ಲಿ ರಾಜಕಾರಣ, ದ್ವೇಷ ರಾಜಕಾರಣ ರಮ್ಯಾಳ ಮೂಲಕ ಮತ್ತೊಮ್ಮೆ ಸಾಬೀತಾಯಿತು. ಬಹುಶಃ ರಮ್ಯಾ ಅವಳು ಮರೆತ್ತಿದ್ದಾರೆಂದು ಕಾಣುತ್ತೆ. ಗುಜರಾತ್ ನಲ್ಲಿ ಪ್ರವಾಹ ಆದಾಗ ಗುಜರಾತ್ ಶಾಸಕರು ಬೆಂಗಳೂರಿನಲ್ಲಿ ರೆಸಾರ್ಟ ರಾಜಕಾರಣ ಮಾಡಿದ್ದು ದಿವ್ಯಾ ಳಿಗೆ ಮರೆತು ಹೋದುದು ವಿಪರ್ಯಾಸ !!

ಟ್ವಿಟ್ಟರ್ ನಲ್ಲಿ ಜನರು ರಮ್ಯಾಳ ವಿರುದ್ಧ ಆಕ್ರೋಷವನ್ನು ವ್ಯಕ್ತಪಡಿಸಿದ್ದು, ರಮ್ಯಾಳ ಸಂಪೂರ್ಣ ಚರಿತ್ರೆಯನ್ನು ಭಾರತೀಯ ಪ್ರಜೆಗಳು ವಿಶ್ವದ ಮುಂದೆ ತೆರೆದಿಟ್ಟರು. ಸೋನು ನಿಗಮ್ ಶೇವ್ ಮಾಡಿದರೆ ಮೌಲಿಯು ದುಡ್ಡು ಕೊಡುತ್ತೇನೆ ಎಂದಿದ್ದರು, ಅದೇ ರೀತಿಯಲ್ಲಿ ರಮ್ಯಾಲವಳು ಮಾಡುತ್ತಿದ್ದಾರೆ ಎಂದು ಟ್ವಿಟ್ಟರಿಗಳು ಎಂದು ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿದ್ದಾರೆ. ಪ್ರಜೆಗಳ ಕಷ್ಟವನ್ನು ಆಲಿಸಲಾಗದ ರಮ್ಯಾ ಬೇಡದ ವಿಚಾರಗಳ ಕಡೆಗೇ ಹೆಚ್ಚು ಗಮನವನ್ನು ಹರಿಸುತ್ತಿದ್ದಾರೆ ಎಂದು ಟ್ವಿಟ್ಟರಿಗರು ಪ್ರತಿಕ್ರಯಿಸಿದ್ದಾರೆ.

ಇನ್ನಾದರೂ ಇದರಿಂದ ರಮ್ಯಾ ಬುದ್ಧಿ ಕಲಿಯುತ್ತಾರೋ??? ಇಲ್ಲಾ ಅದೇ ಬುದ್ಧಿಯಿಂದ ವರ್ತಿಸುತ್ತಾರೋ ಜನರಿಂದ ನಂತರ ಶಿಕ್ಷೆ ಅನುಭಿಸುತ್ತಾರಾ?? ಕಾದು ನೋಡಬೇಕಿದೆ.

– ಆತ್ಮಿಕ

Tags

Related Articles

Close