ಪ್ರಚಲಿತ

ಫೀಲ್ಡ್ ಮಾರ್ಷಲ್ ಕಾರಿಯಪ್ಪನವರಿಗೆ ಭಾರತ ರತ್ನ ಕೊಡಬೇಕೆಂಬ ಅಭಿಪ್ರಾಯ ಕೇಳುತ್ತಲೇ ಕಾಂಗ್ರೆಸ್ ಸಿಟ್ಟು ಮಾಡಿಕೊಂಡಿದೆ! ಯಾಕೆ?!

ಮೊನ್ನೆ ಕೊಡಗಿಗೆ ಬಂದಿದ್ದ ಸೇನಾ ವರಿಷ್ಠ ಬಿಪಿನ್ ರಾವತ್ ರವರು ಭಾರತ ರತ್ನಕ್ಕೆ ಸೂಕ್ತ ವ್ಯಕ್ತಿ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಎಂದಿದ್ದು ಅತಿಶಯೋಕ್ತಿ ಅಲ್ಲವೇ ಅಲ್ಲ! ಕಾರಿಯಪ್ಪನವರ ಬದುಕಿನ ಬಗ್ಗೆ ಕಣ್ಣು ಹಾಯಿಸಿದರೆ ಎಂತಹವರನ್ನೂ ಧೃತಿಗೆಡಿಸಿಬಿಡುವಂತಹ ಕ್ಷಣಗಳಿದೆ, ಸಾಹಸವಿದೆ! ಮಗ್ಗಲು ಮಗ್ಗಲಾಗಿ ದೇಶಕ್ಕೆ ಉಸಿರನ್ನೇ ಸರಕ ಹೊಯ್ದ ರೀತಿಯಿದೆಯಲ್ಲವಾ?! ಉಹೂಂ! ಅದು ಎಲ್ಲರಿಗೂ ಸಾಧ್ಯವೇ ಇಲ್ಲ! ಇದನ್ನರಿತೇ ಬಿಪಿನ್ ರಾವತ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು!

ಬಿಡಿ! ಹಳೇ ರಾಗ ಎನ್ನುವಂತೆ ಕಾಂಗ್ರೆಸ್ ಈ ನಡೆಯನ್ನು ನಿಷೇಧಿಸಿದೆ! ಕಾರಿಯಪ್ಪನವರಿಗೆ ಭಾರತ ರತ್ನ ಕೊಡಲಿ ಎಂಬ ಅಭಿಪ್ರಾಯವೊಂದನ್ನೇ ಹಿಡಿದುಕೊಂಡು ವಿರೋಧಿಸುತ್ತಿರುವ ಕಾಂಗ್ರೆಸ್ ಗೆ ಈ ಹಿಂದೆ ನೆಹರೂ ಕುಟುಂಬವೊಂದು ಸಾಲು ಸಾಲಾಗಿ ಪ್ರಶಸ್ತಿಯನ್ನು ಸ್ವತಃ ದಕ್ಕಿಸಿಕೊಂಡಿದ್ದಕ್ಕೆ
ವಿರೋಧಿಸಬೇಕೆಂದೆನಿಸಲಿಲ್ಲವಷ್ಟೇ! ಮಾತೆತ್ತಿದರೆ ‘ಯಾರಾದರೂ ಸರಿ! ನ್ಯಾಯವಷ್ಟೇ ಮುಖ್ಯ” ಎಂದ ಕಾಂಗ್ರೆಸ್ ಅನ್ಯಾಯವನ್ನೇ ಮುಂದುವರೆಸಿಕೊಂಡು
ಬಂದದ್ದಾದರೂ ಅದಕ್ಕೆ ತಕ್ಕನಾಗಿ ನಂಬಿ ಇನ್ನೂ ಮತ ನೀಡುತ್ತಿರುವ ಮತದಾರರ ದುರಾದೃಷ್ಟವೂ ಅಷ್ಟೇ ಸತ್ಯ!

ಕಾಂಗ್ರೆಸ್ ಗೆ ಇದು ಹೊಸತಲ್ಲ!

ದೇಶ ಕಾಯುವ ಯೋಧರನ್ನೇ ಆಗಲಿ, ನಿಯತ್ತಿನಿಂದ ಸೇವೆ ಸಲ್ಲಿಸುವರನ್ನೇ ಆಗಲಿ, ಕಾಂಗ್ರೆಸ್ ನ ಅಪ್ಪ ದೊಡ್ಡಪ್ಪರಾದ ನೆಹರೂ – ಗಾಂಧಿ ಮರ್ಯಾದೆಯುತರಾಗಿ ನಡೆಸಿಕೊಂಡ ಇತಿಹಾಸವಿಲ್ಲ! ಅವತ್ತೂ ಸಹ, ಸೈನಿಕರನ್ನು ಅವಮಾನಿಸಿದ್ದ ನೆಹರೂ, 1962 ರಲ್ಲಿ ನೂರಾರು ಸೈನಿಕರನ್ನು ಬಲಿ ಕೊಟ್ಟರೆ, ಗಾಂಧಿ 1947 ರಲ್ಲಿ ಹಲ್ಲು ಕಿರಿದು ಜಿನ್ನಾನ ಪರ ನಿಂತು ಲಕ್ಷ ಹಿಂದೂಗಳನ್ನು ಬಲಿ ಕೊಟ್ಟಿದ್ದರು! ಇಂದಿರಾ ಗಾಂಧಿ ಹೊರತೇ?! ಸಂತ ಕಪಾತ್ರಿಯವರ ಬೆಂಬಲಕ್ಕೆ ನಿಂತವರನ್ನೂ ಬಲಿ ಕೊಟ್ಟ ಮೇಲೆ, ಮಗ ರಾಜೀವ ನೂ ಸಹ ಸೇನೆಯಲ್ಲಿ ಗರಿಷ್ಟ ಸೇವೆ ನಿರ್ವಹಿಸುವ ಸಿಖ್ಖರ ಪ್ರಾಣದಾರತಿ ಮಾಡಿದ ಮೇಲೂ ಸಮಾಧಾನವಾಗದೇ, ಸೋನಿಯಾ ಎಂಬ ಇಟಲಿಯ ಬೆಡಗಿ ಭಾರತದೊಳ ಸ್ಫೋಟಕ್ಕೆ ಕೈ ಕುಲುಕಿ ನಕ್ಕಿದ್ದಳು!

ಈಗಲೂ ಅಷ್ಟೇ!

ಪಾಕಿಸ್ಥಾನಿ ಬೆಂಬಲಿಗರೋ ಅಥವಾ ಇನ್ಯಾರೋ ಎಂಬುದೂ ಗೊತ್ತಾಗದಷ್ಟು ಗೊಂದಲಕ್ಕೀಡು ಮಾಡುವ ಈ ಕಾಂಗ್ರೆಸ್ ಗೆ ಯಾವುದರಲ್ಲಿ ಹೊಡೆಯಬೇಕೆಂದು ತೀರ್ಮಾನಿಸುವ ಮುನ್ನ ಮಾರ್ಷಲ್ ಅವರ ಬಗ್ಗೆ ಒಂದಷ್ಟು ಮಾಹಿತಿಗಳು!

ಜನವರಿ 28, 1899 ರಂದು ಜನಿಸಿದ ಕೊಡಂದೆರ ಮಾದಪ್ಪ ಕಾರಿಯಪ್ಪ ಮಹಾದಂಡ ನಾಯಕ ಪದವಿಯನ್ನು ಪಡೆದ ಮೊದಲ ಯೋಧ! ವಿಪರೀತ ಹವಾಮಾನವಿರುವ ಪ್ರದೇಶದಲ್ಲಿ ಪಠಾಣರ ವಿರುದ್ಧ ದೂರದರ್ಶಕವೇ ಇರದ ಕೋವಿಯಿಂದ ಒಂದೇ ಏಟಿಗೆ ನೆತ್ತಿ ಸೀಳಿದ ಕಾರಿಯಪ್ಪ ಯುದ್ಧ ಗೆದ್ದಿದ್ದರು!

ಅನಾಗರಿಕ ಬಂಡುಕೋರರ ನ್ನು ಹತ್ತಿಕ್ಕಿದ ಕಾರಿಯಪ್ಪ, ಗೆರಿಲ್ಲಾ ಯುದ್ಧದಲ್ಲಿಯೂ ಚತುರರಷ್ಟೇ! ಸ್ವತಃ ಬ್ರಿಟಿಷ್ ಸೈನ್ಯದ ಮೇಲಧಿಕಾರಿಯೇ ‘ವಿಜಯಶ್ರೀ’ ಗೌರವಕ್ಕೆ ಪಾತ್ರರಾದ ಕಾರಿಯಪ್ಪನವರನ್ನು ವಿಕ್ಟೋರಿಯಾ ರಾಣಿಯ ಸ್ವಂತ ಲಘು ಪದಾತಿ ದಳಕ್ಕೆ ವರ್ಗಾವಣೆ ಮಾಡಿ ನಿವೃತ್ತರಾಗುವವರೆಗೂ ಅಲ್ಲಿಯೇ ಸೇವೆ ಸಲ್ಲಿಸಿದರು!

ಇರಾಕ್ ಹಾಗೂ ವಝಿರಿಸ್ಥಾನದಲ್ಲಿ ತಮ್ಮ ಸೈನಿಕ ಬದುಕಿನ ಬಹುತೇಕ ಸಮಯ ಕಳೆದ ಕಾರಿಯಪ್ಪನವರನ್ನು 1947 ರಲ್ಲಿ ಪಾಕಿಸ್ಥಾನದ ವಿರುದ್ಧ ಯುದ್ಧ ಪ್ರಾರಂಭವಾದಾಗ ಪಶ್ಚಿಮ ಸೈನ್ಯದ ಮುಖ್ಯ ಅಧಿಕಾರಿಯನ್ನಾಗಿ ನೇಮಿಸಲಾಯ್ತು! ಝಿಲಾ, ದ್ರಾಸ್ ಹಾಗೂ ಕಾರ್ಗಿಲ್ ನನ್ನು ಮರಳಿ ಪಡೆಯುವುದಕ್ಕೆ ಸಹಕಾರ ನೀಡಿದ ಕಾರ್ಯಪ್ಪನವರ ಯುದ್ಧ ಶೈಲಿಯ ಮುಂದೆ ಪಾಕಿಗಳು ನೆಲಕ್ಕುರುಳುತ್ತಾ ಬಂದರು!

ತದನಂತರ, 1949 ರಲ್ಲಿ ಸೈನ್ಯದ ಕಮಾಂಡರ್ ಇನ್ ಚೀಫ್ ಆದ ಕಾರಿಯಪ್ಪನವರು ಯಾವಾಗಲೂ ತಮ್ಮ ಸಿದ್ಧಾಂತದ ಪ್ರತಿ ಪಾದನೆಯಲ್ಲಿ ಹಿಂದೇಟು ಹೊಡೆದವರಲ್ಲ!

ಬರೀ ಇಷ್ಟೇ ಅಲ್ಲ, ಕಾರ್ಯಪ್ಪನವರ ಸಾಧನೆಗೆ ಎಣೆಯಿಲ್ಲ!

ನಿವೃತ್ತನಾದ ಮೇಲೂ ಸಹ ಸೈನಿಕನಿಗೆ ಸರಕಾರ ಕಡೆಗಣಿಸುವುದಿಲ್ಲ ಎಂಬ ಭರವಸೆ ಬರಬೇಕು” ಎಂದೆನ್ನುತ್ತಿದ್ದ ಕಾರಿಯಪ್ಪ ಆಸ್ಟ್ರೇಲಿಯಾದಲ್ಲಿ ನಿವೃತ್ತ ಸೈನಿಕರಿಗೆ ರೂಪಿಸಿದ್ದ ಯೋಜನೆಗಳನ್ನು ಇಲ್ಲಿಯೂ ತರುವಂತೆ ಸರಕಾರಕ್ಕೆ ಬೇಡಿಕೆ ಇಟ್ಟು, ಧನ ಸಂಗ್ರಹ ಮಾಡುತ್ತಾ ಸೈನಿಕನಿಧಿಗೆ ಅರ್ಪಿಸಿದರಾದರೂ ಸರಕಾರ ಅಸ್ತು ಎನ್ನಲಿಲ್ಲ. ಪಾಟಿಯಾಲದ ಮಹಾರಾಜರು ದಾನವಿತ್ತ ಅರಮನೆಯನ್ನು ವೃದ್ಧ ಯೋಧರ ನಿವಾಸವನ್ನಾಗಿ ಪರಿವರ್ತಿಸಿದ ನಂತರ, ಸಿಯೆಟ್ ಕಂಪೆನಿ ‘ ‘ಜನರಲ್ ಕಾರಿಯಪ್ಪ ಭವನ’ ಎಂಬ ಕಟ್ಟಡವನ್ನೂ ನಿರ್ಮಿಸಿಕೊಟ್ಟಿತು!

ಹೊರ ದೇಶಗಳ ಸೈನ್ಯದ ಕಾರ್ಯಸೂಚಿಯನ್ನೂ ಅಭ್ಯಸಿಸಿದ್ದ ಕಾರಿಯಪ್ಪ ಕ್ವೆಟ್ಚಾದಲ್ಲಿನ ಸೈನಿಕ ಸಿಬ್ಬಂದಿ ಮಹಾವಿದ್ಯಾಲಯದಲ್ಲಿಯೂ ಅಭ್ಯಸಿಸಿದರು! ಪಾಕಿಸ್ಥಾನದ ಫೀಲ್ಡ್ ಮಾರ್ಷಲ್ ದ ಅಯ್ಯುಬ್ ಖಾನ್ ಕೂಡ ಕಾರಿಯಪ್ಪನವರು ಬ್ರಿಗೇಡಿಯರ್ ಆಗಿ ಬಡ್ತಿ ಪಡೆದಾಗಿನ ಅವಧಿಯಲ್ಲಿ ಜೊತೆಯಾಗಿ ಕಾರ್ಯನಿರ್ವಹಿಸಿದ್ದರು.

ಯುನೈಟೆಡ್ ಕಿಂಗ್ ಡಮ್, ಕಿಂಬರ್ಲಿಯಲ್ಲಿ ಉನ್ನತ ಮಟ್ಟದ ಸೈನಿಕ ತರಬೇತಿ ಪಡೆದ ಕಾರಿಯಪ್ಪ ಕೊನೆಗೆ ಭಾರತದ ಸೈನಿಕ ಶಾಲೆಯಲ್ಲಿಯೂ ಅದೇ ರೀತಿಯ
ಶಿಕ್ಷಣವನ್ನು ಅಳವಡಿಸಿದ್ದರು.

ಹೇಳುತ್ತಾ ಹೋದರೆ ಬಹಳಷ್ಟಿದೆ!

ಒಬ್ಬ ಸೈನಿಕನ ಬದುಕಿನ ಅನುಭವಗಳನ್ನು ಇಷ್ಟೇ ಎಂದು ಬರೆಯುವುದು ಕಷ್ಟವೇ! ಅದೆಷ್ಟೋ ಕ್ಷಣಗಳಲ್ಲಿ ಆತ ಸತ್ತು ಬದುಕಿರುತ್ತಾನೆ! ಅಷ್ಟಾದರೂ ಪ್ರಾಣವನ್ನೇ ಲೆಕ್ಕಿಸದೆ ಕೇವಲ ‘ದೇಶ’ ಎಂಬುದಕ್ಕೆ ಮಾತ್ರವೇ ಆತ ಎಲ್ಲವನ್ನೂ ತೊರೆಯುವಷ್ಟು ಗಟ್ಟಿಗನಾಗಿರುವಾಗ, ಇದಃಮಿತ್ಥಂ ಎಂದು ತೀರ್ಪು ಕೊಡುವುದು ಹಾಸ್ಯಾಸ್ಪದವಾಗಿಬಿಡುತ್ತದೆಯಷ್ಟೇ!

ಈಗ ಹೇಳಿ! ಕಾಂಗ್ರೆಸ್ ನ ಈ ನಡೆ ಸರಿಯಿದೆಯಾ?! ಪ್ರಾಣ ತೆರಲು ಸೈನಿಕ ಬೇಕು! ಆದರೆ, ಅದೇ ಬದುಕಿಗೊಂದು ಗೌರವವನ್ನೂ ಕೊಡಲಾಗದಷ್ಟು ಹೀನಾಯ ಸ್ಥಿತಿಯಲ್ಲಿರುವ ಕಾಂಗ್ರೆಸ್ ಮತ್ತೆ ಭಾರತಕ್ಕೆ ಬೇಕಾ?!

ಕಾಂಗ್ರೆಸ್ ಸಿಟ್ಟು ಮಾಡಿಕೊಂಡು ಕೂತಿರುವುದೂ ಇದೇ ಕಾರಣಕ್ಕೆ!

-ಪೃಥು ಅಗ್ನಿಹೋತ್ರಿ

Tags

Related Articles

Close