ಅಂಕಣಇತಿಹಾಸದೇಶಪ್ರಚಲಿತ

ಫೂಲನ್ ದೇವಿಯನ್ನ ಕೊಂದು ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದ ಶೇರ್ ಸಿಂಗ್ ರಾಣಾ, ತಪ್ಪಿಸಿಕೊಂಡು ಅಫ್ಘಾನಿಸ್ತಾನಕ್ಕೆ ಹಾರಿದ್ಯಾಕೆ? ಆ ಘಟನೆಗೂ ಭಾರತವನ್ನಾಳಿದ್ದ 12 ನೆಯ ಶತಮಾನದ ಕೊನೆಯ ಹಿಂದೂ ರಾಜ ಪ್ರಥ್ವಿರಾಜ್ ಸಿಂಗ್ ಚೌಹಾಣನಿಗೂ ಇರುವ ನಂಟೇನು?

2005 ರಲ್ಲಿ ದೆಹಲಿಯ ತಿಹಾರ್ ಜೈಲಿನಿಂದ ತಪ್ಪಿಸಿಕೊಂಡಿದ್ದ ಶೇರ್ ಸಿಂಗ್ ರಾಣಾ ಎಂಬ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳುವ ಮುನ್ನ ಭಾರತವನ್ನಾಳಿದ್ದ ಕೊನೆಯ ಹಿಂದೂ ರಾಜ ಪ್ರಥ್ವಿರಾಜ್ ಚೌಹಾಣ್ ನ ಇತಿಹಾಸದ ಬಗ್ಗೆ ತಿಳಿದುಕೊಳ್ಳಲೇಬೇಕು.

ನಮ್ಮ ಭಾರತದ ಕ್ಷಾತ್ರತೇಜಸ್ಸಿನ ಧೀರ, ಹಿಂದೂ ಹುಲಿ ಪ್ರಥ್ವಿರಾಜ ಚೌಹಾಣ್ ಸಿಂಗರ ಹೆಸರು ನೀವು ಕೇಳಿರ್ತೀರಾ. ಹಾಗೆಯೇ ಭಾರತದ ಮೇಲೆ ಸತತ ದಾಳಿಗೈದ ಮುಸಲ್ಮಾನ ಆಕ್ರಮಣಕಾರ ಮೊಹಮ್ಮದ್ ಘೋರಿ ಬಗ್ಗೆಯೂ ಕೇಳಿರ್ತೀರಿ.

ಶೇರ್ ಸಿಂಗ್ ರಾಣಾ ಎಂಬ ವ್ಯಕ್ತಿ 2005 ರಲ್ಲಿ ದೆಹಲಿಯ ತಿಹಾರ್ ಜೈಲಿನಿಂದ ಅಫ್ಘಾನಿಸ್ತಾನಕ್ಕೆ ಓಡಿ ಹೋಗಿದ್ದಕ್ಕೂ ಹಾಗು 825 ವರ್ಷಗಳ ಹಿಂದೆ ಅಂದರೆ 1192 ರಲ್ಲಿ ಜೀವಿತವಿದ್ದ ಪ್ರಥ್ವಿರಾಜ್ ಚೌಹಾಣ್, ಮೊಹಮ್ಮದ್ ಘೋರಿಗೂ ಏನು ಸಂಬಂಧ ಅಂತ ಯೋಚಿಸುತ್ತಿದ್ದೀರ?

ಸಂಬಂಧವಿದೆ ಸ್ನೇಹಿತರೆ, ಮುಹಮ್ಮದ್ ಘೋರಿ ಭಾರತದ ಮೇಲೆ ಎರಗಿ ಯುದ್ಧಕ್ಕೆ 1191ರಲ್ಲಿ ಬಂದಾಗ ತರೈನ್ ಎಂಬಲ್ಲಿ ಪ್ರಥ್ವಿರಾಜ್ ಚೌಹಾಣ್ ಮಣ್ಣುಮುಕ್ಕಿಸಿದ್ದ, ಸೋತ ನಂತರ ಜೀವಭೀಕ್ಷೆ ಬೇಡಿದ್ದ ಘೋರಿಯನ್ನ ಪ್ರಥ್ವಿರಾಜ್ ಚೌಹಾಣ್ ಕ್ಷಮಿಸಿ ವಾಪಸ್ ಕಳಿಸಿದ್ದ.

ಈ ಒಂದು ತಪ್ಪು ಭಾರತದ ಇತಿಹಾಸದಲ್ಲಿಯೇ ಭಾರತದ ರಾಜನೊಬ್ಬ ಮಾಡಿದ್ದ ದೊಡ್ಡ ತಪ್ಪಾಗಿತ್ತು. ಈ ಒಂದು ಕ್ಷಮೆ ಶಿಕ್ಷೆಯಾಗಿ ಬದಲಾಗಿದ್ದಿದ್ದರೆ ಅಥವ ಘೋರಿ ಸೋತ ತಕ್ಷಣ ಆತನ ಕಥೆಯನ್ನ ಪ್ರಥ್ವಿರಾಜ್ ಮುಗಿಸಿಬಿಟ್ಟಿದ್ದಿದ್ದರೆ ಭಾರತಕ್ಕೆ ಜಿಹಾದ್ ಅನ್ನೋ ಭೂತ ಕಾಲಿಟ್ಟು ಬೇರು ಬಿಡುತ್ತಿರಲೇ ಇಲ್ಲವೇನೋ.

ಪ್ರಥ್ವಿರಾಜ್ ಚೌಹಾಣ್ ಈಗಿನ ದೆಹಲಿ ಹಾಗು ರಾಜಸ್ಥಾನದ ಅಜ್ಮೇರನ್ನ ಆಗ ಅಂದರೆ 12 ನೆಯ ಶತಮಾನದಲ್ಲಿ ಆಳುತ್ತಿದ್ದ ರಾಜನಾಗಿದ್ದ, ಭಾರತವನ್ನ ಇಸ್ಲಾಮೀಕರಣ ಮಾಡಬೇಕೆಂದರೆ ದೆಹಲಿಯನ್ನ ವಶಪಡಿಸಿಕೊಂಡರೆ ಮಾತ್ರ ಸಾಧ್ಯ ಅಂತ ತಿಳಿದಿದ್ದ ಪ್ರತಿಯೊಬ್ಬ ಜಿಹಾದಿ ಆಕ್ರಮಣಕಾರೂ ದೆಹಲಿಯ ಮೇಲೆ ಕಣ್ಣಿಟ್ಟು ಆಕ್ರಮಣ ಮಾಡುತ್ತಿದ್ದರು, ಇದನ್ನೇ ಘೋರಿಯೂ ಮಾಡಿದ್ದ.

ಆದರೆ ಪ್ರಥ್ವಿರಾಜ್ ಚೌಹಾಣ್ ರಜಪೂತ ರಾಜರನ್ನೆಲ್ಲಾ ಒಗ್ಗೂಡಿಸಿ ಮೊದಲನೆ ತರೈನ್ ಯುದ್ಧದಲ್ಲಿ ಈ ಇಸ್ಲಾಮಿ ಆಕ್ರಮಕಾಣಕಾರರ ಸೊಂಟ ಮುರಿದು ಒದ್ದೋಡಿಸಿದ್ದ. ಆದರೆ ನಮ್ಮ ಭಾರತದಲ್ಲಿ ಈಗ ನಾವು ನೋಡುತ್ತಿರುವಂತೆ ನಮ್ಮವರನ್ನೇ ವಿರೋಧಿಸುವ, ನಮ್ಮ ದೇಶವನ್ನೇ ಬೈಯುವ, ನಮ್ಮ ದೇಶದ ವಿರುದ್ಧವೇ ಷಡ್ಯಂತ್ರ ಮಾಡುವ ಸೋ ಕಾಲ್ಡ್ ಸೆಕ್ಯೂಲರ್, ಬುದ್ಧಿಜೀವಿ, ವಿಚಾರವಾದಿಗಳು ಆಗಲೂ ಇದ್ದರು.

ಅಂಥವರಲ್ಲಿ ಜಯಚಂದ್ ಎಂಬ ದೇಶದ್ರೋಹಿಯೂ ಕೂಡ ಒಬ್ಬನಾಗಿದ್ದ. ಈತ ಪ್ರಥ್ವಿರಾಜ್ ಚೌಹಾಣನ ಮಾವನೇ ಆಗಿದ್ದರೂ ಇಸ್ಲಾಮಿ ಅಕ್ರಮಣಕಾರರ ವಿರುದ್ಧದ ರಜಪೂತರ ಒಕ್ಕೂಟದಲ್ಲಿ ಸೇರದೇ ಒಣಪ್ರತಿಷ್ಟೆಯನ್ನ ಇಟ್ಟುಕೊಂಡು ಪ್ರಥ್ವಿರಾಜನ ವಿರುದ್ಧ ಷಡ್ಯಂತ್ರ ಮಾಡಿ ಎರಡನೆಯ ತರೈನ್ ಯುದ್ಧದಲ್ಲಿ ಮೊಹಮ್ಮದ್ ಘೋರಿಯ ಪರವಾಗಿ ನಿಂತಿದ್ದ.

ಮೊದಲ ಬಾರಿಗೆ ಪ್ರಥ್ವಿರಾಜನ ಮೇಲೆ ಎರಗಿ ಬಂದ ಘೋರಿಗೆ ಕ್ಷಮೆ ಸಿಕ್ಕ ನಂತರವೂ ಎಲ್ಲಿ ಹೋಗುತ್ತೆ ಜಿಹಾದಿಗಳ ಬುದ್ಧಿ?, ಮತ್ತೆ ಒಂದು ವರ್ಷದ ನಂತರ ಅಂದರೆ 1192 ರಲ್ಲಿ ಎರಡನೇ ತರೈನ್ ಯುದ್ಧಕ್ಕೆ ಅಣಿಯಾಗಿ ಬಂದು ಪ್ರಥ್ವಿರಾಜ್ ಚೌಹಾಣನ ಮಾವನಾದ ಜಯಚಂದನಿಂದ ರಜಪೂತರ ಯುದ್ಧಕೌಶಲ್ಯಗಳನ್ನ ತಿಳಿದುಕೊಂಡು ಮೋಸದಿಂದ ಪ್ರಥ್ವಿರಾಜ್ ಚೌಹಾಣನನ್ನ ಸೋಲಿಸಿಯೇ ಬಿಡುತ್ತಾನೆ.

ಮೊದಲ ಯುದ್ಧದಲ್ಲಿ ಜೀವ ಭಿಕ್ಷೆ ಕೇಳಿ ಬದುಕ್ತು ಬಡಜೀವವೇ ಅಂತ ಓಡಿಹೋಗಿದ್ದ ಘೋರಿ ಮಾತ್ರ ಎರಡನೇ ತರೈನ್ ಯುದ್ಧದಲ್ಲಿ ಸೋತ ಪ್ರಥ್ವಿರಾಜನಿಗೆ
ಕ್ಷಮಿಸದೆ ಆತನನ್ನ ಬಂಧಿಯಾಗಿ ಈಗಿನ ಅಫ್ಘಾನಿಸ್ತಾನಕ್ಕೆ ಯುದ್ಧ ಕೈದಿಯಾಗಿ ತಗೊಂಡು ಹೋಗ್ತಾನೆ.

ಅಲ್ಲಿ ಪ್ರಥ್ವಿರಾಜ್ ಚೌಹಾಣನಿಗೆ ಇನ್ನಿಲ್ಲದ ಚಿತ್ರ ವಿಚಿತ್ರ ಹಿಂಸೆ ನೀಡಿದ ಘೊರಿ, ತನ್ನ ಆಸ್ಥಾನದಲ್ಲಿ ಪ್ರಥ್ವಿರಾಜನನ್ನ ಕರೆಸಿ “ಕಣ್ಣು ಕೆಳಗೆ ಮಾಡಿ ನಿಲ್ಲು ನಾನೀಗ ನಿನ್ನ ಸುಲ್ತಾನ & ನೀನು ನನ್ನ ಕೈದಿ” ಅಂದಾಗ ಪ್ರಥ್ವಿರಾಜ್ ಹೀಗೆ ಹೇಳ್ತಾನೆ “ನಾನು ಕೂಡ ಭಾರತದ ರಾಜನೇ, ಮೋಸದಿಂದ ಬಂಧಿಸಿರುವ ನಿನ್ನ ಮುಂದೆ ನಾನು ತಲೆ ತಗ್ಗಿಸಿ ನಿಲ್ಲುವುದಾ, ಅದು ಎಂದಿಗೂ ಸಾಧ್ಯವಿಲ್ಲ” ಅಂತಂದಾಗ ಇದನ್ನ ಕೇಳಿದ ಘೋರಿಯ ಪಿತ್ತ ನೆತ್ತಿಗೇರಿಕೆಂಡಾಮಂಡಲವಾದ ಘೋರಿ ಕಾದ ಕಬ್ಬಿಣದ ಸಲಾಕೆಯಿಂದ ಆತನ ಎರಡೂ ಕಣ್ಣನ್ನೂ ಕೀಳಿಸುತ್ತಾನೆ. ನಂತರ ಪ್ರಥ್ವಿರಾಜನಿಗೆ ಚಿತ್ರ ವಿಚಿತ್ರ ಹಿಂಸೆ ನೀಡಿದ ಘೋರಿ “ಇಸ್ಲಾಂ ಮತಕ್ಕೆ ಶರಣಾಗು ಇಲ್ಲವಾದರೆ ಇಲ್ಲೇ ನಿನ್ನ ಕಥೆ ಮುಗಿಸಿಬಿಡುತ್ತೇನೆ” ಎಂಬ ಮಾತುಗಳನ್ನೂ ಹೇಳುತ್ತಾನೆ.

ಆದರೆ ಪ್ರಥ್ವಿರಾಜನೇನು ಜೀವಕ್ಕೆ ಹೆದರುವ ಧರ್ಮ ನಿರಭಿಮಾನಿಯಾಗಿದ್ದನೇ? ಮೊದಲೇ ಹಿಂದುತ್ವದ ರಕ್ತ ಕಣಕಣದಲ್ಲೂ ಹರಿಯುವ ಕ್ಷಾತ್ರತೇಜಸ್ಸಿನ ರಜಪೂತ ಕುಲಕ್ಕೆ ಸೇರಿದವನಾಗಿದ್ದ.

ಘೋರಿಯ ಯಾವ ಹಿಂಸೆಗೂ ಜಗ್ಗದ ಪ್ರಥ್ವಿರಾಜನಿಗೆ ಮತ್ತಷ್ಟು ಕ್ರೂರ ಚಿತ್ರಹಿಂಸೆ ಕೊಟ್ಟು ಆತನನ್ನ ಬಂಧಿಖಾನೆಗಟ್ಟಿದ. ಪ್ರಥ್ವಿರಾಜನ ಜೊತೆ ಆತನ ಆಸ್ಥಾನದ ಕವಿ ಚಾಂದ್ ಬರ್ದಾಯಿ ಕೂಡ ಬಂಧಿಯಾಳಾಗಿರ್ತಾನೆ.

ಮೊದಲ ತರೈನ್ ಯುದ್ಧದಲ್ಲಿ ಸೋತ ಮೊಹಮ್ಮದ್ ಘೋರಿ ಅಂಗಲಾಚಿ ಕ್ಷಮೆ ಕೇಳಿದ್ದಕ್ಕೆ ಆತನನ್ನ ಗೌರವಪೂರ್ವಕವಾಗಿ ಕಳಿಸಿಕೊಟ್ಟಿದ್ದ ಪ್ರಥ್ವಿರಾಜ್ ಚೌಹಾಣ್’ಗೆ ಎರಡನೆಯ ತರೈನ್ ಯುದ್ಧದಲ್ಲಿ ಹಿತಶತ್ರುಗಳ ಕುತಂತ್ರದಿಂದ ಸೋತಾಗ ಮೊದಲ ಯುದ್ಧದಲ್ಲಿ ಸೋತು ಅಂಗಲಾಚಿದ್ದ ಅದೇ ಘೋರಿ ಪ್ರಥ್ವಿರಾಜನನ್ನ ದಯೆ ತೋರದೆ ಅಫ್ಘಾನಿಸ್ತಾಕ್ಕೆ ಎಳೆದೊಯ್ದಿದ್ದ.

ಹೇಗಾದರೂ ಮಾಡಿ ಘೋರಿಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಪ್ರಥ್ವಿರಾಜ್ ಹವಣಿಸುತ್ತಿದ್ದ.

ಯುದ್ಧಕೈದಿಯಾಗಿದ್ದ ಪ್ರಥ್ವಿರಾಜನ ಜೊತೆ ಬಂದಿದ್ದ ಚಾಂದ್ ಬರ್ದಾಯಿಯನ್ನ ಕೂಡ ಒಂದೆ ಜೈಲಿನಲ್ಲಿಟ್ಟಿದ್ದ ಘೋರಿಗೆ ಶೂರರಾದ ಹಿಂದೂ ರಜಪೂತರನ್ನ ಒಂದೆ ಕಡೆ ಬಂಧಿಯಾಗಿಡಬಾರದು ಅನ್ನೋ ಪರಿಜ್ಞಾನವೂ ಇರಲಿಲ್ಲ.

ಒಂದೇ ಕೋಣೆಯಲ್ಲಿ ಬಂಧಿತರಾಗಿದ್ದ ಪ್ರಥ್ವಿರಾಜ್ ಹಾಗು ಚಾಂದ್ ಬರ್ದಾಯಿ ಘೋರಿಯನ್ನ ಹೇಗಾದರೂ ಮಾಡಿ ಕೊಲ್ಲಲೇಬೇಕೆಂಬ ತಂತ್ರವನ್ನ ಹೆಣೆಯಲಾರಂಭಿಸಿದರು.

ಸ್ವಲ್ಪ ಯೋಚಿಸಿದ ನಂತರ ಚಾಂದ್ ಬರ್ದಾಯಿಗೆ ಒಂದು ಉಪಾಯ ಹೊಳೆಯಿತು. ಆ ಉಪಾಯವನ್ನ ಪ್ರಥ್ವಿರಾಜನಿಗೆ ಚಾಂದ್ ಬರ್ದಾಯಿ ತಿಳಿಸಿದ.

ಒಂದು ದಿನ ಘೋರಿ ತನ್ನ ಆಸ್ಥಾನದಲ್ಲಿ ಪ್ರಥ್ವಿರಾಜನನ್ನ ಹಾಸ್ಯಾಸ್ಪದಕ್ಕೀಡು ಮಾಡೋಕೆ ಆಟವನ್ನೊಂದನ್ನು ಆಯೋಜಿಸುತ್ತಾನೆ.

ಆ ಆಟವೇನು ಗೊತ್ತಾ?

ಶಬ್ದವೇಧಿ ಬಾಣಪ್ರಯೋಗದ ಆಟ. ಕಣ್ಣುಕಟ್ಟಿ ಶಬ್ದ ಕೇಳಿಸಿದ ಕಡೆ ಬಾಣಪ್ರಯೋಗ ಮಾಡುವ ಕಲೆಯೇ ಶಬ್ದವೇಧಿ ವಿದ್ಯೆ.

“ಆ ಶಬ್ದವೇಧಿ ಪ್ರಥ್ವಿರಾಜನಿಗೆ ಗೊತ್ತು, ಆತನನ್ನ ಆಸ್ಥಾನಕ್ಕೆ ಕರೆಸಿ ಆತನಿಂದ ಶಬ್ಧವೇಧಿ ಆಟ ಆಡಿಸಿ, ಇದರಿಂದ ನಿಮ್ಮ ಸೈನಿಕರಿಗೂ ಶಬ್ದವೇಧಿಯ ಕಲೆಯ ಬಗ್ಗೆ ತಿಳಿಯುತ್ತೆ ಹಾಗು ಕಣ್ಣಿಲ್ಲದ ಪ್ರಥ್ವಿರಾಜನನ್ನೂ ನೀವು ನಿಮ್ಮ ಆಸ್ಥಾನದಲ್ಲಿ ಎಲ್ಲರೆದುರು ಹಾಸ್ಯಾಸ್ಪಕ್ಕೀಡು ಮಾಡಿದಂತಾಗುತ್ತೆ” ಎಂಬ ಮಾತನ್ನ ಚಾಂದ್ ಬರ್ದಾಯಿಯೇ ಘೋರಿಗೆ ಹೇಳಿರುತ್ತಾನೆ.

ಒಂದು ಕ್ಷಣ ಯೋಚಿಸಿದ ಚಾಂದ್ ಬರ್ದಾಯಿ ಕುರಿತು ಘೋರಿ ಹೇಳ್ತಾನೆ “ನೀನ್ಯಾಕೆ ನಿನ್ನ ರಾಜನ ಅಪಮಾನ ಬಯಸುತ್ತಿರುವೆ? ಇದರಲ್ಲೇನೋ ಕುತಂತ್ರ ಅಡಗಿದೆ ಅಂತ ಕಾಣಿಸುತ್ತೆ”

ಅದಕ್ಕೆ ಚಾಂದ್ ಬರ್ದಾಯಿ ಹೇಳ್ತಾನೆ “ಆತ ರಾಜನಿದ್ದಾಗ ಆತ ನನಗೆ ರಾಜ, ಈಗ ಆತ ನಿಮ್ಮ ಕೈದಿ ನೀವೇ ಅವನ ರಾಜ, ಆತನ ಜೊತೆಗಿದ್ದರೆ ನನ್ನ ಪ್ರಾಣಕ್ಕೂ ಕುತ್ತು, ನಾನು ಇಂದಿನಿಂದ ನಿಮ್ಮ ಸೇವಕ ಬಾದಶಾಹ್”

ಚಾಂದ್ ಬರ್ದಾಯಿಯ ಮಾತುಗಳಿಂದ ಸಮಾಧಾನಗೊಂಡ ಘೋರಿ “ಆಯ್ತು ನಾಳೆಯೇ ಆತನನ್ನ ಆಸ್ಥಾನಕ್ಕೆ ಕರೆಸಿ ಆತನ ಶಬ್ಧವೇಧಿ ಬಾಣಪ್ರಯೋಗದ ಆಟ ಆಡಿಸೋಣ, ನಾವೂ ಸ್ವಲ್ಪ ಮಜಾ ತಗೊಳ್ಳೋಣವೆಂದು ಆಟ ಆಯೋಜಿಸಿಯೇ ಬಿಡ್ತಾನೆ.

ಕಣ್ಣಿರದ ಪ್ರಥ್ವಿರಾಜ್ ಚೌಹಾಣನನ್ನ ಆ ಆಟವಾಡಿಸಿ ಅದರ ಮಜಾ ತನ್ನೆಲ್ಲ ಆಸ್ಥಾನದವರು ನೋಡಬೇಕೆಂಬುದು ಆತನ ಉದ್ದೇಶವಾಗಿತ್ತು! ಆದರೆ ಇದೇ ಆತನ
ಜೀವನದ ದೊಡ್ಡ ತಪ್ಪೂ ಆಗಿತ್ತು ಅನ್ನೋದು ಆತನಿಗೆ ಅರಿವಾಗುವುದು ಮುನ್ನವೇ ಆತ ಪ್ರಥ್ವಿರಾಜನಿಂದ ಕ್ಷಣಮಾತ್ರದಲ್ಲಿ ಸತ್ತು ಜನ್ನತ್ ಸೇರಿದ್ದ

ಅರೇ ಅದ್ಹೇಗೆ ಘೋರಿ ಕಣ್ಣಿರದ ಪ್ರಥ್ವಿರಾಜನಿಂದ ಸತ್ತ ಅನ್ನೋದು ನಿಮ್ಮ ತಲೇಲಿ ಕೊರೆಯುತ್ತಿರಬಹುದು.

“ಚಾರ್(4) ಬಾಸ್, ಚೌಬಿಸ್(24) ಗಜ, ಅಂಗುಲ ಅಷ್ಟ(8) ಪ್ರಮಾಣ್ ತಾ ಊಪರ್ ಸುಲ್ತಾನ್ ಹೈ, ಚೂಕೇ ಮತ್ ಚೌಹಾಣ್”

ಇದನ್ನ ಎಲ್ಲೋ ಶಾಲೆಯಲ್ಲಿ ಓದಿದೀನಿ ಅನ್ನೋ ನೆನಪು ಯಾರಿಗಾದರೂ ಇರಬಹುದು ಅನ್ಕೋತಿನಿ.

ಚಾಂದ್ ಬರ್ದಾಯಿ ರೂಪಿಸಿದ್ದ ತಂತ್ರಗಾರಿಕೆಯ ಬಗ್ಗೆ ಘೋರಿಗೆ ಸಂಶಯವೇ ಮೂಡಲಿಲ್ಲ.

ಆದರೆ ಇದು ಚಾಂದ್ ಬರ್ದಾಯಿಯ ತಂತ್ರವಾಗಿತ್ತು. ಶಬ್ದವೇಧಿ ಕಲೆಯಲ್ಲಿ ಪಾರಂಗತನಾಗಿದ್ದ ಚೌಹಾಣನಿಗೆ ಬಂದೀಖಾನೆಯಲ್ಲಿ ಈ ತಂತ್ರದ ಬಗ್ಗೆ “ನಾಳೆ ರಜಪೂತಿ ಭಾಷೆಯಲ್ಲಿ ಪದ್ಯದ ಮೂಲ ಘೋರಿ ಕೂತಿರುವ ನಿಖರ ಮಾಹಿತಿಯನ್ನ ಕೊಡುತ್ತೇನೆ ತಕ್ಷಣ ನೀವು ನಿಮ್ಮ ಶಬ್ಧವೇಧಿ ಬಾಣಪ್ರಯೋಗದಿಂದ ಆತನ್ನ ಹೊಡೆದುರುಳಿಸಿ” ಎಂದು ಹೇಳಿರುತ್ತಾನೆ.

ಆ ಪಂದ್ಯದ ಪ್ರಕಾರ ಕಣ್ಣಿಲ್ಲದ ಪ್ರಥ್ವಿರಾಜನ ಕೈಯಲ್ಲಿ ಬಿಲ್ಲು ಬಾಣ ಕೊಟ್ಟು ನಿಲ್ಲಿಸಿ ಆಸ್ಥಾನದಲ್ಲಿ ಕಟ್ಟಿರುವ ಘಂಟೆಗಳನ್ನ ಹೊಡೆದುರುಳಿಸುವುದು
ಘೋರಿಯ ಆಟವಾಗಿತ್ತು.

ಯಾವ ಘಂಟೆ ಬಾರಿಸುತ್ತೋ ಆ ಕಡೆ ತಿರುಗಿ ಅದನ್ನ ಹೊಡೆದುರುಳಿಸುವುದನ್ನ ಕಣ್ಣಿರದ ಪ್ರಥ್ವಿರಾಜ್ ಮಾಡಬೇಕಿತ್ತು.

ಆ ದಿನ ಬಂದೆ ಬಿಟ್ಟಿತು, ಆಸ್ಥಾನದಲ್ಲಿ ಎಲ್ಲರೂ ಕಣ್ಣಿಲ್ಲದ ಪ್ರಥ್ವಿರಾಜನ ಕೈಲ್ಲಿ ಬಿಲ್ಲು ಬಾಣ ಹಿಡಿದುಕೊಂಡಿದ್ದನ್ನ ನೋಡಿ ಕೇಕೆ ಹಾಕುತ್ತ ನಗುತ್ತಿದ್ದರೆ ಇತ್ತ ಪ್ರಥ್ವಿರಾಜನೂ ಘೋರಿಯ ಅಂತ್ಯ ಸಮೀಪಿಸುತ್ತಿದೆಯಂತ ಮನಸ್ಸಿನೊಳಗೇ ಮುಗುಳ್ನಗುತ್ತಿದ್ದ.

ಕಣ್ಣಿಲ್ಲದಿದ್ದರೂ ಪ್ರಥ್ವಿರಾಜನಿಗೆ ಘೋರಿ ಎಷ್ಟು ಹೆದರಿದ್ದನೆಂದರೆ ಪ್ರಥ್ವಿರಾಜ್ ಶಬ್ದವೇಧಿ ಪ್ರಯೋಗ ಮಾಡುತ್ತಾನೆಂದರೆ ತಾನು ಕೂತಿರುವ ಜಾಗವನ್ನು ಸುರಕ್ಷಿತಗೊಳಿಸಿ ತನ್ನ ಆಸನದ ಎದುರಿಗೆ ಎತ್ತರದ ಸುರಕ್ಷಾ ಕವಚವನ್ನ ನಿರ್ಮಿಸಿಕೊಂಡು ಕೇವಲ ತನ್ನ ಮುಖವನ್ನಷ್ಟೇ ಕಾಣುವಂತೆ ವ್ಯವಸ್ಥೆ ಮಾಡಿಕೊಂಡಿದ್ದ.

ಶಬ್ದವೇಧಿ ಆಟ ಶುರುವಾಯಿತು. ಒಂದು ಘಂಟೆ ಬಾರಿಸಿದ್ದಾಯಿತು, ಆಕಡೆಗೆ ತಿರುಗಿ ಪ್ರಥ್ವಿರಾಜ್ ಗುರಿತಪ್ಪದೆ ಹೊಡೆದ, ಎರಡನೆ ಘಂಟೆ ಬಾರಿಸಿದ ಕಡೆಗೂ ತಿರುಗಿ ಆ ಕಡೆ ನಿಖರವಾಗಿ ಬಾಣಪ್ರಯೋಗ ಮಾಡಿ ಅದನ್ನ ಹೊಡೆದುರುಳಿಸಿದ.

ಈಗ ಮೂರನೆ ಘಂಟೆ ಬಾರಿಸುವ ಸಮಯ ಬಂದಿತು, ಇಲ್ಲೇ ಇರೋದು ಮಜಾ!

ಮೂರನೆ ಘಂಟೆ ಬಾರಿಸುವುದಕ್ಕೂ ಮುನ್ನ ಚಾಂದ್ ಬರ್ದಾಯಿ ತನ್ನ ತಂತ್ರವನ್ನ ಹೂಡಿದ. ಅದರ ಪ್ರಕಾರ ಚಾಂದ್ ಬರ್ದಾಯಿ ಘೋರಿಯನ್ನ ಕುರಿತು ಹೀಗೆ ಹೇಳ್ತಾನೆ “ಸುಲ್ತಾನರೆ ಈ ಪ್ರಥ್ವಿರಾಜನನ್ನ ಈ ಸ್ಥಿತಿಗೆ ತಂದು ನಿಲ್ಲಿಸಿರೋದನ್ನ ನೋಡಿ ನಿನ್ನನ್ನ ಕುರಿತು ಹೊಗಳುವ ಇಚ್ಛೆಯಾಗ್ತಿದೆ, ನಿಮಗೋಸ್ಕರ ಒಂದು ಕವಿತೆ ಹೇಳಬೇಕೆಂಬ ಆಸೆಯಾಗಿದೆ” ಎಂದನು.

ಆತನ ಹೊಗಳಿಕೆಯಿಂದ ಅಟ್ಟಕ್ಕೇರಿದ ಘೋರಿ ಅಸ್ತು ಅಂದ.

ಅದರ ಪ್ರಕಾರ ಚಾಂದ್ ಬರ್ದಾಯಿ “ಚಾರ್(4) ಬಾಸ್, ಚೌಬಿಸ್(24) ಗಜ, ಅಂಗುಲ ಅಷ್ಟ(8) ಪ್ರಮಾಣ್ ತಾ ಊಪರ್ ಸುಲ್ತಾನ್ ಹೈ, ಚೂಕೇ ಮತ್ ಚೌಹಾಣ” ಎನ್ನುವ ಕೆಲ ಸಾಲುಗಳನ್ನ ಹೇಳಿದ. ಇಷ್ಟು ಹೇಳಿ ಚಾಂದ್ ಬರ್ದಾಯಿ ಮಾತು ಮುಗಿಸುವ ಹೊತ್ತಿಗೆ ಪ್ರಥ್ವಿರಾಜ್’ನ ಬತ್ತಳಿಕೆಯಿಂದ ಬಾಣ ಹೊರಬಂದು ಘೋರಿಯ ಹಣೆಗೆ ಬಿದ್ದು ಆತನ ಹೆಣ ಕ್ಷಣಮಾತ್ರದಲ್ಲಿ ಉರುಳಿಬಿದ್ದಿತು.

ಚಾಂದ್ ಬರ್ದಾಯಿ ಹೇಳಿದ ಆ ಕವಿತೆಯ ಅರ್ಥ “4 ಅಳತೆ ದೂರದಲ್ಲಿ ನಿಮ್ಮ ಮುಂದೆ 24 ಗಜಗಳಷ್ಟು ಎತ್ತರದಲ್ಲಿ 8 ಬೆರಳುಗಳಷ್ಟು ಮುಖವಿತ್ತು ಮೇಲೆ ಕೂತಿರುವ ಸುಲ್ತಾನನನ್ನ ಬಿಡಬೇಡಿ ಚೌಹಾಣ್” ಅನ್ನೋದಾಗಿತ್ತು.

ಏನಾಗ್ತಾ ಇದೆ ಅಂತ ಆಸ್ಥಾನದಲ್ಲಿರೋರು ನೋಡು ನೋಡುತ್ತಿದ್ದಂತೆ ಮೊಹಮ್ಮದ್ ಘೋರಿ ಎಂಬ ಜಿಹಾದಿ ಸುಲ್ತಾನ್’ನ ಕಥೆ ಅಂತ್ಯವಾಗಿತ್ತು.

ಇದಾದ ನಂತರ ಅಲ್ಲಿನ ಘೋರಿಯ ಸೈನಿಕರು ಪ್ರಥ್ವಿರಾಜ್ ಹಾಗು ಚಾಂದ್ ಬರ್ದಾಯಿಯನ್ನು ಕೊಲ್ಲಲು ಮುಂದಾದಾಗ ಪ್ರಥ್ವಿರಾಜ್ ಚೌಹಾಣ್ ಈ ಮ್ಲೇಚ್ಛರಿಂದ ನಾವು ಸಾಯುವವರಲ್ಲ ಎಂದು ಚಾಂದ್ ಬರ್ದಾಯಿಗೆ ಹೇಳಿ ತಾವೇ ಒಬ್ಬರನ್ನೊಬ್ಬರು ಕೊಂದುಕೊಂಡರು.

ಹೀಗೆ ಅಂತ್ಯವಾಗಿತ್ತು ದೆಹಲಿಯನ್ನಾಳಿದ್ದ ಭಾರತದ ಕೊನೆಯ ಹಿಂದೂ ರಾಜನ ಕಥೆ.

ಇತಿಹಾಸವನ್ನು ತಿರುವಿ ಹಾಕಿದರೆ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ, ಮತಾಂತರಕ್ಕೆ, ದೇವಸ್ಥಾನ ಭಂಜನೆಗಳಿಗೆ ಕಾರಣರಾದವರು ಇಸ್ಲಾಮಿನ
ಜಿಹಾದಿಗಳಿಗಿಂತ ಒಂದು ‘ಕೈ’ ನಮ್ಮವರದ್ದೇ ಇರ್ತಿತ್ತು ಅನ್ನೋದು ಘೋರಿಗೆ ಸಹಾಯ ಮಾಡಿದ್ದ ಜಯಚಂದ್’ನಂತ ವಿಶ್ವಾಸದ್ರೋಹಿಗಳನ್ನ ನೋಡಿದರೆ
ಅರ್ಥವಾಗುತ್ತೆ.

ಈ ಕಥೆಗೂ ಹಾಗು ಮೇಲೆ ಉಲ್ಲೇಖಿಸಿದ ಶೆರ್ ಸಿಂಗ್ ರಾಣಾಗೂ ಏನು ಸಂಬಂಧ?

ಪ್ರಥ್ವಿರಾಜ್ ಚೌಹಾಣನ 12 ನೆಯ ಶತಮಾನದ ಇತಿಹಾಸಕ್ಕೂ 21ನೆಯ ಶತಮಾನದ ಈ ಶೇರ್ ಸಿಂಗ್ ರಾಣಾಗೂ ಅವಿನಾಭಾವ ಸಂಬಂಧವಿದೆ.

ಶೇರ್ ಸಿಂಗ್ ರಾಣಾ ಒಬ್ಬ ರಜಪೂತನಾಗಿದ್ದು ನಮ್ಮ ಸಂಸ್ಕೃತಿ, ಮಹಾನ್ ಇತಿಹಾಸದ ಅರಿವುಳ್ಳವನಾಗಿದ್ದ.

ದೇಶದಲ್ಲಿ ಭ್ರಷ್ಟರು, ಲೂಟಿಕೋರರು ಅಧಿಕಾರಕ್ಕೇರುವುದನ್ನ ಕಂಡು ರಕ್ತ ಕುದ್ದು ಇಂತಹ ಭ್ರಷ್ಟರ ಬೇಟೆ ಆಡಲೇಬೇಕೆಂದು ನಿರ್ಧರಿಸಿಸದ್ದ ಶೇರ್
ಸಿಂಗ್ ತನ್ನ ಲಿಸ್ಟಲ್ಲಿ ಇಟ್ಟುಕೊಂಡಿದ್ದ ಮೊದಲ ಲೂಟಿಕೋರ ರಾಜಕಾರಣಿಯೇ ನಾವು ನೀವೆಲ್ಲ ಕೇಳಿರುವ ಚಂಬಲ್ ಕಣಿವೆ ಡಕಾಯಿತೆ ಕುಖ್ಯಾತಿಯ ಫೂಲನ್ ದೇವಿ. ಚಂಬಲ್ ಕಣಿವೆಯ ಫೂಲನ್ ದೇವಿಗೆ ಉತ್ತರಪ್ರದೇಶದ ಸಮಾಜವಾದಿ ಪಾರ್ಟಿ ಟಿಕೆಟ್ ಕೊಟ್ಟು ಗೆಲ್ಲಿಸಿ ಲೋಕಸಭಾ ಸದಸ್ಯೆಯಾಗಿ ಆಯ್ಕೆ ಮಾಡಿ ಕಳಿಸಿತ್ತು!!

ಆಕೆ ಕುಖ್ಯಾತ ಡಕಾಯಿತೆಯಂತ ಗೊತ್ತಿದ್ದರೂ ಆಕೆ ನಮ್ಮನ್ನಾಳೋ ರಾಜಕೀಯ ನಾಯಕಿ ಆದಳೆಂಬ ಸುದ್ಧಿ ತಿಳಿದ ಶೇರ್ ಸಿಂಗ್ ಆಕೆಯನ್ನ ಮುಗಿಸುವ ಪ್ಲ್ಯಾನ್ ಮಾಡಿ ಆಕೆಯನ್ನ ಜುಲೈ 25, 2001 ರಲ್ಲಿ ಕೊಂದೇಬಿಟ್ಟ.

ಇದರ ನಂತರ ಶೇರ್ ಸಿಂಗ್ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಒಳಪಟ್ಟು ದೆಹಲಿಯ ತಿಹಾರ್ ಜೈಲು ಪಾಲಾದ. ಆದರೆ ಬಾಲ್ಯದಿಂದಲೂ ತಾಯಿ ಹೇಳಿಕೊಟ್ಟ ನಮ್ಮ ಮಹಾನ್ ಪುರುಷರ ಕಥೆಗಳು ಶೇರ್ ಸಿಂಗನ ಮೇಲೆ ಅತಿಯಾಗಿ ಪ್ರಭಾವ ಬೀರಿದ್ದವು.

ಇದೇ ಕಾರಣಕ್ಕೋ ಏನೋ ಶೇರ್ ಸಿಂಗನಿಗೆ ಅಫ್ಘಾನಿಸ್ತಾನದಲ್ಲಿರುವ ಪ್ರಥ್ವಿರಾಜ್ ಚೌಹಾಣನ ಅಸ್ಥಿ ಭಾರತಕ್ಕೆ ಮರಳಿ ತರಬೇಕೆಂದೆನಿಸಿದ್ದು.

ಆದರೆ ಜೀವಾವಧಿ ಶಿಕ್ಷೆಗೆ ಒಳಪಟ್ಟು ಜೈಲಿನಲ್ಲಿರೋ ತಾನು ಅಫ್ಘಾನಿಸ್ತಾನಕ್ಕೆ ಹೋಗೋದಾದರೂ ಹೇಗೆ ಅಂತ ಯೋಚಿಸುತ್ತಾ ಅಲ್ಲೇ ಜೈಲಿನಲ್ಲಿ ಪರಿಚಯವಾಗಿದ್ದ ಡಿ.ಕಂಪೆನಿಯ ಸದಸ್ಯನಾಗಿದ್ದ ಸುಭಾಷ್ ಠಾಕೂರ್ ಎಂಬುವವನ ಸಹಾಯದಿಂದ ಅಫ್ಘಾನಿಸ್ತಾನಕ್ಕೆ ತೆರಳಲು fake student passport ಪಡೆದು ಅಲ್ಲಿಗೆ ಹೋಗಿ ಬರಲು ಹಣದ ವ್ಯವಸ್ಥೆಯೂ ಮಾಡಿಕೊಂಡ.

ಇನ್ನೇನು ಜೈಲಿನಿಂದ ಪರಾರಿಯಾದ ಶೇರ್ ಸಿಂಗ್ ಅಫ್ಘಾನಿಸ್ತಾನಕ್ಕೆ ಹಾರಿಯೇಬಿಟ್ಟಿದ್ದ.

ಅಫ್ಘಾನಿಸ್ತಾನಕ್ಕೇನೋ ಹೋದ ಆದರೆ ಪ್ರಥ್ವಿರಾಜನ ಸಮಾಧಿ ಎಲ್ಲಿದೆ ಅನ್ನೋದೆ ಗೊತ್ತಿಲ್ವೆ. ಕೆಲ ದಿನಗಳ ಕಾಲ ಹುಡುಕಾಟ ನಡೆಸುತ್ತ ಕಂದಹಾರ್, ಕಾಬುಲ್,
ಹೇರತ್ ಹಾಗು ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ಕೊಟ್ಟ ಆದರೆ ಪ್ರಥ್ವಿರಾಜನ ಸಮಾಧಿಯ ಸುಳಿವೇ ಸಿಗಲಿಲ್ಲ.

ಅಫ್ಘಾನಿಸ್ತಾನಕ್ಕೆ ಮುಸಲ್ಮಾನನ ವೇಷ ತೊಟ್ಟು ಹೋಗಿದ್ದ ಶೇರ್ ಸಿಂಗ್ ಅಲ್ಲಿನ ಸ್ಥಳೀಯರಿಗೆ ತಾನು ಪಾಕಿಸ್ತಾನದಿಂದ ಬಂದವನಾಗಿದ್ದು ತಾನು ಘೋರಿಯ ಸಮಾಧಿ ಇರುವ ಕಬ್ರ್(ಗೋರಿ) ನೋಡ್ಬೇಕು ಹಾಗು ಆ ಗೋರಿಯಲ್ಲಿನ ಮಣ್ಣನ್ನ ಪಾಕಿಸ್ತಾನಕ್ಕೆ ಕೊಂಡೊಯ್ಯೋಕೆ ಬಂದಿದೀನಿ ಅಂತ ಸುಳ್ಳು ಹೇಳಿ ಅವರನ್ನ ನಂಬಿಸಲಾಯಿತು.

(ಘೋರಿಯ ಸಮಾಧಿಯ ಹತ್ತಿರವೇ ಪ್ರಥ್ವಿರಾಜನ ಸಮಾಧಿಯಿದೆಯೆಂಬ ಮಾಹಿತಿ ಗೊತ್ತಿರುವ ಕಾರಣ ಘೋರಿಯ ಗೋರಿ ಎಲ್ಲಿದೆ ಅನ್ನೋದನ್ನ ಶೇರ್ ಸಿಂಗ್
ಹುಡುಕುತ್ತಿದ್ದವನಂತೆ ಅಲ್ಲಿನ ಜನರ ಜೊತೆ ಸಂಭಾಷಣೆ ನಡೆಸಿದ್ದ) ಇದನ್ನ ನಂಬಿದ ಸ್ಥಳೀಯರು ಆತನನ್ನ ಘೋರಿಯ ಸಮಾಧಿ ಇರುವ ‘ಘಜ್ನಿ’ ಪ್ರದೇಶದ
ಹೊರವಲಯದಲ್ಲಿರುವ ಸಣ್ಣ ಹಳ್ಳಿ ‘ಡೇಕ್’ಗೆ ಕರೆದುಕೊಂಡು ಹೋಗ್ತಾರೆ.

ಮೊದಲೇ ಕುಖ್ಯಾತ ತಾಲಿಬಾನಿಗಳಿರೋ ಭಯಂಕರ ಪ್ರದೇಶಕ್ಕೆ ಭೇಟಿ ನೀಡಿದ್ದ ಶೇರ್ ಸಿಂಗ್ ರಾಣಾ ಇಲ್ಲಿಂದ ಪ್ರಥ್ವಿರಾಜ್ ಚೌಹಾಣನ ಅಸ್ಥಿ ತೆಗೆದುಕೊಂಡು ಹೋಗೋದು ಅಸಾಧ್ಯವೇ ಸರಿ ಅಂತ ಒಮ್ಮೆ ಅನ್ನಿಸಿದರೂ ಶೇರ್ ಸಿಂಗ್ ರಾಣಾ ಛಲ ಬಿಡಲಿಲ್ಲ.

ಡೇಕ್ ಹಳ್ಳಿಯ ಜನ ಶೇರ್ ಸಿಂಗ್ ರಾಣಾನನ್ನ ಘೋರಿಯ ಸಮಾಧಿಯಿರೋ ಸ್ಥಳಕ್ಕೆ ಕರೆದೊಯ್ದರು.

ಘೋರಿಯ ಗೋರಿ ತೋರಿಸಿ ಮೊದಲು ಹೊರಗಿರುವ ಈ ಸಮಾಧಿಗೆ ಅಲ್ಲಿರುವ ಚಪ್ಪಲಿಯಿಂದ ಎರಡೇಟು ಬಡಿದು ನಂತರ ಒಳಗಿರೋ ಘೋರಿಯ ಗೋರಿಗೆ ಹೋಗು ಅಂತ ಹೇಳಿದಾಗ ಶೇರ್ ಸಿಂಗನಿಗೆ ಹೊಟ್ಟೆ ಉರಿದು ಹೋಗುತ್ತೆ.

ಯಾಕೆ ಗೊತ್ತಾ? ಚಪ್ಪಲಿ ಬಿಡುವ ಸ್ಥಳದಲ್ಲಿದ್ದ ಸಮಾಧಿ ಮತ್ಯಾರದ್ದೂ ಅಲ್ಲ ಅದು ಶೇರ್ ಸಿಂಗ್ ಹುಡುಕಿ ಹೊರಟಿದ್ದ ಭಾರತ ಕಂಡ ಶ್ರೇಷ್ಟ ರಾಜ ಪ್ರಥ್ವಿರಾಜ್
ಚೌಹಾಣನದ್ದಾಗಿತ್ತು.

ಪ್ರಥ್ವಿರಾಜ್ ಚೌಹಾಣ್ ಎಂಬ ಕಾಫೀರ(ಅಲ್ಲಾಹನನ್ನ ನಂಬದ ಅನ್ಯಮತೀಯ ಜನರು)ನೊಬ್ಬ ತಮ್ಮ ಸುಲ್ತಾನನನ್ನ ಕೊಂದ ಕಾರಣ ಪ್ರಥ್ವಿರಾಜನ
ಸಮಾಧಿಯನ್ನ ಚಪ್ಪಲಿ ಬಿಡುವ ಸ್ಥಳದಲ್ಲಿ ಕಟ್ಟಿ ಭಾರತೀಯ ಹಿಂದೂ ರಾಜನಿಗೆ ಅಪಮಾನ ಮಾಡುವುದೇ ಅವರ ಉದ್ದೇಶವಾಗಿತ್ತು.

ಇದರ ಬಗ್ಗೆ ಮೊದಲೆ ತಿಳಿದುಕೊಂಡಿದ್ದ ಶೇರ್ ಸಿಂಗನಿಗೆ ಚಪ್ಪಲಿ ಬಿಡುವ ಸ್ಥಳದಲ್ಲಿ ಅನಾಥವಾಗಿ ಬಿದ್ದಿದ್ದ ಆ ಸಮಾಧಿಯನ್ನ ಕಂಡು ಒಳಗೊಳಗೆ ಕ್ರೋಧಿತನಾದ, ಎಷ್ಟು ಸಿಟ್ಟು ಬಂದರೂ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದ ಶೇರ್ ಸಿಂಗ್.

ಡೇಕ್ ಪ್ರದೇಶದಲ್ಲಿ ಕೆಲ ದಿನ ಉಳಿದುಕೊಂಡು ಹೇಗೆ ಅಸ್ಥಿಯನ್ನ ಕೊಂಡೊಯ್ಯೋದು ಎಂಬ ಕಾರ್ಯತಂತ್ರ ರೂಪಿಸಿ ಒಂದು ರಾತ್ರಿ ಪ್ರಥ್ವಿರಾಜ್ ಚೌಹಾಣರ ಸಮಾಧಿಯನ್ನ ಕೆದಕಿ ಅದರೊಳಗಿನ ಮರಳನ್ನ ಅಸ್ಥಿಯ ರೂಪದಲ್ಲಿ ಭಾರತಕ್ಕೆ ತಂದೇ ಬಿಡುತ್ತಾನೆ.

ನಂತರ ಏಪ್ರಿಲ್ 2005 ರಲ್ಲಿ ವಾಪಸ್ ಪೋಲೀಸರಿಗೆ ಶರಣಾಗುತ್ತಾನೆ.

ಪ್ರಥ್ವಿರಾಜನ ಸಮಾಧಿಯನ್ನ ಕೆದಕಿ ಅಸ್ಥಿಯನ್ನ ತೆಗೆದದ್ದನ್ನ ಸ್ವತಃ ಶೇರ್ ಸಿಂಗ್ ರಾಣಾ ವಿಡಿಯೋ ಕೂಡ ಮಾಡಿದ್ದು ಅದನ್ನು ನೀವು ಯೂಟ್ಯೂಬ್’ನಲ್ಲಿ ನೋಡಬಹುದು.

ಶರಣಾಗತಿಗೂ ಮುನ್ನ ತಾನು ತಂದಿದ್ದ ಪ್ರಥ್ವಿರಾಜನ ಅಸ್ಥಿಯನ್ನು ಉತ್ತರಪ್ರದೇಶದ  ‘ಎತಾವಾ’ ಊರಿಗೆ ಕೋರಿಯರ್ ಮೂಲಕ ಕಳಿಸಿ ಅದ್ಧೂರಿ ಕಾರ್ಯಕ್ರಮವನ್ನ ಆಯೋಜಿಸಲು ತನ್ನ ತಾಯಿಗೆ ಹೇಳ್ತಾನೆ. ಕಾರ್ಯಕ್ರಮ ಎತಾವಾದಲ್ಲಿ ಆಯೋಜನೆಯೂ ಆಗುತ್ತೆ ಹಾಗು ಆತನ ತಾಯಿ ‘ಸತ್ವತಿ ದೇವಿ’ಯವರೇ ಕಾರ್ಯಕ್ರಮದ ಮುಖ್ಯ ಅತಿಥಿಯೂ ಆಗಿರುತ್ತಾರೆ. ಕಾರ್ಯಕ್ರಮದಲ್ಲಿ ಮಾತನಾಡುತ್ತ ಆತನ ತಾಯಿ ತನ್ನ ಮಗನ ಬಗ್ಗೆ ಹೀಗೆ ಹೇಳುತ್ತಾಳೆ
“ನನ್ನ ಮಗ ಭಾರತಕ್ಕೆ ಕೀರ್ತಿ ತಂದವನು, ಅವನಲ್ಲದೆ ಬೇರಾರೂ ಈ ಮಹತ್ಕಾರ್ಯವನ್ನ ಮಾಡೋಕೆ ಸಾಧ್ಯವಿರಲಿಲ್ಲ. ಅಂತಹ ಮಗನನ್ನ ಹೆತ್ತ ನಾನೇ ಧನ್ಯ” ವೆಂದು ಆನಂದಬಾಷ್ಪ ಸುರಿಸುತ್ತಾಳೆ.

800 ವರ್ಷಗಳಿಂದ ಭಾರತದಿಂದ ಸಾವಿರಾರು ಕಿಲೋ ಮೀಟರ್ ದೂರದ ಅಫ್ಘಾನಿಸ್ತಾನದಲ್ಲಿ ಅಲ್ಲಿನ ಮುಸಲ್ಮಾನರಿಂದ ಅವಮರ್ಯಾದೆಗೊಳಪಡುತ್ತಿದ್ದ ದೆಹಲಿ ಗದ್ದುಗೆಯನ್ನ ಆಳಿದ್ದ ಕೊನೆಯ ಹಿಂದೂ ರಾಜ ಪ್ರಥ್ವಿರಾಜ್ ಸಿಂಗ್ ಚೌಹಾಣ್ ನ ಅಸ್ಥಿಯನ್ನ ಶೇರ್ ಸಿಂಗ್ ರಾಣಾ ಎಂಬ ಶೇರ್(ಹುಲಿ) ತಂದಿತ್ತು.

ಇಂತಹ ಧರ್ಮಾಭಿಮಾನಿಗಳು ಇರೋದ್ರಿಂದಾನೇ ಅಲ್ವ ನಾವೀವತ್ತಿಗೂ ಹಿಂದುಗಳು ಅಂತ ತಲೆಯೆತ್ತಿ ಬಾಳುತ್ತಿರೋದು?

ಇಂತಹ ವಿಷಯಗಳು ಹಾಗು ಭಾರತದ ಶೌರ್ಯ ಪರಾಕ್ರಮದ ಇತಿಹಾಸ ನಮ್ಮ ಭಾರತದ ಪಠ್ಯದಲ್ಲಿರದಿರೋದು ನಮ್ಮ ದೌರ್ಭಾಗ್ಯವೇ ಸರಿ. ಮುಂದಿನ
ದಿನಗಳಲ್ಲಾದರೂ ಇಂತಹ ಸಾಹಸಗಾಥೆಗಳು ನಮ್ಮ ಪಠ್ಯಪುಸ್ತಕಗಳಲ್ಲಿ ರಾರಾಜಿಸಲಿ!!

 

– Vinod Hindu Nationalist

Tags

Related Articles

Close