ಪ್ರಚಲಿತ

ಬಡ ಕುರುಬ ಮಹಿಳೆ ಮೇಲೆ ಹಲ್ಲೆಗೈದ ಮಂಗಳೂರು ಮೇಯರ್ ಮೇಲೆ ಸೇಡು ತೀರಿಸಿಕೊಂಡ ಸಿಎಂ ಸಿದ್ಧರಾಮಯ್ಯ!!!

ಮಂಗಳೂರು ಮೇಯರ್ ಕವಿತಾ ಸನಿಲ್ಗೆ ಮುಖ್ಯಮಂತ್ರಿಗಳು ಸರ್ರಿಯಾಗಿಯೇ ಗುದ್ದಿದರಂತೇ ಹೌದಾ.!!! ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಇತ್ತೀಚೆಗೆ ಮಂಗಳೂರು ಮೇಯರ್ ಮೇಯರ್ ಕವಿತಾ ಸನಿಲ್ ಭಾರೀ ಸುದ್ಧಿಯಲ್ಲಿದ್ದಾರೆ. ಹೌದು ತಾನೇ… ಮೂರೂ ಬಿಟ್ಟವರು ಊರಿಗೆ ದೊಡ್ಡವರಲ್ವಾ…!!! ತನ್ನ ಅಪಾರ್ಟ್ಮೆಂಟ್ ನ ವಾಚ್ಮ್ಯಾನ್ ಪತ್ನಿ ಹಾಗೂ ಆಕೆಯ ಮಗುವಿನ ಮೇಲೆ ಹಲ್ಲೆ ಮಾಡಿ ಸುದ್ಧಿಯಾಗಿದ್ದ ಮೇಯರ್ ಕವಿತಾ ಸನಿಲ್ ಈಗ ಮತ್ತೆ ಸುದ್ಧಿಯಲ್ಲಿದ್ದಾರೆ. ಅದು ಮಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಕರಾಟೆ ಛಾಂಪಿಯನ್ಶಿಪ್ನಲ್ಲಿ…

ತಾನು ಕರಾಟೆ ಪಟು ಎಂಬ ವಿಷಯವನ್ನು ಕೇವಲ ಕಾಂಗ್ರೆಸ್ಸಿಗೆ ಮಾತ್ರವಲ್ಲ, ಮಂಗಳೂರಿನ ಸಮಸ್ತ ಜನತೆಗೆ ಗೊತ್ತಾಗಬೇಕೆಂದು ಈಗ ತಾನು ಅಧಿಕಾರದಿಂದ ಇಳಿಯುವ ಮೊದಲು ಕರಾಟೆ ಛಾಂಪಿಯನ್ಶಿಪ್ ನ್ನು ಮಂಗಳೂರಿನಲ್ಲಿ ಮಾಡಿಸಿ ಬೇಶ್ ಅನ್ನಿಸಿಕೊಳ್ಳಬೇಕೆಂಬುದು ಕವಿತಾ ಕನಸು. ಅದು ಈಡೇರಿತು ಬಿಡಿ…

ಅಷ್ಟಕ್ಕೂ ಈಕೆ ಕರಾಟೆಯನ್ನು ಚೆನ್ನಾಗಿಯೇ ಕರಗತ ಮಾಡಿಕೊಂಡಿರುವ ಮೇಯರ್. ಮಂಗಳೂರಿನಲ್ಲಿ ಕರಾಟೆ ಕಾರ್ಯಕ್ರಮ ಆಯೋಜಿಸೋಕು ಮುನ್ನ ತಾನೂ ಅದರಲ್ಲಿ ಭಾಗವಹಿಸಬೇಂಬುವುದು ಮೇಯರಮ್ಮನ ಆಕಾಂಕ್ಷೆ. ಕಾರ್ಯಕ್ರಮಕ್ಕೆ ಸಿದ್ಧತೆ ನಡೆದರೇನಂತೆ, ತನಗೆ ಅಭ್ಯಾಸ ಮಾಡಿಕೊಳ್ಳಲು ಸಮಯ ಬೇಕಲ್ವೇ… ಈ ಕಾರಣಕ್ಕಾಗಿಯೇ ಆಕೆ ಆಯ್ದುಕೊಂಡದ್ದು ತನ್ನದೇ ಅಪಾರ್ಟ್ಮೆಂಟ್ನ ವಾಚ್ಮ್ಯಾನ್ ನ ಪತ್ನಿ ಕಮಲಾರನ್ನು.

ಸುಮಾರು ಹತ್ತು ದಿನಗಳ ಹಿಂದಿನ ವಿಷಯ. ತಾನು ಊರಲ್ಲಿಲ್ಲದ ಸಮಯದಲ್ಲಿ ತನ್ನ ಮಗಳು ವಾಚ್ಮ್ಯಾನ್ನ ಸಣ್ಣ ಮಗುವಿಗೆ ಮನಬಂದಂತೆ ಭಾರಿಸಿತ್ತು. ಇರಲಿ ಬಿಡಿ, ಮಗುವಲ್ಲಾ ಎಂದು ಆ ಬಡಪಾಯಿ ವಾಚ್ಮ್ಯಾನ್ ಕುಟುಂಬ ಸುಮ್ಮನಾಗಿತ್ತು. ಆದರೆ ಈ ಮೇಯರ್ ಎಂಬ ಮಹಾ ರಾಕ್ಷಸೀ ಯಾವಾಗ ಊರಿಗೆ ಕಾಲಿಟ್ಟಿದ್ದಳೋ ಆವಾಗ ಆ ಬಡಪಾಯಿ ವಾಚ್ಮ್ಯಾನ್ ಕುಟುಂಬಕ್ಕೆ ಆಘಾತ ಕಾದಿತ್ತು. ತನ್ನ ಅಪಾರ್ಟ್ಮೆಂಟ್ಗೆ ಆಗಮಿಸಿದ ಕೂಡಲೇ ಆಕೆಯ ಮಗಳು, “ನನಗೆ ಆ
ವಾಚ್ಮ್ಯಾನ್ನ ಪತ್ನಿ ಹಲ್ಲೆ ಮಾಡಿದ್ದಾಳೆ” ಎಂದು ಆರೋಪಿಸುತ್ತಾಳೆ.

ಇದಿಷ್ಟೇ ಕೇಳಿದ್ದು. ತನ್ನ ಮೈಯಲ್ಲಿ ಮಹಿಷಿ ಬಂದ ಹಾಗೆ ಅಬ್ಬರವಿಡುತ್ತಾ, ಅಪಾರ್ಟ್ಮೆಂಟ್ನಲ್ಲಿ ಸಣ್ಣ ಕೊಠಡಿಯಲ್ಲಿ ವಾಸವಾಗಿದ್ದ ಆ ಕುಟುಂಬದ ಬಳಿಗೆ ಲಗ್ಗೆಯಿಡುತ್ತಾಳೆ. ಆ ಕೊಠಡಿಯಲ್ಲಿ ವಾಚ್ಮ್ಯಾನ್ನ ಪತ್ನಿ ತನ್ನ ಒಂದು ವರ್ಷದ ಪುಟ್ಟ ಮಗುವಿಗೆ ಮೊಲೆಹಾಲುಣಿಸುತ್ತಾ ಇರುತ್ತಾಳೆ. ಮತ್ತೊಬ್ಬ ಮಗ ಊಟ ಮಾಡುತ್ತಾ ಇರುತ್ತಾನೆ. ಈಕೆ ಆ ಕೊಠಡಿಗೆ ಬಂದದ್ದೇ ತಡ ಆ ಮಕ್ಕಳು ಕಕ್ಕಾಬಿಕ್ಕಿಯಾಗುತ್ತವೆ. ಈಕೆಯ ರೌದ್ರಾವತಾರ ಕಂಡು ಬೆಚ್ಚಿ ಬೀಳುತ್ತಾರೆ.

ಏರುಸಿರಲ್ಲೇ ಅಲ್ಲಿ ಹಾಲುಣ್ಣುತ್ತಿದ್ದ ಸಣ್ಣ ಮಗುವನ್ನು ಎಳೆದು ಅಷ್ಟು ದೂರ ಎಸೆಯುತ್ತಾಳೆ. ಪಕ್ಕದಲ್ಲೇ ಊಟ ಮಾಡುತ್ತಿದ್ದ ,ಮತ್ತೊಬ್ಬ ಮಗನ ಊಟವನ್ನು ಚೆಲ್ಲಿ, ಅನ್ನದ ತಟ್ಟೆಯನ್ನು ಎಸೆದು ಬಿಡುತ್ತಾಳೆ. ಮಾತ್ರವಲ್ಲದೆ ಅಲ್ಲೇ ಇದ್ದ ವಾಚ್ಮ್ಯಾನ್ ಪತ್ನಿ ಕಮಲಾ ಮೇಲೆ ಮನಬಂದಂತೆ ಹಲ್ಲೆ ಮಾಡುತ್ತಾಳೆ. ಆಕೆಯ ಕಿವಿಯ ಭಾಗಕ್ಕೆ ಬಲವಾಗಿ ಭಾರಿಸುತ್ತಾಳೆ. ಪರಿಣಾಮ ಆಕೆಯ ಕಿವಿ ಹರಿದು, ಕಿವಿಯೋಲೆ ಹೊರಬರುತ್ತದೆ. ಕೇವಲ ಮೂರೇ ಮೂರು ನಿಮಿಷದಲ್ಲಿ ತನ್ನ ಅಭೂತ
ಪೂರ್ವ ದರ್ಶನವನ್ನು ಆ ಬಡಪಾಯಿ ಕುಟುಂಬದ ಮೇಲೆ ತೋರಿಸಿ ದರ್ಪವನ್ನು ಮೆರೆಯುತ್ತಾಳೆ.

ನೋವಿನಿಂದ ತಾಳಲಾರದ ಆ ಬಡಪಾಯಿ ವಾಚ್ಮ್ಯಾನ್ ಪತ್ನಿ ಆಸ್ಪತ್ರೆಗೆ ತೆರಳಿ ಪ್ರಾಥಮಿಕ ಚಿಕಿತ್ಸೆಯನ್ನು ಪಡೆಯುತ್ತಾಳೆ. ನಂತರ ಸ್ಥಳೀಯರ ಒತ್ತಾಯದ ಮೇರೆಗೆ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗುತ್ತಾಳೆ. ಆದರೆ ಆ ಠಾಣೆಯಲ್ಲಿ ಉಡಾಫೆ ಉತ್ತರವನ್ನು ನೀಡಿದ್ದ ಪೊಲೀಸರು, ಮಹಿಳಾ ಪೊಲೀಸ್ ಠಾಣೆಗೆ ತೆರಳುವಂತೆ ಸೂಚಿಸುತ್ತಾರೆ. ನಂತರ ಮಹಿಳಾ ಪೊಲೀಸ್ ಠಾಣೆಗೆ ತೆರಳಿದರೆ ಅಲ್ಲಿ, ಆಸ್ಪತ್ರೆಯ ದಾಖಲೆಗಳನ್ನು ತರುವಂತೆ ಸೂಚಿಸಿ ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಾರೆ.

ಅದೇಗೋ ಮತ್ತೆ ವೆನ್ಲಾಕ್ ಆಸ್ಪತ್ರೆಗೆ ತೆರಳಿ ಆಸ್ಪತ್ರೆಯ ದಾಖಲೆಯನ್ನು ಪಡೆಯುತ್ತಾಳೆ. ಸರ್ಕಾರಿ ವೈಧ್ಯರು ತಮ್ಮ ರಾಜಕೀಯ ಒತ್ತಡಗಳ ನಡುವೆಯೂ ಆಕೆಯ ತನ್ನ ಕಿವಿಯ ಭಾಗದಲ್ಲಿ ಹಾನಿಯಾದ ಬಗ್ಗೆ ದಾಖಲೆಯನ್ನು ಕೊಡುತ್ತಾರೆ. ಇದನ್ನು ಹಿಡಿದುಕೊಂಡು ಮತ್ತೆ ಪೊಲೀಸ್ ಠಾಣೆಗೆ ತೆರಳಿದರೆ ಮತ್ತೆ ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಾರೆ. ಪರಿಣಾಮ ಇಂದಿಗೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ರಾಜಕೀಯ ಒತ್ತಡಗಳನ್ನು ನಿರೂಪಿಸಿದ್ದಾರೆ.

ಇದರ ಮಧ್ಯೆ, ಸುಮಾರು ನಾಲ್ಕು ದಿನಗಳ ನಂತರ ಅದೇ ಮಂಗಳೂರು ರಾಕ್ಷಸೀ ಮೇಯರ್ ಅದೇ ವಾಚ್ಮ್ಯಾನ್ ಪತ್ನಿ ಮೇಲೆ ಹತ್ಯೆಗೆ ಯತ್ನ ಸಹಿತ ಐಪಿಸಿ ಸೆಕ್ಷನ್ ನ ಅಡಿಯಲ್ಲಿ ಬರೋಬ್ಬರಿ 7 ಪ್ರರಣಗಳನ್ನು ದಾಖಲಿಸುತ್ತಾಳೆ. ಪೊಲೀಸರು ಕೂಡಾ ತರಾತುರಿಯಲ್ಲಿ ಪ್ರಕರಣ ದಾಖಲಿಸಿ ಆಕೆಯ ಬಂಧನಕ್ಕೆ ಬಲೆ ಬೀಸುತ್ತಾರೆ. ನಾವು ರಾಜ್ಯ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವವರು ಎಂದು ಮತ್ತೊಮ್ಮೆ ಸಾಭೀತು ಪಡಿಸುತ್ತಾರೆ.

ಭಾರತೀಯ ಜನತಾ ಪಕ್ಷ ಬೀದಿಗಿಳಿಯುತ್ತೆ. ಮಂಗಳೂರು ಮಹಾನಗರ ಪಾಲಿಕೆಯ ಒಳಗೂ ಹೊರಗೂ ಬಿಜೆಪಿ ಸದಸ್ಯರು ಧರಣಿ ನಡೆಸುತ್ತಾರೆ. ತನ್ನ ಮೇಯರ್ ಸಿಂಹಾಸನದಿಂದಲೇ ಬೊಬ್ಬಿರಿದು ಅಬ್ಬರಿಸುತ್ತಾಳೆ ಮೇಯರಮ್ಮ. ಕಟೀಲಿಗೆ ಬಂದು ಆಣೆ ಪ್ರಮಾಣ ಮಾಡಿ ಎಂದೂ ಸಿಡಿಯುತ್ತಾಳೆ. ಮೊಸಳೆ ಕಣ್ಣೀರು ಹಾಕಿ ಬಿಡುತ್ತಾಳೆ. ಮಹಗಾನಗರ ಪಾಲಿಕೆಯಲ್ಲಿ ಕಣ್ಣೀರ ಧಾರೆಯೇ ಹರಿದು ಜಲಪ್ರಳಯವಾಗಿಬಿಡುತ್ತೆ. ಆದರೂ ತನ್ನ ಸ್ಥಾನಕ್ಕೆ ರಾಜೀನಾಮೆಯನ್ನು ಮಾತ್ರ ನೀಡಲು ಒಪ್ಪಲೇ ಇಲ್ಲ.

ಕಟೀಲಿಗೆ ಬಂದು ಆಣೆ ಪ್ರಮಾಣ ಮಾಡಿ ಎಂದು ಬೊಬ್ಬೆ ಬಿಟ್ಟ ಆಕೆಗೆ ನಾವು ಪ್ರತಿ ಸವಾಲನ್ನು ಹಾಕಿದ್ದು ನಂತರ ಇಂಗು ತಿಂದ ಮಂಗನಂತಾಗಿದ್ದಾಳೆ. “ಹಲ್ಲೆಗೊಳಗಾದ ಆ ಮಹಿಳೆ ತನಗೆ ಹಲ್ಲೆ ಮಾಡಿದ್ದು ಸತ್ಯ ಎಂದು ಆಣೆ ಹಾಕುತ್ತಾಳೆ. ಆದರೆ ತನ್ನ ಮಗಳ ಕತ್ತು ಹಿಡಿದು ಹತ್ಯೆಗೆ ಯತ್ನಿಸಿದ್ಧಾಳೆ ಎನ್ನುವುದನ್ನ ಆಣೆ ಮಾಡಿ ಪ್ರಮಾಣೀಕರಿಸುತ್ತೀರಾ” ಎಂದು ಸವಾಲೆಸೆದಿದ್ದು, ಆ ಮೇಯರಮ್ಮನ ಸದ್ಧಡಗಿದೆ.

ಮಂಗಳೂರು ಮೇಯರಮ್ಮನ ದರ್ಪ “ಶಬರಿ ಮಲೆ ಸ್ವಾಮಿ ಅಯ್ಯಪ್ಪ” ನಿನೆಮಾದಲ್ಲಿನ “ಮಹಿಷಿ”ಯ ಪಾತ್ರವನ್ನೂ ನಾಚಿಸುವಂತಿತ್ತು. ರಾಜ್ಯಮಟ್ಟದಲ್ಲಿಯೂ ಭಾರೀ ಸುದ್ಧಿಯಾಗಿತ್ತು. ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯರ ಜಾತಿಯವರಾದ (ಕುರುಬ) ಹಲ್ಲೆಗೊಳಗಾದ ವಾಚ್ಮ್ಯಾನ್ ಕುಟುಂಬಕ್ಕೆ ಸ್ವತಃ ಸಿದ್ಧರಾಮಯ್ಯರಿಂದಲೇ ನ್ಯಾಯ ಸಿಗದಾಯಿತು. ಸದಾ ಜಾತಿ ಜಾತಿ ಎಂದು ಬೊಬ್ಬೆ ಬಿಡುತ್ತಿರುವ ಸಿಎಂ ಸಿದ್ಧರಾಮಯ್ಯ ಈ ಬಗ್ಗೆ ಕ್ಯಾರೇ ಎನ್ನಲ್ಲ. ಈ ಮೂಲಕ ನನ್ನ ಜಾತಿ ಪ್ರೇಮವೇನಿದ್ದರೂ ಅದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸೀಮಿತ ಎಂದು ಜಗದ್ಜಾಹೀರುಗೊಳಿಸುತ್ತಾರೆ.

ಮೇಯರಮ್ಮನಿಗೆ “ಗುದ್ದಿದ, ಸಿದ್ಧ”..!!!

ಹೌದು. ಮೇಯರ್ ಕವಿತಾ ಸನಿಲ್ ಮೇಲೆ ಇಷ್ಟೆಲ್ಲಾ ಆರೋಪಗಳಿದ್ದರೂ ಅದನ್ನು ಲೆಕ್ಕಿಸದ ಸಿಎಂ ಸಿದ್ಧರಾಮಯ್ಯ, ಮಂಗಳೂರಿಗೆ ಆಗಮಿಸಿ ಅ ಅಹಂಕಾರಿ ಮೇಯರ್ ಜೊತೆ ಆಟವಾಡುತ್ತಾರೆ. ಇಂದು ನಡೆದ ಕರಾಟೆ ಛಾಂಪಿಯನ್ಶಿಪ್ನ ಉಧ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಎಂ ಸಿದ್ಧರಾಮಯ್ಯ ಉಧ್ಘಾಟನೆ ಮಾಡಿದ್ದೇ ವಿಶೇಷವಾಗಿತ್ತು. ತಾನು ಶೈನ್ ಆಗಬೇಕೆಂದು ಆಯೋಜಿಸಿದ್ದ ಕರಾಟೆಯಲ್ಲಿ ಮುಖ್ಯಮಂತ್ರಿಗಳಿಗೆ ಗುದ್ದಿ, ನಂತರ ಸಿಎಂ ಈ ಮೇಯರ್ಗೆ ಗುದ್ದುವ ನಾಟಕವಾಡಿ ಮಂಗಳೂರಿನ ಮರ್ಯಾದೆಯನ್ನು ಹರಾಜು ಹಾಕಿದ್ದಾರೆ.

ತನ್ನ ಜಾತಿ ಅನ್ನೋದಕ್ಕಿಂತಲೂ, ಓರ್ವ ಸಾಮಾನ್ಯ ಬಡಪಾಯಿ ಮಹಿಳೆಗೆ ಅನ್ಯಾಯವಾಗಿದೆ ಎಂಬುದನ್ನು ಮುಂದಿಟ್ಟು ಮಂಗಳೂರು ಮೇಯರನ್ನು
ಪ್ರಶ್ನಿಸೋದು ಬಿಟ್ಟು, ಆಕೆಯ ಜೊತೆ ಆಟವಾಡುವ ಮುಖ್ಯಮಂತ್ರಿ ಸಿದ್ಧರಾಮಯ್ಯರಿಂದ ಜನತೆ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವೇ..?

-ಸುನಿಲ್

Tags

Related Articles

Close