ಅಂಕಣ

ಬರೀ ನೆಹರೂ ಕುಟುಂಬವಷ್ಟೇ ಅಲ್ಲ!! ಭಾರತೀಯ ಗೂಢಾಚಾರ ಸಂಸ್ಥೆಯ ‘ಆಪರೇಶನ್ ಕಹುತಾ’ ವೊಂದು ಈ ಪ್ರಧಾನಿಯೂ ಭಾರತಕ್ಕೆ ಬಹುದೊಡ್ಡ ದ್ರೋಹ ಬಗೆದಿದ್ದರೆಂದು ಬಹಿರಂಗಗೊಳಿಸಿತ್ತು!!!

`ಆಪರೇಷನ್ ಕಹುತಾ’, ಇಂಥದೊಂದು ಅಸಮಾನ್ಯ ಬೇಹುಗಾರಿಕಾ ಕಾರ್ಯಾಚರಣೆಯನ್ನು ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿತ್ತು. ಈ ಕಾರ್ಯಾಚರಣೆ ಭಾರತದ ಇತಿಹಾಸದಲ್ಲಿ ಅತ್ಯಂತ ಧೈರ್ಯಶಾಲಿ ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಈ ಕಾರ್ಯಾಚರಣೆಯನ್ನು ಕೈಗೊಂಡಿದ್ದು ಯಾರು ಗೊತ್ತೇ… ಜಗತ್ತಿನ ಅಸಮಾನ್ಯ ಗುಪ್ತಚರ ಸಂಸ್ಥೆಯಾಗಿರುವ `ರಾ’, ಅಂದರೆ ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್. ಮೈನವಿರೇಳಿಸುವಂತೆ ಮಾಡುವ ಈ ಆಪರೇಷನ್ ಕಹುತಾದ ಕಥೆಯೇ ಒಂದು ವಿಚಿತ್ರ…

ಕಹುತಾ ಕಾರ್ಯಾಚರಣೆ ಯಾಕೆ ಗೊತ್ತೇ?

ಕಹುತಾ ಎಂಬುದು ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ಒಂದು ನಗರ. ಇಲ್ಲಿಯೇ ಖಾನ್ ರಿಸರ್ಚ್ ಲ್ಯಾಬೊರೇಟರೀಸ್ ಅನ್ನು ಸ್ಥಾಪಿಸಲಾಯಿತು. ಕಹುತಾ
ಪ್ರಾಜೆಕ್ಟ್‍ನ ನೆಲೆಯನ್ನು ಅಧಿಕೃತವಾಗಿ ಪ್ರಾಜೆಕ್ಟ್ -706 ಎಂದೂ ಕರೆಯಲಾಗುತ್ತದೆ. ಆದರೆ ಇಲ್ಲಿ ಇಡೀ ವಿಶ್ವವನ್ನೇ ನುಂಗಿಹಾಕಲಿರುವ ಘಟನೆಯೊಂದು
ನಡೆಯಲಿದೆ ಎಂಬ ವಿಷಯವನ್ನು ರಾ ಸಂಸ್ಥೆ ರಹಸ್ಯವಾಗಿ ಕಲೆಹಾಕಿತ್ತು. ಅದೇ ಪಾಕಿಸ್ತಾನದ ಮೊದಲ ಪರಮಾಣು ಬಾಂಬನ್ನು ಅಭಿವೃದ್ಧಿಪಡಿಸುವ ಯೋಜನೆ. ಈ ಕೆಲಸ 1972 ರಿಂದ 1983ರವರೆಗೆ ಗುಪ್ತವಾಗಿ ನಡೆಯುತ್ತಿತ್ತು. ಪಾಕಿಸ್ತಾನದ ಪರಮಾಣು ರಿಯಾಕ್ಟರನ್ನೇ ನಾಶಪಡಿಸಬೇಕೆಂಬ ಉದ್ದೇಶದಿಂದ ರಾ ಆಪರೇಷನ್ ಕಹುತಾವನ್ನು ಕೈಗೊಂಡಿತ್ತು.

ಆಪರೇಷನ್ ಕಹುತಾ ಎಂದರೇನು ಗೊತ್ತೇ?

1965ರ ಪಾಕ್ ಯುದ್ಧದ ರಾ ಎನ್ನುವ ಗುಪ್ತಚರ ಸಂಸ್ಥೆಯೊಂದು ಆರಂಭಗೊಂಡಿತ್ತು. ಈ ಸಂಸ್ಥೆಗೆ ಪಾಕಿಸ್ತಾನ 1977ರಲ್ಲಿ ರಹಸ್ಯವಾಗಿ ಪರಮಾಣು ರಿಯಾಕ್ಟರ್
ಆರಂಭಿಸುವುದನ್ನು ಆರಂಭಿಸಿತ್ತು. ಈ ಬಗ್ಗೆ ದೃಢೀಕರಿಸಿದ ರಾ ಅದನ್ನು ಪತ್ತೆಹಚ್ಚಿನ ನಾಶಪಡಿಸಬೇಕೆಂಬ ಉದ್ದೇಶ ಹೊಂದಿತ್ತು. ಈ ಕಾರ್ಯಾಚರಣೆಗೆ ಇಸ್ರೇಲ್‍ನ ಖ್ಯಾತಿವೆತ್ತ ಗುಪ್ತಚರ ಸಂಸ್ಥೆ ಮೊಸಾದ್‍ನ ನೆರವನ್ನೂ ಕೂಡಾ ಕೋರಲಾಯಿತು. ಅದರಂತೆ ಮೊಸಾದ್ ಕೂಡಾ ಕಾರ್ಯಾಚರಣೆಗೆ ರಾಗೆ ನೆರವಾಗಿದೆ ಎಂದು ಹೇಳಲಾಗಿದೆ.

ಕಾಬೊಯ್ ಎಂದೇ ಖ್ಯಾತಿವೆತ್ತ ಆರ್.ಎನ್. ಕಾವೊ ಅವರು ರಾದಲ್ಲಿ ಒಂದು ದಶಕಗಳ ಸೇವೆ ಸಲ್ಲಿಸಿದ್ದರಲ್ಲದೆ ರಾ ದ ಜಾಲವನ್ನು ಪಾಕಿಸ್ತಾನದಲ್ಲೂ ವಿಸ್ತರಿಸುವಲ್ಲಿ ಮಹತ್ವದ ಕೆಲಸ ಮಾಡಿದ್ದರು. ಪಾಕಿಸ್ತಾನದಲ್ಲಿರುವ ರಾ ದ ಕಾರ್ಯಕರ್ತರು ಸಂಭವನೀಯ ಪರಮಾಣು ಬಾಂಬ್ ತಯಾರಿಕೆಯ ರಹಸ್ಯ ವಿಚಾರಗಳನ್ನು ಭಾರತಕ್ಕೆ ಒದಗಿಸಿದ್ದರು.

ಆದರೆ ಅಲ್ಲೊಂದು ಅಡಚಣೆ ಇತ್ತು!!

ಪಾಕಿಸ್ತಾನದ ನಿಕಟವರ್ತಿಯಾಗಿದ್ದ ಫ್ರೆಂಚ್ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು. ಇದರಿಂದ ವಿಚಲಿತನಾದ ಪಾಕಿಸ್ತಾನ ತನ್ನ ಪರಮಾಣು ಕಾರ್ಯಾಚರಣೆಯಲ್ಲಿ ಇನ್ನಷ್ಟು ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಆರಂಭಿಸಿತು.

ಇಷ್ಟಾದರೂ ರಾ ಏಜೆಂಟರುಗಳು ಪರಮಾಣು ಕಾರ್ಯಕ್ರಮದ ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡಿದ್ದರು. ಪಾಕಿಸ್ತಾನದ ಅಣು ವಿಜ್ಞಾನಿ ಅಬ್ದುಲ್ ಖಾದಿರ್ ಖಾನ್ ಅವರ ಚಲನ ವಲನ ಚಟುವಟಿಕೆಗಳನ್ನು ಗಮನಿಸುವುದು ಇವರ ಕೆಲಸವಾಗಿತ್ತು. ಕಹುತಾದ ಅಣ್ವಸ್ತ್ರ ತಯಾರಿಕೆ ಸಂಬಂಧಿ ಸಣ್ಣ ಪುಟ್ಟ ಮಾಹಿತಿಯನ್ನು
ಕಳುಹಿಸುವುದು, ಪಾಕ್ ವಿಜ್ಞಾನಿಗಳು ಅಣುವನ್ನು ಬೇಧಿಸುವುದು ರಾ ಏಜೆಂಟರು ಭಾರತಕ್ಕೆ ಯಶಸ್ವಿಯಾಗಿ ಕಳುಹಿಸುತ್ತಿದ್ದರು.

ರಾ ಏಜೆಂಟರಾಗಿದ್ದ ಮೋಹನ್‍ಲಾಲ್ ಭಾಸ್ಕರ್ ಅವರು ಖಾದಿರ್‍ಖಾನ್ ಪರಮಾಣು ಯೋಜನೆಯ ಹಾಗೂ ಖಾದಿರ್‍ಖಾನ್‍ನ ವೈಯಕ್ತಿಕ ಹಿನ್ನೆಲೆಯನ್ನು ಸಂಗ್ರಹಿಸಿ ಮೈಕ್ರೋ ಫಿಲ್ಮ್ ಮಾಡಿ ಅವನ್ನೆಲ್ಲ ಫುಟ್‍ಬಾಲ್‍ನಲ್ಲಿ ಹಾಕಿ ಕಾಲಿನಲ್ಲಿ ಒದ್ದು, ಭಾರತೀಯ ದೂತಾವಾಸದ ಅಧಿಕಾರಿ ಮನೆಯ ಹಿತ್ತಲಿನಲ್ಲಿ ಬೀಳುವಂತೆ ಮಾಡಿ ಅವನ ಮೂಲಕ ಭಾರತಕ್ಕೆ ರವಾನಿಸಿದ್ದರು. ಪಾಕಿಸ್ತಾನದ ಅಣ್ವಸ್ತ್ರ ತಯಾರಿಕೆಯ ಪ್ರಯೋಗ ಶಾಲೆಯಲ್ಲಿ ಕಾವಲುಗಾರನಾಗಿ ಸೇರಿ ಸುಮಾರು ನಾಲ್ಕು ತಿಂಗಳ ಕಾಲ ಅಲ್ಲಿನ ಪ್ರತಿಯಾಂದು ಸುದ್ದಿಯನ್ನು ಭಾರತಕ್ಕೆ ಕಳುಹಿಸುತ್ತಿದ್ದರು. ಶತ್ರುದೇಶದಲ್ಲಿ, ಯಾರಿಗೂ ಗೊತ್ತಾಗದಂತೆ ರಹಸ್ಯವಾಗಿ ಬೇಹುಗಾರಿಕೆ ನಡೆಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಆದರೆ ಮುಂದೆ ಮೋಹನ್‍ಲಾಲ್ ಭಾಸ್ಕರ್ ಅವರು ಪಾಕಿಗಳ ಕೈಗೆ ಸಿಕ್ಕಿಬಿದ್ದು, ಪಡಬಾರದ ಶಿಕ್ಷೆ ಅನುಭವಿಸಿದ್ದು ಮಾತ್ರ ವಿಪರ್ಯಾಸ.

ಒಮ್ಮೆ ರಾ ಏಜೆಂಟರು ಪಾಕಿಸ್ತಾನಿ ವಿಜ್ಞಾನಿಗಳನ್ನೇ ಸುತ್ತುವರಿದು ನಿಗಾ ವಹಿಸಿದ್ದರು. ಪರಮಾಣು ವಿಜ್ಞಾನಿಗಳು ಕೂದಲು ತೆಗೆಯಲು ಹೋಗಿದ್ದ ಬಾರ್ಬರ್ ಶಾಪ್ (ಸಲೂನ್)ಗೆ ಹೋಗಿ ಅವರ ಕೂದಲನ್ನು ಸಂಗ್ರಹಿಸಿ ಅವುಗಳ ಪರೀಕ್ಷೆಗಾಗಿ ಮಾದರಿಗಳನ್ನು ಭಾರತಕ್ಕೆ ಕಳುಹಿಸಿದರು.

ಪರೀಕ್ಷಾ ವರದಿಯಲ್ಲಿ ಪಾಕಿಸ್ತಾನ ಪರಮಾಣು ಬಾಂಬ್ ತಯಾರಿಕೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿತು. ಪರೀಕ್ಷೆಯಲ್ಲಿ ವಿಜ್ಞಾನಿಗಳ ತಲೆಕೂದಲ ಮಾದರಿಯಲ್ಲಿ ವಿಕಿರಣಗಳು ಪತ್ತೆಯಾದವು. ಇದು ಪಾಕಿಸ್ತಾನ ಪರಮಾಣು ಸ್ಥಾವರಗಳನ್ನು ನಿರ್ಮಿಸಿರುವುದಕ್ಕೆ ಪ್ರಬಲ ಸಾಕ್ಷಿ…! ಸಂಸ್ಕರಿಸಿದಾಗ ಪ್ಲುಟೋನಿಯಮ್ ಎನ್ನುವುದು ಪತ್ತೆಯಾಯಿತು. ಆಪತ್ತು ಇರುವುದನ್ನು ಮನಗಂಡಿದ್ದ ರಾ ಏಜೆಂಟರು ಕುಹುತಾ ಪ್ರದೇಶಕ್ಕೆ ನುಗ್ಗಿ ಪರಮಾಣು ಸ್ಥಾವರವನ್ನೇ ನಾಶಪಡಿಸಲು ಬಯಸಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಂದು ಪಾಕಿಸ್ತಾನ ಪರಮಾಣು ಬಾಂಬ್ ಹೊಂದಿರಲು ಸಾಧ್ಯವೇ ಇರುತ್ತಿರಲಿಲ್ಲ. ಆದರೆ ಹಾಗಾಗದಂತೆ ತಡೆಯಲು ಅಲ್ಲೊಂದು ದೆವ್ವ ಪ್ರಧಾನಿ ಕುರ್ಚಿಯಲ್ಲಿ ಕುಳಿತಿತ್ತು…

ಅಲ್ಲಿ ನಡೆಯಿತು ನಂಬಿಕೆ ದ್ರೋಹ…!!!!

ಇನ್ನೇನು ಪಾಕಿಸ್ತಾನದ ಪರಮಾಣು ಸ್ಥಾವರವನ್ನು ಉಡೀಸ್ ಮಾಡಬೇಕೆಂದು ರಾ ಏಜೆಂಟರು ಸನ್ನದ್ಧರಾಗಿದ್ದರು. ಆದರೆ ಅಲ್ಲಿ ಒಬ್ಬ ಇತಿಹಾಸವೇ ಕ್ಷಮಿಸದಂತಹಾ ನಂಬಿಕೆದ್ರೋಹವನ್ನು ಎಸಗಿದ್ದರು. ಅವರೇ ಪ್ರಧಾನಿಯಾಗಿ ವಕ್ಕರಿಸಿದ್ದ ಮೊರಾರ್ಜಿ ದೇಸಾಯಿ. ಇದಕ್ಕೂ ಕಾರಣವೂ ಇದೆ. ಅಂದಿನ ರಾಜಕಾರಣಿಗಳಿಗೆ ದೇಶಭಕ್ತ ಗುಪ್ತಚರ ಸಂಸ್ಥೆಗಳಾದ ಐಬಿ ಹಾಗೂ ರಾ ಬಗ್ಗೆ ನಂಬಿಕೆಯೇ ಇರಲಿಲ್ಲ. ಅದಕ್ಕಾಗಿ ಮೊರಾರ್ಜಿ ಬಜೆಟ್‍ನಲ್ಲಿ ಇಡುತ್ತಿದ್ದ ರಾಗೆ ಮೊತ್ತವನ್ನು ಶೇ.30ರಿಂದ ಶೇ.40ಕ್ಕೆ ಇಳಿಸುವ ಮೊದಲ ಕ್ರಮ ಕೈಗೊಂಡಿದ್ದರು. ಈ ಕ್ರಮ ರಾದ ಸ್ಥಾಪಕ ಆರ್.ಎನ್. ಕಾವೋ ಅವರನ್ನು ಹುದ್ದೆಯಿಂದ ತ್ಯಜಿಸುವಂತೆ ಮಾಡಿತು. ಇದು ಅವರ ಆದರ್ಶ ವ್ಯಕ್ತಿತ್ವ, ಸೇವಾ ಮನೋಭಾವಕ್ಕೆ ಅಪಾರ ನೋವು ತಂದಿತ್ತು. ಆದರೆ ಇದಾದ ಬಳಿಕ ರಾವನ್ನು ದೇಸಾಯಿ ನೋಡಿಕೊಂಡರು. ಬಳಿಕ ನಾಯರ್ ವಹಿಸಿಕೊಂಡರು.

ಕಾರ್ಯಾಚರಣೆ ಅಷ್ಟಕ್ಕೆ ನಿಲ್ಲಲಿಲ್ಲ. ಪರಮಣು ಸ್ಥಾವರದ ಪ್ರದೇಶವನ್ನು ದೃಢೀಕರಿಸಿದ ಬಳಿಕ ಅದರ ಬ್ಲೂಪ್ರಿಂಟ್ ತಯಾರಿಸಲಾಯಿತು. ಸ್ಥಾವರದ ಸ್ಥಳವನ್ನು
ದೃಢೀಕರಿಸಿದ ನಂತರ, ಮುಂದಿನ ಹಂತವೆಂದರೆ ಬ್ಲೂಪ್ರಿಂಟ್‍ನಲ್ಲಿನ ಪ್ರದೇಶದಲ್ಲಿ ಹಿಡಿತವನ್ನು ಪಡೆಯಬೇಕಿತ್ತು. ಅದಕ್ಕಾಗಿ ಏಜೆಂಟರು ಅಲ್ಲಿನವರಿಗೆ ಹಣ
ಪಾವತಿಯನ್ನೂ ಮಾಡಿದರು. ಇನ್ನೇನು ಸ್ಥಾವರವನ್ನು ಉಡೀಸ್ ಮಾಡಬೇಕಿತ್ತು. ಅದಕ್ಕಾಗಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಅನುಮತಿ ಬೇಕಾಗಿತ್ತು. ಆದರೆ ಇಲ್ಲಿ ಹಾಗಾಗಲಿಲ್ಲ.

ಎನ್.ಎಫ್. ಸನ್‍ಟೂಕ್ ಅವರು ಈ ವಿಷಯವನ್ನು ಮೊರಾರ್ಜಿ ದೇಸಾಯಿ ಬಳಿಗೆ ತಂದರು. ಆದರೆ ಇದನ್ನೆಲ್ಲಾ ಕೇಳಿ ಮೊರಾರ್ಜಿ ದೇಸಾಯಿ ವರ್ತಿಸಿರುವುದನ್ನು
ನೋಡಿದಾಗ ಅವರಿಗೆ ಅಘಾತ ಉಂಟಾಗಿತ್ತು. ಪಾಕಿಗಳ ಕೈಯ್ಯಲ್ಲಿ ಪರಮಾಣು ಬಾಂಬ್ ಇದ್ದರೆ ಇಡೀ ವಿಶ್ವವೇ ಒಂದು ತಲೆದಂಡ ತೆರಲಿದೆ ಎಂಬ ಸತ್ಯವನ್ನೂ
ಅರ್ಥಮಾಡಿಕೊಳ್ಳದ ಮೊರಾರ್ಜಿ ದೇಸಾಯಿ ರಾ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಪಾಕಿಸ್ತಾನದ ಆಂತರಿಕ ವಿಚಾರಗಳಲ್ಲಿ ಭಾರತ ಈ ರೀತಿ
ಮಧ್ಯಪ್ರವೇಶಿಸಬಾರದು ಎಂಬುವುದರ ಬಗ್ಗೆ ನಾಯರ್‍ಗೆ ಉಪನ್ಯಾಸ ನೀಡಿದ್ದರು ಪ್ರಧಾನಿ. ಅಲ್ಲದೆ ಯಾರೂ ಕ್ಷಮಿಸಲಾರದ ವಿಶ್ವಾಸಘಾತುಕ ಕೆಲಸವೊಂದನ್ನು
ಮಾಡಿಬಿಟ್ಟರು.

ಅದೇನೆಂದರೆ…

ಪಾಕಿಸ್ತಾನದ ಅಂದಿನ ಪ್ರಧಾನಿಯಾಗಿದ್ದವನು ಜಿಯಾ -ಉಲ್-ಹಕ್. ಈತನ ಜೊತೆ ಅನೌಪಚಾರಿಕವಾಗಿ ದೂರವಾಣಿ ಕರೆ ಮಾಡಿದ ಮೊರಾರ್ಜಿ ದೇಸಾಯಿ
ಪಾಕಿಸ್ತಾನದಲ್ಲಿರುವ ರಾದ ನೆಟ್‍ವರ್ಕ್ ಬಗ್ಗೆ ಬಹಿರಂಗಪಡಿಸಿದರು. ಅಲ್ಲದೆ ಕಹುತಾದ ಪರಮಾಣು ಸ್ಥಾವರದ ಬಗ್ಗೆ ತಮಗೆ ತಿಳಿದಿತ್ತು ಎನ್ನುವುದನ್ನು ಹೇಳಿಬಿಟ್ಟರು.

ಮೊರಾರ್ಜಿ ದೇಸಾಯಿ ಮಾಡಿದ ವಿಶ್ವಾಸ ಘಾತುಕ ಕೆಲಸದಿಂದ ಪಾಕಿಸ್ತಾನ ಎಚ್ಚೆತ್ತುಕೊಂಡಿತು. ಪಾಕಿಸ್ತಾನ ತನ್ನ ಭೂಮಿಯಲ್ಲಿದ್ದ ಭಾರತದ ಕೆಚ್ಚೆದೆಯ ಪುರುಷರನ್ನು ಬೇಟೆಯಾಡಿ, ಅದರಲ್ಲಿ ಅನೇಕರನ್ನು ಕ್ರೂರವಾಗಿ ಕೊಂದಿತು. ಇದರಿಂದಾಗಿ ಪಾಕಿಸ್ತಾನದಲ್ಲಿ ರಾ ನೆಟ್‍ವರ್ಕ್ ಜಾಲ ಕಡಿತಗೊಂಡಿತು. ರಾಗೆ ಮತ್ತೆ ಪಾಕಿಸ್ತಾನದಲ್ಲಿ ನೆಟ್‍ವರ್ಕ್ ಸಾಧಿಸಲು ಬರೋಬ್ಬರಿ ಹತ್ತು ವರ್ಷ ಹಿಡಿಯಿತು.

ರಾ ಗುಪ್ತಚರ ಸಂಸ್ಥೆ ಅಪಾಯಕಾರಿಯಾದ ಕಾರ್ಯಾಚರಣೆಯನ್ನು ಕೈಗೊಂಡು ಅದ್ಭುತ ಯಶಸ್ಸನ್ನು ಸಾಧಿಸಿತ್ತು. ಆದರೆ ರಾಜಕೀಯ ದ್ರೋಹದಿಂದ ಆ
ಕಾರ್ಯಾಚರಣೆಯನ್ನು ನಡೆಸಲು ಸಾಧ್ಯವಾಗಲಿಲ್ಲ. ಆದರೆ ಇಂತಹ ದ್ರೋಹಗಳು ಅಪರೂಪವಲ್ಲ. ಯಾಕೆಂದರೆ ಜವಾಹರಲಾಲ್ ನೆಹರೂ ಕೂಡಾ ಇಂಡೋ-ಚೀನಾ ಯುದ್ಧದ ಸಮಯದಲ್ಲಿ ಭಾರತೀಯ ಸೈನ್ಯದ ಬಗ್ಗೆ ತೋರಿದ ನಿರ್ಲಕ್ಷ್ಯದಿಂದ ಸಾವಿರಾರು ಸೈನಿಕರ ಸಾವಿಗೆ ಕಾರಣವಾಯಿತು. ಯಾಕೆಂದರೆ ಆಕ್ರಮಣಕಾರಿ ಚೀನಿಯರನ್ನು ಎದುರಿಸಲು ಸರಿಯಾದ ಬಂದೂಕುಗಳನ್ನು ಒದಗಿಸದ ನೆಹರೂ ಸಾವಿರಾರು ಸೈನಿಕರ ಸಾವಿಗೆ ಕಾರಣರಾದರು.

-ಚೇಕಿತಾನ

Tags

Related Articles

Close