ಅಂಕಣದೇಶಪ್ರಚಲಿತ

ಬರೆದಷ್ಟೂ ಮುಗಿಯದ ಆಸ್ತಿಯ ವಿವರ!! ಪಿ.ಚಿದಂಬರಮ್ ಎಂಬ ಅತಿ ದೊಡ್ಡ ಭ್ರಷ್ಟ ರಾಜಕಾರಣಿ ಕುಟುಂಬದ ಒಟ್ಟು ಆಸ್ತಿ ಮೊತ್ತ ಎಷ್ಟು ಗೊತ್ತೇ ಸ್ವಾಮಿ?!

ಚೆನ್ನೈ ತನಿಖಾ ಘಟಕ, ತೆರಿಗೆ ಇಲಾಖೆಯ ಕೈನಲ್ಲಿರುವ ಬರೋಬ್ಬರಿ 200 ಪುಟಗಳ ವರದಿಯೊಂದು ಪಿ.ಚಿದಂಬರಮ್ ಎಂಬ ಅದ್ಭುತ ಭ್ರಷ್ಟ ರಾಜಕಾರಣಿಯನ್ನು ಬಯಲು ಮಾಡಿದೆ!ಅದರಲ್ಲೂ, 14 ದೇಶಗಳಲ್ಲಿ ಆಸ್ತಿ ಹೊಂದಿರುವ ಪಿ.ಚಿದಂಬರಮ್ ಕುಟುಂಬ, ಅದರಲ್ಲೂ ಮಗ ಕಾರ್ತಿಯ ಜಾತಕವನ್ನು ಜಾಲಾಡಿದೆ ತೆರಿಗೆ ಇಲಾಖೆ!

ಮಾಜಿ ಹಣಕಾಸು ಸಚಿವನಾಗಿದ್ದ ಪಿ.ಚಿದಂಬರಮ್ ನ ಈ ಆಸ್ತಿ ವಿವರಗಳ ಬಗ್ಗೆ ಬಿಜೆಪಿಯ ಸುಬ್ರಹ್ಮಣಿಯನ್ ಸ್ವಾಮಿ ಪ್ರೆಸ್ ಮೀಟ್ ನಲ್ಲಿ ಹೇಳಿದ್ದರಾದರೂ, ಕೊನೆಗೂ ಆ ಸುದ್ದಿಯೇ ಹೊರಹೋಗದಂತೆ ಮಾಧ್ಯಮದ ಬಾಯಿ ಮುಚ್ಚಿಸಿದ್ದ ಚಿ.ಪಿದಂಬರಮ್ ನ ಆಟ ಬಯಲಾಗಿದ್ದರ ಹಿಂದೆ ಸಾಕಷ್ಟು ಕಸರತ್ತಿದೆ!

ತೆರಿಗೆ ಇಲಾಖೆ ಹಾಗೂ ನಿರ್ದೇಶನಾಲಯ ಜೊತೆಗೂಡಿ ನಡೆಸಿದ ಜಂಟಿ ಕಾರ್ಯಾಚರಣೆಗೆ ಸಿಕ್ಕ ಆಸ್ತಿಯ ಮೊತ್ತ ಎಷ್ಟು ಗೊತ್ತೇ?!

” 21 ವಿದೇಶೀ ‘ಮೆಟ್ರೋ’ ಯುನೈಟೆಡ್ ಕಿಂಗ್ ಡಮ್ ಬ್ಯಾಂಕುಗಳಲ್ಲಿ ಕಾರ್ತಿ ಹಾಗೂ ಕಂಪೆನಿಯ ಹೆಸರಿನಲ್ಲಿ ಖಾತೆಗಳು, ಸಿಂಗಾಪೂರಿನ OCBC ಬ್ಯಾಂಕಿನಲ್ಲಿ ಅಡ್ವಾಂಟೇಜ್ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ನಾಲ್ಕು ಖಾತೆಗಳು!

ಸ್ಪೇನ್ ನ ಸಬಾಡೆಲ್ ಅಟ್ಲಾಂಟಿಕೋ ಹಾಗೂ ಲಾ ಸಾಕ್ಸಿಯಾ ಬ್ಯಾಂಕುಗಳಲ್ಲಿ ಖಾತೆ, HSBC UK, ಮೊನಾಕೋದ ಬಾರ್ಕ್ಲೇಸ್ ಬ್ಯಾಂಕ್, ಫ್ರಾನ್ಸಿನ ಮಾರ್ಸಿಲ್ಲೆ BNP ಪಾರಿಬಾಸ್ ಬ್ಯಾಂಕು, ಸ್ವಿಜರ್ಲ್ಯಾಂಡಿನ UBS ಬ್ಯಾಂಕು, ಹಾಗೂ ಇತರೆ!!”

ತೆರಿಗೆ ಇಲಾಖೆ ಕಾರ್ತಿಯ ಹಾರ್ಡ್ ಡಿಸ್ಕ್ ವಶ ಪಡಿಸಿಕೊಂಡ ಮೇಲೆ ಪಿ.ಚಿದಂಬರಮ್ ಕುಟುಂಬ ಕ್ಯಾಂಬ್ರಿಡ್ಜ್ ನಲ್ಲಿ ಅರಮನೆಯಂತಹ ಬಂಗಲೆಯನ್ನು ಕೊಂಡುಕೊಂಡಿದ್ದ ಆಧಾರಗಳು ಸಿಕ್ಕಿತು!

ತೆರಿಗೆ ಇಲಾಖೆ ನೀಡಿದ ಆಧಾರದಂತೆ, ಕ್್ಯಾಂಬ್ರಿಡ್ಜ್ ನ ಆಸ್ತಿ ಯಾವುದು ಗೊತ್ತೇ?!
5, Holben Close, Cambridge, CB237AQ. ಈ ಆಸ್ತಿಯನ್ನು ಎಡ್ಮಂಡ್ ಸೂಲೆ ಹೋಲ್ಟ್ ಹಾಗೂ ಹೀತರ್ ಹೋಲ್ಟ್ ಎಂಬವರಿಂದ ಖರೀದಿಸಲಾಗಿತ್ತು! ಇದಕ್ಕೆ ಕಾರ್ತಿಯ ಲಂಡನ್ನಿನ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಲಾಗಿತ್ತು! London’s bank a/c no : 16714313

ಚಿದಂಬರಮ್ ಯಾವುದೇ ಚುನಾವಣೆಗೆ ನಿಲ್ಲುವಾಗಲೂ, ಗೆದ್ದ ಮೇಲೂ, ಎಲ್ಲೂ ಕೂಡ ಆಸ್ತಿಯ ವಿವರ ಬಿಚ್ಚಿಡಲಿಲ್ಲ! 2016 ಮೇ ತಿಂಗಳಿನಲ್ಲಿ, ರಾಜ್ಯ ಸಭಾದ ಅಫಿಡವಿಟ್ಟಿನಲ್ಲಿ ತನ್ನ ಹೆಂಡತಿಯ ಹೆಸರಿನಲ್ಲಿ 1.55 ಕೋಟಿ ರೂಗಳ ಆಸ್ತಿ ಇದೆ ಎಂದಷ್ಟೇ ನಮೂದಿಸಿದ್ದಾದರೂ, ಅತ್ತ ಲಂಡನ್ ನ ಅದೇ ಮನೆ 85 ಕೋಟಿಗಳಿಗಳಿಗಿಂತಲೂ ಬೆಲೆ ಬಾಳುತ್ತದೆ ಎಂಬುದು ಅಲ್ಲಿನ ಮಾಧ್ಯಮಗಳು ಪ್ರಕಟಿಸಿತ್ತು!

ಬಿಡಿ! ಕಾರ್ತಿ ಕಂಪೆನಿಯ ಹೆಸರಿನಲ್ಲಿ 800 ಎಕೆರೆಯ ಸರ್ರಿಡ್ಜ್ ಫಾರ್ಮ್ ನನ್ನು ಒಂದು ಮಿಲಿಯನ್ ಪೌಂಡ್ಸ್ ಕೊಟ್ಟು ಖರೀದಿಸಿದ್ದ! ಕ್ಯಾಂಬ್ರಿಡ್ಜ್ ನ ಸೆರೆಸ್ ಎಂಬಲ್ಲಿದ್ದ ಮತ್ತೊಂದು ಬಂಗಲೆಯೂ ಗೊತ್ತಾಯೊತು ಅಧಿಕಾರಿಗಳಿಗೆ! 29, ಮೀಡೇ ಹೌಸ್!!!!

ರಿಯಲ್ ಎಸ್ಟೇಟ್ ಮೂಲಕ ಜಗದುದ್ದಗಲಕ್ಕೂ ಮಗ ಕಾರ್ತಿ ಆಸ್ತಿಗಳನ್ನು ಮಾಡಿಟ್ಟಿದ್ದ! ಲಂಡನ್, ದುಬೈ, ಸೌತ್ ಆಫ್ರಿಕಾ, ಫಿಲಿಫೈನ್ಸ್, ಥಾಯ್ ಲ್ಯಾಂಡ್ , ಸಿಂಗಾಪೂರ್, ಮಲೇಶಿಯಾ, ಶ್ರೀ ಲಂಕಾ, ಬ್ರಿಟಿಷ್ ವರ್ಜಿನ ಐಸ್ಲಾಂಡ್, ಫ್ರಾನ್ಸ್, ಯುಎಸ್ ಎ, ಸ್ವಿಜರ್ಲ್ಯಾಂಡ್, ಗ್ರೀಸ್ ಹಾಗೂ ಸ್ಪೇನ್ ನಲ್ಲಿವೆ ಆಸ್ತಿಗಳು! ಈ ಆಸ್ತಿಗಳನ್ನೆಲ್ಲ ಖರೀದಿಸಿದ್ದು, 2006 – 2014 ರ ಸಮಯದಲ್ಲಿಯೇ! ಆಗ ಪಿ.ಚಿದಂಬರಮ್, ಗೃಹ ಸಚಿವ ಹಾಗೂ ಹಣಕಾಸು ಸಚಿವನಾಗಿದ್ದ ಸಮಯವದು!!! ಈ ಎಲ್ಲಾ ಆಸ್ತಿಗಳ ಒಟ್ಟು ಮೊತ್ತ ಮೂರು ಬಿಯನ್ ಡಾಲರ್ಗಳಿಗಿಂತಲೂ ಹೆಚ್ಚು ಎಂಬುದನ್ನು ವರದಿ ಕೊಟ್ಟಿತ್ತು ಇಲಾಖೆ!

ಶ್ರೀಲಂಕಾದ ಲಂಕಾ ಫಾರ್ಟೂನದ ರೆಸಿಡೆನ್ಸಿಯ ಅತಿದೊಡ್ಡ ಶೇರು ಕಾರ್ತಿಯ ಸಿಂಗಾಪೂರಿನ ಖಾತೆಗಳು ನಿರ್ವಹಿಸುತ್ತವೆ! ಈ ಕಂಪೆನಿ, ಅತಿ ಪ್ರತಿಷ್ಟಿತವಾದ ‘ದ ವಾಟರ್ ಫ್ರಂಟ್’, ವೆಲಿಗಾಮಾ, ಎಂಬ ರೆಸಾರ್ಟ್ ಹೊಂದಿದೆ!
ಸೌತ್ ಆಫ್ರಿಕಾದ ಬೇ ಹಾಗೂ ಎಮರಾಲ್ಡ್ ಬೇ ರೆಸಾರ್ಟ್ ಗೆ ದುಬೈನಿಂದ ಹಣ ವರ್ಗಾವಣೆ ಮಾಡಿದ್ದ ಕಾರ್ತಿ, ಸೌತ್ ಆಫ್ರಿಕಾದ ಇನ್ನೂ ಮೂರು ಫಾರ್ಮ್ ಗಳಾದ ಗ್ರಾಬೌ ವಿನ ರೋವಿ ಫಾರ್ಮ್, ಕೇಪ್ ಓರ್ಕಾರ್ಡ್ಸ್, ವೈನ್ ಯಾರ್ಡ್ಸ್ ಪ್ರೈವೇಟ್ ಲಿಮಿಟೆಡ್, ಜಾಂಡ್ಲ್ವಿಟ್ ಪ್ರೈವೇಟ್ ಎಂಟರ್ಪ್ರೈಸಸ್, ಆಶ್ಟನ್ನಿನ ವೈನ್ ಹಾಗೂ ಸ್ಟುಡ್ ಫಾರ್ಮ್! ಸಿಂಗಾಪೂರಿನ ಫಾರ್ಮ್ 1.7 ಮಿಲಿಯನ್ ಆಸ್ತಿಗಳನ್ನು ಹೊಂದಿದ್ದರೆ, UAE ನಲ್ಲೂ ಆಸ್ತಿ ಹೊಂದಿರುವ ಕಾರ್ತಿ ಹಾಗೂ ಅವರ ಕುಟುಂಬದ ಆದಾಯ ಎಷ್ಟಿರಬೇಕೆಂದು ನೀವೇ ಊಹಿಸಿ!!

ದ ಅಡ್ವಾಂಟೇಜ್ ಸೆರೆಸ್, 29, ಮೀಡೇ ಹೌಸ್ ಫಿಲಿಪೈನ್ಸ್ ಹಾಗೂ ಅಂತರಾಷ್ಟ್ರೀಯ ಪ್ರೀಮಿಯರ್ ಟೆನ್ನಿಸ್ ಲೀಗ್ ನ ಸಹಭಾಗಿತ್ವ ಹೊಂದಿದೆ! ಕಾರ್ತಿ ಸಹಭಾಗಿತ್ವದ ಕಂಪೆನಿಗಳಾದ SM ಅರೆನಾ ಕಾಂಪ್ಲೆಕ್ಸ್ ಕಾರ್ಪೋರೇಷನ್ ಹಾಗೂ ಸ್ಪೋರ್ಟ್ಸ್ ಎಂಟರ್ ಟೇನ್ ಮೆಂಟ್ ಕಂಪೆನಿಗಳು ಗಳಿಸುತ್ತಿರುವ ಹಣ ಅಷ್ಟಿಷ್ಟಲ್ಲ!

ಸಿಂಗಾಪೂರಿನ ಬ್ರಿಟಿಷ್ ವರ್ಜಿನ್ ಐಸ್ಲಾಂಡ್ ನ ಕಂಪೆನಿ 400,000 ಸಿಂಗಾಪೂರ್ ಡಾಲರ್ಸ್ ಹಣವನ್ನು ಮತ್ತೊಂದು ಫುಲ್ ಇನ್ನೋವೇಷನ್ಸ್ ಗೆ ಹೂಡಿದೆ! ಸ್ವಿಜರ್ಲ್ಯಾಂಡ್ ನ ಕಂಪೆನಿ ಹಾಗೂ ಫ್ರಾಂಚೈಸ‌ ಗಳಿರುವ ಈ ಕಂಪೆನಿಗಳ ಹಣ ಸ್ವಿಸ್ ಬ್ಯಾಂಕಿನ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗುತ್ತದೆ! ಡಾಲರ್ಸ್ ಹಾಗೂ ಯೂರೋಗಳಲ್ಲಿ ಅದೆಷ್ಟೋ ಮಿಲಿಯನ್ ಹಣಗಳು ವರ್ಗಾವಣೆಯಾಗಿರುವ ಸಾಕ್ಷ್ಯಾಧಾರಗಳು ತನಿಖಾ ವಲಯಕ್ಕೆ ಸಿಕ್ಕಿದೆ!

5 ಮಿಲಿಯನ್ ಡಾಲರ್ಸ್ ಹೂಡಿರುವ ಸಿಂಗಾಪೂರಿನ ಇನ್ನೊಂದು ಕಂಪೆನಿ, ಯುನಿಸನ್ ಗ್ಲೋಬಲ್ ಇನ್ವೆಸ್ಟ್ಮೆಂಟ್! ಮಾನಿಲಾ ಮಾವೆರಿಕ್ಸ್ ಎಂಬ ಟೆನ್ನಿಸ್ ಫ್ರಾಂಚೈಸ್, ಗ್ರಾವಿಟಾಸ್ ಇನ್ವೆಸ್ಟ್ ಮೆಂಟ್ ಒಪ್ಪಂದದಂತೆ ಕಾರ್ತಿ ತೆಗೆದದ್ದು 12 ಮಿಲಿಯನ್ ಯುಎಸ್ ಡಾಲರ್ಸ್!!

1.9 ಮಿಲಿಯನ್ ರಿಂಗೊಟ್ಸ್ ಬೆಲೆಬಾಳುವ ಪೆನಿನಸ್ಾರ್ ಸ್ಮಾರ್ಟ್ ಎಂಬ ರೆಸಿಡೆನ್ಸ್ ಮಲೇಷಿಯಾದಲ್ಲಿದೆ! ಅಲ್ಲದೇ, ಕೆಫೆ, ಕಾಫಿ ಡೇಸ್ ಗಳ ಉದ್ಯಮವನ್ನೂ ಮಲೇಶಿಯಾದಲ್ಲಿ ಹೊಂದಿರುವ ಕಾರ್ತಿ ಇದನ್ನೆಲ್ಲ ನಿರ್ವಹಣೆ ಮಾಡುವುದು ಸಿಂಗಾಪೂರಿನಲ್ಲಿ ಕುಳಿತು!!!

ಏರ್ ಸೆಲ್ ನಲ್ಲೂ ಹಣ ಹೂಡಿರುವ ಕಾರ್ತಿ ಮಲೇಶಿಯಾದಲ್ಲಿ ಮುಖ್ಯ ಕಛೇರಿಯಿದೆ! ತೆರಿಗೆ ಇಲಾಖೆಗಳು ಸುಮಾರು 30 ಕೋಟಿ ರೂಗಳ ವಿದೇಶಿ ಕರೆನ್ಸಿಗಳಿಂದ ಪಡೆದ ಹಣದ ರಶೀದಿಯನ್ನು ಹುಡುಕಿತು! ಸಿಂಗಾಪೂರಿನ ಸ್ಪೋರ್ಟ್ಸ್ ಅಕಾಡೆಮಿಯೂ ಕಾರ್ತಿಯ ಅಡ್ವಾಂಟೇಜ್ ಕಂಪೆನಿಯ ಹೆಸರಿನಲ್ಲಿದ್ದು, ಇಡೀ ಸಿಂಗಾಪೂರದಲ್ಲಿ ಇದರ ಶಾಖೆಗಳಿದೆ!

ಫ್ರಾನ್ಸ್ ನ ಪಾಂಪೆಲೋನ್ ಆರ್ಗನೈಸ್ ನಲ್ಲೂ ಒಂದು ಮಿಲಿಯನ್ ಯುಎಸ್ ಡಾಲರ್ಸ್ ನು ಹೂಡಿರುವ ಕಾರ್ತಿ ಗ್ರೀಕ್ ನ ಪಿಸಾನಿ ಜಾನ್ ಸಾಕೆಲ್ಲರಿಯಸ್ ಎಂಬ ಕಂಪೆನಿಯಿಂದಲೂ ಹಣ ತೆಗೆಯುತ್ತಿದೆ!

ಕಾರ್ತಿಯ ಅಡ್ವಾಂಟೇಜ್ ಕಂಪೆನಿಯ ಸಹಭಾಗಿತ್ವ ಏರ್ಸೆಲ್, dcb ಕ್ಲೈಂಟ್ಸ್, ಡಿಯಾಜಿಯೋ ಸ್ಕಾಂಟ್ಲ್ಯಾಂಡ್ ಲಿ., ಕತ್ರಾ ಗ್ರೂಪ್, ಶ್ರೀ ಲಂಕಾ ಎಕ್ಸ್ಪೋರಟ್ ಬೋರ್ಡ್, ಯುನಿಫೈ ವೆಲ್ತ್ ಮ್ಯಾನೇಜ್ಮೆಂಟ್, vst ಟಿಲ್ಲರ್ಸ್, ಕಾರ್ಟ್ಲೋನ್ ಟ್ರೇಡಿಂಗ್, ಕ್ಲಾರಿಸ್ ಲೈಫ್ ಸೈನ್ಸಸ್, itc ಸೆಂಟರ್ಸ್, ಬೆಸ್ಟ್ ಲ್ಯಾಂಡ್ ರಿಯಾಲಿಟಿ, ಎಸ್ಸಾರ ಸ್ಟೀಲ್, ಗೋಕುಲ್ ಬಿಲ್ಡರ್ಸ್, ಎಸ್ ಕುಮಾರ್, inx ಮೀಡಿಯಾ, ರಿಫ್ಲೆಕ್ಷನ್ಸ್, ತಿಯಾಗರಾಜರ್ ಮಿಲ್ಸ್, ಸಾಕ್ಸೊಫ್ಟ್, ಇಎಲ್ ಫೋರ್ಜ್ ಲಿ.!!!!!!

Foreign Investment Promotion Board ನಿಂದ ಅದೆಷ್ಟೋ ಹಣವನ್ನೂ ಪೆಂಡಿಗ್ ಇಟ್ಟಿರುವ ಕಾರ್ತಿ ದೊಡ್ಡ ಮೊತ್ತದ ಹಣವನ್ನು ಪ್ರತಿದಿನವೂ ತೆಗೆಯುತ್ತಿದ್ದ! ಅವೆಲ್ಲವೂ, ಮಿಲಿಯನ್ ಬಿಲಿಯನ್ ಡಾಲರ್ಸ್ ಲೆಕ್ಕದಲ್ಲೇ!!

ಅದರಲ್ಲೂ, inx ಮೀಡಿಯಾ 220 ಮಿಲಿಯನ್ ಹಣಕ್ಕೆ ಒಪ್ಪಂದ ಮಾಡಿಕೊಂಡಿದ್ದೂ ಚಿದಂಬರಮ್ ಹಣಕಾಸು ಸಚಿವನಾಗಿದ್ದಾಗ! ಬಿಡಿ! ಹತ್ಯೆ ಆರೋಪಿಗಳಾಗಿದ್ದ ಪೀಟರ್ ಹಾಗೂ ಇಂದ್ರಾಣಿ ಮುಖರ್ಜೀಯ ದಾವೆಗಳ ಮೀಡಿಯಾ 9 ಕೋಟಿ ಕೊಟ್ಟು ದಾವೆಯನ್ನು ವಾಪಾಸ್ ತೆಗೆದುಕೊಳ್ಳುವಂತೆ ಮಾಡಿತ್ತು!

ಎಲ್ಲಾ ಕಾರ್ತಿ ಸಹಭಾಗಿತ್ವದ ಕಂಪೆನಿಯ FIPB ಹಾಗೂ CCEA ಕ್ಲಿಯರೆನ್ಸ್ ನಡೆದಿದ್ದು ಚಿದಂಬರಮ್ ಅಧಿಕಾರದಲ್ಲಿದ್ದಾಗಲೇ!!! ಬಿಡಿ! ಬರೆದಷ್ಟೂ ಮುಗಿಯಲಾರದ ಈತನ ಆಸ್ತಿಯ ಪ್ರತಿ ಸುಬ್ರಮಣಿಯನ್ ಸ್ವಾಮಿಗೆ ಸಿಕ್ಕಿದ್ದೇ ಮಾಧ್ಯಮದೆದುರು ಹೇಳಿದರೂ, ಇರೋ ಬರೋ ಶಕ್ತಿ ಉಪಯೋಗಿಸಿ ಅದನ್ನೂ ಹೊರಬಾರದಂತೆ ಮಾಡಿದ್ದು ಚಿದಂಬರಮ್!!!

ಇನ್ನೂ ಅದೆಷ್ಟೋ ಹಣ ವರ್ಗಾವಣೆ ನಡೆದಿರುವುದು ಚಿದಂಬರಮ್ ಅಧಿಕಾರದಲ್ಲಿದ್ದಾಗಲೇ! ಅದೆಷ್ಟೋ ತೆರಿಗೆ ಬಾಕಿಯಿದ್ದ ದ್ದು ಕ್ಲಿಯರೆನ್ಸ್ ಹಣೆ ಪಟ್ಟಿ ಹೊತ್ತಿದ್ದು ಈತನ ಅಧಿಕಾರ ಬಲದಿಂದ! ಅದೂ ಬಿಡಿ! ಈ ಎಲ್ಲಾ ಕಂಪೆನಿಗಳಿಗೆ ಐದು ಕಾಮನ್ ಡೈರೆಕ್ಟರೇಟ್ಸ್ ಯಾರು ಗೊತ್ತೇ?! ಸಿಬಿಎನ್ ರೆಡ್ಡಿ, ಭಾಸ್ಕರ್ ರಮಣ್, ಮೋಹನನ್ ರಾಜೇಶ್, ರವಿ ವಿಶ್ವನಾಥನ್ ಹಾಗೂ ವಿ.ಪದ್ಮಾ!! ಇವರೆಲ್ಲರೂ ಸೇರಿ ಕಾರ್ತಿಗೆ ನೀಡಿದ ಬೆಂಬಲ ಮಾತ್ರ ಅಷ್ಟೇ ಮೊತ್ತದ್ದಾಗಿತ್ತು ಕೂಡ!

ತೆರಿಗೆ ಇಲಾಖೆಯವರು ಅದೆಷ್ಟೋ ಸಲ ದಾಳಿ ನಡೆಸಿದರೂ ಕೂಡ ಸಾಕ್ಷ್ಯಾಧಾರಗಳನ್ನು ನೀಡಿದರೂ, ಯಾವ ನ್ಯಾಯಾಲಯವೂ, ಯಾವ ಕಾನೂನೂ ಸಹ ತಲೆ ಕೆಡಿಸಿಕೊಳ್ಳದೇ ಕೂತಿವೆ! ಒರಿಜಿನಲ್ ಸಾಕ್ಷಿಗಳು ಇದೆಯೋ ಇಲ್ಲವೋ ಎಂಬುದೂ ಗೊತ್ತಿಲ್ಲದಷ್ಟು ಚಿದಂಬರಮ್ ಆಟ ಆಡಿದ ಬಗೆಯಿದೆಯಲ್ಲ, ಅದು ಆತನನ್ನು ವಿಶ್ವದ ಅತಿ ದೊಡ್ಡ ಭ್ರಷ್ಟ ರಾಜಕಾರಣಿಯೆಂದೆನಿಸಿಕೊಂಡಿದ್ದು ಸುಳ್ಳಲ್ಲ!!! ಅಷ್ಟು ಮೊತ್ತದ ಕಪ್ಪು ಹಣ ಸ್ವಿಸ್ ಬ್ಯಾಂಕಿನಲ್ಲಿ ಆರಾಮಾಗಿ ಕೂತಿವೆ! ನರೇಂದ್ರ ಮೋದಿಯವರು ಬಂದಮೇಲೆ ತೆಗೆದುಕೊಂಡ ನಿರ್ಧಾರಗಳು ಸ್ವಿಸ್ ಬ್ಯಾಂಕನ್ನೇ ನೇರವಾಗಿ ದಿವಾಳೆಯೆಬ್ಬಿಸುವಂತೆ ಮಾಡಿದರೂ, ಇನ್ನೂ ಕಾನೂನಿನಡಿ ಚಿದಂಬರಮ್ ಹಾಗೂ ಇನ್ನೆಷ್ಟೋ ಭ್ರಷ್ಟ ರಾಜಕಾರಣಿಗಳಿಗೆ ಶಿಕ್ಷೆಯಾಗದಿರುವುದು ವಿಪರ್ಯಾಸವೇ ಸರಿ!

ಕೃಪೆ : ಭಾರತೀಯ ತೆರಿಗೆ ಇಲಾಖೆ, ಡಾ.ಸುಬ್ರಮಣಿಯನ್ ಸ್ವಾಮಿ.

– ತಪಸ್ವಿ

Tags

Related Articles

Close