ಅಂಕಣದೇಶಪ್ರಚಲಿತ

ಬರೋಬ್ಬರಿ 5.5 ಲಕ್ಷ ಕೋಟಿ ರೂಪಾಯಿ ವೆಚ್ಚದ ನದಿ- ಜೋಡಿಸುವ ಯೋಜನೆ ಶೀಘ್ರದಲ್ಲೇ ಆರಂಭ !!! ಪ್ರಧಾನಿ ಮೋದಿಯವರ ಕನಸಿನ ಯೋಜನೆಗೆ ಚಾಲನೆ!!!

ಬದಲಾವಣೆಯ ಗಾಳಿ ಅನೇಕ‌ ವರ್ಷಗಳ ನಂತರ ಭಾರತಕ್ಕೆ ಬೀಸಿರುವುದು ಸ್ಪಷ್ಟವಾಗಿ ಈಗ ಭಾಸವಾಗುತ್ತಿದೆ. ಅನೇಕ ಕ್ಷೇತ್ರಗಳ ಅಭಿವೃದ್ಧಿಗೆ ಅನೇಕ ತೆರನಾದ ಯೋಜನೆಗಳು. ಬಡವರಿಗೆ , ಅಶಕ್ತರಿಗೆ, ನವ ಉದ್ಯಮಿಗಳಿಗೆ ಪೂರಕವಾಗುವಂತಹ ವ್ಯವಸ್ಥಿತ ಕಾರ್ಯಸೂಚಿಗಳು.. ವ್ಹಾ!!! ಬಹುಶ: ಭಾರತ ವಿಶ್ವದ ಮುಂದೆ ಯಾವುದೇ ಕಾರಣಕ್ಕೂ ಯಾವ ಕ್ಷೇತ್ರದಲ್ಲಿಯೂ ತಲೆತಗ್ಗಿಸಬಾರದೆಂಬ ಒಂದೇ ಧ್ಯೇಯವನ್ನಿಟ್ಟು ಆಡಳಿತ ಮಾಡುತ್ತಿರುವ, ಸೇವೆ ಗೈಯ್ಯುತ್ತಿರುವ ಭಾರತದ ಮಾಣಿಕ್ಯ ಮೋದೀಜಿ!!

ಈಗ ಮಗದೊಂದು ನವ ಯೋಜನೆಯೊಂದಿಗೆ ಮೋದಿ ನೇತೃತ್ವದ ಸರಕಾರ ಯೋಜನೆಯೊಂದನ್ನು ಜಾರಿಗೆ ತರಲು ಚಿಂತನೆಯನ್ನು‌ ನಡೆಸಿವೆ.

ದೇಶದ ಅತಿದೊಡ್ಡ ನದಿಗಳನ್ನು ಸಂಪರ್ಕಿಸಲು ಸುಮಾರು 87 ಬಿಲಿಯನ್ ಡಾಲರ್ (ರೂ 5,55,593 ಕೋಟಿ) ಯೋಜನೆಯನ್ನು ಸರ್ಕಾರ ಶೀಘ್ರದಲ್ಲೇ
ಪ್ರಾರಂಭಿಸಲಿದೆ, ಹಲವು ವರ್ಷಗಳಿಂದ ಈ ಯೋಜನೆ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಇಲ್ಲಿಯವರೆಗೆ ಕಾರ್ಯರೂಪಕ್ಕೆ ಬಂದಿರಲಿಲ್ಲ, ಆದರೆ ಈಗ ಈ ಮಹತ್ವಾಕಾಂಕ್ಷೆಯ ಯೋಜನೆಯಿಂದ ಮಾರಣಾಂತಿಕ ಪ್ರವಾಹಗಳು ಮತ್ತು ಬರಗಾಲಗಳನ್ನು ಕೊನೆಗೊಳಿಸುವುದರಲ್ಲಿ ಎರಡು ಮಾತಿಲ್ಲ.

ಇತ್ತೀಚಿನ ವಾರಗಳಲ್ಲಿ, ಭಾರತ ಮತ್ತು ನೆರೆಹೊರೆಯ ಬಾಂಗ್ಲಾದೇಶ ಹಾಗೂ ನೇಪಾಳದ ಕೆಲವು ಭಾಗಗಳಲ್ಲಿ ಎರಡು ವರ್ಷಗಳ ನಿರಂತರ ಬರಗಾಲದ ನಂತರ
ಅತ್ಯಂತ ಕೆಟ್ಟ ಮಳೆಗಾಲದ ಪ್ರವಾಹಕ್ಕೆ ತುತ್ತಾಗಬೇಕಾಯಿತು, ಇದಕ್ಕಾಗಿ ಸರ್ಕಾರ ಶಾಶ್ವತ ಪರಿಹಾರ ಕೈಗೊಳ್ಳುವ ಅವಶ್ಯಕತೆ ಇದೆ ಎಂಬುದು ಮತ್ತೊಮ್ಮೆ
ಸಾಬೀತಾಗಿದೆ.

ಪ್ರಧಾನಿ ಮೋದಿ ವೈಯಕ್ತಿಕವಾಗಿ ಯೋಜನೆಗೆ ಮೊದಲ ಹಂತದ ಅನುಮತಿ ನೀಡುವುದು ಈಗಾಗಲೇ ಸ್ಪಷ್ಟವಾಗಿದೆ – ಇದರಿಂದ ಸಾವಿರಾರು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆ ಕೂಡ ಸಾಕಾರವಾಗುತ್ತದೆ ಎಂದು – ಮೂಲಗಳು ಹೇಳಿವೆ, ಹುಲಿ ಪ್ರೇಮಿಗಳು ಮಾಜಿ ರಾಜಮನೆತನದ ಕುಟುಂಬ ಹಾಗೂ
ಪರಿಸರವಾದಿಗಳ ವಿರೋಧದ ಹೊರತಾಗಿಯೂ ಈ ಯೋಜನೆ ಕೈಗೊಳ್ಳಬೇಕಾದ ಅನಿವಾರ್ಯತೆ ಭಾರತಕ್ಕೆ ಒದಗಿದೆ.

“ಬೃಹತ್ ಗಂಗಾ ಸೇರಿದಂತೆ ಸುಮಾರು 60 ನದಿಗಳನ್ನು ಸಂಪರ್ಕಿಸಲು ಈ ಯೋಜನೆಯಿಂದ ಪ್ರಯತ್ನಿಸಲಾಗುತ್ತದೆ. ನೀರಾವರಿ ಯೋಜನೆಯಡಿಯಲ್ಲಿ ಲಕ್ಷಾಂತರ ಹೆಕ್ಟೇರ್ ಕೃಷಿ ಭೂಮಿಗಳಿಗೆ ನಿರಂತರ ನೀರಾವರಿ ಸೌಲಭ್ಯ ನೀಡುವ ಮೂಲಕ ರೈತರು ಮಾನ್ಸೂನ್ ಮಳೆಯನ್ನೇ ಅವಲಂಬನೆ ಮಾಡಬೇಕಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ..”

ಈ ನವ ಯೋಜನೆ ಕೂಡ ದೇಶದ ಅಭಿವೃದ್ಧಿಗೆ ಪೂರಕವೇ ಆಗಲಿದೆ. ಯಾವುದೇ ಯೋಜನೆಗಳು ಸಫಲವಾಗಬೇಕಾದರೆ ಕೆಲವನ್ನು ತ್ಯಾಗ‌ ಮಾಡುವುದೂ
ಅನಿವಾರ್ಯವಾಗುತ್ತದೆಯಲ್ಲವೇ??

ಹುಡುಗಿಯರ ಸಬಲೀಕರಣಕ್ಕೆ ಬೇಟಿ‌ ಬಚಾವೋ-ಬೇಟಿ ಪಢಾವೋ!
ಹಣ ಉಳಿತಾಯಕ್ಕಾಗಿ ಜನ-ಧನ ಯೋಜನೆ!
ಅಭಿವೃದ್ಧಿಯ‌ ಪ್ರತೀಕವೆಂಬಂತೆ ಸಂಸದ ಆದರ್ಶ ಗ್ರಾಮ ಯೋಜನೆ!
ಭಾರತದ ಉದ್ಯಮವನ್ನು‌ ಸದೃಢವಾಗಿಸುವ ನಿಟ್ಟಿನಲ್ಲಿ ಮುದ್ರಾ ಯೋಜನೆ!
ಕಲುಷಿತವಾಗಿರುವ ಗಂಗೆಯನ್ನು ಶುಚಿಯಾಗಿಸಲು ನಮಾಮಿ ಗಂಗೆ, ಸ್ವಚ್ಛ ಗಂಗೆ!
ಭಾರತವನ್ನು ಸ್ವಚ್ಛವಾಗಿಸಲು ಸ್ವಚ್ಛ-ಭಾರತ ಆಂದೋಲನಕ್ಕೆ ಕರೆ!..

ಇನ್ನೂ ಅದೆಷ್ಟೋ ನವ ಯೋಜನೆಗಳು ಜಾರಿಯಾಗಿವೆ, ಆಗುತ್ತಲೇ ಇವೆ. ಅದೇ ನಿಟ್ಟಿನಲ್ಲಿ ಈಗ ಬರಗಾಲವನ್ನು ಸಂಪೂರ್ಣವಾಗಿ ಉಪಶಮನವಾಹಿಸಲು ಬರೋಬ್ಬರಿ 5.5 ಲಕ್ಷ ಕೋಟಿ ರೂಪಾಯಿ ವೆಚ್ಚದ ನದಿ- ಜೋಡಿಸುವ ಯೋಜನೆ !!!

ಭಾರತ‌ ವಿಶ್ವದ ಕಣ್ಣಿಗೆ ಮಾತ್ರವಲ್ಲದೇ, ಆಂತರಿಕವಾಗಿಯೂ ಬದಲಾಗುತ್ತಿದೆಯೆಂಬುದಕ್ಕೆ ಇವಕ್ಕಿಂತ ಉದಾಹರಣೆಯ ‌ಅಗತ್ಯವಿಲ್ಲ. ಮೋದಿ ಕೈಗೊಂಡಿರುವ
ದೂರದೃಷ್ಟಿಯ ಚಿಂತನೆಗಳಿಗೆ ನಾವೂ ಕೈಜೋಡಿಸಬೇಕಿದೆ ಅಷ್ಟೇ..!!

– ಆತ್ಮಿಕಾ

Tags

Related Articles

Close