ಪ್ರಚಲಿತ

ಬರ್ಬರ ಹತ್ಯಾಕಾಂಡ! ಮತ್ತೆ ಶುರುವಾದ ರೋಹಿಂಗ್ಯಾಗಳ ಕ್ರೂರತೆಗೆ ಬಲಿಯಾದ ಹಿಂದೂಗಳ ಸಂಖ್ಯೆ ಎಷ್ಟು ಗೊತ್ತೇ?!

ದೇಶದಲ್ಲೆಡೆ ರೋಹಿಂಗ್ಯಾ ಮುಸಲ್ಮಾನರ ಕುರಿತು ತೀವ್ರತರದಲ್ಲಿಯೇ ಚರ್ಚೆಯಾಗುತ್ತಿದೆ! ರೋಹಿಂಗ್ಯಾರನ್ನು ಭಾರತದಲ್ಲಿಯೇ ಉಳಿಸಿಕೊಳ್ಳಬೇಕು ಎಂದು
ಹೋರಾಡುತ್ತಿರುವವರು ಬಹುಷಃ ಈ ಭಯಾನಕ ವರದಿ ನೋಡಿದ ಮೇಲಾದರೂ ರೋಹಿಂಗ್ಯಾಗಳಿಗೆ ಬೆಂಬಲ ನೀಡುವುದನ್ನು ಕಡಿಮೆ ಮಾಡುತ್ತಾರೆಯೇ
ನೋಡಬೇಕಿದೆ. 21 ನೇ ಶತಮಾನದ ಹಿಂದೂಗಳ ಮಾರಣ ಹೋಮವಿದಷ್ಟೇ! ರೋಹಿಂಗ್ಯಾಗಳ ‘ಅರಕನ್ ರೋಹಿಂಗ್ಯಾ ಸಾಲ್ವೇಶನ್ ಆರ್ಮಿ (ARSA) ಎಂಬ
ಭಯೋತ್ಪಾದಕ ಸಂಘಟನೆಯೊಂದು ಬರ್ಬರವಾಗಿ 28 ಹಿಂದೂಗಳ ಮಾರಣ ಹೋಮಗೈದಿದೆ!

40 ಸಾವಿರ ರೋಹಿಂಗ್ಯಾಗಳು ಭಾರತದಲ್ಲಿ ಆಶ್ರಯ ಕೊಡಬೇಕೆಂದು ಬೇಡುತ್ತಿದ್ದಾರೆ. ಇವರ ಬಗ್ಗೆ ಕನಿಕರ ತೋರಿಸುವ ಭಾರತದ ಕೆಲವು ಮುಸ್ಲಿಮರು, ಬುದ್ಧಿಜೀವಿಗಳು ಇವರ ಬಗ್ಗೆ ಕನಿಕರ ವ್ಯಕ್ತಪಡಿಸಿದ್ದಾರೆ. ಅಲ್‍ಖೈದಾ, ಲಷ್ಕರ್ ಇ ತೈಬಾ, ಐಸಿಸ್ ಜೊತೆ ನಂಟುಹೊಂದಿರುವ ಈ ರೊಹಿಂಗ್ಯಾಗಳು ಖಟ್ಟರ್ ಜಿಹಾದಿ ಮುಸ್ಲಿಮರಾಗಿದ್ದು, ಮೊದಲು ದೈನ್ಯದಿಂದ ಆಶ್ರಯ ಪಡೆಯುತ್ತಾರೆ. ಆಮೇಲೆ ಆಶ್ರಯ ನೀಡಿದವರನ್ನೇ ಸಾಹೂಕಿಕ ನರಮೇಧ ನಡೆಸುತ್ತಾರೆ. ಇವರ ಹಣೆಬರಹ ಗೊತ್ತಿದ್ದೂ ಇವರಿಗೆ ಆಶ್ರಯ ನೀಡಬೇಕೆಂದು ಅರಚಾಡುವವರನ್ನು ಕೂಡಾ ಉಗ್ರರೆನ್ನಬಹುದು!!

ಮುಂಚೆಯಿಂದಲೂ ಮಯನ್ಮಾರ್ ಸರಕಾರ ರೋಹಿಂಗ್ಯಾಗಳ ಬಗ್ಗೆ ಗಮನಿಸುತ್ತಲೇ ಬಂದಿದೆ. ಎಲ್ಲಿ ರೋಹಿಂಗ್ಯಾಗಳು ದೇಶಕ್ಕೆ ಮಾರಕವಾಗುವ ಹಂತ ತಲುಪಿದರೂ, ಸರಕಾರ ‘ಭಯೋತ್ಪಾದನೆಯ ಹರಿಕಾರರೇ ರೋಹಿಂಗ್ಯಾಗಳು’ ಎಂದು ಸರ್ಟಿಫಿಕೇಟ್ ಕೊಟ್ಟಾಗಲೇ ಅವರ ನಿಜಬಣ್ಣ ಬಯಲಾಗಿ ಹೋಗಿತ್ತು! ತದನಂತರ ಬುದ್ಧ ಧರ್ಮೀಯರು ರೋಹಿಂಗ್ಯಾರನ್ನು ಹೊರಗಟ್ಟಲು ಪ್ರಾರಂಭಿಸಿದರು!

ಹಿಂದೂಗಳ ಮಾರಣಹೋಮದ ಬಗ್ಗೆ ಮಾಹಿತಿ ನೀಡಿದ್ದು ಮಯನ್ಮಾರ್ ಸರಕಾರದ ವಕ್ತಾರರಾದ ಝಾ ಹ್ಟೇ (Zaw Htay)! ರಾಖಿನೇ ರಾಜ್ಯದಲ್ಲಿ ಸಿಕ್ಕಿದ 28
ಹಿಂದೂಗಳ ಶವಗಳು ರೋಹಿಂಗ್ಯಾಗಳ ಭಯೋತ್ಪಾದನೆಯೊಂದನ್ನು ಹೊರಗೆಡವಿದೆ ಅಷ್ಟೇ. ಆಗಸ್ಟ್ 25 ರಂದು ಹಳ್ಳಿಗೆ ನುಗ್ಗಿದ ರೋಹಿಂಗ್ಯಾಗಳು ಒಂದಷ್ಟು
ಹಿಂದೂಗಳನ್ನು ವಶಕ್ಕಿರಿಸಿಕೊಂಡಿದ್ದಲ್ಲದೇ, ತಪ್ಪಿಸಿಕೊಳ್ಳಲು ನೋಡಿದವರನ್ನು ದಯೆಯಿಲ್ಲದೆ ಗುಂಡಿಕ್ಕಿ ಹತ್ಯೆಗೈದಿದ್ದರೆಂಬ ಸ್ಫೋಟಕ ಮಾಹಿತಿಯೊಂದು ಬಯಲಾಗಿದೆ!

ಮಯನ್ಮಾರಿನ ಸೇನೆಯ ಅಧಿಕಾರಿಯ ವೆಬ್ ಸೈಟಿನಲ್ಲಿ, ‘ ಭದ್ರತಾ ಪಡೆ ಬರ್ಬರವಾಹಿ ಹತ್ಯೆಯಾದ 28 ಹಿಂದೂಗಳ ಶವವನ್ನು ಪತ್ತೆ ಹಚ್ಚಿದೆ. ARSA ಸಂಘಟನೆ ರಾಖಿನೇ ಯಲ್ಲಿ ಬರ್ಬರವಾಗಿ ಹತ್ಯೆಗೈದಿದೆ.’ ಎಂಬ ಮಾಹಿತಿಯನ್ನು ಪ್ರಕಟಿಸಿದ್ದಾರೆ.

ವರದಿ ಹೇಳುವುದೇನು ಗೊತ್ತಾ?!

ಬರೀ 28 ಅಲ್ಲ, ರೋಹಿಂಗ್ಯಾ ಭಯೋತ್ಪಾದಕರ ದಾಳಿಗೆ ಸಿಕ್ಕಿ ಹತರಾದವರು ಬರೋಬ್ಬರಿ 30,000 ಹಿಂದೂ ಹಾಗೂ ಬೌದ್ಧ ಮತೀಯರು!

ಕಳೆದ ವಾರದಿಂದಲೇ ರೋಹಿಂಗ್ಯಾಗಳ ದಾಳಿ ನಡೆಯುತ್ತಲೇ ಇದೆ! ಆಗಸ್ಟ್ 24 ರಂದು ಸತತ 24 ಪೋಲಿಸ್ ಘಟಕಗಳಿಗೆ ದಾಳಿ ಮಾಡಿರುವ ರೋಹಿಂಗ್ಯಾ ಭಯೋತ್ಪಾದಕರು ರಾಖಿನೇ ರಾಜ್ಯವನ್ನು ಇನ್ಯಾವ ಸ್ಥಿತಿಗೆ ತಂದಿಡುವರೋ ಗೊತ್ತಿಲ್ಲ! ಈ ARSA ಸಂಘಟನೆ ಮೊದಲು ಹರಾಖಾ- ಅಲ್ – ಯಖಿನ್ ಎಂಬುದಾಗಿ ಕರೆಯಲ್ಪಡುತ್ತಿತ್ತು. ಇವರ ದಾಳಿಗೆ ಅದೆಷ್ಟೋ ಬೌದ್ಧರು, ಹಿಂದೂಗಳು, ಪೋಲಿಸರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಈ ಮಾನವ ಹಕ್ಕುಗಳ ಆಯೋಗ ವೆಂಬ ತಿಕ್ಕಲು ಆಯೋಗಕ್ಕೆ ಬಹುಷಃ ಮಾನವತೆಯೇ ಇಲ್ಲವೆಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಬಿಡಿ! ರೋಹಿಂಗ್ಯಾಗಳನ್ನು ಗಡೀಪಾರು ಮಾಡಿದರೆ ಹುಷಾರ್ ಎಂದು ಭಾರತಕ್ಕೆ ಹಾಗೂ ಮಯನ್ಮಾರ್ ಸರಕಾರಕ್ಕೆ ಎಚ್ಚರಿಕೆ ನೀಡಿರುವ ಆಯೋಗದ ಕರ್ಮಕ್ಕೆ ಈ ಮಾರಣಹೋಮಗಳ್ಯಾವುದೂ ಸಹ ಗಣನೆಗೆ ಬಂದಿಲ್ಲವೆಂಬುದೂ ಅಷ್ಟೇ ಸತ್ಯ! ಎಲ್ಲಿ ಹಿಂದೂಗಳ ಮಾರಣ ಹೋಮ ಬೆಳಕಿಗೆ ಬಂತೋ ಅಲ್ಲಿಂದ ಕಾಣದ ಗುಹೆಯಲ್ಲಡಗಿರುವ ಆಯೋಗಕ್ಕೆ ಮಾತನಾಡಲು ತಾಕತ್ತಿಲ್ಲದಿರುವುದೂ ಅಷ್ಟೇ ಸತ್ಯ ಬಿಡಿ!

ಅಲ್ಲದೇ ಈ ವಿಶ್ವ ಸಂಸ್ಥೆಯೊಂದು ರೋಹಿಂಗ್ಯಾ ಪರವಾಗಿಯೇ ನಿಂತು ವಾದಿಸಿದ್ದನ್ನು ಸಮರ್ಥನೆ ಮಾಡಿಕೊಂಡಿರುವ ರೀತಿ ಎಂತಹ ಹಾಸ್ಯಾಸ್ಪದವೆಂದರೆ ರೋಹಿಂಗ್ಯಾಗಳ ನಿಲುವಿಗದು ಅನಿವಾರ್ಯ ವೆನ್ನುವುದನ್ನು ಎತ್ತಿ ಹಿಡಿದಿರುವ ಈ ಯುಎನ್ ಗೆ ನೈತಿಕತೆ ಇದೆ ಎನ್ನುವಿರಾ?!

ತಿರುಗಿಬಿದ್ದ ಮಯನ್ಮಾರ್ ಸರಕಾರ ಯುಎನ್ ಮಾಹಿತಿಗಳನ್ನೆಲ್ಲವನ್ನೂ ಬಹಿಷ್ಕರಿಸಿದ್ದು ತನಿಖೆಗೂ ಅವಕಾಶವಾಗದಂತೆ ಛೀಮಾರಿ ಹಾಕಿದೆ!

ಅಲ್ಲಾ ಸ್ವಾಮಿ! ದೊಡ್ಡದಾಗಿ ಭಾಷಣ ಕುಟ್ಟಿದ ಯುಎನ್ ಗೆ ರೋಹಿಂಗ್ಯಾಗಳು ‘ಆಧುನಿಕ ಶಸ್ತ್ರಾಸ್ತ್ರ’ ಹೊಂದಿರುವ ‘ಆಧುನಿಕತೆಯ ಭಯೋತ್ಪಾದಕರು’ ಎಂಬುದೂ ಗೊತ್ತಿಲ್ಲ! ಇನ್ಯಾವ ಯಾವ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದೆ ಎಂಬ ಮಾಹಿತಿಯನ್ನೆಲ್ಲ ಬಚ್ಚಿಟ್ಟಿರುವ ವಿಶ್ವ ಸಂಸ್ಥೆಗೆ ಬಹುಷಃ ಕಾಂಗ್ರೆಸ್ ಪಕ್ಷ ಕೂಡ ಕೈ ಜೋಡಿಸಬಹುದೇನೋ!

ಭಾರತವನ್ನು ಉದ್ಧಾರ ಮಾಡಿದ್ದೇ ನಾನು ಎಂದು ಬಡಾಯಿ ಕೊಚ್ಚುವ ಕಾಂಗ್ರೆಸ್ ರೋಹಿಂಗ್ಯಾಗಳನ್ನು ಬೆಂಬಲಿಸುತ್ತಾ ಅಥವಾ ದೇಶದ ಹಿತಕ್ಕಾಗಿ ರೋಹಿಂಗ್ಯಾಗಳ ಗಡೀಪಾರು ಮಾಡುವ ವಿಚಾರವನ್ನು ಬೆಂಬಲಿಸುತ್ತಾ ಎಂದು ನೋಡಬೇಕಷ್ಟೇ!!!

Source :Times Of India

– ಪೃಥ ಅಗ್ನಿಹೋತ್ರಿ

Tags

Related Articles

Close