ಪ್ರಚಲಿತ

ಬಹಿರಂಗವಾದ ಟೇಪ್ ಗಳು ರಾಹುಲ್ ಗಾಂಧಿಯನ್ನು ಸಂಪೂರ್ಣವಾಗಿ ಬೆತ್ತಲಾಗಿ ನಿಲ್ಲಿಸಿದೆ! ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗೆಲ್ಲಲು ರಾಹುಲ್ ಗಾಂಧಿ ಮಾಡಿದ್ದೇನು ಗೊತ್ತೇ?!

ಬಯಲಾಯಿತು ಕಾಂಗ್ರೆಸ್ ಯುವ ನಾಯಕನ ಮುಖವಾಡ!

ನಮ್ಮ ಭಾರತದ ಪ್ರಾಚೀನ ಶಾಸ್ತ್ರಗಳೇ ಧೃಢೀಕರಿಸಿಬಿಟ್ಟಿದೆ! “ನೀವೇನನ್ನು ಬಿತ್ತುತ್ತಿರೋ, ಅದಕ್ಕನುಗುಣವಾಗಿಯೇ ಫಲವನ್ನು ಕೊಯ್ಯಬೇಕು!” “ನೀವು ಏನನ್ನು ಜಗತ್ತಿಗೆ ಕೊಡುತ್ತೀರೋ, ಜಗತ್ತು ಅದನ್ನೇ ನಿಮಗೆ ಹಿಂದಿರುಗಿಸುತ್ತದೆ! “ಕರ್ಮ ಎನ್ನುವುದು ಎಲ್ಲವನ್ನೂ ಹಿಂದಿರುಗಿಸುತ್ತದೆ!”

ಇದೇ ಪರಿಸ್ಥಿತಿ ಇವತ್ತು ಕಾಂಗ್ರೆಸ್ ಉಪಾಧ್ಯಕ್ಷನಾದ ರಾಹುಲ್ ಗಾಂಧಿ ಹಾಗೂ ಉಳುದ ನಾಯಕರಿಗಾಗುತ್ತಿರುವುದು!

ದಿನಗಳ ಹಿಂದಷ್ಟೇ., ಕುಟುಂಬರಾಜಕಾರಣದ ಪ್ರಕಾರವೇ ಮುಂದಿನ ಕಾಂಗ್ರೆಸ್ ನ ಅಧ್ಯಕ್ಷಗಾದಿಗೆ ರಾಹುಲ್ ಗಾಂಧಿಯನ್ನು ನೇಮಿಸುವ ವಿಚಾರವಾಗಿ ಕಾಂಗ್ರೆಸ್ ನ ನಾಯಕ ಶೆಹಜಾದ್ ಪೂನವಾಲಾ ಪ್ರಶ್ನಿಸಿದ್ದ ಆಡಿಯೋ ಟೇಪ್ ಕೊನೆಗೂ ಬೆಳಕಿಗೆ ಬಂದಿದೆ!

‘ಟೈಮ್ಸ್ ನೌ’ ಬಹಿರಂಗಪಡಿಸಿರುವ ಮಾಹಿತಿ ಹಾಗೂ ಟೇಪ್ ಪ್ರಕಾರ, ಕಳೆದ 70 ವರ್ಷಗಳಿಂದ ಹೇಗೆ ಕಾಂಗ್ರೆಸ್ ಯಾವುದೇ ರೀತಿಯಾದ ಕಾನೂನನ್ನು
ಪಾಲಿಸದೇ, ಅಧ್ಯಕ್ಷಗಾದಿಗೆ ಕುಟುಂಬ ರಾಜಕಾರಣದ ಮೂಲಕ ಮಣೆ ಹಾಕುತ್ತಾ ‘Fair and Free Vote’ ನ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮಾರಕವಾಗಿದೆ ಎಂಬುದನ್ನು ಸಾಬೀತು ಪಡಿಸಿರುವ ಟೇಪ್, ಸೋನಿಯಾ ಗಾಂಧಿಯ ಅಧ್ಯಕ್ಷತೆಯನ್ನೂ ಸಹ ಬಯಲಿಗೆಳೆದಿದೆ!

ಟೇಪ್ ನ ಪ್ರಕಾರ, ಈ ಮುಂಚೆಯೇ ನಿರ್ಧರಿಸಿರುವಂತೆ, Fair and Free vote ಮೂಲಕ ರಾಹುಲ್ ಗಾಂಧಿಯ ಅಧ್ಯಕ್ಷಸ್ಥಾನ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿ ಸವಾಲೆಸೆದಿರುವುದು ಮೊಟ್ಟ ಮೊದಲ ಬಾರಿಗೆ ಬಹಿರಂಗವಾಗಿದೆ!

ಆಡಿಯೋ ಟೇಪ್ ನ ಸಂಪೂರ್ಣ ಮಾಹಿತಿ ಇಲ್ಲಿದೆ!

ಕಾಂಗ್ರೆಸ್ ಕಾರ್ಯದರ್ಶಿ ಶೆಹಜಾದ್ ಪೂನವಾಲಾ, ಮಾಜಿ ಯುನಿಯನ್ ಮಿನಿಸ್ಟರ್, ಹಾಗೂ ಪಕ್ಷದ ಅಧಿಕಾರಿ ಮನೀಶ್ ತಿವಾರಿಯ ಸಂಭಾಷಣೆ ಇದಾಗಿದೆ!

ಲೀಕ್ ಆಗಿರುವ ಆಡಿಯೋ ಟೇಪ್ ನಲ್ಲಿ, ಶೆಹಜಾದ್ ಪೂನವಾಲಾ, ” ಒಂದೇ ಒಂದು ಸಣ್ಣ ಮತದಾನವೂ ಚುನಾವಣಾ ಪ್ರತಿನಿಧಿಗಳಿಗೋಸ್ಕರ ನಡೆದಿಲ್ಲ. ಆದರೆ, ಪ್ರತಿನಿಧಿಗಳನ್ನು ರಾಜ್ಯಾಧ್ಯಕ್ಷ ಆಯ್ಕೆ ಮಾಡುತ್ತಾನೆ ಹಾಗೂ ರಾಜ್ಯಾಧ್ಯಕ್ಷರನ್ನು ಕಾಂಗ್ರೆಸ್ ಅಧ್ಯಕ್ಷೆ ಆಯ್ಕೆ ಮಾಡುತ್ತಾರೆ.”

ಇದಕ್ಕೆ, ಮನೀಶ್ ತಿವಾರಿ, “ನಾನು ಇದನ್ನೆಲ್ಲ ಯೋಚಿಸಿಯೇ ಕೊನೆಗೆ ಅರಿತಿದ್ದೇನೆಂದರೆ, ಇದು ಪಕ್ಷದ ಒನ್ ವೇ ಟಿಕೆಟ್ ತರಹ ಅಷ್ಟೇ! ನನಗೆಲ್ಲಿಯ ತನಕ ಪಕ್ಷದಲ್ಲಿ ಬೇರಾವ ಸ್ಥಾನವೂ ಅಥವಾ ಟಿಕೆಟ್ ಕೂಡಾ ಬೇಡವೋ, ಅಲ್ಲಿಯ ತನಕ ನನಗೆ ಇದ್ಯಾವುದೂ ಪರಿಗಣನೆಗೆ ಬರುವುದಿಲ್ಲ. ವಿಷಯ ಏನೆಂದರೆ, ಎಲ್ಲಿಯ ತನಕ ಎಲ್ಲಾ ಅರ್ಹತೆಗಳನ್ನು ಮೀರಿ ಈ ಪರಂಪರೆಯ ಕುಟುಂಬ ರಾಜಕಾರಣ ಅತಿಕ್ರಮಿಸಬಹುದು ಮತ್ತು ನೀನೆಷ್ಟು ಸಮಯ ಹೀಗೇ ಇರುತ್ತಿ?!’ ಎಂದು ತಿರುಗಿ ಪ್ರಶ್ನಿಸಿದ್ದಾರೆ!

“ವಾಸ್ತವ ಏನೆಂದರೆ, ಕಾಂಗ್ರೆಸ್ ಎಂಬುದು ಒಂದು ಒಡೆತನ! ಯಾವ ಪಕ್ಷಗಳೂ ಭಾರತದಲ್ಲಿ ರಾಜಕೀಯ ಪಕ್ಷಗಳಲ್ಲ, ಬದಲಿಗೆ ಒಡೆತನ!” ಎಂದು ಮನೀಶ್ ತಿವಾರಿ ಹೇಳಿದ್ದಾರೆ.

ಯಾವಾಗ ಮಾಧ್ಯಮಗಳು ಮನೀಶ್ ತಿವಾರಿಗೆ ಈ ಆಡಿಯೋ ಟೇಪ್ ಬಗ್ಗೆ ಪ್ರಶ್ನಿಸಿದರೋ, ಆಗ, “ನನಗೆ ಯಾವುದೇ ರೀತಿಯ ಮಾಹಿತಿಯೂ ಇಲ್ಲ ಮತ್ತು ಇಂತಹ ಸಂಭಾಷಣೆಗಳನ್ನು ನಡೆದಿಲ್ಲ. ಎಲ್ಲಿ, ಪಕ್ಷದ ಮೇಲೆ ಆರೋಪ ಮಾಡಿದರೋ, ಅಲ್ಲಿಂದಲೇ ಪೂನವಾಲಾರವರ ಜೊತೆಗೆ ಅಂತರ ಕಾಯ್ದುಕೊಂಡಿದ್ದೇವೆ” ಎಂದು ನುಣುಚಿಕೊಂಡಿದ್ದಾರೆ!

ಆದರೆ, ಶೆಹಜಾದ್ ರವರ ವಿವಾದವನ್ನು ಕಾಂಗ‌್ರೆಸ್ ನ ಬಹಳಷ್ಟು ಮಂದಿ ವಿರೋಧಿಸಿದ್ದಾರೆಂಬುದು ಖಚಿತವಾಗಿದೆ! ಮತ್ತೊಂದು ಬಹಿರಂಗವಾದ ಟೇಪಿನಲ್ಲಿ, ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ, ಪ್ರಮೋದ್ ಕೃಷ್ಣನ್, “ಪಕ್ಷದೊಳಗೆ ನಡೆಯುವ ಚುನಾವಣೆ ಸತ್ಯವಲ್ಲ!! ಅದು ತೋರಿಕೆಗೆ ನಡೆಯುವುದಷ್ಟೇ! ಇದು 100% ಆಯ್ಕೆಯೇ ಹೊರತು ಚುನಾವಣೆಯಲ್ಲ ಎಂದು ನಾನು ಒಪ್ಪುತ್ತೇನೆ! ಹೀಗೇ ಮುಂದುವರೆದರೆ ಕಾಂಗ್ರೆಸ್ ಒಂದು
ಪ್ರೈವೇಟ್ ಲಿಮಿಟೆಡ್ ಕಂಪೆನಿಯಾಗಬಹುದು” ಎಂದು ಹೇಳಿದ್ದು ಈಗ ಗಾಂಧಿ ಮನೆತನದ ಒಂದೊಂದೇ ಗುಟ್ಟುಗಳನ್ನು ಬಯಲಿಗೆಳೆಯುತ್ತ ಇದೆ!

ರಾಜು ಶರ್ಮಾ, ದೆಹಲಿಯ ಪಕ್ಷದ ಮಧ್ಯಮ ಕಾರ್ಯಕರ್ತ, “ಯಾವತ್ತೂ ಪ್ರತಿನಿಧಿಗಳ ಆಯ್ಕೆ ಮತದಾನ ಚೀಟಿ ಅಂದರೆ ಬಾಲೆಟ್ ಪೇಪರ್ ನಲ್ಲಿ ಬಂದಂತಹ ಫಲಿತಾಂಶದ ಪ್ರಕಾರವೇ ಆಯ್ಕೆ ನಡೆಸಬೇಕೆಂಬ ಕಡ್ಡಾಯ ಕಾನೂನಿದೆ! ಆದರೆ, ಅಂತಹದ್ದು ಯಾವುದೂ ನಡೆದಿಲ್ಲ. ಯಾವುದೇ ಚುನಾವಣೆಯೂ ನಡೆದಿಲ್ಲ, ಅಜಯ್ ಮೇಕನ್ ಇಷ್ಟಬಂದಂತಹ ಪ್ರತನಿಧಿಗಳನ್ನು ಆಯ್ಕೆ ಮಾಡಿದ‌್ದಾರೆ” ಎಂದು ಹೇಳಿದ್ದು ಬಹಿರಂಗವಾಗಿದೆ!

ಇಷ್ಟೆಲ್ಲ ಆದ ಮೇಲೆ. . .

ಪ್ರತೀ ಬಾರಿಯೂ ಕೂಡ ಕಾಂಗ್ರೆಸ್ ಹೇಗೆ ಚುನಾವಣೆಯಲ್ಲಿ, ಪ್ರತಿನಿಧಿಗಳ ಆಯ್ಕೆಯಲ್ಲಿ ಪಕ್ಷಪಾತ ತೋರುತ್ತಲೇ, ಕಾನೂನನ್ನು ಉಲ್ಲಂಘಿಸುತ್ತಿದೆ ಎಂಬುದಕ್ಕಿದು ಸಾಕ್ಷಿಯಲ್ಲವೇ?! ಈಗಲೂ, ಯಾವುದೇ ಅರ್ಹತೆಯಿಲ್ಲದೇ, ಚುನಾವಣೆಯಿಲ್ಲದೇ, ರಾಹುಲ್ ಗಾಂಧಿಯನ್ನು ಅಧ್ಯಕ್ಷ ಸ್ಥಾನದ ಪ್ರತಿನಿಧಿಯಾಗಿ ಆಯ್ಕೆ ಮಾಡಿರುವುದರಿಂದ ಕಾಂಗ್ರೆಸ್ ನ ಮುಖಂಡರಿಗೆ ಕಣ್ಣು ಕೆಂಪು ಮಾಡಿರುವುದು ಸುಳ್ಳಲ್ಲ.

ಇಷ್ಟು ವರ್ಷಗಳೂ ಹೀಗೇ ನಡೆಯಿತು! ಇನ್ನು ಮುಂದೆ ಎಷ್ಟು ದಿನ ಹೀಗೆಯೇ ಕಾನೂನು ಉಲ್ಲಂಘಿಸಿ ಆಡಳಿತಕ್ಕೆ ಅಕ್ರಮವಾದ ಹಾದಿ ಹಿಡಿದು
ಉಳಿಯುವುದೋ ನೋಡಬೇಕಷ್ಟೇ!

– ಪೃಥು ಅಗ್ನಿಹೋತ್ರಿ

Tags

Related Articles

Close