ಪ್ರಚಲಿತ

ಬಹುಮತ ಬಂದರೆ ಸರಕಾರ, ಇಲ್ಲದಿದ್ದರೆ ಪ್ರತಿಪಕ್ಷ ಎಂದ ದೇವೆಗೌಡರನ್ನು ಅಣಕಿಸಿದಾತ ಬೇರಾರು ಅಲ್ಲ ಒಬ್ಬ ಟ್ಯಾಕ್ಸಿ ಡ್ರೈವರ್ !!!

ಪ್ರಕಾಶ್ ರೈಗೆ ಮನಸ್ಸಿದ್ದರೆ ತನೆಗ ಸಿಕ್ಕಿರುವ ರಾಷ್ಟ್ರಪ್ರಶಸ್ತಿಯನ್ನು ಶ್ರೀಮಾನ್ ದೇವೇಗೌಡ್ರಿಗೆ ನೀಡಿದ್ರೆ ಒಳ್ಳೆಯದು. ಯಾಕೆಂದರೆ ಅಧಿಕಾರಕ್ಕಾಗಿ ಯಾವ
ನಾಟಕವನ್ನೂ ಮಾಡುತ್ತಿರುವ ದೇವೇಗೌಡ್ರಿಗೆ ನೀಡಿದರೆ ಆ ಪ್ರಶಸ್ತಿಗೆ ಒಂದು ಅರ್ಥ ಬರುತ್ತದೆ. ಒಮ್ಮೆ ಗೊಳೋ ಎಂದು ಅಳುವುದು, ಇನ್ನೊಮ್ಮೆ ಆಣೆ ಹಾಕುವುದು, ಮತ್ತೊಮ್ಮೆ ಕಾಂಟ್ರಾವರ್ಶಿ ಹೇಳಿಕೆ ನೀಡುವುದು, ಇನ್ನೊಮ್ಮೆ ಅದಕ್ಕೆ ಸಬೂಬು ಹೇಳುವುದು…. ಯಾವ ಕಲಾವಿದನಿಗೂ ಕಮ್ಮಿ ಇಲ್ಲದಂತೆ  ನಾಟಕ  ಮಾಡುವ ಪ್ರಕಾಶ ಕೂಡಾ ಗೌಡ್ರಿಗಿಂತ ಒಂದು ಕೈ ಕಮ್ಮಿಯೇ….

ಜೆಡಿಎಸ್ ಏನಿದ್ರೂ ಮುಳುಗುತ್ತಿರುವ ಹಡಗು… ಆಗ ಇವರ ಡೈಲಾಗ್ ನನ್ನ ಜೀವ ಇರುವವರೆಗೆ ನಾನು ಜೆಡಿಎಸ್ ಅನ್ನು ನಿರ್ಣಾಮ ಮಾಡಲು ಬಿಡುವುದಿಲ್ಲ ಎಂದು ಹೇಳುತ್ತಾರೆ. ತನ್ನ ಪುತ್ರವ್ಯಾವೋಹಕ್ಕಾಗಿ ಅನೇಕ ಮಂದಿಯನ್ನು ಪಕ್ಷದಿಂದ ಗೇಟ್‍ಪಾಸ್ ಕೊಟ್ಟಿರುವ ದೇವೇಗೌಡ್ರು ಮುಂದೊಂದು ದಿನ ಪಟ್ಟ ಶಿಷ್ಯ
ಸಿದ್ದರಾಮಯ್ಯನಿಗೂ ಸಾಕಷ್ಟು ಕಿರುಕುಳ ನೀಡಿ ಪಕ್ಷದಿಂದ ಓಡಿಸಿದ್ದಾರೆ. ತನ್ನ ಕುಲಪುತ್ರನ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದು ಅಡ್ಡವಾಗ್ತಾರೆ ಎಂಬ ಕಾರಣಕ್ಕಾಗಿಯೇ ಈ ರೀತಿ ಗೇಟ್‍ಪಾಸ್ ನೀಡಿದ್ದಾರೆ ಎನ್ನುವುದು ಸುಳ್ಳಲ್ಲ.

ಒಂದಂತೂ ಸ್ಪಷ್ಟ… ತನ್ನ ಕುಟುಂಬಕ್ಕೊಂದು ಭದ್ರ ನೆಲೆಯನ್ನೊದಗಿಸುವ ಸಲುವಾಗಿಯೇ ದೇವೇಗೌಡ್ರು ಪಕ್ಷವೊಂದನ್ನು ಸ್ಥಾಪಿಸಿದರು. ಯಾವ ನೆಹರೂಗಿಂತಲೂ ಕಮ್ಮಿ ಇಲ್ಲದಂತೆ ಕುಟುಂಬ ರಾಜಕಾರಣವನ್ನು ಮಾಡಿದ್ರೋ ಅದೇ ರೀತಿ ನಮ್ಮ ಮಾಜಿ ಪ್ರಧಾನಿಗಳಾಗಿದ್ದ ಎಚ್.ಡಿ ದೇವೆಗೌಡ್ರೂ ಕೂಡಾ ಕುಟುಂಬ ರಾಜಕಾರಣವನ್ನು ಮಾಡ್ತಾ ಇದ್ದಾರೆ. ಜನತಾ ಪರಿವಾರ ಸಿಡಿದು ಚೂರಾದ ಸಂದರ್ಭದಲ್ಲಿ ತಮ್ಮ ಪಕ್ಷಕ್ಕೆ ಸೆಕ್ಯುಲರ್ ಎಂದು ಸೇರಿಸಿ ಎಲ್ಲರ ಪಕ್ಷ ಎಂದು ಬಿಂಬಿಸಿದ ದೇವೇಗೌಡ್ರು ಆಮೇಲೆ ಮಾತ್ರ ಸೆಕ್ಯುಲರ್ ಎಂಬ ಪದದ ಅರ್ಥವನ್ನೇ ಮರೆತುಬಿಟ್ರು. ಯಾಕೆಂದ್ರೆ ಅಲ್ಪಸಂಖ್ಯಾರನ್ನು ಓಲೈಸಿ, ಹಿಂದೂಗಳ ವಿರುದ್ಧ ಹೇಳಿಕೆ ನೀಡುತ್ತಾ ಬರುತ್ತಾ ತಾನೊಬ್ಬ ಕಾಂಗ್ರೆಸ್ ಪುಡಾರಿಗಿಂತ ಕಮ್ಮಿ ಇಲ್ಲದಂತೆ ತೋರಿಸಿಕೊಟ್ಟರು.

ಕಾಂಗ್ರೆಸ್‍ನ ಮುಖಾಂತರ ರಾಜಕೀಯಕ್ಕೆ ಎಂಟ್ರಿಕೊಟ್ಟ ಎಚ್.ಡಿ ದೇವೆಗೌಡ್ರು ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸಿದ ನಾಯಕ!! ವಿಪರ್ಯಾಸ ಎಂದರೆ ಜೆಡಿಎಸ್ ಪಕ್ಷದ ಗದ್ದುಗೆಯನ್ನು ಹಿಡಿದಿರುವ ಇವರು ತನ್ನ ಪುತ್ರ ಮತ್ತು ಸೊಸೆಯರೊಂದಿಗೆ ತನ್ನ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ದೇವೆಗೌಡ್ರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅದೆಷ್ಟೂ ಕುತಂತ್ರಗಳು ನಡೆದು ಹೋದವೂ ಗೊತ್ತಿಲ್ಲ ಯಾಕೆಂದರೆ ಒಬ್ಬ ರಾಜಕಾರಣಿ ಅಥವಾ ಒಬ್ಬ ವ್ಯಕ್ತಿ ಪ್ರಧಾನಿಯಾಗಬೇಕಾದರೆ ಲೋಕ ಸಭೆಯ ಬಹುಮತಕ್ಕೆ 272 ಸೀಟ್ ಬೇಕೇ ಬೇಕು. ಆದರೆ ಕೇವಲ 12 ಸೀಟುಗಳನ್ನು ಪಡೆದ ಇವರು ಪ್ರಧಾನಿಯಾಗಿದ್ದು ಮಾತ್ರ ಪ್ರಶ್ನಾರ್ಥಕ ಚಿಹ್ನೆಯಾಗಿದೆ!!

ದೇವೇಗೌಡ್ರಿಗೆ ಅಧಿಕಾರಕ್ಕಾಗಿ ಕಾಂಗ್ರೆಸ್ಸೂ ಆಗುತ್ತದೆ, ಜೆಡಿಎಸ್ ಕೂಡಾ ಆಗುತ್ತದೆ. ತನ್ನ ಪಕ್ಷ ಹೀನಾಯವಾಗಿ ಸೋತ್ರೂ ಕೂಡಾ ಗೆದ್ದ ಪಕ್ಷದ ಬಾಲ ಹಿಡಿದು
ಒಂದಷ್ಟು ದಿನ ಅಧಿಕಾರ ಅನುಭವಿಸುವ ಕಲೆಯನ್ನು ದೇವೇಗೌಡ್ರಿಂದ ಕಲಿಯಬೇಕು. ಈ ಬಾರಿ ಸ್ಪಷ್ಟ ಬಹುಮತದಿಂದ ಅಧಿಕಾರ ಪಡೆಯುತ್ತೇವೆ ಎಂದು ಬೋಂಗು ಬಿಡುತ್ತಿರುವ ಗೌಡ್ರು ತನ್ನ ಪಕ್ಷ ನೆಲಕಚ್ಚುತಿದೆ ಎಂದು ಗೊತ್ತಿರುವುದರಿಂದ ಈಗ್ಲೇ ಕಾಂಗ್ರೆಸ್ ಪಕ್ಷದ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್‍ನ ಪರಮೇಶ್ವರ ನೀಡಿದ ಹೇಳಿಕೆಯೇ ಸಾಕ್ಷಿ.

ಇತ್ತೀಚೆಗೆ ಡಾ.ಜಿ ಪರಮೇಶ್ವರ್ ಹೇಳಿರುವ ಪ್ರಕಾರ, ಕೋಮುವಾದ ಪಕ್ಷವಾದ ಬಿಜೆಪಿಯನ್ನು ದೂರವಿಡಲು ಜಾತ್ಯತೀತ ಪಕ್ಷವಾದ ಜೆಡಿಎಸ್‍ನೊಂದಿಗೆ
ಮೈತ್ರಿಯಾಗಲು ತಯಾರಿದ್ದೇವೆ ಎನ್ನುವ ಸುಳಿವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಉಲ್ಟಾ ಹೊಡೆದ ಗೌಡ್ರು ಏನು ಹೇಳಿದ್ದಾರೆ ಗೊತ್ತೆ!! ದೇವೆಗೌಡರ ಹೇಳಿಕೆಯ ಪ್ರಕಾರ ಚುನಾವಣೆಯಲ್ಲಿ ಬಹುಮತ ಸ್ಥಾನವನ್ನು ಪಡೆದರೆ ನಾವೇ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುತ್ತೇವೆ, ಒಂದುವೇಳೆ ಬಹುಮತ ಸ್ಥಾನವನ್ನು ಗಳಿಸದೇ ಹೋದರೆ ವಿರೋಧ ಪಕ್ಷವಾಗಿ ಉಳಿಯುತ್ತೇವೆ ಎಂದಿದ್ದಾರೆ!! ಗೌಡ್ರ ನಾಲಗೆ ಯಾವ ರೀತಿ ಬೇಕಾದ್ರೂ ತಿರುಗುತ್ತದೆ. ಹೇಗಾದ್ರೂ ಡೊಂಬರಾಟ ಮಾಡಿ ಅಧಿಕಾರ ಹಿಡಿಯಲೇಬೇಕು ತನ್ನ ಪುತ್ರನನ್ನು ಅಧಿಕಾರದಲ್ಲಿ ಕುಳ್ಳಿರಿಸಬೇಕೆಂಬ ಹಪಾಹಪಿ ಈ ಗೌಡ್ರದ್ದು. ಚುನಾವಣೆ ನಡೆದ ಬಳಿಕ ಇವರ ಹೇಳಿಕೆ ಸಂಪೂರ್ಣವಾಗಿ ಉಲ್ಟಾ ಹೊಡೆದು ಬಿಡುತ್ತದೆ. ಊಸರವಳ್ಳಿ ತರ ಬಣ್ಣ ಬದಲಾಯಿಸಲು ಗೌಡ್ರಿಗಿಂತ ಬೇರೆ ಉದಾಹರಣೆ ಬೇಕಿಲ್ಲ.

ಆದರೆ ಇದೀಗ ಹೇಳಿರುವ ಮಾಹಿತಿಯನ್ನು ತಾಳೆ ನೋಡಿದರೆ, ಇತ್ತೀಚೆಗಷ್ಟೇ ಆದ ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ
ಕಾಂಗ್ರೆಸ್‍ನೊಂದಿಗೆ ಮೈತ್ರಿಯನ್ನು ಮಾಡಿರುವ ಜೆಡಿಎಸ್, ಉಪ ಮೇಯರನ್ನು ತನ್ನ ಪಕ್ಷದಿಂದಲೇ ಆಯ್ಕೆ ಮಾಡಿಕೊಂಡಿತ್ತು!! ಯಾವತ್ತು ಮೊಸಳೆ ಕಣ್ಣೀರು ಸುರಿಸುವ ದೇವೆಗೌಡ್ರು ತನ್ನ ಅಧಿಕಾರವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದರು. ಅಂದಿನಿಂದ ಕಣ್ಣೀರು ಸುರಿಸಿ ರಾಜಕೀಯವನ್ನು ಮಾಡಿಯೇ ಬಿಟ್ಟರು!!

ಅಷ್ಟೇ ಅಲ್ಲದೇ ಈ ಹಿಂದೆ ಇವರ ಸುಪುತ್ರ ಎಚ್.ಡಿ ಕುಮಾರ ಸ್ವಾಮಿ 2006ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿಯಾಗಿದ್ದು ಅದೇನೇನು
ಕಸರತ್ತು ಮಾಡಿದ್ರೂ ಗೊತ್ತೆ?? 2006ರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಯಾಗಿದ್ದ ಬಿಜೆಪಿ ಮತ್ತು ಜೆಡಿಎಸ್, ತನ್ನ ಚುನಾವಣೆಯನ್ನು ಜಯಶಾಲಿಯಾಗಿದ್ದು ಅಧಿಕಾರವನ್ನು ಇಬ್ಬರು ಕೂಡ ಸಮಾನ ವರ್ಷವಾಗಿ ಆಡಳಿತ ನಡೆಸುವ ಯೋಜನೆಯನ್ನು ಹಾಕಿದ್ದರು !!ಆದರೆ ದೇವೆಗೌಡರ ಮಾತನ್ನು ಕೇಳಿ ಕುಮಾರಸ್ವಾಮಿ ವಚನ ಭ್ರಷ್ಟರಾದರು!!

ಯಡಿಯೂರಪ್ಪ ಅವರಿಗೆ ಕೈಕೊಟ್ಟ ಮಹಾಶಯ ಕುಮಾರ ಸ್ವಾಮಿ! ಆದರೆ ಕುಮಾರ ಸ್ವಾಮಿ ಮಾಡಿದ ದ್ರೋಹ ಯಾವತ್ತು ಕ್ಷಮಿಸಲಾರದ್ದು!! ಯಾಕೆಂದರೆ ವಚನ ನೀಡಿ, ವಚನ ಭ್ರಷ್ಟರಾದರೂ ಎಂದರೆ ಏನರ್ಥ!! ಇಲ್ಲಿ ಕೂಡ ಹೆಚ್ಚಿನ ಮತಗಳನ್ನು ಗಳಿಸದೇ ತನ್ನ ಹಿಂಬಾಗಿಲಿನ ಮೂಲಕ ಅಧಿಕಾರವನ್ನು ಪಡೆದುಕೊಂಡರು!!

ಆದರೆ ಕುಮಾರಸ್ವಾಮಿ ಆಪ್ತವಲಯದಲ್ಲಿ ಇದ್ದುಕೊಂಡೇ ರಾಜಕೀಯ ಮತ್ತು ರಾಜಕೀಯೇತರ ಸವಲತ್ತು ಅನುಭವಿಸಿ ಕೊನೆಗೆ ತಂದೆಯ ಮಾತನ್ನು ಮೀರಲಾರದು ಎಂದು ತಾನೊಬ್ಬ ಮಹಾನ್ ಪುತ್ರ ಎಂದು ತೋರಿಸಿಕೊಟ್ಟರು. ಇಷ್ಟು ವಯಸ್ಸಾದರೂ ಗೌಡರು ಪಕ್ಷದ ಮೇಲಿನ ಹಿಡಿತವನ್ನು ಕುಮಾರಸ್ವಾಮಿಗೇ ಬಿಟ್ಟುಕೊಟ್ಟಿಲ್ಲ. ಗೌಡರ ಕುತಂತ್ರ ತಡೆಯಲಾರದೆ ಆ ಪಕ್ಷದಿಂದ ಎಷ್ಟೋ ಮಂದಿ ಪಕ್ಷ ಬಿಟ್ಟು ಹೋದ್ರೂ ನನಗೇನೂ ಕ್ಯಾರೇ ಇಲ್ಲ ಎನ್ನುತ್ತಾರೆ. ತನ್ನ ಮಕ್ಕಳನ್ನು, ಕುಟುಂಬವನ್ನೇ ಪಕ್ಷದ ಒಂದೊಂದು ಹುದ್ದೆಗೆ ನಿಯೋಜಿಸಿ ಮಗನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿ “ಜೆಡಿಎಸ್ ಅಪ್ಪಮಕ್ಕಳ ಪಾರ್ಟಿ” ಎನ್ನುವುದನ್ನು ಸಮರ್ಥವಾಗಿ ತೋರಿಸಿಕೊಟ್ಟರು.

ಎಲ್ಲಕ್ಕಿಂತ ಮಿಗಿಲಾಗಿ ಪಾರಂಪರಿಕ ರಾಜಕೀಯ ಶತ್ರುಗಳಾಗಿದ್ದ ದೇವೇಗೌಡರು ಮತ್ತು ಕೃಷ್ಣ ನಡುವಣ ಸಂಬಂಧ ಇತ್ತೀಚೆಗೆ ಸುಧಾರಿಸಿದೆ. ಅನೇಕ ಕಡೆ ಇಬ್ಬರೂ ವೇದಿಕೆ ಹಂಚಿಕೊಂಡಿದ್ದಾರೆ. ಪರಸ್ಪರ ಹೊಗಳಿಕೊಂಡಿದ್ದಾರೆ. ತಮ್ಮ ಶತ್ರುಗಳನ್ನು ಸದೆಬಡಿಯಲು ಭೂಮಿಗಿಳಿದು ರಣತಂತ್ರ ಹೊಸೆವ ಗೌಡರು ಯಾವಾಗ, ಯಾರನ್ನು, ಹೇಗೆ ಬಳಸಿಕೊಳ್ಳುತ್ತಾರೆ, ಎಂಥ ಅಸ್ತ್ರಗಳನ್ನು ಬಳಕೆ ಮಾಡುತ್ತಾರೆ ಎಂಬುದು ಅವರಿಗೇ ಗೊತ್ತಿರುವುದಿಲ್ಲ. ಚುನಾವಣೆ ರಾಜಕೀಯದಲ್ಲಿ ಪಕ್ಷದ ಹಿತಾಸಕ್ತಿಯನ್ನೇ ಪಣಕ್ಕಿಟ್ಟು, ಪಕ್ಷದ ಅಭ್ಯರ್ಥಿಗಳನ್ನೇ ಬಲಿಕೊಟ್ಟು ಶತ್ರುಗಳನ್ನು ನಿರ್ನಾಮ ಮಾಡುವುದರಲ್ಲಿ ಅವರು ನಿಸ್ಸೀಮರು.

ಆದರೆ ಪ್ರತಿಭಾರಿಯೂ ಮೊಸಳೆ ಕಣ್ಣೀರನ್ನು ಸುರಿಸುವ ದೇವೆಗೌಡರು ತಮ್ಮ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ, ಯಾರ ಜೊತೆ ಬೇಕಾದರು
ಮೈತ್ರಿಯಾಗುತ್ತಾರೆ. ಆದರೆ ಕಾಂಗ್ರೆಸ್‍ನ ನರಿಬುದ್ದಿಯನ್ನು ಇವರೂ ಕಲಿತುಕೊಂಡಿರುವುದಲ್ಲದೇ, ಜೆಡಿಎಸ್‍ನ್ನು ಯಾವ ಕೀಳುಮಟ್ಟಕ್ಕೂ ಇಳಿಯಲೂ ಸಿದ್ಧ ಎಂದು ನಿರೂಪಿಸಿದೆ. ಇವರು ಅಧಿಕಾರಕ್ಕಾಗಿ ಅಳುತ್ತಾರೆ, ಆಣೆ ಹಾಕುತ್ತಾರೆ, ತನಗಾದವರನ್ನು ಒದ್ದು ಓಡಿಸುತ್ತಾರೆ, ಅಧಿಕಾರ ಬೇಕಾದ್ರೆ ಯಾವ ಪಕ್ಷವನ್ನು ಬೇಕಾದ್ರೂ ಅಪ್ಪುತ್ತಾರೆ. ಒಟ್ಟಾರೆ ದೇವೇಗೌಡ್ರಿಗಿಂತ ದೊಡ್ಡ ನಾಟಕಕಾರ ಬೇರೆ ಯಾರೂ ಇರಲಿಕ್ಕೆ ಸಾಧ್ಯವಿಲ್ಲ. ಆದ್ದರಿಂದ ಪ್ರಕಾಶ್ ರೈಗೆ ಪುರುಸೊತ್ತಿದ್ದರೆ ತನಗೆ ಪ್ರಶಸ್ತಿಯನ್ನು ದೇವೇಗೌಡ್ರಿಗೆ ಕೊಡುವುದು ಒಳ್ಳೆಯದು!!

-ಪ್ರವೀಣ್ ಕುಮಾರ್ ಗೌಡ
ಟ್ಯಾಕ್ಸಿ ಡ್ರೈವರ್, ಬೆಂಗಳೂರು

Tags

Related Articles

Close