ಪ್ರಚಲಿತ

ಬಾಂಧವರಿಗೆ “ವಂದೇ ಮಾತರಂ” ಹರಾಮ್ ಅನ್ನಿಸುವುದಾದರೆ “ಟಿಪ್ಪು ಜಯಂತಿ” ಹಲಾಲ್ ಹೇಗಾದೀತು?

ಟಿಪ್ಪು ಜಯಂತಿ ಮಾಡಿಯೇ ತೀರುತ್ತೇವೆ ಎನ್ನುತ್ತಿರುವ ಸಿದ್ದು ಸರ್ಕಾರ ಒಂದೆಡೆಯಾದರೆ ಟಿಪ್ಪು ಹಿಂದೂವಿರೋಧಿ, ಆತ ಸ್ವಾತಂತ್ರ ಹೋರಾಟಗಾರನಲ್ಲ, ಆತ ಮತಾಂಧ ಎನ್ನುತ್ತಿರುವ ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ಇನ್ನೊಂದೆಡೆ.

ಇವೆರಡೂ ವಾದಗಳನ್ನು ಬದಿಗಿರಿಸಿ ಬಾಂಧವರ ನಿಲುವನ್ನ ಪ್ರಶ್ನಿಸಬೇಕಾಗಿದೆ. ಜಯಂತಿಯನ್ನ ಸರ್ಕಾರವೇ ಆಚರಿಸುತ್ತಿರಬಹುದು ಆದರೆ ಭಾಂದವರು ಆಚರಣೆಯಲ್ಲಿ ತಾವು ಖುದ್ದಾಗಿ ಭಾಗಿಯಾಗಿದ್ದಾರೆ. ಸದಾ ಕುರಾನ್ ಮುಂದಿಟ್ಟುಕೊಂಡು ಭಾರತೀಯ ಪರಂಪರೆಯನ್ನು, ತಾವು ಹುಟ್ಟಿದ ನೆಲದ ಸಂಸ್ಕೃತಿಯನ್ನ ಗೌರವಿಸದೆ ಷರಿಯಾ ಕಾನೂನಿನಂತೆ ಬದುಕುವ ಆಸೆ ವ್ಯಕ್ತಪಡಿಸುವ ಕೆಲ ಕಟ್ಟರ್ ಮುಸ್ಲಿಮರು, ಜಯಂತಿ ಆಚರಣೆ ಇಸ್ಲಾಂ ಗೆ ವಿರುದ್ದವಿದ್ದರೂ ವಿರೋಧಿಸದೆ ಸುಮ್ಮನಿರುವುದು ಅವಕಾಶವಾದಿ ಆಷಾಢಭೂತಿಯಲ್ಲದೆ ಮತ್ತೇನು?

ಹೈದರಾಬಾದ್ ನ ಇಸ್ಲಾಮಿಕ್ ಸಂಘಟನೆ ‘ವಂದೇ ಮಾತರಂ’ ವಿರುದ್ದ ಫತ್ವಾ ಹೊರಡಿಸುತ್ತದೆ. ಒಂದು ಭೂಮಿಯನ್ನು ತಾಯಿ ಎಂದು ಭಾವಿಸಿ ತಲೆಬಾಗಲಾಗದು ಎನ್ನುತ್ತಾರೆ.

ವಂದೇ ಮಾತರಂ ಅದೊಂದು ರಣೋತ್ಸಹ ಗೀತೆ, ರಾಷ್ಟ್ರಗಾನ. ಈ ನೆಲದ ಸಂಸ್ಕೃತಿಯಲ್ಲಿ ಶಕ್ತಿಯೆಂದರೆ ನೆನಪಿಗೆ ಬರುವುದೇ ದುರ್ಗೆ.

ದುರ್ಗಾದೇವಿಗೆ ಸಮನಾದ ಶಕ್ತಿಸ್ವರೂಪದ ಮತ್ತೊಂದಿಲ್ಲ. ಆದುದರಿಂದಲೇ ಬಂಕಿಮ್ ಚಂದ್ರ ಚಟರ್ಜಿಯವರು ಭಾರತ ಮಾತೆನ್ನು ದುರ್ಗೆಗೆ ಹೋಲಿಸಿದ್ದು. ಗೀತೆಯಲ್ಲಿ ವಿಗ್ರಹ ಆರಾಧನೆಯ ಭಾವಗಳಿವೆ ಎಂಬ ಕಾರಣಕ್ಕೆ ಬಾಂಧವರು ಈ ಗೀತೆಯನ್ನು ಹಾಡಲು ವಿರೋಧಿಸಿದ್ದೂ, ರಾಷ್ಟ್ರಗೀತೆಯಿಂದ ರಾಷ್ಟ್ರಗಾನಕ್ಕೆ ಮೂಲೆಗುಂಪು ಮಾಡಿದ್ದು ಇತಿಹಾಸ.

ಬಾಂಧವರಿಗೆ ವಂದೇ ಮಾತರಂ ಹರಾಮ್ ಎನ್ನಸುವುದಾದರೆ ಟಿಪ್ಪು ಜಯಂತಿ ಹಲಾಲ್ ಹೇಗಾದೀತು?

ಇನ್ನು ಫತ್ವಾ ವಿಚಾರಕ್ಕೆ ಬಂದರೆ ಚೆಸ್ ವಿರುದ್ದ, ಹೆಣ್ಣುಮಕ್ಕಳು ಬಾಳೆಹಣ್ಣು ತಿನ್ನದಂತೆ, ಮಹಿಳೆಯರು ರೊಮ್ಯಾಂಟಿಕ್ ಕಾದಂಬರಿಗಳನ್ನು ಓದದಂತೆ, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕದಂತೆ, ಮೊನ್ನೆ ಮೊನ್ನೆ ತಾನೆ ವಾರಣಾಸಿಯಲ್ಲಿ ಶ್ರೀ ರಾಮನ ಫೋಟೊಕ್ಕೆ ಮುಸ್ಲಿಂ ಮಹಿಳೆಯರು ಆರತಿ ಮಾಡಿದ್ದಕ್ಕೆ ಫತ್ವಾ.

ಹೀಗೆ ಸುಖಾಸುಮ್ಮನೆ ಎಲ್ಲದಕ್ಕೂ ಫತ್ವಾ ಹೊರಡಿಸುವ ಮೌಲ್ವಿಗಳು ಇಸ್ಲಾಂ ಗೆ ವಿರುದ್ದವಾದ ಜಯಂತಿಯ ಆಚರಣೆಯ ವಿರುದ್ದ ಫತ್ವಾ ಏಕೆ ಹೊರಡಿಸಿಲ್ಲ ಎನ್ನುವುದೇ ಯಕ್ಷ ಪ್ರಶ್ನೆ.

ಮಹಮ್ಮದ್ ಪೈಗಂಬರ್ ಅವರು ಇಸ್ಲಾಂ ಮತದ ಸ್ಥಾಪಕರು. ಅವರ ಭಾವಚಿತ್ರವನ್ನಿಟ್ಟು ಹಾರಹಾಕಿ ಆರಾಧಿಸಲು ಇಸ್ಲಾಂನಲ್ಲಿ ಅವಕಾಶವಿಲ್ಲ ಎಂದ ಮೇಲೆ ಯಾವನೋ ಸಾಮಾನ್ಯ ವಿವಾದಾತ್ಮಕ ದೊರೆ ಫೋಟೋಗೆ ಹಾರವನ್ನಾಕಿ, ಪುಷ್ಪಾರ್ಚನೆಯನ್ನ ಮಾಡಿ, ಶೋಭಾಯಾತ್ರೆಯನ್ನು ಸಂಗೀತ ವಾದ್ಯಮೇಳದೊಂದಿಗೆ ಆತನಿಗೆ ಜೈಕಾರ ಹಾಕುತ್ತಾ ಮೆರಮಣಿಗೆ ಮಾಡುವುದು ಇಸ್ಲಾಂ ವಿರುದ್ಧವಲ್ಲವೇ?

ಭಾರತ ಮಾತೆಗೆ ಜೈಯೆನ್ನಲು ಧರ್ಮ ಅಡ್ಡ ಬರುವವರಿಗೆ ಟಿಪ್ಪುವಿಗೆ ಜೈಕಾರ ಹಾಕಲು ಧರ್ಮ ಅಡ್ಡ ಬರುವುದಿಲ್ಲವೇ?

ಇಸ್ಲಾಂನಲ್ಲಿ ಸಂಗೀತಕ್ಕೆ ಆಸ್ಪದವಿಲ್ಲವೆಂದು ಖಾಸಗೀ ಚಾನೆಲನಲ್ಲಿ ಹಾಡುತ್ತಿದ್ದ ಸುಹಾನಳ ಎಂಬ ಹೆಣ್ಣುಮಗಳು ಹಾಡುವುದನ್ನ ವಿರೋಧಮಾಡಿದವರು ವಾದ್ಯಮೇಳದೊಂದಿಗೆ ಟಿಪ್ಪು ಜಯಂತಿಯ ಮರೆಣಿಗೆಯಲ್ಲಿ ಭಾಗವಹಿಸುವುದು ನಾಚಿಗೇಡಿನ ಸಂಗತಿಯೇ ಸರಿ.

ಇನ್ನು ಕುರಾನ ನ್ನು ಆಧಾರವಾಗಿಟ್ಟುಕೊಂಡು ಮಾತನಾಡುವುದಾದರೆ ಸತ್ತವ್ಯಕ್ತಿಯನ್ನು, ದೇವದೂತನನ್ನು, ಧಾರ್ಮಿಕ ಪಂಡಿತರನ್ನು ಆರಾಧಿಸುವುದು, ಅವರ ಜಯಂತಿಗಳನ್ನ ಆಚರಿಸುವುದು, ಪೂಜಿಸುವುದು ನಿಷಿದ್ದ.

ಇಂತಹ ಆರಾಧನೆಗಳು ಏಕದೇವತಾ ಆರಾಧನೆಗೆ ಧಕ್ಕೆ ತರುತ್ತವೆ. ಇಸ್ಲಾಂ ಬಹುದೇವತಾ ತತ್ವಕ್ಕೆ ಸಂಪೂರ್ಣ ವಿರುದ್ದವಾಗಿವೆ.

ಕುರಾನನಲ್ಲಿರೋಕೆಳಗಿನ ಶ್ಲೋಕಗಳನ್ನೊಮ್ಮೆ ಗಮನಿಸಿ!!

Idol worship is not forgivable, if maintained until death. One can always repent from any offence including idolatry, before death comes (4:18 & 40:6)

ನೀನು ಅಲ್ಲಾಹನೊಂದಿಗೆ ಬೇರೆಯವರನ್ನು ಆರಾಧ್ಯನನ್ನಾಗಿ ಮಾಡಿಕೊಳ್ಳ ಬೇಡ. ಅನ್ಯಥಾ ಶಪಿತನಾಗಿ ಅಸಹಾಯಕನಾಗಿ ಕುಳಿತುಕೊಳ್ಳುವೆ (ಬನೀ ಇಸ್ರಾಈಲ್ 17 : 22)

ಬುದ್ಧಿಗೇಡಿಗಳೇ ನೀವು ಅಲ್ಲಾಹುವಿನ ಹೊರತು ಇತರ ದೇವರನ್ನ ಆರಾಧನೆ ಮಾಡಲು ನನ್ನೊಡನೆ ಹೇಳುವಿರಾ?
(ಅಝ್ಝಮರ್ 39:64)

ನಿಮಗೆ ವಿವಾದಾಸ್ಪವಾದದ್ದು ಮತ್ತು ನಿಮ್ಮ ಮುಂದೆ ಇರುವವರಿಗೆ ನೀವು ವಿಗ್ರಹ ಪೂಜೆ ಮಾಡಿದರೆ ನಿಮ್ಮ ಎಲ್ಲಾ ಕಾರ್ಯಗಳನ್ನ ಶೂನ್ಯಗೊಳಿಸಲಾಗುವುದು ಮತ್ತು ನೀವು ಸೋತವರೊಂದಿಗೆ ಇರುತ್ತೀರಿ (ಅಝ್ಝಮರ್ 39 :65)

ನಿಮ್ಮ ಪ್ರಭು ವಿಧಿಸಿ ಬಿಟ್ಟಿದ್ದಾನೆ ನೀವು ಕೇವಲ ಅವನೊಬ್ಬನ ಹೊರತು ಇನ್ನಾರ ದಾಸ್ಯ – ಆರಾಧನೆಯನ್ನ ಮಾಡಬಾರದು (ಬನೀಇಸ್ರಾಈಲ್ 17:23)

ನೀವು ಅಲ್ಲಾಹನನ್ನು ಬಿಟ್ಟು ಯಾವುದನ್ನೆಲ್ಲಾ ಪೂಜಿಸುತ್ತೀರೋ ಅವು ಕೇವಲ ವಿಗ್ರಹಗಳಾಗಿವೆ ಮತ್ತು ನೀವು ಒಂದು ಸುಳ್ಳನ್ನು ಸೃಷ್ಟಿಸುತ್ತಿರುವಿರಿ. ವಾಸ್ತವದಲ್ಲಿ ಅಲ್ಲಾಹುವಿನ ಹೊರತು ಯಾರನ್ನು ಪೂಜಿಸುತ್ತೀರೋ ಅವರು ನಿಮಗೆ ಯಾವುದೇ ಜೀವನಾಧಾರ ನೀಡುವ ಅಧಿಕಾರ ಹೊಂದಿಲ್ಲ.(ಅಲ್ ಆನ್ ಕಬೂತ್ 29:17)

ಹೀಗೆ ಕುರಾನ್ ಅನೇಕಾನೇಕ ಶ್ಲೋಕಗಳು ಅಲ್ಲಾಹುವಿನ ಹೊರತಾದ ವ್ಯಕ್ತಿ ಆರಾಧನೆಯನ್ನು ಖಡಾಖಂಡಿತವಾಗಿ ವಿರೋಧಿಸುತ್ತವೆ. ಈ ಸಂಗತಿಗಳು ಭಾಂಧವರಿಗೆ ತಿಳಿದಿಲ್ಲಾ ಎಂದಿಲ್ಲ ತಿಳಿದಿದ್ದರೂ ಜಾಣ ಕುರುಡರಂತಿದ್ದಾರೆ.

ಟಿಪ್ಪು ಒಬ್ಬ ಮುಸ್ಲಿಂ ಎನ್ನುವಕಾರಣಕ್ಕೆ ಅಲ್ಲಾಹುವಿನ ಆದೇಶದ ವಿರುದ್ದ ನಡೆಯುತ್ತಿದ್ದಾರೆ “ಸತ್ಯವಿಶ್ವಾಸಿಗಳು”.

ಇನ್ನು ಸರ್ಕಾರ ಜಯಂತಿಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಟಿಪ್ಪುವನ್ನು ಬಿಟ್ಟು ಯಾವ ಮುಸ್ಲಿಂರು ಇವರಿಗೆ ಸಿಗುತ್ತಿಲ್ಲವೇ? ಮುಸ್ಲಿಂರಿಗೆ ಬಕೆಟ್ ಹಿಡಿದೇ ಬದುಕಬೇಕು ಎಂದಾದರೆ ಎಲ್ಲರೂ ಒಪ್ಪುವಂತಹ ಭಾರತರತ್ನ ಅಬ್ದುಲ್ ಕಲಾಂ ಇದ್ದರಲ್ಲಾ, ಈ ನಾಡಿನಲ್ಲಿ ಭಾವೈಕ್ಯತೆಯ ಸಾರಿದ ಶರೀಫಜ್ಜ ಇದ್ದರಲ್ಲಾ? ಕ್ರಾಂತಿ ಕಾರಿ ಅಶ್ಪಾಕ್ ಉಲ್ಲಾಖಾನ್ ಇದ್ದರಲ್ಲ, ಇನ್ನೂ ಅನೇಕ ಸಾಧಕರು ಮತಬೇಧವಿಲ್ಲದೇ ಭಾರತ ಮಾತೆಯ ಸೇವೆ ಮಾಡಿದ್ದಾರೆ.

ಸರ್ಕಾರ ತನ್ನ ಹಟಮಾರಿ ಧೋರಣೆ ಬಿಟ್ಟು ಟಿಪ್ಪು ಜಯಂತಿಯನ್ನು ನಿಲ್ಲಿಸಿ ಕೋಮು ಸಂಘರ್ಷವಾಗದಂತೆ ನೋಡಿಕೊಳ್ಳಬೇಕು.

ಕುರಾನ್, ಹದೀಸ್ ಪಾಲಿಸೋ ಶುದ್ದ ಮುಸ್ಲಿಂ ಭಾಂದವರು ಟಿಪ್ಪು ಜಯಂತಿಯಲ್ಲಿ ಭಾಗವಹಿಸದೆ ಜಯಂತಿಯನ್ನು ವಿರೋಧಿಸಿ ಬಹುಸಂಖ್ಯಾತರ
ಭಾವನೆಗಳಿಗೆ ಬೆಲೆ ಕೊಡುತ್ತಾರೋ ಎಂಬುದನ್ನು ತೋರಿಸುವ ಹೊಣೆಗಾರಿಗೆ ಅವರ ಮೇಲಿದೆ.

– ಸುಧೀಂದ್ರ ಗೌಡ

Tags

Related Articles

Close