ಇತಿಹಾಸ

ಬಾಬಾ ಸಾಹೇಬ್ ಅಂಬೇಡ್ಕರ್ ಹಿಂದೂ ಧರ್ಮವನ್ನ ಕಂಠಮಟ್ಟ ದ್ವೇಷಿಸಿದ್ದರಾ?!

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹಿಂದೂ ಧರ್ಮವನ್ನ ಹೀಯಾಳಿಸಿದ್ದರಾ? ಬ್ರಾಹ್ಮಣರನ್ನ ಸಾಯುವವರೆಗೆ ದ್ವೇಷಿಸಿ ಅದೇ ನಿಮ್ಮ ಧರ್ಮ ಮತ್ತು ಕರ್ಮ ಅಂತ ದಲಿತರಿಗೆ ಕರೆ ಕೊಟ್ಟಿದ್ದರಾ?

ಹಿಂದೂ ಧರ್ಮದಿಂದ ಇಸ್ಲಾಂ, ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗಿ ಅಂತ ಅಸ್ಪೃಶ್ಯರಿಗೆ ಹೇಳಿದ್ದರಾ?

ಈ ವಿಷಯಗಳನ್ನೆಲ್ಲ ಪುಂಖಾನುಪುಂಖವಾಗಿ ಸತ್ಯದ ತಲೆಯಮೇಲೆ ಹೊಡೆದಹಾಗೆ ಹೇಳುವ ಅರೆಬರೆ ಬುದ್ಧಿಜೀವಿಗಳು, ಬಲಿತ ಬೆಂಡೆಕಾಯಿಗಳು ಬಾಬಾಸಾಹೇಬ್ ಅಂಬೇಡ್ಕರರನ್ನ ATM Card ನ ರೀತಿಯಲ್ಲಿ ಉಪಯೋಗಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳೋಕೆ ಮುಂದಾಗಿದ್ದಾರೆ.

ಅಷ್ಟಕ್ಕೂ ಅಂಬೇಡ್ಕರರು ಹಿಂದೂ ಧರ್ಮದ ಬಗ್ಗೆ, ಬ್ರಾಹ್ಮಣರ ಬಗ್ಗೆ, ಇಸ್ಲಾಂ ಹಾಗು ಕ್ರಿಶ್ಚಿಯನ್ ಮತಗಳ ಬಗ್ಗೆ ಏನ್ ಹೇಳಿದ್ರು ಅನ್ನೋದನ್ನ ಬಾಬಾಸಾಹೇಬರು ಬರೆದ ಪುಸ್ತಕಗಳಿಂದಲೇ ತಿಳಿದುಕೊಳ್ಳೋಣ ಬನ್ನಿ….

1. ಜಿ.ಎಸ್. ಘುರ್ಯೆ ಎಂಬುವರ ‘The Untouchables’ ಎಂಬ ಪುಸ್ತಕದ ಸಿದ್ಧಾಂತವನ್ನು ಚೂರು ಚೂರು ಮಾಡಿ ಅಂಬೇಡ್ಕರ್ ಬರೆಯುತ್ತಾರೆ: ‘ಬ್ರಾಹ್ಮಣರೂ ಅಸ್ಪೃಶ್ಯರೂ ಒಂದೇ ಜನಾಂಗದವರು. ಬ್ರಾಹ್ಮಣರು ಆರ್ಯರಾದರೆ ಅಸ್ಪೃಶ್ಯರೂ ಆರ್ಯರೇ. ಬ್ರಾಹ್ಮಣರು ದ್ರಾವಿಡರಾದರೆ ಇವರೂ ದ್ರಾವಿಡರೇ. ಬ್ರಾಹ್ಮಣರು ನಾಗರಾದರೆ ಇವರೂ ನಾಗರೇ’ (ಬರಹಗಳು, ಭಾಷಣಗಳು, ಭಾಗ 7. ಪು.302-303)

2. Caste in India ಎಂಬ ಪ್ರಬಂಧದಲ್ಲಿ ಅಂಬೇಡ್ಕರ್ ಬರೆಯುತ್ತಾರೆ: ‘ನಿಮ್ಮಲ್ಲಿ ಒಂದು ವಿಷಯವನ್ನು ದೃಢಪಡಿಸುವುದೇನೆಂದರೆ, ಮನುವು ಜಾತಿಗಳನ್ನು ನಿರ್ವಿುಸಲೂ ಇಲ್ಲ, ಆ ಬಗ್ಗೆ ನ್ಯಾಯ ತೀರ್ಪು ಈಯಲೂ ಇಲ್ಲ. ಹಾಗೆ ಮಾಡಲು ಆಗುತ್ತಲೂ ಇರಲಿಲ್ಲ. ಮನುವಿಗಿಂತ ಜಾತಿ ಪದ್ಧತಿ ತುಂಬಾ ಹಳೆಯದು. ಮನುವು ಆಚರಣೆಯಲ್ಲಿದ್ದುದನ್ನೇ ಎತ್ತಿ ಹಿಡಿದ. ಆ ಸಂದರ್ಭದಲ್ಲಿ ಅವನ ತಾತ್ವಿಕ ವಿವರಣೆ ಬರುತ್ತದೆ. ಆದರೆ ಖಚಿತವಾಗಿ ಅವನು ಈಗಿರುವ ಜಾತಿ ವ್ಯವಸ್ಥೆ/ಪದ್ಧತಿಯನ್ನು ಜಾರಿ ಮಾಡಲಿಲ್ಲ, ಊರ್ಜಿತ ಮಾಡಲಿಲ್ಲ. ಈ ಜಾತಿ ಪದ್ಧತಿ, ಅದರ ಉಗಮ, ಬೆಳವಣಿಗೆ, ಪ್ರಸರಣಗಳು ಯಾವುದೇ ಒಬ್ಬ ವ್ಯಕ್ತಿಯ, ಒಂದು ವರ್ಗದ ಕುತಂತ್ರ, ಕುತರ್ಕ, ಶಕ್ತಿ, ಮೋಸ ಕೃತ್ಯಗಳಿಂದ ಆಗಲು ಅಸಾಧ್ಯವಾಗಿದ್ದು, ಅದು ತುಂಬ ಜಟಿಲವಾದದ್ದು. ಬ್ರಾಹ್ಮಣರು ಇದನ್ನು ಜಾರಿ ಮಾಡಿದರು, ಸೃಷ್ಟಿಸಿದರು ಎಂಬ ಸುಳ್ಳಿಗೂ ಈ ಮಾತು ಅನ್ವಯ. ಮನುವಿನ ಬಗ್ಗೆ ಇಷ್ಟೆಲ್ಲ ಹೇಳಿದ ಮೇಲೆ, ಹೆಚ್ಚು ಹೇಳಲಾರೆ. ಹೇಳುವುದಿದ್ದರೆ (ಬ್ರಾಹ್ಮಣರನ್ನು, ಮನುವನ್ನು) ದೂರುವುದು, ದೂಷಿಸುವುದು ಸರಿಯಲ್ಲ. ಅದು ದುರುದ್ದೇಶಪೂರಿತ ಎಂದಷ್ಟೇ. ಬ್ರಾಹ್ಮಣರು ಬೇರೆ ಅನೇಕ ತಪ್ಪುಗಳನ್ನು ಮಾಡಿರಬಹುದು. ಆದರೆ ಜಾತಿ ಪದ್ಧತಿಯನ್ನು ಅಬ್ರಾಹ್ಮಣರ ಮೇಲೆ ಹೇರಿದರೆಂಬುದು, ಅವರ ಬುದ್ಧಿಶಕ್ತಿಗೆ ಮೀರಿರುದಾಗಿತ್ತು.’ (Vol 1-p16)

3. ‘ಜಾತಿಯ ಕುರಿತ ಅಭ್ಯಾಸದಲ್ಲಿ ನಾನು ಕಂಡುಕೊಂಡ ನಾಲ್ಕು ಮುಖ್ಯ ಅಂಶಗಳು- ಜಾತಿ ಪದ್ಧತಿಯು ಏನೇ ಇರಲಿ, ಹಿಂದೂ ಸಮುದಾಯದ ಸಂಕೀರ್ಣತೆಯೊಳಗೇ ಒಂದು ಗಂಭೀರವಾದ, ಆಳವಾದ, ಸಾಂಸ್ಕೃತಿಕ ಏಕತೆ (Cultural unity) ಇದೆ.’

-‘ಜಾತಿಯೆಂದರೆ ವಿಶಾಲವಾದ ಒಂದು ಸಾಂಸ್ಕೃತಿಕ ಘಟಕವನ್ನು ಅನುಕೂಲಕ್ಕಾಗಿ ವಿಭಜಿಸುವ ವ್ಯವಸ್ಥೆ.’

-‘ಆರಂಭದಲ್ಲಿ ಒಂದೇ ಜಾತಿ ಇದ್ದು, ಆಮೇಲೆ ಬಹಳ ಆದವು.’

-‘ವರ್ಗಗಳು (ದುಡಿಮೆಯ ಶ್ರೇಣಿಗಳು) ಬರಬರುತ್ತಾ ಜಾತಿಗಳಾದದ್ದು ಬರೀ ಅನುಕರಣೆ ಮತ್ತು ಜಾತಿ ಬಾಹಿರತೆಯ ಬಹಿಷ್ಕಾರ ಜಾರಿ ಕ್ರಮದಿಂದ ಮಾತ್ರ.’ (ಕೇತ್ಕರರ History of caste ಗೆ ಉತ್ತರ)

4. ‘Who were the Shudras?’ ಪುಸ್ತಕದಲ್ಲಿ ಅಂಬೇಡ್ಕರ್ ಉವಾಚ – ‘ಇವರು ಆದಿಯಲ್ಲಿ ಸೂರ್ಯ ವಂಶ ಕ್ಷತ್ರಿಯ ಆದ್ಯ ಮೂಲದವರು. ಆಗ ಇದ್ದುದು ಮೂರೇ ವರ್ಗ – ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಎಂದು. ಈ ಸೂರ್ಯ ವಂಶೀಯ ದೊರೆಗಳು ಕೆಲವರು ಬ್ರಾಹ್ಮಣರೊಡನೆ ವೈರ, ಸ್ಪರ್ಧೆ, ಸೇಡಿಗೆ ಇಳಿದು, ಹಿಂಸೆಗೆ ತೊಡಗಿದ್ದರಿಂದ ಬ್ರಾಹ್ಮಣರಿಗೆ ಅಪಮಾನ, ಚಿತ್ರಹಿಂಸೆಗಳು ಆದವು. ಬ್ರಾಹ್ಮಣರು ಆಗ ಇವರಿಗೆ ಪೌರೋಹಿತ್ಯ ತೊರೆದು, ಉಪನಯನಕ್ಕೆ ತಿರಸ್ಕಾರ, ಬಹಿಷ್ಕಾರ ಹಾಕಿದರು. ಹೀಗಾಗಿ ಇವರು ಪತಿತರಾದರು. ನಾಲ್ಕನೆಯ ವರ್ಗ ಹೀಗೆ ಸೃಷ್ಟಿಯಾಯ್ತು.’ (ಬರಹಗಳು, ಭಾಷಣಗಳು,ಸಂಪುಟ 7, ಪು. 11-12)

5. ‘ಅಸ್ಪೃಶ್ಯತೆಯ ಉಗಮ ಹೀಗೆ- ಪತಿತರು- Broken men ಎಂಬುವರು ಶತ್ರುಗಳೊಡನೆ (ಇಸ್ಲಾಮಿ ಆಕ್ರಮಣಕಾರರೊಡನೆ) ಹೋರಾಡಿ ಸೋತು, ಗುಲಾಮರಾಗಿ, ತಪ್ಪಿಸಿಕೊಂಡು ಬಂದವರು. ಅವರು ಆಗ ಬೌದ್ಧ ಮತ ಸೇರಿರಲಿಕ್ಕೆ ಸಾಕು. ಬೌದ್ಧರು ಬ್ರಾಹ್ಮಣರನ್ನು ಗೌರವಿಸದಿದ್ದ ಕಾಲ. ಬ್ರಾಹ್ಮಣರ ಸರ್ವಸ್ವ ಸಂಸ್ಕೃತಿಯನ್ನು ಇವರು ದ್ವೇಷಿಸಿದ್ದರಿಂದ, ಇವರೂ ಅವರನ್ನು ತಿರಸ್ಕರಿಸಿದರು. ದೂರವಿಟ್ಟರು. ಇದು ಅಶೋಕನ ತನಕ ನಡೆದು, ಶುಂಗನ ಕಾಲಾನಂತರ ಬ್ರಾಹ್ಮಣರು ಪ್ರಬಲರಾದರು.’ (Dr.Ambedkar A True Aryan, Koenrad Elst, p 31, 32, 33, Voice of India)

6. ‘ಯಾರೆಲ್ಲ ಬಲಾತ್ಕಾರವಾಗಿ ಇಸ್ಲಾಂಗೆ ಮತಾಂತರಗೊಂಡಿದ್ದಾರೋ, ಅವರಿಗೆಲ್ಲ ನಾನು ಹೇಳುವುದು. ನಿಮ್ಮನ್ನು ಮೂಲವಾಹಿನಿಗೆ ಹಿಂದುಗಳು ಸ್ವಾಗತಿಸುವಂತೆ ಮಾಡುತ್ತೇವೆ.’ (ಧನಂಜಯ್ ಕೀರ್. Ambedkar P.399)

7. ‘ಕಮ್ಯುನಿಸ್ಟರನ್ನು ನಂಬಬೇಡಿ. ನಾನು ಅವರ ದೃಢ ಶತ್ರು. ಅವರು ಕೂಲಿಗಾರರನ್ನು ತಮ್ಮ ವಕ್ರ ರಾಜಕಾರಣಕ್ಕಾಗಿ ಶೋಷಿಸುತ್ತಾರೆ.’ (Ambedkar P.163)

8. ‘ಇಸ್ಲಾಂ, ಈಸಾಯಿ ಮತಗಳನ್ನು ಅವಲಂಬಿಸಿ ಎಂದು ನಾನೆಂದೂ ಹೇಳುವುದಿಲ್ಲ. ನನ್ನ ಮಾತಿಗೆ ವಿರುದ್ಧವಾಗಿ ಯಾರಾದರೂ ಮತಾಂತರಗೊಂಡರೆ, ಮೋಸ ಹೋಗುತ್ತಾರಾಗಿ, ಅದಕ್ಕೆ ನಾನು ಜವಾಬುದಾರನಲ್ಲ.’ (ಬರಹಗಳು, ಭಾಷಣಗಳು, ಸಂಪುಟ 3, ಪು.105)

ಅಂಬೇಡ್ಕರರು ಯಾವತ್ತೂ ಹಿಂದೂ ಧರ್ಮವನ್ನ ಹೀಯಾಳಿಸಿಲ್ಲ, ಆದರೆ ಕಾಲಾನಂತರದಲ್ಲಾದ ಬದಲಾವಣೆ ಹಾಗು ಜಾತೀಯತೆ ಎಂಬ ವಿಷದ ಬಗ್ಗೆ ರಚನಾತ್ಮಕ ಟೀಕೆಯನ್ನ ಅಂಬೇಡ್ಕರರು ಮಾಡಿದ್ದರೆ ಹೊರತು ಈಗಿನ ಲದ್ದಿಜೀವಿಗಳ ರೀತಿಯಲ್ಲಿ ಹಿಂದೂ ಧರ್ಮವನ್ನ, ಧರ್ಮಗ್ರಂಥಗಳನ್ನ, ದೇವರುಗಳನ್ನ ಬಾಯಿಗೆ ಬಂದಂತೆ ಬಾಬಾಸಾಹೇಬರು ಎಂದೂ ಬೈದಿರಲಿಲ್ಲ

ಆದರೆ ಇಂದು ಅಂಬೇಡ್ಕರರ ಹೆಸರು ಹೇಳಿಕೊಂಡು ಜಾತೀಯತೆಯನ್ನ ಹೋಗಲಾಡಿಸುತ್ತೇವಂತ ನಿಂತಿರುವ ಸೋಗಲಾಡಿಗಳು ನಿಜವಾಗಿಯೂ ಜಾತೀಯತೆಯ ನಿರ್ಮೂಲನೆಗೆ ಶ್ರಮವಹಿಸುವುದಕ್ಕಿಂತ ದಲಿತರನ್ನ ಅಸ್ಪೃಶ್ಯರನ್ನ “ನೀವು ದಲಿತರು, ನೋವು ಅಸ್ಪೃಶ್ಯರು” ಅಂತ ಅವರ ಮನಸ್ಸಿನಲ್ಲಿ ಕೀಳರಿಮೆ ಹುಟ್ಟಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರಷ್ಟೇ.

ಎಲ್ಲಿಯವರೆಗೆ ಅಂಬೇಡ್ಕರರನ್ನ ಹಾಗು ಅವರ ಬರಹಗಳನ್ನ ಶುದ್ಧ ಮನಸ್ಸಿನಿಂದ ಅರ್ಥ ಮಾಡಿಕೊಳ್ಳಲು ಇವರು ಪ್ರಯತ್ನಿಸುವುದಿಲ್ಲವೋ ಅಲ್ಲಿಯವರೆಗೆ ಇವರು ಹಿಂದೂ ವಿರೋಧಿಗಳಾಗೇ ಉಳಿಯುತ್ತಾರೆ ಹೊರತು ಸಮಾಜದ ಏಳಿಗೆಯ ಬಗ್ಗೆ ಈ ಮೂರ್ಖರಿಂದ ನಾವೇನೂ ನಿರೀಕ್ಷಿಸಲು ಸಾಧ್ಯವಿಲ್ಲ.

– Vinod Hindu Nationalist

Tags

Related Articles

Close