ಪ್ರಚಲಿತ

ಬಿಗ್ ಬ್ರೇಕಿಂಗ್!!! ಎಲ್ಲಾ ಹಗರಣಗಳ ಅಮ್ಮ ಈ ಹಗರಣ!!! ಸೋನಿಯಾ ಗಾಂಧಿ ಸರಕಾರ ತನ್ನ ಚುನಾವಣಾ ಪೂರ್ವ ವರ್ಚಸ್ಸನ್ನು ಉಳಿಸಿಕೊಳ್ಳಲು ಬರೋಬ್ಬರಿ 11 ಹಗರಣಗಳನ್ನು ಹೇಗೆ ಮುಚ್ಚಿ ಹಾಕಿತ್ತು ಗೊತ್ತಾ?

ಯುಪಿಎ ಸರಕಾರದ ಅವಧಿಯಲ್ಲಿ ನಡೆದ ಹನ್ನೊಂದು ಮಹಾ ಹಗರಣಗಳ ಬಗ್ಗೆ ಮಾಜಿ ಮಹಾಲೇಖಪಾಲರು(ಸಿಎಜಿ) ಬಹಿರಂಗಪಡಿಸಿದ್ದಾರೆ. ಇದು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ನಡೆದ ಇದುವರೆಗೆ ಬಹಿರಂಗವಾಗದ ಹಗರಣ ಎಂದೇ ಬಣ್ಣಿಸಲಾಗಿದೆ. ಸೋನಿಯಾ ಗಾಂಧಿ ಸರಕಾರ ಹನ್ನೊಂದು ಹಗರಣಗಳನ್ನು ಮರೆಮಾಚುವಲ್ಲಿ ಯಶಸ್ವಿಯಾಗಿದೆ ಎಂದು ಅವರು ವಿವರಿಸಿದ್ದಾರೆ.

ಮಾಜಿ ಮಹಾಲೇಖಪಾಲಾರಾಗಿರುವ ಆರ್.ಬಿ. ಸಿಂಗ್ ಅವರು ರಿಪಬ್ಲಿಕ್ ಜೊತೆ ಮಾತಾಡಿ, ಈ ಹಗರಣಗಳ ಬಗ್ಗೆ ಹೇಳಿದ್ದು, ಇಡೀ ದೇಶದಲ್ಲೇ ಸಂಚಲನ ಸೃಷ್ಟಿಸಿದೆ. ಆರ್.ಬಿ. ಸಿನ್ಹಾ ಪ್ರಕಾರ ಯುಪಿಎ ಸರಕಾರದ ಅವಧಿಯಲ್ಲಿ ನಡೆದ 11 ಹಗರಗಳ ಬಗ್ಗೆ ಸಿಎಜಿ ಆಡಳಿತ ಮಂಡಳಿಗೆ ವರದಿ ಸಲ್ಲಿಸಿದ್ದು, ಈ ವರದಿ ಬಹಿರಂಗಗೊಳ್ಳದಂತೆ ಮನಮೋಹನ್ ಸಿಂಗ್ ಸರಕಾರ ಪ್ರಭಾವ ಬೀರಿದೆ. ಆದರೆ ಈ ಹಗರಣಗಳನ್ನು ಬಹಿರಂಗಪಡಿಸಲು ಇದು ಸೂಕ್ತ ಸಮಯವಲ್ಲ ಎಂದು ವಿವರಿಸಿದ್ದಾರೆ. ಯುಪಿಎ ಸರಕಾರ 2014ರ ಚುನಾವಣೆಯ ಅವಧಿಯಲ್ಲಿ ಚುನಾವಣೆಯ ಮೇಲೆ ಪ್ರಭಾವ ಬೀಳಬಹುದೆಂದು ಈ ವರದಿಯ ಉಲ್ಲೇಖಿತ ಅಂಶಗಳನ್ನು ಬಹಿರಂಗವಾಗದಂತೆ ಮುಚ್ಚಿ ಹಾಕಿದೆ ಎಂದು ವಿವರಿಸಿದ್ದಾರೆ.

ಆರ್.ಬಿ. ಸಿನ್ಹಾ ಅವರು 2ಜಿ ಹಗರಣ ಬೆಳಕಿಗೆ ಬರಲು ಆರ್‍ಬಿ ಸಿನ್ಹಾ ಅವರ ಪಾತ್ರವಿದ್ದು, ಇವರು ಪ್ರಧಾನಿ ಕಾರ್ಯಾಲಯದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು. ಈಗ 11 ಹಗರಣಗಳ ಬಗ್ಗೆ ತಿಳಿಸಿದ ಸಿನ್ಹಾ ಈ ಬಗ್ಗೆ ವಿವರವಾಗಿ ತಿಳಿಸಲು ಇದು ಸೂಕ್ತವಾದ ಸಮಯವಲ್ಲ ಎಂದಿರುವ ಅವರು ಟೆಲಿಕಮ್ಯುನಿಕೇಶನ್ ನ್ಯೂನ್ಯತೆಯ ಬಗ್ಗೆ ವಿವರಿಸಿದ್ದಾರೆ.

ಯುಪಿಎ ಸರಕಾರವಿದ್ದ ಸಂದರ್ಭದ 11 ಹಗರಣಗಳ ಬಗ್ಗೆ ವರದಿ ಮಂಡಿಸಿದ್ದರೂ ಸಹ ವರದಿ ಸಲ್ಲಿಕೆಯಾಗದಂತೆ ಯುಪಿಎ ಸರಕಾರ ಪ್ರಭಾವ ಬೀರಿದೆ. ವಂಚನೆ ಮತ್ತು ಅಕ್ರಮ ಸಂಪಾದನೆಯ ಬಗ್ಗೆ ಸುಳಿವು ಸಿಗದಂತೆ ಮಾಡಲಾಗಿದೆ ಎಂದು ಅವರು ಗಂಭೀರ ಆರೋಪವನ್ನು ಮಾಡಿದ್ದಾರೆ.

ತನ್ನ ವರದಿಯ ಮೇಲೆ ಯುಪಿಎ ಸರಕಾರ ಪ್ರಭಾವ ಬೀರಿದೆ ಎಂದಿರುವ ಅವರು ಸಿಎಜಿ ಕಚೇರಿಯಲ್ಲಿ ವಂಚನೆಯ ಮೂಲಕ ವರದಿಗಳನ್ನು ತಿರುಚಲಾಗಿದ್ದು,
ಕೆಲವೊಂದು ಹೆಸರುಗಳನ್ನು ತೆಗೆದುಹಾಕಲಾಗಿದೆ. ಅಲ್ಲದೆ ಕೆಲವೊಂದು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಮಾಜಿ ಸಿಎಜಿ ಶಶಿಕಾಂತ್ ಶರ್ಮಾ ಅವರು ಒಳ್ಳೆಯ ಸ್ವಭಾವದವರಗಿದ್ದು, ಶರ್ಮಾ ಅವರಿಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಸಿಎಜಿ ಮೇಲೆ ಪ್ರತಿಬಾರಿಯೂ ರಾಜಕೀಯ ಪ್ರಭಾವ, ಒತ್ತಡ ಹೇರಲಾಗುತ್ತಿತ್ತು ಎಂದಿದ್ದಾರೆ.

ಆರ್.ಬಿ. ಸಿನ್ಹಾ ಅವರು ಆಡಿಟ್ ವರದಿಗಳ ಮೇಲೆ ಪ್ರಮುಖ ಪಾತ್ರವಹಿಸಿದ್ದಾರೆ. 2010ರ ಯುಪಿಎ ಅವಧಿಯಲ್ಲಿ 2ಜಿ ಹಗರಣದ ಮೊತ್ತ 1.76 ಲಕ್ಷ ಕೋಟಿ ರೂ
ಅಂದಾಜಿಸಿ ಮಾಹಿತಿ ನೀಡಿದ್ದರು. ತನ್ನ ಅಧಿಕಾರವಧಿ ಮುಕ್ತಾಯದ ನಂತರ ಸಿನ್ಹಾ ಅವರ ಹುದ್ದೆಯನ್ನು ಮೀರಾ ಸ್ವರೂಪ್ ತೆಗೆದುಕೊಂಡಿದ್ದರು ಎಂದು ಹೇಳಿಕೆ
ನೀಡಿದ್ದಾರೆ.

ಸಾಕಷ್ಟು ಹಗರಣಗಳ ಮೂಲ ಸುದ್ದಿಯಾಗುತ್ತಲೇ ಇರುವ ಇರುವ ಕಾಂಗ್ರೆಸ್ ಸರಕಾರ ತನ್ನ ಅವಧಿಯಲ್ಲಿ ಮತ್ತೆ ಹನ್ನೊಂದು ಹಗರಣಗಳು ನಡೆದಿವೆ ಎಂದು ಆರ್.ಬಿ. ಸಿನ್ಹಾ ಬಹಿರಂಗಪಡಿಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆ ಹನ್ನೊಂದು ಹಗರಣಗಳು ಯಾವುದು, ಹಗರಣದ ಮೊತ್ತವೆಷ್ಟು, ಈ ಹಗರಣದಲ್ಲಿ ಯಾರೆಲ್ಲಾ ಪಾಲ್ಗೊಂಡಿದ್ದಾರೆ ಎಂಬ ಬಗ್ಗೆ ಸಾಕಷ್ಟು ಕುತೂಹಲ ಉಂಟಾಗಿದೆ. ಕಾಂಗ್ರೆಸ್‍ನ ಭ್ರಷ್ಟ ಮುಖದ ಒಂದೊಂದೇ ಅನಾವರಣಯಾಗುತ್ತಲೇ ಬರುತ್ತಿದೆ.

Source : Sonia Gandhi Scams Revealed

-ಚೇಕಿತಾನ

Tags

Related Articles

Close