ಗೌರಿ ಲಂಕೇಶ್‍ಗೆ ಪಿಸ್ತೂಲ್‍ನಿಂದ ಗುಂಡು ಸಿಡಿಸಿ ಕೊಂದ ಹಂತಕನ ಮುಖದ ಸ್ಪಷ್ಟ ಚಿತ್ರಣವನ್ನು ಎಸ್‍ಐಟಿ ಪತ್ತೆ ಹಚ್ಚಿದೆ. ಈಕೆಯನ್ನು ನಕ್ಸಲರು ಹೆಚ್ಚಾಗಿ ಬಳಸುವ 7.65 ಎಂಎಂ ಪಿಸ್ತೂಲ್‍ನಿಂದ ಕೊಂದಿರುವುದರಿಂದ ಈಕೆಯ ಕೊಲೆಯನ್ನು ನಕ್ಸಲರೇ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್‍ನನ್ನು ಹತ್ಯೆ ನಡೆಸಲಾಗಿತ್ತು. ಹತ್ಯೆ ನಡೆಸಿದ ವೇಳೆ ಗೌರಿ ಮನೆಯ ಸಿಸಿಟಿವಿಯಲ್ಲಿ ದಾಖಲಾದ ಚಿತ್ರಣವನ್ನು ತಂತ್ರಜ್ಞಾನದ
ನೆರವಿನಿಂದ ಮತ್ತಷ್ಟು ಸ್ಪಷ್ಟಗೊಳಿಸಲಾಗಿದೆ. ಇದರಿಂದಾಗಿ ಹಂತಕನ ಮುಖಚಹರೆಯನ್ನು ಗುರುತಿಸಲು ಎಸ್‍ಐಟಿಗೆ ಸಾಧ್ಯವಾಗಿದೆ.
ಗೌರಿ ತಮ್ಮ ಮನೆಯ ಗೇಟು ತೆರೆದು ಮನೆಯ ಕಡೆಗೆ ತಿರುಗುತ್ತಾರೆ. ಈ ವೇಳೆ ಆಕೆ ಆಯುಧ ಹಿಡಿದ ಹಂತಕನ ಕಡೆಗೆ ತಿರುಗಿದ್ದಾರೆ. ಇದೇ ಸಂದರ್ಭವನ್ನು
ಉಪಯೋಗಿಸಿದ ಹಂತಕ ಹಂತಕ ಗುಂಡು ಹಾರಿಸುತ್ತಾನೆ. ಹಂತಕನ ಮೊದಲ ಗುಂಡು ಗೌರಿಯ ಪಕ್ಕೆಲುಬುಗಳನ್ನು ಸೀಳುತ್ತದೆ. ಎರಡನೇ ಗುಂಡು ಪಕ್ಕೆಲುಬಿಗೆ
ನಾಟುತ್ತದೆ. ಗುಂಡೇಟಿನ ನೋವಿನಿಂದ ಗೌರಿ ಎರಡು ಹೆಜ್ಜೆ ಹಿಂದಕ್ಕಿಡುತ್ತಾರೆ. ನಂತರ ಒಂದೆರಡು ಸುತ್ತು ತಿರುಗಿ 3-4 ಹೆಜ್ಜೆ ಹಿಂದಕ್ಕಿಡುತ್ತಾರೆ. ಆಗ ಹಂತಕ ಇನ್ನೂ ಎರಡು ಹೆಜ್ಜೆ ಮುಂದಿಟ್ಟು ಮತ್ತೆ ಗುಂಡು ಹಾರಿಸುತ್ತಾನೆ. ಮೂರನೇ ಗುಂಡು ಗುರಿ ತಪ್ಪುತ್ತದೆ. ನಾಲ್ಕನೇ ಗುಂಡು ಆಕೆಯ ಬೆನ್ನಿನ ಮೂಲಕ ಪ್ರವೇಶಿಸಿ ಎದೆಯನ್ನು ಸೀಳಿ ಹೊರಬರುತ್ತದೆ. ಮೂರನೇ ಗುಂಡು ತಾಗಿದ ಬಳಿಕ 30-60 ಸೆಕೆಂಡ್‍ಗಳ ಕಾಲ ಆಕೆ ಬದುಕಿರಬಹುದು ಅಷ್ಟೆ ಎಂದು ಸಿಸಿ ಟಿವಿಯಲ್ಲಿ ದಾಖಲಾಗಿದೆ ಎಂದು ಪತ್ರಿಕೆಯೊಂದು ವರದಿ ಮಾದಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಭೇದಿಸಲು ಸ್ಕಾಟ್‍ಲ್ಯಾಂಡ್ ಯಾರ್ಡ್‍ನ ವಿಧಿ ವಿಜ್ಞಾನ ತಜ್ಞರು ತಾಂತ್ರಿಕ ನೆರವು ನೀಡುತ್ತಿದ್ದಾರೆ. ಸ್ಕಾಟ್‍ಲ್ಯಾಂಡ್ ಪೆÇಲೀಸರು ಅಡ್ವಾನ್ಸ್ ಸಾಫ್ಟ್‍ವೇರ್ ಹೊಂದಿದ್ದಾರೆ. ಗೌರಿ ಹತ್ಯೆಯಲ್ಲಿ ಸಿಕ್ಕಿರುವ ಸಿಸಿಟಿವಿ ದೃಶ್ಯಗಳನ್ನು ಸ್ಪಷ್ಟವಾಗಿ ಕಾಣುವಂತೆ ಮಾಡುವುದೂ ಸೇರಿದಂತೆ ಉನ್ನತ ಮಟ್ಟದ ತಾಂತ್ರಿಕ ನೆರವು ಪಡೆಯಲಾಗುತ್ತಿದೆ. ಹೆಲ್ಮೆಟ್ ಒಳಗಿನಿಂದಲೂ ಮುಖಚಹರೆ ಸ್ಪಷ್ಟವಾಗಿ ದಾಖಲಿಸುವ ತಂತ್ರಜ್ಞಾನ ಸ್ಕಾಟ್‍ಲ್ಯಾಂಡ್ ಪೊಲೀಸರ ಬಳಿ ಇದೆ. ಈ ಆಧಾರದಲ್ಲಿ ಹಂತಕನ ಮುಖದ ಚಿತ್ರಣವನ್ನು ಪಡೆಯಲು ಪೊಲೀಸರಿಗೆ ಸಾಧ್ಯವಾಗಿದೆ.
7.65 ಎಂಎಂ ಪಿಸ್ತೂಲ್ ಬಳಕೆ!!
ಎಫ್‍ಎಸ್‍ಎಲ್‍ನ ಪ್ರಾಥಮಿಕ ವರದಿ ಎಸ್‍ಐಟಿ ಕೈ ಸೇರಿದೆ. ಈ ಹತ್ಯೆ ಕೂಡ 7.65 ಎಂಎಂ ಪಿಸ್ತೂಲಿನಿಂದಲೇ ನಡೆದಿದೆ ಎನ್ನುವುದನ್ನು ವರದಿ ಖಚಿತಪಡಿಸಿದೆ.
ಆದರೆ ಎಂ.ಎಂ.ಕಲ್ಬುರ್ಗಿ ಮತ್ತು ಗೌರಿ ಹತ್ಯೆಗೆ ಬಳಸಿದ ಗುಂಡಿನ ಮಾದರಿಯ ತನಿಖೆ ನಡೆಸುತಿದ್ದಾರೆ. ಇವರ ಹತ್ಯೆಗೆ ಬಳಸಿರುವ ಪಿಸ್ತೂಲ್ ನಕ್ಸಲರು ಬಳಸುವ
ಮಾದರಿಯದ್ದಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. 7.65 ಎಂಎಂ ಪಿಸ್ತೂಲ್‍ನಿಂದ ಗುಂಡು ಹಾರಿಸಲಾಗಿದೆ. ಈ ಮಾದರಿಯ ಬಂದೂಕನ್ನು ನಕ್ಸಲರು ಬಳಸುವುದು ಹೆಚ್ಚು. ಆದ್ದರಿಂದ ಗೌರಿ ಹತ್ಯೆಯಲ್ಲಿ ನಕ್ಸಲರ ಕೈವಾಡ ಜಾಸ್ತಿ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಹಂತಕ ಯಾರೆಂದು ಗೊತ್ತಾಗಲಿ!
ಗೌರಿಯನ್ನು ಕೊಂದದ್ದು ಯಾರೆಂದು ಇನ್ನು ಕೆಲವೇ ದಿನಗಳಲ್ಲಿ ಪತ್ತೆಯಾಗುವ ಸಾಧ್ಯತೆ ಇದೆ. ಈತ ಯಾರು, ಈತ ಗೌರಿಯನ್ನು ಕೊಂದ ಉದ್ದೇಶವೇನು? ಈತ ಯಾವ ಸಂಘಟನೆಗೆ ಸೇರಿದವನು? ನಕ್ಸಲೈಟ್‍ಗೂ ಈತನಿಗೂ ಇರುವ ಸಂಬಂಧವೇನು? ಈತ ಸುಪಾರಿ ಹಂತಕನೋ? ಗೌರಿಯನ್ನು ವೈಯಕ್ತಿಕ ಧ್ವೇಷದಿಂದ ಕೊಂದನೋ ಅಥವಾ ಮುಖ್ಯವಾಗಿ ಸಂಘಪರಿವಾರದ ಆಣತಿಯಂತೆ ಕೊಂದನೋ ಎಂಬ ಬಗ್ಗೆ ಪೊಲೀಸರು ಜನರಿಗೆ ಸ್ಪಷ್ಟ ಚಿತ್ರಣವನ್ನು ಕೊಡಬೇಕಾಗಿದೆ. ಯಾಕೆಂದರೆ ಪ್ರಗತಿಪರರೆಲ್ಲಾ ಯಾವುದೇ ಪ್ರಬಲ ಸಾಕ್ಷ್ಯವಿಲ್ಲದೆ ಕೊಲೆಯನ್ನು ಸಂಘಪರಿವಾರದ ತಲೆಗೆ ಕಟ್ಟುತ್ತಿದ್ದಾರೆ. ಆದ್ದರಿಂದ ಎಲ್ಲಾ ಗೊಂದಲವನ್ನು ಪೊಲೀಸರು ಆದಷ್ಟು ಬೇಗ ನಿವಾರಿಸಬೇಕಾಗಿದೆ.
ಸದ್ಯ ಎಸ್‍ಐಟಿ ಬಳಿ ಇರುವ ಸುಳಿವುಗಳ ಪ್ರಕಾರ ಈ ಕೊಲೆ ನಕ್ಸಲರೇ ರೂಪಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆದರೂ ಪ್ರಗತಿಪರರು ಇದನ್ನು ಸಂಘಪರಿವಾರದ ತಲೆಗೆ ಕಟ್ಟುತ್ತಿದ್ದಾರೆ. ಮೊನ್ನೆ ಬೆಂಗಳೂರಿನ ಸಿಟಿ ರೈಲ್ವೆ ನಿಲ್ದಾಣದಿಂದ ಸೆಂಟ್ರಲ್ ಕಾಲೇಜು ಮೈದಾನದವರೆಗೆ ನಡೆದ ರ್ಯಾಲಿಯಲ್ಲಿ `ನಾನೂ ಗೌರಿ, ನಾವೆಲ್ಲರೂ ಗೌರಿ’ ಎಂಬ ಘೋಷಣೆ ಕೂಗಿದ್ದಾರೆ. ಆ ಬಳಿಕ ನಡೆದ ಪ್ರತಿರೋಧ ಸಮಾವೇಶದಲ್ಲಿ ನರ್ಮದಾ ಬಚಾವೋ ಆಂದೋಲನದ ಮುಖ್ಯಸ್ಥೆ ಮೇಧಾ ಪಾಟ್ಕರ್ ನರೇಂದ್ರ ಮೋದಿ ಹೆಸರನ್ನು ಪರೋಕ್ಷವಾಗಿ ಉಲ್ಲೇಖಿಸಿ ಮಾತಾಡಿದ್ದರು. ಕಮ್ಯುನಿಸ್ಟ್ ಮುಖಂಡ ಸೀತಾರಾಮ ಯೆಚೂರಿ, ಸಾಹಿತಿ ದೇವನೂರು ಮಹಾದೇವ , ನಿಜಗುಣ ಸ್ವಾಮೀಜಿ, ನಿಡುಮಾಮಿಡಿ ಸ್ವಾಮೀಜಿ, ಕೆ. ನೀಲ , ಸ್ವಾಮಿ ಅಗ್ನಿವೇಶ್, ಜಿಗ್ನೇಶ್ ಸೇರಿದಂತೆ ಬಹುತೇಕ ಎಲ್ಲರ ನುಡಿಗಳಲ್ಲೂ ಗೌರಿ ಹತ್ಯೆಗೆ ಹಿಂದೂ ಮೂಲಭೂತವಾದಿಗಳೇ ಕಾರಣ ಎಂಬ ಅಭಿಪ್ರಾಯ ಕೇಳಿ ಬಂತು.
ಇನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯಂತೂ ಗೌರಿ ಹತ್ಯೆಯನ್ನು ಸಂಘಪರಿವಾರಕ್ಕೆ ಕಟ್ಟಿದ್ದರು. ಈ ದೇಶದಲ್ಲಿ ಬಿಜೆಪಿ, ಸಂಘ ಪರಿವಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವವರಿಗೆ ಉಳಿಗಾಲವಿಲ್ಲ ಎಂದರು. ಹತ್ಯೆಗೆ ಯಾರು ಕಾರಣ, ಏನು ಕಾರಣ ಎಂಬುದರ ಪ್ರಾಥಮಿಕ ಮಾಹಿತಿಯೂ ಇಲ್ಲದಿರುವಾಗ, ಪೆÇಲೀಸರು ಆ ಕೋನದಲ್ಲಿ ತನಿಖೆ ಶುರುಮಾಡುವ ಮೊದಲೇ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದು ಅವರೆಷ್ಟು ವಿಚಾರಶೂನ್ಯರು, ಪೂರ್ವಾಗ್ರಹ ಪೀಡಿತರು ಎಂಬುವುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟರು.
ಇನ್ನು ಈ ಸಿದ್ದರಾಮಯ್ಯ ಮಾತ್ರ ಗೌರಿ ಕೊಲೆಯಲ್ಲಿ ರಾಜಕೀಯ ಲಾಭ ಲೆಕ್ಕಾಚಾರ ಮಾಡುತ್ತಿದ್ದಾರೆ. ಹೋಮ್ ಮಿನಿಸ್ಟರ್ ರಾಮಲಿಂಗಾರೆಡ್ಡಿ ಅವರು ಗೌರಿ ಹತ್ಯೆ ಪ್ರಕರಣದ ಬಗ್ಗೆ ಮಹತ್ವದ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಹಂತಕರನ್ನು ಬಂಧಿಸುವುದಾಗಿ ಮೂರು ದಿನಗಳ ಮುಂಚೆ ಹೇಳಿದ್ದರು. ಆದರೆ ಪ್ರಕರಣದ ಬಗ್ಗೆ ಯಾವ ಸುಳಿವೂ ಕೂಡಾ ಸಿಗದಿದ್ದ ಸಂದರ್ಭ ಹೇಳಿದ ಅವರ ಮಾತನ್ನು ನೋಡಿದಾಗ ರೆಡ್ಡಿ ಸುಳ್ಳು ಹೇಳುತ್ತಿದ್ದಾರೆಂದು ಅಂದಾಜಿಸಬಹುದು.
ವಿಚಾರ ವ್ಯಾಧಿಗಳು ಗೌರಿ ತನಿಖೆ ಶೀಘ್ರವಾಗಿ ನಡೆದು ಹಂತಕ ಸಿಕ್ಕಿಬೀಳಲಿ ಎನ್ನುವ ಬದಲು ಮೋದಿಗೆ ಧಿಕ್ಕಾರ ಕೂಗಿದ್ದು ಹಾಸ್ಯಾಸ್ಪದವೆನಿಸಿತ್ತು. ಈ ಎಲ್ಲ ಬೆಳವಣಿಗೆ ನೋಡಿದರೆ ಒಂದಂತೂ ಸ್ಪಷ್ಟವಾಗುತ್ತದೆ. ಗೌರಿ ಲಂಕೇಶ್ ಹತ್ಯೆ ಇಲ್ಲಿ ಇವರಿಗೆ ಕೇವಲ ನೆಪ ಮಾತ್ರ. ಎಲ್ಲರಿಗೂ ಬೇಕಿರುವುದು ತಮ್ಮ ರಾಜಕೀಯ ಮತ್ತು ವಿಚಾರಗಳ ಬೇಳೆ ಬೇಯಿಸಿಕೊಳ್ಳುವುದು ಮಾತ್ರ. ಆದರೆ ಎಸ್‍ಐಟಿ ತನಿಖೆ ಕೊನೆಗೊಂಡಾಗ ಮಾತ್ರ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗುವ ಸಾಧ್ಯತೆ ಇದೆ.
Source :Original Source Link
-Chekitana