ಪ್ರಚಲಿತ

ಬಿಗ್ ಬ್ರೇಕಿಂಗ್!!! ನಕ್ಸಲರನ್ನು ಬಿಟ್ಟು ಸನಾತನ ಸಂಸ್ಥೆಯ ಮೇಲೆ ಗೌರೀ ಲಂಕೇಶ್ ಹತ್ಯೆಯ ಆರೋಪವನ್ನು ಹೊರಿಸಿತೇ ಸರಕಾರ?!

ಗೌರಿ ಲಂಕೇಶ್ ಹತ್ಯೆಯನ್ನು ಭೇದಿಸಲು ವಿಫಲವಾದ ಎಸ್‍ಐಟಿ ತಲೆಮರೆಸಿಕೊಂಡಿರುವ ವ್ಯಕ್ತಿಗಳ ತಲೆಗೆ ಫಿಕ್ಸ್ ಮಾಡಿಸಿಕೊಂಡು ಕೈ ತೊಳೆದುಕೊಳ್ಳಲು
ಮುಂದಾಗಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಯಾಕೆಂದರೆ ಗೌರಿ ಲಂಕೇಶ್ ಹತ್ಯೆಯಲ್ಲಿ ನಕ್ಸಲೈಟ್ಸ್‍ಗಳ ಕೈವಾಡದ ಕುರಿತು ಶಂಕೆ ಇದ್ದರೂ, ಆ ದಿಕ್ಕಿನಲ್ಲಿ ತನಿಖೆ ನಡೆಸದೆ ಹರಕೆಯ ಕುರಿ ಹುಡುಕುತ್ತಿದ್ದಾರೆಯೇ ಎಂಬ ಶಂಕೆ ಮೂಡಲು ಕಾರಣವಾಗಿದೆ.

ಇದೀಗ ದೃಶ್ಯವಾಹಿನಿಯೊಂದು ವರದಿ ಮಾಡಿದ ಪ್ರಕಾರ ಗೌರಿ ಲಂಕೇಶ್ ಹತ್ಯೆಯಲ್ಲಿ ಸಾರಂಗ್ ಅಕೋಳ್ಕರ್ ಎಂಬಾತನ ಪಾತ್ರವಿದ್ದು, ಈತನಿಗೆ ಜಯಪ್ರಕಾಶ್,
ಪ್ರವೀಣ್ ಲಿಂಕರ್ ಸಾಥ್ ನೀಡಿದ್ದಾನೆ ಎಂದು ಶಂಕಿಸಿ ವರದಿ ಮಾಡಿದೆ. ಈ ಮೂವರ ಬಗ್ಗೆ ಎಸ್‍ಐಟಿ ಸಿಬಿಐ ಮತ್ತು ಇತರ ತನಿಖಾ ಸಂಸ್ಥೆಯಲ್ಲಿ ಮಾಹಿತಿ ಕೇಳಿದೆ. ಈ ಮೂವರು ನೇಪಾಳದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.

ಪನ್ಸಾರೆ, ದಾಬೋಲ್ಕರ್ ಹತ್ಯೆ ಮಾದರಿಯಲ್ಲೇ ಗೌರಿ ಲಂಕೇಶ್ ಹತ್ಯೆ ನಡೆಸಲಾಗಿದೆ. ಈ ಹತ್ಯೆಯನ್ನು ಸಾರಂಗ್ ಅಕೋಳ್ಕರ್ ಎನ್ನುವಾತ ನಡೆಸಿರುವ ಸಾಧ್ಯತೆ ಇದ್ದು, ಸಾರಂಗ್‍ನನ್ನು ಬಂಧಿಸಿದರೆ ಉಳಿದ ಪ್ರಕರಣಗಳನ್ನೂ ಭೇದಿಸಲು ಸಾಧ್ಯವಿದೆ ಎನ್ನುವುದು ಎಸ್‍ಐಟಿ ವಾದ. ಇಷ್ಟೆಲ್ಲಾ ವಿಚಾರಗಳನ್ನು ನೋಡಿದಾಗ ಗೌರಿ ಹಂತಕ ಇನ್ನೂ ಸಿಕ್ಕಿಲ್ಲ, ಎಸ್‍ಐಟಿ ಇನ್ನೂ ತನಿಖೆ ನಡೆಸುತ್ತಲೇ ಇದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಯಾಕೆಂದರೆ ಸಾರಂಗ್ ಅಕೋಳ್ಕರ್, ಜಯಪ್ರಕಾಶ್ ಹಾಗೂ ಪ್ರವೀಣ್ ಲಿಂಕರ್ ಎಲ್ಲಿದ್ದಾರೆಂಬ ಮಾಹಿತಿ ಯಾರಲ್ಲೂ ಇಲ್ಲ. ಅವರು ಬದುಕಿದ್ದಾರೆಯೋ, ಸತ್ತಿದ್ದಾರೆಯೋ ಎಂಬ ಮಾಹಿತಿಯೂ ಇಲ್ಲ. ಒಟ್ಟಾರೆ ನಿಗೂಢವಾಗಿರುವ ವ್ಯಕ್ತಿಗಳ ಮೇಲೆ ಹತ್ಯೆ ಆರೋಪವನ್ನು ಕಟ್ಟಿ ಬಿಟ್ಟು ಕೈತೊಳೆದುಕೊಳ್ಳಲು ರಾಜ್ಯ ಸರಕಾರ ಸಿದ್ದವಾಗಿದೆಯೇ ಎಂಬ ಪ್ರಶ್ನೆ ಮೂಡಿದೆ. ಒಟ್ಟಿನಲ್ಲಿ ಸಾರಂಗ್ ಅಕೋಳ್ಕರ್ ಯಾವುದಾದರೂ ಸಂಘಟನೆಯಲ್ಲಿದ್ದರೆ ಆ ಸಂಘಟನೆಯನ್ನು ನಿರ್ನಾಮ ಮಾಡಲು ಸಿದ್ದರಾಮಯ್ಯ ಸರಕಾರ ಭರ್ಜರಿ ಪ್ಲಾನ್ ಮಾಡಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ನಕ್ಸಲವಾದ, ಕೌಟುಂಬಿಕ ಕಲಹ, ಆಸ್ತಿ, ಸ್ಥಳೀಯ ಜಗಳ ಮುಂತಾದ ಎಲ್ಲ ಆಯಾಮಗಳ ಬಗ್ಗೆ ಆಳವಾದ ತನಿಖೆ ನಡೆಸದೆ
ಇನ್ನೊಂದು ಆಯಾಮದಲ್ಲಿ ತನಿಖೆ ನಡೆಸಿ ಒಂದಷ್ಟು ರಾಜಕೀಯ ಲಾಭಪಡೆಯಲು ಸರಕಾರ ಯತ್ನಿಸುತ್ತಿರುವುದು ಈ ಎಲ್ಲಾ ಘಟನೆಗಳೂ ಸಾಕ್ಷಿ ಒದಗಿಸಿದೆ.

ಒಟ್ಟಾರೆ ಈ ಪ್ರಕರಣದ ನಿಖರ ತನಿಖೆ ನಡೆಸದೆ ದಿನದೂಡುತ್ತಾ ಇರುವುದರಿಂದ ಇದರಲ್ಲಿ ಒಂದು ದೊಡ್ಡ ರಾಜಕೀಯ ಹುನ್ನಾರ ಅಡಗಿದೆ ಎಂಬ ಮಾತುಗಳೂ
ಕೇಳಿಬರುತ್ತದೆ. ಇದರಿಂದ ಸರಕಾರಕ್ಕೆ ಆಗುವ ಲಾಭದಿಂದಾಗಿಯೇ ಸೂಕ್ತವಲ್ಲದ ರೀತಿಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಪೆÇಲೀಸರು ಹತ್ಯೆಯ ದಿನ ಹತ್ಯೆಗಾಗಿ ಉಪಯೋಗಿಸಲಾಗಿದ್ದ ಪಿಸ್ತೂಲನ್ನು ವಿಕಾಸ ಖಂಡೇಲವಾಲ್ ಮತ್ತು ಮನೀಷ ನಾಗೋರಿ ಎಂಬಿಬ್ಬರು ಅಕ್ರಮ ಶಸ್ತ್ರ ಮಾರಾಟಗಾರರಿಂದ ತಮ್ಮ ವಶಕ್ಕೆ ತೆಗೆದುಕೊಂಡಿದ್ದರು ಎಂಬ ಮಾಹಿತಿ ಇದೆ. ಇದರ ಬಗ್ಗೆ ಬ್ಯಾಲೆಸ್ಟೀಕ್ ವರದಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಆದರೂ ಆರೋಪಿಗಳ ವಿರುದ್ಧ ಅಪರಾಧವನ್ನು ದಾಖಲಿಸದೆ ಜಾಮೀನಿನ ಮೇಲೆ ಬಿಡಲಾಯಿತು. ಇದರ ಬಗ್ಗೆ ಯಾವುದೇ ಮಾಧ್ಯಮದವರಾಗಲೀ, ಪ್ರಗತಿಪರರರಾಗಲೀ ಮಾತಾಡಲೇ ಇಲ್ಲ.

ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗ ಶಾಲೆ (ಫಾರೆನ್ಸಿಕ್ ಲ್ಯಾಬ್) ಯವರು ನೀಡಿದ ವರದಿಯ ಪ್ರಕಾರ ಪಾನ್ಸಾರೆ ಹತ್ಯೆಗಾಗಿ 2 ಪಿಸ್ತೂಲ್‍ಗಳನ್ನು
ಉಪಯೋಗಿಸಲಾಗಿತ್ತು. ಅದರಲ್ಲಿ ಒಂದು ಪಾನ್ಸಾರೆ ಹತ್ಯೆಯ ಮೊದಲು ಅಂದರೆ 20 ಆಗಸ್ಟ್ 2013 ರಂದು ದಾಬೋಲ್ಕರ್ ಹತ್ಯೆಗಾಗಿ ಉಪಯೋಗಿಸಲಾಗಿತ್ತು.
ದಾಬೋಲ್ಕರ್ ಹತ್ಯೆಗಾಗಿ ಒಂದೇ ಪಿಸ್ತೂಲನ್ನು ಉಪಯೋಗಿಸಲಾಗಿತ್ತು ಎಂದಾದರೆ ಪೆÇಲೀಸರ ವಶದಲ್ಲಿದ್ದ ಪಿಸ್ತೂಲ್ ಪಾನ್ಸಾರೆ ಹತ್ಯೆಗಾಗಿ ಹೊರಗೆ ಹೋದದ್ದು ಹೇಗೆ ಮತ್ತೆ ಅದೇ ಪಿಸ್ತೂಲ್ ಪೆÇಲೀಸರ ಬಳಿ ಸೇರಿದ್ದು ಹೇಗೆ ಎಂಬ ಪ್ರಶ್ನೆಗೆ ಇಂದಿಗೂ ಉತ್ತರವಿಲ್ಲ. ಆದ್ದರಿಂದ ತನಿಖಾ ಸಂಸ್ಥೆಗಳು ಸರಿಯಾದ ತನಿಖೆ ನಡೆಸದೆ ಹಿಂದೂನಿಷ್ಠರನ್ನು ಬಲಿಗೆ ಹಾಕಲು ಸರಕಾರ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆಯೇ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.

ಕರ್ನಾಟಕದಲ್ಲಿ ಡಾ. ಚಿತ್ತರಂಜನ ಮತ್ತು ತಿಮ್ಮಪ್ಪ ನಾಯಿಕ್ ಎಂಬಿಬ್ಬರ ಹತ್ಯಾ ಆರೋಪಿಗಳು ಇಂದಿಗೂ ಪತ್ತೆಯಾಗಿಲ್ಲ; ಆದರೆ ಈ ಬಗ್ಗೆ ಸರಕಾರ ಇನ್ನೂ ನಿಖರ ತನಿಖೆ ನಡೆಸಿಲ್ಲ ಅಲ್ಲದೆ ಸರಕಾರಕ್ಕೆ ಇದರ ಬಗ್ಗೆ ಆಸಕ್ತಿಯೂ ಇಲ್ಲ, ಈ ಬಗ್ಗೆ ಯಾರೂ ಕೇಳುವುದೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಸುಳ್ಳು ಮತ್ತು ಮನಬಂದಂತಹ ಆರೋಪಗಳನ್ನು ಮಾಡಿ ಪೆÇಲೀಸರ ತನಿಖೆಯ ದಿಕ್ಕು ತಪ್ಪಿಸುವುದು ಮತ್ತು ಅದರಿಂದ ಹಿಂದೂ ಸಂಘಟನೆಗಳ ಹೆಸರನ್ನು ಹಾಳುಗೆಡವಿ ರಾಜಕೀಯ ಲಾಭ ಪಡೆಯುವ ಹುನ್ನಾರದಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ನಿರತವಾಗಿದೆ ಎಂಬ ಗುಮಾನಿ ಹಿಂದಿನಿಂದಲೂ ಮೂಡಿದ್ದು ಇದೀಗ ಆ ಅನುಮಾನ ದಟ್ಟವಾಗುವ ಕಾಲ ಸನ್ನಿಹಿತವಾಗಿದೆ ಎನ್ನುವ ಶಂಕೆ ಮೂಡಿದೆ.

-ಚೇಕಿತಾನ

Tags

Related Articles

Close