ಪ್ರಚಲಿತ

ಬಿಗ್ ಬ್ರೇಕಿಂಗ್!!! ಮದ್ಯದ ದೊರೆ ವಿಜಯ್ ಮಲ್ಯ ಬಂಧನ!

ಕೊನೆಗೂ ವಿಜಯ್ ಮಲ್ಯನ ಬಂಧನದ ಸುದ್ದಿ ಹೊರಬಿದ್ದಿದೆ! ಮೂರು ವರುಷಗಳಿಂದ ತಲೆಮರೆಸಿಕೊಂಡಿದ್ದ ವಿಜಯ್ ಮಲ್ಯ ಲಂಡನ್ ನಲ್ಲಿ ಬಂಧನಕ್ಕೊಳಗಾಗಿದ್ದಾರೆ! ಲಂಡನ್ ಪೋಲಿಸರಿಂದಲೇ ಬಂಧಿಸಲ್ಪಟ್ಟ ವಿಜಯ್ ಮಲ್ಯನ ಬಂಧನದಿಂದಾಗಿ ಕೋಟಿಗಟ್ಟಲೇ ಸಾಲವನ್ನು ಕೊಟ್ಟಿದ್ದ ಬ್ಯಾಂಕುಗಳಿಗೆ ಸಮಾಧಾನವಾಗಿದೆಯೆಂಬುದು ಸುಳ್ಳಲ್ಲ!

ಬರೋಬ್ಬರಿ ಸಾಲ! ಭಾರತದ ಬ್ಯಾಂಕುಗಳಿಗೆ ಶೂಲ!

ಕಿಂಗ್ ಫಿಷರ್ ಎಂಬ ಲಿಕ್ಕರ್ ಉದ್ಯಮವನ್ನು ಪ್ರಾರಂಭ ಮಾಡಿ ಯಶಸ್ಸು ಗಳಿಸಿದ್ದ ಉದ್ಯಮಿ ವಿಜಯ್ ಮಲ್ಯ, ತದನಂತರ ವಿಮಾನಗಳನ್ನೂ ಕೊಂಡುಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಗಳಿಸಿದ್ದು ನಿಜವಾದರೂ, ಜನರಿಗೆ ಕುಡಿಸಿದ್ದು ಜಾಸ್ತಿಯಾಯಿತೋ ಅಥವಾ ತಾನೇ ಕುಡಿದದ್ದು ಅತಿಯಾಯಿತೋ, ಒಟ್ಟಿನಲ್ಲಿ ಕೊನೆಕೊನೆಗೆ ತನ್ನದೇ ಕಂಪೆನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೂ ಸಂಬಳ ಕೊಡಲಿಕ್ಕಾಗದಷ್ಟು ದಿವಾಳಿ ಎದ್ದಿದ್ದ ವಿಜಯ್ ಮಲ್ಯ ಭಾರತೀಯ ಬ್ಯಾಂಕುಗಳಿಂದ ಸಾಲ ತೆಗೆದುಕೊಂಡಿದ್ದು ಬರೋಬ್ಬರಿ ಒಂಭತ್ತು ಸಾವಿರ ಕೋಟಿ ರೂಪಾಯಿಗಳು!

ಭಾರತದಲ್ಲಿ ದಿವಾಳಿ ಎದ್ದಿದ್ದೇನೆ ಬಿಟ್ಟು ಬಿಡ್ರೋ ಎಂದಿದ್ದ ವಿಜಯ್ ಮಲ್ಯ ಲಂಡನ್ನಿನಲ್ಲಿ ಹೆಂಡತಿ ಮಕ್ಕಳ ಹೆಸರಿನಲ್ಲಿ ಆರಾಮಾಗಿಯೇ ದಿನ ಕಳೆಯುತ್ತಿದ್ದರೂ ಯಾರೂ ಪ್ರಶ್ನೆ ಮಾಡಲಿಕ್ಕಾಗದ ರಾಷ್ಟ್ರೀಯ ಮಟ್ಟದಲ್ಲಿ ಕಾನೂನಿನ ತೊಡಕಾಗಿದ್ದರಿಂದ ಇಷ್ಟು ದಿನವೂ ಬಂಧನಕ್ಕೊಳಗಾಗಿರಲಿಲ್ಲ!!

2016 ರ ಮಾರ್ಚ್ ತಿಂಗಳಲ್ಲಿಯೇ ಲಂಡನ್ನಿಗೆ ಓಡಿದ್ದ ಮಲ್ಯ ತದನಂತರ ಅಲ್ಲಿಂದಲೇ ‘ನನ್ನ ಮೇಲಿರುವ ಎಲ್ಲಾ ಆಪಾದನೆಯೂ ಸುಳ್ಳು’ ಎಂದ ರೀತಿಗೆ ಕೇಂದ್ರ ಸರಕಾರ ಸಾಲ ಕೊಟ್ಟ SBI ಬ್ಯಾಂಕಿಗೆ ಸರಿಯಾಗಿಯೇ ತರಾಟೆ ತೆಗೆದುಕೊಂಡಿತ್ತು.

ಹರಸಾಹಸ ಮಾಡಿ ಮಲ್ಯನ ಬಂಧನಕ್ಕೆ ಬಲೆ ಹಾಕಿದ್ದ ಕೇಂದ್ರ ಸರಕಾರ ಇತ್ತಿಚೆಗಷ್ಟೇ ಲಂಡನ್ನಿನ ಬ್ರಿಟಿಷ್ ಕ್ರೌನ್ ಪ್ರಾಸಿಕ್ಯೂಷನ್ ಸರ್ವೀಸ್ ಗೆ ಮಲ್ಯನ ದೇಶದ್ರೋಹ ಹಾಗೂ ಸಾಲದ ಮೊತ್ತದ ಪ್ರತಿ ದಾಖಲೆಯನ್ನೂ ಸಾಕ್ಷಿ ಸಮೇತ ರವಾನಿಸಿತ್ತು. ಈ ಹಿಂದೆಯೂ ಸಹ ಮಲ್ಯನ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಕೇಳಿಕೊಂಡಿದ್ದ ಭಾರತದ ಸರಕಾರಕ್ಕೆ ಸಾಕ್ಷಿ ಒದಗಿಸುವಂತೆ ಕೇಳಿದ್ದ ಲಂಡನ್ನಿನ ಸರಕಾರ ಈಗ ತಾನಾಗಿಯೇ ಮಲ್ಯನ ಬಂಧನಕ್ಕೆ ಸಹಾಯ ಮಾಡಿರುವುದು ಅಚ್ಛೇ ದಿನ್ ನನ್ನು ಸಾಬೀತು ಪಡಿಸಿದೆ.

ಇತ್ತೀಚೆಗಷ್ಟೇ CBI ಹಾಗೂ Enforcement Directorate ವಿಜಯ್ ಮಲ್ಯ ಬರೋಬ್ಬರಿ 6,027 ಕೋಟಿ ರೂಪಾಯಿಗಳನ್ನು ಹೊರದೇಶಗಳಿಗೆ ರವಾನೆ
ಮಾಡಿದ್ದನ್ನು ಇತ್ತೀಚಿಗಷ್ಟೇ ಬಹಿರಂಗಪಡಿಸಿದ್ದಲ್ಲದೇ, ಯುಎಸ್, ಯುಕೆ, ಫ್ರಾನ್ಸ್ ಹಾಗೂ ಐರ್ಲ್ಯಾಂಡ್ ಗಳಿಗೆ ರವಾನಿಸಿದ್ದ ದಾಖಲೆಯನ್ನೂ ತೆಗೆದಿದ್ದರು.

ಈಗ ಇವೆರಡೂ ಆಯೋಗಗಳು ಮಲ್ಯನ ಮೇಲೆ ಚಾರ್ಜ್ ಶೀಟ್ ತಯಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ಸ್ ನ್ಯಾಯಾಲಯಕ್ಕೆ ಹಾಜರು ಪಡಿಸಲು ಕಾಯುತ್ತಿದೆ ಎಂಬುದು ಸಮಾಧಾನಕರ ಸಂಗತಿ!

ಮೋದಿ ಪವರ್! ತಗೊಳ್ಳಿ ಬರ್ನಾಲು!!

ಅಷ್ಟೇ! ಮಲ್ಯ ಲಂಡನ್ನಿಗೆ ಓಡಿ ಹೋದದ್ದನ್ನೇ ಮೋದಿ ಸರಕಾರದ ದೌರ್ಬಲ್ಯ ಎಂದು ಪಕಪಕನೆ ನಕ್ಕು ಸುಸ್ತಾಗಿ ರಸ್ತೆಯ ಮೇಲೆ ಉರುಳಾಡುತ್ತಿದ್ದ ಕಾಂಗ್ರೆಸ್ ನಾಯಕರು ಹಾಗೂ ಅವರ ಚೇಲಾಗಳ ಎದೆಯಲ್ಲಿ ಬೆಂಕಿ ಬಿದ್ದಿದೆ ಈಗ! ಪಾಪ! ನರೇಂದ್ರ ಮೋದಿ ಭ್ರಷ್ಟಾಚಾರ ಮಾಡಿದ ಯಾರನ್ನೂ ಬಿಡೋದಿಲ್ಲ, ಜಗದ ಯಾವ ಮೂಲೆಯಲ್ಲಡಗಿದ್ದರೂ ಎಂಬುದಕ್ಕೆ ಹೊಸ ಸೇರ್ಪಡೆ ವಿಜಯ್ ಮಲ್ಯ!

ಮಲ್ಯನ ಮೇಲೆ ಅಕ್ರಮ ನೋಟು ರವಾನೆ, ಭ್ರಷ್ಟಾಚಾರ, ವಂಚನೆ ಎಂದು ಹಲವಾರು ದಾವೆಗಳಿದ್ದು ಈಗ ಅದನ್ನೆಲ್ಲ ಬಯಲಿಗೆಳೆಯುವ ಸಮಯ ಬಂದಿರುವುದರಿಂದ ‘ಕೈ’ ಗಳಿಗೆಲ್ಲ ಮೈ ಚಳಿ ಬಿಡುವುದು ಬಹುತೇಕ ಖಚಿತವಾಗಿದೆ.

ತಕ್ಷಣವೇ ಸಿಕ್ಕಿತಾ ಜಾಮೀನು?!

ಸದ್ಯಕ್ಕೆ ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ಸ್ ನಿಂದ ಜಾಮೀನು ದೊರಕಿದ್ದು ಮಲ್ಯನನ್ನು ಸದ್ಯದಲ್ಲಿಯೇ ಜೈಲು ಪಾಲಾಗಿಸುವ ಎಲ್ಲಾ
ಸೂಚನೆಗಳೂ ಲಭ್ಯವಾಗಿದೆ.

– ಪೃಥ ಅಗ್ನಿಹೋತ್ರಿ

Tags

Related Articles

Close