ಪ್ರಚಲಿತ

ಬಿಗ್ ಬ್ರೇಕಿಂಗ್!! ಸ್ವಂತ ಖರ್ಚಿನಲ್ಲಿ ಇಫ್ತಿಯಾರ್ ಕೂಟ ಏರ್ಪಡಿಸಿದ್ದ ಸಿಎಂ?! ಆರ್ ಟಿ ಐ ನಲ್ಲಿ ಮಾಹಿತಿ ಬಹಿರಂಗ!!

ಸಿದ್ಧರಾಮಯ್ಯನವರೇ!! ಏನಿದೇನು?!

ಈಗೇನು ಹೇಳ್ತಾರೆ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ?! ಪ್ರತೀ ಸಲವೂ ಕೂಡ ಕೇಳಿದ್ದಕ್ಕೆಲ್ಲ ದುರಂಹಂಕಾರದ ಮಾತುಗಳನ್ನೇ ಆಡುವ ಮುಖ್ಯಮಂತ್ರಿಗಳಿಗೆ ಬಹುಷಃ ಕೇಳಿದರೆ ತಕ್ಕ ಉತ್ತರ ಸಿಗೋದಿಲ್ಲ ಎಂಬುದು ಖಾತ್ರಿಯಾದದ್ದೇ ಸಾರ್ವಜನಿಕರು ಆರ್ ಟಿ ಐ ಮೊರೆ ಹೋಗ್ತಿದ್ದಾರೆ! ಅದಕ್ಕೆ ತಕ್ಕನಾಗಿ, ಸ್ಫೋಟಕ ಮಾಹಿತಿಯೊಂದು ಬಯಲಾಗಿದೆ!

ಕಳೆದ ನಾಲ್ಕು ವರ್ಷಗಳಿಂದ ಇಫ್ತಾರ್ ಔತಣಕೂಟವನ್ನು ಏರ್ಪಡಿಸಿದ್ದು ಸ್ವಂತ ದುಡ್ಡಿನಲ್ಲಿ?!

ಹೌದು ಸ್ವಾಮಿ! ಸಾರ್ವಜಜನಿಕರೊಬ್ಬರು ‘ಮುಖ್ಯಮಂತ್ರಿಗಳ ಇಫ್ತಾರ್ ಕೂಟದ ಬಗ್ಗೆ ಪ್ರಶ್ನಿಸಿ ಆರ್ ಟಿ ಐ ಗೆ ಪ್ರಶ್ನೆ ಕೇಳಿ ಅರ್ಜಿ ಸಲ್ಲಿಸಿದ್ದರು!” ಅದಕ್ಕೆ, ಆರ್ ಟಿ ಐ ನೀಡಿರುವ ಮಾಹಿತಿ ಪ್ರಕಾರ, ಪ್ಯಾಲೇಸ್ ಗ್ರೌಂಡಿನಲ್ಲಿ ಏರ್ಪಡಿಸಿದ್ದ ಇಫ್ತಾರ್ ಕೂಟಕ್ಕೆ ಸ್ವತಃ ಮುಖ್ಯಮಂತ್ರಿಗಳೇ ತಮ್ಮ ಸ್ವಂತ ಹಣದಿಂದ ಖರ್ಚು ಹಾಕಿಸಿ ಮುಸಲ್ಮಾನ ಪ್ರೇಮ ಮೆರೆದಿದ್ದಾರೆಂಬುದು ಸಾಬೀತಾಗಿರುವುದಲ್ಲದೇ, ಇಲ್ಲಿಯವರೆಗೂ ಇಫ್ತಾರ್ ಬಿಟ್ಟು ಬೇರಾವ ಕೂಟವನ್ನೂ ಏರ್ಪಡಿಸಿಲ್ಲ ಎಂಬ ಸತ್ಯವೊಂದು ಬಯಲಾಗಿದೆ!”

ಅಬ್ಬಾ! ಸ್ವಂತ ಖರ್ಚಿನಲ್ಲಿ ಇಫ್ತಾರ್ ಏರ್ಪಡಿಸುವ ಸಿದ್ಧರಾಮಯ್ಯನವರೇ!! ಏನಿದೇನು?!

ಮಾತು ಮಾತಿಗೆ ನಾನೊಬ್ಬ ಹಿಂದೂ! ನನ್ನ ಹೆಸರಿನಲ್ಲಿ ಇದ್ದಾನೆ ರಾಮ ರಾಮ ಶ್ಯಾಮ! ಎಂದೆಲ್ಲ ಪುಂಗಿ ಬಿಟ್ಟು, ಈಗ ಆರ್ ಟಿ ಐ ಸ್ವತಃ ನಿಮ್ಮ ನಿಜಮುಖ ಬಯಲು ಮಾಡುತ್ತಿದೆಯಲ್ಲ?! ಕಳೆದ ನಾಲ್ಕು ವರ್ಷಗಳಿಂದಲೂ ಸಹ, ತಮ್ಮದೇ ದುಡ್ಡಲ್ಲಿ ಇಫ್ತಾರ್ ಮಾಡಿ ಬಿರಿಯಾನಿ ಮೆಲ್ಲುವ ನೀವು ಹಿಂದೂ ಔತಣ ಕೂಟಗಳನ್ನು ಯಾಕೆ ಏರ್ಪಡಿಸಿಲ್ಲ?! ಅದೂ ಬಿಡಿ! ಕ್ರೈಸ್ತರ ಉದ್ಧಾರಕರಂತೆ ಬಿಂಬಿಸಿಕೊಳ್ಳುವ ನೀವು ಸ್ವತಃ ಕ್ರೈಸ್ತರಿಗೂ ಔತಣ ಕೂಟ ನೀಡದಿರುವುದು ಎಂತಹ ವಿಪರ್ಯಾಸ?!

ಕಳೆದ ನಾಲ್ಕು ವರ್ಷಗಳಲ್ಲಿ ಮಾಡಿದ್ದೇನು ಸ್ವಾಮಿ?!

ಪ್ರತೀ ಬಾರಿಯೂ ಕೂಡ, ಮುಸಲ್ಮಾನರನ್ನೇ ಓಲೈಸುವ ನೀವು ಯಾವ ಪುರುಷಾರ್ಥಕ್ಕೆ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದ್ದೀರೋ?! ಇದೇ ನೀವು, ಈ ಹಿಂದೆಲ್ಲೋ, “ಗೋಮಾಂಸ ಸೇವನೆಯನ್ನು ನಾನೂ ಮಾಡುತ್ತೇನೆ’ ಎನ್ನುವಾರ್ಥದಲ್ಲಿ ಮಾತನಾಡಿದ್ದೀರಲ್ಲ, ಅಂದರೆ, ಇಫ್ತಾರ್ ನಲ್ಲಿ ಬಿರಿಯಾನಿ ಜೊತೆ ಗೋ ಮಾತೆಯ ಕೊರಳೂ ಇತ್ತು ಎನ್ನಿ?!

ಕಳೆದ ನಾಲ್ಕು ವರ್ಷಗಳಲ್ಲಿ, ಅಪರಾಧ ಮಾಡಿದ ಮುಸಲ್ಮಾನರನ್ನೂ ನೀವು ಬಂಧಿಸಲು ಮೀನಾ ಮೇಷ ತೋರುತ್ತಿರುವುದು ನಿಮ್ಮ ಅಲ್ಪಸಂಖ್ಯಾತರ ಓಲೈಕೆಗೆ ಹಿಡಿದ ಕನ್ನಡಿಯಾದರೆ, ಹಿಂದೂ ವಿರೋಧಿ ಎನ್ಜುವುದನ್ನೂ ಸಾಬೀತು ಪಡಿಸುತ್ತಲೇ ಬಂದಿದೆ ಅಲ್ಲವೇ?! ಈಗ ಕ್ರೈಸ್ತರ ಸರದಿ! ಕ್ರಿಸ್ ಮಸ್ ಗೂ ಔತಣ ಕೂಟ ಏರ್ಪಡಿಸದ ನೀವು ಹೇಳುವುದು ಸರ್ವಧರ್ಮಗಳ ಬೀಡು ಎಂಬ ತಪ್ಪು ತಪ್ಪಾದ ನಾಡಗೀತೆಯನ್ನು!

ಈಗ ಮೌಲ್ವಿ ಅಹ್ದುಲ್ ಹಬೀಬ್ ನನ್ನೂ ಬಂಧಿಸಲು ಮೀನಾಮೇಷ ಎಣಿಸಿದ ನೀವು, ದತ್ತಮಾಲೆಧಾರಿಗಳ ಮೇಲೆ ಲಾಠಿ ಚಾರ್ಜ್ ಮಾಡಿಸಿದ್ದು ಸಾಧನೆ ಎಂದು ಕೊಂಡಿರೇ?! ದೇಶದ್ರೋಹಿ ಹೇಳಿಕೆ ನೀಡಿದ್ದಾರೆ ಎಂದು ಇದೇ ನಿಮ್ಮ ಕಾಂಗ್ರೆಸ್ ಚೇಲಾಗಳು ಉದ್ದಕ್ಕೂ ಸಂಸದರ ವಿರುದ್ಧ ತಿರುಗಿ ಬಿದ್ದು ಘೋಷಣೆ ಕೂಗಿದಿರಲ್ಲ?! ಯಾಕೆ ?! ನಿಮಗೆ ಮೌಲ್ವಿ ರಾಷ್ಟ್ರದ್ರೋಹದ ಹೇಳಿಕೆ ನೀಡಿದ್ದು ಗೊತ್ತಾಗಲಿಲ್ಲವೇ?! ಅಥವಾ ಮುಸಲ್ಮಾನ ಎಂದು ಮುದುರಿ ಕುಳಿತಿರೇ?!

ಇನ್ನೂ ಸಹ, ನಿಮ್ಮ ಮುಖವಾಡ ಬಯಲಾಗಲಿದೆ! ಸ್ವಲ್ಪ ಸಮಯವಷ್ಟೇ! ಖುದ್ದು ಸಾರ್ವಜನಿಕರೇ ನಿಮ್ಮೆಲ್ಲ ಹಗರಣಗಳನ್ನು ತಿಳಿದು ಪ್ರಕಟ ಮಾಡುತ್ತಾರೆ ಬಿಡಿ! ಅಂತೂ, ನೀವೇ ಒಪ್ಪದಿದ್ದ ಮುಸ್ಲಿಂ ಓಲೈಕೆ ಹಾಗೂ ಹಿಂದೂ ವಿರೋಧ ನೀತಿ! ಎರಡೂ ಸಾಬೀತಾಗಿದೆ! ಹ್ಯಾಪಿ ಬಿಲೇಟೆಡ್ ಮಿಲಾದ್ ಸಾರ್!

ಕೃಪೆ : ಪಬ್ಲಿಕ್ ಟಿವಿ

– ಪೃಥು ಅಗ್ನಿಹೋತ್ರಿ

Tags

Related Articles

Close