ಅಂಕಣಪ್ರಚಲಿತ

ಬಿಗ್ ಶೇಪ್ ಔಟ್!!! ಭಾರತವನ್ನು ಅಮೇರಿಕಾದಲ್ಲಿ ಅವಮಾನಿಸಿದ್ದಕ್ಕಾಗಿ, ಸ್ಮೃತಿ ಇರಾನಿ ರಾಹುಲ್ ಗಾಂಧಿಯನ್ನು ಯದ್ವಾ-ತದ್ವಾ ರುಬ್ಬಿದ ಪರಿ ನೋಡಿ!!!

ಅಮೆರಿಕಾಕ್ಕೆ ತೆರಳಿ ಕ್ಯಾಲಿಫೋರ್ನಿಯಾದ ಬರ್ರ್ಕ್‍ಲೇ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾಡಿದ ಎಡವಟ್ಟು ಭಾಷಣವನ್ನು ಕೇಂದ್ರ ಸಚಿವೆ ಸ್ಮøತಿ ಇರಾನಿ ಟೀಕಿಸಿದ್ದಾರೆ. ರಾಹುಲ್ ಭಾರತ ಮತ್ತು ಭಾರತೀಯರನ್ನು ಅವಮಾನಿಸಿದ್ದಾರೆ. ಒಬ್ಬ ವಿಫಲ ರಾಜಕಾರಣಿ ತನ್ನ ರಾಜಕೀಯ ವೈಫಲ್ಯವನ್ನು ಅಮೆರಿಕಾದಲ್ಲಿ ಅನಾವರಣಗೊಳಿಸಿ ಸೋಲಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಹುಲ್‍ನ ಚುನಾವಣಾ ರ್ಯಾಲಿಯಂಥಾ ಭಾಷಣವನ್ನು ಇಡೀ ದೇಶದಾದ್ಯಂತ ಖಂಡಿಸಲಾಗುತ್ತಿದೆ. ಈಗಾಗಲೇ ಟ್ವಿಟರ್‍ನಲ್ಲಿ ಜನರು ರಾಹುಲ್ ಭಾಷಣವನ್ನು
ಟೀಕಿಸಲಾರಂಭಿಸಿದ್ದು, ಮುಂದಿನ ಬಾರಿ ರಾಹುಲ್‍ನನ್ನು ಅಮೆರಿಕಾಕ್ಕೆ ಕಳುಹಿಸಬೇಡಿ ಎಂದು ಸಲಹೆ ನೀಡಿದ್ದಾರೆ. ಈ ನಡುವೆ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವೆ ಸ್ಮøತಿ ಇರಾನಿ, ರಾಹುಲ್ ಮಾಡಿದ ಭಾಷಣವನ್ನು ಟೀಕಿಸಿದ್ದಾರೆ.

ಭಾರತದ ಬಗ್ಗೆ ರಾಹುಲ್ ಗಾಂಧಿ ಈಗ ಚಿಂತನೆ ನಡೆಸಲು ಹತ್ತಿದ್ದಾರೆ. ಅವರು ತಮ್ಮ ಎಲ್ಲ ಪ್ರಶ್ನೆ, ಸಂದೇಹಗಳಿಗೆ ಉತ್ತರ ಬೇಕೆಂದರೆ ಬಿಜೆಪಿ ಪಕ್ಷವು ಯಾವುದೇ
ವೇದಿಕೆಯಲ್ಲೂ ಅವರಿಗೆ ತಕ್ಕ ಉತ್ತರ ನೀಡಲು ಸಿದ್ಧವಾಗಿದೆ. ಅದು ರಾಷ್ಟ್ರೀಯ ಮಟ್ಟದಲ್ಲಾದರೂ ಆಗಬಹುದು ಅಥವಾ ಅಂತಾರಾಷ್ಟ್ರೀಯ ವೇದಿಕೆಯಲ್ಲಾದರೂ
ಆಗಬಹುದು. ನಾವು ಅವರಿಗೆ ಉತ್ತರ ನೀಡುತ್ತೇವೆ. ಏನೇ ಆಗಲಿ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಟೀಕಿಸುವುದು ಯಾರಿಗೇ ಆಗಲಿ ಶೋಭೆ ತರುವುದಿಲ್ಲ ಎಂದು ಇರಾನಿ ಅವರು ಕಾಂಗ್ರೆಸ್ ಯುವರಾಜನಿಗೆ ಪಂಥಾಹ್ವಾನ ನೀಡಿದರು.

ಕುಟುಂಬ ರಾಜಕಾರಣವನ್ನು ಸಮರ್ಥಿಸಿದ್ದ ರಾಹುಲ್, ತನ್ನ ದೇಶದಲ್ಲಿ ಎಲ್ಲೆಡೆ ವಂಶ ರಾಜಕಾರಣ ನಡೆಯುತ್ತಿದೆ ಎಂದು ಹೇಳಿದ್ದರು. ಭಾರತದ ಪ್ರಜಾಪ್ರಭುತ್ವ
ಅರ್ಹತೆಯ ಆಧಾರದಲ್ಲಿ ನಡೆಯುವುದೇ ಹೊರತು ವಂಶ ರಾಜಕಾರಣದಿಂದಲ್ಲ. ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಬಿಜೆಪಿ ಅಧ್ಯಕ್ಷರು ಕೂಡ ಯಾವುದೇ ವಂಶ ರಾಜಕಾರಣದ ಹಿನ್ನೆಲೆಯಿಂದ ಬಂದವರಲ್ಲ ಎಂದು ಸಚಿವೆ ಸ್ಮೃತಿ ಇರಾನಿ ಹೇಳಿದರು.

ದೇಶದ ಜನರ ಜತೆ ಸಂಪರ್ಕ ಸಾಧಿಸಲು ವಿಫಲರಾದ ಬಳಿಕ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಾತನಾಡಲು ಹೋಗಿ ತಮ್ಮದೇ ಮಾನ ಕಳೆದುಕೊಂಡಿರುವುದು ಮಾತ್ರ ಅಚ್ಚರಿಯ ಸಂಗತಿ. ರಾಹುಲ್ ಕಾರ್ಯತಂತ್ರಗಳೆಲ್ಲವೂ ವಿಫಲವಾಗಿವೆ. ಅವರ ಪಕ್ಷವನ್ನು ಈ ದೇಶ ತಿರಸ್ಕರಿಸಿದೆ ಎಂಬ ಕಾರಣಕ್ಕೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ವಿಫಲ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ ಎಂದ ಸ್ಮೃತಿ ತಾವು ಸರಕಾರದ ಪ್ರತಿನಿಧಿಯಾಗಿ ಮಾತಾಡುತ್ತಿಲ್ಲ, ಬಿಜೆಪಿ ಪ್ರತಿನಿಧಿಯಾಗಿ ಮಾತಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ವಂಶ ರಾಜಕಾರಣ ಭಾರತದಲ್ಲಿ ಹಾಸುಹೊಕ್ಕಾಗಿದೆ ಎಂಬ ರಾಹುಲ್ ಹೇಳಿಕಯೇ ಅಸಂಬದ್ಧ. ವಂಶ ರಾಜಕಾರಣದ ಯಾವ ಉತ್ತರಾಧಿಕಾರಿಗಳೂ ಸಹಕಾರಿ ಒಕ್ಕೂಟ ತತ್ವದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುವುದಿಲ್ಲ. ಅದರಿಂದಾಗಿಯೇ ಭಾರತದ ಸ್ಥಿತಿ ಹೀಗಾಗಿದೆ. ‘2012ರಲ್ಲಿ ಪಕ್ಷದ ತಲೆಗೆ ಅಹಂಕಾರ ಅಡರಿತು. ಇದುವೇ ಅವನತಿಗೆ ನಾಂದಿಯಾಯಿತು. ಹೀಗಾಗಿ 2014ರ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿತು’ ಎಂಬ ರಾಹುಲ್ ಮಾತು ‘ಆಕರ್ಷಕ’. ‘ಸೋನಿಯಾ ಗಾಂಧಿ ನಾಯಕತ್ವದಲ್ಲಿ ಪಕ್ಷಕ್ಕೆ ಸೊಕ್ಕು ತಲೆಗೇರಿತು ಎಂದು ಕಾಂಗ್ರೆಸ್ ಉಪಾಧ್ಯಕ್ಷರು ಸಾರ್ವಜನಿಕವಾಗಿಯೇ ಒಪ್ಪಿಕೊಂಡಿರುವುದು ಸೋಜಿಗ. ಅವರ ತಪೆÇ್ಪಪ್ಪಿಗೆ ಪಕ್ಷದಲ್ಲಿ ಆತ್ಮಾವಲೋಕನಕ್ಕೆ ನಾಂದಿ ಹಾಡಲಿ ಎಂದು ಸಚಿವೆ ತಿಳಿಸಿದರು.

ರಾಹುಲ್ ಗಾಂಧಿ ಪ್ರಧಾನಿಯನ್ನು ಹೀಯಾಳಿಸಿದ್ದರಲ್ಲಿ ಅಚ್ಚರಿಯೇನಿಲ್ಲ. ಅದು ನಿರೀಕ್ಷಿತ. ಆದರೆ ದೇಶದ ಜನರ ಜತೆ ಸಂಪರ್ಕ ಸಾಧಿಸಲು ವಿಫಲರಾದ ಬಳಿಕ
ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಾತನಾಡಲು ಹೋಗಿ ತಮ್ಮದೇ ಮಾನ ಕಳೆದುಕೊಂಡಿರುವುದು ಮಾತ್ರ ಅಚ್ಚರಿಯ ಸಂಗತಿ. ರಾಹುಲ್ ಗಾಂಧಿ ಅವರಂತಹ
ವ್ಯಕ್ತಿಗಳಿಗೆ ಪ್ರಧಾನಿ ಮೋದಿ ಅವರ ಕುರಿತಾಗಲೀ ಅಥವಾ ಜಮ್ಮು ಮತ್ತು ಕಾಶ್ಮೀರದಂತಹ ವಿಚಾರಗಳ ಬಗ್ಗೆಯಾಗಲಿ ಮಾತನಾಡುವ ನೈತಿಕತೆಯೇ ಇಲ್ಲ. ಕಾಶ್ಮೀರದ ಜನತೆಯ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ರಾಹುಲ್ ಗಾಂಧಿ ಮಾತನಾಡಲಿ ಎಂದು ಸ್ಮøತಿ ಇರಾನಿ ತಿಳಿಸಿದರು.

ಕುಟುಂಬ ರಾಜಕಾರಣದ ವಿಫಲ ರಾಜಕಾರಣಿಯೊಬ್ಬ ದೇಶದ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾನೆ. ಅದಕ್ಕಾಗಿ ದೇಶದ ಬಗ್ಗೆ ಸುಳ್ಳುಗಳನ್ನು ಬಿತ್ತರಿಸುತ್ತಿದ್ದಾರೆ. ಕೋಮು ರಾಜಕಾರಣವನ್ನು ಮಾಡಿಕೊಂಡು ಬರುತ್ತಿರುವ ಕಾಂಗ್ರೆಸ್ ಇಂದು ಕೋಮುವಾದಿ ಪಕ್ಷವಾಗುತ್ತಿದೆ ಇಂಥವರು ಮುಂದೆ ಪ್ರಧಾನಿಯಾಗಲು ಜನರು ಅವಕಾಶ ಕೊಡುವುದಿಲ್ಲ. ಮೋದಿ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದು, ದೇಶದ ಜನತೆ ಅವರ ಜೊತೆ ಕೈಜೋಡಿಸಿದ್ದಾರೆ. ಆದ್ದರಿಂದ ರಾಹುಲ್‍ನ ಕೆಲಸಕ್ಕೆ ಬಾರದ ಹೇಳಿಕೆಗಳಿಗೆ ಮೋದಿ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನುಡಿದರು.

-Chekitana

Tags

Related Articles

Close