ಅಂಕಣಪ್ರಚಲಿತ

ಬಿಜೆಪಿಯಿಂದ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರು ಘೋಷಿಸಿದ ಅಮಿತ್ ಷಾ..! ರಾಜ್ಯದಲ್ಲಿ ಸಂಚಲನ!

2018 ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಈಗಲೇ ಎಲ್ಲ ಪಕ್ಷಗಳು ಕಾರ್ಯತಂತ್ರವನ್ನು ರೂಪಿಸಿ ಅಗ್ನಿಪರೀಕ್ಷೆಗೆ ತಯಾರಾಗುತ್ತಿದ್ದಾರೆ. ಬಿಜೆಪಿ ಪಕ್ಷ ಕೂಡ ಅವರ ಮುಂದಿನ ಯೋಜನೆಗಳ ಕುರಿತಾಗಿ ಚರ್ಚೆಗಳನ್ನು ಪ್ರಾರಂಭ ಮಾಡಿದೆ. ಪ್ರಮುಖವಾಗಿ ಬಿಜೆಪಿ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಬಹಳವಾಗಿ ಕೇಳಿಬರುತ್ತಿತ್ತು.

ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬುದೆಂಬುದು ಬಿಜೆಪಿ ಪಕ್ಷದಲ್ಲಿ ಅಷ್ಟೇ ಅಲ್ಲದೇ ಸಾಮಾನ್ಯ ಜನರಲ್ಲೂ ಗೊಂದಲವನ್ನು ಮೂಡಿಸಿತ್ತು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಉಂಟಾಗಿದ್ದ ಗೊಂದಲಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಅವರು ತೆರೆ ಎಳೆದಿದ್ದಾರೆ. ಮೂರು ದಿವಸಗಳ ಕಾಲ ಪಕ್ಷ ಸಂಘಟನೆಗಾಗಿ ಕರ್ನಾಟಕ ರಾಜ್ಯಕ್ಕೆ ಆಗಮಿಸಿರುವ ಅಮಿತ್ ಷಾ, ಮುಂದಿನ ಮುಖ್ಯಮಂತ್ರಿ ಕರ್ಣಾಟಕದ ಬಿಜೆಪಿ ಪಕ್ಷದ ಅಧ್ಯಕ್ಷರಾದ ಬಿ ಎಸ್ ಯಡಿಯೂರಪ್ಪ ಎಂದು ಘೋಷಿಸಿದ್ದಾರೆ.

ಬಿ ಎಸ್ ಯಡಿಯೂರಪ್ಪನವರು ಒಂದು ಬಾರಿ ಉಪಮುಖ್ಯಮಂತ್ರಿಯಾಗಿಯೂ, ಎರಡು ಬಾರಿ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ಕಾರ್ಯಕ್ಷೇತ್ರವಾದ ಶಿವಮೊಗ್ಗದ ಅಭಿವೃದ್ದಿಗೆ ಮೂಲ ಕಾರಣ ಯಡಿಯೂರಪ್ಪನವರೇ ಆಗಿದ್ದಾರೆ.

ಇದೇ ವೇಳೆ ಪಕ್ಷದಲ್ಲಿರುವ ಸಮಸ್ಯೆಗಳನ್ನು ನಿವಾರಿಸಿ, ಕಾರ್ಯಕರ್ತರನ್ನು ಸಜ್ಜುಗೊಳಿಸುವ ಕೆಲಸ ಮಾಡುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಬೇಕಾಗಿದೆ ಎಂದೂ ಅವರು ಹೇಳಿದರು. ವಿವಿಧ ಸಂಸ್ಥೆಗಳು ಮಾಡಿದ ಸಮೀಕ್ಷೆಗಳ ವರದಿಯನ್ನೂ ಅಮಿತ್ ಶಾ ಅವರು ಮಂಡಿಸಲಿದ್ದಾರೆ. ಈ ವರದಿಯನ್ನು ಆಧರಿಸಿ ಮುಂದಿನ ಚುನಾವಣೆಯ ತಯಾರಿಯ ರೂಪುರೇಷೆಗಳನ್ನು ಸಿದ್ದಪಡಿಸಲಿದ್ದಾರೆ.

ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷದ ಶಾಸಕರು, ಸಂಸದರು , ಪದಾಧಿಕಾರಿಗಳ ಸಭೆ ಹಾಗೂ ಕೋರ್ ಕಮಿಟಿ ಸಭೆಯನ್ನೂ ಬಿಜೆಪಿ ಅಧ್ಯಕ್ಷರು ನಡೆಸಲಿದ್ದಾರೆ. ಆ ಸಭೆಯಲ್ಲಿ ರಾಜ್ಯವಿಧಾನಸಭೆಯ ಮುಂದಿನ ಚುನಾವಣೆಯ ಬಿಜೆಪಿ ಪಕ್ಷದ ಧ್ಯೇಯವಾದ ಮಿಷನ್ 150 ಗೆ ಕಾರ್ಯತಂತ್ರವನ್ನು ರೂಪಿಸಲಿದ್ದಾರೆ.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕುರಿತಾಗಿ ಯಡಿಯೂರಪ್ಪ ಹಾಗೂ ಈಶ್ವರಪ್ಪನವರ ನಡುವೆ ಇರುವ ಸಮರವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಅಮಿತ್ ಷಾ ಪ್ರಯತ್ನ ಪಡಲಿದ್ದಾರೆ ಅನ್ನುವ ಸುದ್ದಿಯೂ ವರದಿಯಾಗಿದೆ. ಪಕ್ಷದ ಬೆಳೆವಣಿಗೆಗೆ ಅಡ್ಡಿಯಾಗಬಹುದಾದ ವಿಚಾರಗಳ ಕುರಿತಾಗಿ ಚರ್ಚಿಸಿ ಅದನ್ನು ನಿವಾರಿಸುವ ಪ್ರಯತ್ನ ಆಗಲಿದೆ. ಈ ನಿಟ್ಟಿನಲ್ಲಿ ಬಿಜೆಪಿ ಅಧ್ಯಕ್ಷರ ಕರ್ನಾಟಕ ಭೇಟಿ ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

– ವಸಿಷ್ಠ

Tags

Related Articles

Close