ಅಂಕಣಪ್ರಚಲಿತರಾಜ್ಯ

ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ದುರಂತ ನಡೆದರೆ ಮುಖ್ಯಮಂತ್ರಿ ಕಾರಣ! ಬಿಜೆಪಿ ಆಡಳಿತವಿಲ್ಲದ ರಾಜ್ಯದಲ್ಲಿ ದುರಂತ ನಡೆದರೆ ಮೋದಿ ಕಾರಣ!

ಇದೂ ಒಂದು ದುರಂತವೇ! ಸೈದ್ಧಾಂತಿಕ ನಿಲುವುಗಳನ್ನಿಟ್ಟುಕೊಂಡು ದೇಶದ ಹಿತಕ್ಕೆ ದುಡಿಯುವ ತಾತ್ವಿಕ ಮನಸ್ಥಿತಿಯವರ ಮೇಲಿನ ಆರೋಪ ಇವತ್ತಿನದೇನಲ್ಲ ಬಿಡಿ! ಆಗೋ ಅನಾಹುತಕ್ಕೆಲ್ಲ ಶನೀಶ್ವರನೇ ಕಾರಣವೆನ್ನುವ ಹಾಗೆ, ಯಾರದೇ ಅಲ್ಪಸಂಖ್ಯಾತರ ಹತ್ಯೆ ಅಥವಾ ಪ್ರಗತಿಪರರ ಹತ್ಯೆಯಾಗಲಿ, ಅದಕ್ಕೆಲ್ಲ ಸಂಘದವರು ಅಥವಾ ಬಿಜೆಪಿಯವರೆಂಬ ಈ ಅವಿವೇಕತನದ ನಿಲುವೊಂದಿದೆಯಲ್ಲ, ಅದು ಇನ್ನೆಷ್ಟೋ ರಣಹದ್ದುಗಳಿಗೆ ಆಹಾರವನ್ನೊದಗಿಸುತ್ತೆ. ಶವವಾಗಿ ಮಲಗಿದವರ ಸುದ್ದಿಯನ್ನೇ ಹಿಡಿದು ಬೇಕಾದ ಹಾಗೆ ತಿರುಚಿ ಬಿಜೆಪಿಯವರ ಮೇಲೆ ಆರೋಪ ಮಾಡುವ ಯಾವ ಹದ್ದುಗಳಿಗೂ ಸಹ ಸಾವು ಮುಖ್ಯವಾಗಿರುವುದೇ ಇಲ್ಲ, ಬದಲಾಗಿ ಒಪ್ಪೊತ್ತಿನ ಗಂಜಿಯಷ್ಟೇ! ರಣಹದ್ದುಗಳ ಸಹವಾಸವೇ ಹಾಗೆ!

ನೆನ್ನೆಯಷ್ಟೇ ರಾಜ್ಯ ಕಂಡ ಹಿರಿಯ ಮಹಿಳಾ ಪತ್ರಕರ್ತೆ ‘ಗೌರಿ ಲಂಕೇಶ್’ ಹತ್ಯೆಯಾಗಿದೆ! ದುಷ್ಕರ್ಮಿಗಳು ಏಳು ಸುತ್ತು ಗುಂಡು ಹಾರಿಸಿದ್ದಾರೆ! ಮೂರು ಗುಂಡುಗಳು ಆಕೆಯ ಹೃದಯ ಸೀಳಿದೆ! ಸ್ಥಳದಲ್ಲಿಯೇ ಸಾವನ್ನಪ್ಪಿದ ಗೌರಕ್ಕನ ಸಾವು ಅವರದೇ ಎಡಚರರಿಗೆ ಭೂರಿ ಭೋಜನವಾಗಿದೆ ಇವತ್ತು! ಹೋಗಲಿ! ಗೌರಕ್ಕನ ಆಪ್ತ ಸ್ನೇಹಿತೆ ವಿಮಲಾ ರವರು ಪತ್ರಿಕಾ ಹೇಳಿಕೆ ಕೊಟ್ಟ ರೀತಿ ಅದೆಷ್ಟು ಅಸಂಬಧ್ದವಾದದ್ದೆಂದರೆ, ಯಾವುದೋ ಚಲನಚಿತ್ರದಲ್ಲಿ ಏಳು ಸುತ್ತು
ವೈಚಾರಿಕ ಹತ್ಯೆಯ ಸಂಕೇತವಾಗಿ ಗುಂಡು ಹಾರಿಸುತ್ತಾರೆ. ಇದು, ಒಂದು ‘identical murder’, ಬಲಪಂಥೀಯರದೇ ಎನ್ನುವುದು ಅದೆಷ್ಟು ಸರಿ?! ಸಿರಿಮನೆ
ನಾಗರಾಜ್ ರವರೂ ಸಹ ‘ನನಗನ್ನಿಸುತ್ತಿದೆ ಬಲವಾಗಿ! ಇದು ಬಲಪಂಥೀಯರದೇ ಕೆಲಸ’ ಎಂದು ಹೇಳುವ ಇಂತಹ ಬಳಗವೊಂದಿದೆಯಲ್ಲ, ಅದು ಕೊನೆಗೂ ಸಹ ಕಲಬುರ್ಗಿ ಹತ್ಯೆಯ ತರಹ ಗೌರಿಯ ಹತ್ಯೆಯನ್ನೂ ‘ಭ್ರಮಾ ಲೋಕ’ ದ ಕಥೆಯಾಗಿರಿಸಿ ಬಿಡುತ್ತದಷ್ಟೇ!!!

ತೀರಾ ಹಾಸ್ಯಾಸ್ಪದವದೇ! ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಯಾವೆಲ್ಲ ಸಮಯದಲ್ಲಿ ಕಾಂಗ್ರೆಸ್ ಭಾರತದ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿತ್ತೋ, ಆಗೆಲ್ಲ
ನಡೆದಷ್ಟು ಹತ್ಯೆ ಬಿಜೆಪಿ ಸರಕಾರ ಇರುವಾಗ ಆಗಲಿಲ್ಲ ಎಂಬುದು ಎಷ್ಟು ಜನಕ್ಕರಿವಿದೆ?! ಕರ್ನಾಟಕದಲ್ಲಿಯೂ ಸಹ, ಎರಡು ವರ್ಷದ ಹಿಂದೆ ಕಲಬುರ್ಗಿಯವರ ಹತ್ಯೆ! ಅದನ್ನೂ, ಸಿಬಿಐ ವಶಕ್ಕೆ ಒಪ್ಪಿಸಲು ಇದೇ ಕಾಂಗ್ರೆಸ್ ಸರಕಾರ ತಕರಾರು ತೆಗೆದಿದ್ದು ಸುಳ್ಳೇ?! ಅದೇ ರೀತಿ ಗೌರಿ ಲಂಕೇಶ್ ರವರ ಹತ್ಯೆಯ ವಿಚಾರಣೆಗೂ ಸಹ ನಕಾರ ಮಾಡುತ್ತಿರುವ ಇದೇ ಕಾಂಗ್ರೆಸ್ ಸರಕಾರವೊಂದರ ಆಟ ಅಂತಿತಹುದಲ್ಲ! ಆದರೂ, ಈ ಹತ್ಯೆ ಬಲಪಂಥೀಯರದ್ದೇ, ಬಿಜೆಪಿಯವರದ್ದೇ ಎಂದು ಆರೋಪಿಸುತ್ತಿರುವ ಯಾರಿಗೇ ಆದರೂ ಸಹ ನೈತಿಕ ಬಲವಿದೆಯೇ?! ಸಾಕ್ಷ್ಯವಿದೆಯಾ?! ಅಥವಾ ಯಾವ ಆಧಾರವಿದೆ?!

ಇದು ಇವತ್ತಿನ ವಿಷಯವಲ್ಲ!

ಗುಜರಾತಿನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಗೋಧ್ರಾ ಗಲಭೆಯಾಗಿದ್ದೇ ಆಗಿದ್ದು, ಅಲ್ಲಿನ ಮುಖ್ಯಮಂತ್ರಿಯನ್ನೇ ಹೊಣೆಯಾಗಿಸಿಬಿಟ್ಟರು! ಅದೂ, ಎರಡೇ ಕ್ಷಣದಲ್ಲಿ
ಮುಖ್ಯಮಂತ್ರಿಯಾಗಿದ್ದ ಮೋದಿಯವರ ವಿರುದ್ಧ ಬ್ಯಾನರ್ರು, ಫ್ಲೆಕ್ಸುಗಳನ್ನೂ ಅದೆಲ್ಲಿಂದ ತಯಾರು ಮಾಡಿದರೋ!!!

ಮಧ್ಯಪ್ರದೇಶದಲ್ಲಿ ರೈತರು ನೀರಿನ ವಿಷಯವಾಗಿ ಹೋರಾಟ ಮಾಡಿದಾಗ ಅಲ್ಲಿನ ಬಿಜೆಪಿಯ ಮುಖ್ಯ ಮಂತ್ರಿ ಕಾರಣವಾದರು! ಆದರೆ, ಕಾಂಗ್ರೆಸ್ ಕಮಂಗಿಗಳ
ಕುತಂತ್ರವೂ ಕೊನೆಗೆ ಬಯಲಾಗಿತ್ತು ಬಿಡಿ!

2015 ರಲ್ಲಿ, ಪನ್ಸಾರೆ ಹತ್ಯೆಯಾಯಿತು ಮಹಾರಾಷ್ಟ್ರದಲಿ! ಆತ ಎಡಪಂಥೀಯ! ಆಗಲೂ ಸಹ, ಮಹಾರಾಷ್ಟ್ರದ ಮುಖ್ಯಮಂತ್ರಿಯ ಕೊರಳ ಪಟ್ಟಿಯನ್ನೊಂದು
ಹಿಡಿಯಲಿಲ್ಲ ಸಮಾಜ!

ಇತ್ತೀಚೆಗೆ ನಡೆದ ಗೋರಖ್ ಪುರ ದುರಂತದಲ್ಲಿಯೂ ಅದೇ ಕಥೆ! ಯೋಗಿ ಆದಿತ್ಯನಾಥ್ ರನ್ನು ಬಲಿ ಬೀಳಿಸಲು ಹೋದ ಎಲ್ಲಾ ಎಡಪಂಥೀಯರೂ ಸಹ ಕೊನೆಗೆ
ಬೆತ್ತಲೆಯಾಗಿಯೇ ನಿಂತಿದ್ದವು!!!

ಬಿಡಿ!!! ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೇ ಅಥವಾ ಸಮಯದಲ್ಲಿಯೇ ಇಂತಹ ಕೃತ್ಯಗಳಾಗುತ್ತೆ ಎಂಬುದೇ ಎಡಪಂಥೀಯರ ವಾದವಷ್ಟೇ! ಆದರೆ, ಯಾವ
ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿರಲಿಲ್ಲವೋ, ಆಗೆಲ್ಲಾ ಆದ ಅನಾಹುತಕ್ಕೆ ಕಾರಣೀಭೂತರನ್ನಾಗಿಸಿದ್ದು ‘ಮೋದಿ’ಯನ್ನು!!!

ಉತ್ತರಪ್ರದೇಶದಲ್ಲಿ ಅಕ್ಲಕ್ ನ ಮೇಲೆ ದಾಳಿಯಾದಾಗ ಇದ್ದದ್ದು ಅಖಿಲೇಶ್ ಯಾದವ್ ರ ಸಮಾಜವಾದಿ ಪಕ್ಷ! ಅಲ್ಲಿಯೂ ಕೂಡ ಹೊಣೆಗಾರನನ್ನಾಗಿಸಿದ್ದು
ಮೋದಿಯನ್ನೇ!!

ಹೈದರಾಬಾದ್ ನ ರೋಹಿತ್ ವೆಮುಲಾ ಹತ್ಯೆಯಾದಾಗ ಇದೇ ಎಡಪಂಥೀಯರು ಜಾತಿಯನ್ನಡ್ಡ ಇಟ್ಟರು! ಮೋದಿಯನ್ನು ಹೊಣೆಯಾಗಿಸಿದರು! ಸ್ಮೃತಿ ಇರಾನಿಯನ್ನೂ ಬಿಡಲಿಲ್ಲ!

ಎರಡು ವರ್ಷಗಳ ಹಿಂದೆ ಎಂ.ಎಂ.ಕಲಬುರ್ಗಿ ಯ ಹತ್ಯೆಯಾದಾಗ ಇದ್ದಿದ್ದು ಕಾಂಗ್ರೆಸ್ಸೇ ಹೊರತು ಬಿಜೆಪಿಯಲ್ಲ! ಆಗಲೂ ಸಹ ಇದೇ ಎಡಚರರು ಪೂರ್ವಾಪರವಿಲ್ಲದೇ ಬೇಕಾ ಬಿಟ್ಟಿ ಹೇಳಿಕೆ ನೀಡಿದರು! ಮತ್ತದೇ ‘ಮೋದಿ’ಯನ್ನು ಹೊಣೆಯಾಗಿಸಿದರು!

ಈಗ?!

ಗೌರಿ ಲಂಕೇಶರ ಹತ್ಯೆಗೂ ಸಹ ‘ಮೋದಿ’ಯನ್ನೇ ದೂಷಿಸುತ್ತಿರುವ ಎಡಪಂಥೀಯರಿಗೆ ಒಂದೇ ಒಂದು ಪ್ರಶ್ನೆ! ”ನಿಮಗೆ ಒಂದು ಹೊತ್ತಿನ ಊಟಕ್ಕೂ
ಗತಿಯಿಲ್ಲದಂತಾಗಿದೆಯಾ?!” ಇವತ್ತೂ ಸಹ ‘ಇದೊಂದು ವೈಚಾರಿಕ ಹತ್ಯೆ! ಮೋದಿಯನ್ನು ಅತಿಯಾಗಿ ವಿರೋಧಿಸುತ್ತಿದ್ದರಿಂದ ಅವರ ಸಂಘ ಪರಿವಾರದವರೇ ಹತ್ಯೆ ನಡೆಸಿರುವುದು’ ಎಂದೆಲ್ಲ ಅರಚುತ್ತಿರುವ ನಿಮಗೆ, ಗೌರಿ ಲಂಕೇಶ್ ಗೆ ನಕ್ಸಲ್ ನಂಟಿತ್ತು ಎಂಬ ಅರಿವೇ ಇರಲಿಲ್ಲವಾ?! ನಂಟಿಲ್ಲವಾದರೆ ಗೌರಿಯವರೇ ಸ್ವತಃ ‘ಅದೆಷ್ಟೋ ನಕ್ಸಲರು ಶರಣಾಗಲು ಒಪ್ಪಿದ್ದಾರೆ’ ಎಂದು ಹೇಳಿಕೆ ನೀಡುತ್ತಿರಲಿಲ್ಲವಲ್ಲ?!

ವಿಷದ ಮರಕ್ಕೆ ಬೆಣ್ಣೆ ಸವರಿದರೆ ಅಮೃತ ಕೊಡುತ್ತದೆಯೇ?! ನಕ್ಸಲರನ್ನದೆಷ್ಟು ಓಲೈಸಲಿ, ದೇಶವನ್ನು ತುಂಡು ತುಂಡು ಮಾಡುತ್ತೇನೆಂದು ಹೊರಟಿದ್ದವರ ಅದೆಷ್ಟೇ ಮಕ್ಕಳೆನ್ನಲಿ, ಆಕೆ ಅದೆಷ್ಟೇ ಹಿಂದುತ್ವವನ್ನು ವಿರೋಧಿಸಿದರೂ ಸಹ, ಮುಸಲ್ಮಾನ, ಕ್ರೈಸ್ತರನ್ನು ಓಲೈಸಿದರೂ ಸಹ ಅವರಿಗೆಲ್ಲ ಆಕೆ ಒಬ್ಬ ‘ಹಿಂದೂ’ವಾಗಿಯೇ ಉಳಿಯುತ್ತಾಳೆಯೇ ವಿನಃ ಯಾವ ಸಿದ್ಧಾಂತವೂ ಸಹ ಸುಖಾಸುಮ್ಮನೆ ನಂಬಲು ಅವಕಾಶ ಮಾಡಿಕೊಡುವುದೇ ಇಲ್ಲ!

ರಾಜಕೀಯ ಹತ್ಯೆಗೆ ವೈಚಾರಿಕ ಹತ್ಯೆಯನ್ನು ನೆಪವಾಗಿಸುವುದು ಅಥವಾ ನಕ್ಸಲರ ಕುತಂತ್ರಕ್ಕೆ ಸಂಘದವರನ್ನು ನೆಪವಾಗಿಸುವುದೆಲ್ಲವೂ ಸಹ ಅಪರಾಧವೇ! ಪಾಪಾ ಕಾಣದೇ ಪುಣ್ಯ ಕಾಣದೇ, ಹಿಂದುತ್ವದ ಅಡಿಯಲ್ಲಿ ಮಾನವತಾವಾದವನ್ನು ಪ್ರತಿಪಾದಿಸಿದ ಮೋದಿಯನ್ನು ಕಾರಣೀಭೂತರನ್ನಾಗಿಸುವುದೂ ಸಹ ನೀವು ಹೇಳುವ ‘ವೈಯುಕ್ತಿಕ ಸಿದ್ಧಾಂತ’ ಗಳಿಗೆ ಮಾಡುವ ಅಪರಾಧವೇ!!!

– ತಪಸ್ವಿ

Tags

Related Articles

Close