ಪ್ರಚಲಿತ

ಬಿಜೆಪಿ ಹಿಂದುತ್ವ ಪಕ್ಷವೆಂದು ಕಾಂ‌ಗ್ರೆಸ್ ಗೆ ಮತ ಹಾಕಿದೆ! ಇಂದು ಕಣ್ಣೀರಿಟ್ಟು ಈ ಪತ್ರ ಬರೆಯುತ್ತಿದ್ದೇನೆ!

ಹೆಲೋ… ಕೈಸಾ ಗೊ… ಮಗಿರೆ… ಯಾಕೋ ನಮ್ಮ ಭಾಷೆಯನ್ನು ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡಬೇಕೆಂದು ಅನ್ನಿಸುವುದೇ ಇಲ್ಲ. ಆದರೆ ನನ್ನ ಮಾತು ಕೇವಲ ನನ್ನ ಜಾತಿಯ ಕಾಂಗ್ರೆಸ್ಸ್ ನಾಯಕರಿಗೆ ಮಾತ್ರವಲ್ಲದೆ ರಾಜ್ಯದ ಎಲ್ಲಾ ಕಾಂಗ್ರೆಸ್ ನಾಯಕರಿಗೂ ಅರ್ಥವಾಗಬೇಕೆಂದು ಕನ್ನಡದಲ್ಲಿಯೇ ಬರೆಯುತ್ತೇನೆ. ಹಾ… ಅಂದಹಾಗೆ ನಾನು ಕನ್ನಡ ಅಭಿಮಾನಿ ಕೂಡಾ.

ಖಂಡಿತಾ ಹೇಳ್ತೇನೆ ನಾನು ಮತ್ತೆ ಕಾಂಗ್ರೆಸ್ಸಿಗೆ ಓಟು ಹಾಕಬೇಕೆನ್ನುವ ಒಂಚೂರೂ ಮನಸ್ಸೂ ನನಗೆ ಬರುತ್ತಿಲ್ಲ. ಯಾಕೋ ಈ ಬಿಜೆಪಿ ಅನ್ನುವ ಪಕ್ಷ ಕೋಮುವಾದಿ ತತ್ವವನ್ನು ಅನುಸರಿಸುತ್ತಿದೆ ಎಂಬ ಕಾರಣಕ್ಕಾಗಿ ನಾನು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದೆ. ನನಗೆ ನನ್ನ ಜಾತಿಯೆಂದರೆ ಎಲ್ಲಿಲ್ಲದ ಪ್ರೀತಿ. ನನಗೆ ಎಲ್ಲಕ್ಕಿಂತ ನನ್ನ ಧರ್ಮವೇ ಮುಖ್ಯ. ನನ್ನ ಜಾತಿಯ ನಾಯಕರು ಹೆಚ್ಚಾಗಿ ಕಾಂಗ್ರೆಸ್‍ನಲ್ಲಿಯೇ ಇರುವುದರಿಂದ ನಾನೂ ಕಾಂಗ್ರೆಸ್ಸಿಗನಾದೆ. ಹೂಂ… ಅವರೇ… ನನ್ನ ಜಾತಿಯ ನಾಯಕರಾದ ಕೆ.ಜೆ.ಜಾರ್ಜ್, ಐವನ್ ಡಿಸೋಜಾ, ಆಸ್ಕರ್ ಫೆರ್ನಾಂಡೀಸ್, ಜೆ.ಆರ್.ಲೋಬೋ ಹೀಗೆ ನನ್ನ ಜಾತಿಯ ನಾಯಕರು ಎಲ್ಲಾ ಕಾಂಗ್ರೆಸ್ಸಿಗರೆ. ಸಹಜವಾಗಿಯೇ ನಾನು ಕಾಂಗ್ರೆಸ್ಸಿಗನಾದೆ. ಚರ್ಚ್‍ನಲ್ಲಿ ನನ್ನ ಧರ್ಮಗುರುಗಳೂ ಕಾಂಗ್ರೆಸ್‍ನ್ನು ಬೆಂಬಲಿಸಬೇಕೆಂದು ಹೇಳುತ್ತಿದ್ದರು. ಛೇ… ಅವರ ಮಾತು ಮೀರೋಕ್ಕಾಗುತ್ತಾ..!!!

ಆದರೆ ದೇವರಾಣೆಗೂ ನಾನು ಇನ್ನು ಮುಂದೆ ಕಾಂಗ್ರೆಸ್ ಪಕ್ಷಕ್ಕೆ ಓಟ್ ಹಾಕಲ್ಲ. ನಾನು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ
ಮತ ಹಾಕುತ್ತೇನೆ. ಕೇವಲ ಮತ ಮಾತ್ರ ಹಾಕುವುದಲ್ಲ, ಬದಲಾಗಿ ಆ ಪಕ್ಷದ ಪರವಾಗಿ ಪ್ರಚಾರಕ್ಕೂ ಇಳಿಯುತ್ತೇನೆ. ಹಾಗಂತ ನಾನು ಹಿಂದೂ ಧರ್ಮಕ್ಕೆ
ಮತಾಂತರವಾಗಿದ್ದೇನೆ ಎಂದು ಭಾವಿಸಬೇಡಿ. ನಾನು ಅಪ್ಪಟ ಕ್ರೈಸ್ತ. ಆ ಕಾರಣಕ್ಕಾಗಿಯೇ ನಾನು ಬಿಜೆಪಿಗನಾಗುತ್ತಿದ್ದೇನೆ.

ಪ್ರಿಯ ಕ್ರೈಸ್ತ ನಾಯಕರಾದ ಆಸ್ಕರ್ ಫೆರ್ನಾಂಡೀಸ್, ಕೆ.ಜೆ.ಜಾರ್ಜ್, ಐವನ್ ಡಿಸೋಜಾ ಹಾಗೂ ಜೆ.ಆರ್.ಲೋಬೋರವರೇ…

ಹೌದು. ನಿಮ್ಮನ್ನು ನಾನು ಹೃದಯದಲ್ಲಿಟ್ಟು ಆರಾಧಿಸುತ್ತಿದೆ. ಕಾರಣ ನೀವು ನನ್ನ ಜಾತಿಯವರು. ನೀವೇನೂ ಕೆಲಸ ಮಾಡದಿದ್ರೂನು ನಾನು ನಿಮ್ಮನ್ನು ಬೆಂಬಲಿಸುತ್ತಿದ್ದೆ. ಯಾಕೆಂದರೆ ನೀವು ನನ್ನ ಜಾತಿಯವರು. ನೀವು ನನ್ನ ಜಾತಿಯನ್ನು, ನನ್ನ ದೇವಾಲಯಗಳನ್ನು ಅಭಿವೃದ್ಧಿಪಡಿಸುವ ನಾಯಕರು ಎಂದು. ಆದರೆ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ನಾನು ನಿಮ್ಮನ್ನು ವಿರೋಧಿಸುತ್ತೇನೆ. ಕ್ಷಮಿಸಿ… ನಾನು ಸ್ವಲ್ಪ ಖಾರವಾಗಿಯೇ ಈ ಪತ್ರ ಬರೆಯುತ್ತಿದ್ದೇನೆ.

ಕ್ರೈಸ್ತ ನಾಯಕರು ಎಂದು ಮೀಸಲಾತಿ ಗಿಟ್ಟಿಸಿಕೊಳ್ಳುವ ನಾಯಕರೇ… ನಿಮಗೆ ನಾಚಿಕೆ, ಮಾನ, ಮರ್ಯಾದೆ ಅನ್ನೋದೆ ಇಲ್ವಾ..? ಆ ಮುಖ್ಯಮಂತ್ರಿ ಏನು
ಹೇಳುತ್ತಾನೆ, ಅದನ್ನು ಮಾಡಿಯೇ ಬಿಡೋದಾ..? ಇಷ್ಟರವರೆಗೆ ನಿಮಗೆ ನಾನು ಮತ ಹಾಕಿದ್ದು ನನ್ನ ಜಾತಿಯನ್ನು ಮೇಲಕ್ಕೆತ್ತಿ ಎಂದು. ಆದರೆ ನೀವು ಮಾಡೋದಾದ್ರೂ ಏನು..?

ಟಿಪ್ಪು ಏನು ನಿಮ್ಮಪ್ಪನಾ..? ಆ ಟಿಪ್ಪು ಎನ್ನುವ ನರ ಹಂತಕ ನಮ್ಮ ಜಾತಿಗೆ ಬಗೆದಿರುವ ದ್ರೋಹದ ಬಗ್ಗೆ ನಿಮಗೆ ಅರಿವಿದೆಯೇ..? ನಿಮಗೆ ಸ್ವಲ್ಪಾನಾದರೂ
ಇತಿಹಾಸ ತಿಳಿದಿದಿಯೇ..? ಆ ಟಿಪ್ಪು ಎನ್ನುವ ಮಹಾ ರಾಕ್ಷಸ ನಮ್ಮ ಜಾತಿಗೆ ಮಾಡಿದ ಅವಮಾನಗಳೆಷ್ಟು, ದೌರ್ಜನ್ಯಗಳೆಷ್ಟು, ಆಕ್ರಮಣಗಳೆಷ್ಟು ನಿಮಗೆ ಗೊತ್ತೇ..? ಸುಮಾರು 24ಕ್ಕಿಂತಲೂ ಅಧಿಕ ಕ್ರೈಸ್ತ ಮಂದಿರಗಳನ್ನು ಧ್ವಂಸ ಮಾಡಿದ್ದ ಟಿಪ್ಪುವಿನ ಜಯಂತಿಯನ್ನು ಮಾಡಲು ನಿಮ್ಮ ಮನಸಾಕ್ಷಿ ಹೇಗೆ ಒಪ್ಪಿಕೊಳ್ಳುತ್ತೆ. ಛೇ. ನೀವಿಷ್ಟು ಕೆಳಮಟ್ಟಕ್ಕೆ ಇಳಿಯುತ್ತೀರಿ ಎನ್ನುವುದನ್ನು ನಾನು ಭಾವಿಸಿಯೇ ಇಲ್ಲ. ನಿಮಗೆ ನಮ್ಮ ಧರ್ಮಕ್ಕಿಂತ ಹೆಚ್ಚಾಗಿ ರಾಜಕೀಯ, ಪಕ್ಷ, ಅಧಿಕಾರವೇ ಹೆಚ್ಚಾಗಿ ಹೋಯಿತಲ್ವೇ…

ಟಿಪ್ಪು ಎನ್ನುವ ಕ್ರೈಸ್ತ ವಿರೋಧಿ ಸುಮಾರು 80 ಸಾವಿರ ಕ್ರೈಸ್ತರನ್ನು ಬಂಧಿಸಿ ಶ್ರೀರಂಗ ಪಟ್ಟಣಕ್ಕೆ ಕರೆದೊಯ್ಯುವುದರ ಆ ಕರಾಳ ದಿನಗಳನ್ನು
ಮರೆಯಲಾಗುತ್ತದೆಯೇ? ಮತಾಂತರಕ್ಕೆ ಒಪ್ಪದ ಸಾವಿರಾರು ಕ್ರೈಸ್ತ ಜನಾಂಗದವರನ್ನು ಬೆಳ್ತಂಗಡಿಯ ಗಡಾಯಿಕಲ್ಲಿನಿಂದ ಕೆಳಗೆ ದೂಡಿ ಹಾಕಿ ಕೊಂದು ವಿಕೃತ
ಸಂತೋಷವನ್ನು ಮೆರೆದನಲ್ಲಾ ಆ ಮತಾಂಧ. ಆ ದುಖಃವನ್ನು ಮರೆಯೋಕ್ಕಾಗುತ್ತಾ? ನಮ್ಮ ತಾಯಂದಿರ ಸೆರಗನ್ನೇ ಉಸಿರಾಗಿಸಿದವರು ನಾವು. ಮಹಿಳೆಯರ
ರಕ್ಷಣೆಗೆ ಸದಾ ಬದ್ಧ ಎಂದು ಬೊಬ್ಬೆ ಬಿಡುತ್ತೀರಲ್ವಾ, ಅದೇ ಮಹಿಳೆಯರನ್ನು ಆ ಟಿಪ್ಪು ಮುಸಲ್ಮಾನ ಪುರುಷರನ್ನು ಬಿಟ್ಟು ಅತ್ಯಾಚಾರ ಮಾಡಿಸಿದ್ದನಲ್ಲಾ, ಆ ಕಹಿ
ಘಟನೆಯನ್ನು ಮರೆಯೋಕ್ಕಾಗುತ್ತಾ? ಹೀಗೆ ಕ್ರೈಸ್ತ ಮಹಿಳೆಯರ ಅತ್ಯಾಚಾರದ ವಿರುದ್ಧ ಪ್ರತಿಭಟಿಸಿದ್ದ ಸುಮಾರು 5 ಸಾವಿರ ನಮ್ಮ ಕ್ರೈಸ್ತ ಯುವಕರನ್ನು ಕತ್ತರಿಸಿ
ಕೊಂದನಲ್ಲಾ. ಈ ಹತ್ಯೆಯಿಂದ ರಕ್ತದಿಂದ ತುಂಬಿದ್ದ ಬಂಟ್ವಾಳ ಮಂಗಳೂರಿನ ಬಳಿಯಿರುವ ಆ ಪ್ರದೇಶ ಇಂದಿಗೂ ನೆತ್ತರ ಕೆರೆ ಎಂದೇ ಉಳಿದಿದೆ… ಅವರ
ಬಲಿದಾನವನ್ನು ಮರೆತರೆ ಅವರು ಕ್ಷಮಿಸಿಯಾರೇ..?

80 ಸಾವಿರದಷ್ಟು ಕ್ರೈಸ್ತರನ್ನು ಬಂಧಿಸಿ, ಕೊಲೆ ಮಾಡಿ, ಅತ್ಯಾಚಾರ ಮಾಡಿ, ಮತಾಂತರ ಮಾಡಿ, ಅವರಿಗೆ ಹದಿನೈದು ವರ್ಷಗಳ ಕಾಲ ಚಿತ್ರಹಿಂಸೆ ನೀಡಿದ್ದ ಆ
ಮಹಾಕ್ರೂರಿಯ ಹೆಸರು ಕೇಳುವಾಗಲೇ ಸಿಟ್ಟು ನೆತ್ತಿಗೇರುತ್ತದೆ. ಹದಿನೈದು ವರ್ಷಗಳ ನಂತರ, ಅಂದರೆ ಅವನ ಹತ್ಯೆಯ ನಂತರ ಕೇವಲ 20 ಸಾವಿರದಷ್ಟು ಕ್ರೈಸ್ತರು ಮಾತ್ರವೇ ವಾಪಾಸು ಬಂದಿದ್ದಾರೆಂದರೆ ಅವನ ಹಿಂಸಾರೂಪ ಎಂತದ್ದಿರಬಹುದು. ಅಂತದ್ರಲ್ಲಿ ಆತನ ಜಯಂತಿಯನ್ನು ಆಚರಿಸಿ, ಆತನನ್ನು ಹುಲಿ ಎಂದು ವಿಜ್ರಂಭಿಸುವ, ಬುದ್ಧಿ ಇಲ್ಲದ ನಿಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೊಡೆಯುತ್ತಿರುವ ತಾಳಕ್ಕೆ ಹೆಜ್ಜೆ ಹಾಕುತ್ತೀರಲ್ಲಾ, ನಿಮಗೆ ಸ್ವಾಭಿಮಾನ ಅನ್ನೋದೇ ಇಲ್ವಾ..? ರಾಜಕೀಯ ಪದವಿಗೋಸ್ಕರ ನಮ್ಮ ಧರ್ಮವನ್ನೇ ಮಾರಾಟ ಮಾಡೋಕ್ಕೆ ಹೊರಟಿರುವ ನಿಮ್ಮ ಷೆ0ಡತನಕ್ಕೆ ಏನನ್ನಬೇಕು..?

24ಕ್ಕೂ ಅಧಿಕ ಚರ್ಚ್‍ಗಳನ್ನು ಧ್ವಂಸ ಮಾಡಿ ಕ್ರೈಸ್ತರಿಗೆ ಇತಿಹಾಸದಲ್ಲಿ ಮತ್ತೆ ಪೂಜೆ ಮಾಡಲಾಗದ ರೀತಿಯಲ್ಲಿ ಮಾಡಲು ಯತ್ನಿಸಿದ್ದನಲ್ಲಾ, ಆತನ ಕ್ರೈಸ್ತ ವಿರೋಧಿ ನೀತಿಯ ಬಗ್ಗೆ ನಿಮಗೆ ಚೂರಾದರೂ ಅರಿವಿದೆಯಾ..? ಅನೇಕ ಕ್ರೈಸ್ತರನ್ನು ಕೊಲೆ ಮಾಡುವಾಗ ನಾವು ನಮ್ಮ ಆರಾಧ್ಯ ದೇವರು, ನಮ್ಮ ಪಾಲಿನ ಮಹಾ ಪುರುಷ ಎಂದು ಪೂಜಿಸುವ ಜೀಸಸ್ ಹಾಗೂ ಮಹಾಮಾತೆ ಮೇರಿಯನ್ನು ಅವಾಚ್ಯವಾಗಿ ನಿಂದಿಸುತ್ತಿದ್ದನಲ್ಲಾ… ನಿಮಗೆ ಈ ಇತಿಹಾಸದ ಬಗ್ಗೆ ಸ್ವಲ್ಪನಾದರೂ ಅರಿವಿದೆಯಾ..? ನಿಮಗೇನೂ ಅನ್ನಿಸೋದೆ ಇಲ್ವಾ..?

ಇಷ್ಟಕ್ಕೂ ನಾನು ಬಿಜೆಪಿಗೆ ಜೈ ಅನ್ನಲು ಕಾರಣವಿದೆ. ಮತ್ತೆ ಹೇಳ್ತೇನೆ. ನಾನು ನಿಮ್ಮ ತರಹ ಮಾನಗೆಟ್ಟ ಕ್ರೈಸ್ತ ಅಲ್ವೇ ಅಲ್ಲ. ನನಗೆ ನನ್ನ ಧರ್ಮದ ಮೇಲೆ
ಅತಿಯಾದ ಪ್ರೀತಿ, ನಂಬಿಕೆ, ಹೆಮ್ಮೆಯೂ ಇದೆ. ಈ ಕಾರಣಕ್ಕಾಗಿಯೇ ನಾನು ಬಿಜೆಪಿ ಸೇರುತ್ತಿದ್ದೇನೆ. ಬಿಜೆಪಿಯವರು ಕೋಮುವಾದಿಗಳು. ಆ ಪಕ್ಷಕ್ಕೆ ಓಟ್
ಹಾಕಬಾರದು ಎಂದು ನನ್ನ ಕ್ರೈಸ್ತ ಗುರುಗಳು ಹೇಳಿದ್ದರು. ದುರಾಧೃಷ್ಟ, ಅದೇ ಧರ್ಮಗುರುಗಳು ಟಿಪ್ಪು ಜಯಂತಿಯ ಬಗ್ಗೆ ಚಕಾರವೆತ್ತುತ್ತಿಲ್ಲ. ಇನ್ಯಾರನ್ನು ನಂಬಿ
ಕೂರಬೇಕು ನಾನು?

ಕೋಮುವಾದಿ ಪಕ್ಷ ಎಂದು ಬಿಜೆಪಿಯನ್ನು ದೂರ ಇಡುವ ಹಾಗೆ ಮಾಡಿದ್ರಿ. ಆದ್ರೆ ಯಾವ ಧಿಕ್ಕಿನಲ್ಲಿ ನೋಡಿದ್ರೂ ಆ ಪಕ್ಷ ಕೋಮುವಾದಿ ಅಂತ ನನಗೆ ಅನ್ಸೋದೆ
ಇಲ್ಲ. ಈಗ ಟಿಪ್ಪು ಜಯಂತಿ ವಿಚಾರದಲ್ಲಿಯೂ ನನ್ನ ಧರ್ಮದ ಬೆನ್ನಿಗೆ ನಿಂತಿರುವುದೂ ಅದೇ ಬಿಜೆಪಿ ಪಕ್ಷ. ರಾಜ್ಯಾದ್ಯಂತ ಟಿಪ್ಪು ಜಯಂತಿ ವಿರುದ್ಧ ಬಿಜೆಪಿ ಹೋರಾಟ ನಡೆಸುತ್ತಿದೆ. ಅದಕ್ಕಾಗಿ ಅನೇಕ ಯುವಕರೂ ತಮ್ಮ ಜೀವವನ್ನೇ ಬಲಿಕೊಟ್ಟಿದ್ದಾರೆ. ಹಿಂದೂ ಧರ್ಮದವರೂ ನಿರಂತರವಾಗಿ ಹೋರಾಟ ಮಾಡಿ ತಮ್ಮ ತಾಕತ್ತು ಪ್ರದರ್ಶನ ಮಾಡುತ್ತಿದ್ದಾರೆ. ನಮ್ಮ ಧರ್ಮವನ್ನು ನೋಡಿ ತಮಾಷೆ ಮಾಡುತ್ತಿದ್ದಾರೆ. ಹೌದು. ಅವರು ತಮಾಷೆ ಮಾಡೋಕೂ ಕಾರಣ ಇದೆಯಲ್ವಾ… ಅವರು ತಮ್ಮ ಜೀವದ ಹಂಗನ್ನು ತೊರೆದು ಹೋರಾಟ ಮಾಡಿದ್ರೆ, ಟಿಪ್ಪುವಿನಿಂದ ಅಷ್ಟೊಂದು ಅನ್ಯಾಯ ಅನುಭವಿಸಿರುವ ನಮ್ಮ ಧರ್ಮ ಬೆಚ್ಚನೆ ಮಲಗಿದ್ದನ್ನು ಕಂಡು ನಗದೆ ಮತ್ತೇನು ಮಾಡ್ತಾರೆ. ಟಿಪ್ಪು ಜಯಂತಿಯನ್ನು ವಿರೋಧಿಸಿ ಬೀದಿಗಿಳಿದು ಗಂಟಲು ಹರಿಯುವಂತೆ ಪ್ರತಿಭಟಿಸಬೇಕೆನ್ನುವ ಆವೇಷ ನನ್ನಲ್ಲಿದೆ. ಆದರೇನು ಮಾಡೋದು ನನ್ನ ಧರ್ಮದ ಪರವಾಗಿ ಯಾರೂ ಹೋರಾಡುತ್ತಿಲ್ಲವಲ್ಲಾ.

ಥಾಂಕ್ ಯೂ ಬಿಜೆಪಿ. ನನ್ನ ಧರ್ಮದ ಪರವಾಗಿ ಬೀದಿಗಿಳಿದು ಹೋರಾಟ ಮಾಡಿ, ಟಿಪ್ಪುವಿನ ನಿಜಮುಖ ಬಯಲು ಮಾಡಿದ್ದಕ್ಕೆ. ಕೇಂದ್ರದಲ್ಲಿ ಮೋದೀಯವರೂ
ಯಾವುದೇ ಕೋಮುವಾದಗಳಿಲ್ಲದೆ ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಿದ್ದಾರೆ. ಆದ್ದರಿಂದ ನನಗೆ ಬಿಜೆಪಿಯವರಿಂದ ಯಾವ ತೊಂದರೆನೂ ಆಗಿಲ್ಲ. ಕಳೆದ ಮೂರು
ವರ್ಷಗಳಿಂದ ನನ್ನ ಧರ್ಮದ ನಾಯಕರ್ಯಾರೂ ಟಿಪ್ಪು ಜಯಂತಿ ವಿರುದ್ಧ ಹೋರಾಡಿಲ್ಲ. ಬದಲಾಗಿ ಬಿಜೆಪಿಯವರು ಹೋರಾಡಿದ್ದಾರೆ. ಇನ್ನೂ ನಾನು ಕಾಂಗ್ರೆಸ್ ಎಂಬ ಕ್ರೈಸ್ತ ವಿರೋಧಿ ಪಕ್ಷಕ್ಕೆ ಮತ ಹಾಕಿದರೆ ಯೇಸು ಕಂಡಿತಾ ಕ್ಷಮಿಸಲಾರ. ಕೇವಲ ಅಲ್ಪಸಂಖ್ಯಾತರ ಓಟಿಗಾಗಿ ಓಲೈಕೆಯನ್ನು ಮಾತ್ರವೇ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ನಮ್ಮ ಕ್ರೈಸ್ತ ಧರ್ಮಕ್ಕಾಗಿ ಏನು ಕೊಡುಗೆ ನೀಡಿದ್ದಾರೆ ಎಂಬುವುದನ್ನು ಬಹಿರಂಗಪಡಿಸಲಿ.

ಸಂಸದರಾದ ಆಸ್ಕರ್ ಫೆರ್ನಾಂಡೀಸ್ ರವರೇ, ಶಾಸಕರಾದ ಕೆ.ಜೆ.ಜಾರ್ಜ್, ಐವನ್ ಡಿಸೋಜಾ, ಜೆ.ಆರ್.ಲೋಬೋರವರೇ… ನಿಮಗೆಂತೂ ಮಾನ ಮರ್ಯಾದೆ ಇಲ್ಲ. ನಮ್ಮ ಧರ್ಮದ ಮಾನವನ್ನು ಹರಾಜು ಹಾಕುತ್ತಿದ್ದೀರ. ತಾಯಿ ಸತ್ಯವಾಗಿಯೂ ಇನ್ನು ಮುಂದೆ ನಾನು ನಿಮಗೆ ಮತ ಹಾಕಲ್ಲ. ನನ್ನ ಮತ ಏನಿದ್ದರೂ ಇನ್ನು ಮುಂದೆ ಬಿಜೆಪಿಗೆ. ಆದರೆ ಮತ್ತೆ ಹಿಂತಿರುಗಿ ನೋಡುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಕ್ರೈಸ್ತ ವಿರೋಧಿ ಧೋರಣೆಯನ್ನು ಖಂಡಿಸಿ, ಟಿಪ್ಪುವಿಗೆ ಧಿಕ್ಕಾರ ಹಾಕಿ. ಮತ್ತೆ ನಾನು ನಿಮ್ಮವನಾಗುತ್ತೇನೆ. ಅಲ್ಲಿಯವರೆಗೆ “ಗುಡ್ ಬಾಯ್”…

ಹಾ ಮತ್ತೊಂದು ವಿಷಯ… “ಹಿಂದುತ್ವವಾದಿಗಳ ಜೊತೆಗೆ ನೀನು ಸೇರುತ್ತೀಯಾ” ಎಂಬ ಪ್ರಶ್ನೆ ಕೇಳಬಹುದು. ಸೇರುತ್ತೇನೆ. ಯಾಕೆಂದರೆ ಇತಿಹಾಸದಲ್ಲಿ ಕ್ರೈಸ್ತ
ವಿರೋಧಿ ಧೋರಣೆಗಳನ್ನು ಹಿಂದೂಗಳು ಅನುಸರಿಸಿದ್ದೇ ಇಲ್ಲ. ನಿಮಗೆ ಗೊತ್ತಿಲ್ಲದಿದ್ದರೆ ಹೇಳುತ್ತೇನೆ. ಮಂಗಳೂರಿನ ಕಿನ್ನಿಗೋಳಿಯಲ್ಲಿರುವ 2 ಚರ್ಚ್‍ಗಳನ್ನು ಟಿಪ್ಪುವಿನ ಖಡ್ಗದಿಂದ ಉಳಿಸಿದ್ದು ಅದೇ ಹಿಂದೂ ಸಮುದಾಯ. ಈಗೇನನ್ನುತ್ತೀರಾ..?

ನಿಮ್ಮಿಂದ ಬೇಸರಗೊಂಡಿರುವ ಕ್ರೈಸ್ತ,

– ಪೌಲ್ ಪಾಯ್ಸ್

Tags

Related Articles

Close