ಅಂಕಣ

ಬುದ್ಧಿಜೀವಿಗಳೇ, ಮಾಧ್ಯಮದವರೇ!! ಎಲ್ಲಿ ಹಾಳಾಗಿಹೋಗಿದ್ದೀರಿ? ಮುಸಲ್ಮಾನ ದೇಶಭಕ್ತರ ಪರ ಮಾತಾಡಲು ನಿಮ್ಮ ನಾಲಗೆ ಬಿದ್ದು ಹೋಗಿದೆಯೇ?!

ಈ ಜಾತ್ಯತೀತರು, ಬುದ್ಧಿಜೀವಿಗಳು, ಮಾಧ್ಯಮಗಳೆಲ್ಲಾ ಮುಸ್ಲಿಮರ ಪರವಾಗಿ ಇದ್ದಾರೆ ಎಂದು ನಾವು ಇದುವರೆಗೆ ನಂಬಿಕೊಂಡು ಬಂದಿದ್ದೆವು. ಆದರೆ ಇವರೆಲ್ಲಾ
ಬೆಂಬಲಿಸುವುದು ಜಿಹಾದಿ ಮುಸ್ಲಿಮರನ್ನು ಮಾತ್ರ. ಈ ವಿಚಾರ ನಿಮಗೆ ಖಂಡಿತಾ ಅಚ್ಚರಿಗೆ ದೂಡಬಲ್ಲುದು. ಯಾಕೆಂದರೆ ದೇಶಭಕ್ತ ಮುಸ್ಲಿಂ ಕುಟುಂಬವನ್ನು ಜಿಹಾದಿ ಮುಸ್ಲಿಂ ಸಂಘಟನೆಗಳು ಬಹೀಷ್ಕಾರ ಹಾಕಿದ್ದರೂ ಯಾವೊಂದು ಚಾನೆಲ್‍ನಲ್ಲೂ ಪ್ಯಾನೆಲ್ ಡಿಸ್ಕಷನ್ ಆಗುತ್ತಿಲ್ಲ, ಯಾವ ಬುದ್ಧಿಜೀವಿಗಳೂ ಬೀದಿಬದಿಯಲ್ಲಿ ನಿಂತು ಮೈಕ್ ಹಿಡಿದು ಗಂಟಲುಕೆರೆಯುವಂತೆ ಕಿರುಚುತ್ತಿಲ್ಲ.. ಎಂಥಾ ವಿಪರ್ಯಾಸವಲ್ಲವೇ?

ಸ್ವಾತಂತ್ರ್ಯ ಚಳುವಳಿಗೆ ಸ್ಫೂರ್ತಿ ನೀಡಿದ ಬಂಕಿಮ್ ಚಂದ್ರ ಚಟರ್ಜಿಯವರ `ವಂದೇ ಮಾತರಂ’ ರಾಷ್ಟ್ರೀಯ ಹಾಡು ಜಿಹಾದಿ ಮುಸ್ಲಿಮರಿಗೆ ಆಗಿಬರುವುದಿಲ್ಲ ಎಂದು ನಮಗೆಲ್ಲಾ ಎಂದೋ ಗೊತ್ತಿದೆ. ಆದರೆ ಆಗ್ರಾದ ದೇಶಭಕ್ತ ಮುಸ್ಲಿಂ ಕುಟುಂಬವೊಂದು ವಂದೇ ಮಾತರಂ ಹಾಡಿಗೆ ಅಭಿಮಾನಿಯಾಗಿರುವುದಕ್ಕೆ ಜಿಹಾದಿ ಮುಸ್ಲಿಂ ಸಮುದಾಯದವರಿಂದ ತೀವ್ರ ಬೆದರಿಕೆ ಕರೆಗಳು ಬರುತ್ತಿವೆ. ಈ ಬಗ್ಗೆ ಗುಲ್‍ಚಮನ್ ಶೇರ್ವಾನಿಯವರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡರೂ ಒಂದು ಲೈನ್ ಬ್ರೇಕಿಂಗ್ ಕೊಡುವಷ್ಟೂ ಪುರ್ಸೊತ್ತು ಇರಲಿಲ್ಲ.

ಗುಲ್‍ಚಮನ್ ಶೇರ್ವಾನಿ ಅವರಿಗೆ ವಂದೇ ಮಾತರಂ ರಾಷ್ಟ್ರೀಯ ಹಾಡೆಂದರೆ ಅದೆಂಥದೋ ಅಭಿಮಾನ, ಪ್ರೀತಿ. ಭಾರತೀಯರ ರಾಷ್ಟ್ರೀಯತೆಯನ್ನು ಬಡಿದೆಬ್ಬಿಸುವ ಈ ಹಾಡಿನ ಬಗ್ಗೆ ಅವರು ಅತೀವ ಅಭಿಮಾನ ಹೊಂದಿದ್ದರು. ಆದರೆ ಇದೇ ಅಭಿಮಾನ ಅವರಿಗೆ ಮುಳುವಾಗಿ ಬಿಟ್ಟಿದೆ. ಯಾಕೆಂದರೆ ಜಿಹಾದಿ ಮುಸ್ಲಿಂ ಸಂಘಟನೆಗಳು ಕೊಲ್ಲುವೆವು, ಹೊಡೆಯುವೆವು ಎಂದೆಲ್ಲಾ ಬೆದರಿಕೆ ಕರೆಗಳು ಬರಲಾಂಭಿಸಿವೆ. ಇದು ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಈ ಮುಸ್ಲಿಂ ಸಂಘಟನೆಗಳು ಗುಲ್‍ಚಮನ್ ಶೇರ್ವಾನಿ ಅವರ ಕುಟುಂಬವನ್ನೇ ಬಹಿಷ್ಕಾರ ಹಾಕಿದೆ. ಅಲ್ಲದೆ ಅವರ ಮಕ್ಕಳನ್ನು ಮುಸ್ಲಿಂ ಶಾಲೆಗಳಿಂದಲೇ ಹೊರಹಾಕಿ ಅಟ್ಟಹಾಸ ಮೆರೆಯಲಾಗಿದೆ..

ಮುಸ್ಲಿಮರೇ ಹೆಚ್ಚಾಗಿರುವ ಆಗ್ರಾದ ಅಜಂಪುರ ನಿವಾಸಿಯಾಗಿರುವ 34 ವರ್ಷದ ಶೇರ್ವಾನಿ ಕುಟುಂಬದ ಎಲ್ಲರೂ ತ್ರಿವರ್ಣ ಧ್ವಜದ ಬಣ್ಣಗಳಿರುವ ಉಡುಗೆಯನ್ನೇ ಧರಿಸುತ್ತಾರೆ. ಶೇರ್ವಾನಿ ಪಾದರಕ್ಷೆಗಳ ಬಿಡಿಭಾಗಗಳ ಸಾಗಣೆ ವೃತ್ತಿ ಮಾಡಿಕೊಂಡಿದ್ದು, ಅವರ ಪತ್ನಿ ವಿವಿಧ ಕಂಪನಿಗಳಿಗೆ ಶೂಗಳನ್ನು ಹೊಲಿದು ಕೊಡುತ್ತಾರೆ. ಶೇರ್ವಾನಿ ಅವರ ಒಬ್ಬಳು ಮಗಳನ್ನು ಹೊರಹಾಕಿರುವುದನ್ನು ಶಾಲೆ ಒಪ್ಪಿಕೊಂಡಿದೆ. ಶಾಲೆ ನಡೆಸುತ್ತಿರುವ ಅಸ್ಲಾಂ ಖಾನ್, ಶೇರ್ವಾನಿ ಮಗಳು ಇಲ್ಲಿ ಓದುತ್ತಿದ್ದಳು. ಸಮುದಾಯದ ಹಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಾವು ಅನಿವಾರ್ಯವಾಗಿ ಆಕೆಯನ್ನು ಹೊರಹಾಕಬೇಕಾಯಿತು. ವಿದ್ಯಾರ್ಥಿನಿ ಮತ್ತು ಅವಳ ಕುಟುಂಬದ ಎಲ್ಲರೂ ರಾಷ್ಟ್ರಧ್ವಜದ ಬಣ್ಣಗಳ ಉಡುಗೆ ಧರಿಸಿಕೊಂಡು ಬರುತ್ತಿರುವುದು ಸಮುದಾಯ ಆಕ್ಷೇಪಕ್ಕೆ ಕಾರಣವಾಗಿದೆ.

ಮಸೀದಿಯಿಂದ ಫತ್ವಾ;

ಶೇರ್ವಾನಿಯವರಿಗೆ ರಾಷ್ಟ್ರೀಯ ಹಾಡು ಹಾಡುವುದರ ವಿರುದ್ಧ ಫತ್ವಾ ಹೊರಡಿಸಲಾಗಿದ್ದು, ಬಹೀಷ್ಕಾರ ಹಾಕಲಾಗಿದೆ. ಆದರೇ ಶೇರ್ವಾನಿ ವಂದೇ ಮಾತರಂ
ಹಾಡುವುದನ್ನು ಮುಂದುವರಿಸಿದ್ದಾರೆ. ಇದು ಜಿಹಾದಿಗಳ ಕೆಂಗಣ್ಣಿಗೆ ಕಾರಣವಾಗಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿಲ್ಲಿ ಜಾಮಾ ಮಸೀದಿಯ ಶಾಹಿ ಇಮಾಮ್
ಮೌಲಾನಾ ಅಹ್ಮದ್ ಬುಖಾರಿ ಶೇರ್ವಾನಿ ವಿರುದ್ಧ ಫತ್ವಾ ಹೊರಡಿಸಿದ್ದು ಕಾಫಿರ್ ಎಂದು ಕರೆಯಲಾಗಿದೆ.

ಓವೈಸಿ ಪಕ್ಷದಿಂದ ಶೇರ್ವಾನಿಗೆ ಎಚ್ಚರಿಕೆ:

ಅಕ್ಬರುದ್ದೀನಿ ಓವೈಸ್ ಹಾಗೂ ಅಸಾಸುದ್ದೀನ್ ಓವೈಸಿ ಅವರ ಪಕ್ಷವಾಗಿರುವ ಅಲ್ ಇಂಡಿಯಾ ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಪಕ್ಷಕೂಡಾ ಶೇರ್ವಾನಿಗೆ ವಂದೆ ಮಾತರಂ ಹಾಡದಂತೆ ಎಚ್ಚರಿಕೆ ನೀಡಿದೆ. ಸಂಘಟನೆಯ ಆಗ್ರಾ ಘಟಕದ ಅಧ್ಯಕ್ಷ ಮೊಹಮ್ಮದ್ ಇದ್ರಿಶ್ ಅಲಿ ಶೇರ್ವಾನಿಗೆ ಬಹಿಷ್ಕಾರ ಹಾಕಿರುವುದನ್ನು ಸಮರ್ಥಿಸಿಕೊಂಡಿದ್ದಾನೆ.

ತಾಖತ್ ಇದ್ದರೆ ವಂದೇ ಮಾತರಂ ಹಾಡದಂತೆ ತಡೆಯಿರಿ: ಶೇರ್ವಾನಿ ಗುಡುಗು

ತನ್ನನ್ನ ಕಾಫಿರ್ ಎಂದು ಕರೆದು ಫತ್ವಾ ಹೊರಡಿಸಲಾಗಿದೆ. ಆದರೆ ಇಂಥಾ ಫತ್ವಾಗಳಿಗೆ ನಾನೇನು ಹೆದರುವುದಿಲ್ಲ. ನಾನು ವಂದೇಮಾತರಂ ಹಾಡು ನಿಲ್ಲಿಸಲು
ಯಾರಿಂದಲೂ ಸಾಧ್ಯವಿಲ್ಲ. ನಾನು ಚಿಕ್ಕವನಿದ್ದಾಗಲೇ ನನಗೆ ಈ ಹಾಡು ಎಂದರೆ ತುಂಬಾ ಇಷ್ಟ. ಆಗಲೇ ನಮ್ಮ ಕುಟುಂಬವನ್ನು ಮುಸ್ಲಿಮರು ಬಹಿಷ್ಕರಿಸಿದ್ದರು ಎಂದು ಶೇರ್ವಾನಿ ವಿವರಿಸಿದ್ದಾರೆ. ಒಟ್ಟಿನಲ್ಲಿ ಶೇರ್ವಾನಿ ಯಾವ ಗೊಡ್ಡು ಬೆದರಿಕೆಗಳಿಗೂ ಜಗ್ಗದೆ ಜಿಹಾದಿಗಳಿಗೆ ಪಾಠ ಕಲಿಸಿದ್ದಾರೆ. ತಾನೊಬ್ಬ ಅಪ್ಪಟ ಮುಸ್ಲಿಂ ಆಗಿದ್ದರೂ ದೇಶಪ್ರೇಮದ ವಿಷಯದಲ್ಲಿ ರಾಜೀ ಮಾಡಿಕೊಳ್ಳದ ಗುಣವನ್ನು ಭಾರತದ ಎಲ್ಲಾ ಮುಸ್ಲಿಮರು ಅಳವಡಿಸಿಕೊಂಡಿದ್ದರೆ ಈ ದೇಶದಲ್ಲಿ ಗಲಾಟೆ ನಡೆಯುತ್ತಲೇ ಇರಲಿಲ್ಲ. ಆದರೆ ಧರ್ಮದ ಅಪೀಂನಿಂದ ಬಳಲುತ್ತಿರುವ ಕೆಲವು ಜಿಹಾದಿ ಮುಸ್ಲಿಮರು ಈ ದೇಶವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರೆ.

ಜಿಹಾದಿ ಮುಸ್ಲಿಮರು ಈ ಹಿಂದಿನಿಂದಲೂ ವಂದೇ ಮಾತರಂ ಹಾಡಿಗೆ ವಿರೋಧ ಕಟ್ಟಿಕೊಂಡು ಬಂದಿದ್ದಾರೆ. ದೇಶವನ್ನು ತಾಯಿ ಎನ್ನುವುದು ಅವರಿಗೆ
ಸಹಿಸಲಾಗುವುದಿಲ್ಲ. ದೇಶಪ್ರೇಮಿಗಳಿಗೆ ಕ್ರಾಂತಿಯ ಕಿಡಿಯನ್ನು ಹೊತ್ತಿಸಿ ಬ್ರಿಟಿಷರ ಜೊತೆ ಸಂಗ್ರಾಮಕ್ಕೆ ತೊಡಗುವಂತೆ ಪ್ರೇರಣೆ ನೀಡಿ ದೇಶ ಸ್ವತಂತ್ರಗೊಳ್ಳುವಂತೆ ಮಾಡಿದ ವಂದೇ ಮಾತರಂ ಹಾಡಿಗೆ ಕೆಲವು ಜಿಹಾದಿ ಮುಸ್ಲಿಮರು ಅಗೌರವ ತೋರಿಸಿ ದೇಶದ್ರೋಹ ಎಸಗುತ್ತಿದ್ದಾರೆ. ಇಂಥವರನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಿದರೆ ಮಾತ್ರ ಅವರಿಗೆ ಬುದ್ಧಿ ಬಂದೀತು…

`ಇದು ಕೇವಲ ಬಂಗಾಲಿಗಳ ಗೀತೆ’, `ಮುಸ್ಲಿಮರ ಬದ್ಧವೈರಿ ಬಂಕಿಮರು ಇದನ್ನು ಬರೆದರು’ ಎಂಬ ಬ್ರಿಟಿಷರ ಕುಪ್ರಚಾರಗಳನ್ನೆಲ್ಲ ಕೊಚ್ಚಿಕೊಂಡು, `ವಂದೇ ಮಾತರಂ’ ಸ್ವರಸರಿತೆ ಹರಿಯತೊಡಗಿತು. ಜಾತಿಪಂಥ ಪಕ್ಷಪ್ರಾಂತ ಇತ್ಯಾದಿ ಭಿನ್ನತೆಗಳೆಲ್ಲವನ್ನೂ ಅದು ಕೊಚ್ಚಿ ತೊಳೆಯಿತು. ಜನ ಒಗ್ಗೂಡಿ ಮೇಲೆದ್ದರು; ಒಕ್ಕೊರಲಿನಿಂದ `ವಂದೇ ಮಾತರಂ’ ಹಾಡಿದರು. ಹಿಮಾಲಯದಿಂದ ಹಿಂದು ಮಹಾಸಾಗರದವರೆಗಿನ ಭೂಮಿಯೆಲ್ಲವನ್ನೂ ಆ ಮಂತ್ರ ಪುನಃ ಒಂದಾಗಿ ಬೆಸೆಯಿತು. ನಿರ್ಬಲ, ನಿಸ್ತೇಜ, ನಿರಾಯುಧ, ದಲಿತ, ಜರ್ಜರಿತ ಜನಾಂಗವೊಂದು ಬಲಸಂಪನ್ನವಾದ, ಶಸ್ತ್ರಾಸ್ತ್ರಸಜ್ಜಿತವಾದ ಕುಟಿಲ, ನಿರ್ದಯ ಶಾಸನಾರೂಢ ಪರಕೀಯ ಸತ್ತೆಯನ್ನು ಕಿತ್ತೆಸೆಯಿತು. ಜಗತ್ತಿನ ಅಗ್ರ ರಾಷ್ಟ್ರವನ್ನೂ ಬಗ್ಗಿಸಿತು; `ಸೂರ್ಯ ಮುಳುಗದ ಸಾಮ್ರಾಜ್ಯ’ವನ್ನೇ ಮುಳುಗಿಸಿತು.

ಬಂಕಿಮಚಂದ್ರರ `ವಂದೇ ಮಾತರಂ’ ಗೀತೆ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಅದ್ಭುತ ಸಾಹಸಗಳಿಗೆ, ಸಹಸ್ರಾರು ಜನರ ತ್ಯಾಗ, ಬಲಿದಾನಗಳಿಗೆ ಪ್ರೇರಣೆ
ನೀಡಿತು. ಇಡೀ ಭಾರತದ ಅಂತಃಕರಣವೇ ದೇಶಭಕ್ತಿಯ ಭಾವನೆಗಳಿಗೆ ಸ್ಪಂದಿಸುವಂತೆ ಮಾಡಿತು. ಇಂದಿಗೂ ದೇಶಭಕ್ತರ ಮೈ ಮನ ಪುಳಕಿತಗೊಳಿಸುವ ಗೀತೆ ಇದು. ನಮ್ಮ ಸಂಸ್ಕೃತಿಯ ಸೌರಭ ಹೊರಸೂಸುವ ನುಡಿಸುಮ. ಈ ನೆಲದ ಸಂತಾನದ ವಿದ್ಯೆ- ಬುದ್ಧಿಗಳ, ಸಂಪತ್ತು ಸಮೃದ್ಧಿಗಳ, ಸಾಧನೆ ಸಿದ್ಧಿಗಳ ವಿಕಾಸಕ್ಕೆ ಆವಾಹನೆ ನೀಡುವ ಚಿರಂತನ ಸ್ಫೂರ್ತಿಮಂತ್ರವಾದ ಹಾಡು ಇದು. ತಾಯಿ ಭಾರತಿಗೆ ವಿಪತ್ತು ಒದಗಿತೆಂದರೆ ಈ ಗೀತೆ ಆಕೆಯ ಮಕ್ಕಳಿಗೆ ನವಶಕ್ತಿ ನೀಡುತ್ತದೆ. ಇದೇ `ವಂದೇ ಮಾತರಂ’ ಗೀತೆಯ ಅಂತರಾರ್ಥ. ಸ್ವಾತಂತ್ರ್ಯ ದಿನದಂದು ಈ ರಣಮಂತ್ರ ನಮಗೆಲ್ಲರಿಗೂ ಪ್ರೇರಣಾಸ್ರೋತವಾಗಲಿ.

source: https://vijaykarnataka.indiatimes.com/news/india/muslim-disowned-for-singing-vande-mataram/articleshow/61846367.cms

-ಚೇಕಿತಾನ

Tags

Related Articles

Close