ಪ್ರಚಲಿತ

ಬುಲೆಟ್ ರೈಲನ್ನು ವಿರೋಧಿಸುವವರು ಎತ್ತಿನ ಗಾಡಿಯಲ್ಲಿ ಹೋಗಲಿ!! ಅಭಿವೃದ್ಧಿ ವಿರೋಧಿಗಳಿಗೆ ಟಾಂಗ್ ನೀಡಿ ಮೋದಿ!!

ಮೋದಿ ಸಖತ್ ಟಾಂಗ್!!

ಹಲವಾರು ಬದಲಾವಣೆಗಳನ್ನು ಕಾಣುತ್ತಿರುವ ಭಾರತದ ಆರ್ಥಿಕತೆ ವೇಗವಾಗಿ ಸಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾದರೂ ಕೂಡ, ಭಾರತದಲ್ಲಿ ರೈಲು ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವುದು ಮತ್ತು ಹೈಸ್ಪೀಡ್ ರೈಲಾದ ಬುಲೆಟ್ ಟ್ರೈನನ್ನು ನಿರ್ಮಿಸುವುದು ಆ ಬದಲಾವಣೆಗಳಲ್ಲಿ ಒಂದಾಗಿವೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಬುಲೆಟ್ ರೈಲು ಯೋಜನೆಗೆ ವಿರೋಧ ಪಕ್ಷಗಳು ಆರಂಭದಿಂದಲೂ ಟೀಕೆ ಮಾಡುತ್ತಿದ್ದು ಇದೀಗ ಇವರಿಗೆಲ್ಲಾ ಮೋದಿ ಸಖತ್ತಾಗಿ ಟಾಂಗ್ ನೀಡಿದ್ದಾರೆ!!

ಹೌದು… ಸುರಕ್ಷತೆ, ವೇಗ ಮತ್ತು ಸೇವೆಯ ಪ್ಯಾಕೇಜ್ ನೊಂದಿಗೆ, ಮುಂಬೈ ಮತ್ತು ಅಹ್ಮದಾಬಾದ್ ನಡುವೆ ಬರಲಿರುವ ಬುಲೆಟ್ ರೈಲು ಎನ್‍ಡಿಎ ಸರಕಾರದ ಕನಸಿನ ಕೂಸಾಗಿದ್ದಲ್ಲದೇ, ಇದು ಸಾಕಾರವಾದರೆ ಭಾರತೀಯ ರೈಲು ಜಾಗತಿಕ ಮಟ್ಟದಲ್ಲಿ ಕೂಡ ಅಗ್ರಗಣ್ಯ ಎನ್ನಿಸಿಕೊಳ್ಳಲಿದೆ. ಆದರೆ ವಿರೋಧ ಪಕ್ಷಗಳು ಮಾತ್ರ ಕ್ಯಾತೆ ತೆಗೆಯುತ್ತಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು “ಯಾರು ಬುಲೆಟ್ ರೈಲನ್ನು ವಿರೋಧಿಸುತ್ತಾರೋ ಅವರು ಎತ್ತಿನ ಗಾಡಿಯಲ್ಲಿ ಹೋಗಲಿ ಎಂದು ಟಾಂಗ್ ನೀಡಿದ್ದಾರೆ.

ಭಾನುವಾರ ಗುಜರಾತ್ ನ ಭರುಚ್ ಪ್ರದೇಶದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿರುವ ವೇಳೆ ಪ್ರಧಾನಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಅಷ್ಟೇ ಅಲ್ಲದೇ, ರ್ಯಾಲಿಯನ್ನುದ್ದೇಶಿಸಿ ಮಾತನಾಡುವ ವೇಳೆ ಕಾಂಗ್ರೆಸ್ ಸಹ ಬುಲೆಟ್ ರೈಲು ಯೋಜನೆಯನ್ನು ಜಾರಿಗೆ ತರಲು ಪ್ರಯತ್ನಿಸಿತ್ತಾದರೂ ಕೂಡ ಈ ಯೋಜನೆಗೆ ಚಾಲನೆ ನೀಡಲು ವಿಫಲವಾಗಿತ್ತು. ಆದರೆ ಅದೇ ಕಾಂಗ್ರೆಸ್ ಪಕ್ಷ 1.1 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಜಪಾನ್ ಸಹಯೋಗದಲ್ಲಿ ಮುಂಬೈ ಮತ್ತು ಅಹಮದಾಬಾದ್ ನಡುವೆ ನಿರ್ಮಾಣವಾಗುತ್ತಿರುವ ಬುಲೆಟ್ ರೈಲು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ!!

ಬುಲೆಟ್ ರೈಲು ವಿರೋಧಿಸುವವರು ಎತ್ತಿನ ಗಾಡಿಯಲ್ಲಿ ಪ್ರಯಾಣಿಸಲಿ. ನಾವು ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಜಪಾನ್ ಸಹಯೋಗದಲ್ಲಿ
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಕಾಮಗಾರಿಕೆ ಚಾಲನೆ ನೀಡಲಾಗಿದ್ದು, ಇದರಿಂದ ಸಾವಿರಾರು ಜನಕ್ಕೆ ಉದ್ಯೋಗ ಸಿಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ!! ಈ ಹಿಂದೆ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಸಹ ಈ ಬುಲೆಟ್ ರೈಲು ಯೋಜನೆ ಜಾರಿಗೆ ತರಲು ಬಯಸಿದ್ದು, ಆ ಯೋಜನೆ ಪಡೆದುಕೊಳ್ಳುವಲ್ಲಿ ವಿಫಲವಾಗಿತ್ತು. ಆದರೆ ಎನ್ ಡಿಎ ಸರ್ಕಾರ ಈಗ ಅದನ್ನು ಸಾಧಿಸಿ ತೋರಿಸಿದೆ ಎಂದಿದ್ದಾರೆ.

ಪ್ರಧಾನಿ ಮೋದಿ ಅವರ ಬಹುನಿರೀಕ್ಷಿತ ಬುಲೆಟ್ ರೈಲು ಯೋಜನೆಗೆ ಕಳೆದ ಸೆಪ್ಟೆಂಬರ್ ನಲ್ಲಿ ಜಪಾನ್ ಪ್ರಧಾನಿ ಶಿಂಜೊ ಅಬೆಯೊಂದಿಗೆ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ ಕಾಮಗಾರಿಗೆ ಚಾಲನೆ ನೀಡಿದ್ದು, ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇನ್ನು ಈ ಬುಲೆಟ್ ರೈಲು ಯೋಜನೆಯಿಂದ ದೇಶದಲ್ಲಿ ಅಪಾರ ಪ್ರಮಾಣದ ಉದ್ಯೋಗ ಸೃಷ್ಟಿಯಾಗಲಿದೆ. ಭರೂಚ್ ನ ಜನರಿಗೂ ಸಹ ಇದರಿಂದ ಲಾಭವಾಗಲಿದೆ. ಯೋಜನೆಗೆ ಅಗತ್ಯವಾದ ಸಿಮೆಂಟ್, ಕಬ್ಬಿಣ ಮತ್ತಿತರ ವಸ್ತುಗಳನ್ನು ಭಾರತದಲ್ಲೇ ಖರೀದಿಸಬೇಕು. ಜತೆಗೆ ನಿರ್ಮಾಣ ಕಾರ್ಯದಲ್ಲಿ ಅಪಾರ ಪ್ರಮಾಣ ಕೆಲಸಗಾರರ ಬಳಕೆಯಾಗುತ್ತದೆ. ಇವುಗಳಿಂದ ಭಾರತೀಯ ಆರ್ಥಿಕತೆಗೆ ಹೆಚ್ಚಿನ ಲಾಭವಾಗಲಿದೆ ಎಂದು ಮೋದಿ ತಿಳಿಸಿದ್ದಾರೆ.

ಕಡಿಮೆ ವ್ಯಯದ ಯೋಜನೆಯಾಗಿರುವ ಬುಲೆಟ್ ರೈಲು, ಜಪಾನ್ ಸರಕಾರವು ಭಾರತಕ್ಕೆ ಬುಲೆಟ್ ರೈಲು ನಿರ್ಮಿಸಲು ಈಗಾಗಲೇ 88 ಸಾವಿರ ಕೋಟಿ ರುಪಾಯಿ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ನೀಡಿದೆ. ಹಾಗಾಗಿ ಶೇ.0.1 ಬಡ್ಡಿದರದಲ್ಲಿ 50 ವರ್ಷಗಳ ಕಾಲ ಸಾಲ ಮರುಪಾವತಿ ಮಾಡಬೇಕಾಗಿದೆ. ಇದು ಭಾರತಕ್ಕೆ ಹೊರೆಯಾಗಲಾರದು ಮತ್ತು ಸಾಲ ಮರುಪಾವತಿ ಸಾಲ ಕೊಟ್ಟ 15 ವರ್ಷಗಳ ನಂತರ ಆರಂಭವಾಗಲಿದೆ. ತಂತ್ರಜ್ಞಾನ ಜಪಾನ್ ದಾದರೂ ಇದು ಮೇಕ್ ಇನ್ ಇಂಡಿಯಾ ಪ್ರಾಜೆಕ್ಟ್ ಅತ್ಯಾಧುನಿಕ ತಂತ್ರಜ್ಞಾನದ ಪ್ರಯೋಗ ಅತ್ಯಾಧುನಿಕ ತಂತ್ರಜ್ಞಾನದ ವಿನಿಮಯದ ಕುರಿತಂತೆ ಭಾರತ ಮತ್ತು ಜಪಾನ್ ನಡುವೆ ಹಲವಾರು ಮಾತುಕತೆಗಳಾಗಿವೆ.

ಹಾಗಾಗಿ 50 ವರ್ಷ ಹಳೆಯದಾದ ಶಿಂಕನ್‍ಸೆನ್ ತಂತ್ರಜ್ಞಾನದ ಬಳಕೆಯಿಂದ ರೈಲು ತಡವಾಗುವುದಿಲ್ಲ, ಅಪಘಾತಗಳಾಗುವುದಿಲ್ಲ, ಸುರಕ್ಷತೆಯ ಗುಣಮಟ್ಟವನ್ನು ಕಾಪಾಡಲಾಗುವುದು. ಅಪಘಾತ ಮುನ್ಸೂಚನೆ ಮತ್ತು ತಡೆಗಟ್ಟುವ ತಂತ್ರಜ್ಞಾನವೂ ಇದರಲ್ಲಿ ಇರಲಿದೆ. 7ರಿಂದ 8 ಗಂಟೆ ತಗಲುತ್ತಿದ್ದ ಸಮಯ ಬುಲೆಟ್ ರೈಲಿನಿಂದ 2 ಗಂಟೆಗೆ ಇಳಿಯಲಿದೆ. ಆರ್ಥಿಕ ಅಭಿವೃದ್ಧಿಗೆ ಈ ಯೋಜನೆ ಸೋಪಾನ ಬುಲೆಟ್ ರೈಲಿನಿಂದ ಭಾರತದ ಅಭಿವೃದ್ಧಿ ಕೂಡ ಅಷ್ಟೇ ವೇಗದಲ್ಲಿ ಮುಂದೆ ಸಾಗಲಿದೆ. ಭಾರತದಲ್ಲೇ ನಿರ್ಮಾಣವಾಗುತ್ತಿರುವುದರಿಂದ ಭಾರತದ ಜನತೆಗೆ ಉದ್ಯೋಗ ಸಿಗಲಿದೆ. ನಿರ್ಮಾಣ ಸಮಯದಲ್ಲಿಯೇ 20 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ಮಹಾರಾಷ್ಟ್ರದಲ್ಲಿ 4 ಮತ್ತು ಗುಜರಾತ್ ನಲ್ಲಿ 8 ಸ್ಟೇಷನ್ ಗಳು ಆರ್ಥಿಕ ಪವರ್ ಹೌಸ್ ಆಗಿ ಬದಲಾಗಲಿವೆ.

ಬುಲೆಟ್ ರೈಲಿನಿಂದ ಇಷ್ಟೆಲ್ಲಾ ಅನುಕೂಲಗಳು ಸಿಗುತ್ತಿರುವಾಗ ವಿರೋಧ ಪಕ್ಷಗಳು ವಿರೋಧಿಸುವುದು ಮಾತ್ರ ವಿಪರ್ಯಾಸ!! ಹಾಗಾಗಿ ಟೀಕಾಪ್ರಹಾರಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದಲ್ಲದೇ ಅಭಿವೃದ್ಧಿಪೂರಕವಾಗಿರುವ ಈ ಯೋಜನೆಯನ್ನು ವಿರೋಧಿಸಿದವರಿಗೆ ಮೋದಿ ನೀಡಿರುವ ಟಾಂಗ್ ಮಾತ್ರ ಸೂಪರ್!!

Source :http://vijayavani.net/those-opposing-the-bullet-train-project-should-travel-on-bullock-carts-says-prime-minister-narendra-modi/

– ಅಲೋಖಾ

Tags

Related Articles

Close