ನೇಪಾಳವು ದಕ್ಷಿಣ ಏಷ್ಯಾದಲ್ಲಿರುವ ಒಂದು ‘ಹಿಂದೂ ರಾಷ್ಟ್ರ’. ಇದು ಭಾರತದ ಮಗ್ಗುಲಲ್ಲೇ ಇರುವುದು ನಾವೆಲ್ಲರೂ ಹೆಮ್ಮೆ ಪಡಬೇಕಾದ ಸಂಗತಿಯೇ ಸರಿ. ಇಡೀ ವಿಶ್ವದಲ್ಲೇ ನೇಪಾಳವು 2008 ರ ವರೆಗೂ ರಾಜಪ್ರಭುತ್ವವನ್ನು ಹೊಂದಿದ್ದ ಏಕೈಕ ಹಿಂದೂ ರಾಷ್ಟ್ರವಾಗಿತ್ತು. 2008 ರ ನಂತರ ಅದು ಪ್ರಜಾಪ್ರಭುತ್ವವಾದಿ ರಾಷ್ಟ್ರವಾಗಿ ಪರಿವರ್ತನೆಗೊಂಡ ಆ ಸಂದರ್ಭದಲ್ಲಿ ಅದು ಹಿಂದು ರಾಷ್ಟ್ರದ ಸ್ಥಿತಿಯನ್ನು ಕೈಬಿಟ್ಟಿತು. ನೇಪಾಳದ ನೆರೆಯ ಹಿಂದೂ ರಾಷ್ಟ್ರವಾಗಿರುವ ಭಾರತವು 18 ಹಾಗೂ 19 ನೇ ಶತಮಾನದಲ್ಲಿ ಬ್ರಿಟಿಷ್ ಹಾಗೂ ಮೊಘಲರ ಆಕ್ರಮಣಕ್ಕೆ ತುತ್ತಾಗಿದ್ದಂತಹ ಸಂದರ್ಭದಲಿ,್ಲ ನೇಪಾಳವು ಹಿಂದೂ ರಾಜಪ್ರಭುತ್ವವನ್ನೇ ಹೊಂದಿತ್ತು. ಇದು ಒಂದು ಸಣ್ಣ ಸಾಮ್ರಾಜ್ಯವಾಗಿದ್ದರೂ ಸಹ ತಾನು ಹಿಂದೂ ರಾಷ್ಟ್ರವೆಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡು ಬಂದಿತ್ತು. ಈ ರಾಷ್ಟ್ರವು ಅನುಸರಿಸುವ ನಿಯಮಗಳು ಹಿಂದೂ ಧರ್ಮಗ್ರಂಥವನ್ನೇ ಆಧರಿಸಿತ್ತು. ಹಾಗೂ ಅದು 2008 ರವರೆಗೂ ಅದನ್ನೇ ಮುಂದುವರಿಸಿಕೊಂಡು ಬಂದಿದೆ. ನೇಪಾಳವು ಎಂದಿಗೂ ಮುಸ್ಲಿಂ ಆಕ್ರಮಣಕಾರರಿಂದ ಆಕ್ರಮಣಕ್ಕೊಳಗಾಗಿಲ್ಲ , ಬ್ರಿಟಿಷರು ನೇಪಾಳವನ್ನು ತನ್ನ ವಸಾಹತನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಚೀನಾವಂತು ನೇಪಾಳವನ್ನು ಪ್ರವೇಶಿಸುವ ಧೈರ್ಯ ಕೂಡ ಮಾಡಿರಲಿಲ್ಲ.
ನೇಪಾಳವು ಹಿಂದೂ ಧರ್ಮಗ್ರಂಥಗಳನ್ನು ಆಧಾರವಾಗಿಟ್ಟುಕೊಂಡು ತಮ್ಮ ದೇಶದ ಆಡಳಿತ ನಿಯಮವನ್ನು ನಿರ್ಮಾಣ ಮಾಡಿಕೊಂಡು, ಅದನ್ನು ಕಟ್ಟುನಿಟ್ಟಾಗಿ
ಪಾಲಿಸಿಕೊಂಡು ಬಂದಿರುವುದರಿಂದಲೇ ಮುಸಲ್ಮಾನರು ಎಂದಿಗೂ ನೇಪಾಳದ ಕಡೆ ವಲಸೆಹೋಗುವ ಮೊಂಡು ಧೈರ್ಯ ಮಾಡಿರಲಿಲ್ಲ. ಇದು ಹಿಂದೂ ಧರ್ಮದ ಮೂಲತತ್ವವನ್ನು ನೇಪಾಳದ ಜನತೆಗೆ ಕಾಪಾಡಿಕೊಳ್ಳಲು ಹಾಗೂ ಹಿಂದು ಧರ್ಮದ ಶ್ರೇಷ್ಠತೆಯನ್ನು ಎತ್ತಿಹಿಡಿಯಲು ನೆರವಾಯಿತು. ನೇಪಾಳವು 2008 ರವರೆಗೆ ಹಿಂದೂ ದೇಶವಾಗಿ ಉಳಿದಿತ್ತೆಂದರೆ ಅದಕ್ಕೆ ಪ್ರಮುಖ ಕಾರಣ 1743-1775 ರ ಕಾಲಾವಧಿಯಲ್ಲಿ ರಾಜನಾಗಿದ್ದ ಪೃಥ್ವಿ ನಾರಾಯಣ ಷಾ. ಈತ ತನ್ನ 20 ನೇ ವಯಸ್ಸಿನಲ್ಲಿ ಅಧಿಕಾರವನ್ನು ಕೈಗೆತ್ತಿಕೊಂಡಿದ್ದು ಓರ್ವ ಹಿಂದೂ ದೊರೆಯಾಗಿ! ನೇಪಾಳದಲ್ಲಿ ಹಿಂದುತ್ವವನ್ನು ಅನುಸರಿಸಿದ ಕೂಡ! ಈತ ಭಾರತದ ಶಿವಾಜಿ ಹಾಗೂ ಮಹಾರಾಣ ಪ್ರತಾಪ್ ರಂತೆಯೇ ಕೂಡ ಮುಸಲ್ಮಾನ ಆಡಳಿತದ ವಿರುದ್ಧ ಹೋರಾಡಿದ ನೇಪಾಳದ ಏಕೈಕ ಹಿಂದೂ ರಾಜ. 18ನೇ ಶತಮಾನದಲ್ಲಿ ಭಾರತದ ಉತ್ತರ ಪ್ರದೇಶದಲ್ಲಿ ಮುಸಲ್ಮಾನರು ದುರ್ಬಲರಾಗುತ್ತಿದ್ದರು.
ಆ ಸಂದರ್ಭದಲ್ಲಿ ಭಾರತದ ಹೆಚ್ಚಿನ ಭೂ ಪ್ರದೇಶಗಳು ಮರಾಠರ ನಿಯಂತ್ರಣದಲ್ಲಿತ್ತು. ಆ ವೇಳೆ ಅಫ್ಘಾನಿಸ್ತಾನ್‍ನ ಮುಸ್ಲಿಮರು ಬಿಕ್ಕಟ್ಟಿನ ಪರಿಸ್ಥಿತಿಯನ್ನು
ಎದುರಿಸುತ್ತಿದ್ದರು. 1761 ರಲ್ಲಿ ಮರಾಠರು ಮೂರನೇ ಪಾಣಿಪತ್ ಕದನದಲ್ಲಿ ಸೋಲನ್ನು ಅನುಭವಿಸಿದರು. ಇದೇ ಸಂದರ್ಭಕ್ಕೋಸ್ಕರನೇ ಹೊಂಚು ಹಾಕುತ್ತಿದ್ದ ಮುಸ್ಲಿಂ ಆಡಳಿತಗಾರರು ಹಿಮಾಲಯದ ಸಣ್ಣ-ಸಣ್ಣ ಹಿಂದೂ ಪ್ರದೇಶಗಳ ಮೇಲೆ ದಾಳಿಮಾಡತೊಡಗಿದರು. ಆ ದಾಳಿಕೋರರು ಹಿಂದೂ ದೇವಾಲಯಗಳನ್ನು ಲೂಟಿಮಾಡಿ ಅವನ್ನು ಕೆಡವಿ ನಾಶಮಾಡಿದರು. ಮುಸ್ಲಿಂ ಆಡಳಿತಗಾರರ ಈ ದರ್ಪವನ್ನು ಇಳಿಸುವ ಸಲುವಾಗಿ ನೇಪಾಳದ ರಾಜ ಪೃಥ್ವಿ ನಾರಾಯಣ ಷಾ ರವರ ಕೆಚ್ಚೆದೆಯ ಗೊರ್ಖಾ ಯೋಧರ ಬಲವಾದ ಸೈನ್ಯವನ್ನು ಹಿಮಾಲಯಕ್ಕೆ ಕಳುಹಿಸಿ ಮುಸ್ಲಿಂ ದಾಳಿಕೋರರಿಂದ ಅಲ್ಲಿನ ಹಿಂದೂ ಪ್ರದೇಶಗಳನ್ನು ರಕ್ಷಿಸಿದರು. ನೇಪಾಳವು ಹಿಂದೂ ದೇಶವಾಗಿ, ಮೊಘಲರೊಂದಿಗೆ ಯಾವುದೇ ಸಂಬಂಧವನ್ನು ಇಟ್ಟು ಕೊಂಡಿಲ್ಲದಿರುವುದೇ ಮುಸ್ಲಿಂ ಆಡಳಿತಗಾರರ ಅಟ್ಟಹಾಸವನ್ನು ಹಿಮಾಲಯದಲ್ಲಿ ಮುರಿಯಲು ಸುಲಭವಾಗಿ ದಾರಿ ನಿರ್ಮಿಸಿಕೊಟ್ಟಿತು.
ರಾಜ ಪೃಥ್ವಿ ನಾರಾಯಣ ಶಾಹನು ಆಧುನಿಕ ನೇಪಾಳದ ಅಡಿಪಾಯವನ್ನು ಭದ್ರಪಡಿಸಿಕೊಂಡಿದ್ದ ಕಾರಣ ಈತನಿಗೆ ನೇಪಾಳವನ್ನು ಏಕೀಕೃತ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಾಯಿತು. ಈತ ನೇಪಾಳದ ಸುತ್ತ ನಿರ್ಮಿಸಿದ ಭದ್ರತಾ ಗಡಿಯು ಬ್ರಿಟಿಷರಿಗೆ ನೇಪಾಳವನ್ನು ಪ್ರವೇಶಿಸಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಿಲ್ಲ. ಇದರಿಂದಾಗಿ ಈತನು ಹಿಂದೂ ಧರ್ಮ, ಸಂಸ್ಕತಿಯನ್ನು ತನ್ನ ಸಾಮ್ರಾಜ್ಯದಲ್ಲಿ ರಕ್ಷಿಸಲು ಸಾಧ್ಯವಾಯಿತು.
ಇದಾದ ಕೆಲವೇ ತಿಂಗಳ ನಂತರ ರಾಜ ಪೃಥ್ವಿ ನಾರಾಯಣ ಮೃತಪಟ್ಟನು. ಈತನು ನೇಪಾಳ ಆಡಳಿತದ ಬಗ್ಗೆ ತನ್ನ ದಿವ್ಯ ಸಂದೇಶವನ್ನು ಈ ಮೊದಲೆ
ದಾಖಲಿಸಿರುತ್ತಾನೆ. ಇದರಲ್ಲಿ “ ನೇಪಾಳವು ಹಿಂದು ರಾಷ್ಟ್ರವಾಗಿಯೇ ಉಳಿಯಬೇಕು, ಮೊಘಲರೊಂದಿಗೆ ಎಂದಿಗೂ ರಾಜಿಯಾಗುವಂತಿಲ್ಲ, ಅವರಿಗೆ ಯಾವುದೇ
ವ್ಯಾಪಾರ ವಹಿವಾಟುಗಳಿಗೆ ಅವಕಾಶ ಕಲ್ಪಿಸುವಂತಿಲ್ಲ.” ಎಂದು ದಾಖಲಾಗಿತ್ತು. ಇದರಂತೆಯೇ ನೇಪಾಳದ ಜನತೆ ಈ ದಿವ್ಯವಾಣಿಯನ್ನು ತಮ್ಮ ಆಡಳಿತಾತ್ಮಕ ತತ್ವವಾಗಿ ಬಳಸಿದರು.
ಆದರೆ 19 ನೇ ಶತಮಾನದಲ್ಲಿ ನೇಪಾಳದ ರಾಜ ಬಹದ್ದೂರ್ ರಾಣಾ ಈ ದಿವ್ಯ ಸಂದೇಶವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿದ, ಈ ಬದಲಾವಣೆಯು ನೇಪಾಳದ ಆಡಳಿತದ ದಿಕ್ಕನ್ನೇ ಬದಲಾಯಿಸಿತು. ಬಹದ್ದೂರ್ ರಾಣಾ ಈ ಸಂದೇಶದಲ್ಲಿ ‘ಮುಲ್ಕಿ ಐನ್’( ಭೂಮಿಯ ಕಾನೂನು) ಎಂಬ ಬದಲಾವಣೆಯನ್ನು ತಂದನು. ಈತನ 1853 ನೇ ನೇಪಾಳದ ಸಂಕೇತದ ಅನುಸಾರವಾಗಿ ಅಲ್ಲಿಯ ಮುಸ್ಲಿಂ ಅಲ್ಪಾಸಂಖ್ಯಾತರಿಗೆ ಭೂಮಿಯನ್ನು ಪಡೆಯುವ ಅಧಿಕಾರವನ್ನು ನೀಡಲಾಯಿತು. ನೇಪಾಳದಲ್ಲಿ ಮುಸ್ಲಿಮರಿಗೆ ಸಾಮಾಜಿಕ ಸ್ಥಾನಮಾನವನ್ನು ನೀಡಲಾಯಿತು. 1853 ರ ಸಂಕೇತದ ಪ್ರಕಾರ ಹಿಂದು ಗ್ರಂಥಗಳ ತತ್ವಕ್ಕೆ ಯಾವುದೇ ರೀತಿ ಧಕ್ಕೆ ಬಾರದಂತೆ ಮುಸ್ಲಿಮರು ನೇಪಾಳದಲ್ಲಿ ಸಾಮರಸ್ಯದಿಂದ ವಾಸಿಸುತ್ತಿದ್ದರು.
1963 ರಲ್ಲಿ ರಾಜ ಮಹೇಂದ್ರ 1853 ಯ ಸಂಕೇತವನ್ನು ಬದಲಿಸಿದರು, ಇದರಲ್ಲಿ ಮುಸ್ಲಿಮರಿಗೂ ನೇಪಾಳದಲ್ಲಿ ಸಮಾನ ಪೌರತ್ವವನ್ನು ನೀಡಲಾಯಿತು, ಆದರೆ
ಈತ ಮತಾಂತರ ಹಾಗೂ ವಿವಾಹ ಶೈಲಿಯಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ಮಾಡಲಿಲ್ಲ, ಆದರೆ ನೇಪಾಳದಲ್ಲಿ ಮತಾಂತರವು ಶಿಕ್ಷಾರ್ಹ ಅಪರಾಧವಾಗಿತ್ತು. ಇಸವಿ 1963 ರಲ್ಲಿ ನೇಪಾಳದಲ್ಲಿ ರಾಜಪ್ರಭುತ್ವವು ಕೊನೆಗೊಂಡ ನಂತರ ಮೊಟ್ಟ ಮೊದಲಬಾರಿಗೆ ಅಂದರೆ 2008 ರಲ್ಲಿ
ಮುಸಲ್ಮಾನರ ಹಬ್ಬಕ್ಕೆ ಸರ್ಕಾರವು ರಜೆ ಘೋಷಿಸಿತು. 1963 ರ ನೇಪಾಳದ ಈ ವಿಶ್ರಾಂತಿಯು ಮುಸಲ್ಮಾನರು ನೇಪಾಳದ ಕಡೆ ಹರಿದು ಬರಲು ಬಾಗಿಲು
ತೆರೆದಿಟ್ಟಂತಾಯಿತು. ವರದಿಯು ಸೂಚಿಸುವ ಪ್ರಕಾರ ಪಾಕಿಸ್ತಾನದ ಐಎಸ್‍ಐ ತಂಡವು ಭಯೋತ್ಪಾದಕರನ್ನು ನೇಪಾಳದ ಮೂಲಕ ಭಾರತಕ್ಕೆ ಕಳುಹಿಸಲು
ಎಡೆಮಾಡಿ ಕೊಟ್ಟಿತು NGOs ಗಳು ನೇಪಾಳದಲ್ಲಿ ಮುಸಲ್ಮಾನರ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದು, ಪ್ರಪಂಚದ ಉಳಿದ ಭಾಗಗಳಂತೆಯೇ ಇಲ್ಲಿಯು
ಮುಸಲ್ಮಾನರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.
ನೇಪಾಳದ ಹಿಂದೂ ರಾಜನು, ಮುಸಲ್ಮಾನರು ತನ್ನ ದೇಶದ ಕಾನೂನನ್ನು ಪಾಲಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ ಓರ್ವ ಬಲಶಾಲಿ ಹಿಂದೂ ರಾಜ ಮುಸಲ್ಮಾನರು ಶರಿಯತ್ ಕಾನೂನನ್ನು ತಿರಸ್ಕರಿಸಿ ಹಿಂದು ನೀತಿ ತತ್ವವನ್ನು (ಒಂದೇ ಭೂಮಿ, ಒಂದೇ ಕಾನೂನು) ಪಾಲಿಸುವಂತೆ ಮಾಡಬಹುದು ಎಂಬುವುದಕ್ಕೆ ಹಿಂದೂ ರಾಷ್ಟ್ರವಾದ ನೇಪಾಳದ ಹಿಂದೂ ರಾಜರುಗಳೇ ಸಾಕ್ಷಿ.. ಹಾಗಾದರೆ ನಮ್ಮ ಭಾರತದಲ್ಲಿ ಈ ರೀತಿಯ ಕಾನೂನನ್ನು ಜಾರಿಗೊಳಿಸಲು ಸಾಧ್ಯವಿಲ್ಲವೇ ???.. ಹಿಂದು ರಾಷ್ಟ್ರವಾದ ಭಾರತ ಹಿಂದೂ ರಾಷ್ಟ್ರವಾಗಿಯೇ ಮೆರೆಯಲಿ ಎಂಬುವುದು ನನ್ನ ಆಶಯ.
-Kavya Anchan