ಪ್ರಚಲಿತ

ಬ್ರೇಕಿಂಗ್! ಡಿಮಾನಿಟೈಸೇಷನ್ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ 800 ದಾಳಿಗಳು! ಮಾಯಾವತಿ, ಲಾಲೂ ಯಾದವ್ ರಂತಹ ಅದೆಷ್ಟೋ ಪ್ರಭಾವೀ ರಾಜಕಾರಣಿಗಳ ರಾಜಕೀಯ ಬದುಕು ಅಂತ್ಯ ಕಾಣಲಿದೆಯೇ?!

ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಅಪನಗದೀಕರಣ ಒಂದು ವರ್ಷ ಪೂರೈಸಿದೆ. ಇದರಿಂದ ಕೋಟಿಗಟ್ಟಲೆ ಕಪ್ಪುಹಣ ಪತ್ತೆಯಾಗಲಿದೆ ಎಂದು ನರೇಂದ್ರ ಮೋದಿ ಘೋಷಿಸಿಕೊಂಡಿದ್ದರು. ಮೋದಿಯವರ ಅಪನಗದೀಕರಣದ ವಿರುದ್ಧ ಯಾರ್ಯಾರೆಲ್ಲಾ ಧ್ವನಿ ಎತ್ತಿದ್ದಾರೋ ಅವರೆಲ್ಲರ ಅಸಲಿಯತ್ ಬಯಲಾಗಿದೆ. ಯಾಕೆಂದರೆ ಜಾರಿ ನಿದೇಶನಾಲಯ(ಇಡಿ) ಅಪನಗದೀಕರಣಗೊಳಿಸಿದ ಬಳಿಕ ಬರೋಬ್ಬರಿ 800 ಕಡೆ ದಾಳಿ ನಡೆಸಿದ್ದು, ಇದುವರೆಗೆ ಬರೋಬ್ಬರಿ 4000 ಪ್ರಕರಣ ದಾಖಲಿಸಿದೆ. ಇದರಿಂದ ಬರೋಬ್ಬರಿ 11,000 ಕೋಟಿ ಕಪ್ಪು ಪತ್ತೆಯಾಗಿರುವದನ್ನು ಇಡಿ ಬಹಿರಂಗಗೊಳಿಸಿದೆ.

ಕಪ್ಪು ಕುಳಗಳು ಡೆಮೋಫೈಲ್ ಮುಖಾಂತರ ಮಲೇಷಿಯಾ, ದುಬೈ ಇತ್ಯಾದಿ ದೇಶಗಳೊಡನೆ ನಗದು ವ್ಯವಹಾರ ನಡೆಸಿರುವುದಾಗಿ ವರದಿಯಾಗಿದೆ. ಅಪನಗದೀಕರಣ ಘೋಷಣೆಯಾದ ಬೆನ್ನಲ್ಲೇ ವಿರಮಿಸದ ಜಾರಿ ನಿರ್ದೇಶನಾಯ ಕಪ್ಪು ಕುಳಗಳಿಗೆ ಬಿಸಿ ಮುಟ್ಟಿಸುವ ಕೆಲಸದಲ್ಲಿ ತೊಡಗಿದ್ದು, ಇದುವರೆಗೆ 800 ದಾಳಿ ನಡೆಸಿ ಬರೋಬ್ಬರಿ 4000 ಪ್ರಕರಣಗಳನ್ನು ದಾಖಲಿಸಿದೆ. ಇದರಿಂದಾಗಿ ಬರೋಬ್ಬರಿ 11000 ಕೋಟಿ ರೂ. ಹಣಕ್ಕೆ ದಾಖಲೆಯೇ ಇಲ್ಲ. ಫನಮಾ ಹಾಗೂ ಪಾರಡೈಸ್ ಪ್ರಕರಣ, ಏರ್ಸೆಲ್ ಮಾಕ್ಸಿಸ್ ಡೀಲ್, ಮಾಯಾವತಿ, ಲಂಚನಿಧಿ ಪ್ರಕರಣ ಇತ್ಯಾದಿ ಪತ್ತೆಯಾಗಿದ್ದು ಇದೆಲ್ಲದರ ವರದಿ ತಯಾರಿಸಿರುವ ಜಾರಿ ನಿರ್ದೇಶನಾಲಯ ಅದನ್ನು ನೇರವಾಗಿ ಹಣಕಾಸು ಸಚಿವಾಲಯಕ್ಕೆ ಸಲ್ಲಿಸಿದೆ. ಡೆಮೋಫೈಲ್ ಮುಖಾಂತರ ನಗದು ವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದ್ದು, ಇದರಲ್ಲಿ ಖ್ಯಾತನಾಮರ ಹೆಸರೇ ಸೇರಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಇಡಿ ತಯಾರಿಸಿದ ಪಟ್ಟಿಯಲ್ಲಿ ಹಲವಾರು ಮಂದಿಯ ಹೆಸರಿದ್ದು, ಅದರಲ್ಲಿ ಮಾಯಾವತಿ, ಲಾಲು ಯಾದವ್‍ನ ಪುತ್ರಿ ಮಿಸಾ ಭಾರ್ತಿ ಹೆಸರು ಬಹಿರಂಗಗೊಂಡಿದೆ.

ಸರಕಾರಕ್ಕೆ ತೆರಿಗೆ ಸಲ್ಲಿಸದೆ ಸರಕಾರಕ್ಕೆ ವಂಚನೆ ಎಸಗಿದವರ ಪಟ್ಟಿ ಇದಾಗಿದ್ದು, ಬೇನಾಮಿ ಹೆಸರಲ್ಲಿ ಕಂಪನಿಗಳನ್ನು ತಯಾರಿಸಿರುವುದು ಕಂಡುಬಂದಿದೆ. 4000 ಪ್ರಕರಣಗಳನ್ನು ಫೆಮಾ ಮತ್ತು ಪಿಎಂಎಲ್‍ಎ ಅಡಿಯಲ್ಲಿ ದಾಖಲಾಗಿದೆ. ಸರಕಾರದ ಉನ್ನತಾಧಿಕಾರಿಗಳು ಹಣವನ್ನು ನಗದು ಮಾಡಲು ಸಹಕರಿಸಿರುವುದು ವರದಿಗಳಲ್ಲಿ ಉಲ್ಲೇಖಗೊಂಡಿದೆ. ಇದೇ ಕಾರಣಕ್ಕೆ 600 ನೋಟೀಸ್ ಜಾರಿಗೊಳಿಸಿ ಉತ್ತರಿಸಲು ಆದೇಶಿಸಲಾಗಿದೆ. ಕೊನೆಗೂ ಕಾಂಗ್ರೆಸ್ ನೋಟ್‍ಬ್ಯಾನ್‍ಗೆ ಯಾಕೆ ವಿರೋಧಿಸಿದೆ ಎನ್ನುವುದು ಬಹಿರಂಗಗೊಂಡಿದೆ

ಇನ್ನು ಕೆಲವೇ ದಿನಗಳಲ್ಲಿ ಇನ್ನಷ್ಟು ಮಂದಿ ಯಾರ ಯಾರ ಹೆಸರಲ್ಲಿ ಕಪ್ಪು ಹಣ ಇದೆ ಎಂಬುವುದು ಬಹಿರಂಗಗೊಳ್ಳಲಿದೆ. ರಾಹುಲ್ ಗಾಂಧಿಯಿಂದ ಹಿಡಿದು
ಲಾಲುಪ್ರಸಾದ್ ಯಾದವ್ ತನಕ ಕಪ್ಪು ಹಣ ಎಲ್ಲಿದೆ, ಅಪನಗದೀಕರಣದಿಂದ ಕಪ್ಪು ಹಣ ಪತ್ತೆಯಾಗಿಲ್ಲ ಎಂದು ಪ್ರಶ್ನಿಸುತ್ತಿದ್ದರು. ಆದರೆ ಇದಕ್ಕೆಲ್ಲಾ ಉತ್ತರ ಸಿಗುವ ಕಾಲ ಸನ್ನಿಹಿತವಾಗಿದೆ. ಅನುಮಾನಾಸ್ಪದ ವ್ಯವಹಾರಗಳಲ್ಲಿ ತೊಡಗಿರುವ ಜನರ ಬಗ್ಗೆ ಬಹಿರಂಗಗೊಂಡು ಅವರೆಲ್ಲಾ ಜೈಲು ಸೇರುವ ದಿನಗಳು ಹತ್ತಿರದಲ್ಲೇ ಇದ್ದು, ಭ್ರಷ್ಟಾಚಾರಿಗಳ ಬಣ್ಣ ಬಯಲಾಗಲಿದೆ.

ಮೋದಿಯವರ ನೋಟ್‍ಬ್ಯಾನ್ ನಿರ್ಧಾರದಿಂದ ದೇಶ ಗಂಡಾಂತರಕ್ಕೆ ಸಿಲುಕಿದೆ ಎಂದು ಕಾಂಗ್ರೆಸ್ ಸೇರಿ ಹಲವಾರು ವಿರೋಧ ಪಕ್ಷಗಳು ಮೋದಿಯವರನ್ನು
ಟೀಕಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ನವೆಂಬರ್ 8ರಂದು ಕರಾಳ ದಿನ ಆಚರಿಸಿತ್ತು. ಜನಸಾಮಾನ್ಯರಿಗೆ ಇದರಿಂದ ತೊಂದರೆಯಾಗದಿದ್ದರೂ ಕಾಂಗ್ರೆಸ್ ಸೇರಿ ಹಲವಾರು ಪಕ್ಷಗಳ ಮುಖಂಡರು ಇದನ್ನು ವಿರೋಧಿಸಿದ್ದರು. ಆದರೆ ಇಂಥವರ ಹೆಸರಲ್ಲೇ ಕಪ್ಪುಹಣ ಇರುವುದು ಪತ್ತೆಯಾಗಿರುವುದು ಇವರ ಅಸಲಿ ಹೋರಾಟದ ಗುಟ್ಟೇನು ಎನ್ನುವುದು ಬಹಿರಂಗಗೊಂಡಂತಾಇದೆ.

ಒಂದೇ ದಿನ 187 ಕಡೆಗಳಲ್ಲಿ ದಾಳಿ…!!

ಗುರುವಾರ ಬೆಳಗ್ಗಿನಿಂದಲೇ ಮತ್ತೊಮ್ಮೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಪಾರ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ತಮಿಳುನಾಡಿನ ಖ್ಯಾತ ಜಯಾ ಸುದ್ದಿವಾಹಿನಿ ಕಚೇರಿ ಮತ್ತು ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರ ಕುಟುಂಬದ ಮಾಲೀಕತ್ವ ಇರುವ ವ್ಯವಹಾರಗಳ ಕಚೇರಿಗಳ ಮೇಲೆ ಅಂದರೆ ಒಟ್ಟು 187 ಕಡೆಗಳಲ್ಲಿ ಏಕಕಾಲಕ್ಕೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆ ಸಂಬಂಧ ಕೇಂದ್ರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಜಯಾ ಟಿವಿ, ಜ್ಯಾಜ್ ಸಿನಿಮಾ ಮತ್ತು ಶಶಿಕಲಾ ಅವರ ಕುಟುಂಬದ ಮಾಲೀಕತ್ವ ಇರುವ ವ್ಯವಹಾರಗಳ ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಶಶಿಕಲಾ ಸಂಬಂಧಿ ನಟರಾಜನ್, ಶಶಿಕಲಾ ಸೋದರ ಸೊಸೆ ಕೃಷ್ಣಪ್ರಿಯ, ಜಯಾ ಟಿವಿ, ಶಶಿಕಲಾ ಒಡೆತನದ ಜಾನ್ ಥಿಯೇಟರ್ ಕಾರ್ಯಾಲಯ, ಜಯಲಲಿತಾ ಅವರ ಕೊಡನಾಡು ಎಸ್ಟೇಟ್, ಬೆಂಗಳೂರಿನ ಶಶಿಕಲಾ ಆಪ್ತ ಮುರುಗೇಶ್ ಪಾಳ್ಯದಲ್ಲಿರುವ ಅಣ್ಣಾ ಡಿಎಂಕೆಯ ನಾಯಕ ಪುಗಳೇಂದಿ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 12ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಬೆಳಗ್ಗೆ 6 ಗಂಟೆಗೆ ಜಯಾ ಟಿವಿ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ದೆಹಲಿ ಸೇರಿದಂತೆ ಒಟ್ಟು 187 ಕಡೆಗಳಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಹೆಸರಿನಲ್ಲಿ ಆರಂಭವಾದ ಜಯಾ ಟಿವಿಯನ್ನು ಶಶಿಕಲಾ ಅವರ ಸಹೋದರ ಸಂಬಂಧಿ ವಿವೇಕ್
ಜಯರಾಮನ್ ಅವರು ಮುನ್ನಡೆಸುತ್ತಿದ್ದು, ದಶಕಗಳ ಕಾಲ ಜಯಾ ಟಿವಿ ಎಐಎಡಿಎಂಕೆ ಪಕ್ಷದ ಮುಖವಾಣಿಯಾಗಿತ್ತು. ಎಐಎಡಿಎಂಕೆಯಲ್ಲಿನ ಬಣ ರಾಜಕೀಯದ
ಬಳಿಕ ಪನ್ನೀರ್ ಸೆಲ್ವಂ ಬಣದಿಂದ ಜಯಾ ಟಿವಿ ಅಂತರ ಕಾಯ್ದುಕೊಂಡಿತ್ತು. ಇದೀಗ ಪನ್ನೀರ್ ಸೆಲ್ವಂ ಬಣ ಸಿಎಂ ಪಳನಿಸಾಮಿ ಬಣದೊಂದಿಗೆ ವಿಲೀನವಾಗಿದ್ದು,
ಅಲ್ಲದೆ ಜಯಾ ಟಿವಿ ಮತ್ತು ನಮದು ಎಂಜಿಆರ್ ಪತ್ರಿಕೆಗಳನ್ನು ಮತ್ತೆ ಪಕ್ಷದ ಹಿಡಿತಕ್ಕೆ ವಾಪಸ್ ಪಡೆಯಲು ಮುಂದಾಗಿದೆ. ಇದೇ ಕಾರಣಕ್ಕೆ ಪ್ರಸ್ತುತ ಜಯಾ ಟಿವಿ
ಮತ್ತು ನಮದು ಎಂಜಿಆರ್ ಪತ್ರಿಕೆಗಳಲ್ಲಿರುವ ಶಶಿಕಲಾ ಅವರ ಆಪ್ತರನ್ನು ದೂರವಿಡಲು ಸಂಘಟಿತ ಎಐಎಡಿಎಂಕೆ ಪಕ್ಷ ಒಕ್ಕೊರಲಿನ ನಿರ್ಧಾರ ಕೈಗೊಂಡಿದೆ. ಆದರೆ ತಮಿಳುನಾಡಿನಲ್ಲಿ ಉಂಟಾದ ತುರ್ತು ರಾಜಕೀಯ ಬೆಳವಣಿಗೆಗಳಿಂದಾಗಿ ಜಯಾ ಟಿವಿ ತಾನು ಎಐಎಡಿಎಂಕೆ ಪಕ್ಷದಿಂದ ದೂರವಿದ್ದು, ಸ್ವತಂತ್ರ್ಯ ಸುದ್ದಿವಾಹಿನಿಯಾಗಿ ಕಾರ್ಯಾಚರಣೆ ನಡೆಸುವುದಾಗಿ ಘೋಷಣೆ ಮಾಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಜಯಾ ಟಿವಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಒಟ್ಟಿನಲ್ಲಿ ನೋಟ್‍ಬ್ಯಾನ್ ನಿರ್ಧಾರ ಕಪ್ಪುಕುಳಗಳ ನಿದ್ದೆಗೆಡಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದಾಳಿ ನಡೆಸಲು ನಡೆಸಲು ಮುಂದಾಗಿರುವ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಹಲವಾರು ಮಂದಿ ಕಪ್ಪುಕುಳಗಳಿಗೆ ಬಿಸಿಮುಟ್ಟಿಸಲಿದ್ದಾರೆ.

-Chekitan

Tags

Related Articles

Close