ಪ್ರಚಲಿತ

ಬ್ರೇಕಿಂಗ್!!! ನಿವೃತ್ತಿ ಹೊಂದುವ ಮೂರು ದಿನದ ಮುಂಚೆ ಈ ಪುರಸಭೆ ಅಧಿಕಾರಿಯ ಬಳಿ ಸಿಕ್ಕಿದ್ದು 500 ಕೋಟಿ ಹಣ ಎಂದರೆ ನಂಬುತ್ತೀರಾ?

ಉನ್ನತ ಹುದ್ದೆಯಲ್ಲಿದ್ದ ಅಧಿಕಾರಿ ಆತ, ಕೇವಲ ಮೂರು ದಿನ ಕಳೆದಿದ್ದರೆ ತನ್ನ ಸರಕಾರಿ ಹುದ್ದೆಯಿಂದ ನಿವೃತ್ತನಾಗುತ್ತಿದ್ದ!! ಆದರೆ ಆತ ತನ್ನ ಕನಸಿನಲ್ಲೂ
ಯೋಚಿಸದ ದಿನ ಬಂದೆ ಬಿಟ್ಟಿತ್ತು. ಇನ್ನೇನು ಆ ಅಧಿಕಾರಿ ತನ್ನ ನಿವೃತ್ತಿಯ ಸಂಭ್ರಮದಲ್ಲಿರಬೇಕಾದರೆ ಭ್ರಷ್ಟಾಚಾರ ನಿಗ್ರಹ ದಳದ ಕಣ್ಣು ಅವರ ಮೇಲೆ ಬಿತ್ತು! ಅಷ್ಟೇ ಅಲ್ಲದೇ, ರಾತ್ರೋ ರಾತ್ರಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಆ ಅಧಿಕಾರಿಯ ಅಕ್ರಮ ಆಸ್ತಿಯನ್ನು ಕಂಡು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ!!! ಹಾಗಾದರೆ ಆ ಅಧಿಕಾರಿ ಯಾರು ಗೊತ್ತೇ? ಆತ ಬೇರಾರು ಅಲ್ಲ, ವಿಶಾಖಪಟ್ಟಣ ಮುನ್ಸಿಪಲ್ ಕಚೇರಿಯಲ್ಲಿ ನಗರ ಯೋಜನಾ ನಿರ್ದೇಶಕರಾಗಿರುವ ಗೊಲ್ಲ ವೆಂಕಟ ರಘುರಾಮಿ ರೆಡ್ಡಿ!!!

1988ರಲ್ಲಿ ಯೋಜನಾ ವಿಭಾಗದ ಉಪನಿರ್ದೇಶಕನಾಗಿ ಸೇರಿದ್ದ ರೆಡ್ಡಿ, ನೆಲ್ಲೂರು, ಅನಂತಪುರ ಸೇರಿದಂತೆ ಹಲವಾರು ಕಡೆಗಳಲ್ಲಿ ಕಾರ್ಯನಿರ್ವಹಿಸಿದ್ದ
ಅಧಿಕಾರಿಯಾಗಿದ್ದ. ಆದರೆ ಈತನ ಅಕ್ರಮ ಆಸ್ತಿ ಎಷ್ಟು ಎಂದು ತಿಳಿದರೆ ಒಂದು ಕ್ಷಣ ದಂಗಾಗುವುದಂತೂ ಖಚಿತ!! ಯಾಕಂದರೆ ವಿಶಾಖಪಟ್ಟಣ ಪುರಸಭೆ ಕಚೇರಿಯ ಹಿರಿಯ ಅಧಿಕಾರಿಯಾಗಿದ್ದ ಗೊಲ್ಲ ವೆಂಕಟ ರಘುರಾಮಿ ರೆಡ್ಡಿ ಮಾಸಿಕ ವೇತನ ಒಂದು ಲಕ್ಷ ರೂಪಾಯಿ ಆಗಿತ್ತು!! ಆದರೆ ಎಸಿಬಿ ಅಧಿಕಾರಿಗಳು ಈತನ ಅಕ್ರಮ ಅಸ್ತಿಯನ್ನು ಬಯಲು ಮಾಡಿದ್ದಾರೆ ಎಂದು ಹಿಂದೂಸ್ತಾನ ಟೈಮ್ಸ್ ವರದಿ ಮಾಡಿವೆ.

ಹೌದು!! ಸರಕಾರಿ ಹುದ್ದೆಯಿಂದ ನಿವೃತ್ತರಾಗಿ ವಿದೇಶದಲ್ಲಿ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಆಚರಿಸಬೇಕಿತ್ತು. ಆದರೆ, ಇಲ್ಲಿ ನಡೆದ ಸಂಗತಿಯೇ ಬೇರೆ!! ಈತನ
ಮನೆಯ ಮೇಲೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು 500 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ಬಯಲು ಮಾಡಿದ್ದಾರೆ!! ಅಷ್ಟೇ ಅಲ್ಲದೇ ದಾಳಿಯ ವೇಳೆ ಆಂಧ್ರದ ಎಸಿಬಿ ಅಧಿಕಾರಿಗಳು ರೆಡ್ಡಿಗೆ ಸಂಬಂಧಪಟ್ಟಂತೆ ವಿಶಾಖಪಟ್ಟಣ, ವಿಜಯವಾಡ, ತಿರುಪತಿ ಹಾಗೂ ಮಹಾರಾಷ್ಟ್ರ ಸೇರಿ ಸುಮಾರು 15 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಎಸಿಬಿ ಮಾಹಿತಿಯಂತೆ ಈತ ಒಂದು ಲಕ್ಷುರಿ ಹೋಟೆಲ್ ಹೊಂದಿದ್ದು, ಶಿರಡಿಯಲ್ಲಿ 300 ಎಕರೆ ಬೆಲೆಬಾಳುವ ಭೂಮಿಯನ್ನು ಹೊಂದಿದ್ದಾನೆ. ಯಾವಾಗ ಎಸಿಬಿ ಅಧಿಕಾರಿಗಳು ಈತನ ಮನೆ ಮೇಲೆ ದಾಳಿ ಮಾಡಿದರೋ, ಆ ಸಂದರ್ಭದಲ್ಲಿ ಸುಮಾರು 50 ಲಕ್ಷ ರೂಪಾಯಿ ನಗದು ಕೂಡ ದೊರೆತಿದೆ!!

ದಾಳಿಯ ವೇಳೆ ಸಿಕ್ಕಿತು ಬೇಜಾನ್ ಆಸ್ತಿ!!!

ರೆಡ್ಡಿಗಾರು ಮಾಡಿಟ್ಟ ಆಸ್ತಿ ಅಷ್ಟಿಷ್ಟಲ್ಲ. ಬರೋಬ್ಬರಿ 500 ಕೋಟಿ ರೂಪಾಯಿಯ ಆಸ್ತಿ. ಎಸಿಬಿ ಅಧಿಕಾರಿಗಳು ದಾಳಿಯ ವೇಳೆ 11 ಕೆಜಿ ಚಿನ್ನ, ಕೋಟ್ಯಂತರ
ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ವಶಪಡಿಸಿಕೊಂಡಿದ್ದಾರೆ. ರೆಡ್ಡಿಗೆ ಸೇರಿದ 20 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಆರೋಪಿಯನ್ನು ತೀವ್ರ ವಿಚಾರಣೆಗೆ ಗುರಿ ಪಡಿಸಿದ್ದಾರೆ. ಹಲವು ಬೇನಾಮಿ ಆಸ್ತಿಗಳನ್ನು ಹೊಂದಿರುವ ಈತನ ಬಳಿ 16 ಬೆಲೆಬಾಳುವ ಫ್ಲ್ಯಾಟ್ ಹಾಗೂ ಕಾಂಪ್ಲೆಕ್ಸ್‍ಗಳು ಹಾಗೂ ನೂರು ಎಕರೆಯಷ್ಟು ಕೃಷಿಭೂಮಿಯೂ ಇದೆ. ಅಲ್ಲದೆ, ಸಂಬಂಧಿಕರ ಹೆಸರಲ್ಲೂ ಭಾರಿ ಪ್ರಮಾಣದ ಆಸ್ತಿಯನ್ನು ಮಾಡಿಟ್ಟಿದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಿಷ್ಟೇ ಅಲ್ಲದೇ ರೆಡ್ಡಿ ಮನೆಯಲ್ಲಿದ್ದ ವಾಷಿಂಗ್ ಮೆಶಿನ್‍ನಲ್ಲಿ 19 ಕೋಟಿ ಮೌಲ್ಯದ ಚಿನ್ನ ಹಾಗೂ ಡೈಮಂಡ್ ಸಂಗ್ರಹವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ!!

ಎಸಿಬಿ ಅಧಿಕಾರಿಗಳ 20 ತಂಡ ವಿವಿಧೆಡೆ ದಾಳಿ ನಡೆಸಿದ್ದಲ್ಲದೇ, ರೆಡ್ಡಿ ಸೋದರ ಸಂಬಂಧಿ, ವಿಜಯವಾಡ ಪಟ್ಟಣ ಯೋಜನಾ ಎಒ, ವೆಂಕಟ ಶಿವಪ್ರಸಾದ್ ಹಾಗೂ ಇತರ ಸಂಬಂಧಿಕರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಪ್ರಸಾದ್, ಹೆಂಡತಿ ಗಾಯತ್ರಿ ಹೆಸರಲ್ಲಿ ರೆಡ್ಡಿ ಬೆನಾಮಿ ಆಸ್ತಿ ಇಟ್ಟಿದ್ದ ಎನ್ನಲಾಗಿದೆ. ಈಕೆ ಹೆಸರಲ್ಲಿ ಚಿನ್ನದ ಆಭರಣ, ಫಂಕ್ಷನ್ ಹಾಲ್, 16 ಫ್ಲಾಟ್‍ಗಳು, ವೆಲ್ಪುರ್‍ನಲ್ಲಿ ನೂರಾರು ಎಕರೆ ಕೃಷಿ ಭೂಮಿ ಇರುವುದು ಪತ್ತೆಯಾಗಿದೆ.

ಈವರೆಗೆ ಪರಿಶೀಲನೆ ನಡೆಸಲಾದ ದಾಖಲೆಗಳ ಪ್ರಕಾರ ರೆಡ್ಡಿ ಆಸ್ತಿ 500 ಕೋಟಿ ರೂಪಾಯಿ ಇರಬಹುದು ಎಂಬುದು ಎಸಿಬಿ ಅಧಿಕಾರಿಗಳ ಲೆಕ್ಕಾಚಾರ. ಹಲವು
ಬ್ಯಾಂಕ್‍ಗಳಲ್ಲಿ ರೆಡ್ಡಿ ಲಾಕರ್ ಹೊಂದಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದ್ದು, ಇವುಗಳ ಪರಿಶೀಲನೆ ಇನ್ನೂ ನಡೆಯಬೇಕಿದೆ. ಲಾಕರ್‍ನಲ್ಲೂ ಅಪಾರ ನಗದು, ಚಿನ್ನಾಭರಣ ಇರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಎಸಿಬಿ ಅಧಿಕಾರಿಗಳು “ಸೋಮವಾರ ಬೆಳಗ್ಗೆ ಶುರುವಾದ ದಾಳಿ ಮಂಗಳವಾರ ಇಡೀ ದಿನ ಮುಂದುವರೆಯಿತು. ಈ ವೇಳೆ ಆತನ ಆಸ್ತಿಯನ್ನು ಪರಿಶೀಲಿಸಿದಾಗ ಅದರ ಮೌಲ್ಯ ಸುಮಾರು 500 ಕೋಟಿಯಷ್ಟು” ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಈತ ಪಡೆಯುತ್ತಿದ್ದ ಸಂಬಳವನ್ನು ಹೊರತು ಪಡಿಸಿ ಪ್ರತಿ ತಿಂಗಳು 1 ಲಕ್ಷದಷ್ಟು ಕಪ್ಪುಹಣ ಪಡೆಯುತ್ತಿದ್ದ ಎಂದೂ ಅಂದಾಜಿಸಲಾಗಿದೆ!!

ನಿವೃತ್ತಿಯ ನಂತರ ರೆಡ್ಡಿಗಾರು ಆರಾಮವಾಗಿ ಐಷಾರಾಮಿ ಜೀವನ ನಡೆಸಲು ಯೋಚಿಸುತ್ತಿದ್ದರಂತೆ. ಅಲ್ಲದೆ, ನಿವೃತ್ತಿ ನಂತರ ತನ್ನ ಸಂಬಂಧಿಕರಿಗೆ ಹಾಗೂ
ಸ್ನೇಹಿತರಿಗೆ ವಿದೇಶದಲ್ಲಿ ಪಾರ್ಟಿ ಕೊಡಲು ನಿರ್ಧರಿಸಿದ್ದರು. ಅದಕ್ಕಾಗಿ ಫ್ಲೈಟ್ ಟಿಕೆಟ್ ಕೂಡ ಬುಕ್ ಮಾಡಲಾಗಿತ್ತು! ಆದರೆ, ಎಸಿಬಿ ಅಧಿಕಾರಿಗಳು ರೆಡ್ಡಿಗೆ ಶಾಕ್
ನೀಡಿದ್ದು, ನಿವೃತ್ತಿ ನಂತರ ದಿನಗಳಲ್ಲಿ ಮನೆಯಲ್ಲಿ ಆರಾಮವಾಗಿ ಇರಬೇಕೆಂದುಕೊಂಡಿದ್ದ ರೆಡ್ಡಿಗೆ ಜೈಲುವಾಸ ಅನುಭವಿಸುವಂತೆ ಮಾಡಿದ್ದಾರೆ.

ಇನ್ನು ರಘುರಾಮಿ ರೆಡ್ಡಿ ಅವರ ವಿಶಾಖಪಟ್ಟಣ ನಿವಾಸದಲ್ಲಿ 50 ಲಕ್ಷ ನಗದು ಹಣವಲ್ಲದೇ, 10 ಕೆಜಿಗೂ ಅಧಿಕ ಚಿನ್ನ ಪತ್ತೆಯಾಗಿತ್ತು. ಈ ಪೈಕಿ 4 ಕೋಟಿ ಮೌಲ್ಯದ ಚಿನ್ನಾಭರಣ, 5 ಲಕ್ಷ ಮೌಲ್ಯ ಬೆಳ್ಳಿ ಆಭರಣಗಳು, 25 ಕೆಜಿ ಬೆಳ್ಳಿ ಪತ್ತೆಯಾಗಿತ್ತು. ಅಂತೆಯೇ ಕೃಷ್ಣಾ ಜಿಲ್ಲೆಯಲ್ಲಿ 11 ಎಕರೆ ಮಾವಿನ ತೋಟ, ಗುಂಟೂರಿನಲ್ಲಿ 5.15 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿರುವ ಬೃಹತ್ ಬಂಗಲೆಯ ದಾಖಲೆ ಪತ್ರಗಳು ಪತ್ತೆಯಾಗಿವೆ. ಅಂತೆಯೇ ರಘುರಾಮಿ ರೆಡ್ಡಿ ಸಂಬಂಧಿಕರ ಹೆಸರಲ್ಲಿ ನಾಲ್ಕು ಖಾಸಗಿ ಸಂಸ್ಥೆಗಳು ಕೂಡ ಇದ್ದು, ಸಾಯಿ ಸಾಧನಾ ಇನ್ ಫ್ರಾ ಪ್ರಾಜೆಕ್ಟ್ಸ್, ಸಾಯಿ ಶ್ರದ್ಧಾ ಅವೆನ್ಯೂ, ಮಾತಾ ಇಂಡಸ್ಟ್ರೀಸ್, ನಲ್ಲೂರಿವಾರಿ ಚಾರಿಟಬಲ್ ಟ್ರಸ್ಟ್ ಎಂಬ ಹೆಸರಿನ ಸಂಸ್ಥೆಗಳು ಇವೆ ಎಂದು ತಿಳಿದು ಬಂದಿದೆ!!

ಇದಲ್ಲದೆ ಇನ್ನೂ ಹಲವು ಬ್ಯಾಂಕ್ ಲಾಕರ್‍ಗಳು, ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಬೇಕಿದೆ. ಅಂತೆಯೇ ಕುಟುಂಬಸ್ಥರ ಹೆಸರಲ್ಲಿರುವ ಭೂಮಿಗಳ ಮೌಲ್ಯಮಾಪನ ಮಾಡಬೇಕಿದೆ. ಹೀಗಾಗಿ ರಘುರಾಮಿ ರೆಡ್ಡಿ ಅವರನ್ನು ಬಂಧಿಸಲಾಗಿದೆ ಎಂದು ಎಸಿಬಿ ನಿರ್ದೇಶಕ ಆರ್ ಪಿ ಠಾಕೂರ್ ಹೇಳಿದ್ದಾರೆ. ವಿಜಯವಾಡದ ಗನ್ನಾವರಂ ಎಂಬಲ್ಲಿ 300 ಎಕರೆ ಭೂಮಿ ಕೂಡ ಹೊಂದಿದ್ದಾರೆ. ಅಷ್ಟೇ ಅಲ್ಲದೇ ನಾಲ್ಕು ಖಾಸಗಿ ಕಂಪನಿ, ಹಲವೆಡೆ ತೋಟ, ಗದ್ದೆಗಳು ಕೂಡ ಪತ್ತೆಯಾಗಿವೆ!! ಈ ಬಗ್ಗೆ ಹೆಚ್ಚಿನ ಕ್ರಮ ಕೈಗೊಂಡಿರುವ ಅಧಿಕಾರಿಗಳು, ರೆಡ್ಡಿಯ ಇನ್ನಷ್ಟು ಅಕ್ರಮ ಆಸ್ತಿಯನ್ನು ಬಯಲಿಗೆ ಎಳೆಯಲಿದ್ದಾರೆ!!

ಮೂಲ:Original Link

Retiring officer made to jail

– ಅಲೋಖಾ

Tags

Related Articles

Close