ಪ್ರಚಲಿತ

ಬ್ರೇಕಿಂಗ್ ನ್ಯೂಸ್!! ಭಾರತೀಯ ಸೇನೆಯಿಂದ ನಾಗಾ ಉಗ್ರರ ಮೇಲೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್!!

ಭಾರತದ ಪಿಒಕೆಯಲ್ಲಿ ಸರ್ಜಿಕಲ್ ದಾಳಿ ಮೂಲಕ ಉಗ್ರರ ಅಡಗುದಾಣಗಳನ್ನು ಧ್ವಂಸಗೊಳಿಸಿ ಇಡೀ ವಿಶ್ವದಿಂದಲೇ ಪ್ರಶಂಸೆ ಪಡೆದುಕೊಂಡ ಭಾರತೀಯ ಸೇನೆ ಮತ್ತೊಂದು ಸರ್ಜಿಕಲ್ ದಾಳಿ ನಡೆಸಿ ಉಗ್ರರನ್ನು ಸದೆಬಡಿದಿದೆ. ಈ ಬಾರಿ ಮಯನ್ಮಾರ್ ಗಡಿಯಲ್ಲಿ ಸರ್ಜಿಕಲ್ ದಾಳಿ ನಡೆಸಿದ ಭಾರತದ ಸೇನಾಪಡೆ ಶತ್ರುಗಳನ್ನು ಧ್ವಂಸಗೊಳಿಸಿದೆ. ಈ ದಾಳಿಯಿಂದ ಭಾರತದ ಕೀರ್ತಿಯ ಪತಾಕೆ ವಿಶ್ವದಲ್ಲೆಡೆ ಹಾರಿದೆ.

ಭಾರತದ ಗಡಿರಕ್ಷಣಾ ಪಡೆ ಇಂದು ಮುಂಜಾನೆ ನಾಲ್ಕರ ಸುಮಾರಿಗೆ ಮಯನ್ಮಾರ್ ಗಡಿಗೆ ನುಗ್ಗಿ ನಾಗಾ ಬಂಡುಕೋರರನ್ನು ಸದೆಬಡಿದಿದ್ದಾರೆ. ನಾಗಾಲ್ಯಾಂಡ್
ತೀವ್ರವಾದಿ ಗುಂಪೊಂದು ಮಯನ್ಮಾರ್ ಗಡಿಭಾಗದ ಈಶಾನ್ಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಾಗಾ ಉಗ್ರರು ಪ್ರಾಬಲ್ಯ ಹೊಂದಿದ್ದಾರೆ. ನಾಗಾ ಉಗ್ರರು
ಭಾರತದ ಮೇಲೆ ದಾಳಿಗೆ ಸಿದ್ಧವಾಗಿರುವುದನ್ನು ಗುಪ್ತಚರ ಇಲಾಖೆಯಿಂದ ಖಚಿತಪಡಿಸಿಕೊಂಡಿದ್ದ ಸೇನಾ ಇಂದು ಮುಂಜಾನೆ 4.45ರ ಸುಮಾರಿಗೆ ಎನ್‍ಎಸ್ಸಿಎನ್ (ಕೆ) ಕೇಡರ್ನಲ್ಲಿ ನಾಗಾ ಉಗ್ರರ ಕ್ಯಾಂಪ್ ಮೇಲೆ ಇದ್ದಕ್ಕಿದ್ದಂತೆ ದಾಳಿ ನಡೆಸಿ ಹಲವಾರು ಮಂದಿ ನಾಗ ಬಂಡುಕೋರರನ್ನು ಹತ್ಯೆಗೊಳಿಸಿದೆ. ಪಿಒಕೆ ಗಡಿಯಲ್ಲಿ ನಡೆದ ಸರ್ಜಿಕಲ್ ಮಾದರಿ ಈ ದಾಳಿ ನಡೆದಿದ್ದು, ಭಾರತೀಯ ಸೇನೆಗೆ ಇದರಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಸೇನಾ ಮೂಲಗಳು ಖಚಿತಪಡಿಸಿದೆ. ಕಮಾಂಡರ್‍ಗಳ ತುಕಡಿಯೊಂದು ಮೊದಲೇ ಯೋಜಿಸಿದಂತೆ ಇಂದು ಬೆಳಿಗ್ಗೆ ದಾಳಿ ನಡೆಸಿದ್ದಾರೆ. ದಾಳಿಯ ಬಗ್ಗೆ ಯಾವುದೇ ಮುನ್ಸೂಚನೆ ಇರದಿದ್ದ ನಾಗಾ ಉಗ್ರರು ಸೇನಾಪಡೆಯ ನಿಖರ ದಾಳಿಯಿಂದ ಅಪಾರ ಪ್ರಮಾಣದಲ್ಲಿ ಹತರಾಗಿದ್ದಾರೆ. ಭಾರತದ ಸೇನಾ ಮುಖ್ಯಸ್ಥ ನಿನ್ನೆಯೇ ಪಾಕಿಸ್ತಾನ ಭಾರತದ ವಿರುದ್ಧ ದಾಳಿಗೆ ಮುಂದಾದರೆ ಮತ್ತೊಂದು ಸರ್ಜಿಕಲ್ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಇದಾದ ಮರುದಿನ ಬೆಳಿಗ್ಗೆಯೇ ಮತ್ತೊಂದು ದಾಳಿ ನಡೆಸುವ ಮೂಲಕ ಉಗ್ರರಿಗೆ ನಡುಕ ಹುಟ್ಟಿಸಿದ್ದಾರೆ.

ಮ್ಯಾನ್ಮಾರ್ ಜತೆ ಭಾರತ ಮುಕ್ತ ಗಡಿ ಹೊಂದಿದೆ. ಎರಡೂ ಕಡೆಯ ಸುಮಾರು 16 ಕಿ.ಮೀ. ದೂರ ಯಾವುದೇ ಪಾಸ್‍ಪೆÇೀರ್ಟ್ ಅಥವಾ ಅನುಮತಿಯಿಲ್ಲದೆ
ಎರಡೂ ದೇಶದ ಜನರು ಓಡಾಡಿಕೊಂಡಿರಬಹುದಾಗಿದೆ. ಹೀಗಾಗಿ ಈಶಾನ್ಯ ಭಾರತ ಮೂಲದ ಉಗ್ರರು ಭಾರತದ ಮೇಲೆ ದಾಳಿ ಮಾಡಿ ಮ್ಯಾನ್ಮಾರ್‍ನೊಳಗೆ
ಸುಲಭವಾಗಿ ಓಡಿ ಹೋಗುತ್ತಾರೆ. ಸಾಮಾನ್ಯವಾಗಿ ಭಾರತ ಎಂದೂ ಗಡಿ ದಾಟಿ ಮ್ಯಾನ್ಮಾರ್ ನೆಲದೊಳಗೆ ಹೋಗಿ ಸೇನಾ ಕಾರ್ಯಾಚರಣೆ ಕೈಗೊಳ್ಳುವುದಿಲ್ಲ.
ಹೀಗಾಗಿ ಈಶಾನ್ಯ ಉಗ್ರರಿಗೆ ಮ್ಯಾನ್ಮಾರ್ ಗಡಿಯ ದಟ್ಟಾರಣ್ಯ ಸುರಕ್ಷಿತ ಆವಾಸವಾಗಿ ಪರಿಣಮಿಸಿತ್ತು. ಆದರೆ ಇದೀಗ ಈಶಾನ್ಯ ಉಗ್ರರನ್ನು ಹುಟ್ಟಡಗಿಸಲು
ಭಾರತವು ಮ್ಯಾನ್ಮಾರ್ ಗಡಿಯೊಳಗೇ ನೇರವಾಗಿ ನುಗ್ಗಿ ಸರ್ಜಿಕಲ್ ದಾಳಿ ನಡೆಸಿ ಅಪಾರ ಮಂದಿ ಉಗ್ರರನ್ನು ಕೊಂದು ಹಾಕಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

-ಚೇಕಿತಾನ

Tags

Related Articles

Close