ಪ್ರಚಲಿತ

ಬ್ರೇಕಿಂಗ್ ನ್ಯೂಸ್: ಮೋದಿ ಸರ್ಕಾರದಿಂದ GST ಸರಳೀಕರಣ!! ಪರಿಷ್ಕರಣೆಯಾದ ಸರಕು ಮತ್ತು ಸೇವಾ ತೆರಿಗೆ!!!

ಸರಕು ಮತ್ತು ಸೇವಾ ತೆರಿಗೆ ಜಾರಿಯಾದ ದಿನದಿಂದ ಮೋದಿ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪಗಳನ್ನ ಹೊರಿಸಿ ಮೋದಿಜೀಯನ್ನ ದೇಶದ ಜನರೆದುರಿಗೆ ವಿಲನ್ ರೂಪದಲ್ಲಿ ತೋರಿಸೋಕೆ ಕಾಂಗ್ರೆಸ್ ಆದಿಯಾಗಿ ವಿರೋಧಪಕ್ಷಗಳೆಲ್ಲವೂ ಟೊಂಕ ಕಟ್ಟಿ ನಿಂತಿದ್ದವು.

ನೋಟು ಅಮಾನ್ಯೀಕರಣ ಮಾಡಿದರೂ ತಪ್ಪು, ಜಿಎಸ್ಟಿ ಜಾರಿ ಮಾಡಿದರೂ ತಪ್ಪು, ಹೊಸ ಯೋಜನೆಗಳನ್ನ ಜಾರಿಗೊಳಿಸಿದರೂ ತಪ್ಪು ಅನ್ನೋ ರೀತಿಯಲ್ಲಿ ಬೀದಿಗಿಳಿದಿದ್ದ ವಿರೋಧ ಪಕ್ಷಗಳಿಗೆ ಬುದ್ಧಿ ಕಲಿಸಿ ಜನಸಾಮಾನ್ಯರಿಗೆ ಉತ್ತಮ ಆಡಳಿತ ಕೊಡುವಲ್ಲಿ ಮೋದಿ ಸರ್ಕಾರ ದಿಟ್ಟ ಹೆಜ್ಜೆಯನ್ನೇ ಇಡುತ್ತಿದೆ.

“ಒಂದು ದೇಶ ಒಂದು ತೆರಿಗೆ” ಎಂಬ ಧ್ಯೇಯದ ಮೇಲೆ ಶುರುವಾಗಿದ್ದ GST ಜನರ ಮೇಲಿನ ತೆರಿಗೆಯ ಭಾರವನ್ನ ಸರಳೀಕರಣಗೊಳಿಸುವತ್ತ ಮೋದಿ ಸರ್ಕಾರ ಕಳೆದ ಜುಲೈನಲ್ಲಿ ದಿಟ್ಟ ನಿರ್ಧಾರವೊಂದನ್ನ ತೆಗೆದುಕೊಂಡಿತ್ತು.

GST ಜಾರಿ ಮಾಡುವಾಗ ಇದನ್ನು ಪ್ರಯೋಗಿಕವಾಗಿ ಮೂರು ತಿಂಗಳಿನವರೆಗೆ ಜಾರಿಗೆ ತಂದು ನಂತರ ಸುಧಾರಣೆಗಳು ಬೇಕಾದರೆ ನಂತರ ಕೈಗೊಳ್ಳುತ್ತೇವೆ ಅನ್ನೋ ಆಶ್ವಾಸನೆಯನ್ನ ನೀಡಿದ್ದ ಕೇಂದ್ರ ಸರ್ಕಾರ ತನ್ನ ಮಾತನ್ನ ಉಳಿಸಿಕೊಂಡಿದೆ.

ಸಣ್ಣ ಮತ್ತು ಮಧ್ಯಮ ವರ್ಗದ ಉದ್ದಿಮೆಗಳಿಗೆ ರಿಲೀಫ್ ನೀಡಿರುವ ಮೋದಿ ಸರ್ಕಾರ GST ಯಿಂದ ವಿಚಲಿತರಾಗಿದ್ದ ಜನರನ್ನ ನಿಮ್ಮ ಜೊತೆ ನಾವಿದ್ದೇವೆ ಭಯ ಬೇಡ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ.

ಜಿಎಸ್ಟಿ ಮೇಲೆ ನಡೆದ ಚರ್ಚೆ, ಸಾಧಕ ಬಾಧಕಗಳನ್ನು ಗಮನಿಸಿ ದೆಹಲಿಯಲ್ಲಿ ನಡೆದ GST ಯ 22 ನೆ ಮೀಟಿಂಗ್ ನಲ್ಲಿ ಕೆಲ ನಿರ್ಧಾರಗಳನ್ನು ಹಣಕಾಸು ಸಚಿವ ಅರುಣ್ ಜೆಟ್ಲಿ ತೆಗೆದುಕೊಂಡರು

ಆ ನಿರ್ಧಾರಗಳೇನು?

* ಒಟ್ಟು 27 ವಸ್ತುಗಳ ಮೇಲಿನ GST ತೆರಿಗೆಯ ಪರಿಷ್ಕರಣೆ

* ಆಯುರ್ವೇದಿಕ ಔಷಧಿಗಳ ಮೇಲಿದ್ದ 12% GST 5% ಗೆ ಇಳಿಕೆ

* ಆಹಾರ ಪದಾರ್ಥಗಳಾದ ಡ್ರೈ ಮ್ಯಾಂಗೋ, ಚಪಾತಿ, ರೊಟ್ಟಿಯ ಮೇಲಿದ್ದ 12% GST 5% ಗೆ ಇಳಿಕೆ

* ಗ್ರಾನೈಟ್, ಮಾರ್ಬಲ್ ಕಲ್ಲುಗಳ ಮೇಲಿದ್ದ 28% GST 18% ಗೆ ಇಳಿಕೆ

* ಸ್ಟೇಷನರಿ ವಸ್ತುಗಳ ಮೇಲಿದ್ದ 28% GST 18% ಗೆ ಇಳಿಕೆ

* ಕೆಲ ಡೀಸೆಲ್ ವಸ್ತುಗಳ ಮೇಲಿದ್ದ 28% GST 18% ಗೆ ಇಳಿಕೆ

* ಪಂಪ್ಸ್ ಗಳ ಮೇಲಿದ್ದ 28% GST 18% ಗೆ ಇಳಿಕೆ

* ಕೈಮಗ್ಗ ವಸ್ತುಗಳ ಮೇಲಿದ್ದ 18% GST 12% ಗೆ ಇಳಿಕೆ

* 1 ತಿಂಗಳಿನ ಬದಲು 3 ತಿಂಗಳಿಗೊಮ್ಮೆ ರಿಟರ್ನ್ಸ್ ಸಲ್ಲಿಕೆಗೆ ಅವಕಾಶ

* 1 ಕೋಟಿ ರೂಪಾಯಿವರೆಗಿನ ವಹಿವಾಟಿಗೆ ವಿನಾಯಿತಿ

* ರಫ್ತುದಾರರಿಗೆ ಸಾಂಕೇತಿಕವಾಗಿ 0.01 ರಷ್ಟು ತೆರಿಗೆ

* ಕರಕುಶಲ ವಸ್ತುಗಳ ಮೇಲಿನ ತೆರಿಗೆ 5% ಗೆ ಮಿತಿ

* ಕೈಮಗ್ಗದ ನೂಲು 12% ನಿಂದ 5% ಗೆ ಇಳಿಕೆ

* ಕೃತಕ ಆಭರಣ 5% ಹಾಗು ಪೇಂಟಿಂಗ್ ವಸ್ತುಗಳು 5% ಗೆ ಇಳಿಕೆ

* ಪೇಪರ್ ವೇಸ್ಟ್ 12% ನಿಂದ 5% ಗೆ ಇಳಿಕೆ

* ಪ್ಲಾಸ್ಟಿಕ್ ವೇಸ್ಟ್ 18% ನಿಂದ 5% ಗೆ ಇಳಿಕೆ

* ಬ್ರ್ಯಾಂಡ್ ಅಲ್ಲದ ಉಪ್ಪು 12% ನಿಂದ 5% ಗೆ ಇಳಿಕೆ

* ಮಕ್ಕಳ ಆಹಾರ ಪ್ಯಾಕೆಟ್ 18% ನಿಂದ 5% ಗೆ ಇಳಿಕೆ

* ಬಟ್ಟೆ 12% ನಿಂದ 5% ಗೆ ಇಳಿಕೆ

* ರಫ್ತುದಾರರಿಗಾಗಿ ಹೊಸ ಯೋಜನೆಯ ಘೋಷಣೆ. 1 ಕೋಟಿ ರೂಪಾಯಿವರೆಗಿನ ವಹಿವಾಟಿಗೆ ವಿನಾಯಿತಿ. ರಫ್ತುದಾರರು ಈವರೆಗೆ ಕಟ್ಟಿರುವ ತೆರಿಗೆ ಚೆಕ್ ಮೂಲಕ ಅಕ್ಟೋಬರ್ 10 ಕ್ಕೆ ವಾಪಸ್ ನೀಡಲಾಗುವುದು.

* ಮುಂದಿನ ಏಪ್ರಿಲ್ ನಿಂದ ಇ-ವ್ಯಾಲೆಟ್ ವ್ಯವಸ್ಥೆ ಜಾರಿಗೆ

ಹೀಗೆ ಜಿಎಸ್ಟಿ ಯನ್ನ ಸುಲಭಗೊಳಿಸಲು ಮೋದಿ ಸರ್ಕಾರ ಹೆಜ್ಜೆ ಹಾಕುತ್ತಿದೆ.

ದೇಶದ ಆರ್ಥಿಕ ಪ್ರಗತಿಗೆ ಮೋದಿ ಸರ್ಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ನಮಗೀಗ ಕಷ್ಟವೆನಿಸಬಹುದು ಆದರೆ ಭವಿಷ್ಯದಲ್ಲಿ ಇವುಗಳು ನಮಗೆ ವರದಾನವಾಗಿ ಪರಿಣಮಿಸಲಿವೆ.

ದಿನಕ್ಕೆ 18 ಗಂಟೆ ದುಡಿಯುವ ಪ್ರಧಾನಿ ನಮಗೆ ಸಿಕ್ಕಿರಬೇಕಾದರೆ ಆತನನ್ನ ದೂಷಿಸುವ ಬದಲು ಆತ ತಂದಿರುವ ಯೋಜನೆಗಳ ಬಗ್ಗೆ ಅರಿತು, ಅಭ್ಯಸಿಸಿ ತಾವು ಪ್ರಯೋಜನ ಪಡೆದುಕೊಂಡು ಜನಸಾಮಾನ್ಯರಿಗೂ ಆ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ನವಭಾರತ ಕಟ್ಟುವ ಮೋದಿಜೀಯ ಕೆಲಸದಲ್ಲಿ ನಾವೂ ಕೈ ಜೋಡಿಸೋಣ

– Vinod Hindu Nationalist

Tags

Related Articles

Close