ಪ್ರಚಲಿತರಾಜ್ಯ

ಬ್ರೇಕಿಂಗ್ ನ್ಯೂಸ್ !! ಮೋಸ್ಟ್ ವಾಂಟೆಡ್ ಡೆಡ್ಲಿ ನಕ್ಸಲೈಟ್‍ನಿಂದಲೇ ಗೌರಿ ಲಂಕೇಶ್ ಹತ್ಯೆ???

ಧೀರ ಪತ್ರಕರ್ತೆ ಎಂದೆನಿಸಿದ ಎಡಪಂಥೀಯ ಚಿಂತನೆಗಳನ್ನೇ ತಮ್ಮ ಜೀವನವಿಡೀ ಪಾಲಿಸುತ್ತಿದ್ದ ಗೌರಿ ಲಂಕೇಶ್ ಸಾವಿನ ಸುತ್ತ ನಿಗೂಢ ಚಿಂತನೆಗಳೂ ಬರಲಾರಂಭಿಸಿರುವುದು ಗೊತ್ತಿರುವ ವಿಚಾರವೇ. ಆದರೆ ಈಗ ಅವರು ತೋಡಿದ ಹಳ್ಳಕ್ಕೆ ಅವರೇ ಬಿದ್ದರಾ ಅನ್ನುವ ಪ್ರಶ್ನೆ ಕಾಡುತ್ತಿದೆ. ಒಂದು ಕಾಲದಲ್ಲಿ ದೇಶದ್ರೋಹಿ ವಿದ್ಯಾರ್ಥಿಗಳಿಗೆ ಅಮ್ಮನಾದರು, ಸಮಾಜದ ಶಾಂತಿಯನ್ನು ಕದಡುವ ನಕ್ಸಲೈಟ್ ಗಳಿಗೆ ಅಮ್ಮನಾದರು!!

ಇನ್ನೂ ಏನಿಲ್ಲ. ಅಂತಿಮವಾಗಿ ತಾನು ಹುಟ್ಟಿದ , ತಮಗೆ ಜನ್ಮನೀಡಿದ ಧರ್ಮವನ್ನೇ ತೆಗಳುತ್ತಾ ಬದುಕಿದರು.

ಅವೆಲ್ಲಕಿಂತ ಮಿಗಿಲಾಗಿ ಅವರ ನಕ್ಸಲ್ ಪ್ರೇಮ ಅವರ ಜೀವವನ್ನೇ ತೆಗೆಯಿತಾ ಅನ್ನುವುದೇ ಈಗ ಯಕ್ಷಪ್ರಶ್ನೆಯಾಗಿ ಉಳಿದಿದೆ. ಗೌರಕ್ಕ ಕಾಡಿಗೆ ಹೋಗಿ ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಸದಾ ಪ್ರಯತ್ನಿಸುತ್ತಿದ್ದರು. ಆಶ್ಚರ್ಯದ ಸಂಗತಿಯೇನು ಗೊತ್ತಾ?? ನಕ್ಸಲರಿಗೆ ಪರಿಹಾರ ಕೊಡಿಸುವ ಭರವಸೆಯನ್ನು ಕೊಡುತ್ತಿದ್ದರು ಗೌರಿ ಲಂಕೇಶ್. ಆದರೆ ,ಮುಖ್ಯ ವಾಹಿನಿಗೆ ಬಂದವರಿಗೆ ಯಾರಿಗೂ ಪರಿಹಾರವನ್ನು ಅವರು ಕೊಟ್ಟಿರಲಿಲ್ಲ. ಇದರ ಕುರತಾಗಿ ನಕ್ಸಲ್ ಸಮುದಾಯವನ್ನೇ ಕುಪಿತವಾಗಿಸುವಂತೆ ಮಾಡಿದೆ ಅನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ. ನಕ್ಸಲ್ ಕಡೆಯಿಂದ ಬೆದರಿಕೆ ಪತ್ರಗಳು ಬರುತ್ತಿದ್ದವೆಂಬ ವಿಚಾರವನ್ನು ಸ್ವತಃ ಸಹೋದರಾನಾದ ಇಂದ್ರಜಿತ್ ಲಂಕೇಶ್ ಹೇಳಿದ್ದರು.

ಹಾಗಾದರೆ ಅವರ ಈ ನಡೆಯೇ ಅವರ ಸಾವಿಗೆ ಕಾರಣವಾಯಿತೇ??

ಬಹಳವಾಗಿ ಕಾಡುವ ಪ್ರಶ್ನೆಯಿದು. ಯಾಕೆಂದರೆ ಈಗ ಗೌರಕ್ಕ ಸಾವಿನ ಸುತ್ತ ಹಲವಾರು ಕಾರಣಗಳನ್ನು ಹೇಳಲಾಗುತ್ತಿದ್ದರೂ ಪ್ರಮುಖವಾಗಿ ನಕ್ಸಲ್ ನವರೇ ಹತ್ಯೆ ಮಾಡಿದ್ದಾರೆಂಬುದು ಅನೇಕರು ವಿಚಾರ ಮಾಡುತ್ತಿರುವ ಸತ್ಯ.!! ಅದಕ್ಕೆ ಪೂರಕವಾಗಿ ಈಗ ಮತ್ತೊಂದು ವಿಚಾರ ಬಯಲಾಗಿದೆ. ಹೌದು ಈ ಹತ್ಯೆಯನ್ನು ಮಾಡಿದವರು ಯಾರು ಎಂದು ತುಂಬ ತಲೆಕೆಡಿಸಿಕೊಂಡಿದ್ದ ಎಸ್ಐಟಿ ಎಲ್ಲಾ ಮಗ್ಗುಲುಗಳಿಂದಲೂ ಪ್ರಕರಣ ಭೇದಿಸಲು ಗೌರಿ ಲಂಕೇಶ್ರಿಗೆ ಸೇರಿದ ಎಲ್ಲಾ ಫೋನ್ ಕರೆಗಳು, ವಾಟ್ಸ್ಯಾಪ್ ಚಾಟಿಂಗ್, ಈ-ಮೇಲ್ ಜಾಡನ್ನು ಹಿಡಿದು ಹಗಲಿರುಳು ಕೆಲಸ ಮಾಡುತ್ತಿದ್ದಾರೆ.

ಈಗ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ಪ್ರಕರಣದಲ್ಲಿ ನಕ್ಸಲರ ಕೈವಾಡವಿರುವುದರ ಬಗ್ಗೆ ಅನುಮಾನ ವ್ಯಕ್ತ ಪಡಿಸಿರುವ ಎಸ್ಐಟಿ 7ಜನರ ಒಂದು ಪಟ್ಟಿಯನ್ನು ಮಾಡಿದ್ದು ಅದರಲ್ಲಿ ತರ್ನಾಟಕ, ತಮಿಳುನಾಡು ಮತ್ತು ಕೇರಳಕ್ಕೆ ಬೇಕಾದಂತಹ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂ ಗೌಡನ ಹೆಸರು ಇರುವುದು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದಂತಾಗಿದೆ.

ಸುಮಾರು 20 ವರ್ಷಗಳ ಹಿಂದೆ ನಕ್ಸಲ್ ಆಗಿ ಬಂದಿದ್ದ ಈತ ಸುಮಾರು 20ಕ್ಕೂ ಹೆಚ್ಚು ಕೇಸ್ಗಳಲ್ಲಿ ಆರೋಪಿಯಾಗಿದ್ಧಾನೆ. ಇನ್ನು ಇವನ ಮೇಲೆ ಅನುಮಾನ ಮೂಡಲಿಕ್ಕೆ ಕಾರಣವೆಂದರೆ ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುತಿದ್ದ ಗೌರಿಲಂಕೇಶ್ರವರನ್ನು ವಿರೋಧಿಸಿದ್ದ ಈತ ಚಿಕ್ಕಮಗಳೂರು ಸುತ್ತ ಮುತ್ತ ಗೌರಿಲಂಕೇಶ್ ವಿರುದ್ಧ ಬಿತ್ತಿ ಪತ್ರಗಳನ್ನು ಹಂಚಿದ್ದ ಎಂಬ ಅಂಶವನ್ನು ಪೊಲೀಸರು ಗುರ್ತಿಸಿದ್ಧಾರೆ.
ಇನ್ನು ಈ ವಿಕ್ರಂ ಗೌಡನ ಮೈಕಟ್ಟು ಮತ್ತು ಪೊಲೀಸರು ಗುರ್ತಿಸಿರುವ ವ್ಯಕ್ತಿಗೂ ಸಾಮ್ಯತೆಯಿದೆ ಆದರೆ ಈತನೇ ಸ್ವತಃ ಬಂದಿದ್ದನೇ ಅಥವಾ ಇವನ ಸಹಚರರು ಮಾಡಿದ್ದಾರೆಯೇ ಎಂಬ ಬಗ್ಗೆ ತನಿಖೆ ಚುರುಕು ಗೊಂಡಿದೆ. ಈ ಹತ್ಯೆ ನಡೆದ ಕೆಲವೇ ದಿನಗಳ ಹಿಂದೆ ಗೌರಿ ಲಂಕೇಶ್ ಮಾಡಿದ್ದ ಟ್ವಿಟ್ ಕೋಡ ಇವನ ಮೇಲೆ ಅನುಮಾನ ಮೂಡಲೂ ಕಾರಣ ಎಂದು ಹೇಳಲಾಗುತ್ತದೆ..

[adsense]ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂದ್ರ ಮತ್ತು ಛತೀಸ್ಘಡ ಪೋಲೀಸರು ತನಿಖೆ ಆರಂಭಿಸಿರುವುದು ಈ ಕೃತ್ಯದ ಹಿಂದೆ ನಕ್ಸಲರ ಕೈವಾಡವೇ ಎಂಬುದಕ್ಕೆ ಹೆಚ್ಚು ಮಹತ್ವ ದೊರೆತಿದೆ.

ಅಂತಿಮವಾಗಿ ಅವರ ಹತ್ಯೆಯ ಹಿಂದಿನ ನೈಜತೆಯ ಕಾರಣ ತನಿಖೆಯಿಂದಷ್ಟೇ ಹೊರಬರಬೇಕಿದೆ. ಅವರಿಗೆ ಅಷ್ಟೊಂದು ಬೆದರಿಕೆಗಳ ಕರೆಬರುತ್ತಿದ್ದರೂ ರಾಜ್ಯ ಸರಕಾರ ಯಾಕೆ ರಕ್ಷಣೆ ಒದಗಿಸಲಿಲ್ಲ ಅನ್ನುವ ಪ್ರಶ್ನೆಯೂ ಕಾಡುತ್ತಿದೆ. ಇವಕ್ಕೆಲ್ಲ ತನಿಖೆಯಿಂದಷ್ಟೇ ಉತ್ತರ ಸಿಗಬೇಕಿದೆ. ಎತ್ತಣ ಮಾಮರ, ಎತ್ತಣ ಕೋಗಿಲೆ ಎಂದುಕೊಳ್ಳಬೇಡಿ..ಎಲ್ಲವಕ್ಕೂ ಸಂಬಂಧವಿದೆ!! ಆ ಸಂಬಂಧಗಳ ಚಿತ್ರಣ ಹೊರಬರಬೇಕಿದೆ ಅಷ್ಟೇ..

Tags

Related Articles

Close